ವಿಷಯಕ್ಕೆ ಹೋಗು

ಪುಟ:Mysore-University-Encyclopaedia-Vol-6-Part-4.pdf/೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಗಾಟಿಂಗನ್ ಬಲು ಬಿಸಿಗೊಂಡಿರುವಾಗ ಫಕ್ಕನೆ ಅವನ್ನು ತಣಿಸಿದಾಗಲೂ ಅವು ಒಡೆದು ಹೋಗುತ್ತವೆ. ಉಷ್ಣತೆಯ ತೀವ್ರ ಏರಿಳಿತಗಳನ್ನು ತಡೆಯಬಲ್ಲ ಗಾಜನ್ನು ವಿಶಿಷ್ಟವಾಗಿ ನಿರ್ಮಿಸ ಬೇಕಾಗುತ್ತದೆ. ಇದಕ್ಕೆ ಗಟ್ಟಿಗಾಜು ಎಂದು ಹೆಸರು. ಇದರ ತಯಾರಿಕೆಯಲ್ಲಿ ಸೋಡಖಾರದ ಬದಲು ಪೊಟ್ಯಾಸಿಯಮ್ ಕಾರ್ಬನೇಟನ್ನು ಉಪಯೋಗಿಸುವರು. ಗಾಜಿಗೆ ಇನ್ನೂ ಬೇರೆ ವಿಶಿಷ್ಟ ಗುಣಗಳನ್ನು ಕೊಡಲು ಸೀಸದ ಇಲ್ಲವೆ ಬೇರಿಯಮಿನ ಸಂಯುಕ್ತ ವಸ್ತುಗಳನ್ನು ಸುಣ್ಣದಕಲ್ಲಿನ ಬದಲು ಉಪಯೋಗಿಸುವರು. ಕೆಲವು ಸಂದರ್ಭದಲ್ಲಿ ಮರಳಿನ ಬದಲು ಅಥವಾ ಅದರ ಜೊತೆಗೆ ಬೋರಾನ್ ಟ್ರೈ ಆಡನ್ನು ಉಪಯೋಗಿಸುವರು. ಇದರಿಂದಾಗಿ ಒದಗುವ ಬೋರೋ ಸಿಲಿಕೇಟ್ ಗಾಜು ಉಷ್ಣತೆಯ ತೀವ್ರ ಬದಲಾವಣೆಗಳನ್ನು ತಡೆಯಲು ಚೆನ್ನಾಗಿ ಸಮರ್ಥವಾಗುತ್ತದೆ. ಬೆಂಗಳೂರಿನ ಅಲೆಬಿಕ್ ಗಾಜು ಕಾರ್ಖಾನೆಯ ಒಂದು ಒಳನೋಟ ಇನ್ನು ಬಣ್ಣಬಣ್ಣದ ಗಾಜುಗಳೂ ಇವೆ. ತಯಾರಿಕೆಯ ವೇಳೆ ಕಚ್ಚಾ ಪದಾರ್ಥಗಳೊಡನೆ ಅಗತ್ಯವಾದ ಲೋಹದ ಆಡನ್ನು ಸಣ್ಣ ಪ್ರಮಾಣದಲ್ಲಿ ಸೇರಿಸುವುದರಿಂದ ಗಾಜಿಗೆ ಬೇಕಾದ ಬಣ್ಣ ಬರಿಸಬಹುದು. ಕೊಬಾಲ್ಟ್ ಆಡನ್ನು ಸೇರಿಸುವುದರಿಂದ ನೀಲಿಗಾಜನ್ನೂ ಮ್ಯಾಂಗನೀಸ್ ಡೈ ಆಕ್ಸೆಡ್‌ನ್ನು ಸೇರಿಸುವುದರಿಂದ ಹಳದಿ ಗಾಜನ್ನೂ ಬಂಗಾರ ಅಥವಾ ಸಿಲೇನಿಯಮ್ ಸೇರಿಸುವುದರಿಂದ ಕೆಂಪು ಬಣ್ಣದ ಗಾಜನ್ನೂ, ಯುರೇನಿಯಮ್ ಆಡನ್ನು ಸೇರಿಸುವುದರಿಂದ ಹಳದಿ ಗಾಜನ್ನೂ ತಯಾರಿಸಬಹುದು. ಕ್ಯಾಲ್ಸಿಯಂ ಫ್ಲೋರೈಡ್, ಅರ್ಸಿನಿಯಸ್ ಆಕ್ಸೆಡ್, ಅಲ್ಯೂಮಿನಿಯಮ್ ಆಕ್ಸೆಡ್, ಜಿಂಕ್ ಮತ್ತು ಕ್ಯಾಲ್ಸಿಯಮ್ ಫಾಸ್ಟೇಟುಗಳನ್ನು ಒಂದೊಂದಾಗಿ ಆಗಲಿ ಅಥವಾ ಕೆಲವುಗಳ ಕೂಟದಲ್ಲಿ ಆಗಲಿ ಬಳಸುವುದರಿಂದ ಗಾಜಿಗೆ ಬಿಳಿಬಣ್ಣವನ್ನು ಅಲ್ಲಪಾರ ದರ್ಶಕ ಗುಣವನ್ನೂ ಒದಗಿಸಬಹುದು. ಇಂಡಿಯನ್ ಆಕೈಡನ್ನು ಸೇರಿಸಿದರೆ ಗಾಜು ಕಪ್ಪುಬಣ್ಣವನ್ನು ಪಡೆಯುತ್ತದೆ. ಇನ್ನೊಂದು ಅತಿ ಉಪಯುಕ್ತವಾದ ಹಾಕಿ ಪೈರೆಕ್ಸ್ ಗಾಜು. ಇದರಲ್ಲಿ ಶೇ.80 ರಷ್ಟು ಮರಳು ಸೇರಿರುವುದರಿಂದ ಇದನ್ನು ಹೆಚ್ಚು ಬಿಸಿಮಾಡಿ ಕೂಡಲೆ ತಣಿಯಬಿಟ್ಟರೂ ಅದು ಒಡೆಯುವುದಿಲ್ಲ. ಅಲ್ಲದೆ ಅದು ಅಧಿಕ ಉಷ್ಣತೆಯನ್ನು ತಡೆದುಕೊಳ್ಳುವುದು. ಕನ್ನಡಕ, ಸೂಕ್ಷ್ಮದರ್ಶಕ, ದೂರದರ್ಶಕ ಮೊದಲಾದ ಉಪಕರಣ ತಯಾರಿಕೆಯಲ್ಲಿ ಆಪ್ಟಿಕಲ್ ಗಾಜು ಎಂಬ ವಿಶಿಷ್ಟ ಜಾತಿಯ ಗಾಜನ್ನು ಉಪಯೋಗಿಸು ಕಚ್ಚಾ ವರು ಇದರ ತಯಾರಿಯಲ್ಲಿ ಗಾ ಪದಾರ್ಥಗಳನ್ನೂ ಕುಮಾರಿಯ ಶಿಗಳನ್ನೂ ಚೆನ್ನಾಗಿ ಪರಿಶೀಲಿಸಿ ಅದಕ್ಕೆ ವಿಶಿಷ್ಟ ಗುಣಗಳು ನಿರ್ದಿಷ್ಟ ಪ್ರಮಾಣದಲ್ಲಿ ಇರುವಂತೆ ನೋಡಿಕೊಳ್ಳಲಾಗುವುದು. ತೆಳುವಾದ ಗಾಜಿನ ಪದರಗಳನ್ನು ಸೆಲ್ಯುಲೋಸ್ ಅಸಿಟೇಟ್ ಎಂಬ ವಸ್ತುವಿನಿಂದ ಒಂದಕ್ಕೊಂದು ಜೋಡಿಸಿಕೊಳ್ಳುವ ಹಾಗೆ ಮಾಡುವುದರಿಂದ ಅಪಾಯರಹಿತ ಗಾಜಿನ ಹಾಳೆಯನ್ನು ತಯಾರಿಸಬಹುದು. ಇದರ ಪದರಗಳು ಕಾಣಿಸುವುದಿಲ್ಲ. ಅಲ್ಲದೆ ಈ ಗಾಜು ಪಾರದರ್ಶಕವಾಗಿಯೂ ಇರುತ್ತದೆ. ಅಪಘಾತಕ್ಕೆ ಒಳಗಾದಾಗ ಇಂಥ ಗಾಜು ಪುಡಿಪುಡಿಯಾದರೂ ಅದರ ಚೂರುಗಳು ಸಿಡಿದು ಯಾವ ಹಾನಿಯನ್ನೂ ಮಾಡುವುದಿಲ್ಲ. ಬದಲು ಆ ಚೂರುಗಳು ಇದ್ದಲ್ಲಿಯೇ ಅಂಟಿಕೊಂಡಿರುವುವು. ಇಂಥ ಗಾಜನ್ನು ಮೋಟಾರು ವಾಹನಗಳಲ್ಲಿ ಚಾಲಕರ ಎದುರು ಗಾಳಿರಕ್ಷಕಗಳಾಗಿ (ವಿಂಡ್ ಷೀಲ್ಡ್) ಉಪಯೋಗಿಸುತ್ತಾರೆ. ನೀರು ಗಾಜು: ದಪ್ಪವಾಗದ ದ್ರವರೂಪದಲ್ಲಿರುವ ಒಂದು ಜಾತಿಯ ಗಾಜು. ಸೋಡಖಾರ ಮತ್ತು ಶುದ್ಧವಾದ ಮರಳನ್ನು ಟ್ಯಾಂಕ್ ಆಕಾರದ ಕುಲುಮೆಯಲ್ಲಿ ಚೆನ್ನಾಗಿ ಕಾಯಿಸಿದಾಗ ಸೋಡಿಯಮ್ ಸಿಲಿಕೇಟ್ ಎಂಬ ವಸ್ತು ದ್ರವರೂಪದಲ್ಲಿ ತಯಾರಾಗುವುದು. ಇದನ್ನು ಹೊರತೆಗೆದು ನೀರು ಚಿಮುಕಿಸಿ ಚೂರು ಚೂರು ಮಾಡುವರು. ಈ ಚೂರುಗಳನ್ನು ಮಿತಗಾತ್ರದ ನೀರಿನೊಂದಿಗೆ ಬಾಯ್ತರಿನಲ್ಲಿ ಹೆಚ್ಚು ೨೦೧ ಒತ್ತಡದಲ್ಲಿ ಕುದಿಸಿದಾಗ ಸೋಡಿಯಂ, ಸಿಲಿಕೇಟ್‌ ಕರಗಿ ದ್ರಾವಣವಾಗುವುದು. ಇದನ್ನು ಅಗತ್ಯವಿರುವಷ್ಟು ದಪ್ಪ ದ್ರವವಾಗುವವರೆಗೆ ಬಿಸಿ ಮಾಡಿದಾಗ ನೀರು ಗಾಜು ದೊರೆಯುತ್ತದೆ. ಈ ಜಾತಿಯ ಗಾಜಿನ ಉಪಯೋಗಗಳು ಬಹಳ. ಮರದ ವಸ್ತುಗಳಿಗೆ ಇದನ್ನು ಸವರಿದರೆ ಅವಕ್ಕೆ ಬೆಂಕಿ ತಗಲುವುದಿಲ್ಲ. ಮೊಟ್ಟೆಗಳನ್ನು ಈ ದ್ರಾವಣದಲ್ಲಿ ಅದ್ದಿಟ್ಟರೆ ಅವು ದೀರ್ಘಕಾಲದವರೆಗೆ ಕೆಡುವುದಿಲ್ಲ. ಇತರ ರಾಸಾಯನಿಕ ವಸ್ತುಗಳನ್ನು ಸೇರಿಸಿ ಅಥವಾ ಬರೀ ಇದೇ ವಸ್ತುವನ್ನು ಅಂಟಾಗಿ ಉಪಯೋಗಿಸಬಹುದು. ಇದನ್ನು ರಂಗು ಮತ್ತು ಸಾಬೂನಿನ ತಯಾರಿಕೆಯಲ್ಲೂ ಉಪಯೋಗಿಸಲಾಗುತ್ತಿದೆ. ಗಾಜು ಇಂದು ಉತ್ತಮ ವಾಸ್ತುಶಿಲ್ಪದ ಸರಕಾಗಿದೆ. ಇಂದಿನ ಗೃಹನಿರ್ಮಾಣ ಉದ್ದಿಮೆಗೆ ಗಾಜು ಹೊಸ ಚೌಕಟ್ಟನ್ನೇ ತೊಡಿಸಿದೆ. ಇದಕ್ಕೆ ಕಾರಣ ಗಾಜು ತಂತ್ರಜ್ಞಾನದಲ್ಲಿ ಘಟಿಸುತ್ತಿರುವ ಅತ್ಯಾಧುನಿಕ ಬೆಳೆವಣಿಗೆ ಗಾಜನ್ನು ಯಾಂತ್ರಿಕವಾಗಿ ಅಥವಾ ರಾಸಾಯನಿಕವಾಗಿ ಮಾರ್ಪಾಡುಗೊಳಿಸಬಹುದು. ಸಮರ್ಥವಾಗಿ ಸಂಸ್ಕರಿಸಿ ಗಾಜನ್ನು ಶಬ್ದನಿರೋಧಕ, ಶಾಖಹೀರುವಿಕೆ, ಶಾಖಪ್ರತಿಫಲನ, ಹವಾಮಾನ ಪ್ರತಿರೋಧಕ, ಅಗ್ನಿನಿರೋಧಕ ಮತ್ತು ವಿದ್ಯುತ್ ಆಘಾತ ತಡೆಯಬಲ್ಲ ಸಾಧನವಾಗಿ ಬಳಸಬಹುದಾಗಿದೆ. ನೂರಾರು ವರ್ಷಗಳಿಂದ ಗೃಹ ನಿರ್ಮಾಣದಲ್ಲಿ ಗಾಜಿನ ಬಳಕೆಯಾಗಿದೆಯಾದರೂ ಅಂದಿನ ಷೀಟ್ ಗ್ಲಾಸ್‌ನಿಂದ ಅತ್ಯಾಧುನಿಕ ಫ್ಲೋಟ್ ಗ್ಲಾಸ್‌ವರೆಗೂ ಗಾಜು ಭಾರಿ ಮಾರ್ಪಾಡು ಕಂಡಿದೆ. ವಿಜ್ಞಾನ ಮತ್ತು ತಂತ್ರಜ್ಞಾನದಲ್ಲೂ ಗಾಜಿನ ಬಳಕೆ ಯಥೇಚ್ಛವಾಗಿದೆ. ತೆಳು ಗಾಜಿನ ಹಾಳೆಗಳಿಂದ ಹಿಡಿದು ಸೂರ್ಯನ ರಶ್ಮಿಗಳನ್ನು ತಡೆ ಹಿಡಿಯಬಲ್ಲ ಗುಣಮಟ್ಟದ ಗಾಜುಗಳು ಇಂದು ಲಭ್ಯ. ಗಾಜು ಉದ್ಯಮ ವೇಗವಾಗಿ ಬೆಳೆಯುತ್ತಿದೆ. ಹಿಂದಿನ ಕಾಲದಲ್ಲಿ ಗೂಡುಗಳಂತಿದ್ದ ಮನೆಗಳು ಇಂದು ಹೆಚ್ಚು ಪಾರದರ್ಶಕವಾಗಿರಲು ಸಾಧ್ಯವಾಗಿರುವುದು ಗಾಜಿನಿಂದ. ಗಾಜು ಸೂಕ್ಷ್ಮ ಪರಿಕರವಾಗಿದ್ದು ಅದರ ಅಗತ್ಯಗಳಿಗೆ ಅನುಸಾರವಾಗಿ ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. (400.53.25) ಗಾಟಿಂಗೆನ್ : ಜರ್ಮನಿಯಲ್ಲಿ ಒಂದು ವಿಶ್ವವಿದ್ಯಾಲಯ ನಗರ, ಕೆಳ ಸ್ಯಾಕ್ಸನಿಯ ಅತ್ಯಂತ ದಕ್ಷಿಣ ಭಾಗದಲ್ಲಿ, ರೈನ್ ನದಿಯ ದಡದ ಮೇಲೆ, ಹೈನ್‌ಬರ್ಗ್ ಪರ್ವತದ ತಪ್ಪಲಿನಲ್ಲಿದೆ. ಪ್ರ.ಶ. 950ರ ಜರ್ಮನ್ ದಾಖಲೆಗಳಲ್ಲಿ ಗೋಡಿಂಗ್ ಅಥವಾ ಗುಟೆಂಗಿ ಎಂಬ ಗ್ರಾಮದ ಹೆಸರಿದೆ. ಈ ಗ್ರಾಮವೇ ತರುವಾಯದ ದಿನಗಳಲ್ಲಿ ಗಾಟಿಂಗೆನ್ ಎಂಬ ಹೆಸರು ತಳೆಯಿತು. ಈ ನಗರಕ್ಕೆ ಜರ್ಮನಿಯ ದೊರೆ 4ನೆಯ ಆಟೋ 1210ರಲ್ಲಿ ನಗರಪಾಲಿಕೆ ಹಕ್ಕನ್ನು ನೀಡಿದ. ವಾಣಿಜ್ಯದ ಸೌಲಭ್ಯಗಳಿಗಾಗಿ ಜರ್ಮನಿಯ ನಗರಗಳು 14ನೆಯ ಶತಮಾನದಲ್ಲಿ ಮಾಡಿಕೊಂಡ ಹ್ಯಾನ್ಸಿಯಾಟಿಕ್ ಸಂಘದಲ್ಲಿ ಈ ನಗರ ಉನ್ನತ ಸ್ಥಾನ ಪಡೆಯಿತು. ಇದು 1513ರಲ್ಲಿ ಜರ್ಮನಿಯ ಧಾರ್ಮಿಕ ಪುನರುತ್ಥಾನ ಚಳವಳಿಯಲ್ಲಿ ಭಾಗವಹಿಸಿತು ಮೂವತ್ತು ವರ್ಷಗಳ ಯುದ್ಧದ (1618-1648) ಕಾಲದಲ್ಲಿ ಕಷ್ಟನಷ್ಟಗಳಿಗೊಳಗಾಯಿತು. ಮುಂದೆ ಒಂದು ಶತಮಾನ ದುರ್ಗತಿಯಲ್ಲಿದ್ದು ತರುವಾಯ ವಿಶ್ವವಿದ್ಯಾಲಯದ ಸ್ಥಾಪನೆಯಿಂದ ಪ್ರಸಿದ್ಧಿಗೆ ಬಂತು. ಈ ನಗರ 18ನೆಯ ಶತಮಾನದಲ್ಲಿ ಜರ್ಮನಿಯ ಯುವ ಕವಿಸಂಘದ ಕೇಂದ್ರವಾಗಿತ್ತು. ಇಲ್ಲಿಯ ಪುರಭವನ 14ನೆಯ ಶತಮಾನದ ಕಟ್ಟಡ.ಇದನ್ನು 1880ರಲ್ಲಿ ಜೀರ್ಣೋದ್ಧಾರ ಮಾಡಲಾಯಿತು. ನಗರದ ಹಳೆಯ ಬೀದಿಗಳು ಕಿರಿದು, ಅಂಕುಡೊಂಕು. ಈ ಈ ನಗರದಲ್ಲಿರುವ ವಿಶ್ವವಿದ್ಯಾಲಯವನ್ನು ಇಂಗ್ಲೆಂಡಿನ ದೊರೆ 2ನೆಯ ಜಾರ್ಜ್ 1737ರಲ್ಲಿ ಸ್ಥಾಪಿಸಿದ, ರಾಷ್ಟ್ರೀಯ ಮನೋಭಾವವನ್ನು ಬೆಳಸುವದರಲ್ಲಿ ಈ ವಿಶ್ವವಿದ್ಯಾಲಂಕದ ಪಾತ್ರ ಹಿರಿದು ಜನ‌ರ ಅಗತ್ಯ ದೊರೆಯು ಪ್ರತಿಗಾಮಿ ನೀತಿಯನ್ನು ವಿರೋಧಿಸಿದ್ದಕ್ಕಾಗಿ ಇಲ್ಲಿಯ ವಿಶ್ವರು ಪ್ರಾಧ್ಯಾಪಕರು ತಮ್ಮ ಕೆಲಸ ಕಳೆದುಕೊಂಡರು (1837). ಗ್ರಿಮ್ ಸೋದರರು ಇವರಲ್ಲಿಬ್ಬರು. ಬಿಸ್ಮಾರ್ಕ್ ಗಾಟಿಂಗೆನ ವಿದ್ಯಾರ್ಥಿ. ನಾಜಿಗಳ ಆಡಳಿತ ಕಾಲದಲ್ಲಿ ಗಾಟಿಂಗೆನ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಸಂಖ್ಯೆ 3,350 ರಿಂದ (1930-31) 1540 (1936-37) ಇಳಿದುಹೋಗಿತ್ತು. ವಿಶ್ವವಿದ್ಯಾಲಯದ ಮುಖ್ಯ ಕಟ್ಟಡವೂ ಅದರ ಪಕ್ಕದಲ್ಲಿರುವ ಗ್ರಂಥಾಲಯವ ಪ್ರಾಣಿವಿಜ್ಞಾನ, ಮಾನವ ಶಾಸ್ತ್ರ, ಖನಿಜವಿಜ್ಞಾನಗಳಿಗೆ ಸಂಬಂಧಿಸಿದ ಸಂಗ್ರಹಾಲಯಗಳೂ ಉಲ್ಲೇಖಾರ್ಹ. ಮಧ್ಯಯುಗದಲ್ಲಿ ಗಾಟಿಂಗೆನ್ ಉಣ್ಣೆ ಕೈಗಾರಿಕಾ ಕೇಂದ್ರವಾಗಿತ್ತು. 19-20ನೆಯ ಶತಮಾನಗಳಲ್ಲಿ ವಿಜ್ಞಾನ, ಶಸ್ತ್ರಕ್ರಿಯೆ ಮತ್ತು ದೃಕ್ ಉಪಕರಣ ಕೈಗಾರಿಕೆಗಳು ಬೆಳೆದಿವೆ. ಇಲ್ಲಿಯ ವಿಜ್ಞಾನ ಸಂಘ ಪ್ರಕಟಿಸುತ್ತಿರುವ (ಸ್ಥಾಪಿತ 1739) ಗಾಟಿಂಗಿಷೆ ಗೇಲಿರ್ಟೆ ಆನ್‌ಟೆಗೆನ್ ಜರ್ಮನಿಯ ಪ್ರಮುಖ ವಿದ್ವತ್ ಪತ್ರಿಕೆ. ಎರಡನೆಯ ಮಹಾಯುದ್ಧ ಕಾಲದಲ್ಲಿ ಈ ನಗರ ಹೆಚ್ಚಾಗಿ ಬಾಂಬು ದಾಳಿಗೆ ತುತ್ತಾಗಲಿಲ್ಲ. 1945ರಲ್ಲಿ ಇದು ಬ್ರಿಟಿಷ್ ಆಕ್ರಮಿತ ವಲಯದಲ್ಲಿ ಇತ್ತು. (ವಿ.ಜಿ.ಕೆ.)