ಪುಟ:Mysore-University-Encyclopaedia-Vol-6-Part-18.pdf/೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಗ್ವಾಂ-ಗ್ವಾಟಿಮಾಲ ಗ್ವಾಂ : ಅಮೆರಿಕ ಸಂಯುಕ್ತಸಂಸ್ಥಾನಗಳ ಅಧೀನದಲ್ಲಿರುವ ಒಂದು ದ್ವೀಪ. ಪಶ್ಚಿಮ ಪೆಸಿಫ಼ಿಕ್ ಸಾಗರದಲ್ಲಿರುವ ಮಾರಿಯಾನ ದ್ವೀಪಗಳಲ್ಲಿ ಅತ್ಯಂತ ದೊಡ್ದದು ಮತ್ತು ಜನಭರಿತವಾದದ್ದು.ವಿಶ್ವ ಜಲಾಂಬುಧಿಯಲ್ಲಿ ಅತ್ಯಂತ ಆಳ ತಾಣವಾಗಿರುವ ಮಾರಿಯಾನಾ ಟ್ರೆಂಚ್ಗೆ ಅತಿ ಸಮೀಪದಲ್ಲಿರುವ ದ್ವೀಪ.ಸ್ಯಾನ್ಫ಼್ರಾನ್ಸಿಸ್ಕೊ ಪಶ್ಚಿಮಕ್ಕೆ 960 ಕಿಮೀ ದೂರದಲ್ಲಿ ಹೊನೊಲುಲುವಿಗೆ 5344 ಕಿಮೀ ಪಶ್ಚಿಮದಲ್ಲಿ,ಮನಿಲಕ್ಕೆ 2400 ಕಿಮೀ. ಪೂರ್ವದಲ್ಲಿ ಉ.ಆ.13.2-13.7 ಮತ್ತು ಪೂ.ರೆ.144.6-145 ಮೆಲೆ ಇದೆ. ವಿಸ್ತೀರ್ಣ 541.3 ಚ.ಕಿಮೀ.ಜನಸಂಖ್ಯೆ 1,59,436(2010) ಈ ದ್ವೀಪದ ಉದ್ದ 48 ಕಿಮೀ,ಅಗಲ 6-19 ಕಿಮೀ.ರಾಜಧಾನಿ ಹಗಾತ್ನ. ಗ್ವಾಂ ದ್ವೀಪದ ಉತ್ತರ ಭಾಗ ಸುಣ್ಣಕಲ್ಲಿನಿಂದ ಕೂಡಿದ ಪ್ರಸ್ಥಭೂಮಿ.ಈ ದ್ವೀಪದ ದಕ್ಷಿಣ ಭಾಗ ಎತ್ತರವಾಗಿದ್ದು ಅಗ್ನಿಪರ್ವತೆ ಪ್ರದೇಶಗಳಿಂದ ಕೂಡಿದೆ.ಪಶ್ಚಿಮ,ಮಧ್ಯ ಮತ್ತು ದಕ್ಷಿಣ ಭಾಗಗಳಲ್ಲಿ ಹೆಚ್ಚು ಎತ್ತರವಾದ ಬೆಟ್ಟಗಳಿವೆ. ಅವುಗಳಲ್ಲಿ ಮುಖ್ಯವಾದವು ಲಾಮ್ ಲಾಮ್(406 ಮೀ), ಜಮುಲಾಂಗ್ ಮಾಂಗ್ಲೋ (1086 ಮೀ), ಬೊಲಾನೋಸ್ (1220 ಮೀ) ಮತ್ತು ಸಸಲಾಗ್ವಾನ್(1109 ಮೀ). ಇಲ್ಲಿಯದು ಉಷ್ಣವಲಯದ ಹಿತಕರ ವಾಯುಗುಣ.ಮೇ-ಜೂನ್ ಮಳೆಗಾಲ. ಗ್ವಾಂ ದ್ವೀಪದಲ್ಲಿ ಚಂಡಮಾರುತಗಳ ಹಾವಳಿ ಬಹಳ. ಇಲ್ಲಿಯ ಜನ ಚಾಮಾರೊ ಬುಡಕಟ್ಟಿನವರು. ಇವರು ಪ್ರ ಶ ಪೂ ಸು ೨೦೦೦ ದಲ್ಲಿಈ ದ್ವೀಪಕ್ಕೆ ಬಂದು ನೆಲೆಸಿರಬೀಕೆಂದು ತಿಳಿಯಲಾಗದೆ . ಇವರು ಇಂಡೊನೆಶ್ಯಾದ ಮೂಲ ಬುಡಕತ್ತಿಗೆ ಸೀರಿದವರು . ಇದು ಮಿಚ್ರೊನೆಶ್ಯನ್ ಉಪಭಾಶೆಯಲ್ಲ. ಸ್ವಂತ ವ್ಯಾಕರಣ ಮತ್ತು ಶಬ್ದಕೊಶ ಇರುವ ಭಾಷೆಯಿದು . ರೊಮನ್ ಕಥೂಲಿಕರು ಹೆಚ್ಚು ಸಂಖ್ಯೆಯಲ್ಲಿದ್ದಾರೆ . ಎರಡಣೆ ಮಹಾಯುದ್ಧದ ಕೊನೆಯಲ್ಲಿ ಈ ದ್ವೀಪದ ಅನೀಕ ಭಾಗಗಳು ನಾಶವಾಗಿದ್ದವು . ಈಗ ಅವುಗಳು ಪುನರ್ನಿರ್ಮಾಣವಾಗಿವೆ. ಪೋರ್ಚುಗೀಸ್ ನಾವಿಕನಾದ ಫರ್ಡಿನೆಂಡ್ ಮೆಲೆಗಾನ್ ಈ ದ್ವೀಪವನ್ನು ೧೪೨೧ರಲ್ಲಿ ಸ್ಪೈನ್ನಿನ ರಾಜನಿಗಾಗಿ ಕೈಗೊಂಡ ಸಾಗರಯಾನದ ಸಮಯದಲ್ಲಿ ಕಂಡುಹಿಡಿದ . ೧೬೬೮ರಲ್ಲಿ ಇಲ್ಲಿ ಮೊದಲು ಸ್ಪ್ಯಾನಿಶ್ ವಸಾಹತು ತಲೆಯೆತ್ತಿತು. ಇಲ್ಲಿನ ಜನಾಂಗ ಕ್ಶೀಣಿಸುವುದಕ್ಕೆ ಸಿಡುಬು,ಇನ್ಫ಼್ಲುಎನ್ಜ಼ ರೋಗಗಳು ಮತ್ತು ಪದೇ ಪದೇ ನಂಭವಿಸುತ್ತದ್ದ ಯುದ್ಧಗಳು ಮುಖ್ಯ ಕಾರಣಗಳು . ಈ ದ್ವೀಪ ೧೮೯೮ ರವರೆಗೆ ಸ್ಪೇನಿನ ಆಧೀನದಲ್ಲಿದ್ದು ಅಮೀಲೆ ಅಮೆರಿಕಾದ ವಶವಾಯಿತು . ೧೯೪೧-೪೪ರ ನದುವೆ ಜಪಾನರು ಇದನ್ನು ವಶಪದಿಸಿಕೊಂಡಿದ್ದರು . ಆಮೆಲೆ ಇದು ಮತ್ತೆ ಅಮೆರಿಕಾದ ವಶವಾಯಿತು . ೧೬೬೮-೧೮೧೫ ರವರೆಗೆ ಇದು ಮೆ‍ಕ್ಸಿಕೊ-ಮನಿಲ ಜಲವಾಣಿಜ್ಯ ಮಾರ್ಗದಲ್ಲಿ ಮುಖ್ಯ ತಂಗುದಾಣವೂ ಬಂದರೂ ಆಗಿತ್ತು. ಗ್ವಾಂ ದ್ವೀಪಕ್ಕೆ ಅಮೆರಿಕಾದ ಅಧ್ಯಕ್ಶನಿಂದ ನೀಮಿಸಲ್ಪಟ್ಟ ರಾಜ್ಯಪಾಲನಿದ್ದಾನೆ . ಪ್ರಜೆಗಳಿಂದ ಚುನಾಯಿತವಾದ ವಿಧಾನಸಭೆಯಿದೆ.ಗ್ವಾಂ ದ್ವೀಪದಿಂದ ಹೊನಲುಲು , ಮನಿಲ,ಓಕಿನಾವಾಗಳಿಗೆ ವಾಯುಮಾರ್ಗಗಳಿವೆ. ದ್ವೀಪದ ಸ್ಥಳಗಳಿಗೆ ರಸ್ತೆಊ ಜಲಮಾರ್ಗವೂ ವಾಊರ್ಮಾಗಗಳಿವೆ . ಗ್ವಾಂ ದ್ವೀಪ ಅಮೆರಿಕಾದ ಮುಖ್ಯ ಸೇನಾ ಹಾಗೂ ನೌಕಾ ನೆಲೆ . ಧಾನ್ಯ , ಬಾಳೆಹಣ್ನು , ಕಿತ್ತಲೆ , ಕಲ್ಲಂಗಡಿ,ಕುಂಬಳ , ಮೊಟ್ಟೆ , ಪೈನಾಪಲ್, ಕೊಬ್ಬರಿ , ಬತ್ತ, ಕಾಫಿ ಇಲ್ಲಿಯ ಮುಖ್ಯ ಉತ್ಪನ್ನಗಳು. ದಟ್ಟವಾದ ಕಾಡಿನಲ್ಲಿ ಹಡಗು ನಿರ್ಮಾಣಕ್ಕೆ ಮರ ದೊರಕುತ್ತದೆ . ಹಂದಿ , ದನ . ಮೇಕೆಗಳಾನ್ನು ಸಾಕುತ್ತರೆ . ಅಮೆರಿಕಾದಿಂದ ಹಲವು ಸರಕು ಅಮದಾಗುತ್ತವೆ . ಈಗ ಇದೊಂದು ಜನಪ್ರಿಯ ಪ್ರವಾಸಿ ತಾಣವಾಗಿದೆ . ಈ ದ್ವೀಪದ ಆರ್ಥಿಕ ವ್ಯವಸ್ಥೆ ಮುಖ್ಯವಾಗಿ ಪ್ರವಾಸೋದ್ಯಮವನ್ನು ಅವಲಂಬಿಸಿದೆ . ಇಲ್ಲಿ ಪ್ರಾಥಮಿಕ ಶಿಕ್ಶಣ ಕಡ್ಡಾಯ . ೧೯೫೨ರಲ್ಲಿ ಆಹಾನ್ಯಾದಲ್ಲಿ (ಈಗ ಹಹಾತ್ನ ) ಗ್ವಾಂ ಕಾಲೆಜು ಸ್ಥಾಪಿತವಾಯಿತು .ಇಲ್ಲಿ ಈಗ ಗ್ವಾಂ ವಿಶ್ವವಿದ್ಯಾಲಯ , ಗ್ವಾಂ ಕಮ್ಯೂನಿಟಿ ಕಾಲೇಜು ಹಾಗು ಫೆಸಿಫ಼ಿಚ್ ಐಲ್ಯಾಂಡ್ ವಿಶ್ವವಿದ್ಯಾಲಯಗಳಿವೆ . ಗ್ವಾಂಪಿಡಿಯ ಎಂಬ ಹೆಸರಿನ ಗಣಕೀಕೃತ ವಿಶ್ವಕೋಶ ಲಭ್ಯವಿದೆ.

ಗ್ವಾತಿಮಾಲ : ಮಶ್ಯ ಅಮೆರಿಕಾದ ಅತ್ಯಂತ ಉತ್ತರದ ಗಣರಾಜ್ಯ ಉ.ಅ.೧೩೪೨-೧೭೮೮೧೦ ಮತ್ತು ಪ.ರೇ ೮೮೧೦-೯೨೩೦ ನದುವೆ ಇದೆ . ಮೆ‍ಕ್ಸಿಕೊ, ಬ್ರಿಟೀಷ್ ಹಾಂಡುರಸ್ , ಹಾಂಡುರಸ್ , ಕೆರೆಬಿಯನ್ ಸಮುದ್ರ , ಎಲ್ನಾಲ್ವಡಾರ್ , ಪೆಸಿಫ಼ಿಚ್ ಸಾಗರ ಇವು ಇದರ ಮೇರೆಗಳು . ಪೂರ್ವ ಇದಕ್ಕೆ ೮೮ಕೆಮೀ ಜನಸಂಖ್ಯೆ ಸು.೧೩೮೨೪೪೬೩(೨೦೧೩) ರಾಜಧಾನಿ ಗ್ವಾಟಿಮಾಲ ನಗರ. ಭೌತಲಕ್ಶಣ: ಗ್ವಾಟಿಮಾಲ ಭೌಗೋಳಿಕವಾಗಿ ಐದು ಪ್ರದೇಶಗಳಾಗಿ ವಿಂಗಡಿಸಬಹುದು ೧.ಪೆಸಿಫ಼ಿ ಕರಾವ್ಳಿಯ ತಗ್ಗು ನೆಲೆ ೨.ಸಿರೆಯ ಮಾದ್ರೆ ಪರ್ವತ ಶ್ರೇಣಿ ೩. ಈ ಶ್ರೇಣಿಗೆ ಉತ್ತರದಲ್ಲಿರುವ ಪ್ರಸ್ಥಭೂಮಿ ೪. ಅಟ್ಲಾಂಟಿಕ್ ಸಾಗರತೀರದ ಇಳೀಮೇಡಿನ ಪರ್ವತ ಪ್ರದೇಶ ಮತ್ತು ಪೆಟೆನ್ ಬಯಲು .

೧.ಮೆಕ್ಸಿಕೊದ ಚ್ಯಾಪಾಸ್ ಕರಾವಳಿ ಗ್ವಾಟಿಮಾಲದಲ್ಲಿ ಸು.೨೪೧ ಕಿಮೀ ಸಾಗಿ ಎಲ್ ನಾಲ್ವಡಾರ್ನಲ್ಲಿ ಮುಂದುವರೆಯುತ್ತದೆ . ಮೆಕ್ಸಿಕೊ ಗ್ವಾಟಿಮಾಲ ಗಡಿಯ ಬಳಿ ಇದರ ಅಗಲ ೪೦ ಕಿ ಮೀ . ಕರಾವಳಿ ಅಂಚಿನಲ್ಲಿ ಉದ್ದಕ್ಕೂ ಮರಳ ಪಟ್ಟೆಗಳಿವೆ . ತೀರ ಹೆಚ್ಚು ಅಂಕುದೊಂಕಾಗಿಲ್ಲ . ಅಲ್ಲಲ್ಲಿ ಲಗೂನುಗಳಿವೆ . ಇದರಿಂದಾಚೆಗೆ ನೆಲೆ ಕ್ರಮೇಣ ಏರುತ್ತದೆ ನಾಗುತ್ತದೆ . ೨.ಪೆಚಿಫ಼ಿಚ್ ಸಾಗರದ ಅಂಚಿನಲ್ಲಿ ಸಾಗುವ ನಿಯೆರ ಮಾದ್ರೆ ಪರ್ವತಶ್ರೇಣಿ ಅಕ್ಕಪಕ್ಕದ ಮೆಕ್ಸಿಕೊ ಮತ್ತು ನಾಲ್ವಡಾರ್ ರಾಜ್ಯಗಳತ್ತ ಚಾಚಿಕೊಂಡಿದೆ . ಹದಿಮೂರು ಪ್ರಮುಖ ನದಿಗಳು ಇಲ್ಲಿ ಉಗಮಿಸುತ್ತವೆ . ಈ ಶ್ರೇಣಿಯ ದಕ್ಶಿಣ ತಪ್ಪಲಿನಲ್ಲಿ ಅಗ್ನಿಪರ್ವತಗಳುಂಟು . ಇವುಗಳಲ್ಲಿ ಮುಖ್ಯವಾದದ್ದ್ದು ಲಾಹೂಮೂಲ್ಕೊ . ಇದು ಮಫ಼್ಹ್ಯ ಅಮೆರಿಕದ ಅತ್ಯಂತ ಎತ್ತರದ ಶಿಖರ. ಇತರ ಕೆಲವು ಪರ್ವತಗಳು ಅಕಾಟಿನಾಂಗೂ , ಸಾಂತ ಮರಿಯ ಕ್ವೆಜಾಲ್ಟಿನಂಗೂ ಮತ್ತು ಆಗುವ ಜ಼ುನೆಲ್ , ಅಟೆಲಾನ್ ಮತ್ತು ಪಕಾಯ . ಒಟ್ಟು ೩೦ ಅಗ್ನಿಪರ್ವತಗಳ ಪೈಕಿ ಎರಡು ಈಗಲೂ ಜೀವಂತವಾಗಿವೆ . ಈ ಭೂಕಂಪಗಳು ಹೆಚ್ಚು . ೩.ಸಿಯೆರ ಮಾದ್ರೆ ಪರ್ವತ ಶ್ರೇಣಿಯ ಉತ್ತರದಲ್ಲಿಯ ಎತ್ತರವಾದ ಪ್ರಸ್ಥಭೂಮಿ ಬೆತ್ತಗಳಿಂದ ಅಮ್ರತವಾಗಿದೆ . ಪೆಚಿಫ಼ಿಚ್ ಸಾಗರಕ್ಕೆ ಬೀಳುವ ಕೆಲವು ನದೆಗಳು ಇಲ್ಲಿ ಉಗಮಿಸುತ್ತವೆ . ೪. ಅಟ್ಲಾಂಟಿಕ್ ಸಾಗಾರ ತೀರದ ಪರ್ವತಗಳು ಪೂರ್ವಪಶ್ಚಿಮವಾಗಿ ಹಬ್ಬಿ ಮಧ್ಯೆ ದಕ್ಶಿಣ ಚಾಚಿಕೊಂಡಿದೆ . ಸಿಯೆರ ಚಮ ಪರ್ವತ ಪೂರ್ವಭಿಮುಖವಾಗಿ ಬ್ರಿಟೀಶ್ ಹಾಂಡುರಸ್ ರಾಜ್ಯದ ಕಡೆ ಸಾಗಿ ಕಾಕ್ಸ್ಕೊಂಬ್ ಪರ್ವತಗಳನ್ನು ಮುತ್ತುತ್ತದೆ.ಸಿಯೆರದ ಸಾಂತಕ್ರುಜ಼್ ಪರ್ವತಶ್ರೇಣಿ ಪೂರ್ವದತ್ತ ಪೊಲೊಚೀಕ್ ಮತ್ತು ಮೊತಾಗ್ವಾ ನದಿಗಳಾ ನದುವಣ ಪರದೆಶದಲ್ಲಿ ಹಭ್ಭಿದೆ . ೫. ಪೇಟೇನ್ ಬಯಲು ಗ್ವಾಟಿಮಾಲ ರಾಜ್ಯದ ೧/೩ ನೆಯ ಭಾಗವನ್ನು ಆವರಿಸಿದೆ . ಇಲ್ಲಿ ಹುಲ್ಲುವಾಗಲು ಮತ್ತು ಅರಣ್ಯಗಳು ಹೆಚ್ಚು ಭೂಮಿ ಫಲವಲಾಗಿದೆ. ನೀರು ಸಮ್ರಧ್ಹವಾಗಿದೆ. ಪ್ರಾಚೀನ ಮಾಯ ನಾಗೆರಿಕತೆ ಇಲ್ಲಿ ಹಬ್ಬಿತ್ತು.