ಪುಟ:Mysore-University-Encyclopaedia-Vol-6-Part-5.pdf/೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಗಾರ್ ಬೂರ್ಗ್, ಆರ್ನ್ ಎವನ್ ಸನ್ - ಗಾರ್ಲೆಂಡ್, ಹ್ಯಾಮ್ ಲಿನ್

ಚುನಾವಣೆಗಳಲ್ಲಿ ಇವನು ಸಾಮಾನ್ಯವಾಗಿ ಹೆಚ್ಚು ಕಷ್ಟವಿಲ್ಲದೆ ಕಾಂಗ್ರೆಸಿಗೆ ಅಯ್ಕೆ ಹೊಂದುತ್ತಿದ್ದ. ಅವು ಅಂತರ್ಯುದ್ಧದ, ರಾಷ್ಟ್ರ ಪುನರ್ರಚನೆಯ, ಕ್ಷೋಭೆಯ ದಿನಗಳು. ರಿಪಬ್ಲಿಕನ್ ಪಕ್ಷದಲ್ಲಿ ಗಾರ್ಫೀಲ್ಡ್ ಒಬ್ಬ ಸಂಪ್ರದಾಯ ವಾದಿಯಾಗಿದ್ದ. ಹಣಸಂಬಂಧವಾಗಿ ರಾಜಕೀಯ ಕ್ಷೇತ್ರಗಳಲ್ಲಿ ಅನೈತಿಕ ವ್ಯವಹಾರಗಳು ಆಗ ವಿಶೇಷವಾಗಿ ತೋರಿಬಂದಿದ್ದವು. ಇವನಿಗೂ ಅಂಥ ಅಪವಾದದ ಅಂಟು ಹತ್ತದೆ ಇರಲಿಲ್ಲ. ೧೮೮೦ ರಲ್ಲಿ ಈತ ಸೆನೆಟಿಗೆ ಆಯ್ಕೆ ಹೊಂದಿದ. ಅಮೆರಿಕ ಸಂಯುಕ್ತಸಂಸ್ಥಾನದ ಅಧ್ಯಕ್ಷ ಪದವಿಗೆ ನಡೆದ ಚುನಾವಣೆಯಲ್ಲಿ ಸ್ಪರ್ಧಿಸಿ ಜಯಗಳಿಸಿದ. ಆಪದವಿಗೆ ಜಾನ್ ಷೆರ್ಮನನನ್ನು ಅಭ್ಯರ್ಥಿಯಾಗಿ ನಾಮಕರಣ ಮಾಡಲು ಈತ ಪ್ರಯತ್ನಿಸಿದ. ಈ ಸಂಬಂಧವಾಗಿ ಬಿಕ್ಕಟ್ಟು ಸಂಭವಿಸಿ ಕೊನೆಗೆ ಅದಕ್ಕೆ ಗಾರ್ಫೀಲ್ದನ ನಾಮಕರಣವಾಯಿತು. ಪಕ್ಷದ ಹಲವಾರು ಪ್ರಬಲ ಗುಂಪುಗಳು ಇವನ ಅಭ್ಯರ್ಥಿತನವನ್ನು ವಿರೋಧಿಸುತ್ತಿದ್ದವು. ಕೊನೆಗೆ ಈತ ಕೆಲವೇ ಮತಗಳಿಂದ ವಿಜಯಗೊಳಿಸಿ, ೧೮೮೧ ರ ಮಾರ್ಚ್ ೪ ರಂದು ಅಧಿಕಾರಾರೋಹಣ ಮಾಡಿದ. ಪಕ್ಷದಲ್ಲಿದ್ದ ಈತನ ಶತ್ರುಗಳು ಇವನ ವಿರುದ್ಧ ಹೋರಾಟ ನಡೆಸಿದರು. ತಮಗೆ ಹಲವಾರು ಸವಲತ್ತುಗಳನ್ನು ನೀಡದಿದ್ದರೆ ಸಹಕಾರ ನೀಡುವುದಿಲ್ಲವೆಂದು ಹೇಳಿ ಹೊತ್ತಾಯ ಹಾಕಿದರು.ಗಾರ್ಫೀಲ್ಡ್ ಮಣಿಯಲಿಲ್ಲ. ಜುಲೈ ೨ರಂದು ಚಾರಲ್ಸ್ ಜೆ, ಗಿಟೌ ಎಂಬವನು ಇವನ ಮೇಲೆ ಗುಂಡು ಹಾರಿಸಿದ. ಹಾತ ಗಾರ್ಫೀಲ್ಡನಿಂದ ಹುದ್ದೆಯೊಂದನ್ನು ಬಯಸಿ ನಿರಾಶನಾಗಿದ್ದವನೆಂದೂ ಪ್ರಾಯಶಃ ಮತಿವಿಕಲನಾಗಿದ್ದನೆಂದು ಹೇಳಲಾಗಿದೆ. ಸೆಪ್ಟೆಂಬರ್ ೧೯ರಂದು ಗಾರ್ಫೀಲ್ಡ್ ನಿಧನ ಹೊಂದಿದ.

ಗಾರ್ ಬೂರ್ಗ್, ಆರ್ನ್ ಎವನ್ ಸನ್: ೧೮೫೧-೧೯೨೪. ನಾರ್ವೆ ದೇಶದ ಕಾದಂಬರಿಕಾರ, ಕವಿ, ನಾತಕಕಾರ. ನವ ನಾರ್ವೀಜಿಯನ್ ಬರೆಯದಲ್ಲಿ ಪ್ರಥಮ ಪಂಕ್ತಿಗೆ ಸೇರುವ ಸಾಹಿತಿ.

ಗಾರ್ಬೂರ್ಗ್ ರೈತನ ಮಗ. ಮಧ್ಯಯುಗದಿಂದನಾರ್ವೆಯ ಗ್ರಾಮೀಣ ಜೀವನದಲ್ಲಿ ನಡೆದುಕೊಂಡು ಬಂದಿದ್ದ ವ್ಯವಸ್ಥೆ ಕುಸಿಯುತ್ತಿದ್ದ ಕಾಲದಲ್ಲಿ ಇವನ ಬಾಲ್ಯ, ಯೌವನಗಳು ಸಾಗಿದವು. ತಂದೆ ಅತಿ ಧಾರ್ಮಿಕ ಮನೋಧರ್ಮದವನು. ಇದೇ ಅವನ ಸಾವಿಗೂ ಕಾರಣವಾಯಿತು. ಈ ಎರಡು ಅಂಶಗಳು ಗಾರ್ ಬುರ್ಗ್ನ ಜೀವನ ಮತ್ತು ಬರೆಹಗಳ ಮೇಲೆ ಪ್ರಭಾವ ಬೀರಿದವು. ಇವನಿಗೆ ವಿಧ್ಯಾಭ್ಯಾಸ ದೊರೆಯುವುದೆ ಕಷ್ಟವಾಯಿತು. ಹಲವು ಅಡ್ಡಿಗಳನ್ನು ಎದುರಿಸಿ ಕ್ರಿಸ್ಟಿಯಾನ ವಿಶ್ವವಿದ್ಯಾಲಯದಲ್ಲಿ ಅಭ್ಯಾಸ ಮಾಡಿದ. ಇವನು ವಿದ್ಯಾರ್ಥಿ ಜೀವನವನ್ನು ಕುರಿತು ಬರೆದ ಬಾಂಡೇ ಸ್ಟೂದೆಂಟೆ(೧೮೮೩) ಆಗ ಜನಪ್ರಿಯವಾಗಿದ್ದ ಸ್ವೇಚ್ಛಾಪ್ರವೃತ್ತಿಯ, ಸಹಜತಾವಾದದ ಕಾದಂಬರಿಗಳನ್ನೇ ಅನುಸರಿಸಿದರೂ ಒಳ್ಳೆಯ ಕಥೆ ಎನಿಸಿದೆ. ಗಾರ್ ಬೂರ್ಗ್ ಬೇಸರಪಟ್ಟು ಬೇಗ ಈ ಪಂಥದಿಂದ ದಾರನಾದ. ಗ್ರಾಮಜೀವನ ವಚ್ಚಿದ್ರವಾಗುವುದರಿಂದ ರೈತರ ಬಾಳಿನಲ್ಲಿ ತಲೆದೋರಿದ ಧಾರ್ಮಿಕ ಮತ್ತು ಅಂಥಃಕರಣದ ಸಮಸ್ಯೆಗಳನ್ನು ಫ್ರೆಡ್(೧೮೯೨) ಎಂಬ ಕಾದಂಬರಿಯಲ್ಲಿ ಸೂಕ್ಷ್ಮವಾಗಿ ನಿರೂಪಿಸಿದ. ಇದೆ ವಸ್ತುವನ್ನು ಕುರಿತು ಇನ್ನೆರಡು ಕಾದಂಬರಿಗಳನ್ನೂ ಒಂದು ನಾಟಕವನೂ ಬರೆದ. ಈ ಕೃತಿಗಳಲ್ಲೆಲ್ಲ ಅಳವಾದ ಧಾರ್ಮಿಕ ಭಾವನೆಯುಂಟು. ಬ್ರೆಹಗಾರರು ಬಳಸುತ್ತಿದ್ದ ಡೇನೋ ನಾರ್ವೀಜಿಯನ್ ಮಾಧ್ಯಮದ ಬದಲು, ಪ್ರಾಚೀನ ನಾರ್ಸ್ಕ್ ನಿಂದ ಬಂದ ರೈತರ ಭಾಷೆಯ ಆಧಾರದ ಮೇಲೆ ಸಾಹಿತ್ಯಕ್ಕಾಗಿ ನಾರ್ವೀಜಿಯನ್ ಭಾಷೆಯನ್ನು ಹೊಸದಾಗಿ ರೂಪಿಸಬೇಕೆಂಬ ಸಾಹಿತಿಗಳ ಪಂಥಕ್ಕೆ ನಾಯಕನಾದ. ಇವನ ಭಾವ ಗೀತೆಗಳ ಚಕ್ರ ಹೌಟುಸ(೧೮೯೫) ರೈತರ ಭಾಷೆಯಲ್ಲಿಯೇ ಇದೆ. ಇದು ಅತಿಮಾನುಷದಲ್ಲಿ ಹುಡುಗಿಯೊಬ್ಬಳಿಗಿದ್ದ ನಂಬಿಕೆಯನ್ನು ನಿರೂಪಿಸುತ್ತದೆ. ಮಧ್ಯಯುಗದ ನಂಬಿಕೆಗಳು, ಪದ್ಧತಿಗಳೂ ಇನ್ನೂ ಜೀವಂತವಾಗಿದ್ದ ಯುಗದ ಜೀವನವನ್ನು ಈ ಕವನಚಕ್ರ ಬಣ್ಣಿಸುತ್ತದೆ. ಇವನ ಭಾಷೆಗೆ ಭಾವನೆಗಳನ್ನು ಪ್ರಚೋದಿಸುವ ವಿಶೇಷ ಸಾಮರ್ಥ್ಯ ಉಂಟು. ಈ ಕವನಚಕ್ರ ಮತ್ತು ಫ್ರೆಡ್ ಇವನಿಗೆ ನವನಾರ್ವೀಜಿಯನ್ ಭಾಷೆಯ ಸಾಹಿತ್ಯದಲ್ಲಿ ಬಹು ಹಿರಿಯ ಸ್ಥಾನವನ್ನು ಗಳಿಸಿಕೊಟ್ಟಿದೆ.

ಗಾರ್ ಬೂರ್ಗ್ ವಿಶಾಲ ಮನೋಭಾವದ ಅಭಿಪ್ರಾಯಗಳಿಸಿ ಹೆಸರು ಪಡೆದ ಪ್ರತಿಯೊಓದರ ಸ್ಥಾಪಕ ಸಂಪಾದಕನಾಗಿದ್ದನಲ್ಲದೆ ಹೋಮರನ ಒಡಿಸ್ಸಿಯನ್ನೂ (೧೯೧೮) ಮಹಾಭಾರತದಿಂದ ಆಯ್ದ ಭಾಗಗಳನ್ನೂ(೧೯೨೧)ಅನುವಾದ ಮಾಡಿದ್ದಾನೆ. ಇವನ ಕಥೆಗಳು ಯುರೋಪಿನ ಹಲವು ಭಾಷೆಗಳಿಗೆ ಅನುವಾದವಾಗಿವೆ. ಈತನ ಎಲ್ಲ ಬರೆಹಗಳನ್ನೂ ೮ ಸಂಪುಟಗಳಲ್ಲಿ ಪ್ರಕಟಿಸಿದ್ದಾರ(೧೯೪೪).

ಗಾರ್ಬೋ, ಗ್ರೀಟ: ೧೯೦೫-೯೦. ಖ್ಯಾತ ಚಲನಚಿತ್ರ ತಾರೆ. ಸ್ವೀಡನ್ನಿನವಳು. ಗ್ರೀಟ ಲೋವಿಸಗುಸ್ಟಾಫ್ ಸ್ಸನ್ ಎಂದು ಈಕೆಯ ಚಿತ್ರರಂಗದ ಹೆಸರು. ಈಕೆ ಜನಿಸಿದ್ದು ಸ್ಟಾಕ್ ಹೋಂನಲ್ಲಿ. ತಂದೆತಾಯಿ ಕಡುಬಡವ ಕುಟುಂಬದವರು. ತನ್ನ ೧೪ನೆಯ ವಯಸ್ಸಿನ ವೇಳೆಗೆ ಅಲ್ಲಿನ ಗ್ರ್ಯಾಮರ್ ಶಾಲೆಯ ವಿಧ್ಯಾಭ್ಯಾಸ ಮುಗಿಸಿಕೊಂಡು, ತಂದೆ ತೀರಿಕೊಂಡ ಕಾರಣ ದೆನಬಳಕೆಯ ವಸ್ತುಗಳ ಅಂಗಡಿಯೊಂದರಲ್ಲಿ ಈಕೆ ಕೆಲಸ ಮಾಡಿದಳು. ಕ್ಷೌರದ ಅಂಗಡಿಯಲ್ಲೂ ಕೆಲಸ ಮಾಡಿದ್ದುಂಟು. ಕೆಲವಾರು ಜಾಹೀರಾತು ಚಲನಚಿತ್ರಗಳಲ್ಲಿ ಕಾಣಿಸಿಕೊಂಡಿದ್ದ ಈಕೆಗೆ ೧೯೨೧ರಲ್ಲಿ ಎರಿಕ್ ಪೆಟ್ಸ್ ಚರ್ಲ್ನ ಪೀಟರ್ ದಿ ಟ್ರ್ಯಾಂಪ್ ಎಂಬ ಹಾಸ್ಯಮಯ ಚಿತ್ರದಲ್ಲಿ ಒಂದು ಸಣ್ಣ ಪಾತ್ರ ಸಿಕ್ಕಿತು. ಅನಂತರ ಈಕೆ ಸ್ಪಾಕ್ ಹೋಂನಲ್ಲಿ ರಾಯಲ್ ಅಕಾಡೆಮಿ ಆಫ್ ಡ್ರಮ್ಯಾಟಿಕ್ ಆರ್ಟ್ ಸಂಸ್ಥೆಯಲ್ಲಿ ೧೯೨೨ ರಿಂದ ೧೯೨೪ ರವರೆಗೆ ಅಭಿನಯ ಕಲೆಯ ಅಭ್ಯಾಸ ಮಾಡಿದಳು. ಮಾರೀಟ್ಜ್ ಸ್ಪಿಲ್ಲರ್ ಎಂಬ ಚಲನಚಿತ್ರ ನಿರ್ದೇಶಕ ತನ್ನ ದಿ ಸ್ಟೋರಿ ಆಫ್ ಗೊಷ್ಟಾ ಬರ್ಲಿಂಗ್ (೧೯೨೪) ಎಂಬ ಚಿತ್ರದಲ್ಲಿ ಕೌಂಟೆಸ್ ದ್ಹೋನಳ ಪಾತ್ರವಹಿಸಲು ಈಕೆಯನ್ನು ಆಯ್ಕೆ ಮಾಡಿದ. ಈತನೇ ಈಕೆಗೆ ಗ್ರೀಟ ಗಾರ್ಬೋ ಎಂಬ ಹೆಸರನ್ನಿತ್ತಿದ್ದು. ಸಿನಿಮಾ ರಂಗದ ನಟನೆಯ ಎಲ್ಲ ತಂತ್ರಗಳನೂ ಆತ ಈಕೆಗೆ ಹೇಳಿಕೊಟ್ಟ. ಸ್ಪಿಲ್ಲರನೊಡನೆ ಭೇಟಿಯಾದುದು ಗಾರ್ಬೊಳ ಜೀವನದಲ್ಲಿ ಒಂದು ಮಹತ್ವದ ಘಟನೆ. ಈಕೆ ಪಾತ್ರ ವಹಿಸಿದ ಮತ್ತಾವದೇ ಚಿತ್ರವನ್ನು ಆತ ನಿರ್ದೇಶಿಸಲಿಲ್ಲವಾದರೂ ಸದಾಕಾಲವೂ ಈಕೆಯ ಬಳಿಯಲ್ಲೇ ಇರುತ್ತಿದ್ದ. ದಿ ಜಾಯ್ ಲೆಸ್ ಸ್ಟ್ರೀಟ್ ಒಂಬ ಚಿತ್ರದಲ್ಲಿ ಪಾತ್ರವಹಿಸಿದ ಅನಂತರ ಗಾರ್ಬೋ ಸ್ಪಿಲ್ಲರನೊಡನೆ ಅಮೆರಿಕಕ್ಕೆ ಹೋದಳು(೧೯೨೫). ಖ್ಯಾತ ಚಿತ್ರನಿರ್ಮಾಣ ಸಂಸ್ಥೆಯಾದ ಎಂ.ಜಿ.ಎಂ. ನಲ್ಲಿ ಗಾರ್ಬೋಗೆ ಒಂದು ಅವಕಾಶ ಕಲ್ಪಿಸಲು ಸ್ಪಿಲ್ಲರ್ ಬಹಳ ಪ್ರಯತ್ನ ಮಾಡಿದ. ಸಿನಿಮಾ ಸಂಸ್ಥೆಯ ಪ್ರಚಾರ ಶಾಖೆಯ ತೀವ್ರ ಪ್ರಚಾರದಿಂದಾಗಿ ಕೆಲವೇ ದಿವಸಗಳಲ್ಲಿ ಗಾರ್ಬೋ ಹಾಲಿವುಡ್ಡಿನ ಪ್ರಮುಖ ತಾರೆಮಾಗಿ ಮೆರೆದಳು.

ಎಂ.ಜಿ.ಎಂ. ಸಂಸ್ಥೆಯಲ್ಲಿ ತಾನಿದ್ದ ೧೬ ವರ್ಷಗಳ ಅವಧಿಯಲ್ಲಿ ಗಾರ್ಬೋ ೨೪ ಚಲನಚಿತ್ರಗಳಲ್ಲಿ ಕಾಣಿಸಿಕೊಂಡಳು. ಅವಳಿಗೆ ಸಲ್ಲುತ್ತಿದ್ದ ಸಂಭಾವನೆ ಚಿತ್ರವೋದಕ್ಕೆ ೪೦೦ ಡಾಲರುಗಳಿಂದ ೩,೦೦,೦೦೦ ಡಾಲರುಗಳಿಗೇರಿತು. ದಿ ಟಾರೆಂಟ್(೧೯೨೬); ಪ್ಲೆಷ್ ಅಂಡ್ ದಿ ಡೆವಿಲ್(೧೯೨೭); ಲವ್(೧೯೨೭); ವೈಲ್ಡ್ ಆರ್ಕಿಡ್ಸ್(೧೯೨೯); ಅನ್ನಾ ಕ್ರಿಸ್ಟಿ(೧೯೩೦); ಮಾತಾ-ಹರಿ(೧೯೩೧); ಗ್ರ್ಯಾಂಡ್ ಹೋಟೆಲ್(೧೯೩೨); ಗಭೀರ ಚಿತ್ರಗಳಾದ ಕ್ವೀನ್ ಕ್ರಿಶ್ಚಿನ(೧೯೩೩); ಅನ್ನಾ ಕರೇನಿನಾ(೧೯೩೫); ಮತ್ತು ಕ್ಯಾಮಿಲಿ(೧೯೩೬); ಮೇರಿ ವಾಲೆವ್ಸ್ಕ(೧೯೩೭); ನಿನೋಚ್ಕ(೧೯೩೯) - ಇವು ಈಕೆಯ ಕೆಲವು ಪ್ರಮುಖ ಚಲನಚಿತ್ರಗಳು.

೧೯೪೧ರಲ್ಲಿ ತನ್ನ ೩೬ನೆಯ ವಯಸ್ಸಿನಲ್ಲಿ ಸಿನಿಮಾರಂಗದಿಂದ ಗಾರ್ಬೋ ಹೊರಬಂದಳು. ೧೯೫೦ರಲ್ಲಿ ಕೂಡಿದ ಸಿನಿಮಾತಜ್ಞರ ಒಂದು ಸಮಿತಿ ಈಕೆಯನ್ನು ಅತ್ಯುತ್ಕೃಷ್ಟ ತಾರೆಯೆಂದು ಸಾರಿತು. ೧೯೫೫ರಲ್ಲಿ ಗೌರವಾನ್ವಿತ ಅಕಾಡೆಮಿ (ಪ್ರಶಸ್ತಿ) ಪಡೆದುಕೊಂಡಳು. ಸಿನಿಮಾರಂಗದಿಂದ ನಿವೃತ್ತಿ ಹೊಂದಿದ ಮೇಲೆ ನ್ಯೂಯಾರ್ಕಿನಲೇ ಈಕೆ ನೆಲೆಸಿದಳು. ೧೯೫೧ರಲ್ಲಿ ಈಕೆಗೆ ಅಮೆರಿಕ ಸಂಯುಕ್ತ ಸಂಸ್ಥಾನದ ಪೌರತ್ತ್ವ ಲಭಿಸಿತು. ಈಕೆ ೧೯೯೦ರ ಏಪ್ರಿಲ್ ೧೫ರಂದು ನ್ಯೂಯಾರ್ಕಿನಲ್ಲಿ ನಿಧನವಾದಳು.

ಗಾರ್ಲೆಂಡ್, ಹ್ಯಾಮ್ ಲಿನ್: ೧೮೬೦-೧೯೪೦. ಅಮೆರಿಕದ ಕಾದಂಬರಿಕಾರ ಮತ್ತು ಪ್ರಬಂಧಕಾರ. ಬಾಲ್ಯದಲ್ಲಿ ರೈತತಂದೆಯೊಡನೆ ಹೊಲೆದಲ್ಲಿ ಕೆಲಸಮಾಡಿದ. ಅನಂತರ ಉಪಾಧ್ಯಾಯನಾದ, ಲೇಖಕನಾದ. ಈತನ ಮೊದಲ ಗಮನಾರ್ಹ ಕೃತಿ ಮೇನ್-ಟ್ರಾವೆಲ್ಡ್ ರೋಡ್ಸ್(೧೮೯೧) ಎಂಬ ಕಥೆಗಲ ಸಂಗ್ರಹ. ಸ್ಥಳದಿಂದ ಸ್ಥಳಕ್ಕೆ ಮೊಟ್ಟಮೊದಲಿಗೆ ವಲಸೆ ಹೋಗಿ ನೆಲೆಸುವ ರೈತರ ಕಷ್ಟಗಳ ಅನುಭವ ಗಾರ್ಲೆಂಡಿನ ಕುಟುಂಬಕ್ಕಿತ್ತು. ಈ ಜೀವನದ ಕಹಿ-ಸೋಲುಗಳನ್ನು ತನ್ನ ಗುರು ವಿಲಿಯಂ ಡೀನ್ ಹವೆಲ್ಸ್ನಿಗಿಂತ ಉಗ್ರವಾಗಿ ಈತ ನಿರೂಪಿಸಿದ್ದಾನ. ರೈತರನ್ನು ಗುಲಾಮಗಿರಿಗಿಳಿಸಿ ಬಿಡುತ್ತಿದ್ದ ಲೇವಾದೇವಿಯವರನ್ನೂ ರೈತನ ಜೀವನದ ಬೆವರು, ಕಣ್ಣೀರುಗಳನ್ನು