ಪುಟ:Mysore-University-Encyclopaedia-Vol-6-Part-18.pdf/೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಗ್ರೇ, ಥಾಮಸ್-ಗ್ರೇಯಮ್ ಥಾಮಸ್


ಗ್ರೇ, ಥಾಮಸ್:1716-71.ಇಂಗ್ಲೆಂಡಿನ ನಿಯೋಕ್ಲಾಸಿಕಲ್ (ನವ ಅಭಿಕಜಾತ) ಕಾವ್ಯಸಂಪ್ರದಾಯದ ಇಳಿಗಾಲದಲ್ಲಿ ಅದೇ ಸಂಪ್ರದಾಯದವರಾದರೂ ತಮ್ಮ ಭಾವುಕತೆ ಹೃದಯವಂತಿಕೆಯ ಮೂಲಕ ರೊಮ್ಯಾಂಟಿಕ್ ಕಾವ್ಯಕ್ಕೆ ದಾರಿ ಮಾಡಿಕೊಟ್ಟ ಕವಿಗಳಲ್ಲಿ ಥಾಮಸ್ ಗ್ರೇನ ಹೆಸರು ಕಾಲಿನ್ಸ್ ಕವಿಯ ಜೊತೆಗೆ ಸೇರ್ಪಡೆಯಾಗಿದೆ.ಈತ ಅಭಿಜಾತ ಸಾಹಿತ್ಯ, ಮಧ್ಯಯುಗೀನ ಇತಿಹಾಸಗಳನ್ನು ಆಳವಾಗಿ ಅಭ್ಯಸಿಸಿದ ಕವಿ.ಇವೆರಡರ ಮೆರುಗು ಈತನ ಕಾವ್ಯದಲ್ಲಿದೆ.ಬಂಧದ ಬಿಗುವು ಕ್ಲಾಸಿಕಲ್ ಸಂಪ್ರದಾಯದ್ದಾದರೂ ಇಂಗ್ಲಿಷ್ ಮಧ್ಯಯುಗೀನ ಕಾಲದ ಬಿರುಸು-ಒಜಸ್ಸು ಈತನ ವಿಚಾರಸರಣಿಯಲ್ಲಿ ಸೇರಿ ಕ್ಲಾಸಿಕಲ್ ಸಂಪ್ರದಾಯಬದ್ಧತೆಯನ್ನು ಮೂದಲಿಸಿತು.ಈತ ಹುಟ್ಟಿದ್ದು ಲಂಡನಿನಲ್ಲಿ.ತಂದೆ ಕೋರ್ಟಿನ ಕರಡು ಬರೆಯುವ ತ‌ಜ಼; ಸಾಕಷ್ಟು ಹಣಗಳಿಸಿದ್ದ.ತಾಯಿ ಸ್ವತಂತ್ರವಾಗಿ ಹ್ಯಾಟ್ ಮಾಡುವ ಉದ್ಯೋಗ ನಡೆಸುತ್ತಿದ್ದಳು.ಒಡಹುಟಿದವರನ್ನು ಚಿಕ್ಕಂದಿನಲ್ಲಿಯೇ ಕಳಕೊಂಡ ಗ್ರೇ ದುಃಖಿ; ಏಕಾಕಿ ಜೀವನಕ್ಕೆ ಮೊದಲಿನಿಂದಲೇ ಹೊಂದಿಕೊಂಡಿದ್ದ.ಸ್ಥಿತಿವಂತನಾಗಿದ್ದುದರಿಂದ ಈತನನ್ನು ಈಟನ್ ವಿದ್ಯಾಲಯಕ್ಕೆ ಕಳುಹಿಸಲಾಯಿತು. ಅಲ್ಲಿ ಹೊರೆಸ್ ವಾಲ್ ಪೋಲ್ ಲೇಖಕನ ಸಹಕಾರಿಯಾಗಿದ್ದುಕೊಂಡು ಆತನ ದೀರ್ಘಾವಧಿಯ ಗೆಳೆಯನಾದ.18ನೆಯ ವಯಸ್ಸಿಗೆ ಕೇಂಬ್ರಿಜ್ ಸೇರಿದ ನಾದರೂ ಪದವಿ ಪಡೆಯುವುದರಲ್ಲಿ ವಿಫಲನಾದ.ಪುಸ್ತಕ ಹೂದೋಟ ಗಳಿಗೆ ಮನಸೋತು ವಿವಿಧ ಜ್ನಾನದಲ್ಲಿ ಮನಸ್ಸನ್ನು ಹರಿಸಿದ. ವಾಲ್ ಪೋಲ್ ನ ಜೊತೆಗೆ ಯುರೋಪಿನ ಪ್ರಯಾಣಕ್ಕೆ ಹೋದಾಗ ವಿರಸ ಮೂಡಿ ಇವರ ಸ್ನೇಹಸಂಬಂಧ ಮೂರು ನಾಲ್ಕು ವರ್ಷ ಮುರಿದರೂ ಮತ್ತೆ ಹೊಂದಿಕೆ ಯಾಯಿತು. ಆನಂತರ ಕೇಂಬ್ರಿಜ್ ನಲ್ಲಿ ನೆಲೆಸಿ ಗ್ರಂಥಾಲಯ,ತೋಟಗಳಲ್ಲಿ ಸುಖವಾಗಿ ಕಾಲ ಕಳೆದ.1768ರಲ್ಲಿ ಆಧುನಿಕ ಇತಿಹಾಸದ ಪ್ರೊಫೆಸರ್ ಹುದ್ದೆ ಸ್ವೀಕರಿಸಿದರೂ ಪಾಠ ಹೇಳಿಕೊಡುವ ಗೋಜಿಗೇ ಹೋಗಲಿಲ್ಲ.ಸದಾ ಶಾಂತ-ಆಂತರ್ಮುಖಿ ಜೀವನ ನಡೆಸಿದ. 1742ರಲ್ಲಿ ಪ್ರಥಮ ಇಂಗ್ಲಿಷ್ ಕವನ (ವಸಂತ ಸ್ತೋತ್ರ) ರಚಿಸಿದ.ಲ್ಯಾಟಿನ್ ಭಾಷೆಯಲ್ಲಿ ರಚಿಸಿದ ಈತನ ಚಿಂತನಪರ ಕವನಗಳುಂಟು.ಭಾವುಕ ಚಿಂತನಪರತೆಯ ಪರಾಕಾಷ್ಠೆಯನ್ನು ಎನ್ ಎಲಿಜಿ ರಿಟನ್ ಇನ್ ಎ ಕಂಟ್ರಿ ಚರ್ಚ್ ಯಾರ್ಡ್ ಎಂಬ ಕವನದಲ್ಲಿ (ಹಳ್ಳಿಯ ಮಸಣದಲ್ಲಿ ಕುಳಿತು ರಚಿಸಿದ ಶೋಕಗೀತ)ಕಾಣುತ್ತೇವೆ.ಈ ಕವನ ಇಂಗ್ಲೆಂಡ್-ಅಮೆರಿಕಗಳ ಭಾವುಕರ ಪಠ್ಯವಾಯಿತು.ಗತಕಾಲದ ಚಿಂತನೆಯಿಂದ ಕೂಡಿದ ಹಿಮ್ ಟು ಆಡ್ ವರಿಟಿ,ಓಡ್ ಆನ್ ಎ ಡಿಸ್ಟೆಂಟ್ ಪ್ರಾಸ್ಪೆಕ್ಟ್ ಆಫ್ ಈಟನ್ ಕಾಲೇಜ್ ಇವು ಈತನ ನೆನೆ-ಕನಸುಗಳ ಶ್ರೇಷ್ಠ ಉದಾಹರಣೆಗಳು. ಇವನ ದಿ ಬಾರ್ ಎಂಬ ಕವನದಲ್ಲಿ ಚಾರಿತ್ರಿಕ ದರ್ಶನವಿದೆ. ಈತನಲ್ಲಿ ಹಾಸ್ಯಗುಣವೂ ಇತ್ತು.ಪತ್ರ ಸಾಹಿತ್ಯ ಸೃಷ್ಟಿಯಲ್ಲೂ ಈತ ಹೆಸರಾದವ.

ಗ್ರೇಪ್ ಹಣ್ಣು: ರೂಟೇಸೀ (ಕಿತ್ತಳೆ) ಕುಟುಂಬಕ್ಕೆ ಸೇರಿದ ಒಂದು ಮರದ ಹಣ್ಣು.ವೃಕ್ಷದ ವೈಜ್ನಾನಿಕ ಹೆಸರು ಸಿಟ್ರಸ್ ಪ್ಯಾರಡಿಸಿ.ಇದು ಚಕ್ಕೋತ ಹಣ್ಣಿನ ಮರಕ್ಕೆ (ಸಿಟ್ರಸ್ ಗ್ರ್ಯಾಂಡಿಸ್) ಬಲು ಹತ್ತಿರ ಸಂಬಂಧಿ. ಹಲವರ ಅಭಿಪ್ರಾಯದಂತೆ ಇದು ಚಕ್ಕೋತ ಮರದಿಂದ ವ್ಯತ್ಯಯದ (ಮ್ಯುಟೇಷನ್) ಮೂಲಕ ಉದ್ಭವಿಸಿದೆ.ಗ್ರೇಪ್ ಹಣ್ಣಿನ ಮರ ವೆಸ್ಟ್ ಇಂಡೀಸಿನ ಮೂಲನಿವಾಸಿ.ಇದರ ರುಚಿಯಾದ ಹಣ್ಣುಗಳಿಗಾಗಿ ಇದನ್ನು ಬೇರೆ ದೇಶಗಳಲ್ಲಿ ಮುಖ್ಯವಾಗಿ ಅಮೆರಿಕ ಸಂಯುಕ್ತಸಂಸ್ಥಾನಗಳ ಫ್ಲಾರಿಡ,ಆರಿಜೋನ,ಕ್ಯಾಲಿಫೋರ್ನಿಯಗಳಲ್ಲೂ ಇಸ್ರೇಲಿನಲ್ಲೂ ದಕ್ಷಿಣ ಆಫ್ರಿಕದಲ್ಲೂ ಭಾರಿ ಪ್ರಮಾಣದಲ್ಲಿ ಬೆಳೆಸಲಾಗುತ್ತಿದೆ.ಅಮೆರಿಕದ ಫ್ಲಾರಿಡ ರಾಜ್ಯವೊಂದರಲ್ಲಿ ಇದರ ವಾರ್ಷಿಕ ಇಳುವರಿ ಒಂದು ಮಿಲಿಯನ್ ಟನ್ನುಗಳಷ್ಟಿದೆ. ಭಾರತದಲ್ಲಿ ಪಂಜಾಬ್,ಹರಿಯಾಣಗಳಲ್ಲಿ ದೊಡ್ಡ ಮೊತ್ತದಲಲ್ಲೂ ದಕ್ಷಿಣ ಭಾರತದಲ್ಲಿ ಲಘು ಮೊತ್ತದಲ್ಲೂ ಇದರ ಬೇಸಾಯ ಉಂಟು.

ಇದು 7-12 ಮೀ ಎತ್ತರಕ್ಕೆ ಬೆಳೆಯುವ ಮರ.ಎಲಿಗಳು ಚಕ್ಕೋತದ ಎಲೆಗಳಿಗಿಂತ ಸ್ವಲ್ಪ ಚಿಕ್ಕವು.ತೊಟ್ಟಿನ ಆಚೀಚೆಯ ಭಾಗ ರೆಕ್ಕೆಯಂತೆ ಅಗಲವಾಗಿ ಹರಡಿದೆ.ಹೂಗಳು ಎಲೆಗಳ ಕಂಕುಳಲ್ಲಿ ಒಂಟೊಂಟಿಯಾಗಿ ಇಲ್ಲವೆ ಗೊಂಚಲುಗಳಲ್ಲಿ ಹುಟ್ಟುತ್ತವೆ.ಹಣ್ಣು ಮೋಸಂಬಿ ಹಣ್ಣಿಗಿಂತ ಎರಡರಷ್ಟು ಗಾತ್ರದ್ದು.ಮಾಗಿದ ಹಣ್ಣಿನ ಬಣ್ಣ ಹಳದಿ. ತಿರುಳು ರಸಭರಿತವಾಗೂ ಮೃದುವಾಗೂ ಇದೆ. ಅದರ ಬಣ್ಣ ಕೆಲವು ಬಗೆಗಳಲ್ಲಿ ತಿಳಿಹಳದಿ;ಇನ್ನು ಕೆಲವು ಬಗೆಗೆಳಲ್ಲಿ ನಸುಗೆಂಪು ಅಥವಾ ಕೆಂಪು.ಹಣ್ಣಿಗೆ ಒಂದು ವಿಶೇಷ ರೀತಿಯ ಮಧುರವಾಸನೆಯೂ ಕೊಂಚ ಹುಳಿ ಮಿಶ್ರಿತ ಸಿಹಿರುಚಿಯೂ ಇದೆ.

ಗ್ರೇಪ್ ಹಣ್ಣಿನ ಮರದ ಬೇಸಾಯಕ್ಕೆ ಮರಳಿನ ಪ್ರಮಾಣ ಹೆಚ್ಚಾಗಿರುವ ನೆಲ ಉತ್ತಮ.ಬೆಳೆ ಹುಲುಸಾಗಿರಲು ಸಾಕಷ್ಟು ಪರಿಮಾಣದಲ್ಲಿ ನೈಟ್ರೊಜನ್,ರಂಜಕ ಮತ್ತು ಪೊಟ್ಯಾಷಿಯಮ್ ಗಳಲ್ಲದೆ ಲಘು ಪ್ರಮಾಣದಲ್ಲಿ ತಾಮ್ರ, ಮ್ಯಾಂಗನೀಸ್,ಸತು,ಕಬ್ಬಿಣ ಮತ್ತು ಬೋರಾನುಗಳನ್ನೂ ಹಾಕಬೇಕು.ಮರಗಳನ್ನು ಬೀಜಗಳಿಂದ ವೃದ್ಧಿಬಹುದಾದರೂ ಹೀಗೆ ಪಡೆದ ಗಿಡಗಳಲ್ಲಿ ಹಣ್ಣಿನ ಗುಣ ಮತ್ತು ಗಾತ್ರಗಳು ವ್ಯತ್ಯಾಸವನ್ನು ತೋರುವುದರಿಂದ ಉತ್ತಮ ದರ್ಜೆಯ ಮರವೊಂದನ್ನು ಆರಿಸಿಕೊಂಡು ಅದರಿಂದ ಕಣ್ಣುಕಸಿಯ ಮೂಲಕ ಸಸಿಗಳನ್ನು ಪಡೆದು ವೃದ್ಧಿಸುವುದೇ ಹೆಚ್ಚು ವಾಡಿಕೆಯಲ್ಲಿರುವ ಕ್ರಮ.ಮರ 4-6 ವರ್ಷ ವಯಸ್ಸಾದ ಆನಂತರ ಫಲ ಬಿಡಲು ಆರಂಭಿಸುತ್ತದೆ.ಗ್ರೇಪ್ ಹಣ್ಣಿನ ಇಳುವರಿಯ ಮೊತ್ತ ಅಧಿಕ.ಹುಲುಸಾಗಿ ಬೆಳೆದ ಒಂದು ಮರ ವರ್ಷಕ್ಕೆ 585-675 ಕೆಜಿಯಷ್ಟು ಹಣ್ಣನ್ನು ಕೊಡಬಲ್ಲದು.

ಗ್ರೇಪ್ ಹಣ್ಣಿನಲ್ಲಿ ಸುಮಾರು 25ಕ್ಕೊ ಹೆಚ್ಚು ಬಗೆಗಳಿವೆ.ಇವುಗಳಲ್ಲಿ ಬಹುಪಾಲು ಹಳದಿ ಬಣ್ಣದ ತೊಳೆಗಳುಳ್ಳವು. ಉದಾಹರಣೆಗೆ ಮಾರ್ಷ್,ಡಂಕನ್,ಟ್ರಯಂಫ್,ಹಾಲ್(ಸಿಲ್ವರ್ ಕ್ಲಸ್ಟರ್) ಇತ್ಯಾದಿ.ಇನ್ನು ಕೆಲವು ರೀತಿಯವು ಕೆಂಪು ಅಥವಾ ನಸುಗೆಂಪು ಬಣ್ಣದ ತೊಳೆಗಳುಳ್ಳವು.ಉದಾಹರಣೆಗೆ ರೂಬಿ,ವೆಬ್,ಫಾಸ್ಟರ್ ಮುಂತಾದವು.ಗ್ರೇಪ್ ಹಣ್ಣಿನ ಮರವನ್ನು ಸಿಟ್ರಸ್ ಜಾತಿಯ ಇತರ ಪ್ರಭೇದಗಳೊಂದಿಗೆ ಅಡ್ಡತಳಿಯೆಬ್ಬಿಸಿ ಕೆಲವು ಮಿಶ್ರಬಗೆಯ ಹಣ್ಣಿನ ಮರಗಳನ್ನು ಪಡೆಯಲಾಗಿದೆ.ಉದಾಹರಣೆಗೆ ಸ್ವಿಂಗಲ್ ಎಂಬಾತ 1897ರಲ್ಲಿ ಗ್ರೇಪ್ ಹಣ್ಣಿನ ಮರವನ್ನೂ ಕಿತ್ತಳೆಯನ್ನೂ ಅಡ್ಡಹಾಯಿಸಿ ಟ್ಯಾಂಜಲೊ ಎಂಬ ಮಿಶ್ರತಳಿಯೊಂದನ್ನು ಉತ್ಪಾದಿಸಿದ.

ಗ್ರೇಪ್ ಹಣ್ಣು ಹಲವಾರು ಪೌಷ್ಟಿಕಾಂಶಗಳ ಆಗರ ಎನಿಸಿದೆ.ಇದರಲ್ಲಿ ಅಧಿಕ ಮೊತ್ತದಲ್ಲಿ ಸಿ ವಿಟಮಿನ್ (ಕಿತ್ತಳೆ ಮತ್ತು ನಿಂಬೆ ಹಣ್ಣುಗಳನ್ನು ಬಿಟ್ಟರೆ ಸಿ ವಿಟಮಿನ್ ಪರಿಮಾಣ ಇದರಲ್ಲಿ ಅತಿ ಹೆಚ್ಚು) ಮತ್ತು ಸಾಕಷ್ಟು ಪರಿಮಾಣದಲ್ಲಿ ಬಿ ವಿಟಮಿನ್ ಹಾಗೂ ಶೇ.5-ಶೇ.12 ಸಕ್ಕರೆಯ ಅಂಶ ಇವೆ.ಗ್ರೇಪ್ ಹಣ್ಣಿನ ರಸ ಒಂದು ಉತ್ತಮ ಬಗೆಯ ಕ್ಷುಧಾಕಾರಕವೆಂದು ಹೆಸರಾಗಿದೆ.ಇದನ್ನು ಕಿತ್ತಳೆಹಣ್ಣಿನ ರಸದಂತೆ ಬೆಳಗಿನ ಉಪಾಹಾರದ ಜೊತೆಗೆ ಬಳಸುವುದುಂಟು.ರಸವನ್ನು ಕೊಂಚ ಪರಿಮಾಣದಲ್ಲಿ ವೈನ್,ಬ್ರಾಂಡಿ ಮುಂತಾದ ಪಾನೀಯಗಳಿಗೆ ರುಚಿಕೊಡಲು ಬಳಸುತ್ತಾರೆ.ಸಿಪ್ಪೆಯಿಂದ ಪೆಕ್ಟಿನ್ ಎಂಬ ವಸ್ತುವನ್ನು ಬೇರ್ಪಡಿಸಿ ಜೆಲ್ಲಿ ತಯಾರಿಕೆಯಲ್ಲಿ ಉಪಯೋಗಿಸುವುದಿದೆ.

ಗ್ರೇಯಮ್ ಥಾಮಸ್:1805-69. ಸ್ಕಾಟಿಷ್ ರಸಾಯನ ವಿಜ್ಣಾನಿ.ಭೌತ ರಸಾಯನ ವಿಜಾನದ ಸ್ಥಾಪಕರಲ್ಲಿ ಒಬ್ಬನೆಂದೂ ಕಲಿಲ ರಸಾಯನ ವಿಜಾನದ (ಕಲಾಯ್ಡ್ ಕೆಮಿಸ್ಟ್ರಿ) ಮೂಲಪುರುಷನೆಂದೂ ಹೆಸರುಗಳಿಸಿದ್ದಾನೆ. ಅನಿಲಗಳು ವ್ಯಾಪಿಸುವ ದರವನ್ನು