ಪುಟ:Mysore-University-Encyclopaedia-Vol-6-Part-18.pdf/೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಗ್ರೇಟ್ ಬ್ರಿತನ್ ಮತ್ತು ಉತ್ತರ ಐರ್ಲೆಂಡ್ ಸಂಯುಕ್ತ ರಾಜ್ಯ

ಖಾಸಗಿ ಶಾಲೆಗಳನ್ನೂ ನೋಡಿಕೊಳ್ಳುತ್ತವೆ. ಶಾಲೆಯ ಆರೊಗ್ಯ ಆಹಾರ ಕಾರ್ಯಕ್ರಮಗಳನ್ನು ವ್ಯವವಸ್ಥೆಗೊಳಿಸುವುದರ ಜೊತೆಗೆ ವಿಶ್ವವಿದ್ಯಾಲಯ ಮತ್ತು ಇತರ ಊನ್ನತ ಶಿಕ್ಶನ ಸಂಸ್ಥೆಗಳು ಅಧ್ಯಾಪಕರ ಕಾಲೆಜುಗಳೂ ಸ್ವಯಂಸೇವ ಆಡಳಿತ ಮಂಡಲಿಗಳನ್ನು ಹೊಂದಿವೆ. ೧೯೯೬ರಿಂದ ಸ್ಕಾಟಿಶ್ ಸರ್ಟಿಫ಼ಿಕೇಟ್ ‍‍‌‌ಆಫ಼್ ಎಜುಕೆಶನ್ ಪರಿಕ್ಶೆಯನ್ನು ಸ್ವಯಮಾಡಾಳಿತ ಸಂಸ್ಥೆಯೊಂದು ನಿರ್ವಹಿಸುತ್ತಿದೆ. ನ್ಯೂನ ಮಕ್ಕಳ ವಸತಿ ವಿಶ್ವವಿಧ್ಯಾಲಯಗಳು ಬಹುಮಟ್ಟಿಗೆ ಸ್ವಯಂಸಸೇವ ಸಂಸ್ಥೆಗಳಿಗೆ ಸೇರಿವೆ.

ಶಿಕ್ಶಣದ ಆದಾಯವೆಚ್ಚಗಳು ಇಂಗ್ಲೆನಂಡಿನಲ್ಲಿದ್ದಂತೆಯೇ. ೧೯೬೯-೭೦ರಲ್ಲಿ ವಿಧ್ಯಾಸೊಲಭ್ಯಗಳಿಗಾಗಿ ಸರ್ಕಾರ ೨೬.೬೫ ಕೋಟ ಪೊಂಡುಗರಳನು ವೆಚ್ಚ ಮಾಡಿತು.

ಉತ್ತ್ರ ಇರ್ಲೆಂಡಿನಲ್ಲಿ ಶಿಕ್ಶಣ: ಉತ್ತರ ಇರ್ಲೆಂಡ್ ೧೯೨೧ರಲ್ಲಿ ಸ್ವಯಮಡಳಿತ ಘಟಕವಾದೊಡನೆ ಅರಂಭವಾದ ಶ್ಕ್ಶನಣ ಸಚಿವಾಲಯ ಅದು ತನಕ ಮೂರು ಭಿನ್ನ ಶಾಖೆಗಳಿಗೊಳಪಟ್ಟಿದ್ದ ಶ್ಕ್ಶಣ ಸೇವಾವ್ಯಸ್ಥೆಯ ಎಲ್ಲ ಆಡ್ಳಿತವನ್ನೂ ವಹಿಸಿಕೊಂಡಿತು.

೧೯೨೩ರ (ಇರ್ಲೆಂಡಿನ) ಶಾಸನದ ಪ್ರಕಾರ ಕೊಂಟಿ ಮತ್ತು ಕೊಂಟಿಬರೋ ಸ್ಥಳೀಯ ಸರ್ಕಾರಗಳ (ಸಂಸ್ಥೆ) ಸ್ಥಪನೆಯಗಿ ಅವುಗಳ್ ಶಿಕ್ಶಣ ಸಮಲಿತಿಗಳು ತಮ್ಮ ತಮ್ಮ ಕ್ಶೇತ್ರದ ಪ್ರಾಥಮಿಕ, ಪ್ರೌಡ ಮತ್ತು ತಾಂತ್ರಿಕ ಶಿಕ್ಶಣಗಳನ್ನು ವ್ಯವೆಸ್ಥೆಗೊಳಿಸಿ ನಡೆಸುವ ಅಧಿಕಾರ ಪಡೆದುವು. ೫ರಿಂದ ೧೪ರವರೆಗೆ ಶಿಕ್ಶಣ ಕಡ್ಡಾಯವಾಯಿತು. ಅದುತನಕ ಸ್ವಯಂಸೇವ ಸಂಸ್ಥೆಗಳು ನಡೆಸುತ್ತಿದ್ದ ಪ್ರಾಥಮಿಕ ಶಾಲೆಗಳಲ್ಲಿ ಬಹುಪಾಲನ್ನು ಅವು ವಹಿಸಿಕೊಂಡು ಸಂಸ್ಥೆಗಳ ಆಡಳಿತದಲ್ಲೆ ಉಳಿದುವು. ಆದರೆ ಅವಕ್ಕೆ ಸರ್ಕಾರದ ಬೊಕ್ಕಸದಿಂದ ಹಣಸಹಾಯ ದೊರಕುತಿತ್ತು. ತಾಂತ್ರಿಕ ಶಿಕ್ಶಣವನ್ನು ಪೂರ್ಣವಾಗಿ ಸ್ಥಳಿಯ ಪ್ರಧಿಕಾರವೇ ನಡೆಸುತಿತ್ತು. ೧೯೯೩ ಶಿಕ್ಶಣ ಶಾಸನ ಕಡ್ಡಾಯ ಶಿಕ್ಶಣದ ಮಯೋಮಿತಿಯನ್ನು ೧೮ಕ್ಕೆ ಏರಿಸಿತು. ಆದರೆ ಯುದ್ಧದ ದೆಸೆಯಿಂದ ಅದು ೧೯೪೭ರಲ್ಲಿ ಮಾತ್ರ ಕಾರ್ಯರೂಪಕ್ಕೆ ಬಂತ್ತು.

ಸದ್ಯದ ಶಿಕ್ಶಣವ್ಯವಸ್ಥೆ ೧೯೪೭ರ ಶಿಕ್ಶಣ ಶಾಸನವನ್ನು ಅವಲಂಬಿಸಿ ಏರ್ಪಟ್ಟಿದೆ. ಇದು ಇಂಗ್ಲೆಂಡಿನ ೧೯೪೪ರ ಶಿಕ್ಶಣ ಶಾಸನದಂತೆಯೇ ಇದೆ. ಪ್ರಾಥಮಿಕ, ಪ್ರೌಡ ಮತ್ತು ಮುನ್ನಡೆ ಎಂಬ ಮೂರು ಅಂತಸ್ತುಗಳಲ್ಲಿ ಶಿಕ್ಶಣವನ್ನು ವ್ಯವಸ್ಥೆಗೊಳಿಸಿದೆ: ೬ ವರ್ಷ್ಗಳ ಪ್ರಾಥಮಿಕ ಶಿಕ್ಶಣ, ೪ ವರ್ಷಗಳ ಇಂಟರ್ ಮಿಡಿಯೆಟ್ ಪ್ರೌಢ ಶಾಲೆಯ ಶಿಕ್ಷಣ, ಅನಂತರ ಶಾಲೆಯನ್ನು ಬಿಡುವವರಿಗೆ ಮುನ್ನಡೆ ಶಿಕ್ಷಣ. ೧೯೬೮ರ ರಾಜ್ಯ ಶಾಸನದ ಪ್ರಕಾರ ಅನೇಕ ಖಾಸಗಿ ಪ್ರೌಢಶಾಲೆಗಳು"ಮೇಂಟೇನ್ಡ್" ಶಾಲೆಗಳಾದವು. ಅವು ತಮ್ಮ ಆಡಳಿತ ಮಂಡಲಿಯಲ್ಲಿ ೧/೩ ಭಾಗದಷ್ಟು ಸರ್ಕಾರದ ನಾಮಕರಣ ಸದ್ಯಸರನ್ನು ಸೇರಿಸಿಕೊಳ್ಳುವುದಕ್ಕೂ ತಮ್ಮ ಶಾಲೆಯ ಕಟ್ಟಡಕ್ಕಾಗಿ ಸೇ.೮೦ರಷ್ಟು ಧನಸಹಾಯವನ್ನು ಸರ್ಕಾರದಿಂದ ಪದೆದುಕೊಳ್ಳುವುದುದಕ್ಕೂ ಅನುಕೂಲವಯಿತು. ಜೊತೆಗೆ ಅವುಗಳ ಇತರ ವೆಚ್ಚವನ್ನು ಸರ್ಕಾರವೇ ನೀಡುವಂತಾಯಿತು.

ಪ್ರಾಥಮಿಕ ಶಿಕ್ಷಣ : ೧೯೭೦ರಲ್ಲಿ ೨೨ ಶಿಶುವಿಹಾರಗಳೂ ೧೨೫೬ (೬೪೩ ಸರ್ಕಾರಿ, ೬೧೩ ಖಾಸಗಿ) ಪ್ರಾತಮಿಕ ಶಾಲೆಗಳೂ ಗ್ರಾಮರ್ ಶಾಲೆಗೆ ಸಿದ್ದತೆ ನೀಡುತ್ತಿದ್ದ ೪೧ ಶಾಲೆಗಳೂ ಇದ್ದವು. ೧೬ ವರ್ಷಗಳ ತನಕ ಉಚಿತ ಕಡ್ಡಾಯ ಶಿಕ್ಷಣ ಆಚರಣೆಯಲ್ಲಿದೆ. ಧಾರ್ಮಿಕ ಶಿಕ್ಷಣ ಎಲ್ಲ ಶಾಲೆಗಳಲ್ಲೂ ಉಂಟು.

ಪ್ರೌಢ ಶಿಕ್ಷಣ : ಸಾಮಾನ್ಯವಾಗಿ ಪ್ರೌಢಶಿಕ್ಷಣ ಉಚಿತ. ೧೯೭೦ರಲಿ ಒಟ್ಟು ೨೬೬ ಪ್ರೌಢಶಾಲೆಗಳಿದ್ದವು. ಅವುಗಳಲ್ಲಿ ಮೂರು ವಿಧ್ : ಗ್ರಾಮರ್ ಶಾಲೆಗಳು; ಇಂಟರ್ ಮಿಡಿಯೆಟ್ ಪ್ರೌಢಶಾಲೆಗಳು (೧೬೮) ಮತ್ತು ತಾಂತ್ರಿಕ ಪ್ರೌಢಶಾಲೆಗಳು (೧೭), ಗ್ರಾಮರ್ ಪ್ರೌಢಶಾಲೆಯಲ್ಲಿ ಶಿಕ್ಷಣ ೬ ವರ್ಷಕಾಲಾವಧಿಯದು; ಅಲ್ಲಿ ಮಾತ್ರ ಶುಲ್ಕವನ್ನು ವಿಧಿಸುವುದು. ಧಾರ್ಮಿಕ ಶಿಕ್ಷಣ ಪ್ರಾಥಮಿಕ ಮಟ್ಟದಲ್ಲಿರುವಂತಯೇ ಮಿಕ್ಕ ಅಂಶಗಳು ಇಂಗ್ಲೆಂಡಿನಲ್ಲಿರುವಂತೆ: ಉತ್ತರ ಇರ್ಲೆಂಡಿನ "ಜನರಲ್ ಸರ್ಟಿಫಿಕೇಟ್ ಆಫ್ ಎಜುಕೆಶನ್ ಕೌನ್ಸಿಲ್" ತನ್ನ ಪರೀಕ್ಷಾಮಂಡಳಿಯ ಮೂಲಕ ಪರಿಕ್ಷೆ ನಡೆಸುತದೆ. ಗ್ರಾಮರ್ ಮತ್ತು ಇತರ ಪ್ರೌಢಶಾಲೆಗಳ, ಹಾಗೂ ವಿಶಿಷ್ಟ ಶಿಕ್ಷಣದ ಶಾಲೆಗಳ ವಿಧ್ಯಾರ್ಥಿ ಪರಿಕ್ಷೆಗೆ ಕೂಡಬಹುದು.

೧೯೭೩ರಿಂದ "ಸರ್ಟಿಫಿಕೇಟ್ ಆಫ್ ಸೆಕಂಡರಿ ಎಜುಕೆಶನ್"(ಸಿ.ಎಸ್.ಇ.) ಪರಿಕ್ಷೆಯನ್ನು ನಡೆಸಲಾಗುತ್ತಿದೆ. ಇವೆಲ್ಲ ಇಂಗ್ಲೆಂಡಿನ (ಜೆ.ಸಿ.ಇ.) ಪರಿಕ್ಷೆಗಳಾ ಮಟ್ಟದವು. ಕೇವಲ ೧೫ನೆಯ ವರ್ಷಕ್ಕೆ ಶಿಕ್ಷಣ ಮುಗಿಸುವವರಿಗಾಗಿ ಒಂದು ಜೂನಿಯರ್ ಪರಿಕ್ಷೆಯನ್ನು ಆರಂಬಿಸುವ ಯೋಜನೆಯಿದೆ.

ಮುನ್ನಡೆಯ ಶಿಕ್ಷಣ : ೧೫-೧೬ನೆಯ ವರ್ಷದವರೆಗೆ ಶಿಕ್ಷಣ ಪಡೆದ ಉದ್ಯೋಗ ನಿರತರಾದ ಯುವ ಜನಕ್ಕೆ ಮುಣ್ಣಡೆಯ ಶಿಕ್ಷಣವನ್ನೊದಗಿಸುವ ಶಾಸದತ್ತ ಕರ್ತವ್ಯ ಸ್ಥಳೀಯ ಶಿಕ್ಷಣ ಪ್ರಾಧಿಕಾರಕ್ಕೆ ಸೇರಿದೆ. ಇತರ ಖಾಸಗಿ ಸಂಸ್ಥೆಗಳೂ ಕಾರ್ಯದಲ್ಲಿ ಸಹಕರಿಸುತ್ತವೆ. ೧೯೬೯-೭೦ರಲ್ಲಿ ವಿವಿಧ ಪಠ್ಯಕ್ರಮಗಳಗೊಂಡ ೩೧ ಕಾಲೆಜುಗಳು ಭಾಗಶಃ ಅಥವಾ ಪೂರ್ಣಕಾಲದ ಮುನ್ನಡೆ ಶಿಕ್ಷಣವನ್ನೊದಗಿಸುತ್ತಿದ್ದವು. ಇವುಗಳಲ್ಲಿ ನಾಲ್ಕು ಕೇಂದ್ರೀಯ ಸಂಸ್ಥೆಗಳು ( ಬೆಲ್ಘಾಸ್ಟ್ ನ ಟೆಕ್ನಾಲಜಿ, ಕಲೆ, ನಮೂನೆ ಮತ್ತು ಗೃಹವಿಜ್ಙಾನ ಕಾಲೆಜುಗಳು ); ಜೊತೆಗೆ ೧೫೯ ಬಾಹ್ಯ ಕೇಂದ್ರಗಳಲ್ಲೂ ಆ ಶಿಕ್ಷಣವನ್ನೂ ವ್ಯವಸ್ಥೆಗೊಳಿಸಿದೆ. ೧೮ನೆಯ ವಯಸ್ಸಿನವರೆಗೆ ಅಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ, ಉಚಿತ ಪುಸ್ತಕ ಮತ್ತು ಬಂದುಹೋಗಲು ತಗಲುವ ಪ್ರಯಾಣದ ಭತ್ಯ ಅಥವ ಉಚಿತ ಊಟವಸತಿ - ಇವನ್ನೆಲ್ಲ ಕೊಡುವರು. ಅಲ್ಲಿ ವಿಧ್ಯಾರ್ಥಿಗಳು ಲ್ಂಡನ್ ಇನ್ಸ್ಟ್ ಟಿಟ್ಯೂಟಿನ ವ್ಯಾಸಂಗಕ್ಕೆ ಸೇರಬಹುದು. ಅವರು ನ್ಯಾಷನಲ್ "ಸರ್ಟಿಫಿಕೇಟ್ ಮತ್ತು ಡಿಪ್ಲೊಮ ಪರಿಕ್ಷೆಗಳಿಗೆ ಕೂಡುವರು, ಕೈಗಾರಿಕಾ ತರಬೇತು ಮಂಡ್ಲಿಗಳನ್ನು ಆರಂಬಿಸಿ ಆ ವಿಧ್ಯಾರ್ಥಿಗಳಿಗೆ ಅಗತ್ಯ ಅಭ್ಯಾಸಾರ್ಥ ತರಬೇತನ್ನು ದೊರಕಿಸಲಾಗುತ್ತಿದೆ. ನೂತನವಾಗಿ ಆರಂಭಾವಗಿರುವ ಅಲ್ಸ್ಟರ್ ಕಾಲೆಜಿಗೆ ಮೇಲೆ ಉಲ್ಲೆಖಿಸಿದ ಬೆಲ್ಫಾಸ್ಟಿನ ನಾಲ್ಕು ಕಾಲೆಜುಗಳನ್ನು ಸೇರಿಸಿ ಉನ್ನತ ಶಿಕ್ಷಣವೀಯುವ ವ್ಯವಸ್ಥೆ ಮಾಡಿದೆ.

ವಯಸ್ಕರ ಶಿಕ್ಷಣ : ವಯಸ್ಕರ ಶಿಕ್ಷಣ ಇಲ್ಲೂ ಇಂಗ್ಲೆಂಡಿನಲ್ಲಿರುವಂತೆ ವ್ಯವಸ್ಥೆಗೊಂಡಿದೆ. ಮನೋರಂಜಕ ಕಾರ್ಯಕ್ರಮಗಳನ್ನು ಸ್ಥಳೀಯ ಶಿಕ್ಷಣ ಪ್ರಾಧಿಕಾರವೇ ಒದಗಿಸುತದೆ. ಕ್ವೀನ್ಸ್ ವಿಶ್ವವಿಧ್ಯಾಲಯದ ಒರಗಿನ ಶಾಖೆಯೂ ಅಲ್ಸ್ಟರ್ ವಿಶ್ವವಿಧ್ಯಾಲಯದ ವಯಸ್ಕರ ತರಗತಿಗಳನ್ನು ನಡೆಸುತ್ತಿವೆ. ಸುಮಾರು ೬ ಸಾವಿರ ವಿಧ್ಯಾರ್ಥಿಗಳು ಈ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿರುವರು.

ಯುವಜನ ಸೇವ ವ್ಯವಸ್ಥೆ : ಕೇಂದ್ರ ಸರ್ಕಾರ, ಸ್ಥಳೀಯ ಸರ್ಕಾರ ಮತ್ತು ಖಾಸಗಿ ಸ್ವಯಂಸಸೇವ ಸಂಸ್ಥೆಗಳು ಸಹಕರಿಸಿ ಯುವಜನರಿಗೆ ಆಟಪಾಟಗಳಲ್ಲೂ ಅಂಗಸಾದನೆ, ಮನೋರಂಜನೆ ಮುಂತಾದ ಶಿಕ್ಷಣವನ್ನು ವ್ಯವಸ್ಥೆಗೊಳಿಸುತ್ತಿವೆ. ಆ ಬಗ್ಗೆ ಸರ್ಕಾರಕ್ಕೆ ಸಲಹೆ ನೀಡಲು ಯುವಜನ ಕ್ರೀಡಾಮಂಡಲಿಯನ್ನು ಸ್ಥಾಪಿಸಿದೆ. ಯುವಜನ ಕಲ್ಯಾಣಕಾರ್ಯಕ್ರನಗಳಿಗಾಗಿ ವರ್ಷಂಪ್ರತಿ ೬೦ ಲಕ್ಷ ಪೌಂಡುಗಳಷ್ಟು ಹಣವಿನಿಯೋಗವಗುತ್ತಿದೆ.