ಪುಟ:Mysore-University-Encyclopaedia-Vol-6-Part-2.pdf/೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಗಣಿಗಾರಿಕೆಯ ಪಾತ್ರ, ರಾಷ್ಟ್ರ ಆರ್ಥಿಕತೆಯಲ್ಲಿ

ಬೇಕಾಗುವ ಬಂಡವಾಳದ ಸಂಪಾದನೆಗೆ ಅಥವಾ ಅವಸ್ಯವಾದ ವಸ್ತುಗಳನ್ನು ಆಯಾತ ಮಾಡಿಕೊಳ್ಳುವುದಕ್ಕೆ ಇದು ಸಾಧಕರು. ೬ ಗಣಿ ಉದ್ಯಮದಿಂದ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಸರ್ಕಾರದ ಆದಯ ಹೆಚ್ಛಿ ಆರ್ಥಿಕ, ಸಾಮಾಜಿಕ ಅಭಿವೃದ್ದಿ ಯೋಜನೆಗಳನ್ನು ಜಾರಿಗೆ ತರಲು ಸರ್ಕಾರಕ್ಕೆ ಅನುಕೂಲವಗುತ್ತದೆ.

    ವಿಶ್ವದ ನಾನಾ ರಾಷ್ಟ್ರಗಳಲ್ಲಿ ಖನಿಜ ನಿಕ್ಷೇಪಗಳು ಹರಡಿರುವ ಬಗೆಯನ್ನು ಗಮನಿಸಿದಾಗ, ಅಭಿವೃದ್ದಿ ಹೊಂದಿದ ಅನೇಕ ರಾಷ್ಟ್ರಗಳು ತಮ್ಮ ಕೈಗಾರಿಕೆಗಳಿಗಾಗಿ ಹಿಂದುಳಿದ ರಾಷ್ಟ್ರಗಳ ಖನಿಜ ಸಂಪತ್ತನ್ನು ಅವಲಂಬಿಸಬೇಕಾಗಿ ಬಂದಿರುವುದು ವ್ಯಕ್ತವಾಗುತ್ತದೆ. ವಸಾಹತುಗಳ ನಿರ್ಮಾಣ, ರಾಷ್ಟ್ರಗಳ ನಡುವೆ ಸ್ವರ್ದೆ, ವಿರಸ, ಅಶಾಂತಿಗಳಿಗೆ ಇದೂ ಕಾರಣ. ಅನೇಕ ಹಿಂದುಳಿದ ರಾಷ್ಟ್ರಗಳಿಗೆ ಅವುಗಳ ಖನಿಜ ಸಂಪತ್ತೇ ವಿದೇಶಿ ವಿನಿಮಯ ಸಾಧನವಾಗಿದೆ.

ಕ್ರಷಿ, ಅರನಣ್ಯಗಾರಿಕೆ