ಪುಟ:Mysore-University-Encyclopaedia-Vol-6-Part-3.pdf/೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಬಳಸಿಕೊಳ್ಳುವ ಸ್ವಾತಂತ್ರ್ಯ ಸಾಹಿತಿಗೆ ಅತ್ಯಗತ್ಯವೆಂಬುದನ್ನೂ ವಿದ್ವಾಂಸರಾದವರು ಅಲಕ್ಷಿಸಿಲ್ಲ.ನವ್ಯಕವಿಗಳಂತೂ ಗ್ರಾಮ್ಯ,ಒರಟು,ಅಶ್ಲೀಲ,ಅನ್ಯದೇಶಿಯ,ಯಂತ್ರತಂತ್ರದ ಪರಿಭಾಷೆ ಎಲ್ಲವನ್ನೂ ನಿರ್ವಂಚನೆಯಿಂದ ಆಡಿಬಿಟ್ಟಿದ್ಡಾರೆ.

ಎಂದರೆ,ಪದ್ಯಕ್ಕೂ ಗದ್ಯಕ್ಕೂ ಅಂತರವೇ ಇಲ್ಲವೆ?ಒಂದರಲ್ಲಿ ಇರುವ ಕವ್ಯವನ್ನು ಇನ್ನೊಂದಕ್ಕೆ ಬದಲಾಯಿಸಿದರೆ ಎರಡೂ ಒಂದೇ ತೆರದ ರಾಸಾಸ್ವಾದವನ್ನೂ ಒದಗಿಸ ಬೇಕಲ್ಲವೆ ? ಕವಿ ತನ್ನ ಇಷ್ಟಬಂದಂತೆ ಅದನ್ನೂ ಇದ್ದನ್ನೂ ಕೈಹಿಡಿಯಬಹುದಲ್ಲವೆ? ಇದನ್ನು ಯಾರೂ ಒಪ್ಪಲಾರದು . ಹಾಗದರೆ ಎಲ್ಲಿದೆ ವ್ಯತ್ಯಸ? ಗದ್ಯಕ್ಕಿಂತ ಪದ್ಯ ಹೆಚ್ಚು ಸಂಕ್ಷಿಫ್ತ,ಹೆಚ್ಚು ಬಲಿಶ್ಟ,ಹೆಚ್ಚು ದ್ವನಿಯುಕ್ತ , ಹೆಚ್ಚು ಸುಂದರ-ಎಂದಿದ್ದಾರೆ.ರಾಗಾವೇಶವೂ ವಿಭಾವನೆಯ ತೀಕ್ಫ್ಣತೆಯೂ ಒಂದು ಮಟ್ಟವನ್ನು ಮೀರಿದರೆ ಆಗ ಭಾವರ್ತ ನಿರೂಪಣೆಗೆ ಪದ್ಯವೆ ಉಚಿತವೆಂದೂ ನುಡಿದಿದ್ದಾರೆ.ಹೀಗೆ ಸೂತ್ರ ಹೀಳುವ ಅಲಂಕಾರಶಾಸ್ತ್ರಾಘ್ನ್ಯರೂ ಎರಡರ ನಡುವೆ ಇರುವುದು ಭೇದಿಸಲಾಗದ ಕಲ್ಲುಗೋಡೆಯಲ್ಲ,ಆಚೆ ಈಚೆ ಎತ್ತಿ ಇಡಬಲ್ಲ ಬಿದಿರು ಬೇಲಿ-ಎಂಬುದಕ್ಕೆ ಸಮ್ಮತಿ ಸೂಚಿಸಿದ್ದಾರೆ.

ಛಂದಸ್ಸು,ಶೈಲಿ,ಶಬ್ಡಪುಂಜ-ಮೊದಲಾದವನ್ನು ಕೈಬಿಟ್ಟಮೇಲೆ,ಕಾವ್ಯಕ್ಕೆ ಕಾವ್ಯತ್ವನ್ನು ಅನುಗೂಡಿಸುವ ಅಂಶ ಯಾವುದು?ಇದನ್ನು ಕುರಿತು ಮೀಮಾಂಸೆ 19ನೆಯ ಶತಮಾನದ ಎರಡನೆಯ ಅರ್ಧದಲ್ಲಿ ಬೆಳೆಯುತ್ತ ಬಂತು . 20ನೆಯ ಶತಮಾನದಲ್ಲಿ ಅದು ಇನ್ನೂ ಹೆಚ್ಚಾಗಿ,ಮನಶಸ್ತ್ರದ ವಿಕಾಸದಿಂದ ಪುಶ್ಫಗೊಂಡು, ಗಹನವಾಯಿತು.

ಕವಿ ಮಾಡುವುದು ವಿಶಿ ವಾದೊಂದು ಕರ್ಮ;ಅದು ಒಂದು ಬಗೆಯ ಅನುಕರಣೆ ಎಂಬ ಸಿದ್ದಂತ ಪ್ರಾಚೀನ ಗ್ರೀಕರ ಕಾಲದಿಂದ ನಡೆದು ಬಂದು,ಮೆಚ್ಚಿಕೆಗೆ ಪಾತ್ರವಾಗಿತ್ತು. ಅದಕ್ಕೆ ಟಿಪ್ಪಣಿಯಾಗಿ,ಕಾವ್ಯ ನಮಗೆ ಕೊಡುವುದು ವಾಸ್ತವಿಕತೆಯನ್ನಲ್ಲ,ಅದರ ಹೂಲುವೆಯನ್ನು;ಅದ್ದರಿಂದ ಕಲ್ಪಿತಕಥೆಯೀ (ಫಿಕ್ಶನ್) ಕಾವ್ಯದ ಸಾರಸರ್ವಸ್ವ ಎಂಬ ಅನುಸಿದ್ದಾಂತವೂ ನಡೆದುಬಂತು.ಕವಿಯ ತನ್ನತನದ ಸೃಶ್ಟಿಕಾರ್ಯವನ್ನು ಅನುಕರಣೆಯೆನ್ನು- ವುದೂ ನಿಜಕ್ಕಿಂತ ನಿಜವೆಂಬುದು ಪ್ರಭಾವ ಬೀರುವ ಕಾವ್ಯ ವಸ್ತುವನ್ನು ಮಿಥ್ಯಾ ಕಲ್ಪನೆಯನ್ನು ವುದೂ ಸತ್ಯಕ್ಕೆ ದೂರವೆಂದು ನಿಸ್ಸಂದೇಹ.ಕವಿ ಎಸಗುವುದು ಅನುಕರಣವಲ್ಲ ಪ್ರತಿಚಿತ್ರಣ ಎಂದು ನಿಶ್ಜಯಿಸಿದ್ದ ಕಾಲವಿತ್ತು.ಮಾನವನಿಗೆ ಆದರ್ಶವಾಗಬಲ್ಲ ವ್ಯಕ್ತಗಳನ್ನೂ ಧೇಯಗಳನ್ನೂ ಪ್ರತಿಬಿಂಬಿಸಿ ಕಾವ್ಯ ಲೊಕೋಪಕಾರ ಮಾಡುತ್ತದೆ ಎಂಬ ನಂಬಿಕೆಯಿತ್ತು.ಕುರೊಪ ಕೀಲ್ತನ ಕೊಳಕುಗಳೂ ಕಾವ್ಯದಲ್ಲಿ ಪ್ರತಿಪಾದಿತವಾಗತೊಡಗಿದ ತರುವಾಯ,ಪ್ರತಿಚತ್ರಣವೆಂಬ ವಿವರಣೆಗೆ ಧಕ್ಕೆ ಉಂಟಾಯಿತು.ಭಾವ ಭಾವನೆಗಳನ್ನು ಕಾವ್ಯ ಹೂರಗಡಹುತುತ್ತದೆ ಎಂಬುದು ಸರ್ವರಿಗೂ ವೇದ್ಯವಾದ ಸಂಗತಿ.ಅದನ್ನು ಮನಗೈದು ವಾಕ್ಯವನ್ನು ಹಿಂದುಮುಂದಾಗಿ ತಿರುಗಿಸಿ ಕ್ರೋಚೆ ಭಾವಪ್ರದರ್ಶನ ಅಧವಾ ಅಭಿವ್ಯಕ್ತಿಯೆ ಕಾವ್ಯ ಎಂದು ಘೋಶಿಸಿದ.ಎಂದರೆ ಅಭಿವ್ಯಂಜಕತೆ ಸಾಕಷ್ಟು ತೀಕ್ಶ್ಣವಾಗಿರಬೇಕು.ಆದರೆ ಆ ತತ್ವವನ್ನು ವೆವರಿಸುವಾಗ ಆತನೂ ಆತನ ವ್ಯಾಖ್ಯಾನಕಾರರೂ ಪ್ರಕಾನವೆಂಬ ವ್ಯವಹಾರಕ್ಕಿಂತಲೂ ಪ್ರಕಾಶಿತ ಪದಾರ್ಥದ ಮೇಲೆ ತಮ್ಮ ಲಕ್ಷ್ಯವನ್ನು ಹೆಚ್ಚು ಹೆಚ್ಚಾಗಿ ಇಡುತ್ತ ಹೂದರೆ (ನೋಡಿ-ಕ್ರೋಚೆ, ಬೆನೆಡೆಟೋ).

.ಎ.ರಿಚಡ್ಸ್ ಮೊದಲಾದವರು ಅಭಿವ್ಯಕ್ತಿಯನ್ನು ಮುಂದಣ ಸ್ಡಾನಕ್ಕೆ ತಂದು ಕೂರಿಸಿದ್ದಾರೆ.ಗಂಭೀರವೂ ಸಂಪೂರ್ಣ್ವವೂ ಅನ್ಯೋನ್ಯವೂ ಆದ ಅಭಿವ್ಯಕ್ತಿಯಿಂದ ಉತ್ಪತ್ತಿಯಾಗುತ್ತದೆ,ಕಾವ್ಯ..ಗದ್ಯವೂ ಅಭಿವ್ಯಕ್ತಿಯುಲಳ್ಳದ್ದೇ.ಆದರೆ ಅದರ ಅಭಿವ್ಯಕ್ತಿ ದಪ್ಪದಪ್ಪ,ವಿವರ ರಹಿತ,ಅಸ್ಫಷ್ಟ,ಒರಟೊರಟು.ಕಾವ್ಯಕ್ಕಾದರೂ ಅದರ ಬಿಗಿ ಬಿಕ್ಕಟ್ಟು ಕಡಪು ದ್ಯೋತಕಗಳಿಂದ ನಿಕಟ ಪರಿಚಯವನ್ನು ಏರ್ಪಡಿಸುವ ಶಕ್ತಿಯುಂಟು. ಇಲ್ಲಿಯೂ ವ್ಯಾಖ್ಯಾನಕಾರರು ಅಭಿವ್ಯಕ್ತಿಕ್ರಮಕಿಂತಲೂ ತಿಳಿಸುವ ವಿಷಯದ ಕಡೆಗೆ ಚಿತ್ತವನ್ನು ಒತ್ತರಿಸಿ,ಅಪ್ರಸಂಗಕ್ಕೆ ಎಡೆಯಿತ್ತಿದ್ದಾರೆ.

ಕೆಲವು ನವೀನರು ಇನ್ನೊಂದು ಮತವನ್ನು ಸಾರಿದ್ದಾರೆ.ಅದರಂತೆ ಒಂದೊಂದು ವಾಕ್ಯವೂ ಒಂದೊಂದು ಸಲಕ್ಷಣ ಸೃಷ್ಟಿ;ಅದರದ್ದೇ ಆದ ಆಸ್ತಿತ್ವವನ್ನು ಬಗೆದು ತೃಪ್ತರಾಗಬೇಕೆ ವಿನಾ ಮತ್ತಾವುದನ್ನು ಅದರಿಂದ ನಿರೀಕ್ಷಿಸಲಾಗದು.ಅದರ ಸಾಮಿಪ್ಯದಿಂದ ನಮಗೆ ಒಂದು ಅನೂನ ಅನುಭವ ಲಭ್ಯವಾಗುತ್ತದೆ.ಅಷ್ಟು ಸಾಲದೆ,ಸಾಹಿತ್ಯ ವ್ಯಾಸಂಗಕ್ಕೆ?ಹೀಗೆ,ಗದ್ಯ ಪದ್ಯಗಳನ್ನೂ ವಿಂಗಡಿಸಲು ಹೊರಟ ಎಷ್ಟೋ ಲೇಖನಗಳು ಕ್ಷಿಪ್ರದಲ್ಲಿ ಕಾವ್ಯ ಶಾಸ್ತ್ರಗಳ ವ್ಯತ್ಯಾಸವನ್ನು ಕುರಿತು ನಿಭಂಧಗಳಾಗಿ ಬಿಡಿತ್ತವೆ.ಆ ವ್ಯತ್ಯಾಸ ಸುವ್ಯಕ್ತವಾಗಿದೆ:ಒಂದರಲ್ಲಿ ವಿಭಾವನೆಯ ಲೀಲೆಯಿದೆ,ಇನ್ನೊಂದರಲ್ಲಿ ತರ್ಕದ ನಡೆದಾಟವಿದೆ;ಒಂದರಿಂದ ನಮಗೆ ಪರಿತೋಷ,ಇನ್ನೊಂದರಿಂದ ನಾರ್ಜನೆ.ಗದ್ಯವೆಂಬ ಒಂದೇ ಪದವನ್ನು ಉಪಯೊಗಿಸಿದರೂ ಶಾಸ್ತ್ರದ ಗದ್ಯ ಬೇರೆ,ಸಾಹಿತ್ಯದ ಗದ್ಯ ಬೇರೆ.

ಗದ್ಯಲಯ : ಗದ್ಯವೂ ಲಯಾತ್ಮಕವೆಂಬ ನಂಬಿಕೆ ಆದಿಯಿಂದಲೂ ಇದೆ. ಪ್ರಾಚೀನ ಗ್ರೀಕ್,ತತ್ವಭೋದಕ ಧ್ರಾಸಿಮಕಸ್ ತನ್ನ ಭಾಷಣಗಳಲ್ಲಿ ಲಯದಿಂದ ರಂಜಕವಾದ ಪದಗುಚ್ಛಗಳನ್ನು ಉದ್ಡೇಶಪೂರ್ವಕವಾಗಿ ತಂದು ಸೇರಿಸುತ್ತದೆ.ವಿಮರ್ಶಕ ಶಿರೋಮಣಿ ಅರಿಸ್ಪಾಟಲಿನಿಂದ ಈ ವಿಧಿ ಬಳಕೆಗೆ ಬಂತು:'ಗದ್ಯ ಲಯಬದ್ಢವಾಗಿರಬೇಕು. ಛಂದೋಬದ್ಧವಾಗಕೂಡದು'. ವಾಗ್ಮಿಯ ಭಾಷಣವನ್ನು ಆಲಿಸುವಾಗ ಗ್ರೀಕ್ ಶ್ರೊತೃಗಳಿಗೆ ಅಂಗೈ ಕುಟ್ಟುತ್ತ ತಾಳಹಾಕುವ ಅಭ್ಯಸವಿತ್ತು.ಸಿಸರೂ ಮಾತನಾಡುತಿದ್ದಾಗ ರೊಮನರೊ ಹಾಗೆಯೇ ಮಾಡುತಿದ್ದರಂತೇ.

ಗದ್ಯ ಲಯರಹಿತವಲ್ಲವೆಂದು ಒಪ್ಪಿಕೊಂಡದ್ದಷ್ಟೆ ಅಲ್ಲದೆ ಪ್ರಾಚೀನರು ಅದರ ಲಯಕ್ಕೆ ಪ್ರಸ್ತಾರ ನಿಷ್ಕರ್ಷಿಸುವ ಕಾರ್ಯವನ್ನೂ ನೆರೆವೇರಿಸಿದರು.ಮೊದಲನೆಯದಾಗಿ,ಪದ್ಯ ಛಂದಸ್ಸಿಗೆ ಅನುರೂಪವಾದ ಗಣಗಳು ಗದ್ಯಕ್ಕೆ ಹೊಂದದಿದ್ದುದನ್ನು ಕಂಡುಕೊಂಡರು,ಎರಡನಯದಾಗಿ ಒಂದು ಗುರು ಮೂರು ಲಘುವಿನಿಂದಾದ ಪಿಯನ್ ( - UUU ಅಥವ UUU - ) ಅಕ್ಷರ ನಮೂನೆ ಗದ್ಯಕ್ಕೆ ಅಚ್ಚುಮೆಚ್ಚು ಎಂಬುದನ್ನು ಅರಿತುಕೊಂಡರು.1ನೆಯ ಪಿಯನ್ (-UUU ) ವಾಕ್ಯದ ಅಂತ್ಯ ಯುಕ್ತಸ್ಢಾನ ಎಂದು ಅರಿಸ್ಟಾಟಲ್ ತೀರ್ಪು ಹೇಳಿದ.ವಾಕ್ಯದ ನಡುನಡುವೆ ಬರುವ ಲಯಸೂಚಕವಾದ ಪದಗುಚ್ಛಗಳ ಕಡೆಗೆ ಗ್ರೀಕರು ಗಮನ ಅಷ್ಟೊಂದಾಗಿ ಹೋಗಲಿಲ್ಲ.ಅದು ಆಶ್ಚರ್ಯು.ಏತಕೆಂದರೆ ಲಯ ಅದ್ದು ಕಿವಿತಾಕಬೇಕಾದರೆ ಎರಡು ಅಂಶಗಳು ಅವಶ್ಯಕ:ಹಿತವಾದ ಪದಗುಚ್ಛದ ನಮೂನೆ ( ಎ ಪ್ಯಾಟರ್ನ್ ಆಫ಼್ ಸಿಲಿಬಿಲ್ಸ್ ) ಅದರ ಪುನರುಕ್ತಿ.ಪುನರುಕ್ತಿ ಕ್ಲುಪ್ತ ಅಂತರಗಳಲ್ಲಿ ನಿಯಮಿತವಾಗಿ ಬಂದರೆ ವಚನ ವಿನ್ಯಾಸ ಛಂದಸ್ಸಾಗುತ್ತದೆ;ಗದ್ಯದಲ್ಲಿ ಪುನರುಕ್ತಿ ಬರಬೇಕು,ಆದರೆ ವ್ಯತ್ಯಸ್ತ ಅಂತರಗಳಲ್ಲಿ.

ರೊಮನರೂ ತಮ್ಮ ಲ್ಯಾಟಿನ್ ಗದ್ಯವಾಕ್ಯಗಳನ್ನು ಪರಿಶೀಲಿಸುವಾಗ ಅಂತ್ಯದ ನಮೂನೆಗಳನ್ನು ಮಾತ್ರ ಆಸಕ್ತಿಯಿಂದ ವಿಮರ್ಶಿಸಿದರು.ಅವರಿಗೆ ಪ್ರಿಯವಾಗಿ ತೋರಿಬಂದ ನಮೂನೆ - ಎರಡು ಗುರು ಒಂದು ಲಘುವಿನ ಕ್ರೀಟಿಕ್ (-U-) ಗಣವನ್ನು ಅನುಸರಿಸಿ ಒಂದು ಗುರು ಒಂದು ಲಘುವಿನ (-U) ಟ್ರೋಕಿ ಅಥವ ಒಂದು ಗುರು ಎರಡು ಲಘುವಿನ ಡ್ಯಾಕ್ಟಿಲ್ (-UU) ಬರುವ ವಿನ್ಯಾಸ . ಆ ನಮೂನೆಯನ್ನು ಕ್ಲಾಸ್ಯುಲ ಅಥವ ಕುರ್ಸಸ್ ಎಂದು ಅವರು ಕರೆದರು . ಲ್ಯಾಟಿನ್ ಭಾಷೆಯಲ್ಲಿ ಕೆಲವು ಉಚ್ಚಾರಾಂಸಶಗಳ ಮೇಲೆ ಕೂರುವ ಒತ್ತಿಗೂ ಸ್ವಲ್ಪ ಸ್ಢಾನವಿತ್ತು.ಕುರ್ಸಸ್ ಯಾವ ಬಗೆಯದೆ ಆದರೂ ಅದರ ಕಡೆಯ ಉಚ್ಚಾರಾಂಶದ ಮೇಲೆ ಒತ್ತನ್ನು ಇಟ್ಟರೆ ಲಯದ ನಾದ ಗತಿ ಕೆಡುತ್ತದೆಂದು ಅವರ ಭಾವನೆ.ಅದರ ಹಿಂದಣ ಅಂಶದ ಮೇಲೆಯೇ ಒತ್ತು ಕಡ್ದಾಯವಾಗಿ ಇರಬೇಕೆಂದು ನಿಗದಿ ಮಾಡಿದರು.ಏತಕ್ಕೆಂದರೆ, ಕುರ್ಸ್ಸಸಿನ ಶ್ರವ್ಯತೆಗೆ ಅದರಲ್ಲಿರವ ಎರಡು ಒತ್ತುಗಳ ಧೃವತೆಯೇ (ಪೋಲ್ಯಾರಿಟಿ) ಮುಖ್ಯಕಾರಣವೆಂದು ಅವರ ನಿಶ್ಚಯ.

ಯುರೋಪಿನ ಇತರ ದೇಶಗಳಾದ ಜರ್ಮನಿ,ರಷ್ಯ,ಸ್ಪೇನ್,ಆಧುನಿಕ ಇಟಲಿ ಮುಂತಾದ ಕಡೆಗಳಲ್ಲಿ ಗದ್ಯಲಯದ ವ್ಯಾಸಾಂಗ ಸಾಕಾದಷ್ಟು ಆಗಿಲ್ಲ.ಫ಼್ರಾನ್ಸಿನಲ್ಲಿ ಗದ್ಯಕ್ಕೂ ಪದ್ಯಕ್ಕೂ ಏಕಪ್ರಮಾಣದ ಪ್ರಾಧಾನ್ಯ ಇರುವುದರಿಂದ ಅಲ್ಲಿನ ಪಂಡಿತರು ಗದ್ಯವನ್ನು ನಾನಾಮುಖದಿಂದ ಪರೀಕ್ಷಿಸಿದ್ದಾರೆ.ವಾಕ್ಯವಿನ್ಯಾಸವನ್ನು ಗೀಟುಗಳ ಮೂಲಕ ನಕ್ಷೆ ಮಾಡಿರುವವರೂ ಉಂಟು.ಇಂಗ್ಲಿಷ್ ಗದ್ಯದ ಲಯ ಪರೀಕ್ಷೆ ಸ್ವಲ್ಪಮಟ್ಟಿಗೆ ಜರುಗಿದೆ.ಆದರೆ ಪಂಡಿತರ ದೃಷ್ಟಿ ಭಿನ್ನ ಭಿನ್ನವಾಗಿದೆ.ಒಬ್ಬರ ಅಭಿಮತವನ್ನು ಇನ್ನೊಬ್ಬರು ಒಪ್ಪುವುದು ಅಪರೂಪ. ಛಂದಸ್ಸಿನ ವಿಚಾರದಲ್ಲೆ,ನಾಲ್ಕೈದು ಬೇರೆ ಬೇರೆ ಸಿದ್ದಾಂತಗಳು ತೀವ್ರವಾಗಿ ಹೋರಾಡುತ್ತಿರುವಾಗ ಹೆಚ್ಚು ಸರಾಗವಾದ ಗದ್ಯಲಯವನ್ನು ಕುರಿತು ಒಮ್ಮತವಿರುವುದು ಸಾಧ್ಯವೆ? ಹಾಗೆ ನಿರೀಕ್ಷಿಸಬಹುದೆ,ನಾವು ? ಅದೊಂದು ಕೌತುಕ. ಗದ್ಯಲಯದ ವಿಷಯವಾಗಿ ಪಂಡಿತರಲ್ಲಿ ಕಾಣಬರುವ ಹೊಂದಾಣಿಕೆ ಛಂದಸ್ಸಿನ ವಿಷಯವಾಗಿ ಇಲ್ಲ. ಕೆಲವು ಸಂಗತಿಗಳನ್ನು ಸರಿಸುಮಾರಾಗಿ ಎಲ್ಲರೂ ಒಪ್ಪಿಕೊಂಡಿದ್ದಾರೆ. ಅವನ್ನು ಹೀಗೆ ಪಟ್ಟಿ ಮಾಡಬಹುದು. 1 ಗದ್ಯಲಯವನ್ನು ವಿವೇಚಿಸುವಾಗ ಇಡೀ ಪದವನ್ನು ಒಂದು ಅಂಶವಾಗಿ ತೆಗೆದು ಕೂಳ್ಳತಕ್ಕದ್ದು; ಪದ್ಯದಲ್ಲಿ ನಡೆಯಬಹುದಾದಂತೆ ಪದಚ್ಛೇದ ನಡೆಯಕೂದದು 2 ಒಂದೇ ಉಚ್ಚಾರಾಂಶದ ಗಣ ಇಂಗ್ಲೀಷನಲ್ಲಿ ಹೇರಳವಾಗಿ ಬರುತ್ತದೆ.