ಪುಟ:Mysore-University-Encyclopaedia-Vol-6-Part-5.pdf/೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಗಾಡ್ವಿನ್ ಆಸ್ಟೆನ್ ಶಿಖರ - ಗಾಲ್ವಿನ್, ಹೆನ್ರಿ ಥಾಮಸ್ ಸ್ಥಳಾವಕಾಶವಿರುತ್ತಿದ್ದ ಈ ವಾಹನಗಳು ಹಗುರಾಗಿರುತ್ತಿದ್ದುವು. ಪೋಲೋಕಾರ್ಟ್ ಕ್ಯಾಬ್ರಿಯೊಲೆ, ಡಾಗ್‌ಕಾರ್ಟ್ ಮತ್ತು ಸಲ್ಕಿ ಈ ಬಗೆಯವು. ಬಕ್‌ಬೋರ್ಡ್, ಬಗ್ಗಿ, ಸರಿ, ಬ್ಯಾರೂಪ್, ಬ್ರೂಮ್ ಇವು ನಾಲ್ಕು ಚಕ್ರದ ವಾಹನಗಳಾಗಿದ್ದುವು. ಸಾಮಾನ್ಯವಾಗಿ ಇವುಗಳ ಮುಂದಿನ ಚಕ್ರಗಳು ಆಕಾರದಲ್ಲಿ ಕಿರಿಯವಾಗಿರುತ್ತಿದ್ದುವು. ಕಡಿದಾದ ತಿರುವು ತೆಗೆದುಕೊಳ್ಳಲು ಅನುವು ಮಾಡಿ ಕೊಡುವುದೇ ಇದರ ಉದ್ದೇಶವಾಗಿತ್ತು. ೧೯ನೆಯ ಶತಮಾನದ ಮಧ್ಯ ಭಾಗದ ಹೊತ್ತಿಗೆ ಸ್ವಯಂಚಾಲಿತ ವಾಹನಗಳ ಯುಗ ಆರಂಭವಾಗಿ, ದಿನಗಳೆದಂತೆ ಅವುಗಳ ಉತ್ಕರ್ಷ ಸಾಧಿತವಾಗುತ್ತ ಬಂದುದರಿಂದ ಈ ಎಲ್ಲ ವಾಹನಗಳೂ ಮೂಲೆಗುಂಪಾಗಿ, ಸೀಮಿತೋದ್ದೇಶಗಳಿಗೆ ಮಾತ್ರ ಬಳಕೆಯಾಗುತ್ತಿವೆ. ಕೆಲವಂತೂ ಅವಶೇಷ ಮಾತ್ರವಾಗಿ ಉಳಿದಿವೆ (ನೋಡಿ- ತೇರು: ರಥ). +44+++ (ಪಿ.ಜಿ.ಡಿ.)

ಗಾಡ್ರಿನ್ ಆಸ್ಟೆನ್ ಶಿಖರ : ಹಿಮಾಲಯ ಪರ್ವತದ ಶಾಖೆಗಳಲ್ಲೊಂದಾದ ಕಾರಕೋರಂ ಶ್ರೇಣಿಯ ಉನ್ನತ ಶಿಖರಗಳಲ್ಲಿ ಒಂದು. ಇದಕ್ಕೆ K2 (ಕೇಟೂ) ಶಿಖರ ಎಂದೂ ಹೆಸರಿದೆ. ಟಿಬೆಟ್ ಭಾಷೆಯಲ್ಲಿ ಇದರ ಹೆಸರು ದಾಪ್ಸಾಂಗ್. ಶ್ರೀನಗರದಿಂದ ಈಶಾನ್ಯಕ್ಕೆ ೨೫೬.ಕಿ.ಮೀ ದೂರದಲ್ಲಿದೆ. ವಿಶ್ವದಲ್ಲಿ ಇದು ಎರಡನೆಯ ಉನ್ನತ ಶಿಖರ. ಇದರ ಎತ್ತರ ೮,೬೧೧ ಮೀ. (೨೮,೨೫೧'). ಮಂಜುಗಡ್ಡೆ ಇದನ್ನು ಸದಾ ಮುಚ್ಚಿರುತ್ತದೆ. ಇದರ ನೆತ್ತಿಯನ್ನು ಮುಟ್ಟುವ ದಾರಿ ಅತ್ಯಂತ ದುರ್ಗಮವಾದ್ದು. ೧೮೫೦ರಲ್ಲಿ ಲೆಫ್ಟಿನೆಂಟ್ ಕರ್ನಲ್ ಹೆನ್ರಿ ಹ್ಯಾವರ್‌ ಶ್ಯಾಮ್ ಗಾಡ್ವಿನ್ ಆಸ್ಟೆನ್ (೧೮೩೪ - ೧೯೨೩) ಎಂಬ ಭೂಗೋಳಶಾಸ್ತ್ರಜ್ಞ ಈ ಶಿಖರದ ಸರ್ವೆಕ್ಷಣೆ ಮಾಡಿದ. ಇದಕ್ಕೆ ಅವನ ಹೆಸರೇ ಬಳಕೆಗೆ ಬಂದಿದೆ. ಬಾಲ್ಟೊರೊ ನೀರ್ಗಲ್ಲ ನದಿ ಇಲ್ಲಿ ಉಗಮಿಸುತ್ತದೆ. ಈ ಶಿಖರವನ್ನೇರಲು ಇಟಲಿಯ ಪರ್ವತಾರೋಹಣ ತಂಡವೊಂದು ೧೯೫೪ ರಲ್ಲಿ ಪ್ರಥಮವಾಗಿ ಪ್ರಯತ್ನಪಟ್ಟಿತು. ಈ ತಂಡದ ನಾಯಕನಾಗಿದ್ದವ ಮಿಲಾನ್ ವಿದ್ಯಾಪೀಠದ ಭೂವಿಜ್ಞಾನ ಪ್ರಾಧ್ಯಾಪಕ ಆರ್ಡಿಟೊ ಡೇಸಿಓ. ಅವನ ಅನಂತರ ೧೯೫೫ರಲ್ಲಿ ಜರ್ಮನ್ ಮತ್ತು ಇಂಗ್ಲಿಷ್ ಪರ್ವತಾರೋಹಣ ತಂಡಗಳು ಗಾಡ್ರಿನ್ ಶಿಖರವನ್ನು ಏರಿದುವು.

ಗಾಲ್ವಿನ್, ಮೇರಿ : ೧೭೫೯-೯೭. ಸ್ತ್ರೀಸುಧಾರಣೆಗಾಗಿ ದುಡಿದ ಆಂಗ್ಲ ಲೇಖಕಿ. ಐರಿಷ್ ಕುಟುಂಬದಿಂದ ಬಂದವಳು. ತಂದೆಯ ದುಂದಿನ ಪರಿಣಾಮವಾಗಿ, ತಾಯಿಯ ಮರಣಾನಂತರ ೧೯ರ ತರುಣದಲ್ಲೇ ಈಕೆ ಸ್ವಾವಲಂಬಿಯಾಗಿ ಬಾಳಬೇಕಾಯಿತು. ಪ್ರಾರಂಭದಲ್ಲಿ ಕಸೂತಿ ಕೆಲಸ ಮಾಡಿ, ಅನಂತರ ತಾನೇ ಪ್ರಾರ೦ಬಿಸಿದ ಶಾಲೆಯಲ್ಲಿ ಶಿಕ್ಷಕಿಯಾಗಿ ಸ್ವಲ್ಪ ಕಾಲ ದುಡಿದು ಶಾಲೆನಡೆಸುವುದು ಅಶಕ್ಯವಾದಾಗ ಬರೆವಣಿಗೆಗೆ ಕೈಹಾಕಿದಳು. ಈಕೆಯ ಮೊದಲ ಕಾದಂಬರಿ ಮೇರಿ ಎಂಬುದು ಒಂದು ಕಲ್ಪಿತ ಕಥನ. ಈಕೆ ಐರ್ಲೆಂಡ್‌ನಲ್ಲಿ ಲಾರ್ಡ್ ಕಿಂಗ್ಸ್‌ಬರಾನ ಮನೆಯಲ್ಲಿ ಮಕ್ಕಳಿಗೆ ಪಾಠ ಕಲಿಸುವ ಶಿಕ್ಷಕಿಯಾಗಿ ಸ್ವಲ್ಪಕಾಲ ಕೆಲಸ ಮಾಡಿದ್ದೂ ಉಂಟು. ಕೆಲಸವೂ ಹೋದಮೇಲೆ ಈಕೆಯ ಒಲವು ಪೂರ್ಣವಾಗಿ ಸಾಹಿತ್ಯದ ಕಡೆ ತಿರುಗಿತು. ಮೊದಲು ದಿ ಎಲಿಮೆಂಟ್ಸ್ ಆಫ್ ಮೊರ್‍ಯಾಲಿಟಿ ಮತ್ತು ಫಿಸಿಯಾನಮಿ ಎಂಬ ಎರಡು ಹೊತ್ತಿಗೆಗಳನ್ನು ಭಾಷಾಂತರಿಸಿದಳು. ಒರಿಜಿನಲ್ ಸ್ಟೋರೀಸ್ ಫ್ರಾಮ್ ರಿಯಲ್ ಲೈಫ್ (೧೭೯) ಎಂಬ ಈಕೆಯ ಪುಸ್ತಕಕ್ಕೆ ಕವಿ ವಿಲಿಯಂ ಬ್ರೇಕ್ ಚಿತ್ರಗಳನ್ನು ಬರೆದಿದ್ದಾನೆ. ಮಾರನೆಯ ವರ್ಷವೇ ಸ್ತ್ರೀಯ ಹಕ್ಕುಗಳನ್ನು ಸಮರ್ಥಿಸಿ ಈಕೆ ಬರೆದ ಪ್ರಸಿದ್ಧ ಗ್ರಂಥ ವಿಂಡಿಕೇಷನ್ ಆಫ್ ದಿ ರೈಟ್ಸ್ ಆಫ್ ವಿಮೆನ್ ಎಂಬುದು ಹೊರಬಂತು. ಆಗಿನ ಸಮಾಜದಲ್ಲಿ ಬಿರುಗಾಳಿಯನ್ನೇ ಎಬ್ಬಿಸಿದ ಈ ಗ್ರಂಥದಲ್ಲಿ ಸ್ತ್ರೀಶಿಕ್ಷಣದ ಅಗತ್ಯವನ್ನು ಒತ್ತಿ ಹೇಳಲಾಗಿದೆ.

೧೭೯೨ ರಲ್ಲಿ ಫ್ರಾನ್ಸಿನ ಕ್ರಾಂತಿಯ ಪ್ರಗತಿಯನ್ನು ವೀಕ್ಷಿಸಲು ಹೋದಾಗ ಕ್ಯಾಪ್ಟನ್ ಗಿಲ್ಬರ್ಟ್ ಇಮ್‍ಲಿ ಎಂಬುವನನ್ನು ಪ್ಯಾರಿಸಿನಲ್ಲಿ ಭೇಟಿಯಾದಳು. ಇಬ್ಬರಿಗೂ ವಿವಾಹವಾಯಿತು. ಒಬ್ಬ ಮಗಳು ಹುಟ್ಟಿದ ಅನಂತರ ೧೯೭೪ರಲ್ಲಿ ವಿವಾಹ ವಿಚ್ಛೇದವಾಯಿತು. ಇದೇ ಸಮಯದಲ್ಲಿ ಈಕೆ ಫ್ರಾನ್ಸಿನ ಮಹಾಕ್ರಾಂತಿಯನ್ನು ಕುರಿತು ಒಂದು ಗ್ರಂಥ ಬರೆದಳು. ೧೯೭೬ರಲ್ಲಿ ಈಕೆ ಲಂಡನ್ನಿಗೆ ಬಂದು ಇಂಗ್ಲಿಷ್ ಲೇಖಕ, ತತ್ತ್ವಶಾಸ್ತ್ರನಿಪುಣ ವಿಲಿಯಂ ಗಾಡ್ವಿನ್ ಎಂಬಾತನನ್ನು ಸಂಧಿಸಿದಳು. ಮಾರನೆಯ ವರ್ಷವೇ ಇವರಿಬ್ಬರೂ ವಿವಾಹವಾದರು. ಅದೇ ವರ್ಷ ಮೇರಿ ಎಂಬ ಹೆಣ್ಣು ಮಗುವಿಗೆ ಜನ್ಮವಿತ್ತು ಗಾಡ್ವಿನ್ ತೀರಿಕೊಂಡಳು. ಮುಂದೆ ಕವಿ ಷೆಲ್ಲಿ ಇದೇ ಮೇರಿಯನ್ನು ಮದುವೆಯಾದ. ಗಾಡ್ವಿನ್ ಬರೆದಿರುವ ಗ್ರಂಥಗಳಲ್ಲಿ ಮುಖ್ಯವಾದ ಇನ್ನೆರಡು ಗ್ರಂಥಗಳು ಇವು: ಥಾಟ್ಸ್ ಆಪ್ ದಿ ಎಜುಕೇಷನ್ ಆಫ್ ಡಾಟರ್ಸ್; ವಿಂಡಿಕೇಷನ್ ಆಫ್ ದಿ ರೈಟ್ಸ್ ಆಫ್ ಮ್ಯಾನ್. ಗಾಡ್ವಿನ್ ಮೇರಿಯ ಜೀವನ ಚರಿತ್ರೆಯನ್ನು ಗಂಡ ವಿಲಿಯಂ ಗಾಡ್ವಿನ್ ಬರೆದಿದ್ದಾನೆ. (ಪಿ.ಎಂ.ಎಚ್.) ಗಾಡ್ವಿನ್, ವಿಲಿಯಂ : ೧೧೭೫೬-೧೮೩೬, ಇಂಗ್ಲಿಷ್ ಕಾದಂಬರಿಕಾರ ಮತ್ತು ತತ್ತ್ವಶಾಸ್ತ್ರಜ್ಞ, ಕೇಂಬ್ರಿಜ್‌ಷೈರಿನ ವಿಸ್‌ಬೆಕ್ ಎಂಬಲ್ಲಿ ಜನಿಸಿದ. ವ್ಯಾಸಂಗ ಮಾಡಿದ್ದು ನಾರ್ವಿಚ್ ಶಾಲೆಯಲ್ಲಿ. ತಂದೆ ಮಠಾಧಿಕಾರಿ, ಮಗನೂ ತನ್ನಂತೆ ಆಗಬೇಕೆಂದು ಆತನ ಬಯಕೆ, ಅದಕ್ಕಾಗಿ ಮಗ ಹಾಕ್ಸ್‌ಟನ್ ಕಾಲೇಜಿನಲ್ಲಿ ವ್ಯಾಸಂಗ ಮುಂದುವರಿಸಬೇಕಾಯಿತು. ವ್ಯಾಸಂಗಾನಂತರ ಗಾಡ್ವಿನ್ ೧೭೭೮ ರಿಂದ ೧೭೮೩ ರ ವರೆಗೆ ಕ್ರೈಸ್ತ ಪುರೋಹಿತನಾಗಿ ಕೆಲಸ ಮಾಡಿದ. ೧೭೮೨ ರಲ್ಲಿ ಲಂಡನ್ ನಗರಕ್ಕೆ ಬಂದು ನೆಲಸಿದ. ಮತಧರ್ಮದ ವಿಚಾರದಲ್ಲಿ ಬಗೆಹರಿಯದ ಶಂಕೆಗಳುಂಟಾಗಿ ಧರ್ಮದ ಬಗ್ಗೆ ಹೊಸ ಭಾವನೆಗಳು, ನಂಬಿಕೆಗಳು ಮೂಡಿದ್ದರಿಂದ ಪುರೋಹಿತ ಕೆಲಸಕ್ಕೆ ರಾಜೀನಾಮೆ ಇತ್ತು ಸಾಹಿತ್ಯದ ಕಡೆ ತಿರುಗಿದ. ಪ್ರಾರ್ಥನಾಸಭೆಯ ಉಪದೇಶ ಭಾಷಣಗಳ ಶೈಲಿಯಲ್ಲಿ ಈತ ಬರೆದ ಇತಿಹಾಸ ಚಿತ್ರಗಳ ಮೊದಲ ಪುಸ್ತಕ ಯಾರ ಗಮನವನ್ನೂ ಸೆಳೆಯಲಿಲ್ಲ. ಅನಂತರ ಗಾಡ್ವಿನ್ ನ್ಯೂ ಆನ್ಯುಯಲ್ ರಿಜಿಸ್ಟರಿನ ಪ್ರಮುಖ ಲೇಖಕರಲ್ಲಿ ಒಬ್ಬನಾಗಿ ರಾಜಕೀಯ ಮತ್ತು ಸಾಮಾಜಿಕ ಸುಧಾರಕನೆಂದು ಪ್ರಸಿದ್ಧಿ ಪಡೆದ. ಸರ್ಕಾರದಿಂದ ಅಧಿಕಾರದ ದುರುಪಯೋಗವಾಗುತ್ತದಾಗಿ ಅದರ ಅಗತ್ಯವಿಲ್ಲ. ಪರಸ್ಪರ ಗೌರವಯುತ ಸಂಬಂಧ ಮುಖ್ಯವಾದ್ದರಿಂದ ವಿವಾಹ ವಿಧಿಯ ಅಗತ್ಯವಿಲ್ಲ – ಮುಂತಾದ ಈತನ ತತ್ತ್ವಗಳನ್ನು ಇನ್‌ಕ್ವಯರಿ ಕನ್ಸರ್ನಿಂಗ್ ಪೊಲಿಟಿಕಲ್ ಜಸ್ಟೀಸ್ (೧೭೯೩) ಎಂಬ ಗ್ರಂಥದಲ್ಲಿ ಕಾಣುತ್ತೇವೆ. ಒಂದು ವರ್ಷದ ಅನಂತರ ಈತನ ಸಾಮಾಜಿಕ ಸಿದ್ಧಾಂತಗಳನ್ನೊಳಗೊಂಡ ಕಾಲೆಬ್ ವಿಲಿಯಂಸ್ ಎಂಬ ಪ್ರಸಿದ್ಧ ಕಾದಂಬರಿ ಹೊರಬಂತು. ಈತನ ಪ್ರಸಿದ್ಧ ಕಾದಂಬರಿಗಳಲ್ಲಿ ಎರಡನೆಯದು ಸೇಂಟ್ ಲಿಯಾನ್ (1799), ಪ್ಲೇಟ್‌ವುಡ್ (1804), ಮ್ಯಾಂಡೆವಿಲ್ (೧೮೭) ಮತ್ತು ಕೌಡ್‌ (೧೮೩೦) ಈತನ ಇತರ ಕಾದಂಬರಿಗಳು. ಗಾಲ್ವಿನ್ ೧೮೦೩ರಲ್ಲಿ ಚಾಸರನ ಜೀವನ ಚರಿತ್ರೆಯನ್ನು ಎರಡು ಸಂಪುಟಗಳಲ್ಲಿ ಹೊರತಂದ. ೧೮೦೮ ರಲ್ಲಿ ಎನ್ ಎಸ್ಸೆ ಆನ್ ಸೆಪಲ್‌ಕರ್ಸ್ ಎಂಬುದೂ ೧೮೨೪-೨೮ರಲ್ಲಿ ಹಿಸ್ಟರಿ ಆಫ್ ದಿ ಕಾಮನ್‌ವೆಲ್ತ್ ಆಫ್ ಇಂಗ್ಲೆಂಡ್ ಎಂಬುದೂ ಬೆಳಕು ಕಂಡವು. ಈತನ ಕೊನೆಯ ಕೃತಿ ಲೈವ್ ಆಫ್ ದಿ ನೆಕ್ರೋಮ್ಯಾನ್ಸರ್ 1೧೮೩೪ರಲ್ಲಿ ಪ್ರಕಟವಾಯಿತು. ಕೆಲವು ಕಾಲ ಗಾಡ್ವಿನ್ ಪುಸ್ತಕ ಪ್ರಕಟಣ ಉದ್ಯೋಗವನ್ನೂ ಕೈಗೊಂಡಿದ್ದ. ಗಾಡ್ವಿನ್ ೧೭೯೭ರಲ್ಲಿ ಮೇರಿ ಉಲ್‌ಸ್ಟನ್‌ಕ್ರಾಫ್ಟ್ (ನೋಡಿ- ಗಾಡ್ವಿನ್,-ಮೇರಿ) ಎಂಬಾಕೆಯನ್ನು ವಿವಾಹವಾದನಲ್ಲದೆ ಆಕೆಯ ಜೀವನಚರಿತ್ರೆಯೊಂದನ್ನು ಬರೆದಿದ್ದಾನೆ. ಆಕೆಯ ಮರಣಾನಂತರ ೧೮೦೧ರಲ್ಲಿ ಮೇರಿ ಜೇನ್ ಕ್ಲರ್‌ಮಾಂಟ್ ಎಂಬ ವಿಧವೆಯನ್ನು ಈತ ವಿವಾಹವಾದ. ಗಾಡ್ವಿನ್‍ಮೇರಿ ಮತ್ತು ಗಾಡ್ವಿನ್ ವಿಲಿಯಂ ಪುತ್ರಿ ಮೇರಿಯನ್ನು ೧೮೧೬ರಲ್ಲಿ ಷೆಲ್ಲಿ ವಿವಾಹವಾದ. ವರ್ಡ್ಸ್‌ವರ್ತ್, ಕೋಲ್‌ರಿಜ್ ಮತ್ತು ಷೆಲ್ಲಿ ಮೊದಲಾದವರು ಗಾಡ್ವಿನ್‍ನಿಂದ ಸಾಕಷ್ಟು ಪ್ರಭಾವಿತರಾಗಿದ್ದಾರೆ. ಗಾಡ್ವಿನ್, ಹೆನ್ರಿ ಥಾಮಸ್ : ೧೭೮೪-೧೮೫೩. ಬ್ರಿಟಿಷ್ ಭಾರತ ಸೇನೆಯ ಒಬ್ಬ ಅಧಿಕಾರಿ. ೧೮೨೪-೨೬ರಲ್ಲಿ ಒಂದನೆಯ ಬರ್ಮ ಯುದ್ಧದಲ್ಲಿ ಭಾಗವಹಿಸಿದ್ದ. ೧೮೪೬ರಲ್ಲಿ ಮೇಜರ್ ಜನರಲ್ ಆದ. ೧೮೫೨-೫೩ರಲ್ಲಿ ನಡೆದ ಎರಡನೆಯ ಬರ್ಮ ಯುದ್ಧದಲ್ಲಿ ಗಾಡ್ವಿನ್ ನಾಯಕತ್ವದಲ್ಲಿ ಬ್ರಿಟಿಷ್ ಭೂಸೇನೆ ಕಾರ್ಯಾಚರಣೆ ನಡೆಸಿತು. ತನ್ನ ಸಾಹಸಕ್ಕಾಗಿ ನೈಟ್ ಪದವಿ ಪಡೆದಿದ್ದ ಗಾಡ್ರಿನ್ ೧೮೫೩ರಲ್ಲಿ ಸಿಮ್ಲಾದಲ್ಲಿ ತೀರಿಕೊಂಡ. (ವಿ.ಕೆ)