ಪುಟ:Mysore-University-Encyclopaedia-Vol-6-Part-3.pdf/೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಚಾಲೆ೯ಟ್ ಫನ್ ಸ್ಟೈನ್ ಎಂಬಾಕೆಯ ಪ್ರಭಾವದಿಂದ ಗಯಟೆ ಸುಸಂಕೃತ ವ್ಯಕ್ತಿಯಾದ ಕಲೆ,ವಿಜ್ಞಾನ ಮೊದಲಾದ ಹಲವು ವಿಷಯಗಳಲ್ಲಿ ಇವನ ಅಭಿರುಚಿ ಬೆಳೆಯಿತು.೧೭೮೬-೮೮ರವರೆಗೆ ಇಟಲಿಯಲ್ಲಿ ಪ್ರವಾಸ ಮಾಡಿ ಕ್ಲಾಸಿಕಲ್ ಇಟಲಿಯ ಕಲಾವೈಭವವನ್ನು ಕಣ್ಣಾರೆ ಕಂಡುಬಂದ.ಹಡ೯ರನ ಪ್ರಭಾವ,ಷೇಕ್ಸಪಿಯರನ ಕಾವ್ಯ ಮತ್ತು ಕ್ಲಾಸಿಕಲ್ ಇಟಾಲಿಯ ಕಲಾಸಂಪತ್ತು-ಇವು ಇವನ ವ್ಯಕ್ತಿತ್ವದ ಎರಡು ಬೇರೆ ಬೇರೆ ಮುಖಗಳ ವಿಕಸನಕ್ಕೆ ನೆರವಾದವು.೧೭೯೦ರಲ್ಲಿ (ಅಲ್ಲಿಯವರೆಗೆ ಹದಿನೇಳು ವಷ೯ಗಳು ವಿವಾಹವಿಲ್ಲದೆ ಯಾರೊಂದಿಗೆ ಸಹಜೀವನ ನಡೆಸುತ್ತಿದ್ದನೋ ಆ ಹೆಂಗಸು)ಕ್ರಿಸ್ಟಿಯಾನ್ ವಲ್ಟಿಯಸ್ ಎಂಬುವಳನ್ನು ಮದುವೆಯಾದ.ವೈಮರಗೆ ಹಿಂದಿರುಗಿದ ಮೇಲೆ ರಾಜ್ಯ ಅಧಿಕಾರಿ ಪದವಿಯನ್ನು ಬಿಟ್ಟುಕೊಟ್ಟ.೧೭೯೧-೧೮೧೭ವರೆಗೆ ವೈಮರ್ ರಂಗಭೂಮಿಯ ಮೇಲ್ವಿಚಾರಣೆ ವಹಿಸಿಕೊಂಡು ಕೆಲಸ ಮಾಡಿದ.ಆ ಕಾಲದಲ್ಲಿ ಷಿಲ್ಲರನೊಡನೆ ಅತಿ ನಿಕಟವಾದ ಸ್ನೇಹ ಬೆಳೆಯಿತು.೧೮೦೦-೧೮೩೨ರವರೆಗೆ ಗಯಟೆ ಅಪೂವ೯ ಕೀತಿ೯,ಗೌರವಗಳಿಗೆ ಭಾಜನನಾಗಿ ಯುರೋಪಿನ ಅತ್ಯಂತ ಗಣ್ಯಸಾಹಿತಿ ಎನಿಸಿಕೊಂ ಡ.ಈ ಸುಮಾರಿನಲ್ಲೇ ತನ್ನ ಮೇರುಕೃತಿ ಫೌಸ್ಟ್ ನಾಟಕದ ಎರಡನೆಯ ಭಾಗವನ್ನು ತಿದ್ದಿ ಬರೆದು,ತಾನು ಸಾಯುವ ಒಂದು ವಷ೯ಕ್ಕೆ ಮೊದಲು ಅದನ್ನು ಮುಗಿಸಿದ,೧೮೩೨ರಲ್ಲಿ ಈತ ತೀರಿಕೊಂಡಾಗ ಯುರೋಪಿನ ಒಬ್ಬ ಯುಗಪುರುಷ ಕಣ್ಮರೆಯಾದಂತಾಯಿತು. ಕೃತಿಗಳು:ಗಯಟೆಯ ಸಾಹಿತ್ಯಕ ಕೃತಿಗಳನ್ನು ಮೂರು ಮುಖ್ಯ ಭಾಗಗಳಾಗಿ ವಿಭಜಿಸಬಹದು.ಮೊದಮೊದಲ ಕೃತಿಗಳು ರೊಕೊಕೋ ಯುಗದವು-ಅವು ಅಷ್ಟು ಪಕ್ವವಾಗಿಲ್ಲ.ಅನಂತರದವು ಜಮ೯ನಿಯ ರೊಮ್ಯಾಂಟಿಕ್ ಬಿರುಗಾಳಿಯ ಪ್ರಭಾವವನ್ನು ತೋರುವ ಕೃತಿಗಳು-ಸ್ಟುಮ್೯ ಉಂಡ್ ಡ್ರಂಗ್ ಯುಗದವು.ಕೊನೆ ಕೊನೆಯವು ಕ್ಲ್ಯಾಸಿಕ್ ಮತ್ತು ರೊಮ್ಯಾಂಟಿಕ್ ಅಂಶಗಳ ಸಮನ್ವಯವನ್ನು ತೋರುವಂಥವು.ಇವುಗಳಲ್ಲಿ ತಂತ್ರ ಮತ್ತು ಮನೋವೈಜ್ಞಾನಿಕ ಸೂಕ್ಷ್ಮತೆಗಳಿಗೆ ಹೆಚ್ಚು ಪ್ರಾಧಾನ್ಯ.ಇವು ಅತ್ಯಂತ ಆಧುನಿಕ ಅನಿಸುವಂತಿದ್ದು ಹೆನ್ರಿ ಜೇಮ್ಸ್ ಮುಂತಾದವರ ಆಧುನಿಕ ಕೃತಿಗಳಿಗೆ ಪೂವ೯ಸೂಚಿಗಳಂತಿವೆ. ಗಾಟ್ಸ್ ಫನ್ ಬಲಿ೯ಷಿಂಗನ್(೧೭೭೩):ಇದೊಂದು ಐತಿಹಾಸಿಕ ನಾಟಕ,ಇದನ್ನು ಗಯಟೆ ಎರಡು ವಷ೯ ಕಾಲ ತಿದ್ದಿ ಹೊಳಪುಗೊಳಿಸಿದ.ಇದರಲ್ಲಿ ರೆಫಮೇ೯ಷನ್ ಕಾಲದ ಸ್ವಾತಂತ್ರ್ಯ ವೀರಯೋಧನೊಬ್ಬ ಕಥೆಯಿದೆ,ಕಥಾನಾಯಕ ಗಾಟ್ಸ್ ಮತ್ತು ಚಂಚಲಚಿತ್ತ ವೆಸ್ಲಿಂಗನ್ ಇಬ್ಬರೂ ವಿಭಿನ್ನ ಸ್ವಭಾವದವರಾದರೂ ಬಾಲ್ಯಸ್ನೇಹಿತರು.ವೆಸ್ಲಿಂಗನ್ ಗಾಟ್ಸ್ ಸೋದರಿ ಮೇರಿಯಲ್ಲಿ ಅನುರಕ್ತನಾಗಿರುತ್ತಾನೆ.ಗಾಟ್ಸ್ ಸ್ವಾತಂತ್ರ್ಯಪ್ರಿಯ ಶ್ರೀಮಂತ.ಆದರೆ ವೆಸ್ಲಿಂಗನ್ ಬ್ಯಾಂಬಗ್೯ ಬಿಷಪ್ಪನ ಅಡಿಯಾಳು.ನಾಟಕದ ಪ್ರಾರಂಭದಲ್ಲಿ ಗಾಟ್ಸ್ ತನ್ನ ಸ್ನೇಹಿತನನ್ನು ತನ್ನ ಹಳೆಯ ಶತ್ರುವಾದ ಬ್ಯಾಂಬಗಿ೯ನ ಬಿಷಪ್ಪಿನ ಸಹವಾಸದಿಂದ ಬೇಪ೯ಡಿಸಿ ಕೈಸೆರೆ ಹಿಡಿದು ತನ್ನ ಅರಮನೆಗೆ ಕರೆತರುತ್ತಾನೆ.ಅಲ್ಲಿ ಮೇರಿಯನ್ನು ಕಂಡಾಗ ವೆಸ್ಲಿಂಗನ್ನನ ಹಳೆಯ ಪ್ರೇಮ ಮರುಕಳಿಸುತ್ತದೆ;ಅವನು ಗಾಟ್ಸ್ ನ ಪಕ್ಷ ಹಿಡಿಯುತ್ತಾನೆ.ತನ್ನ ಖಾಸಗಿ ಸಮಸ್ಯೆಗಳನ್ನು ಇತ್ಯಥ೯ಗೊಳಿಸಲೆಂದು ಬ್ಯಾಂಬಗಿ೯ಗೆ ಹೋದಾಗ ವೆಸ್ಲಿಂಗನ್ ತನ್ನ ಸ್ನೇಹಿತನಿಗೂ ಪ್ರೇಯಸಿಗೂ ಇತ್ತ ವಚನವನ್ನು ಮರೆತು ಭ್ರಷ್ತನಾಗುತ್ತಾನೆ;ವಾಲಡಾಫ್೯ ಎಂಬ ಕುಟಿಲಸ್ವಭಾವದ,ಅರಮನೆಯ ಬಣ್ಣದ ಚಿಟ್ಟೆಯ ಸಹವಾಸಕ್ಕೆ ಬೀಳುತ್ತಾನೆ.ದಬ್ಬಾಳಿಕೆಗೆ ಸಿಕ್ಕಿದ್ದ ರೈತರು ದಂಗೆ ಎದ್ದಾಗ ಗಾಟ್ಸ್ ಅವರ ಮುಖಂಡನಾಗಿ ಹೋರಾಡುತ್ತಾನೆ.ವೆಸ್ಲಿಂಗನ್ನನ ಕೈಗೆ ಸಿಕ್ಕಿ,ಮರಣದಂಡನೆಯ ಆಜ್ಞೆಯನ್ನು ಹರಿದುಹಾಕುತ್ತಾನೆ.ಆದರೆ ಅವನ ಹೆಂಡತಿ ವಾಲಡಾಫ್೯ ಗಂಡನಿಗೆ ವಿಷವೂಡಿಸಿ ಕೊಲ್ಲುತ್ತಾಳೆ.ಅನಂತರ ತಾನೇ ಮರಣ ದಂಡನೆಗೆ ಗುರಿಯಾಗಿತ್ತಾಳೆ.ಗಾಟ್ಸ್ ಕಾರಾಗೃಹದಲ್ಲಿ ಗಾಯಗೊಂಡು ಅಸು ನೀಗುತ್ತಾನೆ.ಅತಿ ಭಾವುಕತೆ ತುಂಬಿದ ಈ ನಾಟಕವನ್ನು ಜಮ೯ನ್ ರೊಮ್ಯಾಂಟಿಕ್ ಪಂಥದ ಘೋಷಣೆ ಎನ್ನಬಹುದು.ನಾಟಕದಲ್ಲಿನ ಅತಿರಂಜಕ ಶೈಲಿ,ರಾಗರಂಜಿತ ಪಾತ್ರ ವಿನ್ಯಾಸ-ಇವು ಜಮ೯ನಿಯ ಯುವಕಸ್ತೋಮವನ್ನು ಬಹಳವಾಗಿ ಆಕಷಿ೯ಸಿದವು.ಇದರಲ್ಲಿ ಕವಿ ತನ್ನ ಜೀವನದ ಹಲವು ಘಟನೆಗಳನ್ನೂ ಜೀವಂತ ವ್ಯಕ್ತಿಗಳನ್ನೂ ಸೇರಿಸಿದ್ದಾನೆ.ಈ ನಾಟಕದಲ್ಲಿ ಬಹುಮಟ್ಟಿಗೆ ಷೇಕ್ಸಪಿಯರನ ನಾಟಕಗಳ ಹಾಗೂ ಮಾಟಿ೯ನ್ ಲೂಥರನ ಬೈಬಲ್ ಅನುವಾದದ ಶೈಲಿಗಳ ಅನುಕರಣ ಇದೆ.ನಿಜವಾದ ಅಥ೯ದಲ್ಲಿ ಇದನ್ನು ಐತಿಹಾಸಿಕ ನಾಟಕ ಎನ್ನುವುದು ಕಷ್ಟ.೧೬ನೆಯ ಶತಮಾನದ್ದೆಂದು ಹೇಳಲಾದ ನಾಟಕದ ಪರಿಸರ,ಹಿನ್ನಲೆ,ಪಾತ್ರಗಳು-ಎಲ್ಲವೂ ಅಸಹಜವಾಗಿವೆ.ಅದೇನೇ ಇರಲಿ,ಈ ನಾಟಕ ಜಮ೯ನಿಯ ರಂಗಭೂಮಿಗೆ ಹೊಸ ತಿರುವನ್ನು ಕೊಟ್ಟ ಕೃತಿ. ಡೈಲೇಡನ್ ಡೇಯ್ ಯುಗನ್ ವದ೯ರ್(೧೭೭೪):ಗಯಟೆಯ ಕೀತಿ೯ ಯುರೋಪಿನೆಲ್ಲೆಲ್ಲ ಹರಡುವಂತೆ ಮಾಡಿದ ಈ ಕೃತಿ ಒಂದು ದುರಂತ ಕಾದಂಬರಿ.ತನ್ನ ಸಮಕಾಲೀನರಾದ ಇಂಗ್ಲೆಂಡಿನ ಕಾದಂಬರಿಕಾರ ರಿಚಡ್೯ಸನ್ ಹಾಗೂ ಫ್ರೆಂಚ್ ಸಾಹಿತಿ ರೂಸೋವಿನ ಕೃತಿಗಳಿಂದ ಪ್ರೇರಿತನಾಗಿದ್ದ ಗಯಟೆ ಈ ಕಾದಂಬರಿಯನ್ನು ಪತ್ರಗಳ ರೂಪದಲ್ಲಿ ಬರೆದಿದ್ದಾನೆ.ತನ್ನ ಸ್ವಂತ ಪ್ರಣಯಾನುಭವಗಳನ್ನು ಗಾಟ್ಸ್ ನಾಟಕದಲ್ಲಿ ಎರಕ ಹೊಯ್ದಂತೆ,ಚಾಲೆ೯ಟ್ ಬಫಳೊಂದಿಗೆ ವೆಟಸ್ಲರನಲ್ಲಿ ತನಗಾದ ಪ್ರಣಯಾನುಭವವನ್ನು ಈ ಕಾದಂಬರಿಯಲ್ಲಿ ಪ್ರತಿರೂಪಿಸಿದ್ದಾನೆ.ತನ್ನ ಕಹಿ ಅನುಭವಗಳ ಜೊತೆಗೆ,ಸಹಪಾಠಿಯೊಬ್ಬನ ದುರಂತ ಆತ್ಮಹತ್ಯೆಯ ಪ್ರಕರಣವನ್ನೂ ಸೇರಿಸಿ ಕಥೆನೇಯಿದ್ದಾನೆ.ಕಥಾನಾಯಕ ವದ೯ರ್ ಒಬ್ಬ ಅತಿಭಾವುಕ ಯುವಕ ಲೋಟ್ ಎಂಬ ಸುಂದರಿಯನ್ನು ಗಾಢವಾಗಿ ಪ್ರೀತಿಸಿದ್ದು,ಅವಳು ತಮ್ಮಿಬ್ಬರ ಗೆಳೆಯನಾದ ಆಲ್ಬಟ್೯ ಆಗಲೇ ಮದುವೆಯಾಗಲು ನಿಶ್ಚಯಿಸಿರುವ ಹುಡುಗಿಯೆಂದು ತಿಳಿದಾಗ ನಿರಾಶೆಗೊಳಗಾ