ಪುಟ:Mysore-University-Encyclopaedia-Vol-6-Part-3.pdf/೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಗಮೆಲ್ಲಿ,ಕರೇರಿ:೧೬೫೧-೧೭೨೫ ಇಟಲಿಯ ಕಾನೂನು ಪಂಡಿತ,ಔರಂಗ್ಷೇಬನ ಕಾಲದಲ್ಲಿ ಭಾರತಕ್ಕೆ ಭೇಟಿ ಕೊಟ್ಟ ವಿದೇಶಿ ಪ್ರವಾಸಿಗಳಲ್ಲೊಬ್ಬ.ಟ್ಯೂರಿನೋವ್ ನಗರದಲ್ಲಿ ೧೬೫೧ರಲ್ಲಿ ಈತ ಜನಿಸಿದ,ಸಂಸಾರಾದಲ್ಲಿ ತೊಂದರೆಗಳಿಗೆ ಒಳಗಾಗಿ ಮನೆ ಬಿಟ್ಟು ಪ್ರವಾಸ ಕೈಗೊಂಡ ತುಕಿ೯ ಮತ್ತು ಪಷಿ೯ಯಗಳ ಮೂಲಕ ೧೬೯೩ರಲ್ಲಿ ಭಾರತಕ್ಕೆ ಬಂದ ಈತ ಸುಮಾರು ಆರು ತಿಂಗಳು ಇಲ್ಲಿ ಸಂಚರಿಸಿದ.ದಾಮನ್,ಡಿಯೂ,ಸೂರತ್,ಬಸ್ಸೇನ್,ಕನ್ಹೇರಿ,ಸಾಲ್ಸೆಟ್ ಮತ್ತು ಗೋವಗಳನ್ನು ಸಂದಶಿ೯ಸಿ,ಬಿಜಾಪುರದ ಬಳಿಯ ಗಲ್ಗಲ ಎಂಬ ಸ್ಥಳಕ್ಕೆ ಪ್ರಯಾಣ ಹೊರಟು ಅಲ್ಲಿ ತಂಗಿದ್ದ ಔರಂಗಷೇಬನ ಶಿಬಿರ ತಲುಪಿದ.ಮಾಚ್೯ ೨೧ರಂದು ಚಕ್ರವತಿ೯ ಔರಂಗಷೇಬನನ್ನು ಭೇಟಿ ಮಾಡಿದ.ಈತ ಭಾರತಕ್ಕೆ ಬಂದ ಉದ್ದೇಶವೇನೆಂದು ಇವನಿಗೆ ಮೊಗಲರ ಸಕಾ೯ರದಲ್ಲಿ ಸೇವೆ ಸಲ್ಲಿಸುವ ಆಸಕ್ತಿಯಿದೆಯೇ ಎಂದೂ ಚಕ್ರವತಿ೯ ಇವನನ್ನು ಕೇಳಿದ.ತಾನು ಏಷೀಯಾದ ಪ್ರಬಲ ಚಕ್ರವತಿ೯ಯನ್ನೂ ಆತನ ವೈಭವವನ್ನೂ ನೋಡಲು ಮಾತ್ರ ಬಂದಿದ್ದುದಾಗಿ ಗಮೆಲ್ಲಿ-ಕರೇರಿ ಔರಂಗಷೇಬನಿಗೆ ಆಸ್ಮಾನದ ವೈಭವವನ್ನು ವಣಿ೯ಸಿದ್ದಾನೆ.ಎಪ್ಪತ್ತೆಂಟು ವಷ೯ಗಳ ವೃದ್ದನಾದರೂ ಔರಂಗಷೇಬ ಕನ್ನಡಕದ ಸಹಾಯವಿಲ್ಲದೆ ಎಲ್ಲ ಪತ್ರಗಳನ್ನೂ ನೋಡಿ ಅವಕ್ಕೆ ಸಹಿ ಹಾಕುತ್ತಿದ್ದನೆಂದು ಕರೇರಿ ಬರೆಯುತ್ತಾನೆ ಉತ್ಸಾಹದಿಂದ ಕೆಲಸ ನಿವ೯ಹಿಸುತ್ತಿದ್ದರು ಔರೊಗಷೇಬನಲ್ಲಿ ಈತ ಕಂಡ ಒಂದು ದೊಡ್ಡ ಗುಣ.ಬಿಜಾಪುರ ರಾಜ್ಯ ಕಳೆದುಕೊಂಡಿದ್ದ ಸಿಕಂದರ್ ಆಲಿಷಾನನ್ನೂ ಗೋಲ್ಕೊಂಡದ ಮಾಜಿ ಸುಲ್ತಾನ ತಾನಕಷಾನನ್ನೂ ಗಮೆಲ್ಲಿ-ಕರೇರಿ ನೋಡಿದ.ಬಹಳ ಕಷ್ಟನಷ್ಟಗಳನ್ನು ಅನುಭವಿಸಿ ಅಲ್ಲಿಂದ ಹೊರಟು,ಏಪ್ರಿಲ್ ೫ರಂದು ಗೋವ ತಲುಪಿದ.ಅಲ್ಲಿಂದ ಮೆಕಾವಗೆ ಹೋದ.ಅನಂತರ ಚೀನದ ಒಳಭಾಗಕ್ಕೆ ಹೋಗಿ,ಚೀನದ ಚಕ್ರವತಿ೯ಯನ್ನು ಪ್ರತ್ಯಕ್ಷವಾಗಿ ಭೇಟಿ ಮಾಡಿದ.ಏಳು ತಿಂಗಳುಗಳ ಕಾಲ ಅಲ್ಲಿ ಪ್ರವಾಸಮಾಡಿ,ಫಿಲ್ಲಿಪೀನ್ಸಿನ ಮನಿಲಕ್ಕೆ ಹೋದ.ಅನಂತರ ಪೆಸಿಫಿಕ್ ಸಾಗರದ ಮೇಲೆ ಪ್ರಯಾಣ ಮಾಡಿ ಮೆಕ್ಸಿಕೋ ದೇಶದ ಅಕಾಪೂಲ್ಕೊಗೆ ಹೋಗಿ,೧೬೯೯ರ ಡಿಸೆಂಬರಿನಲ್ಲಿ ತನ್ನ ದೇಶಕ್ಕೆ ಹಿಂದಿರುಗಿದ.ಈತ ೧೭೨೫ರಲ್ಲಿ ನೇಪಲ್ಸನಲ್ಲಿ ನಿಧನವಾದ.ಗಮೆಲ್ಲಿ-ಕರೇರಿ ಬರೆದ ಪ್ರವಾಸಕಥನದಲ್ಲಿ ಅನೇಕ ವಾಸ್ತವ ಸಂಗತಿಗಳೊಂದಿಗೆ ಅವಾಸ್ತವ ಸಂಗತಿಗಳೂ ಉತ್ಪ್ರೇಕ್ಷೆಗಳೂ ಸೇರಿಕೊಡಿವೆ.ಔರಂಗಷೇಬ್ ಬೀಡುಬಿಟ್ಟಿದ್ದ ಸ್ಥಳದಲ್ಲಿ ೬೦,೦೦೦ ಸಾವಿರ ಅಶ್ವಗಳು,೧೦ ಲಕ್ಷ ಸಿಪಾಯಿಗಳು,೫೦,೦೦೦ ಒಂಟೆಗಳು ಮತ್ತು ೩,೦೦೦ ಆನೆಗಳನ್ನು ಒಳಗೊಂಡ ಸೇನೆಯಿತ್ತೆಂದು ಗಮೆಲ್ಲಿ-ಕರೇರಿ ಹೇಳಿರುವುದನ್ನು ನಂಬಲು ಕಷ್ಟವಾಗುತ್ತದೆ.ಅವನ ಶಿಬಿರದ ಸುತ್ತಳತೆ ೪೫ ಕಿಮೀ ಎಂದೂ ಅಲ್ಲಿ ೨೫೦ ಪ್ರತ್ಯೇಕ ಮಾರುಕಟ್ಟೆಗಳಿದ್ದುವೆಂದೂ ಅತ್ಯಮೂಲ್ಯ ವಸ್ತುಗಳು ಮೊದಲು ಗೊಂಡು ಎಲ್ಲ ತರದ ಸರಕುಗಳೂ ಅಲ್ಲಿ ದೊರಕುತ್ತಿದ್ದವೆಂದೂ ಈತ ಬರೆದಿದ್ದಾನೆ.ಒಟ್ಟಿನಲ್ಲಿ ಇವನ ಗ್ರಂಥ ಸ್ವಾರಸ್ಯವಾಗಿಯೂ ಉಪಯುಕ್ತವಾಗಿಯೂ ಇದೆ. ಗಯಟೆ:೧೭೪೯-೧೮೩೨,ಜಮ೯ನಿಯ ಕವಿ,ನಾಟಕಕಾರ,ವಿಮ೯ಶಕ,ಕಾದಂಬರಿಗಾರ,ಚಿಂತಕ,ಆಡಳಿತಗಾರ,ವಿವಿಧ ಪ್ರಕಾರಗಳಲ್ಲಿ ವಿಪುಲ ಸಾಹಿತ್ಯರಾಶಿಯನ್ನೇ ಸೃಷ್ಟಿಸಿದ ಮಹಾಸಾಹಿತಿ.ಯುರೋಪಿನ ರೆನೆಸಾನ್ಸ್ ಯುಗದ ಪರಂಪರೆಯ ಕಟ್ಟಕಡೆಯ ಪ್ರತಿನಿಧಿ.ಈತ ಸೃಷ್ಟಿಸಿದ ವಿಶ್ವಸಾಹಿತ್ಯ ಎನ್ನುವ ಮಾತನ್ನು ಈತನಿಗೆ ಅನ್ವಯಿಸಿ ಹೇಳುವುದಾದರೆ ಇವನೊಬ್ಬ ಶ್ರೇಷ್ಟ ವಿಶ್ವಸಾಹಿತಿ.ನೂರಾರು ರಸಮಯ ಘಟನೆಗಳಿಂದ ವೈವಿದ್ಯಮಯ ಅನುಭವಗಳಿಂದ ತುಂಬಿ ಹರಿಯುವ ಇವನ ಬದುಕೇ ಒಂದು ರೋಮಾಂಚಕ ಇತಿಹಾಸದಂತಿದೆ. ಗಯಟೆ ೧೭೪೯ರ ಆಗಷ್ಟ್ ೨೮ರಂದು ಫ್ರಾಂಕಫಟ್೯ ಆನ್-ದಿ-ಮೆಯನನಲ್ಲಿ ಜನಿಸಿದ.ಶ್ರೀಮಂತ ಕುಟುಂಬಕ್ಕೆ ಸೇರಿದ್ದ ಇವನ ತಂದೆ ಜೋವಾನ್ ಕ್ಯಾಸ್ಟರ್ ಗಯಟೆ ಸುಸಂಕೃತ ಗೃಹಸ್ಯ.ತಾಯಿ ಕ್ಯಾಥರೀನ್ ಎಲಿಜ್ಜಬೆತ್ ಟೆಕ್ಸಟರ್ ಉತ್ತಮ ವಂಶಸ್ಥಳು;ಫ್ರಾಂಕ್ ಫಟಿ೯ನ ಪೌರಾಧ್ಯಕ್ಷನ ಮಗಳು.ಸುಖಸಂತೋಶಗಳಿಂದ ತುಂಬಿದ ಶ್ರೀಮಂತ ವಾತಾವರಣದಲ್ಲಿ ಗಯಟೆಗೆ ಒಳ್ಳೆಯ ಶಿಕ್ಷಣ ದೊರೆಯಿತು.೧೭೫೯ ರಿಂದ ಮೂರು ವಷ೯ಗಳಕಾಲ ಫ್ರೆಂಚ್ ಸೈನ್ಯ ಫ್ರಾಂಕಫಟ೯ನ್ನು ಮುತ್ತಿ ಆಕ್ರಮಿಸಿಕೊಂಡಿತ್ತು.ಕೋಲಾಹಲಕರವಾದ ಆ ಕಾಲದ ಹಲವು ಘಟನೆಗಳಿಂದಾಗಿ ಗಯಟೆಯ ದೃಷ್ಟಿ ವಿಶಾಲಗೊಂಡು ಮನಸ್ಸು ರಂಗಭೂಮಿಯತ್ತ ತಿರುಗುವಂತಾಯಿತು.ನ್ಯಾಯಶಾಸ್ತ್ರವನ್ನು ಓದಲೆಂದು ೧೭೬೫ರಲ್ಲಿ ಲೀಪಜಿಗ್ಗಿಗೆ ಹೋಗಿ ಮೂರು ವಷ೯ದ ಅನಂತರ ಊರಿಗೆ ವಾಪಸಾದ.ಆಗಿನ ಅವನ ಕೆಲವು ಲೇಖನಗಳಲ್ಲಿ ರೊಕೋಕೋ ಯುಗದ ಆಡಂಬರಯುತ ಶೈಲಿ ಮತ್ತು ಅತಿರಂಜಕ ಕಲ್ಪನೆಗಳನ್ನು ಕಾಣಬಹುದು.ದೀಘ೯ಕಾಲದ ಕಾಯಿಲೆಯಿಂದ ಚೇತರಿಸಿಕೊಂಡ ಮೇಲೆ ಶಿಕ್ಷಣ ಮುಂದುವರಿಸಲೆಂದು ಸ್ಟ್ರಾಸಬಗಿ೯ಗೆ ಹೋದ(೧೭೭೦).ಅಲ್ಲಿ ವಿಧ್ಯಾಭ್ಯಾಸ ಮುಗಿಯಿತು.ಇವನಲ್ಲಿ ಅಡಗಿದ್ದ ಸಾಹಿತ್ಯಶಕ್ತಿಗೆ ಅಲ್ಲಿ ಹೆಚ್ಚಿನ ಸ್ಪೂತಿ೯ ಸಿಕ್ಕಿತು.ಗಯಟೆ ಅಲ್ಲಿ ಹಡ೯ರನನ್ನು ಭೇಟಿಯಾದುದು ನಿಜವಾಗಿ ಧಮ೯ಕಮ೯ ಸಂಯೋಗವೇ ಸರಿ.ಹಡ೯ರನ ಪ್ರಭಾವದಿಂದಾಗಿ ಗಯಟೆಗೆ ಷೇಕ್ಸಪಿಯರನ ಕೃತಿಗಳ ಪರಿಚಯವಾಯಿತು.ಗಾತಿಕ್ ವಾಸ್ತುಶಿಲ್ಪ,ಹೋಮರನ ಮಹಾಕಾವ್ಯ,ಓಸಿಯನ್ ಮುಂತಾದವನ್ನು ಓದಿದ.೧೭೭೧-೭೫ರವರೆಗಿನ ಅವಧಿಯಲ್ಲಿ ಫ್ರಾಂಕಫಟಿ೯ನಲ್ಲಿ ವಕೀಲನಾಗಿ ಕೆಲಸ ಮಾಡಿದ.ಆಗ ಬರೆದ ಗಾಟ್ಸಫನ್ ಬಲಿ೯ಷಿಂಗನ್ ಎಂಬ ನಾಟಕ ವಿಶೇಷ ಖ್ಯಾತಿ ತಂದಿತು.ಸಾರೋಸ್ ಆಫ್ ವದ೯ರ್ (ಡೈ ಲೇಡನಡೇಯ್ ಯಂಗನ್ ವ್ದ೯ರ್)ಎಂಬ ಕಾದಂಬರಿ (೧೭೭೪) ಕವಿಯ ಹೆಸರು ಯುರೋಪಿನಲ್ಲೆಲ್ಲ ಹರಡುವಂತೆ ಮಾಡಿತು.೧೭೭೫ರಲ್ಲಿ ಗಯಟೆ ವೈಮರಗೆ ಹೋದ.ಪ್ರಶಾಂತವಾದ ಆ ಪುಟ್ಟ ಸಂಸ್ಥಾನದ ವಾತಾವರಣದಿಂದಾಗಿ ಆತನ ಬಹುಮುಖ ಪ್ರತಿಭೆ ವಿಕಾಸವಾಯಿತು.ಸುಮಾರು ಹನ್ನೊಂದು ವಷ೯ ಕಾಲ ಆ ರಾಜ್ಯದ ಮುಖ್ಯಾಧಿಕಾರಿಯಾಗಿ ಕೆಲಸ ಮಾಡಿ,ವೈವಿಧ್ಯಮಯವಾದ ಅಪೂವ೯ ಆತ ಮೈಗೂಡಿಸಿಕೊಂಡ.