ಪುಟ:Mysore-University-Encyclopaedia-Vol-6-Part-3.pdf/೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಗರ್ಭಾವಸ್ಥೆಯಲ್ಲಿ ( ಪ್ರಾಣಿಗಳಲ್ಲಿ ) ನಿರ್ದೇಶನದಲ್ಲಿ ಮನೆಯಲ್ಲೇ ಸೂಕ್ತ ವಿಶ್ರಾಂತಿ ಕೊಟ್ಟು ಚಿಕಿತ್ಸಿಸಬಹುದು. ಪರಿಸ್ಥಿತಿ ತಿವ್ರವಾಗಿದ್ದರೆ ಆಸ್ಪತ್ರೆಗೇ ಸೇರಿಸಬೇಕಾಗುತ್ತದೆ. ಕಾಲಮೀರಿ ವಿಷಮಸ್ಥಿತಿ ಆದಿರುವಾಯುವಿನ ಘಟ್ಟ ತಲುಪಿದ್ದರೆ ಶೇ.೩೦ ಮರಣವನ್ನಪುತ್ತಾರೆ. ಈ ಸ್ಥಿತಿಯ ಕಾರಣದ ಅರಿವು ಇನ್ನೂ ಹೆಚ್ಚುವವರೆಗೂ ಹೀಗೆ ಇರುತ್ತದೆ ಎಂಬುದಾಗಿಯೂ ಅಂದಾಜು ಮಾಡಲಾಗಿದೆ. ನಂಜು ಹತೋಟಿಯಲ್ಲಿಲ್ಲದಿದ್ದರೆ ಮಗುವನ್ನು ತೆಗೆಯಲೇಬೇಕು. ಗರ್ಭಿಣಿ ಅರ್.ಎಚ್. ಋಣ ಪ್ರತಿಯಕಾಯ ( ಆಯ್ಂಟಿ ಆರ್.ಎಚ್. ಆಗ್ಲೊಟಿನೆನ್ ) ಉತ್ಪತ್ತಿಯಾಗಿ ಮಾಸು/ಕಸದ ಮೂಲಕ ಭ್ರೂಣದ ದೇಹಕ್ಕೆ ತಲುಪಿ ಭ್ರೂಣದ ಕೆಂಪುರಕ್ತಕಣ ( ಕೆಂಗಣ ) ನಾಶವಾಗುತ್ತದೆ. ಇದರಿಂದ ಶಿಶುವಿನಲ್ಲಿ ರಕ್ತಹೀನತೆ, ಕಾಮಾಲೆಗಳು ಉಂಟಾಗುತ್ತವೆ. ಮೊದಲ ಗರ್ಭಾವಸ್ಥೆಯಲ್ಲಿ ತಾಯಿ ತಂದೆಯವರಿಗೆ ಆಗುವ ಮಗುವಿಗೆ ಯಾವ ಅಪಾಯವೂ ಇಲ್ಲ. ಆದರೆ ಮುಂದಿನ ಗರ್ಭಾವಸ್ಥೆಗಳು ಸಾಮಾನ್ಯವಾಗಿ ಗರ್ಭಪಾತದಿಂದಲೋ ಸತ್ತಮಗುವಿನ ಜನನದಿಂದಲೋ ಅಥವಾ ಹುಟ್ಟಿದ ಮಗು ರಕ್ತಹೀನತೆ ಕಾಮಾಲೆಗಳ ತೀವ್ರತೆಯಿಂದ ಸುಮಾರು ಒಂದು ವಾರದಲ್ಲೇ ಮೃತವಾಗುದರಿಂದಲೋ ಪರ್ಯವಸಾನವಾಗುತ್ತದೆ. ಹುಟ್ಟಿದ ಶಿಶುವಿನ ರಕ್ತವನ್ನೆಲ್ಲ ತೆಗೆದು ಅದರ ದೇಹಕ್ಕೆ ಒಗ್ಗುವ ಬೇರೆ ರಕ್ತವನ್ನು ತುಂಬಿ ಶಿಶು ಜೀವಂತವಾಗಿರುವಂತೆ ಮಾಡಲು ಪ್ರಯತ್ನಿಸುತ್ತಾರೆ. ಶಿಶು ಗರ್ಭದಲ್ಲಿ ಇರುವಾಗಲಾದರೂ ಈ ಪ್ರಯೋಗ ಮಾಡಬಹುದು. ಶಿಶುವಿಗೆ ಮಾತ್ರವಲ್ಲದೆ ಈ ಪರಿಸ್ಥಿತಿ ತಾಯಿಗೂ ಆನಾನುಕೂಲವಾಗಿರುತ್ತದೆ. ತಾಯಿಗೆ ಅರ್.ಎಚ್. ಧನಪಂಗಡದ ರಕ್ತವನ್ನು ಕೊಡುವಂತಿಲ್ಲ. ಪರಿಸ್ಥಿತಿಯ ಅರಿವಿಲ್ಲದೆ ಹಾಗೇನಾದರೂ ಕೊಟ್ಟರೆ, ತಾಯಿಯ ಜೀವಕ್ಕೆ ಅಪಾಯವಾಗಬಹುದು. ಕ್ಷಯರೋಗ ತಾಯಿಗೆ ಮಾರಕವಾಗಬಹುದು. ಲೈಂಗಿಕ ರೋಗಗಳು ಶಿಶುವಿಗೆ ಮಾರಕವಾಗಿರುತ್ತವೆ. ಮಾತ್ರಪಿಂಡ ರೋಗಗಳು ಗರ್ಭಾವಸ್ಥೆಯ ವಿಷಮಪರಿಸ್ಥಿತಿಗಳೂ ತಾಯಿ ಮಗು ಇಬ್ಬರಿಗೂ ಮಾರಕವಾಗಿತ್ತವೆ. ಕೀಲು ಗಂಟು ನೋವು ಇರುವವರಿಗೆ ಗರ್ಭಾವಸ್ಥೆಯ ಕಾಲದಲ್ಲಿ ಯೋನಿಯಿಂದ ರಕ್ತಸ್ರಾವವಾಗಬಹುದು. ಇದು ಗರ್ಭಪಾತದ ಚಿಹ್ನೆ ಇಲ್ಲವೇ ಕಷ್ಟ ಪ್ರಸವದ ಚಿಹ್ನೆಯಾಗಿದ್ದು ಎಚ್ಚರಿಕೆ ತೆಗೆದುಕೊಳ್ಳಬೇಕಾದ ಪ್ರಸಂಗವಾಗಿರುತ್ತದೆ. ಗರ್ಭಾವಸ್ಥೆಯಲ್ಲಿ ಅವಳಿತ್ರಿವಳಿ ಮಕ್ಕಳಿರುವ ಸಾಧ್ಯತೆ ಅಪರೂಪವೇನಲ್ಲ, ಆಂಡಾಶಯದಿಂದ ಒಂದು ಕಾಲದಲ್ಲಿ ಒಂದೇ ಆಂಡಾಣು ವೃದ್ಧಿಯಾಗಿ ಹೊರಬಿಳುವ ಬದಲು ೨-೩ ಅಂಡಾಣುಗಳು ಏಕಕಾಲಿಕವಾಗಿ ಹೊರಬಿಳುವುದರಿಂದ ಅವಳಿತ್ರಿವಳಿಗಳಾಗುವ ಸಂಭಾವ್ಯತೆ ಉಂಟಾಗುತ್ತದೆ, ಭ್ರೂಣಾಣು ಬೆಳೆದು ಒಂದು ಶಿಶುವಾಗುವ ಬದಲು, ಪ್ರಾರಂಭದಲ್ಲಿ ಭ್ರೂಣಾಣು ಇಬ್ಭಾಗವಾದಾಗ ಆ ಎರಡೂ ಬೇರೆ ಬೇರೆ ಶಿಶುಗಳಾಗಿ ಬೆಳೆಯುವುದರಿಂದಲೂ ಅವಳಿ ಸ್ಥಿತಿಗೆ ಕಾರಣವಾಗಿದೆ. ಆದರೆ ಕೆಲವರಲ್ಲಿ ಕೆಲವು ಸಲ ಮಾತ್ರ ಹೀಗೆ ಏಕೆ ಆಗುತ್ತದೆ ಎನ್ನುವುದು ಗೊತ್ತಿಲ್ಲ. ಗರ್ಭಾವಸ್ಥೆಯಲ್ಲಿ ಭ್ರೂಣ ಸರಿಯಾಗಿ ಬೆಳೆಯದೆ ಕಾರಣಾಂತರದಿಂದ ಅಕ್ರಮ ಬೆಳೆವಣಿಗೆಯಾಗಿ ಅಂಗವಿಕಲವಾದ ಮಗು ಹುಟ್ಟಬಹುದು. ಸ್ವಲ್ಪ ಕಾಲದ ಹಿಂದೆ ಥಾಲಿಡೋಮೈಡ್ ಎಂಬ ವೇದನಾಶಕ ಔಷಧಿಯನ್ನು ಗರ್ಭಿಣಿಯರು ಸೇವಿಸುವ ರೂಢಿ ಇದ್ದಾಗ ಇಂತ ವ್ಯತ್ಯಯಗಳು ಉದ್ಭವಿಸಿ ಅನೇಕ ಊನಗಳುಳ್ಳ ಶಿಶುಗಳ ಜನನವಾಗುತಿತ್ತು. ಗರ್ಭಾವಸ್ಥೆಯ ಕಾಲದಲ್ಲಿ ತಾಯಿಗೆ ರೂಬೆಲ್ಲ ಎಂಬ ಸೋಂಕಿನ ರೋಗ ಉಂಟಾದರೂ ಹೀಗೆ ಭ್ರೂಣದಲ್ಲಿ ಅಕ್ರಮ ಬೆಳೆವಣಿಗೆ ಮತ್ತು ಅಂಗವಿಕಲತೆ ಕಂಡುಬರುತ್ತವೆ. ಗರ್ಭಾವಸ್ಥೆಯಲ್ಲಿ ಸ್ತ್ರಿ ಆಗಾಧ ವಿಕಿರಣಪಟುತ್ವಕ್ಕೆ ಒಳಗಾದಾಗಲೂ ಇಂತಹ ಅಕ್ರಮಗಳುಂಟಾಗುತ್ತವೆ. ೧೯೪೫ರಲ್ಲಿ ಜಪಾನಿನ ಹಿರೊಷಿಮ, ನಾಗಸಾಕಿಗಳಲ್ಲಿ ದ್ವಿತೀಯ ಮಹಾಯುದ್ಧ ಕಾಲದಲ್ಲಿ ಪ್ರಥಮವಾಗಿ ಉಪಯೋಗಿಸಿದ ಪರಮಾಣು ಬಾಂಬಿನ ಸ್ಪೋಟನೆಯಿಂದಾಗಿ ಆಗಾಧ ವಿಕಿರಣಪಟುತ್ವಕ್ಕೆ ತುತ್ತಾಗಿ ಜನಿಸಿದ ಸಹಸ್ರಾರು ಅಂಗವಿಕಲ ಮಕ್ಕಳನ್ನು ಯಾರೂ ಮರೆಯಲಾರದು. ಗರ್ಭಾವಸ್ಥೆಯ ಅವಧಿ ೪೦ ವಾರಗಳು ಎಂದು ಮೇಲೆ ವಿವರಿಸಿದ್ದರೂ ಶೇ.೫-ಶೇ.೮ ರಷ್ಟು ಪ್ರಸಂಗಗಳಲ್ಲಿ ಅವಧಿಗೆ ಮುಂಚಿತವಾಗಿಯೇ ಗರ್ಭಾವಸ್ಥೆ ಕೊನೆಗೊಂಡು ಅವಸರದ ಹೆರಿಗೆ ಆಗುತ್ತದೆ. ಹೀಗೆ ಅವಸರವಾಗಿ ಹುಟ್ಟಿದ ಅನೇಕ ಮಕ್ಕಳು ಸತ್ತೇ ಹುಟ್ಟುತ್ತವೆ. ಇಲ್ಲವೇ ಶೀಘ್ರದಲ್ಲೇ ಸತ್ತು ಹೋಗುತ್ತವೆ. ಗರ್ಭಾವಸ್ಥೆಯ ಅವಧಿ ೨೮ ವಾರಗಳನ್ನು ಮೀರಿ ೪೦ ವಾರಗಳನ್ನು ಸಮೀಪಿಸಿದಂತೆ ಹುಟ್ಟುವ ಮಕ್ಕಳು ಜೀವಂತವಾಗಿರುವ ಸಂಭಾವ್ಯತೆ ಹೆಚ್ಚುತ್ತದೆ. ಗರ್ಭಾವಸ್ಥೆಯ ಅವಧಿ ಈ ಮಿತಿಯಲ್ಲಿ ಎಷ್ಟೇ ಇರಲಿ, ಹುಟ್ಟಿದ ಮಗು ೨ ಕೆ.ಜಿ.ಗಿಂತ ಕಡಿಮೆ ಇದ್ದರೆ ಅದನ್ನು ಅವಸರದಲ್ಲಿ ಹುಟ್ಟಿದ ಮಗು ಎಂದು ಪರಿಗಣಿಸಬೇಕೆಂದು ಎಲ್ಲ ದೇಶದವರೂ ಒಪ್ಪಿದ್ದಾರೆ. ಗರ್ಭಾವಸ್ಥೆಯ ಅಕಾಲಿಕ ಅಂತ್ಯ ತಾಯಿಯ ದೇಹದಾರ್ಢ್ಯ, ಪೌಷ್ಟಿಕಸ್ಥಿತಿ ಇವನ್ನು ಅವಲಂಬಿಸಿವೆ. ಕುಳ್ಳ ರೋಗಿಷ್ಠ ಹೆಂಗಸು, ಎತ್ತರವಾಗಿ ಆರೋಗ್ಯವಾಗಿರುವ ಹೆಂಗಸಿಗಿಂತ ೬ರಷ್ಟು ಹೆಚ್ಚು ಸಂದರ್ಭಗಳಲ್ಲಿ ಗರ್ಭಾವಸ್ಥೆಯ ಅಕಾಲಿಕ ಅಂತ್ಯವನ್ನು ತೋರುತ್ತಾಳೆ. (ಎಸ್.ಆರ್.ಆರ್) ಗರ್ಭಾವಸ್ಥೆ (ಪ್ರಾಣಿಗಳಲ್ಲಿ) : ಮರಿಗಳಿಗೆ ಮೊಲೆ ಹಾಲೂಡಿಸುವ ಪ್ರಾಣಿಗಳನ್ನು, ಎಂದರೆ ಸಸ್ತನಿಗಳನ್ನು, ಕುರಿತು ಗರ್ಭಾವಸ್ಥೆ ಎಂಬ ಪದದ ಬಳಕೆ ಉಂಟು. ಇಂಥ ಪ್ರಾಣಿಗಳಲ್ಲಿ ಸಹ ಗರ್ಭಾವಸ್ಥೆಯ ಅವಧಿಯನ್ನು ಮನುಷ್ಯರಲ್ಲಿ ವ್ಯಾಖ್ಯಾನಿಸಲಾಗಿದೆ: ಗರ್ಭದಲ್ಲಿ ಭ್ರೂಣವುಂಟಾಗಿ ಪಿಂಡವಾಗಿ ಬೆಳೆದು ಅದು ಮರಿಯಾಗಿ ಹುಟ್ಟುವವರೆಗಿನ ಕಾಲ. ಯಾವುದೇ ಪ್ರಾಣಿಯಲ್ಲಿ ನಿಷೇಚನ ಯಾವಾಗ ನಡೆಯಿತು ಎಂಬುದನ್ನು ಕರಾರುವಾಕ್ಕಾಗಿ ಹೇಳುವುದು ಕಷ್ಟ. ಆದ್ದರಿಂದ ಇಂಥಲ್ಲಿ ಋತು ದಿನದಿಂದ ಲೆಕ್ಕಹಾಕಿ ಗರ್ಭಾವಧಿಯನ್ನು ನಿರ್ಧರಿಸಬೇಕು. ಒಂದೊಂದು ಪ್ರಾಣಿಯ ಗರ್ಭಾವಸ್ಥೆಯ ಕಾಲ ಓಂದೊಂದು ಎಂಬುದನ್ನು ಮುಂದಿನ ಯಾದಿಯಲ್ಲಿ ನೋಡಬಹುದು. ಪ್ರಾಣಿಯ ಹೆಸರು ಗಬ್ಬದ ಅವಧಿ (ದಿನಗಳಲ್ಲಿ) ಕತ್ತೆಕಿರುಬ ... ೧೧೦ ಮೀನ್ಚುಳ್ಳಿ ... ೩೩೮-೩೫೮ ಮುಳ್ಳು ಹಂದಿ - ಯುರೋಪಿನ್ ... ೩೫-೪೦ ಹಂದಿ ಮೀನು ... ೨೭೬ ೧ ಎಮ್ಮೆ ... ೨೭೫ ೨ ಕಾಡೆಮ್ಮೆ ... ೨೭೦ ೩ ದನ ... ೨೮೪ ( ೨೬೦-೩೦೦) ೪ ಕುರಿ ... ೧೪೮ (೧೪೩-೧೫೯) ೫ ಮೇಕೆ ... ೧೫೧ (೧೪೫-೧೫೭) ೬ ಕುದುರೆ ... ೩೩೭ (೩೨೦-೩೫೬) ೭ ಕತ್ತೆ ... ೩೬೫ ೮ ಒಂಟೆ ... ೪೧೦ (೩೭೦-೪೪೦) ೮ಎ ಹಂದಿ ... ೧೧೩ (೧೧೦-೧೨೦) ೯ಬಿ ಖಡ್ಗಮೃಗ (ಆಫ್ರಿಕದ) ... ೫೩೦-೫೫೦ ೯ ಜಿರಾಫೆ ... ೩೯೫-೪೨೫ ೯ಎ ನೀರಾನೆ ... ೨೩೭-೨೫೦ ೧೦ ಜಿಂಕೆ ... ೧೯೭-೨೨೦ ೧೧ ಹಿಮ ಸಾರಂಗ ... ೨೧೫-೨೨೪ ೧೨ ಬೆಕ್ಕು ನಾಯಿ ... ೬೩ (೫೫-೬೯) ೧೫ ಕಾಡು ಬೆಕ್ಕು ... ೯೨-೯೫ ೧೬ ಚಿರತೆ ... ೯೦-೯೩ ೧೭ ಸಿಂಹ ... ೧೦೮-(೧೦೫-೧೧೩) ೧೮ ಹುಲಿ ... ೧೧೩-೧೦೫ ೧೯ ರಕೂನ್ ... ೬೩ ೧೯ಎ ಸೀಲ್ ಪ್ರಾಣಿ ( ಉತ್ತರದ ತುಪ್ಪುಳು ಪ್ರಾಣಿ ) ೩೫೦ ೨೦ ಇಲಿ ... ೨೨ (೨೧.೫-೨೨) ೨೦ ನೀರು ನಾಯಿ-ಕೆನಡ ... ೬೨ ೨೧ ಕರಡಿ ... ೨೧೦ ೨೧ ಗಿನಿ ಹಂದಿ ... ೬೮ ೨೨ ಮೊಲ ... ೩೮ ೨೩ ತಿಮಿಂಗಿಲ ... ೩೬೫ (೩೬೦-೪೮೦) ೨೪ ಆನೆ ... ೬೦೦-೬೬೦ ೨೫ ಆನೆ-ಏಷ್ಯಾದ್ದು ... ೬೪೫ (೫೨೦-೭೩೦) ೨೬ ಕೋತಿ ... ೨೧೦