ಪುಟ:Mysore-University-Encyclopaedia-Vol-6-Part-18.pdf/೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಗ್ವಾಟಿಮಾಲ

     ಗ್ವಾಟಿಮಾಲದಲ್ಲಿ ಪಶ್ಚಿಮಕ್ಕೆ ಹರಿಯುವ ನದಿಗಳು ಸಣ್ಣವು; ಪೂರ್ವಭಾಗದಲ್ಲಿ ದೊಡ್ಡವು. ಮೊಟಾಗ್ವಾನದಿ ೪೦೦ ಕಿಮೀ ಹರಿದು ಕೆರಿಬಿಯನ್ ಸಮುದ್ರವನ್ನು ಸೇರುತದೆ. ಅದರ ಮೇಲೆ ೧೪೫ ಕಿಮೀಗಳಷ್ಟು ದೂರ ಹಡಗುಗಳು ಸಂಚರಿಸುತ್ತವೆ. ಪೋಲೊಚೀಕ್ ನದಿಯ ಉದ್ದ ೨೯೦ ಕಿಮೀ. ಇತರ ನದಿಗಳ ಪೈಕಿ ಊಸೂಮಾ ಸೀಂಟಾ, ಚಿಕ್ಸಾಯ್, ಮೊಟಾಗ್ವಾ ಮತ್ತು ಸಾಸ್ಟೋರ್ನ್ ಮುಖ್ಯವಾದವು. ಪೆತೇನ್, ಗಾಲ್ಫೊ, ಡುಲ್ಸೆ, ಆಟಿನಾಳ್ ಇವು ಇಲ್ಲಿಯ ಸರೋವರಗಳು. 
     ವಾಯುಗುಣ : ಪರ್ವತಮಯವಾದ ಈ ರಜ್ಯದ ವಾಯುಗುಣ ಸಂಕೀರ್ಣವಾದದ್ದು. ಪೆಸಿಫಿಕ್ ತೀರದಲ್ಲೂ ಪರ್ವತ ಪ್ರದೇಶದಲ್ಲೂ ಮಾನ್ಸೂನ್ ವಾಯುಗುಣ; ಬೇಸಗೆಯಲ್ಲಿ (ಮೇ-ಅಕ್ತೋಬರ್) ಹೆಚ್ಚು ವೇಳೆ; ಚಳಿಗಾಲ ಶುಷ್ಕ. ಕೆರಿಬಿಯನ್ ತೀರದಲ್ಲಿ ವರ್ಷವೆಲ್ಲ ಮಳೆ. ಉಷ್ಣತೆ ಎತ್ತರಕ್ಕೆ ಅನುಗುಣವಾಗಿ ವ್ಯತ್ಯಾಸವಾಗುತ್ತದೆ. ಆದರೆ ಅತಿಯಾದ ಚಳಿ ಇಲ್ಲ. ಕರಾವಳಿಯಲ್ಲಿ ವಾರ್ಷಿಕ ಸರಾಸರಿ ಉಷ್ಣತೆ ೭೭° ಫ್ಯಾ. ಚಳಿಗಾಲ-ಬೇಸಗೆ ಕಾಲಗಳ ನಡುವೆ ಹೆಚ್ಚು ವ್ಯತ್ಯಾಸವಿಲ್ಲ. ಪಶ್ಚಿಮ ಗ್ವಾಟಿಮಾಲದ ಎತ್ತರ ಪ್ರದೇಶದಲ್ಲಿ ಉಷ್ಣತೆ ೫೫.೪° ಫ್ಯಾ - ೬೬.೪° ಫ್ಯಾ.
     ಸಸ್ಯಪ್ರಾಂಇ ಜೀವನ : ಎತ್ತರಕ್ಕೆ ಅನುಗುಣವಾಗಿ ಸಸ್ಯಗಳು ವ್ಯತ್ಯಾಸವಾಗುತ್ತವೆ. ಕೆರಿಬಿಯನ್ ಕರಾವಳಿಯಲ್ಲಿ ಉಷ್ಣವಲಯದ ನಿತ್ಯಹಸಿರು ಕಾಡೂ ಪಶ್ಚಿಮದಲ್ಲಿ ಉಷ್ಣವಲಯದ ಪರ್ಣಪಾತಿ ಕಾಡೂ ಇವೆ. ಅಲ್ಲಲ್ಲಿ ಸವನ್ನವಿದೆ. ಎತ್ತರ ಏರಿದಂತೆಲ್ಲ ಸಸ್ಯವರ್ಗ ಬದಲಾಗುತ್ತದೆ. ಅತ್ಯಂತ ಎತ್ತರದಲ್ಲಿ ಹಿಮದ ಮುಸುಕಿದೆ. ದನ, ಕುರಿ, ಹಂದಿಗಳು ಸಾಕುಪ್ರಾಣಿಗಳು. ಜಿಂಕೆ, ಕೋತಿ, ಪೆಕರಿ ಸಾಮಾನ್ಯವಾಗಿವೆ. ಜಾಗ್ವಾರ್, ಟಾಪಿರ್, ಪ್ಯೂಮ ಅಪರೂಪ. ಪೋಲೋಚೀಕ್ ನದಿಯಲ್ಲಿ ಮೊಸಳೆಗಳಿವೆ. ಪಕ್ಶಿಸಂಕುಲ ವೈವಿಧ್ಯಮಯವಾದದ್ದು. ಕಾಡು ಟರ್ಕಿ ಕೋಳಿ, ಬಾತು ಪಾರಿವಾಳ, ಜೀವಂಜೀವ ವಿಫುಲವಾಗಿವೆ. ಆಕರ್ಶಕವಾದ ಪುಕ್ಕವುಳ್ಳ ಹಕ್ಕಿ ಕ್ವೆಟ್ಜಾಲ್ ಬಹುತೇಕ ಅಳಿದುಹೋಗಿದೆ. ಅದನ್ನು ರಾಷ್ಟ್ರದ ಲಾಂಛನವಾಗಿ ಆರಿಸಲಾಗಿದೆ.
    ಇತಿಹಾಸ : ಗ್ವಾಟಿಮಾಲ ರಾಜ್ಯದ ಮೇಲೆ ಪ್ರಭಾವ ಬೀರಿದ ಇತಿಹಾಸದ ಹಂತಗಳು ಮೂರು : ೧. ಸ್ಥಳೀಯ ಮಾಯ ಜನಾಂಗದ ಇತಿಹಾಸ. ೨. ಸ್ಪೇನ್ ವಸಾಹತು ಇತಿಹಾಸ ಮತ್ತು ೩. ಆಧುನಿಕ ಗಣರಾಜ್ಯದ ಇತಿಹಾಸ. ಈ  ಮೂರು ಐತಿಹಾಸಿಕ ಹಂತಗಳ ಕುರುಹುಗಳನ್ನೂ ಗ್ವಾಟಿಮಾಲ ರಾಜ್ಯದ ನಾಗರಿಕ ಜೀವನದಲ್ಲಿ ಕಾಣಬಹುದು. 
     ಕೊಲಂಬಸ್ ಅಮೆರಿಕ ಖಂಡವನ್ನು ಕಂಡುಹಿಡಿಯುವುದಕ್ಕೆ ಅನೇಕ ಶತಮಾನಗಳ ಹಿಂದಿಯೇ ಗ್ವಾಟಿಮಾಲ ರಾಜ್ಯವಿರುವ ಪ್ರದೇಶದಲ್ಲಿ ಮಾಯ ಇಂಡಿಯನ್ ಆದಿವಾಸಿಗಳು ಜೀವಿಸುತ್ತಿದ್ದರು. ಇವರ ಸಂಸ್ಕೃತಿ, ಕಲೆ, ಶಿಲ್ಪ, ಸಂಗೀತ, ಬರೆಹ, ಶೂನ್ಯದ ಬಳಕೆಯೂ ಸೇರಿದಂತೆ ಅವರ ಗಣಿತ, ೩೬೫ ದಿನಗಳ ಪಂಚಾಂಗ-ಇವೆಲ್ಲ ಇವರ ಉನ್ನತ ನಾಗರಿಕತೆಯನ್ನು ವ್ಯಕ್ತಪಡಿಸುತ್ತವೆ. ೧೨ ನೆಯ ಶತಮಾನದ ಹೊತ್ತಿಗೆ ಇದರ ವೈಭವ ಅವನತಿ ಹೊಂದಿತು. ಈ ಜನ ಅನೇಕ ಬಣಗಳಾಗಿ ಒಡೆದರು. ೧೫೨೪ ರಲ್ಲಿ ಸ್ಪೇನಿನಿಂದ ಇಲ್ಲಿಗೆ ಬಂದ ಪೇದ್ರೊ ದೆ ಆಲ್ವಾರಾದೋ ಎಂಬುವನ ದಾಳಿಗಳನ್ನು ಪ್ರಥಮತಃ ಎದುರಿಸಿದವರು ಈ ಜನ. ೧೫೫೦ ರ ಹೊತ್ತಿಗೆ ಸ್ಪೇನ್ ದೇಶ ಮಾಯ ಜನರ ಮೇಲೆ ಪೂರ್ಣ ಪ್ರಭುತ್ವ ಸ್ಥಾಪಿಸಿತು.
    ಆಲ್ವಾರಾದೊ ಗ್ವಾಟಿಮಾಲ ನಗರವನ್ನು ೧೫೨೪ ರಲ್ಲಿ ಸ್ಥಾಪಿಸಿದ. ೧೫೨೪ ರಿಂದ ೧೮೨೧ರ್ ವರೆಗೆ ಗ್ವಾಟಿಮಾಲ ಸ್ಪೇನ್ ವಸಾಹತು ಸರ್ಕಾರದ ಕೇಂದ್ರವಾಯಿತು. ಅದರ ಅಧಿಕಾರವ್ಯಾಪ್ತಿಗೆ ಯಾಕುಟಾನ್ನಿಂದ ಪನಮಾ ವರೆಗಿನ ಪ್ರದೇಶವೆಲ್ಲ ಸೇರಿತ್ತು.
    ೧೮೨೧ ರಲ್ಲಿ ಮಧ್ಯಪ್ರದೇಶ ಸ್ಪೇನಿನಿಂದ ಸ್ವತಂತ್ರವಾಯಿತು. ೧೮೨೨-೨೩ ರಲ್ಲಿ ಮಧ್ಯೆ ಅಮೆರಿಕದ ಈಗಿನ ಗಣರಾಜ್ಯಗಳಾದ ಗ್ವಾಟಿಮಾಲ, ಹಾಂಡುರಸ್, ನಿಕರಾಗ್ವ,ಎಲ್ಸಾಲ್ವಡಾರ್, ಕೋಸ್ಟರೀಕ - ಇವು ಮೆಕ್ಸಿಕೊ ದೇಶದ ಆಡಿಗೆ ಬಂದವು. ಮೆಕ್ಸಿಕೊ ಚಕ್ರವರ್ತಿ ಈ ಟೂರ್ವೀದೆ ಅಧಿಕಾರ ಕಳೆದುಕೊಂಡಾಗ ಇವು ಪ್ರತ್ಯೇಕವಾದುವು. ಮಧ್ಯೆ ಅಮೆರಿಕ ಸಂಯೂಕ್ತಸಂಸ್ಥಾನಗಳ ಗಣರಾಜ್ಯ ಸ್ಥಾಪಿತವಾಯಿತು.
    ಇದಕ್ಕೆ ಗ್ವಾಟಿಮಾಲ ನಗರವೇ ಆಡಳಿತ ಕೇಂದ್ರ , ಪ್ರಥಮ ಅಧ್ಯಕ್ಷ ೧೮೨೯ ರಲ್ಲಿ ಬಂದ. ಕ್ಷಿಪ್ರಾಕ್ರಮಣದಿಂದ ಇವನಿಂದ ಅಧಿಕಾರ ಕಸಿದುಕೊಂಡು (೧೮೩೮) ಇನ್ನೊಬ್ಬ ಅಧ್ಯಕ್ಷನಾದ. ಆದರೆ ಶೀಘ್ರದಲ್ಲೆ ಅಲ್ಲಿ ಒಡಕುಗಳುಂಟಾಗಿ ಅಂತರ್ಯುದ್ದ ಆರಂಭವಾಯಿತು. ಮರುವರ್ಷ ಗ್ವಾಟಿಮಾಲ ಪ್ರತ್ಯೇಕ ರಾಜಕೀಯ ಘಟಕವಾಯಿತು. ರಾಫೇಲ್ ಕಾರೆರಾ ಅಧ್ಯಕ್ಷನಾದ. ಅವನ ಅನಂತರ ಬಂದ (೧೮೭೨) ಮೇರಿಯ ರೀನ ಬ್ಯಾರಿಯೋ ೧೮೯೮ ರಲ್ಲಿ ಕೊಲೆಯಾದ. ಆಮೇಲೆ ಬಂದ ಕಾವ್ರೆರಾನನ್ನು ವಿಧಾನಸಭೆ ಹುಚ್ಚನೆಂದು ೧೯೨೦ ರಲ್ಲಿ ಘೋಷಿಸಿ ಅಧಿಕಾರದಿಂದಿಳಿಸಿತು. ಆನಂತರ ಅನುಕ್ರಮವಾಗಿ ಹಲವಾರು ಅಧ್ಯಕ್ಷರಾಗಿದ್ದರು. ೧೯೭೦ ರಲ್ಲಿ ನಡೆದ ಚುನಾವಣೆಯಲ್ಲಿ ಕಾರ್ಲೋ ಆರಾನ ಒಸೋರಿಯೋ ಸಂಮಿಶ್ರ ಪಕ್ಷದ ಬೆಂಬಲದಿಂದ ಅಧ್ಯಕ್ಷನಾದ. ಇದೇ ದೇಶಕದಲ್ಲಿ ರೂಪುಗೊಂಡ ಎರಡು ಸ್ಥಳೀಯ ಗೆರಿಲ್ಲ ಸಂಘಗಳು ರಾಜ್ಯದ ಎಲ್ಲೆಡೆ ಸೈನಿಕ ದಳದ ಮೇಲೂ ಸೈನ್ಯಕ್ಕೆ ಬೆಂಬಲ ನೀಡುತ್ತಿದ್ದ ನಾಗರಿಕರ ಮೇಲೂ ಆಕ್ರಮಣವೆಸಗತೊಡಗಿದವು. ಇದೇ ಕಾರಣದಿಂದಾಗಿ ೧೯೭೯ರಲ್ಲಿ ಅಮೆರಿಕದ ಅಧ್ಯಕ್ಷ ಜಿಮ್ಮಿಕಾರ್ಟರ್ ಗ್ವಾಟಿಮಾಲ ಸೈನ್ಯಕ್ಕೆ ನೀಡಲಾಗುತ್ತಿದ್ದ ನೆರವನ್ನು ನಿಷೇಧಿಸಿದ. ೧೯೮೦ರಲ್ಲಿ ಸಂಭವಿಸಿದ ಒಂದು ಘ್ಟನೆಯಲ್ಲಿ ಗ್ವಾಟಿಮಾಲ ಸರ್ಕಾರ ಗೆರಿಲ್ಲ ಕಾರ್ಯಕರ್ತರನ್ನು ಅಮಾನುಷವಾಗಿ ಕೊಂದಿತೆಂಬ ಕಾರಣಕ್ಕಾಗಿ ಸ್ಪೇನ್ ಗ್ವಾಟಿಮಾಲದೊಂದಿಗಿನ ಸಂಬಂಧವನ್ನು ಮುರಿಯಿತು. ೧೯೯೬ರಲ್ಲಿ ಸಂಯುಕ್ತಸಂಸ್ಥಾನದ (ಯುನೈತೆಡ್ ನೇಷನ್ಸ್ ಆರ್ಗನೈಸೇಷನ್) ಮಧ್ಯ ಪ್ರವೇಶದಿಂದಾಗಿ ಗ್ವಾಟಿಮಾಲದ ಅಂತರ್ಯುದ್ಧ ಕೊನೆಗೊಂಡಿತು. ಗೆರಿಲ್ಲ್ಲ ಹೋರಾಟಗಾರರು ಶರಣಾಗತರಾದರು. ಈ ಶಾಂತಿ ಸಂಧಾನದ ತರುವಾಯ ರಾಜ್ಯ ಆರ್ಥಿಕ ಪ್ರಗತಿ ಕಂಡಿದೆ. 
    ಸಂವಿಧಾನ, ಸರ್ಕಾರ : ಗ್ವಾಟಿಮಾಲ ಒಂದು ಗಣರಾಜ್ಯ ಈಗಿನ ಸಂವಿಧಾನದಲ್ಲಿ (೧೯೬೬) ಹಿಂದಿನ ಸಂವಿಧಾನದ (೧೯೩೬) ಮೂಲ ನಿಯಮಗಳೇ ಇವೆ. ಅಧ್ಯಕ್ಷನ ಅದಿಕಾರಾವಧಿ ೬ ವರ್ಷ. ನ್ಯಾಷನಲ್ ಕಾಂಗ್ರೆಸ್ ಸದಸ್ಯರು ನಾಲ್ಕು ವರ್ಷಗಳಿಗೊಮ್ಮೆ ಆಯ್ಕೆಯಾಗುತ್ತಾರೆ. ನ್ಯಾಷ್ನಲ್ ಕಾಂಗ್ರೆಸ್ ಸದಸ್ಯರು ನಾಲ್ಕು ವರ್ಷಗಳಿಗೊಮ್ಮೆ  ಆಯ್ಕೆಯಾಗುತ್ತರೆ. ನ್ಯಾಷನಲ್ ಕಾಮ್ಗ್ರೆಸ್ ಏಕಸದನ ವಿಧಾನಮಂಡಲ. 
    ಆಡಳಿತಾಂಗ : ಗ್ವಾಟಿಮಾಲ ೨೨ ವಿಭಾಗಗಳಾಗಿ ವಿಂಗಡವಾಗಿದೆ. ಪ್ರತಿಯೊಂದು ವಿಭಾಗಕ್ಕೂ ಒಬ್ಬೊಬ್ಬ ಗವರ್ನರ್ ರಾಷ್ಟ್ರಾದ್ಯಕ್ಷನಿಂದ ನೇಮಕವಾಗುತ್ತಾನೆ. ಪ್ರತಿ ಜಿಲ್ಲೆಯೂ ಮುನಿಸಿಪಾಲಿಟಿಗಳಾಗಿ ವಿಭಜಿಸಲ್ಪಟ್ಟಿದೆ. ಒಟ್ಟು ೩೨೪ ಮುನಿಸಿಪಾಲಿಟಿಗಳಿವೆ. 
    ಜನಜೀವನ : ಪ್ರಜೆಗಳು ಮುಖ್ಯವಾಗಿ ಇಂಡಿಯನ್ ಜನಾಂಗದವರು ಮತ್ತು ಅಪ್ಪಟ ಸ್ಪೇನಿಗರು (ಶೇ.೬೦). ಶೇ. ೨ ನೀಗ್ರೋ ಮತ್ತು ಶೇ ೮ ಸಂಮಿಶ್ರ ಜನ. ಆಡಳಿತ ಭಾಷೆ ಸ್ಪ್ಯಾನಿಶ್ ಮಾಯಾ ಇಂಡಿಯನರಲ್ಲಿ ೬ ಮುಖ್ಯ ಭಾಷೆಗಳೂ ೨೧ ಪ್ರದೇಶ ಭಾಷೆಗಳೂ ಇವೆ. ಬಹುತೇಕ ಜನ ರೋಮನ್ ಕೇಥೋಲಿಕರು (ಶೇ.೫೦) ಶೇ. ೪೦ ರಷ್ಟು ಜನ ಪ್ರಾಟೆಸ್ಟಂಟರು. 
    ಪ್ರಾಥಮಿಕ ಶಿಕ್ಷಣ ಉಚಿತ ಮತ್ತು ಕಡ್ಡಾಯ. ಸ್ಯಾಂಗ್ ಕಾರ್ಲೋಸ್ ವಿಶ್ವವಿದ್ಯಾಲಯ ೧೬೭೬ ರಲ್ಲಿ ಸ್ಥಾಪಿತವಾಯಿತು.
    ವ್ಯವಸಾಯ, ಕೈಗಾರಿಕೆ : ಇಲ್ಲಿನ ಮುಖ್ಯ ಬೆಳೆಗಳು ಕಾಫಿ, ಬಾಳೆ, ಹತ್ತಿ, ಕೋಕೋ, ಸೆಣಬು. ಕಾಫಿಯನ್ನು ಮೇಲಿನಾಡಿನ ಭಾಗಗಳಲ್ಲಿ ಬೆಳೆಯಲಾಗುತ್ತದೆ; ಬಾಳೆ ಬೆಳೆಯುವುದು ಪೆಸಿಫಿಕ್ ಸಾಗರ ತೀರಗಳಲ್ಲಿ. ಹೈನುಗಾರಿಕೆ ಅಭಿವೃದ್ಧಿಯಾಗುತ್ತಿದೆ. ಪಶ್ಚಿಮದ ಕುರಿ