೨೦೪ ಗಾಟ್ಹೆಲ್ತ್, ಗಾಟ್ ಹೆಲ್ತ್, ಯೆರೆಮಿಯಾಸ್ - ಗಾಡಳ, ಧನಂಜಯ ರಾಮಚಂದ್ರ ಆದರೆ 1777ರಲ್ಲಿ ಇವು ಜರ್ಮನ್ ಭಾಷೆಗೆ ಅನುವಾದವಾಗಿ ಜರ್ಮನಿಯಲ್ಲಿ ವಿಶೇಷ ಮನ್ನಣೆ ಪಡೆದವು. ಗಯಟೆ, ಮಿಲ್ಲರ್, ಲೆಸ್ಸಿಂಗ್, ಫೆಗಲ್ ಮುಂತಾದ ಜರ್ಮನ್ ರೊಮ್ಯಾಂಟಿಕ್ ಸಾಹಿತಿಗಳಿಗೆ ಗಾಟ್ಯ ನಾಟಕಗಳು ಹಿಡಿಸಿದವು. ಇವನ ಒಂದೆರಡು ಕಥಾನಕಗಳು ಮ್ಯೂಟೀನೀ, ಪ್ರೋಕೋಫೀವ್ ಮುಂತಾದವರ ಆಪೆರಗಳಲ್ಲಿ ಮತ್ತೆ ಮತ್ತೆ ಹೊಸ ರೂಪ ತಾಳಿವೆ. 1780ರಲ್ಲಿ ಗಾಟ್ಸಿ ಬರೆದ ಆತ್ಮಕಥೆಯಲ್ಲಿ ಬೇಕಾದಷ್ಟು ಆತ್ಮಪ್ರತಿಷ್ಠೆ, ಆಡಂಬರ ತುಂಬಿವೆ. ಆದರೆ ಅವನ ಚಿಕ್ಕಂದಿನ ನೆನಪುಗಳು, ಇಟಲಿಯ ಜನಪದ ಸಾಹಿತ್ಯವನ್ನು ಕುರಿತ ಮಾತುಗಳು, ಎಲ್ಲಕ್ಕಿಂತ ಹೆಚ್ಚಾಗಿ ಅವನು ಗಾಲ್ಲೋನಿ, ಷಿಯಾರಿಗಳ ಜೊತೆ ನಡೆಸಿದ ಜಗಳಗಳ ಲಘುಹಾಸ್ಯದ ವರ್ಣನೆಗಳು-ಇವುಗಳಿಂದಾಗಿ ಅದು ಸ್ವಾರಸ್ಯವಾದ ಗ್ರಂಥವಾಗಿದೆ. (ಎಚ್.ಕೆ.ಆರ್.) ಗಾಟ್ಹೆಲ್ತ್, ಯೆರೆಮಿಯಾಸ್ : 1797-1854, ಸ್ಪಿಟ್ಟರ್ಲೆಂಡ್ನ ಪ್ರಾಟೆಸ್ಟಂಟ್ ಪಾದ್ರಿ, ಕಾದಂಬರಿಕಾರ. ಇವನ ನಿಜನಾಮ ಆಲ್ಬರ್ಟ್ ಬಿಟ್ಜಿಯಸ್. ತಂದೆ ಪಾದ್ರಿಯಾಗಿದ್ದ. ಗಾಟ್ಹೆಲ್ತ್ ತನ್ನ ಶಾಲಾ ದಿನಗಳಲ್ಲಿ ಹಾಗೂ ಜರ್ಮನಿಯ ಬರ್ನ್ ಮತ್ತು ಗಾಟಿಂಗೆನ್ಗಳಲ್ಲಿ ವೇದಾಂತದ ವಿದ್ಯಾರ್ಥಿಯಾಗಿದ್ದಾಗ ಪ್ರಗತಿಪರ ಧೋರಣೆಗಳನ್ನು ಎತ್ತಿದೆ, ಬಸ್ನಲ್ಲಿ ಶ್ರೀಮಂತ ಪ್ರಭುತ್ವವನ್ನು ಮಟ್ಟಹಾಕಿದ ರಾಜಕೀಯ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ. 1832ರಲ್ಲಿ ಪಾದ್ರಿಯಾದ ಮೇಲೆ ತನ್ನ ದೇಶದ ಜನರಲ್ಲಿ ತಿಳಿವಳಿಕೆಯನ್ನುಂಟುಮಾಡಲು ತುಂಬ ಶ್ರಮವಹಿಸಿದ; ಸಾರ್ವತಿಕ ವಿದ್ಯಾಭ್ಯಾಸವನ್ನು ತರಲು ಪ್ರಯತ್ನಿಸಿದ ಜೀವನದಲ್ಲಿ ಉಪೇಕ್ಷಿಸಲ್ಪಟ್ಟವರಿಗಾಗಿ ಒಂದು ಸಂಖ್ಯೆಯನ್ನು ಕೂಡ ಸ್ಥಾಪಿಸಿದ ಸ್ವಿಟ್ಲರ್ಲೆಂಡಿನಲ್ಲಿ ಸ್ವತಂತ್ರ್ಯ ವಿಚಾರಗಳ ತತ್ತ್ವದಲ್ಲಿ ತೀವ್ರ ಸುಧಾರಣಾ ಪ್ರವೃತ್ತಿಗಳು ಕಾಣಿಸಿಕೊಂಡಾಗ ಈತ ಹೆಚ್ಚು ಹೆಚ್ಚಾಗಿ ಸಂಪ್ರದಾಯಗಳನ್ನು ಎತ್ತಿ ಹಿಡಿದ. ದಿಗಿಲು ಹುಟ್ಟಿಸುವ ಲೌಕಿಕವಾದದಿಂದ ಕ್ರೈಸ್ತಧರ್ಮದ ನಂಬಿಕೆಗಳನ್ನು ಜೀವಂತವಾಗಿಡುವ ಆಸೆ ಇವನನ್ನು ಬರೆಯಲು ಪ್ರೇರೇಪಿಸಿತು. ಹಳ್ಳಿಗರ ಜನ ಜೀವನವನ್ನು ಚಿತ್ರಿಸುವ ಇವನ ಕಾದಂಬರಿ ಡೆರ್ ಬ್ಯಾನರ್ನ್ಸ್ಪಿಗೆಲ್ 1837ರಲ್ಲಿ ಪ್ರಕಟವಾಯಿತು. 1838ರಲ್ಲಿ ಇನ್ನೊಂದು ಕಾದಂಬರಿ ದಿ ಜಾಯ್ಸ್ ಅಂಡ್ ಸಫರಿಂಗ್ಸ್ ಆಫ್ ಎ ಸ್ಕೂಲ್ ಮಾಸ್ಟರ್ ಎರಡು ಸಂಪುಟಗಳಲ್ಲಿ ಹೊರಬಿತ್ತು. ಉಲ್ಕ್ ದಿ ಫಾರಮ್ಹ್ಯಾಂಡ್ (1840), ಉಲ್ರಿಕ್ ದಿ ಟೆನೆಂಟ್ (1849) ಎಂಬೆರಡು ಕಾದಂಬರಿಗಳಲ್ಲಿ ಈತ ತನ್ನ ಕಾಲದಲ್ಲಿ ಪ್ರಬಲವಾಗಿದ್ದ ಐಹಿಕ ಸುಖ ಪ್ರವೃತ್ತಿಗಳನ್ನು ವಿರೋಧಿಸಿದ್ದಾನೆ. ಈತನ ಗುರಿ ನೀತಿ ಬೋಧೆಯಾದರೂ ತನ್ನ ಎಲ್ಲ ಬರೆಹಗಳಲ್ಲಿ ಈತ ಅಸಾಧಾರಣ ಸಾಹಿತ್ಯಕ ಸಾಮರ್ಥ್ಯವನ್ನು ಮೆರೆದಿದ್ದಾನೆ. ಇವನ ಹದಿಮೂರು ಕಾದಂಬರಿಗಳು, ಐವತ್ತಕ್ಕೂ ಹೆಚ್ಚು ಸಣ್ಣ ಕಥೆಗಳು ಈತನ ಅಸಾಧಾರಣ ಪ್ರತಿಭೆಯನ್ನು ಪ್ರಕಾಶಪಡಿಸುವುದಲ್ಲದೆ ಜನರಲ್ಲಿ ಇವನಿಗೆ ಎಂಥ ತೀವ್ರ ಆಸಕ್ತಿ ಇತ್ತೆಂಬುದನ್ನು ಸಾಬೀತುಗೊಳಿಸುತ್ತವೆ. ಮಾನಸಿಕ ಪರಿವೀಕ್ಷಣೆ, ವಿಭಾವನಾಶಕ್ತಿ ಮತ್ತು ಭಾಷೆಯನ್ನು ಸೃಷ್ಟಾತ್ಮಕವಾಗಿ ಬಳಸುವ ಚೈತನ್ಯ-ಇವು ಅತ್ಯಂತ ಜೀವಂತ ಪಾತ್ರಗಳನ್ನು ಸೃಷ್ಟಿಸುವುದರಲ್ಲಿ ಇವನಿಗೆ ಬಹಳ ಸಹಾಯಕವಾದುವು. ಬನ್ನಿಸ್ ಗ್ರಾಮಾಂತರ ಪ್ರದೇಶದ ಜನಜೀವನವೇ ಈತನ ಕಥನ ಸಾಮಗ್ರಿ ಮಾನವತೆಯ ರಚನಾತ್ಮಕ ಬಲಗಳನ್ನು ಕುಟುಂಬ ಮತ್ತು ಸಾಮಾಜಿಕ ಜೀವನದಲ್ಲಿ ಕೇಂದ್ರಿಕೃತವಾಗಿರುವ ಧರ್ಮವಲ್ಲದ ಕ್ರೈಸ್ತಧರ್ಮದಲ್ಲಿ ಕಾಣಬಹುದೆಂದು ಈತ ನಂಬಿದ್ದ. ಜರ್ಮನ್ ಸಾಹಿತ್ಯದಲ್ಲಿನ ಸಹಜತಾ ಪಂಥಕ್ಕೆ (ನ್ಯಾಚುರಲಿಸಂ) ಈತ ಮೊದಲಿಗ ನೆಂದು ಹೆಸರಾಗಿದ್ದಾನೆ. (...) ಗಾಡಗೀಳ, ಗಂಗಾಧರ ಗೋಪಾಳ : 1923-2008. ಮಹಾರಾಷ್ಟ್ರದ ಹೆಸರಾಂತ ಸಣ್ಣ ಕಥೆಗಾರರು; ಅಲ್ಲಿಯ ನವ್ಯಕಥೆಯ ಆದ್ಯಪ್ರವರ್ತಕರು. ಇವರು 1923ರ ಆಗಸ್ಟ್ 25ರಂದು ಮುಂಬಯಿಯಲ್ಲಿ ಜನಿಸಿದರು. ತಮ್ಮ ಇಪ್ಪತ್ತೊಂದನೆಯ ಮಂದಸ್ಸಿನಲ್ಲಿ ಚರಿತ್ರೆ ಮತ್ತು ಅರ್ಥ ವಾಸ್ತಗಳನ್ನು ಮುಖ್ಯ ವಿಷಯಗಳನ್ನಾಗಿ ಆರಿಸಿಕೊಂಡು ಮುಂಬಯಿ ವಿಶ್ವವಿದ್ಯಾಲಯದ ಎಂ.ಎ. ಪದವಿಯನ್ನು ಪಡೆದು ಅದೇ ವಿಷಯಗಳ ಪ್ರಾಧ್ಯಾಪಕರಾಗಿ ಕೆಲಸ ಮಾಡತೊಡಗಿದರು. ಬರವಣಿಗೆಯ ಕಡೆಗೆ ಮೊದಲಿನಿಂದಲೂ ಇವರಿಗೆ ಒಲವು. ಪ್ರಿಯಾ ಆಣಿ ಮಾಂಜರ (ಪ್ರಿಯೆ ಮತ್ತು ಬೆಕ್ಕು) ಎಂಬ ಮೊದಲ ಕಥೆ ವಾಹ್ಮಯಶೋಭಾ ಪತ್ರಿಕೆಯಲ್ಲಿ ಪ್ರಕಟವಾಯಿತು. ಮಾನಸಚಿತ್ರ ಎನ್ನುವ ಮೊದಲ ಕಥಾಸಂಗ್ರಹ ಹೊರಬಂದದ್ದು 1946ರಲ್ಲಿ. ಅನಂತರ ಇವರು ಸಣ್ಣ ಕಥೆಗಳನ್ನು ಮಾತ್ರವಲ್ಲದೆ ಏಕಾಂತ ನಾಟಕ, ಪ್ರವಾಸ ವರ್ಣನೆ, ನಾಟಕ, ಕಾದಂಬರಿ- ಹೀಗೆ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ವಿಪುಲವಾಗಿ ಬರೆದಿದ್ದಾರೆ. ಮಾನಸಚಿತ್ರ (1946). ನವ್ಯಾವಾಟಾ (ಹೊಸ ದಾರಿಗಳು, 1950), ಕಬೂತರೆ (ಪಾರಿವಾಳಗಳು, 1952) ಮತ್ತು ತಲಾವಾಶೀಲ ಚಾಂದಣಿ (ಕೆರೆಯಲ್ಲಿಯ ಬೆಳದಿಂಗಳು, 1954)-ಇವು ಇವರ ಕಥಾಸಂಗ್ರಹಗಳು. ಪಾಂಚನಾಟಿಕಾ (1953) ಒಂದು ನಾಟಕ ಸಂಗ್ರಹ, ಲಿಲೀಚ ಫಲ್ (ಲಿಲಿ ಹೂವು, 1955) ಒಂದು ಕಾದಂಬರಿ, ಗೋಮುರಾಂಚ್ಯಾ ದೇಶಾಂತ (ಗೋಪುರಗಳ ದೇಶದಲ್ಲಿ) ಒಂದು ಪ್ರವಾಸ ವರ್ಣನೆ, ಖಡಕ ಆಣಿ ಪಾಣೀ ಒಂದು ವಿಮರ್ಶನ ಗ್ರಂಥ, ಇವಲ್ಲದೆ ಮಕ್ಕಳಿಗಾಗಿ ಕಥೆಗಳು ಎಂದು ಮುಂತಾಗಿ ಇವರ ಬರವಣಿಗೆ ಬಹುಮುಖವಾಗಿ ಮುಂದುವರಿದಿದೆ. 1964ರಲ್ಲಿ ನ್ಯೂಯಾರ್ಕಿನ ಹೆರಾಲ್ಡ್ ಟಿಬ್ಯೂನ್ ಪತ್ರಿಕೆಯ ಪಾರಿತೋಷಕ ಇವರಿಗೆ ದೊರಕಿತಲ್ಲದೆ ಮೂರು ವರ್ಷಗಳ ಅನಂತರ ರಾಕ್ಫೆಲ ಪೌಂಡೇಷನ್ನಿನಿಂದ ಒಂದ ವರ್ಷದ ವ್ಯಾಸಂಗ ವೇತನವೂ ಸಿಕ್ಕಿತು. ಗಾಡಗೀಳರು ಇಂಗ್ಲಿಷಿ ನಲ್ಲಿಯೂ ಚೆನ್ನಾಗಿ ಬರೆಯಬಲ್ಲರು. ಇವರ ಅನೇಕ ಕಥೆಗಳು ಹಿಂದೀ, ಗುಜರಾತಿಗಳಲ್ಲಿ ಮಾತ್ರವಲ್ಲದೆ ಇಂಗ್ಲಿಷ್ ಮತ್ತು ಇಟಾಲಿಯನ್ ಭಾಷೆಗಳಲ್ಲಿಯೂ ಅನುವಾದಿತ ವಾಗಿ ಪಕಟವಾಗಿವೆ. ನಲವತ್ತರಿಂದ ಅರವತ್ತರವರೆಗಿನ ಟಿಯ ಕಾಮಾನದ ಎರಡು ದಶಕಗಳಲ್ಲಿ ಸಮೃದ್ಧವಾಗಿ ಬೆಳೆದ 20ನೆಯ ಮರಾಠಿ ಸಣ್ಣ ಕಥೆಗಳ ಪ್ರಪಂಚದಲ್ಲಿ ಗಂಗಾಧರ ಗಾಡಗೀಳರಿಗೆ ಒಂದು ವಿಶಿಷ್ಟವಾದ ಸ್ಥಾನವಿದೆ. ಕಥೆಯನ್ನು ಹೊರಜಗತ್ತಿನ ಘಟನೆಗಳಿಗೆ ಸೀಮಿತವಾಗಿಸದೆ ಅಂತರಂಗ ಪ್ರಪಂಚದ ಅನಂತ ವಿಸ್ತಾರವನ್ನು ಅದಕ್ಕೆ ಒದಗಿಸಿದವರು ಇವರು. ಮಾತ್ರವಲ್ಲದೆ ಮಾನವಸ್ವಭಾವವನ್ನು ಅನೇಕ ನಿಲುವುಗಳಿಂದ ಅನೇಕ ಪಾತಳಿಗಳಲ್ಲಿ ಕಂಡು ವಿಶ್ಲೇಷಿಸಿ ವಿವರಿಸುವ ಇವರ ವಿಧಾನ ಸಣ್ಣ ಕಥೆಗಳ ಪರಿಣಾಮ ಸಾಧನೆಯಲ್ಲಿ ಒಂದು ಹೊಸ ಆಯಾಮವನ್ನೇ ಸಾಧಿಸಿತು. ಸಾಹಿತ್ಯ ನಿರ್ಮಿತಿಯ ಜೊತೆಯಲ್ಲಿ ತಮ್ಮ ಅಧ್ಯಾಪನದ ವಿಷಯವಾದ ಅರ್ಥಶಾಸ್ತ್ರವನ್ನು ಕುರಿತು ಇಂಗ್ಲಿಷಿನಲ್ಲಿ ಮೂರು ಮತ್ತು ಮರಾಠಿಯಲ್ಲಿ ಎರಡು ಗ್ರಂಥಗಳನ್ನು ಇವರು ಬರೆದಿದ್ದಾರೆ. ಮಹಾರಾಷ್ಟ್ರದ ಪ್ರತಿಭಾನ್ವಿತ ಬರೆಹಗಾರರಾಗಿದ್ದ ಇವರ ಕೊಡುಗೆಯನ್ನು ಇವರು ಬರೆದ ಕೃತಿಗಳಲ್ಲಿ ಹೇಗೋ ಹಾಗೆ ಸಣ್ಣ ಕಥೆಗೆ ಇವರು ಕೊಟ್ಟ ತಿರುವಿನಲ್ಲಿಯೂ ಗುರುತಿಸಬಹುದಾಗಿದೆ. ಇವರು 2008 ಸೆಪ್ಟೆಂಬರ್ 15ರಂದು ನಿಧನವಾದರು. (0.00.39.) ಗಾಡಗೀಳ, ಧನಂಜಯ ರಾಮಚಂದ್ರ : 1901-71. ಭಾರತದ ಒಬ್ಬ ವಿಚಾರಶೀಲ ಲೇಖಕ, ಅರ್ಥಶಾಸ್ತ್ರಜ್ಞ ಜನನ 1901ರ ಏಪ್ರಿಲ್ 10 ರಂದು, ಮಹಾರಾಷ್ಟ್ರದ ನಾಸಿಕದಲ್ಲಿ, ನಾಗಪುರದ ಪಟವರ್ಧನ್ ಪ್ರೌಢಶಾಲೆಯಲ್ಲೂ ಕೇಂಬ್ರಿಜಿನ ಕ್ವೆನ್ಸ್ ಕಾಲೇಜಿನಲ್ಲೂ ವ್ಯಾಸಂಗಮಾಡಿ ಎಂ.ಎ., ಎಂ.ಲಿಟ್. ಪದವಿಗಳಿಸಿದರು. ಅರ್ಥಶಾಸ್ತ್ರ ಇವರ ವಿಶೇಷ ವ್ಯಾಸಂಗ ವಿಷಯ. ಇವರ ವಿದ್ವತನ್ನು ಗುರುತಿಸಿ ನಾಗಪುರ, ಕರ್ನಾಟಕ ಹಾಗೂ ಆಗ್ರ ವಿಶ್ವವಿದ್ಯಾಲಯಗಳು ಇವರಿಗೆ ಗೌರವ ಡಿ.ಲಿಟ್. ಪ ದ ಏ ನೀಡಿದುವು. ಗಾಡಿಗೀಳರು ವಿದೇಶದಿಂದ ಹಿಂದಿರುಗಿದೆ ಅನಂತ ರ ಮುಂಬಯಿ ಸರ್ಕಾರದ ಹಣಕಾಸು ಶಾಖೆಯಲ್ಲಿ ಸುಮಾರು ಎರಡು ವರ್ಷ ಕೆಲಸಮಾಡಿದರು. ಆನಂತರ ಸೂರತ್ನ ಕಾಲೇಜೊಂದರಲ್ಲಿ 1925ರಿಂದ 1930ರ ವರೆಗೆ ಪ್ರಿನ್ಸಿಪಾಲರಾಗಿದ್ದರು. 1930 ರಿಂದ 1966ರ ವರೆಗೆ ಪುಣೆಯ ಗೋಖಲೆ ರಾಜ್ಯಶಾಸ್ತ್ರ ಮತ್ತು ಅರ್ಥಶಾಸ್ತ್ರ ಅಧ್ಯಯನ ಸಂಸ್ಥೆಯ ನಿರ್ದೇಶಕರಾಗಿದ್ದರು. 1966-67ರಲ್ಲಿ ಅವರು ಪುಣೆ ವಿಶ್ವವಿದ್ಯಾಲಯದ ಕುಲಪತಿ ಗಳಾಗಿದ್ದರು. ಇವರ ತಜ್ಞತೆಯನ್ನು ಗುರುತಿಸಿ ಭಾರತ ಸರ್ಕಾರ ಇವರನ್ನು ಯೋಜನಾ ಆಯೋಗದ ಉಪಾಧ್ಯಕ್ಷರನ್ನಾಗಿ 1967ರಲ್ಲಿ ನೇಮಿಸಿತು. ಗಾಡಗೀಳರು ಆ ಅವಧಿಯಲ್ಲಿ ಭಾರತದ ವಾರ್ಷಿಕ ಯೋಜನೆಗಳನ್ನು ಮತ್ತು ನಾಲ್ಕ ನೆಯ
ಪುಟ:Mysore-University-Encyclopaedia-Vol-6-Part-4.pdf/೪೬
ಗೋಚರ