ಪುಟ:Mysore-University-Encyclopaedia-Vol-6-Part-18.pdf/೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಗ್ರೇಟ್ ಬ್ರಿಟನಿನ ಇತಿಹಾಸ-ಗ್ರೇಟಿಯಸ್ ಫಾಲಿಸ್ಕಸ್ ಉನ್ನತ ಶಿಕ್ಷಣ: ಬೆಲೆಫಾಸ್ಟ ವಿಶ್ವವಿದ್ಯಾಲಯವೊಂದೇ ಇತ್ತೀಚಿನ ವರೆಗೆ ಉತ್ತರ ಐಲೆ೯೦ಡಿನಲ್ಲಿದ್ದೆ ವಿಶ್ವವಿದ್ಯಾಲಯ. 1965ರ ಲಾರ್ವುಡ್ ಸಮಿತಿಯ ಸಲಹೆಯಂತೆ ಕೊಲೆರೈನಿನಲ್ಲಿ ಅಲ್ಪಟೆರ್ ಎಶ್ವವಿದ್ಯಾಲಯ ನೂತನವಾಗಿ ಆರಂಭವಾಗಿದೆ. ಅದರಲ್ಲಿ ಬೆಲೆಫಾಸ್ಪಿನಲ್ಲಿದ್ದ 4 ಕಾಲೇಜುಗಳು ಸೇರಿಹೋಗಿವೆ. ಈ ಎಶ್ವವಿದ್ಯಾಲಯಗಳ ಜೋತೆಗೆ ನೂತನವಾಗಿ ಸೆಂಘಟೆಸಿರುವ ಅಟ್ಸ್ಮರ್ ಕಾಲೇಜಿನಲ್ಲಿ ಟೆಕ್ನಾಲಜಿ, ವಾಣಿಜ್ಯವಿದ್ಯೆ, ವ್ಯವಹಾರವಿದ್ಯೆ, ಕಲೆ, ದೈಹಿಕಶಿಕ್ಷಣ - ಇವನ್ನು ಬೋಧಿಸಸಲಾಗುತ್ತಿದೆ. ಅಧ್ಯಾಪಕರ ಶಿಕ್ಷಣವನ್ನು ಕ್ವೇನ್ಸ್ ವಿಶ್ವದ್ಯಾಲಯದ ವಿಭಾಗದಲ್ಲೂ ಅಲ್ಡ್ಗರ್ ಏಶ್ವವಿದ್ಯಾಲಯದ ಶಿಕ್ಷಣಶಾಸ್ತ್ರದ ಏದ್ಯಾಲಯದಲ್ಲೂ ವ್ವವಸ್ಥಗೊಳಿಸಿದೆ. ಜೊತೆಗೆ, 3 ಶಿಕ್ಷಣ ಕಾಲೇಜುಗಳಲ್ಲಿ ಕಲೆ ಮತ್ತು ನಮೂನೆ, ಗೃಹ ವಿಜ್ನಾನ- ಇವುಗಳಲ್ಲಿ ಎಶಿಷ್ಟ ಪ್ರಶಿಕ್ಷಣದ ವ್ಯವೆಸ್ಥಯೂ ಉಂಟು. ಆಡಳಿತ ಮತ್ತು ಹಣಕಾಸು: ಉತ್ತರಐರ್ಲೆಂಡಿನ ಪಾಲಿ೯ಮೆ೦ಟ್ ಶಿಕ್ಷಣಕ್ಕೆ ನಿದಿ೯ಷ್ಟ ಮತ್ತದ ಹೆಣವನ್ನು ಅನುಮತಿ ನೀಡುತ್ತದೆ. ಶಿಕ್ಷಣ ಸಚಿವರು ಪಾರ್ಲಿಮೆಂಟ್ ಅಂಗೀಕರಿಸುರುವ ಶಿಕ್ಷಣ ಕಾಯ೯ಕ್ರಗಳಿಗೆ ಆದನ್ನು ನಿನಿಯೋಗಿಸುವರು. ಇಂಗ್ಲೆಂಡಿನಲ್ಲಿರುವರಂತೆ ಕೇಂದ್ರ ಮಟ್ಟದಲ್ಲಿ ಶಿಕ್ಷಣ ಸಚಿವಾಲಯವೂ ಸ್ಥಳೀಯಮಟ್ಟದಲ್ಲಿ ಸ್ಥಳೀಯ ಶಿಕ್ಷಣಪ್ರಾಧಿಕಾರಗಳೂ ಅದನ್ನು ವಿನಿಯೋಗಿಸುವುವು. ಗ್ರೇಟ್ಬ್ರಿಟನಿನಲ್ಲಿರುವಂತೆ ಏಶ್ವವಿದ್ಯಾಲಯದ ಅನುದಾನಸಮಿತಿ ಇಲ್ಲಿನ ವಿಶ್ವವಿದ್ಯಾಲಯಗಳೊಡನೆ ನೇರವಾಗಿ ಸಂಪರ್ಕವಿಟ್ಟುಕೊಂಡಿಲ್ಲ. ಆಲ್ಲಿನ ಸಚಿವಾಲಯದ ಮೂಲಕ ಅಗತ್ಯೆವೆನಿಸುವ ಸಲಹೆಗಳನ್ನು ನೀಡುವುದು. ಶಿಕ್ಷಣಕ್ಕಾಗಿ 1969=70ರಲ್ಲಿ 6.43ಕೋಟಿ ಪೌಂಡ್ ವಚ್ಚಮಾಡಲಾಯಿತು. ಶೈಕ್ಷಣಿಕ ಅಂಕಿ ಅಂಶಗಳು : ಹಿಂದಿನ ಪುಟದಲ್ಲಿರುವ ಪಟ್ಟಿಯಲ್ಲಿ 1970ಕ್ಕೆ ಸಂಬಂಧಿಸಿದಂತೆ ಇಂಗ್ಲೆಂಡ್ ಮತ್ತು ವೇಲ್ಸಿನ, ಸ್ಕಾಟ್ಲೆಂಡಿನ ಐರ್ಲಾಂಡಿನ ಮತ್ತು ಇಡೀ ಸಂಯುಕ್ತ ರಾಜ್ಯದ ಶಿಕ್ಷಣಕ್ಕೆ ಸೆಂಬಂಧಿಸಿದ ಅಂಕಿ ಆಂಶಗಳನ್ನು ಕೊಟ್ಟಿದೆ. ಗ್ರೇಟ್ ಬ್ರಿಟನಿನ ಇತಿಹಾಸ : ಗ್ರೇಟ್ ಎಂಬ ಹೆಸರು ಅಧಿಕೃತವಾಗಿ ಬಳಕೆಗೆ ಬಂದದ್ದು 1604ರಿ೦ದ ಈಚೆಗೆ,ಸ್ಕಾಟ್ಲಾಂಡಿನ ಆರನೆಯ ಜೇಮ್ಸ್ ಇಂಗ್ಲೆಂಡ್ ಸ್ಕಾಟ್ಲಾಂಡ್ಗಳೆರಡಕ್ಕೂ ದೊರೆಯಾದ ಮೇಲೆ. ಆಗ ಅವನು ತನ್ನನ್ನು ಗ್ರೇಟ್ ಬ್ರಿಟನಿನ ದೊರೆಯೆಂದು ಕರೆದುಕೊಂಡ. ಆದರೆ ಈ ಹೆಸರು ಸಂವೈಧಾನಿಕವಾಗಿ ಬಳಕೆಗೆ ಬಂದದ್ದು 1707ರಲ್ಲಿ, ಇಂಗ್ಲೆಂಡ್ ಮತ್ತು ಸ್ಕಾಟ್ಲೆಂಡ್ಗಳ ಪಾರ್ಲಿಮೆಂಟುಗಳನ್ನು ಒಂದುಗೊಳಿಸುವ ಅಧಿನಿಯಮ (ಆಕ್ಟ್ ಆಫ್ ಯೂನಿಯನ್) ಜಾರಿಗೆ ಬಂದಾಗ, ಇಂಗ್ಲೆಂಡಿನ ವಾಣಿಜ್ಯ ಸೌಲಭ್ಯಗಳು ಸ್ಕಾಟ್ಲೆಂಡಿಗೂ ದತ್ತವಾದವು.ಸ್ಕಾಟ್ಲೆಂಡಿನ ಚರ್ಚ್, ಸ್ಕಾಟಿಷ ಕಾನೂನುಗಳು ಮತ್ತು ನ್ಯಾಯ ಪ್ರಕ್ರಿಯೆಗಳನ್ನು ಪರಿಪಾಲಿಸುವ ಭರವಸೆ ನೀಡಲಾಯಿತು. ಸ್ಟೂಯರ್ಟ್ ಮನೆತನದ ಆನಳ ಆಳಿಕೆಯೊಂದಿಗೆ ಗ್ರೇಟ್ ಬ್ರಿಟನಿನ ಇತಿಹಾಸ ವಾಸ್ತವವಾಗಿ ಅರಂಭವಾಗುತ್ತದೆ. 1ನೆಯ ಜಾಜ್೯ 1714ರಿಂದ 1727ರ ವರೆಗೂ ಆನಂತರ 2ನೆಯೆ ಜಾಜ್೯ 1727ರಿಂದ 1760ರ ವರೆಗೂ ಅಳಿದರು. ಇವರ ಕಾಲದಲ್ಲಿ ಪ್ರಧಾನ ಮಂತ್ರಿಯ ಹುದ್ದೆ ಪ್ರಾರಂಭವಾಯಿತು. 1ನೆಯೆ ಮತ್ತು 2ನೆಯ ಜಾಜ೯ರಿಗೆ ಇಂಗ್ಲಿಷ್ ಭಾಷೆಯ ಜ್ಞಾನವಿರಲ್ಲಿಲ್ಲ. ಅವರಿಗೆ ಇರಿಗ್ಲೆಂಡಿನ ರಾಜಕೀಯದೆಲ್ಲಿ ಆಸಕ್ತಿ ಇರಲಿಲ್ಲ. ಆದ್ದರಿಂದ ಅವರು ಹಿಂದಿನ ದೊರೆಗಳಂತೆ ಮಂತ್ರಿಮಂಡಲದ ಸಭೆಯ ಅಧ್ಯಕ್ಷತೆ ವಹಿಸುತ್ತಿರಲಿಲ್ಲ. ಆಗ ಮಂತ್ರಿಗಳಲ್ಲೊಬ್ಬ ಅಧ್ಯಕ್ಷತೆ ವಹಿಸಲಾರಂಭಸಿದ. ಆತನನ್ನು ಪ್ರಧಾನಮಂತ್ರಿ ಎಂದು ಕರೆಯಲಾರಂಭವಾಯಿತು. ಕಾಲಕ್ರಮದಲ್ಲಿ ಆತ ತನ್ನ ಸಹೋದ್ಯೋಗಿಗಳ ನೇಮಕದ ಮೇಲೆ ಹೆತೋಟಿ ಪಡೆದ. ಮಂತ್ರಿಮಂಡಲ ಮುಂದುವರಿಯಲು ಕಾಮನ್ಸ್ ಸಭೆಯ ಬಹುಮತದ ಬೆಂಬಲ ಆವಶ್ಯಕವಾಯಿತು. ಹೀಗೆ 1ನೆಯ ಮತ್ತು 2ನೆಯೆ ಜಾಜ೯ರ ಕಾಲದಲ್ಲಿ ಇಂಗ್ಲೆಂಡಿನಲ್ಲಿ ಮಂತ್ರಿಮಂಡಲ ಮತ್ತು ಪಕ್ಷಸರ್ಕಾರದ ವಿಕಾಸವಾಯಿತು. 2ನೆಯ ಜಾಜ೯ನ ಕಾಲದಲ್ಲಿ 1740=1748ರಲ್ಲಿ ಆಸ್ಟ್ರಿಯ ಸಿಂಹಾಸನದ ಉತ್ತರಾಧಿಕಾರಕ್ಕಾಗಿ ಯುದ್ಧ ನಡೆಯಿತು. ಇದರಲ್ಲಿ ಬ್ರಿಟನ್ ಮತ್ತು ಆಸ್ಟ್ರಿಯ ಒಂದು ಕಡೆಗೂ ಫ್ರಾನ್ಸ್ ಮತ್ತು ಪ್ರಷ್ಯ ಇನೊಂದು ಕಡೆಗೂ ಇದ್ದುವು. ಆನಂತರ ಬ್ರಿಟನ್ ಮತ್ತು ಫ್ರಾನ್ಸ್ಗಳ ನಡುವೆ ಏಳು ವರ್ಷಗಳ ಯುದ್ದ (1756-63) ನಡೆಯಿತು.ಈ ಯುದ್ದ್3ನೆಯ ಜಾರ್ಜನ ಆಳಿಕೆಯ ಕಾಲದಲ್ಲಿ (1760-1820)ಬ್ರಿಟನಿನ ವಿಜಯದೋಂದಿಗೆ ಮೂಕ್ತಾಯವಾಯಿತು. ಇದರ ಫಲವಾಗಿ ಬ್ರಿಟನಿನ ಹಲವು ಸಾಗರಾಂತರ ವಸಾಹತುಗಳ ಸಂಪಾದನೆಯಾಯಿತು. ಬ್ರಿಟನಿನ ವಿಶಾಲ ಚಕ್ರಾಧಿಪತ್ಯ ಬೆಳೆಯಲಾರಂಭಿಸಿತು.ಬ್ರಿಟನಿನ ಕೀರ್ತೀಯಲ್ಲಿ ಹೆಮ್ಮೆ ತಳೆದ ಪ್ರಥಮ ಹ್ಯಾನೋವರಿಯನ್ ದೊರೆ 3ನೆಯ ಜಾರ್ಜ್. ಈತನ ಆಳಿಕೆಯ ಕಾಲದಲ್ಲಿ 1775ರಲ್ಲಿ ಸಂಗ್ರಾಮ ಆರಂಭವಾಯಿತು.ಉತ್ತರ ಅಮೆರಿಕದ ಹದಿಮೂರು ಸಂಸ್ಥಾನಗಳು ಸ್ವತಂತ್ರವಾದವು.ಇವು 1783ರಲ್ಲಿ ಸಂಯುಕ್ತ ಸಂಸ್ಥಾನಗಳಾದವು 1789ರಲ್ಲಿ ಫ್ರಾನ್ಸಿನಲ್ಲಿ ಕ್ರಾಂತಿ ಸಂಭವಿಸಿತು.1793ರಲ್ಲಿ ಫ್ರನ್ಸಿನೊಂದಿಗೆ ಬ್ರಿಟನಿನ ಯುದ್ದ ಪ್ರಾರಂಭವಾಗಿ 1815ರಲ್ಲಿ ಫ್ರಾನ್ಸಿನ ನೆಪೋಲಿಯನನ ಸೋಲಿನೊಂದಿಗೆ ಕೊನೆಗೊಂಡಿತು. 1801 ರಲ್ಲಿ ಜಾರಿಗೆ ಬಂದ ಒಕ್ಕೂಟ ಅಧಿನಿಯಮದಂತೆ ಐರ್ಲೆಂಡು ಗ್ರೇಟ್ ಬ್ರಿಟನಿನಲ್ಲಿ ಸಮಾವೇಶಗೊಂಡಿತು. ಗ್ರೇಟ್ ಬ್ರಿಟನ್ ಮತ್ತು ಐರ್ಲಾಂಡ್ ಸಂಯುಕ್ತ ರಾಜ್ಯ ಎಂಬುದು ಈ ದೇಶದ ಅಧಿಕೃತ ನಾಮವಾಯಿತು. 4ನೆಯ ಜಾರ್ಜ್ 1820ರಿಂದ 1830ರವರೆಗೆ ಆಳಿದ. 4 ನೆಯ ವಿಲಿಯಮನ ಆಳಿಕೆಯ ಕಾಲ 1830-1837. ಈತನ ಆಳಿಕೆಯಲ್ಲಿ 1832 ರಲ್ಲಿ ಮೊದಲನೆಯ ಪಾರ್ಲಿಮೆಂಟ್ ಸುಧಾರಣಾ ಅಧಿನಿಯಮ ಜಾರಿಗೆ ಬಂತು. ಅದುವರೆಗೆ ಬ್ರಿಟನ್ನಿನಲ್ಲಿ ಶ್ರೀಮಂತರು ರಾಜಕೀಯ ಅಧಿಕಾರ ಹೊಂದಿದ್ದರು. ಕಾಮನ್ಸ್ಗೆ ನಡೆಯುತ್ತಿದ್ದ ಚುನಾವಣೆಗಳಲ್ಲಿ ಮತ ನೀಡುವ ಹಕ್ಕು ಭೂಮಾಲೀಕರಿಗೆ ಮಾತ್ರ್ ಇದ್ದದ್ದು ಇದಕ್ಕೆ ಕಾರಣ.ಈ ಸುಧಾರಣಾ ಅಧಿನಿಯಮದ ಪ್ರಕಾರ ಮಧ್ಯಮ ವರ್ಗದವರಿಗೂ ಮತ ನೀಡುವ ಹಕ್ಕು ಲಭ್ಯವಾಯಿತು. ಈ ವೇಳೆಗೆ ಗ್ರೇಟ್ ಬ್ರಿಟನ್ನಿನ್ನ ಆರ್ಥಿಕತೆಯಲ್ಲಿ ಮಹತ್ವದ ಬದಲಾವಣೆಗಳಾಗಲಾರಂಭವಾಗಿತ್ತು. ಕೃಷಿಪ್ರಧಾನವಾಗಿದ್ದ ಬ್ರಿಟನ್ ಕೈಗಾರಿಕಾ ದೇಶವಾಗಹತ್ತಿತ್ತಿ. ಈ ಬದಲಾವಣೆಗಳನ್ನು ಕೈಗಾರಿಕಾ ಕ್ರಾಂತಿ ಎಂದು ಕರೆಯಲಾಗಿದೆ. 1837-1901 ವಿಕ್ಟೋರಿಯಾ ರಾಣಿಯ ಆಳಿಕೆಯ ಕಾಲ.ಈ ಕಾಲದಲ್ಲಿ 1867ರಲ್ಲಿ ಎರಡನೆಯ ಪಾರ್ಲಿಮೆಂಟ್ ಸುಧಾರಣಾ ಅಧಿನಿಯಮ ಜಾರಿಗೆ ಬಂತು. ಕಸಬುದಾರರಿಗೆ ಮತ ಚಲಾವಣೆಯ ಹಕ್ಕು ಲಭ್ಯವಾಯಿತು. ಗುಪ್ತ ಮತದಾನ ಅಧಿನಿಯಮ ಬಂದದ್ದು 1878ರಲ್ಲಿ. 1884ರಲ್ಲಿ ಬಂದ ಮೂರನೆಯ ಪಾರ್ಲಿಮೆಂಟ್ ಸುಧಾರಣಾ ಅಧಿನಿಯಮದಂತೆ ರೈತರಿಗೆ ಮತದಾನದ ಹಕ್ಕು ದೊರೆಯಿತು. ಪ್ರಾಪ್ತ ವಯಸ್ಕ್ ಗಂಡಸರೆಲ್ಲರಿಗೂ ಮತ ಹಕ್ಕು ಲಭಿಸಿದಂತಾಯಿತು. ಪ್ರಜಾಪ್ರಭುತ್ವ ಸ್ಥಿರವಾಯಿತು. 1901ರಿಂದ 1910ರ ವರೆಗೆ 7ನೆಯ ಎಡ್ವರ್ಡನೂ1910 ರಿಂದ 1936ರವರೆಗೆ 5 ನೆಯ ಜಾರ್ಜನೂ ರಾಜರಾಗಿದ್ದರು. 5ನೆಯ ಜಾರ್ಜ್ ದೊರೆಯ ಆಳಿಕೆಯ ಕಾಲದಲ್ಲಿ ಒಂದನೆಯ ಮಹಾಯುದ್ಧ ನಡೆಯಿತು. 1918ರ ಮತ್ತು1928ರ ಅಧಿನಿಯಮಗಳಿಂದ ಸ್ತ್ರೀಯರಿಗೂ ಹಕ್ಕು ದೊರೆಯಿತು. 1911ರಲ್ಲಿ ಜಾರಿಗೆ ಬಂದ ಪಾರ್ಲಿಮೆಂಟ್ ಅಧಿನಿಯಮ ಲಾರ್ಡ್ಸ್ ಸಭೆಯ ಅಧಿಕಾರವನ್ನು ಮೊಟಕು ಮಾಡಿತು.1922 ರಲ್ಲಿ ಇರ್ಲಾಂಡಿನ 26 ಕೌಂಟಿಗಳು ಸ್ವತಂತ್ರವಾದವು. ಉತ್ತರ ಐರ್ಲೆಂಡ್ ಒಕ್ಕೂಟದಲ್ಲಿ ಉಳಿದುಕೊಂಡಿತು. ಗ್ರೇಟ್ ಬ್ರಿಟನ್ ಮತ್ತು ಉತ್ತರ ಐರ್ಲೆಂಡ್ ಸಂಯುಕ್ತ ರಾಜ್ಯ ಎಂಬುದು ದೇಶದ ಹೆಸರಾಯಿತು. ಕಾಮನ್ಸ್ ಸಭೆಯ ಸದಸ್ಯರಿಗೆ ಪ್ರಪ್ರಥಮವಾಗಿ ವೇತನ ಕೊಡುವ ಪದ್ಧತಿ ಪ್ರಾರಂಭವಾಯಿತು. ಕಾಮನ್ಸ್ ಸಭೆಯ ಅವಧಿ ಐದು ವರ್ಷಗಳೆಂದು ನಿಗದಿ ಮಾಡಲಾಯಿತು. 1936ರಲ್ಲಿ 8ನೆಯ ಎಡ್ವರ್ಡ ರಾಜನಾದ. ಎರಡು ಸಾರಿ ವಿವಾಹ ವಿಚ್ಛೇಧನ ಮಾಡಿಕೊಂಡಿದ್ದ ಅಮೆರಿಕನ್ ಮಹಿಳೆ ಅರ್ನೆಸ್ಟ್ ಸಿಮ್ಸನಳನ್ನು ವಿವಾಹವಾಗಬಯಸಿದ ಎಡ್ವರ್ಡ್ ಆಕೆಗಾಗಿ ಸಿಂಹಾಸನತ್ಯಾಗ ಮಾಡಬೇಕಾಯಿತು. ಈತನ ಸೋದರ 6ನೆಯ ಜಾರ್ಜ್ 1936-52 ರಲ್ಲಿ ಗ್ರೇಟ್ ಬ್ರಿಟನಿನ ದೊರೆಯಾಗಿದ್ದ. ಈತನ ಆಳಿಕೆಯ ಕಾಲದಲ್ಲಿ ಎರಡನೆಯ ಮಹಾಯುದ್ದ ಜರುಗಿತು. ಯುದ್ಧಾನಂತರಲ್ಲಿ ಬ್ರಿಟನಿನ ಅನೇಕ ವಸಾಹತುಗಳು ಒಂದೊಂದಾಗಿ ಸ್ವತಂತ್ರಗೊಂಡವು. 6ನೆಯ ಜಾರ್ಜ್ ದೊರ್ತೆ 1952 ರಲ್ಲಿ ತೀರಿಕೊಂಡ ಆತನ ಹಿರಿಯ ಮಗಳು 2ನೆಯ ಎಲಿಜಬೆತಳ ಆಳಿಕೆ ಆರಂಭವಾಯಿತು. ಆಕೆಯ ಆಳಿಕೆಯ ಕಾಲದಲ್ಲಿ ಮಹತ್ತರ ಬದಲಾವಣೆಗಳಾದವು. ಬ್ರಿಟಿಷ್ ಕಾಮನ್ವೆಲ್ತ್ ಸ್ವರೂಪ ಬದಲಾವಣೆಗೊಂಡು ಅದು ಕಾಮನ್ವೆಲ್ತ್ ಬಂಧುಕೂಟವಾಗಿ ಪರಿಣಮಿಸಿತು. ಬ್ರಿಟನಿನ ಸಾಗರಾಂತರ ವಸಾಹತುಗಳೆಲ್ಲಾ ಕಳೆದುಹೋಗಿ ಅದರ ಪೂರ್ವದ ಪ್ರತಿಷ್ಠ ಬಹಳ ಮಟ್ಟಿಗೆ ನಷ್ಟವಾಯಿತು. ಗ್ರೇಟಿಯಸ್ ಫಾಲಿಸ್ಕಸ್ಳ್: ರೋಮನ್ ಕವಿ. ಕಾಲ ಪ್ರ.ಶ.ಸು.1ನೆಯ ಶತಮಾನ. ವರ್ಜಿಲ್ ಮತ್ತು ಓವಿಡ್ ಕವಿಗಳ ಸಮಕಾಲೀನ. ಈತನ ಜನ್ಮಸ್ಥಳ ಫಲಿರೀ ಎಂದು ಊಹಿಸಲಾಗಿದೆ. ಬೇಟೆಯಾಡುವುದರ ಬಗ್ಗೆ ಸೈನೆಜಿಟಿಕ ಎಂಬ ಕವನದಲ್ಲಿ ಬರುವ 536ವಾಕ್ಯಗಳನ್ನು ಬಿಟ್ಟರೆ ಈತನ ಸಾಹಿತ್ಯ ಚಟುವಟಿಕೆಯ ಬಗ್ಗೆಯಾಗಲಿ ಅಥವಾ ವೈಯಕ್ತಿಕ ಜೀವನದ ಬಗ್ಗೆಯಾಗಲಿ ಯಾವ ಮಾಹಿತಿಯೂ ದೊರೆಯುವುದಿಲ್ಲ. ಓವಿಡ್ ತನ್ನ ಕೃತಿಯೊಂದರಲ್ಲಿ ಆಕಸ್ಮಿಕವಾಗಿ ಮಾಡಿರುವ ಉಲ್ಲೇಖವನ್ನು ಬಿಟ್ಟರೆ ಓದುಗರು ಈತನ ಕೃತಿಯನ್ನು ಮರೆತಿದ್ದರೆಂದೇ ತೋರುತ್ತದೆ. ಈ ಕೃತಿಯಲ್ಲಿ ಗ್ರೇಟಿಯಸ್ ಹೆಚ್ಚು ಕಡಿಮೆ ಜಿನೊಫನನ ರೀತಿಯಲ್ಲಿ ಬೇಟೆಯ ಆಟವನ್ನು, ಅದರ ರೀತಿ ನೀತಿಗಳನ್ನು, ಅದಕ್ಕೆ ಬಳಸುವ ಕುದುರೆ, ನಾಯಿಗಳನ್ನು ಮತ್ತು ಅವುಗಳ ತಳಿಗಳನ್ನು ಕುರಿತು ವಿವೇಚಿಸಿದ್ದಾನೆ. ಕವಿಯ ಮೇಲೆ ವರ್ಜಿಲನ ಪ್ರಭಾವವಿರುವುದಾದರೂ ವಿವರಣೆ ಅಲ್ಲಲ್ಲಿ ಮಂಕಾಗಿ ಶೈಲಿ ಭಾರವಾಗಿದೆ ಎನಿಸುತ್ತದೆ. ಆದರೆ ತನ್ನ ಸಾಮಾಗ್ರಿಗಳ ಜೋಡಣೆಯಲ್ಲಿ, ಅದನ್ನು ಬಳಸುವಲ್ಲಿ ತುಂಬ ಚತುರತೆಯನ್ನು ವ್ಯಕ್ತ ಪಡಿಸಿದ್ದಾನೆ. ಇಡೀ ಕವನ ಬೋಧಕನ ಶೈಲಿಯಲ್ಲಿದೆ.