ಪುಟ:Mysore-University-Encyclopaedia-Vol-6-Part-3.pdf/೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಗಸಗಸೆ ಗಿಡ - ಗಸ್ಟೇವಸ್ ಲಾಡ್೯ ಕ್ಯಾನಿಂಗ್ ... ೧೮೫೬-೧೮೬೨ ಲಾಡ್೯ ಎಲ್ಗಿನ್ 1 ... ೧೮೬೨-೧೮೬೩ ಲಾಡ್೯ ಲಾರೆನ್ಸ್ ... ೧೮೬೪-೧೮೬೯ ಲಾಡ್೯ ಮೇಯೊ ... ೧೮೬೯-೧೮೭೨ ಲಾಡ್೯ ನಾಕ೯ಬ್ರೂಕ್ ... ೧೮೭೨-೧೮೭೬ ಲಾಡ್೯ ಲಿಟನ್ ೧ ... ೧೮೭೬-೧೮೮೦ ಲಾಡ್೯ ರಿಪನ್ ... ೧೮೮೦-೧೮೮೪ ಲಾಡ್೯ ಡಫರಿನ್ ... ೧೮೮೪-೧೮೮೮ ಲಾಡ್೯ ಲ್ಯಾನ್ಸ್ ಡೌನ್ ... ೧೮೮೮-೧೮೯೪ ಲಾಡ್೯ ಎಲ್ಗಿನ್ 1 ... ೧೮೯೪-೧೮೯೯ ಲಾಡ್೯ ಕರ್ಜನ್ ... ೧೮೯೯-೧೯೦೪ ಲಾಡ್೯ ಮಿಂಟೊ 11 ... ೧೯೦೫-೧೯೧೦ ಲಾಡ್೯ ಹಾಡಿ೯೦ಜ್ 11 ... ೧೯೧೦-೧೯೧೬ ಲಾಡ್೯ ಜೆಮ್ಸ್ ಫಡ್೯ ... ೧೯೧೬-೧೯೨೧ ಲಾಡ್೯ ರೀಡಿಂಗ್ ... ೧೯೨೧-೧೯೨೫ ಲಾಡ್೯ ಇರ್ವಿನ್ ... ೧೯೨೫-೧೯೩೧ ಲಾಡ್೯ ವಿಲಿಂಗ್ಡನ್ ... ೧೯೩೧-೧೯೩೫ ಲಾಡ್೯ ಲೆನ್ಲಿತ್ ಗೊ ... ೧೯೩೬-೧೯೪೩ ಲಾಡ್೯ ವೇವೆಲ್ ... ೧೯೪೩-೧೯೪೭ ಲಾಡ್೯ ಮೌಂಟ್ ಬ್ಯಾಟನ್ ... ೧೯೪೭-೧೯೪೮ ಸಿ. ರಾಜಗೋಪಾಲಚಾರಿ ... ೧೯೪೮-೧೯೫೦ ""ಗಸೆ ಗಿಡ : ಪಪಾವರೇಸೀ ಕುಟುಂಬಕ್ಕೆ ಸೇರಿದ ಸುಪ್ರಸಿದ್ಧ ಮೂಲಿಕೆ ಸಸ್ಯ. ಪಯಾ೯ಯ ನಾಮ ಆಫೀಮುಗಿಡ. ಪಪೇವರ್ ಸಾಮ್ನಿಫೆರಂ ವೈಜ್ಞಾನಿಕ ನಾಮ. ಸಾಮಾನ್ಯ ಬಳಕೆಯ ಇಂಗ್ಲಿಷ್ ಹೆಸರು ಓಪಿಯಂ ಪಾಪಿ ಅಥವಾ ವೈಟ್ ಪಾಪಿ. ಬಹಳ ಹಿರಿದಿನ ಕಾಲದಿಂದ ಮೆಡಿಟರೇನಿಯನ್ ಪ್ರದೇಶಗಳು, ಮಧ್ಯ ಪ್ರಾಚ್ಯ, ಭಾರತ, ರಷ್ಯ ದೇಶಗಳಲ್ಲಿ ಇದರ ವ್ಯವಸಾಯ ಇದೆ. ಪಶ್ಚಿಮ ಯೂರೋಪ್ ದೇಶಗಳಲ್ಲಿ ಇದನ್ನು ಗಸಗಸೆ ಬೀಜಗಳಿಗಾಗಿಯೊ ಪೂರ್ವದೇಶಗಳಲ್ಲಿ ಅದರಲೂ ಭಾರತ, ಇರಾನ್, ಟರ್ಕಿಗಳಲ್ಲಿ ಆಫೀಮಿಗಾಗಿಯೂ ಹೆಚ್ಚಾಗಿ ಬೆಳೆಸಲಾಗುತ್ತಿದೆ. ಭಾರತ ದಲ್ಲಿ ಇದನ್ನು ಬೀಜ ಮತ್ತು ಅಫೀಮಿಗಾಗಿ ಸುಮಾರು 16ನೆಯ ಶತಮಾನದಿಂದ ಬೆಳೆಸುತ್ತಿದ್ದಾರೆ. ಅಫೀಮಿನ ಬೇಸಾಯ. ಮಾರಾಟ, ಬಳಕೆಗಳೆ ಬಗ್ಗೆ ಕಟ್ಟುನಿಟ್ಟಾದ ನಿಬ೦ಧನೆಗಳಿವೆ. ಸಕಾ೯ರದ ಅನುಮತಿ ಇಲ್ಲದೆ ಗಸಗಸೆ ಗಿಡವನ್ನು ಬೆಳೆಸಲಾಗದು. ಉತ್ತರ ಪ್ರದೇಶ. ಮಧ್ಯಪ್ರದೇಶ. ರಾಜಸ್ತಾನ. ಬಿಹಾರಗಳಲ್ಲಿ ಹೆಚ್ಚಾಗಿಯೂ ಕಾಶ್ಮೀರದಲ್ಲಿ ಅಲ್ಪಸ್ವಲ್ಪವಾಗಿಯೂ ಇದನ್ನು ಬೆಳೆಸುತ್ತಾರೆ. ಹಿಮಾಚಲ ಪ್ರದೇಶದಲ್ಲಿ ಇದರ ವ್ಯವಸಾಯವನ್ನು ನಿಷೇಧಿಸಲಾಗಿದೆ. ಗಸಗಸೆ ಗಿಡದ ಬೇಸಾಯ. ಇದರಿಂದ ಅಫೀಮನ್ನು ತೆಗೆಯುವ ವಿಧಾನ ಮತ್ತು ಅಫೀಮಿನ ಬಳಕೆಗಳನ್ನು ಕುರಿತ ವಿವರಗಳಿಗೆ ನೋಡಿ-ಆಫೀಮು. ಗಸಗಸೆ ಗಿಡ ವಾಷಿ೯ಕ ಬಗೆಯದು. ಇದು ಸುಮಾರು 61ಸೆಂಮೀನಿ೦ದ 1ಮೀ-22ಸೆ.ಮೀ ಎತ್ತರಕ್ಕ ಬೆಳೆಯುತ್ತದೆ. ಕಾಂಡ ನೀಳವಾಗಿ ಬೆಳೆಯುವುದು. ಇದರ ಮೇಲ್ಭಾಗದಲ್ಲಿ ವಿರಳವಾಗಿ ಕೊಂಬೆಗಳು ಹರಡಿರುತ್ತವೆ. ಎಲೆಗಳ ಆಕಾರ ದೀಘ೯ ಅಂಡದಂತೆ. ಆಂಚು ಸೀಳುಗೊಂಡಿದೆ. ಹೂಗಳು ಗಾತ್ರದಲ್ಲಿ ದೊಡ್ಡವು. ಇವುಗಳ ಭಾರಕ್ಕೆ ಕೊಂಬೆಗಳು ಜಗ್ಗಿ ತೂಗಾಡುತ್ತಿರುತ್ತವೆ. ಹೂಗಳ ಬಣ್ಣ ಕೆಂಪು, ಬಿಳಿ. ನೇರಳೆ. ನೀಲಿ-ಹೀಗೆ ವೈವಿಧ್ಯಮಯ. ಅಂಡಾಶಯ ಗುಂಡಗೆ ದಪ್ಪವಾಗಿದೆ. ಶಲಾಕೆ ಇಲ್ಲ. ಆಂಡಾಶಯದ ಮೇಲ್ಭಾಗದಲ್ಲಿ ಛಾವಣಿಯಂಥ ಶಲಾಕಾಗ್ರ ಉಂಟು. ಕಾಯಿಯ ಒಳಗೆ ಆಸಂಖ್ಯಾತ ಬೀಜಗಳಿವೆ. ಇವೇ ಗಸಗಸೆ. ಬೀಜಗಳ ಬಣ್ಣ ಕಪ್ಪು ಇಲ್ಲವೆ ಬಿಳಿ. ಆಕಾರ ಮೂತ್ರಪಿಂಡದಂತೆ. ಕಾಯಿಗಳು ಬಲಿತ ಮೇಲೆ ತುದಿಯಲ್ಲಿ ಸಣ್ಣ ಸಣ್ಣ ರಂಧ್ರಗಳು ಉಂಟಾಗಿ ಅವುಗಳ ಮೂಲಕ ಬೀಜಗಳು ಹೊರಬರುತ್ತವೆ. ಗಾಳಿಗೆ ಕಾಯಿ ಅಲುಗಾಡಿದಾಗ ಬೀಜಗಳು ಸ್ವಲ್ಪಸ್ವಲ್ಪವಾಗಿ ಹೊರಬಂದು ಚದರುತ್ತವೆ. ಬೀಜಗಳಲ್ಲಿ ಪೌಷ್ಟಿಕಾ೦ಶಗಳು ಹೇರಳವಾಗಿವೆ. ಬೀಜಗಳ ರಾಸಾಯನಿಕ ಸಂಯೋಜನೆ ಈ ರೀತಿ ಇದೆ: ಶೇ.4.3-ಶೇ.5.2 ತೇವಾಂಶ. ಶೇ.22.3- ಶೇ.24.4 ಪ್ರೋಟೀನು. ಶೇ.1.03- ಶೇ.1.45 ಸುಣ್ಣ, ಶೇ.0.79-ಶೇ.0.89 ರಂಜಕ, ಶೇ.8.5- ಶೇ.11.1 ಕಬ್ಬಿಣ ಮತ್ತು ಥಯಾಮಿನ್. ರೈಬೊಪ್ಲೇವಿನ್. ನಿಕೊಟಿನಿಕ್ ಆಮ್ಲ ಮುಂತಾದ ವಿಟಮಿನ್ನುಗಳು ಮ್ಯಾಂಗನೀಸ್. ತಾಮ್ರ ಮೆಗ್ನೀಸಿಯಂ. ಪೊಟ್ಯಾಸಿಯ೦. ಸತು ಮುಂತಾದ ಖನಿಜಾಂಶಗಳೂ ಲಘು ಪರಿಮಾಣಗಳಲ್ಲಿರುತ್ತವೆ. ಅಲ್ಲದೆ ಲೆಸಿತಿನ್. ಅಕ್ಸ್ಯಾಲಿಕ್ ಅಮ್ಲ. ಪೆ೦ಟಾಸಾನ್ಸ್ ಎ೦ಬ ವಸ್ತುಗಳೂ ಡಯಾಸ್ಟೇಸ್. ಎಮಲ್ಸಿನ್. ಲೈಪೇಸ್. ನ್ಸೂಕ್ಲಿಯಸ್ ಮುಂತಾದ ಕಿಣ್ವಗಳೂ ಇವೆ. ಮತ್ತುಬರಿಸುವ ಅಂಶವಾದ ನಾರ್ಕೊಟಿನ್ ಅತ್ಯಲ್ಪ ಪರಿಮಾಣದಲ್ಲಿದೆ. ಅನೇಕ ಬಗೆಯ ಖಾದ್ಯ ವಸ್ತುಗಳ ತಯಾರಿಕೆಯಲ್ಲಿ ಬೀಜಗಳನ್ನು ಬಳೆಸುತ್ತಾರೆ. ಬೀಜಗಳಿಗೆ ಔಷಧೀಯ ಗುಣಗಳೂ ಇವೆ. ಬೀಜಕ್ಕೆ ಪುಷ್ಟಿದಾಯಕ ಮತ್ತು ತ೦ಪುಕಾರಕವೆ೦ದು ಹೆಸರುಂಟು. ದೇಹಬಾಗಗಳನ್ನು ಮೃದುಗೊಳಿಸುವ ಲೇಪವಾಗಿಯೂ ಮಲಬದ್ಧತೆಯ ನಿವಾರಕವಾಗಿಯೂ ಇದನ್ನು ಬಳಸುವುದಿದೆ. ಗಸಗಸೆಯ ಭೀಜಗಳಿಂದ ಎಣ್ಣೆಯನ್ನು ತೆಗೆಯುತ್ತಾರೆ. ಹಸಿಬೀಜಗಳನ್ನು ಗಾಣಕ್ಕೆ ಒಡ್ಡಿ ಇಲ್ಲವೆ ಬೇಯಿಸಿ ಎಣ್ಣೆ ತೆಗೆಯೆಬಹುದು. ಎಣ್ಣೆಯೆನ್ನು ಶುದ್ಧ ಮಾಡಿ ಅಡುಗೆಗೆ ಉಪಯೋಗಿಸಬಹುದು. ಎಣ್ಣೆಗೆ ಬಣ್ಣವಾಗಲಿ ವಾಸನೆಯಾಗಲಿ ಇಲ್ಲ. ರುಚಿ ಕೊಂಚ ಮಟ್ಟಿಗೆ ಬಾದಾಮಿ ರುಚಿಯನ್ನು ಹೋಲುತ್ತದೆ. ಎಣ್ಣೆಯನ್ನು ಸಾಬೂನು. ಡಾಲ್ಡ. ವಾರ್ನಿಷ್ ಬಣ್ಣ. ಚಿತ್ರ ಲೇಖನದ ಬಣ್ಣಗಳ ತೆಯಾರಿಕೆಯಲ್ಲಿ ಬಳಸುತ್ತಾರೆ. ಎಣ್ಣೆ ತೆಗೆದ ಮೇಲೆ ಉಳಿದ ಹಿಂಡಿ ಸಿಹಿಯಾಗಿ ಪುಷ್ಟಿದಾಯಕವಾಗಿರುತ್ತದೆ. ಇದನ್ನು ತಿನ್ನುವುದುಂಟು. ದನಕರುಗಳಿಗೆ ಮೇವಾಗಿ ಉಪಯೋಗಿಸುತ್ತಾರೆ. ಎಳೆಯ ಗಸಗಸೆ ಗಿಡವನ್ನು ಸೊಪ್ಪಿನಂತೆ ತರಕಾರಿಯಾಗಿ ಬಳಸುವುದುಂಟು. ಹೂಗಳಿಂದ ಬಂದು ವಿಧವಾದ ಪಾಕವನ್ನು ತಯಾರಿಸುತ್ತಾರೆ. ಕಾಯಿಗಳಿಂದ ಒ೦ದು ಬಗೆಯ ಮಾದಕ ಪಾನೀಯವನ್ನು ತಯಾರಿಸುತ್ತರೆ. ಗಾಯಗಳಿಗೂ ಊತಗಳಿಗೂ ಇದರ ಎಲೆಯನ್ನು ಕಟ್ಟುತ್ತಾರೆ. ಗಸಗಸೆ ಹಣ್ಣಿನ ಮರ : ಟೀಲಿಯೇಸೀ ಕುಟುಂಬಕ್ಕೆ ಸೇರಿದ ಒಂದು ಮಧ್ಯಮಗಾತ್ರದ ಮರ. ಇದರ ಹಣ್ಣಿನಲ್ಲಿ ಗಸಗಸೆ ಬೀಜವನ್ನು ಹೋಲುವ ನೂರಾರು ಬೀಜಗಳು ಇರುವುದರಿಂದ ಇದಕ್ಕೆ ಈ ಹೆಸರು. ಇದನ್ನು ಸಾಮಾನ್ಯ ಬಳಕೆಯ ಇಂಗ್ಲಿಷಿನಲ್ಲಿ ಸಿಂಗಪುರ ಚೆರಿ ಅಥವಾ ಜಪಾನೀಸ್ ಚೆರಿ ಎನ್ನಲಾಗುತ್ತದೆ. ಮುಂಟಿಂಜಿಯ ಕ್ಯಾಲಬುರ ಶಾಸ್ತ್ರೀಯ ನಾಮ. ಇದು ಮುಲತಃ ದಕ್ಷಿಣ ಅಮೆರಿಕದ್ದು. ಉಷ್ಣವಲಯ ದೇಶಗಳಲ್ಲೆಲ್ಲ ಇದನ್ನು ಹಣ್ಣಿಗಾಗಿ ಮತ್ತು ಉದ್ಯಾನವನಗಳಲ್ಲಿ ಆಲಂಕಾರಕ್ಕಾಗಿ ಬೆಳೆಸುತ್ತಾರೆ. ಎಲ್ಲ ದಿಕ್ಕುಗಳಲ್ಲಿಯೂ ಹರಡಿ ಬೆಳೆಯುವ ಕೊಂಬೆಗಳು, ಭಜಿ೯ಯಾಕಾರದ ಹಾಗೂ ಗರಗಸ ಅಂಚುಳ್ಳ ಎಲೆಗಳು ಮತ್ತು ಸಣ್ಣಗಾತ್ರದ ಬಿಳಿಯಬಣ್ಣದ ಹೂಗಳು ಇದರ ಮುಖ್ಯ ಲಕ್ಷಣಗಳಲ್ಲಿ ಕೆಲವು. ಹಣ್ಣು ಬೆರಿ ಮಾದರಿಯದು. ಇದು ಗುಂಡಾಗಿಯೂ ನುಣುಪಾಗಿಯೂ ಇದೆ. ಇದರ ಬಣ್ಣ ಕೆಂಪು. ರುಚಿ ಸಿಹಿ. ಹಣ್ಣಿನಲ್ಲಿ ರಸಭರಿತ ತಿರುಳಿದೆ. ಇದರಿಂದ ಮುರಬ್ಬ ತಯಾರಿಸೆಬಹುದು. ಗಸಗಸೆ ಹಣ್ಣಿನ ಮರವಮ್ನ ಕಾಂಡತುಂಡುಗಳಿಂದ ವೃದ್ಧಿಸುತ್ತಾರೆ. ಮರಳುಭೂಮಿ ಇದರ ಬೆಳವಣಿಗೆಗೆ ಉತ್ತಮ. ಈ ಮರದ ಎಲೆಗಳಿಂದ ಒಂದು ಬಗೆಯ ಕಷಾಯ ಮಾಡುವುದುಂಟು. ಹೂಗಳನ್ನು ತಲೆನೋವು ಮತ್ತು ನೆಗಡಿಗೆ ಔಷಧಿಯಾಗಿ ಉಪಯೋಗಿಸುತಾರೆ. ಇದರ ತೊಗಟೆಯಿಂದ ನಾರು ತೆಗೆದು ಹಗ್ಗಗಳನ್ನು ತಯುರಿಸುವುದಿದೆ. (ಎನ್) ಗಸ್ಟೇವಸ್ : ಸ್ವಿಡನಿನ ದೊರೆಗಳ ಹೆಸರು. ಗಸ್ಟೇವಸ್ 1 ವೇಸ : 1496-1560. ಸ್ವೀಡನನ್ನು ಡೆನ್ಮಾರ್ಕಿನಿಂದ ಪ್ರತ್ಯೇಕಿಸಿ ಅಲ್ಲಿ ಸ್ವತಂತ್ರ ರಾಜಮನೆತನವನ್ನು ಸ್ಥಾಪಿಸಿದ. ಈತ 15ನೆಯ ಶತಮಾನದ ಕೊನೆಯಲ್ಲಿ ಆಲ್ಲಿಯೆ ಪ್ರಸಿದ್ಧ ಮನೆತನವೊಂದರಲ್ಲಿ ಹುಟ್ಟಿದ. ಈತನ ಪೂರ್ವಿಕರು ಸ್ಕಾಂಡಿನೇವಿಯದ ರಾಜಕೀಯದಲ್ಲಿ ಆಸಕ್ತಿ ಹೊಂದಿದ್ದರು. ಸ್ವೀಡನಿನ ರೀಜೆಂಟರಾಗಿದ್ದ ಸ್ಟೂರರ