ಪುಟ:Mysore-University-Encyclopaedia-Vol-6-Part-3.pdf/೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಗರಗಸ ಮೀನು-ಗರಡಿ ಗರಗಸ ಮೀನು :ಪ್ರಪಂಚದ ಉಷ್ಣವಳಲಯಸ ಸಾಗರಗಲಳ್ಳಲ್ಲಿ ಕಾಣಸಿಗುವ ಒಂದು ಬಗೆಯ ಮ್ರದ್ವಸ್ಥಿ ಮೀನು (ಸಾ ಫಿಶ್).ಶಾರ್ಕ್, ರೇ,ಸ್ಕೇಟ್ ಮೀನುಗಳ ವರ್ಗದಲ್ಲಿ ಸ್ಕ್ವಾಲಿಫಾರ್ಮಿಸ್ ಗಣದ ಪ್ರಿಸ್ಟಿಡೆ ಕುಟುಂಬದ ಮೀನು. ಇದರ ಶಾಸ್ತ್ರೀಯ ಹೆಸರು ಪ್ರಿಸ್ಟಿಸ್,ಅಕ್ಕ ಪಕ್ಕದಲ್ಲಿ ಚೂಪಾದ ಹಲ್ಲುಗಳಿರುವ ಮತ್ತು ಚಿಲು ಉದ್ದವಾಗಿರುವ ಗರಗಸ ದಂಥ ಮೂತಿಯಿರುವುದರಿಂದ ಇದಕ್ಕೆ ಈ ಹೆಸರ್. ಇದರಲ್ಲಿ ಆರು ಪ್ರಬೇಧಗಳಿವೆ. ಇವುಗಳ್ಳಲ್ಲಿ ಅಮೆರಿಕದ ಆಗ್ನೇಯ ಹಾಗು ಗಲ್ಫ್ ತೀರ ಪ್ರದೇಶಗಳಲ್ಲಿ ಕಾಣಬರುವ ಪಕ್ಟಿನೇಟಸ್ ಪ್ರಭೇದ, ಮೆಡಿಟರೇನಿಯನ್ ಮತ್ತು ಅಟ್ಲಾಂಟಿಕ್ ಸಾಗರಗಳಲ್ಲಿ ಕಾಣಬರುವ ಆಂಟಿಕೋರಮ್ ಪ್ರಭೇದ ಮತ್ತು ಭಾರತದ ತೀರ ಪ್ರದೇಶಗಳಲ್ಲಿ ಸಿಕ್ಕುವ ಕಸ್ಪಿಡೇಟಸ್ ಮತ್ತು ಮೈಕ್ರೋಡಾನ್ ಪ್ರಭೇದಗಳು ಪ್ರಮುಖವಾದವು.

    ಗರಗಸ ಮೀನುಗಳಲ್ಲಿ ತೀರಕ್ಕೆ ಸಮೀಪದಲ್ಲಿ ಮತ್ತು ಆಳಿವೆಗಳಲ್ಲಿ ಜೀವಿಸುವುವು. ಅನೇಕ ಸಂದರ್ಭದಲ್ಲಿ ನದಿಗಳಲ್ಲಿ ಒಳನಾಡಿಗೂ ಹಲವಾರು ಮ್ಯೆಲಿಗಳಷ್ಟು ಮೂರು ಬರುವುದೂ ಉಂಟು. ಇದು ಸು.೬.೧ ಮೀ ಗಳವರೆಗೆ ಬೆಳೆಯುತ್ತದೆ. ದೇಹರಚನೆಯಲ್ಲಿ ಶಾರ್ಕ್ ಮೀನನ್ನು ಹೋಲುತ್ತದಾದರೂ ಇದು ರೇ ಮೀನುಗಳ ಹತ್ತಿರದ ಸಂಬಂಧಿ ಅಂದರೆ ಕಿವಿರು ದ್ವಾರಗಳು ದೇಹದ ತಳ ಭಾಗದಲ್ಲಿರುತ್ತವೆ. (ಶಾರ್ಕ್ ಮೀನುಗಳಲ್ಲಿ ಕಿವಿರು ದ್ವಾರಗಳು ದೇಹದ ಪರ್ಶ್ವದಲ್ಲಿರುತ್ತವೆ).ಅಗಲವಾದ ಎದೆಯ ಈಜುರೆಕ್ಕೆಗಳು,ಎರಡು ಬೆನ್ನಿನ ಈಜುರೆಕ್ಕೆಗಳು,ಬಾಲದ ಈಜುರೆಕ್ಕೆ,ಗರಗಸದಂತಹ ಮೂತಿ,ತಲೆಯ ಕೆಳಭಾಗದಲ್ಲಿನ ಅರ್ಧಚಂದ್ರಾಕ್ರತಿಯ ಬಾಯಿ,ಬಾಲದ ಆಚೀಚೆ ದೋಣಿಯ ಆಕಾರದ ಚರ್ಮದ ಮಡಿಕೆ-ಇವು ಗರಗಸ ಮೀನಿನ ಬಾಹ್ಯ ಲಕ್ಶಣಗಳು.

ಮೂತಿ ಚಪ್ಪಟಿಯಾಗಿ ಬಲು ಉದ್ದವಾಗಿರುತ್ತದೆ;ಕೆಲವು ಮೀನುಗಳಲ್ಲಿ ಸು. ೧.೮ಮೀ ಉದ್ದವಿರುತ್ತದೆ. ಆದರೆ ಒಂದೊಂದು ಅಲುಗಿನಲ್ಲಿ ಚೂಪಾದ ಸುಮಾರು ೨೨-೩೨ ಹಲ್ಲುಗಳಿರುತ್ತವೆ. ಸಾಗರತಳವನ್ನುಹೆಕ್ಕಿ ಅದರೊಳಗಿರುವ ಹಲವಾರು ಬಗೆಯ ಪ್ರಾಣಿಗಲನ್ನು ತಿನ್ನಲು ಈ ಗರಗಸವನ್ನು ಬಳಸುತ್ತದೆ. ಅಲ್ಲದೆ ಚಲಿಸುವಾಗ ಸಣ್ಣ ಮೀನುಗಳ ಗುಂಪಿನಲ್ಲಿ ಮಧ್ಯೆ ನುಗ್ಗಿ ಗರಗಸ ವನ್ನು ಅತ್ತಿತ್ತ ಬಲವಾಗಿ ಆಡಿಸಿ ಕೆಲವು ಮೀನುಗಳು ಇದರ ಹೊಡೆತಕ್ಕೆ ಸಿಕ್ಕಿ ಸಾಯುವಂತೆ ಮಾಡಿ ತಿನ್ನುವುದೂ ಉಂಟು. ಗರಗಸ ಮೀನು ಜರಾಯುಜ ಪ್ರಾಣಿ. ಹುಟ್ಟುವ ಮುನ್ನವೆ ಮರಿಗಳಿಗೆ ಹರಗಸವಿರುವುದಾದರು ಅದು ಬಲು ಮ್ರುದುವಾಗಿಯೂ ಒಂದು ಬಗೆಯ ಹೊದಿಕೆಯಿಂದ ಅವ್ರತವಾಗಿರುವುದರಿಂದ ತಾಯಿಯ ಹೊಟ್ಟೆಲ್ಲಿರುವಾಗ ಅಲ್ಲಿನ ಅಂಗಾಂಶಗಳಿಗೆ ಹಾನಿಯಾಗುವ ಸಂಭವವಿರುವುದಿಲ್ಲ

                  ಮಲೇಶಿಯಾ, ಇಂಡೋನೇಶಿಯ ಮತ್ತು ಚೀನಾಳಲ್ಲಿ ಗರಗಸ ಮೀನನ್ನು ತಿನ್ನುತಾರೆ. ಇದರ ಮಾಂಸ ಶಾರ್ಕ್ ಮೀನಿನ ಮಾಂಸದಷ್ಟೇ ರುಚಿ ಎಂದು ಹೇಳಲಾಗಿದೆ. ಅಲ್ಲದೆ ಈ ಮೀನಿನ ಚರ್ಮದಿಂದ ಕತ್ತಿಯ ಒರೆಯನ್ನು ಮಾಡುವುದಿದೆ. ಇದರ ಯಕ್ರತ್ತಿನಿಂದ ಎಣ್ಣೆಯನ್ನು ತೆಗೆಯುತ್ತಾರೆ.
                   ಗರಡಿ : ಕುಸ್ತಿ ಮೊದಲಾದ ಅಂಗಸಾಧನೆಗಳಿಗಾಗಿ ಗೊತ್ತಾದ ಸ್ಥಳ, ಆ ಸ್ಥಳವಿರುವ ಮನೆ. ಗರಡಿಗಾಗಿ ಮನೆ ಇರುವುದು ಹೆಚ್ಚಾಗಿ ದಕ್ಶಿಣ ಭಾರತದಲ್ಲೆ. ಉತ್ತರದವರು ಬಯಲಿಲಲ್ಲಿಯೇ ಕುಸ್ತಿ ಮುಂತಾದವನ್ನು ಅಭ್ಯಾಸ ಮಾಡುತ್ತಾರೆ.  ಗರಡಿ ಮನೆಯೊಳಗೆ ಕುಸ್ತಿ ಕಲಿಯುವ ಸ್ತಳಕ್ಕೆ ಮಟ್ಟಿ (ಮಣ್ಣು) ಎಂದೂ ಸ್ಪರ್ದೆಯಲ್ಲಿ ಭಾಗವಹಿಸಿ ಕುಸ್ತಿ ಮಾಡುವುದು, ವ್ಯಾಯಾಮ ಮಾಡುವುದು ಎಂಬುದಷ್ಟೇ ಅಲ್ಲದೆ ಕುಸ್ತಿ ಮಾಡುವುದು ಎಂಬ ಅರ್ಥವೂ ರೂಢಿಯಲ್ಲಿದೆ. ವಿರಾಟಪರ್ವದಲ್ಲಿ ಬರುವ ಮಲ್ಲಯುಧ್ಧವನ್ನಿಲ್ಲಿ ನೆನೆಯಬಹುದು. ಹಿಂದಿನ ಕಾಲದಲ್ಲಿ ಕುಸ್ತಿ ಕಲಗೆ ಬಹಳ ಪ್ರೋತ್ಸಾಹವಿತ್ತು. ರಾಜಮಹಾರಾಜರುಗಳೇ ಈ ಕಲೆಯಲ್ಲಿ ಪರಿಣತಿ ಹೊಂದಿದ್ದರಲ್ಲದೆ ಪ್ರಖ್ಯಾತ ಪೈಲ್ವಾನರು (ಜಟ್ಟಿ)ಗಳನ್ನು ಸಾಕಿಕೊಂಡು ಈ ಕಲೆಗೆ ಪೋತ್ಸಾಹವೀಯುತ್ತಿದ್ದರು.

ಸಂಗೊಳ್ಳಿ ರಾಯಣ್ಣ, ಮೈಸೂರಿನ ರಣಧೀರ ಕಂಠೀರವ ನರಸರಾಜ ಒಡೆಯರ್ ಮೊದಲಾದವರು ಈ ಕಲೆಯಲ್ಲಿ ಅಸಾಧರಣ ಚತುರತೆಯನ್ನು ಸಂಪಾದಿಸಿದ್ದರು. ರಣಧೀರ ಕಂಠೀರವ ನರಸಿಂಹರಾಜ ಒಡೆಯರು ಮಾರುವೇಷದಲ್ಲಿ ಹೋಗಿ ತಿರುಚನಾಪಳ್ಳಿ ಜಟ್ಟಿಯನ್ನು ಸೋಲಿಸಿದ ಕಥೆಯಂತೂ ಎತಿಹಾಸ ಪ್ರಸಿದ್ಧ. ಹಿಂದಿನ ಕಾಲದಲ್ಲಿ ಸೈನೆಕರಿಗೆ ಕಡಾಯವಾಗಿ ಈ ಶಿಕ್ಷಣವನ್ನು ಕೊಡಲಾಗುತ್ತಿತ್ತು. ಮದಕರಿ ನಾಯಕರ ಕಾಲದಲ್ಲಿದ್ದ ಗರಡಿ ಮನೆಗಳನ್ನು ಚಿತ್ರದುರ್ಗದ ಕೋಟೆಯಲ್ಲಿ ನಾವು ಇಂದೂ ಕಾಣಬಹುದಾಗಿದೆ. ಹಳ್ಳಿಯಾದರೆ ಒಂದು, ಊರೆಂದರೆ ನಾಲ್ಕೈದು ಗರಡಿ ಮನೆಗಳ್ಳಿದ್ದ ಕಾಲವೊಂದಿತ್ತು.

                   ಹಿಂದಿನ ಕಾಲದ ಗರಡಿ ಮನೆಗಳು ವಿಶಾಲವಾಗಿರದೆ ಚಿಕ್ಕವಾಗಿರುತ್ತಿದ್ದುವು. ದೂರದಿಂದ ನೋಡಿಯೀ ಸುಲಭವಾಗಿ ಅವನ್ನು ಪತ್ತೆಮಾಡಬಹುದಾಗಿತ್ತು. ಗರಡಿಯ ಹೊರ ಗೋಡೆಗಳ ಮೇಲೆ ಕೆಮ್ಮಣ್ಣನ ದೊಡ್ಡ ದೊಡ್ಡ ಹಾಗೂ ಉದ್ದುದ್ದವಾದ ಪಟ್ಟೆಗಳನ್ನು ಹಾಕಿರುತ್ತಿದ್ದರು. ಹಾಗು ಗರಡಿಯ ಮುಂದೆ ದಪ್ಪ ದಪ್ಪ ಕಲ್ಲುಗುಂಡುಗಯನ್ನು ಇಟ್ಟಿರುತ್ತಿದ್ದರು. ಬಾಗಿಲಿನಲ್ಲಿ ಗರಡನ ಅಥವಾ ಹನುಮಂತನ ಚಿತ್ರಪಟವಿರುತ್ತಿತ್ತು. ಗರಡಿ ಮನೆಗಳಿಗೆ ಎಲ್ಲೋ ಒಂದು ಸಣ್ಣ ಕಿಟಕಿ ಎದ್ದರೆ ಅದೇ ಹೆಚ್ಚು. ಒಳಗಡೆ ಹೆಚ್ಚು ಗಾಳಿ, ಬೆಳಕು ಪ್ರವೇಶ ಮಾಡುತ್ತಿರಲ್ಲಿಲ್ಲ, ಬಾಗಿಲು ಚಚ್ಜೌಕವಾಗಿದ್ದು ಸುಮಾರು ೭೬ ಸೆಂ.ಮೀ ಅಗಲ ಹಾಗೂ ೭೬ ಸೆಂ.ಮೀ ಎತ್ತರವಿರುತ್ತಿತ್ತು. ಆ ಮನೆಗೆ ಆ ಬಾಗಿಲು ತುಂಬ ಚಿಕ್ಕದೆಂದೇ ಹೇಳಬೇಕು. ಅಲ್ಲದೆ ಅದರ ದಪ್ಪ ಸು. ೧೬ ಸೇ.ಮೀ ಇರುತ್ತಿತ್ತಾಗಿ ಅದನ್ನು ತಳ್ಳಿಕೊಂಡು ಒಳಗೆ ಹೋಗಬೇಕಾದರೆ ಸಾಕಷ್ಟು ಶಕ್ತಿ ಇರ ಬೆಕಾಗುತ್ತಿತ್ತು. ಈ ಬಾಗಿಲಿನ ಇನ್ನೊಂದು ವೈಶಿಷ್ಟ್ಯವೆಂದರೆ ಮುಂಭಾಗದಲ್ಲಿ ಬೀಗ ಹಾಕಿಕೊಳ್ಳಲು ಚಿಲಕವಿರುತ್ತಿರಲಿಲ್ಲ. ಆದರೆ ಒಳಗಡೆಯಿಂದ  ಬಾಗಿಲನ್ನು ಹಾಕಿಕೊಳ್ಳಲು ಅಗಳಿ ಇರುತ್ತಿತ್ತು. ಸಾಧಾರಣವಾಗಿ ಒಂದೇ ಊರಿನಲ್ಲಿ ೩, ೪, ಗರದಿ ಮನೆಗಳಿದ್ದು ಅವಕ್ಕೆಲ್ಲ ಹೆಸರಾಂತ ಉಸ್ತಾದರ ನಾಮಕರಣವಿರುತ್ತಿತ್ತು. ಅಲ್ಲದೆ ಒಂದು ಗರಡಿಯವರಿಗೂ ಪೈಪೋಟಿಯಲ್ಲದೆ ವಿರೋಧವೂ ಇರುತ್ತಿತ್ತು. ಹೀಗೆ ವಿರೋಧವಿದ್ದುದರಿಂದಲೇ ಗರಡಿ ಮನೆಗಳಿಗೆ ಬಾಗಿಲನ್ನು ಮುಂಭಾಗದಲ್ಲಿ ಬೀಗ ಹಾಕಿಕೊಳ್ಳಲು ಚಿಲಕವಿರುತ್ತಿರಲ್ಲಿಲ್ಲ. ಕಾರಣ ಗರಡಿ ಮನೆಯೊಳಗೆ ಸಾಧನೆ ನಡೆಸುವುದನ್ನು ಕಂಡರೆ ಆಗದವರು ಚಿಲಕ ಹಾಕಿ ಹೊರಟು ಬಿಟ್ಟರೆ ಒಳಗಡೆ ಇದ್ದವರು ಗಾಳಿ ಬೆಳಕು ಇಲ್ಲದೆ ಅಲ್ಲಿಯೇ ಸಾಯಬೇಕಾಗುತ್ತಿತ್ತು. ಸಾಧನೆ