ವಿಷಯಕ್ಕೆ ಹೋಗು

ಪುಟ:Mysore-University-Encyclopaedia-Vol-6-Part-5.pdf/೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಗಾಯ ಸೂಚನೆಯೊಂದಿಗೆ ದೊರೆ ಗಾಮನನ್ನು ಮತ್ತೆ ಭಾರತಕ್ಕೆ ಕಳುಹಿಸಿದ. ಇವನಿಗೆ ಭಾರತ ಸಮುದ್ರದ ಅಡ್ಡಿರಲ್ ಎಂಬ ಬಿರುದು ದತ್ತವಾಯಿತು. ದೊರೆ ಇವನಿಗೆ ಹಲವಾರು ವ್ಯಾಪಾರ ಸವಲತ್ತುಗಳನ್ನೂ ನೀಡಿದ. ಗಾಮ ಭಾರತವನ್ನು ತಲುಪಿ ದೊಡನೆಯೇ ಕಲ್ಲಿಕೋಟೆಯನ್ನು ಉಡಾಯಿಸಿ, ಭಾರತದ ಯುದ್ಧನೌಕೆಗಳನ್ನು ನಿರ್ನಾಮ ಮಾಡಿದ. ಅನಂತರ ಕೊಚ್ಚಿಗೆ ಹೋಗಿ ಅಲ್ಲಿ ತನ್ನ ದೇಶಕ್ಕೆ ಅನುಕೂಲವಾದ ವ್ಯಾಪಾರ ಒಪ್ಪಂದ ಮಾಡಿಕೊಂಡು ಸ್ವದೇಶಕ್ಕೆ ಹಿಂದಿರುಗಿದ (1503). ಇವನ ವ್ಯಾಪಾರದಿಂದಾಗಿ ಗಾಮ ಪೋರ್ಚುಗಲಿನಲ್ಲಿಯೇ ಅತ್ಯಂತ ಶ್ರೀಮಂತನಾದ. ಇವನು ಅನಂತರ ವಿಶ್ರಾಂತ ಜೀವನ ನಡೆಸಿದರೂ ಭಾರತಕ್ಕೆ ಸಂಬಂಧಿಸಿದ ವ್ಯವಹಾರಗಳಲ್ಲಿ ದೊರೆಗೆ ಸಲಹೆ ನೀಡುತ್ತಿದ್ದ. 1519ರಲ್ಲಿ ಇವನಿಗೆ ವಿಡಿಗೈರಿರದ ಕೌಂಟ್ ಪದವಿ ದೊರಕಿತು. 1924ರಲ್ಲಿ ಈತ ಭಾರತದ ವೈಸ್‌ರಾಯ್ ಆದ. ಇವನು ನಿಧನನಾದ 1524ರ ಡಿಸೆಂಬರ್ 24ರಂದು ಈತ ನಿಧನ ಹೊಂದಿದ. (23.000.) ಗಾಯ : ಅಂಗಾಂಶಗಳ ಅವಿಚ್ಛಿನ್ನತೆಗೆ ಉಂಟಾಗುವ ತಡೆ (ವೂಂಡ್). ಕೆಲವರು ಇದನ್ನು ಸಮರಕ್ಕೆ ಮತ್ತು ಶಾಂತಿಗೆ ಸಂಬಂಧಿಸಿದ ಗಾಯ ಎಂಬ ಎರಡು ಬಗೆಗಳಾಗಿ ವಿಂಗಡಿಸಿ ಇವು ಪರಸ್ಪರ ವಿಭಿನ್ನವಾದವುಗಳೆಂದು ಪರಿಗಣಿಸುವುದುಂಟು. ಆದರೆ ಇವುಗಳ ರೋಗಗಳಲ್ಲಿ ಮತ್ತು ಚಿಕಿತ್ಸೆಯಲ್ಲಿ ವ್ಯತ್ಯಾಸವೇನಿಲ್ಲ. ಹೀಗೆ ಜನನ್ನು ಬೇರ್ಪಡಿಸುವುದರಲ್ಲಿ ಯಾವ ಸ್ಪಷ್ಟ ಉದ್ದೇಶವನ್ನೂ ಸಾಧಿಸಿದಂತಾಗುವುದಿಲ್ಲ. ಈ ಕೆಳಗಿನ ರ್ಪಕರಣ ಇವೆರಡನ್ನೂ ಒಳಗೊಳ್ಳುತ್ತದೆ 1 ಪಕಗಳು ಈ 1 ಮುಚ್ಚುಗಾಯಗಳು ಅಥವಾ ನಿರ್ಭೇದಕ ಗಾಯಗಳು: ಜಜ್ಜುಗಾಯ, ರಕ್ತಹೆಪ್ಪುಗಟ್ಟುವಿಕೆ, ಉಜ್ಜುಗಾಯ; 2 ಬಿಚ್ಚು ಅಥವಾ ತೆರೆಗಾಯಗಳು ಅಥವಾ ಭೇದಕ ಗಾಯಗಳು: ಕಚ್ಚು ಇರಿತ, ಚುಚ್ಚು, ಹರಿಯುವಿಕೆ, ಹೊರಗಾಣಿಸದ ಸರಳಭೇದಕ ಗಾಯ, ತೂತುಗೊರೆದು ಹೊರಹಾಯುವ ಭೇದಕ ಗಾಯ, ಚೂರು ಚೂರಾಗುವಿಕೆ ಅಥವಾ ಸಿಡಿಯುವಿಕೆ. 1 ಮುಚ್ಚುಗಾಯಗಳು : ಮುಚ್ಚುಗಾಯಗಳು ಚರ್ಮದ ಪೂರ್ಣ ಪದರವನ್ನು ಭೇದಿಸಿರುವುದಿಲ್ಲ. ಒರಟಾದ ಆಯುಧದಿಂದ ಬಲವಾಗಿ ಹೊಡೆದಾಗ ಜಜ್ಜು ಗಾಯ ಉಂಟಾಗುತ್ತದೆ. ಇದರಿಂದ ರಕ್ತನಾಳಗಳು ಒಡೆದು ಹೋಗುವುದಲ್ಲದೆ ಚರ್ಮದ ಕೆಳಭಾಗದಲ್ಲಿರುವ ಮೃದುವಾದ ಅಂಗಾಂಶಗಳಿಗೆ ಅನೇಕ ಬಗೆಯ ಹಾನಿ ಉಂಟಾಗುತ್ತದೆ. ರಕ್ತನಾಳಗಳಿಂದ ಹೊರಹರಿದ ರಕ್ತ ಚರ್ಮದೊಳಗೆ ಪ್ರವೇಶಿಸಿದಾಗ ಚರ್ಮ ವಿವರ್ಣವಾಗುತ್ತದೆ. ನೋವು, ಊತ, ವಿವರ್ಣತೆಗಳು ಜಜ್ಜುಗಾಯದ ಚಿಹ್ನೆಗಳು. ಹಾನಿಗೆ ಒಳಗಾದ ಅಂಗಾಂಶಕ್ಕೆ ಅನುಗುಣವಾಗಿ ನೋವು ಮತ್ತು ಊತಗಳು ವಿಪರ್ಯಯನಾಗುತ್ತಾನೆ. ಕಣ್ಣಪ್ಪ ಮತ್ತು ವೃಷಣಕೋಶಗಳಂತಹ ಸಚರ್ಮವುಳ್ಳ ಭಾಗಗಳಿಗೆ ಜಜ್ಜುಗಾಯ ಉಂಟಾದಾಗ ಊತ ಜಾಸ್ತಿಯಾಗಿದ್ದರೂ ನೋವು ಕಡಿಮೆ ಯಿರುತ್ತದೆ. ಇದಕ್ಕೆ ವಿರುದ್ಧವಾಗಿ ಬೆರಳುಗಳಿಗೆ ಅಥವಾ ನೆತ್ತಿಗೆ ಗಾಯವಾದಾಗ ಊತ ಕಡಿಮೆಯಾಗಿ ನೋವು ಹೆಚ್ಚಾಗಿರುತ್ತದೆ. ಕೆಂಪುರಕ್ತಕಣಗಳು ಒಡೆದು ಹೀಮೋಗ್ಲಾಬಿನ್ ಬಿಡುಗಡೆಯಾಗುವುದರಿಂದ ವಿವರ್ಣತೆಯುಂಟಾಗುತ್ತದೆ. ಇದು ಮೊದಲು ದಟ್ಟ ನೇರಳೆ ಬಣ್ಣದಾಗಿದ್ದು ಅನಂತರ ನೀಲಿ, ಕೆಂಪು, ಕಂದು, ಹಸಿರು ಬಣ್ಣಗಳಾಗಿ ಕೊನೆಯಲ್ಲಿ ಹಳದಿ ಕಲೆಯಾಗಿ 14-20 ದಿವಸಗಳೊಳಗೆ ಅದೃಶ್ಯವಾಗುತ್ತದೆ. ಹೀಮೋಗ್ಲಾಬಿನ್ ಹೀರಿಕೆಯ ಸಮಯದಲ್ಲಿ ನಡೆಯುವ ಕೆಲವು ರಾಸಾಯನಿಕ ಕ್ರಿಯೆಗಳೇ ಈ ವರ್ಣ ಬದಲಾವಣೆಗೆ ಕಾರಣ. ದೇಹದ ಒಳಪದರಗಳಲ್ಲಿ ಜಜ್ಜು ಗಾಯವಾದಾಗ ಊತ ಮತ್ತು ವಿವರ್ಣತೆಗಳು ಏಟುಬಿದ್ದ ಜಾಗದಿಂದ ದೂರದಲ್ಲಿಯೂ ಕಾಣಿಸಿಕೊಳ್ಳಬಹುದು. ಹೆಚ್ಚು ರಕ್ತಸ್ರಾವವಾಗಿ ಅದು ತಂತುರೂಪದ ಅಂಗಾಂಶ ಕೋಶದ ಪದರಗಳ ಮತ್ತು ಮಾಂಸಖಂಡಗಳ ನಡುವೆ ಹೆಪ್ಪುಗಟ್ಟುತ್ತದೆ. ಮೊದಮೊದಲು ಇದು ಗುಂಡಾಗಿ, ಹುಚ್ಚನಂತೆ ಮುದ್ದು ಅನಂತರ ಗಟ್ಟಿಯಾಗುತ್ತದೆ. ಕ್ರಮೇಯ ಗಾಯ ವ್ಯವಸ್ಥಿತವಾಗಿ ಮೆತ್ತಗಿದ್ದು ಕರಗಿಹೋಗುತ್ತದೆ. ಆದರೆ ಎಲ್ಲ ಹೆಪ್ಪುಗಟ್ಟುಗಳೂ ಇಷ್ಟು ಸರಳವಾಗಿ ಮುಕ್ತಾಯವಾಗುವುದಿಲ್ಲ. ಕೆಲವು ಗಂಟುಗಳಾಗಿ ಮತ್ತೆ ಕೆಲವು ರಸಿಕೆಯ ಕೋಶಗಳಾಗಿ ಉಳಿಯಬಹುದು. ಸಾಮಾನ್ಯವಾಗಿ ಮಿದುಳಿನ ಮೇಲೆಯಲ್ಲಿ, ನಡುವಿನ ಭಾಗದಲ್ಲಿ, ತೊಡೆಯ ಪಕ್ಕಗಳಲ್ಲಿ ರಸಿಕೆಯ ಕೋಶಗಳು ಉಂಟಾಗುತ್ತವೆ. ಇವುಗಳ ಸುತ್ತಲೂ ತಂತುದ್ರವ್ಯ (ಫೈಬ್ರಿನ್) ಶೇಖರಗೊಂಡು, ಹೀಮೋಗ್ಲಾಬಿನ್ ಕರಗಿಹೋಗಿ ಮೇಲೆ ನಸುಹಳದಿಬಣ್ಣದ ದ್ರವ ಉಳಿಯುತ್ತದೆ. ಸರಿಯಾದ ಚಿಕಿತ್ಸೆ ನಡೆಸದಿದ್ದಲ್ಲಿ ಈ ಕೋಶದಲ್ಲಿ ಒಳಪೊರೆಯೊಂದು ಬೆಳೆದು ಅನಂತರ ಅದನ್ನು ತೆಗೆಯುವುದು ಕಷ್ಟವಾಗುತ್ತದೆ. ಕ್ರಿಮಿಗಳ ಬೆಳೆವಣಿಗೆಗೆ ಭಕ್ತ ಒಳ್ಳೆಯ ಮಾಧ್ಯಮ, ಆದ್ದರಿಂದ ದುರ್ಬಲಕರಿಗಳಲ್ಲಿ ಕೆಲವು ಸಲ ಈ ಹೆಪ್ಪುಗಟ್ಟಿಗೆ ಸೋಂಕು ತಗಲಬಹುದು. ಮಾಂಸಖಂಡ ಮತ್ತು ಇತರ ಮೇಲೈಯ ಅಂಗಾಂಶಗಳಂತೆಯೇ ಒಳಾಂಗಗಳಾದ ಮಿದುಳು, ಪಿತ್ತಕೋಶ, ಗುಲ್ಮ, ಮೂತ್ರಜನಕಾಂಗ, ಪುಪ್ಪುಸ ಮತ್ತು ಅನ್ನನಾಳ ಮುಂತಾದವುಗಳಿಗೂ ಜಜ್ಜು ಗಾಯವುಂಟಾಗಿ ರಕ್ತ ಹೆಪ್ಪುಗಟ್ಟಬಹುದು. ಇವುಗಳ ಚಿಕಿತ್ಸೆಗೆ ವಿಶ್ರಾಂತಿ ಆವಶ್ಯಕ. ಆವಿಯಾಗುವ ದ್ರವಗಳ ಲೇಪನ, ಶಾಖ ಕೊಡುವಿಕೆ ಮತ್ತು ಬಿಸಿನೀರಿನ ಸ್ನಾನ ನೋವನ್ನು ಕುಗ್ಗಿಸುತ್ತದೆ. ಬಿಗಿಯಾಗಿ ಒತ್ತುವುದರಿಂದ ರಕ್ತಹೊರಸೋರುವುದು ಕಡಿಮೆಯಾಗುತ್ತದೆ. ಉಜ್ಜುವಿಕೆಯಿಂದ ಹೊರ ಬಂದ ರಕ್ತ ಬೇಗನೆ ಕರಗಿಹೋಗುತ್ತದೆ. ರಕ್ತದ ಹೀರುವಿಕೆ ತಡವಾದಲ್ಲಿ ಅದನ್ನು ಹೊರತೆಗೆದು ಬಿಗಿಯಾದ ಕಟ್ಟುಪಟ್ಟಿಯನ್ನು ಕಟ್ಟುವುದರಿಂದ ರಸಿಕೆಯ ಕೋಶ ಉಂಟಾಗುವುದನ್ನು ತಡೆಯಬಹುದು. ಯಾವುದಾದರೂ ದೇಹದ ಭಾಗ ಒರಟು ಮೇಲ್ಮಗೆ ಉಜ್ಜಿದಾಗ ಉಜ್ಜು ಗಾಯ ಉಂಟಾಗುತ್ತದೆ. ಇದರಿಂದ ಚರ್ಮದ ಮೇಲ್ಪದರಗಳು ಕಿತ್ತುಹೋಗಿ, ನರಗಳ ತುದಿಗಳು ಹೊರಕಾಣಿಸಿಕೊಂಡು ತುಂಬ ನೋವುಂಟಾಗುತ್ತದೆ. ಗಾಯದ ಮೂಲಕ ದೂಳು ಪ್ರವೇಶಿಸಿ ಸೋಂಕು ಉಂಟಾಗುತ್ತದೆ. ಗಾಯವನ್ನು ತೊಳೆದು ಮುಲಾಮನ್ನು ಹಚ್ಚುವುದರಿಂದ ಇದನ್ನು ಗುಣಪಡಿಸಬಹುದು. ಮರದ ತುಂಡು ಅಥವಾ ಗಾರೆಯ ಗಟ್ಟಿಗಳಿಂದ ದೇಹದ ಭಾಗವನ್ನು ಹೆಚ್ಚು ಕಾಲ ಅಮುಕಿದಾಗ ವಿಶೇಷವಾದ ಜಜ್ಜುಗಾಯ ಉಂಟಾಗುತ್ತದೆ. ಜಜ್ಜಿದ ಭಾಗದಿಂದ ಒಳಹೊಗುವ ಜೀವಾಣು ವಿಷವಸ್ತುಗಳು (ಟಾಕ್ಸಿನ್ಸ್) ಮೂತ್ರಜನಕಾಂಗಗಳ ರಕ್ತ ಪರಿಚಲನೆಯ ಮೇಲೆ ಪರಿಣಾಮವನ್ನು ಉಂಟುಮಾಡುತ್ತವೆ. ಇದರಿಂದ ಮೂತ್ರಜನಕಾಂಗದ ಹೊರಭಾಗಕ್ಕೆ (ಕಾರ್ಟೆಕ್ಸ್) ರಕ್ತಚಲಸ ಇಲ್ಲದಂತಾಗುತ್ತದೆ. ಇದಕ್ಕೆ ಪರಿಣಾಮಕಾರಿಯಾದ ಚಿಕಿತ್ಸಾವಿಧಾನ ಇನ್ನೂ ತಿಳಿಯಬರದಿದ್ದರೂ ಜಜ್ಜಿದ ಭಾಗಕ್ಕೆ ಸಂಪೀಡನೆ ಉಂಟುಮಾಡುವುದರಿಂದ ಜೀವಾಣುವಿಷದ ಹೀರುವಿಕೆಯನ್ನು ತಡೆಗಟ್ಟಿ ಮೂತ್ರಜನಕಾಂಗದ ರಕ್ತ ಪರಿಚಲನೆಯನ್ನು ಸರಿಯಾಗಿ ನಡೆಯುವಂತೆ ನೋಡಿಕೊಳ್ಳಬಹುದು. 2 ಬಿಚ್ಚು ಅಥವ ತೆರೆಗಾಯಗಳು: ಬಿಚ್ಚು ಅಥವಾ ತೆರೆಗಾಯಗಳಲ್ಲಿ ಚರ್ಮದ ಅಥವಾ ಲೋಳೆಪೊರೆಯ ಅವಿಚ್ಛಿನ್ನತೆಗೆ ತಡೆಯುಂಟಾಗಿ ಒಳಭಾಗದ ಮೃದು ಅಂಗಾಂಶಗಳಿಗೆ ಹಾನಿ ತಗಲುತ್ತದೆ. ಇದರ ತೀವ್ರತೆ ಪೀಡಕ ವಸ್ತುವಿನ ಗುಣ ಮತ್ತು ಬಲವನ್ನು ಅವಲಂಬಿಸಿರುತ್ತದೆ. ಹಾನಿಗೆ ಒಳಗಾದ ಮಾಂಸಖಂಡದ ತಂತುಗಳ ರಕ್ತಸಂಚಾರಕ್ಕೆ ಅಡ್ಡಿಯುಂಟಾಗಿ ಅವು ತಮ್ಮ ಸಂಕುಚನ ಸಾಮರ್ಥ್ಯ ಮತ್ತು ಸೋಂಕು ನಿರೋಧಕ ಸಾಮರ್ಥ್ಯಗಳನ್ನು ಕಳೆದುಕೊಳ್ಳುತ್ತವೆ. ಅಲ್ಲದೆ ಅವಾಂತರಕ್ಕಸನ ಜೀವಿಗಳ ಬೆಳೆವಣಿಗೆಗೆ ಇವು ಉತ್ತೇಜನಕಾರಿಯಾಗಿರುತ್ತವೆ. ತತ್‌ಕ್ಷಣವೇ ಉರಿತದ ಕ್ರಿಯೆ ಪ್ರಾರಂಭ ವಾಗಿ ಶರೀರ ತನ್ನ ರಕ್ಷಣೆಗೆ ತೊಡಗುತ್ತದೆ. ಪ್ರಾವದಿಂದಾಗಿ ಏಕೆ ಕಾಣಿಸಿಕೊಳ್ಳುತ್ತದೆ. ಊತ ಕೆಲವು ಸಲ ವಿಪರೀತವಾಗಿ ಆ ಅಂಗದ ರಕ್ತ ಚಲನೆಗೆ ತಡೆಯುಂಟಾಗಬಹುದು. ಚರ್ಮ ಅಶುದ್ಧವಾಗಿದ್ದು ದೂಳಿನ ಕಣಗಳು ಗಾಯದೊಳಕ್ಕೆ ಪ್ರವೇಶಿಸುತ್ತವೆ. ಗಾಯ ಉಂಟಾದ ಮೇಲೆ ಆರರಿಂದ ಹನ್ನೆರಡು ಗಂಟೆಯವರೆಗೆ ಈ ಕ್ರಿಮಿಗಳು ಹಾನಿಗೆ ಒಳಗಾದ ಅಂಗಾಂಶದ ಮೇಲೆಯೇ ಇದ್ದು ಇನ್ನೂ ನಂಜನ್ನು ಉತ್ಪತ್ತಿ ಮಾಡಿರುವುದಿಲ್ಲ. ಈ ಅವಧಿ ಕಳೆದ ಬಳಿಕ ಗಾಯ ಸೋಂಕಿಗೊಳಗಾಗಿದೆ ಎಂದರ್ಥ. ಕಚ್ಚುಗಾಯ ಸಾಮಾನ್ಯವಾಗಿ ಗಾಜಿನಚೂರು, ಚಾಕು ಮೊದಲಾದ ಹರಿತವಾದ ವಸ್ತುಗಳಿಂದ ಉಂಟಾಗುತ್ತದೆ. ಅಪೂರ್ವವಾಗಿ ನೆತ್ತಿಯ ಬಿಗಿಗೊಂಡ ಚರ್ಮವಿರುವ ಭಾಗದಲ್ಲಿ ಮೊಂಡು ಆಯುಧ ಸಹ ಕಚ್ಚುಗಾಯವನ್ನು ಉಂಟುಮಾಡಬಲ್ಲದು. ಕಚ್ಚುಗಾಯದಲ್ಲಿ ಬಿರುಕು ಕಾಣಿಸುತ್ತದೆ. ಇದರ ಉದ್ದ ಆಳಕ್ಕಿಂತ ಹೆಚ್ಚು ಗಾಯದ ಅಂಚುಗಳು ಕ್ರಮವಾಗಿರುತ್ತವೆ. ರಕ್ತಸ್ರಾವ ಹೆಚ್ಚಾಗಿದ್ದು, ಸಂವೇದನ ನರಗಳು ಕತ್ತರಿಸಿಹೋಗುವುದರಿಂದ ನೋವಿರುತ್ತದೆ. ಸೋಂಕು ತಗಲಿರದಿದ್ದಲ್ಲಿ ಗಾಂದ ಅಂಚುಗಳನ್ನು ಸೇರಿಸಿದಾಗ ಅವು ಸರಿಯಾಗಿ ಕೂಡಿಕೊಳ್ಳುತ್ತದೆ. ರಕ್ತನಾಳಗಳು, ನರಗಳು, ಮಾಂಸಖಂಡಗಳು ಮುಂತಾದ ಮುಖ್ಯ ಅಂಗಗಳಿಗೆ ಆಕಸ್ಮಿಕ' ಚುಚ್ಚುಗಾಯದಿಂದ ಉಂಟಾಗುವ ಹಾನಿಯನ್ನು ತಿಳಿಯಲು ಗಾಯದ ಪೂರ್ಣ ಹರವನ್ನು ಪರೀಕ್ಷಿಸಬೇಕು. ಸೋಂಕು ತಗುಲದಿದ್ದಲ್ಲಿ ನರ, ಮಾಂಸಖಂಡ ಮತ್ತು ಮೂಳೆಗಳ ಪುನರ್ನಿಮರ್ಾಣ ಚೆನ್ನಾಗಿ ಆಗುತ್ತದೆ. ಕೊಬ್ಬು ಮತ್ತು ಸಾವಕ ಗ್ರಂಥಿಗಳಲ್ಲಿ ಈ ಪುನರ್ನಿಮರ್ಾಣ ಅಷ್ಟು ಚೆನ್ನಾಗಿ ಆಗುವುದಿಲ್ಲ. ಕೇಂದ್ರ ನರಮಂಡಲದಲ್ಲಂತೂ ಇದು ಸಾಧ್ಯವೇ ಇಲ್ಲ. ಸೂಜಿ ಮೊದಲಾದ ಹರಿತವಾದ ಮೊನೆಯುಳ್ಳ ವಸ್ತುಗಳಿಂದ ಇರಿತ ಮತ್ತು ಚುnectಗಳು ಉಂಟಾಗುತ್ತವೆ. ಇವು ಹೊರಟ ವಾಗಿದ್ದರೂ ಅನ್ಯವಸ್ತುಗಳು ಅಥವಾ ಸೋಂಕು ಇವುಗಳೊಳಕ್ಕೆ ಪ್ರವೇಶಿಸಬಹುದು; ಒಳಾಂಗಗಳಿಗೆ ಹಾನಿಯುಂಟಾಗಿದ್ದು ಅದನ್ನು ಸುಲಭವಾಗಿ ತಿಳಿಯಲು ಸಾಧ್ಯವಾಗದೆ ಹೋಗಬಹುದು.