ಪುಟ:Mysore-University-Encyclopaedia-Vol-6-Part-5.pdf/೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಗಾದೆಗಳು ೨೨೧ ನಂಬಲರ್ಹವಾದ ಸಾಕ್ಯ್ಷಗಳಾಗಿವೆ. ಗಾದೆಗಳು ಮೌಲ್ಯ ಮತ್ತೂ ಮಹತ್ತ್ವವನ್ನು ಈ ಮಾತುಗಳು ತಿಳಿಸುತ್ತವೆ.

ಕನ್ನಡದಲ್ಲಿ ಗಾದೆಗಳು : ಕನ್ನಡದಲ್ಲಿ ಗಾದೆಗಳ ಕ್ಷೇತ್ರದಲ್ಲಿ ತಕ್ಕಮಟ್ಟಿಗೆ ಕೆಲಸ ನಡೆದಿದೆ.ಇದಕ್ಕೆ ಏನಿಲ್ಲವೆಂದರೂ ನೂರು ವರ್ಷಗಳ ಇತಿಹಾಸವಿದೆ.ಈ ಕ್ಷೇತ್ರದಲ್ಲಿಯೂ ಮೊದಲು ಕೆಲಸ ಮಾಡಿದವರು ಕ್ರೈಸ್ತ ಮಿಷನರಿಗಳೇ. 1894ರಲ್ಲಿ ಪ್ರಕಟವಾದ ಕಿಟ್ಟೆಲ್ ಅವರ ಶಬ್ದಕೋಶದಲ್ಲಿಯೇ ಅಪಾರ ಸಂಖ್ಯೆಯ ಗಾದೆಗಳನ್ನು ಕಾಣುತ್ತೆವೆ. ಈ ಎಲ್ಲ ಗಾದೆಗಳನ್ನು ಒಂದು ಕಡೆ ಕಲೆಹಾಕಿ ಕಿಟ್ಟೆಲ್ ಕೋಶದ ಗಾದೆಗಳು ಎಂಬ ಹೆಸರಿನಲ್ಲಿ ರಗೌ ಹೊರತಂದಿದ್ದಾರೆ. ಇದರಲ್ಲಿ ನಾಲ್ಕು ಸಾವಿರಕ್ಕೂ ಹೆಚ್ಚು ಗಾದೆಗಳಿರುವ ವಿಷಯ ಗೊತ್ತಾಗುತ್ತದೆ. ಒಂದು ಶತಕದ ಹಿಂದೆಯೇ ಕಿಟ್ಟೆಲ್ ಅವರ ಕರ್ಣಾಟಕದ ನಾನಾ ಭಾಗಗಳಿಂದ ಗಾದೆಗಳನ್ನು ಸಂಗ್ರಹಿಸಿದ್ದರೆಂಬುದು ಗಮನಾರ್ಹ ಸಂಗತಿ. ಅವರು ತಮ್ಮ ಅರ್ಥಕೋಶದ ಗ್ರಾಮ್ಯಶಬ್ಬಗಳ ಅರ್ಥ ಸ್ಪಷ್ಟೀಕರಣಕ್ಕಾಗಿ ಈ ಗಾದೆಗಳನ್ನು ಬಳಸಿಕೊಂಡಿದ್ದಾರೆ. ಒಟ್ಟಿನಲ್ಲಿ ಅವರ ಸಂಗ್ರಹ ಬಹಳ ಮಹತ್ತ್ವದ್ದಾಗಿದೆ ಮತ್ತು ಅದಕ್ಕೆ ವಿಶೇಷ ಐತಿಹಾಸಿಕ ಮೌಲ್ಯವಿದೆ.ಇದರ ತರವಾಯ ಮಂಗಳೂರಿನ ಬಾಸೆಲ್ ಮಿಷನ್ ಪ್ರೆಸ್ಸಿನವರು ಕರ್ಣಾಟಕ ಲೋಕೋಕ್ತಿನಿಧಾನ ಎಂಬ ಗ್ರಂಥವೊಂದನ್ನು 1912ರಲ್ಲಿ ಪ್ರಕಟಿಸಿದರು.ಪುಸ್ತಕರೂಪದಲ್ಲಿ ಪ್ರಕಟವಾದ ಗಾದೆಗಳ ಸಂಕಲಗಳಲ್ಲಿ ಇದು ಮೂದಲನೆಯದು. 1919ರಲ್ಲಿ ಮರುಮುದ್ರಣವನ್ನು ಕಂಡ ಇದು ಈಗ ದೊರೆಯದಾಗಿದೆ. ಇದರಲ್ಲಿ 1500 ರೂಢಿಯ ಗಾದೆಗಳಿದ್ದು, ಕೆಲವಕ್ಕೆ ಜೊತೆಯಲ್ಲಿಯೇ ಅರ್ಥವಿವರಣೆಯನ್ನೊ ಕೊಡಲಾಗಿದೆ.

ಇದರ ಆನಂತರ ಪ್ರಕಟವಾದ ಪ್ರಮುಖ ಸಂಗ್ರಹವೆಂದರೆ ಎಚ್.ಎಸ್.ಅಚ್ಚಪ್ಪನವರ ಕನ್ನಡ ಗಾದೆಗಳು.1944ರಲ್ಲಿ ಪ್ರಕಟವಾದ ಈ ಕೃತಿ 1959ರಲ್ಲಿ ಎರಡನೆಯ ಮುದ್ರಣವನ್ನೂ ಕಂಡಿತು. ಇದೊಂದು ಉತ್ತಮ ಸಂಕಲನವಾಗಿದ್ದು, ಜನಪ್ರಿಯವಾಗಿದೆ.ಗಾದೆಗಳ ಕೆಲಸಕ್ಕೆ ತಮ್ಮನ್ನು ಅರ್ಪಿಸಿಕೊಂಡ ಅಚ್ಚಪ್ಪನವರ 1969ರಲ್ಲಿ ಗ್ರಂಥಸ್ಥ ಗಾದೆಗಳು ಎಂಬ ಗಾದೆಗಳ ಬೃಹತ್ ಕೋಶವೊಂದನ್ನು ಹೊರತಂದಿದ್ದಾರೆ. ಕನ್ನಡ ಪ್ರಸಿದ್ದ ಕವಿಗಳ ಕಾವ್ಯಗಳಲ್ಲಿ ಉಕ್ತವಾಗಿರುವ ಎಲ್ಲ ಗಾದೆಗಳನ್ನೂ ಒಂದು ಕಡೆ ಕಲೆಹಾಕುವ ಕಾರ್ಯ ಇಲ್ಲಿ ನಡೆದಿದೆ. ನೃಪತುಂಗನ ಕವಿರಾಜಮಾರ್ಗದಿಂದ ಮುದ್ದಣನ ಶ್ರೀರಾಮ ಪಟ್ಟಾಭಿಷೇಕದವರೆಗಿನ ಗಾದೆಗಳು ಇಲ್ಲಿ ಸಂಕಲನಗೊಂಡಿವೆ. ಇದರಲ್ಲಿ ಅನುಸರಿಸಿರುವ ಕ್ರಮವೆಂದರೆ,ಕವಿ-ಕಾವ್ಯಾದಿ ಆಕರವನ್ನು ಕೊಟ್ಟು,ಅದರಲ್ಲಿ ಬಂದಿರುವ ಗಾದೆಗಳನ್ನು ಆಕಾರಾದಿಯಾಗಿ ಪಟ್ಟಿ ಮಾಡಿರುವುದು.ಕೆಲವೊಮ್ಮೆ ಗಾದೆಗಳಂತೆ ತೋರುವ ಉದ್ದರಣೆಗಳು,ಸಾಮತಿಗಳು.ಜಾಣ್ಣುಡಿಗಳು,ಸೂಕ್ತಿಗಳು,ರೂಪಕಗಳು ಮುಂತಾದವೂ ಇಲ್ಲಿ ಸೇರಿಹೋಗಿವೆ. ಜನಪದದಿಂದ ಕವಿಕೃತಿಗಳಿಗೆ ಹೋಗಿ ನೆಲೆಗೊಂಡಿರುವ ಶುದ್ದ ಗಾದೆಗಳನ್ನು ಮಾತ್ರ ಆಯ್ದುಕೊಂಡಿದ್ದರೆ ಚೆನ್ನಾಗಿರುತ್ತಿತೇನೋ ಎನಿಸುತ್ತದೆ. ಆದರೂ ಇದೊಂದು ಉಪಯುಕ್ತವೂ ಉತ್ತಮವೂ ಆದ ಕೆಲಸವೆನ್ನುವುದರಲ್ಲಿ ಸಂಶಯವಿಲ್ಲ. ಗ್ರಂಥದ ಕಡೆಯಲ್ಲಿ ಕೊಟ್ಟಿರುವ ಶಬ್ದಕೋಶವೊಂದು ಉಪಯುಕ್ತ ಭಾಗ.

ಮುಂದಿನ ಗಮನಾರ್ಹ ಕೃತಿಯೆಂದರೆ 1959ರಲ್ಲಿ ಪ್ರಕಟವಾದ ಜಂಗಮಕೋಟಿ ಕೃಷ್ಣಶಾಸ್ತ್ರಿ ಅವರ ಗಾದೆಗಳ ಭಂಡಾರ ಭಾಗ 1 ಎಂಬ ಸಂಕಲನ. ಇದು ಬೆಂಗಳೂರಿನ ಸತ್ಯಶೋಧನ ಪ್ರಕಟನ ಮಂದಿರದಿಂದ ಪ್ರಕಾಶನಗೊಂಡಿದೆ. ಇದರಲ್ಲಿ ಮೂರು ಸಾವಿರಕ್ಕೂ ಹೆಚ್ಚು ಗಾದೆಗಳಿದ್ದು,ಅವನ್ನು ವಿಷಯಾನುಸಾರವಾಗಿ ವಿಂಗಡಿಸಿ ಆಕಾರಾದಿಯಾಗಿ ಕೊಡಲಾಗಿದೆ. ಈ ವಿಂಗಡಣೆ ಸಮಂಜಸವಾಗಿದೆಯೆಂದು ಹೇಳಲಾಗುವುದಿಲ್ಲ. ಕೆಲವು ಗಾದೆಗಳಿಗೆ ಅಡಿ ಟಿಪ್ಪಣಿಯಲ್ಲಿ ಅರ್ಥವನ್ನೂ ವಿವರಣೆಯನ್ನೊ ನೀಡಿದ್ದಾರೆ. ಸಂಸ್ಕ್ರತದ ನೂರಾರು ಗಾದೆಗಳನ್ನು ಕನ್ನಡದ ಅನುವಾದದೊಡನೆ ಸೇರಿಸಲಾಯಿತು ಎಂದಿದ್ದಾರೆ.

ಈ ಸಂದರ್ಭದಲ್ಲಿ ದಕ್ಷಣ ಭಾಷಾ ಪುಸ್ತಕ ಸಂಸ್ಥೆಯ ಆಶ್ರಯದಲ್ಲಿ 1962ರಲ್ಲಿ ಪ್ರಕಟವಾದ ನಾಲ್ ನುಡಿ - ನಾಣ್ಣುಡಿ ಎಂಬ ಗ್ರಂಥವನ್ನು ಅಗತ್ಯವಾಗಿ ನೆನೆಯಬೇಕು, ಕನ್ನಡ, ತೆಲುಗು, ತಮಿಳು, ಮಲಯಾಳ ಭಾಷೆಗಳಲ್ಲಿನ 467 ಸಮಾನ ಗಾದೆಗಳು ಇಲ್ಲಿ ಸಂಗ್ರಹಗೊಂದಿವೆ. ಇದರ ಸಂಪಾದಕರಲ್ಲಿ ಕನ್ನಡವನ್ನು ಪ್ರತಿನಿಧಿಸಿ ಎಂ.ಮರಿಯಪ್ಪ ಭಟ್ಟರಿದ್ದಾರೆ. ಎನ್.ವೆಂಕಟರಾವ್, ಆರ್.ಪಿ.ಸೇತುಪಿಳ್ಳೆ ಮತ್ತು ಎಸ್.ಕೆ.ನಾಯಕ್ ಅವರು ಉಳಿದ ಭಾಷೆಗಳ ಪ್ರತಿನಿಧಿಗಳಾಗಿದ್ದಾರೆ. ದ್ರಾವಿಡ ಭಾಷೆಗಳ ಗಾದೆಗಳ ತೌಲನಿಕ ಅಧ್ಯಯನಕ್ಕೆ ಈ ಗ್ರಂಥ ಸಾಮಗ್ರಿ ಒದಗಿಸುತ್ತದೆ. 1963ರಲ್ಲಿ ಪ್ರಕಟವಾದ ಟಿ.ವಿ.ವೆಂಕಟರಮಣಯ್ಯನವರ ಕನ್ನಡ ಗಾದೆಗಳ ಕೋಶ ಒಂದು ಉಲ್ಲೇಖನೀಯ ಕೃತಿಯಾಗಿದೆ. ಇದರ ಪರಿಷ್ಕೃತ ಹಾಗೂ ವಿಸ್ತ್ರತ ಆವೃತ್ತಿ 1969ರಲ್ಲಿ ಪ್ರಕಟಗೊಂಡಿದೆ. ಮೊದಲ ಮುದ್ರಣದಲ್ಲಿದ್ದ ಗಾದೆಗಳು ನಾಲ್ಕು ಸಾವಿರವಾದರೆ, ಎರಡನೆಯ ಮುದ್ರಣದಲ್ಲಿ ಎಂಟು ಸಾವಿರಕ್ಕೂ ಹೆಚ್ಚಿವೆ. ಈಗಾಗಲೇ ಪ್ರಕಟವಾಗಿದ್ದ ಹಲವಾರು ಗಾದೆಗಳು ಇಲ್ಲಿ ಮತ್ತೆ ಪುನರಾವರ್ತನಗೊಂಡಿವೆ. ಕನ್ನಡ ಕವಿಗಳ ಕಾವ್ಯಗಳಿಂದ ತೆಗೆದ ಗಾದೆಗಳೂ ಸಂಸ್ಕೃತದ ಗಾದೆಗಳೂ ಕೆಲವು ಸೇರಿವೆ. ಗಾದೆಗಳನ್ನು ವಿಷಯಾನುಸಾರವಾಗಿ ವಿಭಾಗಿಸಿದ್ದರೂ ಸಮರ್ಪಕವೆನಿಸುವಂತಿಲ್ಲ. ಮೊಟ್ಟಮೊದಲಿಗೆ ಪ್ರಕಟವಾದ ಗಾದೆಗಳೂ ಇಲ್ಲಿರುವುದರಿಂದ ಇದೊಂದು ಗಮನಾರ್ಹ ಕೃತಿಯಾಗಿದೆ.ಇದಲ್ಲದೆ ಗ್ರಂಥದ ಕಡೆಯಲ್ಲಿ ಕೆಲವು ಸಮಾನಾರ್ಥಕ ಕನ್ನಡ -ಇಂಗ್ಲೀಷ್ ಗಾದೆಗಳನ್ನು ಕೊಟ್ಟಿರುವುದು ಉಪಯುಕ್ತವಾಗಿದೆ.

ಇಲ್ಲಿ ಹೇಳಬೇಕಾದ ಮತ್ತೂಂದು ಗಾದೆಗಳ ಸಂಗ್ರಹವೆಂದರೆ ರಾಗೌ ಅವರ ನಮ್ಮ ಗಾದೆಗಳು. ಇದು 1968ರಲ್ಲಿ ಎರಡು ಸವಿರಕ್ಕೂ ಹೆಚ್ಚು ಗಾದೆಗಳಿದ್ದು ಅವೆಲ್ಲ ಮೊದಲಬಾರಿಗೆ ಪ್ರಕಟವಾಗಿವೆ. ಇಲ್ಲಿಯ ಗಾದೆಗಳೆಲ್ಲ ಪ್ರಾದೇಶಿಕ ಸ್ವರೂಪದವು. ಕೆಲವು ಗಾದೆಗಳು ಪುನರುಕ್ತವಾದಂತೆ ಕಂಡರೂ ಪಾಠಾಂತರ ಅಥವಾ ವಿಶೇಷ ಪದಪ್ರಯೋಗ ಅಥವಾ ಧ್ವನಿಹೆಚ್ಚಳ ಅಥವಾ ಗಾದೆಯ ಪೂರ್ಣರೂಪಕ್ಕಾಗಿ ಅಂಥವನ್ನು ಉಳಿಸಿಕೊಳ್ಳಲಾಗಿದೆ. ಈ ಕೃತಿಯ ಇನ್ನೆರಡು ಆಕರ್ಷಣೆಗಳೆಂದರೆ ಪ್ರಸ್ತಾವನೆ ಮತ್ತು ಅಥಕೋಶಗಳು. ಗಾದೆಯ ಸ್ವರೂಪ ಲಕ್ಷಣ,ಉಗಮ ವಿಕಾಸ, ಸಾಹಿತ್ಯಮೌಲ್ಯ ಮುಂತಾದ ವಿಷಯಗಳನ್ನು ಕುರಿತ ಪ್ರಸ್ತಾವನೆ ತುಂಬ ಉಪಯುಕ್ತವೆನಿಸಿದೆ.

1971ರಲ್ಲಿ ಪ್ರಕಟವಾದ ಬಿ.ಎ.ವಿವೇಕ ರೈ ಅವರ ತುಳು ಗಾದೆಗಳು ಇಲ್ಲಿ ಗಮನಿಸಬೇಕಾದ ಮತ್ತೊಂದು ಗ್ರಂಥ. ಇದರಲ್ಲಿ 704 ತುಳು ಗಾದೆಗಳಿವೆ. ಪ್ರತಿಯೊಂದು ಗಾದೆಯನ್ನೂ ಕನ್ನಡ ಲಿಪಿಯಲ್ಲಿ ಕೊಟ್ಟು,ಅದರ ಕನ್ನಡಾನುವಾದವನ್ನು, ದೊರೆತಾಗ ಕನ್ನಡ ಸಮಾನ ಗಾದೆಗಳನ್ನು ಕೆಳಗಡೆ ಕೊಡುತ್ತಾರೆ. ಅಗತ್ಯ ಬಿದ್ದಲ್ಲಿ ಗಾದೆಗಳಿಗೆ ಹಿನ್ನೆಲೆ ಹಾಗೂ ವಿವರಣೆಗಳನ್ನೂ ನೀದಿದ್ದಾರೆ.ಗಾದೆಗಳಿಗೆ ಬರೆದಿರುವ ಅಭ್ಯಾಸಪೂರ್ಣ ಪ್ರಸ್ತಾವನೆ, ಕೊಟ್ಟಿರುವ ತುಳು - ಕನ್ನಡ ಅರ್ಥಕೋಶ ಈ ಪುಸ್ತಕದ ಉಪಯುಕ್ತತೆಯನ್ನು ಮತ್ತಷ್ಟು ಹೆಚ್ಚಿಸಿವೆ.

ಈ ಸಂದರ್ಭದಲ್ಲಿ ಸ್ವತಂತ್ರ್ಯಗಾದೆಗಳ ರಚನೆಯನ್ನು ಕುರಿತು ಕೆಲವು ಮಾತುಗಳನ್ನು ಬರೆಯಬಹುದು.ಕನ್ನಡದಲ್ಲಿ ಕೆಲವರು ಸ್ವಂತ ಗಾದೆಗಳನ್ನು ರಚಿಸಿರುವ ನಿದರ್ಶನಗಳವೆ. ಕೊರವಂಜಿ ಪತ್ರಿಕೆಯಲ್ಲಿ ಬಂದ ನಾ.ಕಸ್ತೂರಿಯವರ ಸಾವಿರಾರು ಹೊಸ ಗಾದೆಗಳನ್ನು ಇಲ್ಲಿ ನೆನೆಯಬಹುದು. ಸಮಾಜದ ಕುಂದು ಕೊರತೆಗಳನ್ನು ವಿಡಂಬಿಸುವುದರಲ್ಲಿ ಇವು ಪರಿಣಾಮಕಾರಿಯಾದವು. ಇತ್ತೀಚೆಗೆ ಎರಡು ಸ್ವತಂತ್ರ್ಯ ಗಾದೆಗಳ ಸಂಕಲನಗಳು ಪ್ರಕಟಗೊಂಡಿವೆ. ಅವುಗಳಲ್ಲಿ 1969ರಲ್ಲಿ ಪ್ರಕಟವಾದ ಎಸ್. ವಿ. ಪರಮೇಶ್ವರಭಟ್ಟರ ಮಂಥನ ಒಂದು. ಇದರಲ್ಲಿ ಏಳುನೂರು ಹೊಸಗಾದೆಗಳಿವೆ. ಎಷ್ಟೋ ರೂಢಿಯ ಗಾದೆಗಳು ತಮ್ಮ ಮೂಲ ರೂಪದಲ್ಲಿಯೋ ಅಥವಾ ಅಲ್ಪಸ್ವಲ್ಪ ಬದಲಾವಣೆ ಹೊಂದಿಯೋ ಇಲ್ಲಿ ಬಂದು ಸೇರಿಕೊಂಡಿವೆ. ಕೆಲವು ಗಾದೆಗಳಂತೂ ಮೊದಲೆ ಜನಪದದಲ್ಲಿ ಇದ್ದ ಗಾದೆಗಳ ಸಾದೃಶ್ಯದ ಮೇಲೆ ರಚಿತವಾದವು. ತೀರ ಹೊಸದೆನ್ನುವ ಗಾದೆಗಳೂ ಇಲ್ಲಿವೆ. ಈ ಎಲ್ಲ ಗಾದೆಗಳೂ ರೂಪ ಮತ್ತು ಶೈಲಿಗಳಲ್ಲಿ ಜನಪದ ಗಾದೆಗಳಂತೆಯೇ ಇವೆ; ಆದರೆ ವಸ್ತುವಿಷಯದಲ್ಲಿ ಕೆಲಮಟ್ಟಿಗೆ ಬೇರೆಯಾಗಿವೆ, ಆಧುನಿಕವಾಗಿವೆ. ಈ ಬಗೆಯ ಇನ್ನೊಂದು ಸಂಕಲನವೆಂದರೆ 1970ರಲ್ಲಿ ಪ್ರಕಟವಾದ ಎಚ್.ಜೆ.ಲಕ್ಕಪ್ಪಗೌಡರ ಇಬ್ಬನಿ.ಇದರಲ್ಲಿ ಸಾವಿರದ ಇನ್ನೊರು ಸ್ವತಂತ್ರ್ಯ ಗಾದೆಗಳಿವೆ.ಆದರೆ ಇವು ಹೆಚ್ಚು ಗ್ರಾಮೀಣ ಸ್ವರೂಪದ್ದಾಗಿವೆ.ಮೇಲಿನ ಕೃತಿಗೆ ಹೇಳಿದ ಮಾತುಗಳೇ ಇದಕ್ಕೂ ಅನ್ವಯಿಸುತ್ತವೆ.

ಇವನ್ನು ಓದಿದಾಗ ಇಂಥ ಗಾದೆಗಳ ಅಗತ್ಯವಾದರೂ ಏನಿತ್ತು ಎಂಬ ಪ್ರಶ್ನೆ ಏಳುತ್ತದೆ. ನಾಗರಿಕತೆಯ ಪರಿಣಾಮದಿಂದ ಬದಲಾಗುತ್ತಿರುವ ಇಂದಿನ ಸಮಾಜದಲ್ಲಿ ಪರಂಪರಾಗತವಾದ ಗಾದೆಗಳು ಉಳಿಯುತ್ತಿಲ್ಲ; ಹಾಗೆಯೇ ನಾಗರಿಕವಾದ ಹೊಸ ಗಾದೆಗಳು ಜನಪದದಲ್ಲಿ ಸೃಷ್ಟಿಗೊಳ್ಳಲು ಸಾಧ್ಯವಾಗುತ್ತಿಲ್ಲ. ಈ ಮಧ್ಯೆ ಇಂಥ ಸ್ವತಂತ್ರ್ಯ ಗಾದೆಗಳು ಜನಪದ ಸಮುದಾಯದಲ್ಲಿ ರೂಢಿಯ ಗಾದೆಗಳಂತೆ ಜನಪ್ರಿಯವಾಗುವುದು ತೀರ ಅಪರೂಪ. ಆದರೂ ಇವನ್ನು ಓದಿ ಸಂತೋಷಪಡಬಹುದು.ಒಟ್ಟಿನಲ್ಲಿ ಕನ್ನಡದ ದೃಷ್ಟಿಯಿಂದ ಗಾದೆಗಳ ಕ್ಷೇತ್ರದಲ್ಲಿ ಇವು ಹೊಸ ಪ್ರಯೋಗಗಳು ನಡೆದುದಕ್ಕೆ ನಿದರ್ಶನಗಳವೆ.

ಗಾದೆಗಳ ಸಂಗ್ರಹ ಪ್ರಕಟಣೆಗಳ ಜೊತೆಯಲ್ಲಿಯೇ ವಿಮರ್ಶನಕಾರ್ಯವೂ ಕನ್ನಡದಲ್ಲಿ ನಡೆದಿದೆ. ಬಿಡಿ ಲೇಖನಗಳ ರೂಪದಲ್ಲಿ, ಮುನ್ನುಡಿ, ಪ್ರಸ್ತಾವನೆಗಳಲ್ಲಿ ಇದರ ಅನೇಕ ವಿಷಯಹಳು ಚರ್ಚಿತವಾಗಿವೆ. ಆದರೆ ಇವೆಲ್ಲವನ್ನೂ ಇಲ್ಲಿ ಹೇಳಲು ಸಾಧ್ಯವಾಗುವುದಿಲ್ಲ. ಪುಸ್ತಕರೂಪದಲ್ಲಿ ಪ್ರಕಟವಾಗಿರುವುದನ್ನು ಮಾತ್ರ ಇಲ್ಲಿ ಪ್ರಸ್ತಾಪಿಸಬಹುದು. ಇಲ್ಲಿಯವರೆಗೆ ಇಂಥ ಮೂರು ವಿಮರ್ಶನ ಗ್ರಂಥಗಳು ಮಾತ್ರ ಬಂದಿವೆ. ಮೊದಲನೆಯದು 1936ರಲ್ಲಿ