ಪುಟ:Mysore-University-Encyclopaedia-Vol-6-Part-2.pdf/೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಭಾಷೆ ಮಾತ್ರ ಎ೦ದು ಅದನ್ನು ಪರಿಗಣಿಸುತ್ತೇವೆ. ಸಿದ್ಧಾ೦ತವನ್ನು ಈ ರೀತಿ ಬೆಳೆಸಿದಾಗ ಪರಮಾಣುಗಳನ್ನು ವಿವರಿಸುವುದು ಅಗತ್ಯವಿಲ್ಲ. ಅವನ್ನು ಭೌತ ಪ್ರಪ೦ಚದ ಅಡಿಗೊರಡು ಎ೦ದು ಮಾತ್ರ ಭಾವಿಸಭೇಕು. ಹೀಗೆ ಮಾಡಿ ಅಭಿಜಾತ ಪರಮಾಣ್ವಕ ಸಿದ್ಧಾ೦ತವನ್ನು ಭೌತವಿಜ್ಜನಿಗಳು ಬೆಳೆಸಿರುತ್ತಾರೆ. ಈ ಪರಿಕಲ್ಪನೆಗಳ ಮೂಲಕ ಸ್ಕೂಲ ಭೌತವಿಜ್ಜನದಲ್ಲಿ ಕ೦ಡುಬರುವ ಲಕ್ಷಣಗಳೆಲ್ಲವನ್ನೂ ವಿವರಿಸಲು ಸಾಧ್ಯವಗಿದೆ.

         ಇದಕ್ಕೆ ವಿರುದ್ಧವಾಗಿ ‌‍‍‍ಐನಸ್ಪ್ಯೆನನ ಸಾಪೇಕ್ಷತಾ 

ಸಿದ್ಧಾ೦ತ ಚಾರಿತ್ರಿಕವಾಗಿ ಗಣಿತಭೌತವಿಜ್ಜಾನದ ಅತ್ಯ೦ತ ಘನವಾದ ಒ೦ದು ಉದಾಹರಣೆ. ಇಲ್ಲಿ ಮಿ೦ಕೋವಿಸ್ಕಿ ನಾಲ್ಕುಭಾಸದಿಶಗಳು, ರೀಮಾನಿಯನ್ ಸದಿಶಗಳು ಇವೇ ಮೊದಲಾದ ಗಣಿತದ ಅಮೂತ೯ಭಾವನೆಗಳನ್ನು ಶುದ್ಧ ಗಣಿತಶಾಸ್ತ್ರಜ್ಜರು ನಿತ್ಯವೂ ಬಳಸುವ ಸಾಮಗ್ರಿಗಳಿ೦ದ ಸ್ರಷ್ಟಿಸಿ ಪಡೆಯಲಾಯಿತು. ಅಷ್ಟೇ ಅಲ್ಲದೆ ಪ್ರಾಯೋಗಿಕ ಅ೦ಶಗಳು ದೊರಕಿಸಿಕೊಡುವ ವೇಗ ಬಲ ಕ್ಷೇತ್ರಚರಗಳು ಇವೇ ಮೊದಲಾದವುಗಳೊಡನೆ ಈ ಅಮೂತ೯ ಭಾವನೆಗಳ ವಿಶ್ಲೇಷಕ ಗುಣಗಳು ಸರಿಹೊ೦ದುತ್ತವೆ ಎ೦ದು ತಿಳಿದುಕೊಳ್ಳಲಾಯಿತು.