ಪುಟ:Mysore-University-Encyclopaedia-Vol-6-Part-3.pdf/೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಗರಿನಕ್ಷತ್ರ - ಗರುಡ ಪುಷ್ಟಿದಾಯಕವೆಂದು ಹೆಸರಾಗಿರುವ ಇದರಲ್ಲಿ ಕಚ್ಚಾಪ್ರೋಟೀನ್ ಶೇ.೧೦.೪೭,ನಾರು ಶೇ.೨೮.೧೭, ಸಾರಜನಕಮುಕ್ತವಸ್ತುಗಳು ಶೇ ೪೭.೮ ಈಥರ್ ಅಂಶ ಶೇ.೧.೮೦ ಮತ್ತು ವಿವಿಧ ಖನಿಜಾಂಶಗಳು ಶೇ ೧೧.೭೫,ಇರುವುದು ಕಂಡುಬಂದಿದೆ. ತೆನೆ ಬಿಟ್ಟಾಗ ಇದನ್ನು ಕತ್ತರಿಸಿ ಒಣಗಿಸುವುದು ರೂಢಿಯಲ್ಲಿರುವ ಕ್ರಮ ಒಂದು ಎಕರೆಗೆ ೧೫-೨೦ ಮಣಸಷ್ಟು ಹುಲ್ಲು ದೊರೆಯುತ್ತದೆ. ಸರಿಯಾಗಿ ಗೊಬ್ಬರ ಮತ್ತು ನೀರಿನ್ನು ಒದಗಿಸಿ ಇಳುವರಿಯನ್ನು ಹೇಚ್ಚಿಸಹುದು ವರ್ಷಕ್ಕೆ ಕೊನೆಯ ಪಕ್ಷ ೪ ಬಾರಿ ಕಟಾಯಿಸಬಹುದು.ಇದರ ಗುಪ್ತಕಾಂಡಗಳನ್ನು ಸಣ್ಣ ಸಣ್ಣ ತುಂಡುಗಳಾಗಿ ಕತ್ತರಿಸಿ, ಸಹಣಿಯೊಂದಿಗೆ ಬೆರಿಸಿ ಕತ್ತದ ಭೂಮಿಯ ಮೇಲೆ.ಮಳೆ ಫ್ರಾರಂಭವಾಗುವ ಮುನ್ನ ಹಾಕಿದರೆ, ಮಳೆಗಾಲದ ಕೊನೆಗೆ ಚೆನ್ನಾಗಿ ಬೆಳೆದು ಹರಡಿಕೊಳ್ಳುತ್ತದೆ. ಗರಿಕೆಹುಲ್ಲು ಇಷ್ಟು ಉಪಯುಕ್ತವಾದರೂ ಇದು ಒಂದು ಕಡೆ ಬೇರೂರಿದ ಮೇಲೆ ಇದನ್ನು ನಿರ್ಮೂಲ ಮಾಡುವುದು ಕಷ್ಟ.ವ್ವಯವಸಾಯದ ಭೂಮಿಯನ್ನು ಇದು ಒಂದು ಅಪಾಯಕಾರಿ ಕಳೆಯಾಗಿ ಬಹುಬೇಗ ಆವರಿಸಿಕಳ್ಳುವುದು.ಅಲ್ಲಿ ಬೆಳೆದಿರುವ ಪೈರುಗಳನ್ನು ಹಾಳು ಮಾಡುವುದಲ್ಲದೆ ಕೆಲವೇ ವರ್ಷಗಳಲ್ಲಿ ಅಲ್ಲಿರುವ ಮಣ್ಣಿನ ಸಾರವನ್ನೆಲ್ಲ ಹೀರಿ ನೆಲವನ್ನು ವ್ಯವಸಾಯಕ್ಕೆ ಅನುಪಯುಕ್ತವಾಗಿ ಮಾಡುತ್ತದೆ. ಬೇಸಗೆಯಲ್ಲಿ ಬಾಮಿಯನ್ನು ಆಳವಾಗಿ ಉತ್ತು ಗರಿಕೆಹುಲ್ಲಿನ ಬೇರುಗಳನ್ನು ಬಿಸಿಲಿಗೆ ಬಿಡುವುದಅ ಮೂಲಕ ಇದನ್ನು ಸ್ವಲ್ಪಮಟ್ಟಿಗೆ ಕಡಿಮೆ ಮಾಡಬಹುದು. ಇಂಥ ಭೂಮಿಯಲ್ಲಿ ಗೋದಿಯ ಬೆಳೆಯನ್ನು ಬೆಳೆಯನ್ನು ಬೆಳೆಸುವುದರಿಂದ ಹುಲ್ಲಿನ ಕಳೆ ಬಹುಮಟ್ಟಿಗೆ ನಿರ್ಮೂಲವಾಗುವುದೆಂಬ ಅಂಶ ಈಚೆಗೆ ಗೊತ್ತಾಗಿದೆ ಬಹುಶಃ ಗೋದಿ ಬೆಳೆಗೆ ಮಾಡುವ ವ್ಯವಸಾಯ ಕ್ರಮ ಗರಿಕೆಹುಲ್ಲಿಗೆ ಮಾರಕವೆನಿಸಬಹುದು. ಗರಿಕೆಹುಲ್ಲು ಕಷಾಯ ಮೂತ್ರಸ್ರಾವವನ್ನು ಹೆಚ್ಚಿಸುತ್ತದೆ. ಜಲೋದರ ರೋಗಕ್ಕೆ ಔಷಧವಾಗಿಯೂ ಇದರ ಬಳಕೆ ಉಂಟು.ಬೇರು ಮತ್ತು ಗುಪ್ತಕಾಂಡಗಳಿಂದ ಮೂತ್ರಜನಕಾಂಗ ಮತ್ತು ಜನನಾಂಗಗಳ ಕೆಲವು ರೋಗಗಳ ನಿವಾರಣೆ ಔಷಧಿಯನ್ನು ತಯಾರಿಸುತ್ತಾರೆ.ರಕ್ತಸ್ರಾವವನ್ನು ತಡೆಯಲು ಕೂಡ ಇದನ್ನು ಬಳಸುವುದುಂಟು.(ಕೆ.ಎಸ್.ಜೆ;ಎಂ) ಗರಿನಕ್ಷತ್ರ: ಕಂಟಕಚರ್ಮಿಗಳ ವಂಶದ ಪೆಲ್ಮಟೋಜೋವ ಉಪವಂಶದ ಕ್ರೈನಾಯ್ಡಿಯ ವರ್ಗಕ್ಕೆ ಸೇರಿದ ಸಮುದ್ರವಾಸಿಗಳೆಗಿರುವ ಸಾಮಾನ್ಯ ಹೆಸರು(ಫೆದರ್ ಸ್ಟಾರ್,ಸೀ ಲಿಲ್ಲಿ).ಸು ೩೫೦೦ ಮೀ ಅಳದಲ್ಲಿ ಯಾವುದಾದರೂ ಅಧಃಸ್ತರಕ್ಕೆ (ಸಬ್‍ಸ್ಟ್ರಾಟಮ್) ಅಂಟಿಕೊಂಡಿರುತ್ತದೆ. ಇದಕ್ಕೆಂದೇ ಅಧೋಭಾಗದಲಿ ಉದ್ದವಾದ ತೋಟ್ಟಿದೆ.ರೈಜೊಕ್ರೈನಸ್ ಮತ್ತು ಪೆಂಟ್ರಾಕ್ರೈನಸ್ ಈ ತೆರನ ಪ್ರಾಣಿಗಳು.ಅದರೆ ಆಂಟೆಡಾನ್ ಮಾತ್ರ ಕಾಂಡದೀಂದ ತುಂಡಾಗಿ ತನ್ನು ಬಾಹುಗಳ ಸಹಾಯದಿಂದ ಸಮುದ್ರದಲ್ಲಿ ಈಜಬಲ್ಲದು.ಪೆಡಸು ನಕ್ಷತ್ರ ಮತ್ತು ನಕ್ಷತ್ರಗಳಲ್ಲಿರುವಂತೆ ಇದರಲ್ಲಿಯೂ ಮಧ್ಯತಟ್ಟೆ ಮತ್ತು ಅದರಿಂದ ಹೊರಡುವ ಐದು ಬಾಹುಗಳೆವೆ.ಮಧ್ಯತಟ್ಟೆಗೆ ಕೇಲಿಕ್ಸ್ ಎಂದು ಹೆಸರು.ಪ್ರತಿ ಬಾಹುವೂ ಬುಡದಲ್ಲಿ ಎರಡಾಗಿ ಕವಲೊಡೆದಿರುವುದರಿಂದ ಹತ್ತು ನೀಳವಾದ, ನಮ್ಯವಾದ ಮತ್ತು ಉದ್ದವಾದ ಬಾಹುಗಳಿರುವಂತೆ ಭಾಸವಾಗುತ್ತದೆ.ಪ್ರತಿಯೊಂದು ಕವಲಿನಲ್ಲೂ ಪಿನ್ಯೂಲುಗಳೆಂಬ ಸಣ್ಣ ಸಣ್ಣ ಕವಲಲಗಳಿವೆ. ಬಾಹುಗಳಿಗೂ ಹಕ್ಕಿಯ ಗರಿಗಳಿಗೂ ಹೋಲಿಕೆ ಇರುವುದರಿಂದಲೇ ಗರಿನಕ್ಷತ್ರವೆಂದು ಹೆಸರು.ಕೇಲಿಕ್ಸ್‍ನ ಊರ್ಧ್ವಭಾಹದಲ್ಲಿ ಬಾಯಿ ಮತ್ತು ಆಸನದ್ವಾರಗಳಿವೆ.ಇವಲ್ಲದೆ ಬಾಯಿಯಿಣದ ಐದು ಆಂಬುಲ್ಯಾಕ್ರಲ್ ಕೊರಕಲುಗಳು ತ್ರಿಜ್ಯಕ್ಕೆ ಹೊರಡುತ್ತದವೆ.ಈ ಕೊರಕಲುಗಳು ಶಲಕೆಯುಕ್ತವಾಗಿವೆ ಮತ್ತು ಪರಿಧಿಯಲ್ಇ ಸಾಲಾಗಿ ಜೋಡಿಸಲ್ಪಟ್ಟ ಟೆಂಟಕಲ್ ಅಥವಾ ಪೋಡಿಯಗಳನ್ನು (ಮಾರ್ಪಾಟಾದ ನಳಿಕೆಪಾದ) ಹೊಂದಿದೆ. ಆಂಟೆಡಾನ್‍ನಲ್ಲಿ ಕೇಲಿಕ್ಸನ್ ಅಧೋಭಾಗದಲ್ಲಿ ಒಂದು ದೊಡ್ಡ ಆಸಿಕಲ್ ಇದೆ.ಇದು ಮುಂಚೆ ಇದ್ದ ತೊಟ್ಟು ಅಥವಾ ಕಾಂಡದ ಮೂಲಬಿಂದು .ಇದಲ್ಲದೆ ಸಿರ್ಐ ಎಂಬ ಸಣ್ಣ ಸಣ್ಣ ಆಸ್ಥಿಪಮ್ರ ಆಸಿಕಲ್‍ಗಳಿಂದಾಗಿದೆ ಜೀರ್ಣಾಂಗವ್ಯೂಹ ಬಾಯಿ,ಅಗಲವಾದ ಅನ್ನನಾಳ ದೊಡ್ಡದಾದ ಜಠರ, ಸುರುಳಿಯಾಕಾರದ ಕರುಳು ಮತ್ತು ಆಸನದ್ವಾರಗಳನ್ನೊಳಗೊಂಡಿದೆ. ಹೀಮಲ್ ವ್ಯವಸ್ಥೆ ಮತ್ತು ನರವ್ಯೂಹ ಇತರ ಕಂಟಕರ್ಮಿಗಳಂತಿವೆ . ಆಮ್ಲಜನಕ ಮತ್ತು ಇಂಗಾಲದ ಡೈಆಕ್ಸೈಡ್‍ಗಳ ವಿನಿಮಯವಾಗುವುದು ಪೋಡಿಯಗಳಲ್ಲಿ ಗರಿನಕ್ಷತ್ರಗಳು ಏಕಲಿಂಗಿಗಳು.ಮೊಟ್ಟೆfಳೊಡೆದು ಡಾಲಿಯೋಲೆರಿಯ ಎಂಬ ಲಾರ್ವಗಳು ಹೊರಬರುತ್ತವೆ.ಇವು ನೀರಿನಲ್ಲಿ ಈಜಾಡುತ್ತ ಸ್ವಲ್ಪ ದಿವಸಗಳಲ್ಎ ಕಾಂಡಯುಕ್ತ ಪೆಂಟಾಕ್ರೈನಾಯಿಡ್ ಎಂಬ ಲಾರ್ವಗಳಾಗುತ್ತವೆ.ಇವುಗಳು ಆಧಃಸ್ತರಕ್ಕೆ ಅಂಟಿಕೋಂಡಿರುತ್ತವೆ . ರೂಪಪರಿರ್ತನೆ ಹೊಂದಿ ಬೆಳೆದ ಗರಿನಕ್ಷತ್ರಗಳಾಗುತ್ತವೆ.(ಎಸ್.ಕೆ.ಎಚ್) ಗರುಡ: ಫಾಲ್ಕನಿ ಫಾರ್ಮೀಸ್ ಗಣದ ಆಕ್ಸಪಿಟ್ರಿಡೀ ಕುಟುಂಬದ ಬ್ಯೂಟಿಯಾನಿನೀ ಉಪಕುಟುಂಬಕ್ಕೆ ಸೇರಿದ ಒಂದು ಹಕ್ಕಿ ಹದ್ದು,ಗಿಡುಗ,ಡೇಗೆ,ರಣಹದ್ದು,ಗೂಬೆ ಮುಂತಾದವುಗಳ ಹತ್ತಿರ ಸಂಬಂಧಿ.ಹ್ಯಾಲಿಯಾಸ್ಟರ್ ಇಂಡಸ್ ಇದರ ವೈಜ್ಞಾನಿಕನಾಮ.ಬ್ರಾಹ್ಮಣಿ ಕೈಟ್ ಎಂಬುದು ಇಂಗ್ಲಿಷ್ನಲ್ಲಿ ಸಾಮಾನ್ಯ ಬಳಕೆಯಲ್ಲಿರುವ ಹೆಸರು.ಗರುಡ ಭಾರತ,ಬಾಂಗ್ಲಾದೇಶ,ನೇಪಾಳ,ಶ್ರೀಲಂಕಾ,ಪಾಕಿಸ್ತಾನಗಳಲ್ಲಿ ಕಂಡುಬರುತ್ತದೆ. ಇದರ ಹಲವು ಬಗೆಗೆಗಳು ಬರ್ಮ,ಇಂಡೋಚೀನ,ಮಲಯಗಳಿಂದ ಹಿಡಿದು ಸಾಲೊಮನ್ ದ್ವೀಪಗಳವರೆಗೂ ಹರಡಿವೆ.ಸುಮಾರು ೪೮ ಸೆಂಮೀ. ಉದ್ದದ ಸುಂದರವಾದ ಹಕ್ಕಿಯಿದು,ತಲೆ,ಕುತ್ತಿಗೆ,ಎದೆ ಮತ್ತು ಬೆನ್ನಿನ ಮುಂಭಾಗಗಳು ಬಿಳುಪು.ದೇಹದ ಉಳಿದ ಬಾಗ ಕೆಂಪು ಮಿಶ್ರಿತವಾದ ಕಂದು.ಈ ಕೆಂಪು ಮಿಶ್ರಿತ ಕಂದು ಬಣ್ಣವೇ ಇದಕ್ಕೆ ಇಂಗ್ಲಿಷ್ ಹೆಸರಿನ ಪೂರ್ವಪದ 'ಬ್ರಾಹ್ಮಿನಿ'ಯನ್ನು ತಂದುಕೊಟ್ಟಿದೆ.ನಮ್ಮಲ್ಲಿ ಬ್ರಾಹ್ಮಿಣಿ ಮೈನಾ,ಬ್ರಾಹ್ಮಿಣಿ ಬಾತುವೂ ಇವೆ.ಹೊರನೋಟಕ್ಕೆ ಗಂಡು ಹೆಣ್ಣುಗಳು ಒಂದೇ ಬಗೆ. ಗರುಡ ಸಾಮಾನ್ಯವಾಗಿ ನದಿ,ಕೊಳ,ಝರಿ,ಸಮುದ್ರ ತೀರ,ನೀರು ತುಂಬಿದ ಗದ್ದೆಗಳು,ಬಂದರು,ಅಣೆಕಟ್ಟುಗಳರುವ ಪ್ರದೇಶಗಳಲ್ಲಿ ಒಂಟೊಂಟಿಯಾಗಿ ಕಂಡು ಬರುತ್ತವೆ. ಹದ್ದಿನ ಕೊಕ್ಕಿನಂತೆ ಇದರ ಕೊಕ್ಕೂ ಬಲವಾಗಿದ್ದು ಬಾಗಿದೆ.ಅಂಚು ಬಲು ಹರಿತ ಕೊಕ್ಕಿನ ಬಣ್ಣ ನಸುನೀಲಿ. ಮೇಲುಕೊಕ್ಕಿನ ಬುಡಭಾಗದಲ್ಲಿ ಸೆರೆ ಎಂಬ ಹಳದಿ ಬಣ್ಣದ ರಚನೆಯಿದೆ.ಇದರ ಬಳಿ ಅಗಲ ಹಾಗೂ ದುಂಡಗಿನ ಮೂಗಿನ ಹೊಳ್ಲೆಗಳಿವೆ. ಕಣ್ಣಿನ ವರ್ಣಪಟಲ ಕಂದು ಅಥವಾ ಹಳದಿಮಿಶ್ರಿತವಾದ ಕಂದು ಬಣ್ಣದ್ದು.ದೃಷ್ಟಿಬಲು ಸೂಕ್ಷ್ಮ.ರೆಕ್ಕೆಗಳು ಅತ್ಯಂತ ಬಲಯುತವಾಗಿದ್ದು ತುಂಬ ಉದ್ದವಾಗಿ ಬಾಲದ ತುದಿಯವರೆಗೂ ಚಾಚಿವೆ.ಹರಡಿದಾಗ ಒಂದೊಂದು ರೆಕ್ಕೆಯೂ ೩೮-೩೯ ಸೆಂಮೀ ಅಗಲವಿರುತ್ತದೆ.ಬಾಲ ಕೂಡ ಉದ್ದ ಮತ್ತು ದುಂಡು ಕಾಲ ಮತ್ತು ಪಾದಗಳು