ಪುಟ:Mysore-University-Encyclopaedia-Vol-6-Part-2.pdf/೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಗಣಿಗಾರಿಕೆ, ಸಮುದ್ರಗತ ೫೮--27.7.160.204 ೧೬:೦೩, ೩೦ ಜನವರಿ ೨೦೧೫ (UTC)--27.7.160.204 ೧೬:೦೩, ೩೦ ಜನವರಿ ೨೦೧೫ (UTC)--27.7.160.204 ೧೬:೦೩, ೩೦ ಜನವರಿ ೨೦೧೫ (UTC) ಸಮುದ್ರ ತಳದಲ್ಲಿ ಖನಿಜನಿಕ್ಷೇಪಗಳ ಅನ್ವೇಷಣೆ ಮಾಡಲು ಮುಖ್ಯ ಸಲಕರಣೆಗಳೆಂದರೆ ಆಳವನ್ನು ಅಳೆಯುವ ಯಂತ್ರಗಳು, ಸಮುದ್ರತಳದ ಹೊರ ರೇಖಾಕೃತಿ ಚಿತ್ರಣಯಂತ್ರಗಳು, ಕಾಂತ ಬಲಮಾಪಗಳು ಮತ್ತು ಆಳದಲ್ಲಿನ ನಿಕ್ಷೇಪಮಾದರಿಗಳನ್ನು ತೆಗೆಯುವ ಸಲಕರಣೆಗಳು. ಇವುಗಳ ಉಪಯೋಗ ಅದರಿನ ನಿಕ್ಷೇಪವನ್ನು ಅನುಸರಿಸಿರುತ್ತದೆ. ಉದಾಹರಣೆಗೆ, ಭಾರ ಖನಿಜದ ಗರಸು ನಿಕ್ಷೇಪಗಳನ್ನು ಗುರುತಿಸುವಾಗ ಹೊರ ರೇಖಾಚಿತ್ರಣ ಯಂತ್ರಗಳು (ಪ್ರೊಫ) ಅತಿಮುಖ್ಯ ಸಾಧನಗಳು. ಕಂಪನ ರೇಖಾಚಿತ್ರಣ ಯಂತ್ರಗಳು ಕಲ್ಲೆಣ್ಣೆಯ ಅನ್ವೇಷಣೆಯಲ್ಲಿ ಉಪಯುಕ್ತವಾಗಿದೆ. ಅದೇ ರೀತಿ ವಿದ್ಯುತ್ ಕಿಡಿ, ಒತ್ತಡಗಾಳಿ, ಅನಿಲಸಿಡಿಕೆ ಮತ್ತು ವಿದ್ಯುದ್ಯಾಂತ್ರಿಕ ಸ್ಫೋಟನೆ ಮುಂತಾದವನ್ನು ಈ ಕಾರ್ಯದಲ್ಲಿ ಬಳಸಲಾಗುತ್ತಿದೆ. ಇದರಿಂದ ಹೊರಟ ಶಕ್ತಿ ಸಮುದ್ರ ತಳವನ್ನು ಸೇರಿ ಅಲ್ಲಿಯ ವಸ್ತುಗಳಿಂದ ಪ್ರತಿಫಲನ ಹೊಂದಿ ಬಂದಾಗ ಅವುಗಳ ನೆಲೆಯನ್ನು ನಿರ್ದರಿಸಿ ಸಮುದ್ರತಳದಲ್ಲಿರುವ ಮಣ್ಣಿನ ಪದರ, ತಳಬಂಡೆಯ ಬಾಹ್ಯಾಕಾರ, ಸ್ತರಭಂಗಗಳು ಮುಂತಾದ ಲಕ್ಷಣಗಳನ್ನು ಬಹು ಸುಲಭವಾಗಿ ತಿಳಿಯಬಹುದು. ಹಾಗೆಯೇ ಸಮುದ್ರತಳದಲ್ಲಿರುವ ನಿಕ್ಷೇಪಗಳ ಬಗ್ಗೆಯೂ ಮಾಹಿತಿ ದೊರೆಯುತ್ತದೆ. ಈ ರೀತಿಯ ಸ್ಫೋತನೆಗಳ ಶಕ್ತಿ ಅಲೆ ಅಲೆಯಾಗಿ ಸಮುದ್ರತಳದಿಂದ ಹಲವು ಕಿಲೋಮೀಟರ್ವರೆಗೆ ಪ್ರಸರಿಸುತ್ತದೆ.

ಈ ಪ್ರಸರಣೆ ಸಿಡಿತದ ಕಂಪನ ಕಾಲ ಮತ್ತು ಅಲೆಗಳ ಪ್ರಸಾರ ವೇಗವನ್ನು ಆಧರಿಸಿರುತ್ತದೆ. ಮತ್ತೊಂದು ಸಿಡಿತಕ್ಕೆ ಮೊದಲೇ ಪ್ರತಿಫಲನದ ಅಲೆಗಳನ್ನು ಗ್ರಹಿಸಬೇಕು. ಇತ್ತೀಚೆಗೆ ಕಂಡುಹಿಡಿದ ಪ್ಲಕ್ಸ್ ಗೇಟ್, ಪ್ರೋಟಾನ್ ಪ್ರಿಸೆಷನ್ ಮತ್ತು ರುಬಿಡಿಯಂ ಕಾಂತ ಬಲಮಾಪಕ ಮುಂತಾದವು ಹೆಚ್ಚು ಪರಿಣಾಮಕಾರಿಯಾಗಿ ಉಪಯೋಗದಲ್ಲಿವೆ.

ಖನಿಜ ನಿಕ್ಷೇಪವನ್ನು ಕಂಡುಹಿದಿದ ಬಳಿಕ ಮುಂದಿನ ಕಾರ್ಯವೆಂದರೆ ಅದರ ನಮೂನೆ ತೆಗೆಯುವುದು. ಇದರಲ್ಲಿ ಎರಡು ವಿಧಾನಗಳಿವೆ : ೧. ಅನ್ವೇಷಣೆ ಅಥವಾ ಗುಣಾತ್ಮಕವಾದ ನಮೂನೆ ಪಡೆಯುವುದು. ಇದರಲ್ಲಿ ಸ್ನಾಪರ್, ಡ್ರಾಪ್ ಕೋರ್ಸ್, ಡ್ರಾಗ್ ಡ್ರೆಡ್ಜರ್ಸ್ ಮತ್ತು ಡೈವರ್ಸ್ (ಮುಳುಗಿ) ಮುಂತಾದ ಸುಲಭ ನಮೂನೆ ಪಡೆಯುವ ವಿಧಾನಗಳನ್ನು ಬಳಸುತ್ತಾರೆ. ೨. ಗಣನಾತ್ಮಕ ನಮೂನೆ: ಇದಕ್ಕೆ ಆಧುನಿಕ ಯಂತ್ರ ಸಲಕರಣೆ ಇದ್ದರೆ ಉತ್ತಮ. ಈಗಿರುವ ಸಲಕರಣೆಗಳಿಂದಲೀ ಕಾರ್ಯ ನಡೆಸಲೂಬಹುದು. ಸಮುದ್ರತಳದ ಪರಿಸರಕ್ಕೆ ಅನುಸಾರವಾಗಿ ಸಮುದ್ರದಲ್ಲಿ ಮುಳುಗಿ ಪಡೆಯುವ ಸಲಕರಣೆಗಳ ಕಡಿಯೇ ಹೆಚ್ಚು ಗಮನವಿದೆ. ಈ ದಿಶೆಯಲ್ಲಿ ಗೋರುವುದು ಮತ್ತು ಛಾಯಾಗ್ರಹಣೆ ಬಳಕೆಯಲ್ಲಿದೆ.

ಇಲ್ಲಿಯವರೆಗೆ ಸಮುದ್ರಗತ ಗಣಿಗಾರಿಕೆಯಲ್ಲಿ ಹೆಚ್ಚು ಆಸಕ್ತಿ ಉಂಟಾಗಿದ್ದರೂ ಹೊಸಹೊಸ ಚಟುವಟಿಕೆಗಳು ಮಾತ್ರ ಹೆಚ್ಚಾಗಿ ಅನ್ವೇಷಣೆ ಮತ್ತು ಭಾವನಾತ್ಮಕ ಅಧ್ಯಯನದಲ್ಲಿ ಮಾತ್ರ ಇವೆ. ಆದ್ದರಿಂದ ಉತ್ಪಾದನೆಯಲ್ಲಿ ಸ್ವಲ್ಪ ವ್ಯತ್ಯಾಸವೂ ಕಾಣುವುದಿಲ್ಲ. ಇದುವರೆಗೆ ಬಂದಿರುವ ಖನಿಜ ಉತ್ಪಾದನೆಯೆಲ್ಲ ತೀರ ಪ್ರದೇಶದಿಂದ ಸಮುದ್ರದ ನೀರು, ದಡ, ಮತ್ತು ಅಂಚಿನಲ್ಲಿರುವ ಗರಸು ನಿಕ್ಷೇಪ ಮತ್ತು ಅಂಚಿನಲ್ಲಿರುವ ಗರಸು ನಿಕ್ಷೇಪ ಮತ್ತು ಸ್ವಲ್ಪ ಗಟ್ತಿಯಾದ ನಿಕ್ಷೇಪಗಳಿಂದ ಮಾತ್ರ ಸಮುದ್ರದ ನೀರಿನಿಂದ ಉತ್ಪಾದನೆಯೆಂದರೆ, ನೀರನ್ನು ರಾಸಾಯನಿಕವಾಗಿ ಹೆಪ್ಪುಗಟ್ತಿಸುವುದು, ಶೋಧಿಸುವುದು, ಸೂರ್ಯ ರಶ್ಮಿಯಿಂದ ಆವಿಯಾಗಿಸುವುದು. ಇದರಿಂದ ಮೆಗ್ನೀಷಿಯಂ ಹಾಗೂ ಬ್ರೋಮಿನ್ ಉಪ್ಪುಗಳು ಮತ್ತು ಅಡುಗೆ ಉಪ್ಪುಗಳು ಉತ್ಪಾದನೆಯಾಗುತ್ತವೆ.ಆದರೆ ಇತ್ತೀಚಿನ ಬೃಹತ್ ಪ್ರಮಾಣದಕಾರ್ಯವೆಂದರೆ ಸಮುದ್ರದ ನೀರಿನಿಂದ ಸಿಹಿ ನೀರನ್ನು ಉತ್ಪಾದಿಸುವುದು. ಈ ದಿಶೆಯಲ್ಲಿ ಸಂಶೋದನೆಗಳನ್ನು ನಡೆಸುವಾಗ ಇತರ ಖನಿಜಗಳನ್ನು ಹೊರ ತೆಗೆಯುವುದನ್ನೂ ಸಾಧಿಸಲಾಗಿದೆ. ಉಪ್ಪಿನ ಉತ್ಪತ್ತಿ ವರ್ಷಕ್ಕೆ ಸರಾಸರಿ ೪೫೦೦೦೦೦೦ ರೂಪಾಯಿಗಳಷ್ಟು ಎಂದು ತಿಳಿದುಬಂದಿದೆ. ಇದೇ ರೀತಿ ಮೆಗ್ನೇಷಿಯಂ, ಬ್ರೋಮಿನ್, ಸಿಹಿ ನೀರು ಉತ್ಪಾದನೆಯಾಗಿವೆ.

ಖನಿಜಗಳಲ್ಲೆಲ್ಲ ಸೋಡಿಯಂ, ಮೆಗ್ನೇಷಿಯಂ ಮತ್ತು ಬ್ರೋಮಿನ್ಗಳದೇ ಅಧಿಕ ಉತ್ಪತ್ತಿ. ತೀರದಿಂದ ದೂರದಲ್ಲಿರುವ ಈ ನಿಕ್ಷೇಪಗಳ ಗಣಿಗಾರಿಕೆ, ಸಮುದ್ರಗತ ಗಣಿಗಾರಿಕೆಯಲ್ಲಿ ಅತಿ ಪ್ರಚಲಿತವಾಗಲು ಕಾರಣವೆಂದರೆ ಇಲ್ಲಿ ಸಿಗುವ ಮ್ಯಾಂಗನೀಸ್ ಉಂಡೆಗಳು ಮತ್ತು ನೈಋತ್ಯ ಆಫ್ರಿಕದ ಸಮುದ್ರದೊಳಗಿನಿಂದ ಹೊರತೆಗೆಯಲಾದ ವಜ್ರಗಳು. ಇದರಲ್ಲಿ ಉಪಯೋಗಿಸುವ ಸಾಧನಗಳೆಂದರೆ ಗೋರುವುದು, ಕಾಮ್ ಶೆಲ್ಸ್, ಗೋರುವ ಬಾಲ್ದಿ, ನೀರಿನ ಒತ್ತಡದ ಗೋರುಯಂತ್ರ ಅಥವಾ ವಾಯುವಿನಿಂದ ಎತ್ತುವ ಯಂತ್ರಗಳು. ಇವುಗಳಿಂದ ೬೧-೯೧.೫ಮೀ ಆಳದ ವರೆಗೆ ಅಗೆಯಲು ಸಾಧ್ಯವಾಗಿದೆ. ೧೯೬೮ರಲ್ಲಿ ೭೦ಕ್ಕೂ ಹೆಚ್ಚು ಗೋರು ಕಾರ್ಯಗಳಲ್ಲಿ ತೀರದಿಂದಾಚೆಗೆ ಗಟ್ತಿಯಾದ ಮರಳು ಮತ್ತು ನುರುಜು ಹೊರತೆಗೆಯಬೇಕಾಯ್ತು. ಈ ಉತ್ಪಾದನೆಯ ಒಟ್ತು ಖರ್ಚನ್ನು ಭೂಮಿಯ ಮೇಲಿನ ಗಣಿಗಾರಿಕೆಗೆ ಹೋಲಿಸಿದರೆ ಸ್ವಲ್ಪ ಹೆಚ್ಚಂದೇ ಹೇಳಬಹುದು. ಆದರೂ ಆದಷ್ಟು ಶೀಘ್ರವಾಗಿ ಈ ನಿಕ್ಶೇಪಗಳನ್ನು ಹೊರತೆಗೆಯಬೇಕಾಗುತ್ತದೆ. ಕಾರಣ ಭೂಮಿಯ ಮೇಲಿನ ಖನಿಜ ಸಂಪತ್ತು ಎಲ್ಲ ದೇಶಗಳಲ್ಲಿಯೂ ಅನಿರ್ಬಂಧಿತವಾಗಿ ಸದಾಕಾಲ ಸಿಗಲು ಸಾಧ್ಯವೇ ಇಲ್ಲ. ಇದಕ್ಕಗಿಯೇ ಹಲವಾರು ರಾಷ್ಟ್ರಗಳು ತೀರದ್ಂದಾಚೆಗೆ ಸಮುದ್ರತಳದಲ್ಲಿರುವ ನಿಕ್ಷೇಪಗಳ ಅನ್ವೇಷಣೆಯಲ್ಲಿ ಹೆಚ್ಚಿನ ಆಸಕ್ತಿ ವಹಿಸುತ್ತಿವೆ.ಅದಕ್ಕೆ ಅನುಸಾರವಾಗಿ ಹಲವಾರು ಕಾಯಿದೆ ಕಾನೂನುಗಳನ್ನು ಕೂಡ ರೂಪಿಸುತ್ತಿವೆ. ಈಗಲೂ ನಡೆಯುತ್ತಿರುವ ಮುಖ್ಯವಾದ ಉತ್ಪಾದನೆ ವಜ್ರಗಳು. ಪ್ರಪಂಚದ ಶೇ.೭೦ಕ್ಕೂ ಹೆಚ್ಚು ಭಾಗದ ಭಾರ ಖನಿಜ ಉತ್ಪಾದನೆ ತೀರ ಪ್ರದೇಶದ ನಿಕ್ಶೇಪಗಳಿಂದಾಗಿದೆ. ಇದು ಆಸ್ಟ್ರೇಲಿಯ, ಶ್ರೀಲಂಕ ಮತ್ತು ಭಾರತದ ತೀರಪ್ರದೇಶಗಳಿಂದ.ಇದರಂತೆಯೇ ಇಂಡೋನೇಷ್ಯ, ಥೈಲಾಂಡ್, ಜಪಾನ್, ಅಮೆರಿಕ, ಸಂಯುಕ್ತ ಸಂಸ್ಥಾನಗಳು, ಐಸ್ಲ್ಯಾಂಡ್, ಬ್ರಿಟನ್, ಫಿನ್ಲೆಂಡ್, ನ್ಯೂ ಪೊಂಡ್ಲ್ಯಾಂಡ್, ನೊವಸ್ಕೋಷಿಯ, ಟೈವಾನ್ ಮತ್ತ್ತುಟರ್ಕಿದೇಶಗಳೂ ಹಲವಾರು ರೀತಿಯಲ್ಲಿ ಸಮುದ್ರಗತ ಗಣಿಗಾರಿಕೆಯಲ್ಲಿ ಆಸಕ್ತಿ ವಹಿಸುತ್ತದೆ. ಗಟ್ಟಿಯಾದ ಖನಿಜ ನಿಕ್ಷೇಮಗಳಲ್ಲಿ ಬಹು ಮುಖ್ಯವಾದದ್ದು ಕಲ್ಲಿದ್ದಲು. ಜಪಾನಿನ ಕಲ್ಲಿದ್ದಲಿನ ಒಟ್ತು ಉತ್ಪಾದನೆಯಲ್ಲಿ ಶೇ.೩೦ ಭಾಗ ಸಮುದ್ರತಳದಿಂದ ಬರುತ್ತಿದೆ. ಬ್ರಿಟನ್ನಿನಲ್ಲಿ ಇದು ಸುಮಾರು ಶೇ.೧೦. ಈ ರೀತಿಯ ಉತ್ಪಾದನೆಯಲ್ಲಿ ಹೆಚ್ಚಿನ ಖರ್ಚು ತಗಲುವುದು ಕೇವಲ ಅನ್ವೇಷಣೆಗಾಗಿ ಮಾತ್ರ ಉಳಿದ ಕಾರ್ಯ ಹಾಗು ವೆಚ್ಚ ಭೂಮಿಯ ಮೇಲೆ ಆಗುವಂತೆಯೇ ಇವೆ. ಜಪಾನ್, ನೋವಸ್ಕೋಷಿಯ, ಟೈವಾನ್, ಬ್ರಿಟನ್, ಟರ್ಕಿ ರಾಷ್ತ್ರಗಳು ೧೯೬೫ ರಲ್ಲಿ ೩೩೫೦೦೦೦೦ ಟನ್ನು ಕಲ್ಲಿದ್ದಲನ್ನು