ಪುಟ:Mysore-University-Encyclopaedia-Vol-6-Part-5.pdf/೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಗಾಲವ - ಗಾಲಿ ಭಾಗಗಳೆಂದು ಕರೆಯುತ್ತಾರೆ (ಚಿತ್ರ 4b).BB ಛೇದನವನ್ನು ಮಧ್ಯ ಶಾಖಾ ಛೇದನ (ಮಿಡ್ ಶಂಟ್ ಡಿವಿಶನ್) ಎಂದೂ ಇದರಿಂದ ಉಂಟಾಗುವ ಭಾಗಗಳನ್ನು ಭಾಗಗಳೆಂದು ಕರೆಯುತ್ತಾರೆ (ಚಿತ್ರ 4c).ನಿಚ್ಚಳಿಕೆ ಜಾಲದ ಒಂದು ತುದಿಗೆ ಜನಕ ಎಂದರೆ ಆಕಾರವನ್ನು (ಜನರೇಟರ್ ಆರ್ ಸೋಸ್೯) ಜೋಡಿಸಿದಾಗ (ಚಿತ್ರ 5)ಜಾಲದಲ್ಲಿ ವಿದ್ಯುತ್ಪ್ರವಾಹ ಉಂಟಾಗುತ್ತದೆ.(ಬಿ.ಎಸ್.ಎನ್.ಪಿ) ಗಾಲವ: ವಿಶ್ವಾಮಿತ್ರನ ಶಿಷ್ಯರಲ್ಲಿ ಒಬ್ಬ ವೇದಾಧ್ಯಯನ ಮುಗಿದ ಬಳಿಕ ಗುರುದಕ್ಷಿಣೆ ತೆಗೆದುಕೊಳ್ಳಬೇಕೆಂದು ವಿಶ್ವಾಮಿತ್ರನನ್ನು ಒತ್ತಾಯಪಡಿಸಿದ. ಮೊದಲು ಒಪ್ಪದಿದ್ದರೂ ಮೇಲಿಂದ ಮೇಲೆ ಬಲಾತ್ಕಾರ ಮಾಡಿದಾಗ ಗುರು ಶಿಷ್ಯನಿಗೆ ಒಂದು ಕಿವಿ ಮಾತ್ರ ಕಪ್ಪಾಗಿರುವ 800 ಬಿಳಿಯ ಕುದುರೆಗಳನ್ನು ತಂದೊಪ್ಪಿಸಬೇಕೆಂದು ಅಪ್ಪಣೆ ಮಾಡಿದ. ಭೂಲೋಕದಲ್ಲಿ ಎಲ್ಲೂ ಅಂಥ ಕುದುರೆಗಳು ಕಾಣಾಲಿಲ್ಲಿವಾಗಿ ಗಾಲವ ವಿಷ್ಣುವನ್ನು ಕುರಿತು ತಪ್ಪಸ್ಸು ಮಾಡಿದ. ವಿಷ್ಣುವಿನ ಆಜ್ನೆ ಯಂತೆ ಗರುಡ ಈತನನ್ನು ಯಯಾತಿ ರಾಜನಲ್ಲಿಗೆ ಕರೆತಂದು ಬಿಟ್ಟ.ಯಯಾತಿ ತನ್ನ ಮಗಳು ಮಾಧವಿಯನ್ನು ಗಾಲವಿನಿಗೆ ಒಪ್ಪಿಸಿ ಅವಳನ್ನು ಯಾವ ರಾಜನಿಗಾದರು ಕೊಟ್ಟು ಕುದುರೆಗಳ್ಳನ್ನು ಸಂಪಾದಿಸಿಕೊಳ್ಳಬೇಕೆಂದು ತಿಳಿಸಿದ.ಪ್ರಸವಾನಂತರ ಮತ್ತೆ ತನ್ನ ಕನ್ಯತ್ವವನ್ನು ಪಡೆದುಕಳ್ಳುವ ವರವನ್ನೀಕೆ ಪಡೆದಿದ್ದಳು. ಗಾಲವ ಮಾಧವೀಯನ್ನು ಇಕ್ಷ್ವಾಕು ವಂಶದ ಹಯ೯ಶ್ವ,ದಿವೋದಾಸ,ಔಶೀರನೆಂಬ ರಾಜರುಗಳಿಗೆ ಒಪ್ಪಿಸಿ ತಲಾ 200 ಕುದುರೆಗಳಂತೆ 600 ಕುದುರೆಗಳ್ಳನ್ನು ಸಂಪಾದಿಸಿದ. ಮಿಕ್ಕ 200 ಕುದುರೆಗಳಿಗೆ ಪ್ರತಿಯಾಗಿ ಮಾಧವೀಯನ್ನು ವಿಶ್ವಾಮಿತ್ರನಿಗೇ ಒಪ್ಪಿಸಿದ. ಈ ಉಲ್ಲೇಖ ಮಹಾಭಾರತದಲ್ಲಿದೆ. ವಿಶ್ವಾಮಿತ್ರನ ಮಕ್ಕಳಲ್ಲಿ ಒಬ್ಬನ ಹೆಸರು ಗಾಲವ. ಒಮ್ಮೆ ಹನ್ನೆರಡು ವಷ೯ ಕ್ಷಾಮ ಬಂದಾಗ ಭಿಕ್ಷಾವೃತ್ತಿಯನ್ನು ಬಯಸದ ವಿಶ್ವಾಮಿತ್ರ ಹೆಂಡತಿ ಮಕ್ಕಳನ್ನು ಬಿಟ್ಟು ಎಲ್ಲಿಯೋ ಹೊರಟುಹೋದ. ಆಗ ಆತನ ಹೆಂಡತಿ ತನ್ನ ಮಕ್ಕಳಲ್ಲಿ ಒಬ್ಬನನ್ನು ಮಾರಿ ಜೀವನ ನಡೆಸಬೇಕೆಂದು ಬಯಸಿ ಒಬ್ಬನ ಕುತ್ತಿಗೆಗೆ ದಭೆ೯ ಹುರಿಯನ್ನು ಬಿಗಿದು ಕರೆದೊಯ್ಯುತ್ತಿದ್ದಳು. ನಡುದಾರಿಯಲ್ಲಿ ಸತ್ಯವ್ರತನೆಂಬ ಅರಸು ಇವಳನ್ನು ಸಂಧಿಸಿ ಸಮಾಚಾರ ತಿಳಿದು ಆ ಕುಟುಂಬದ ಹೊಣೆಯನ್ನು ತಾನು ಹೊರುವುದಾಗಿ ಅಭಯವಿತ್ತ. ಈ ರೀತಿ ಕುತ್ತಿಗೆಗೆ ಗಾಳ ಹಾಕಿಸಿಕೊಂಡವನಾದುದರಿಂದ ಈತನಿಗೆ ಗಾಲವನೆಂಬ ಹೆಸರಾಯಿತು. ಈ ವೃತ್ತಾಂತವನ್ನು ದೇವೀಭಾಗವತ,ವಾಯುಪುರಣ ಮುಂತಾದ ಕಡೆ ಉಲೇಖಿಸಲಾಗಿದೆ. ಗಾಲಿ: ಲೋಹ,ಮರ ಇಲ್ಲವೆ ಇತರ ಗಡಸು ಪದಾಥ೯ಗಳಿಂದ ನಿಮಿ೯ಸಲ್ಪಪಟ್ಟ ವತು೯ಲಾಕಾರದ ಚೌಕಟ್ಟು ಪೂಣ೯ವಾಗಿ ಇಲ್ಲವೆ ಆಂಶಿಕವಾಗಿ ಘನವಾಗಿರಬಹುದು. ಕೇಂದ್ರದಲ್ಲಿ ಒಂದು ಗುಂಬವಿದ್ದು ಅಲ್ಲಿ ಸಂಗಮಿಸುವ ಮತ್ತು ಪರಧಿಯೆಡೆಗೆ ಆರೀಯವಾಗಿ ಅಪಹರಿಸುವ ಆರಗಳಿರಬಹುದು(ಹ್ವೀಲ್). ಚಕ್ರ ಪಯಾ೯ಯ ನಾಮ. ಗಾಲಿಯ ಇತಿಹಾಸ ಪ್ರ.ಶ.ಪೂ.6,500 ವಷ೯ಗಳಷ್ಟು ಹಳೆಯದು. ಮಾನವನ ಸಂಸ್ಕೃತಿಯ ಇತಿಹಾಸದಲ್ಲಿ ಗಾಲಿಯ ಪಾತ್ರ ವಿಶಿಷ್ಟವಾದುದೂ ಕ್ರಾಂತಿಕಾರಕವಾದುದೂ ಆಗಿದೆ. ಪ್ರಾಚೀನ ಮಾನವ ಜನಾಂಗ ಅಲೆಮಾರಿಯಾಗಿದ್ದು ಆಹಾರವನ್ನು ಹುಡುಕಿ ಸಂಪಾದಿಸುತಿದ್ದ ಕಾಲದಲ್ಲಿ ಆಹಾರ ಶೇಖರಣೆಯ ಆವಶ್ಯಕತೆಯೇ ಇರಲಿಲ್ಲ. ಆದರೆ ಕ್ರಮೇಣ ಆತ ಒಂದು ಕಡೆ ನೆಲೆನಿಂತು ತನ್ನ ಆಹಾರವನ್ನು ತಾನೆ ಬೆಳೆಸಲಾರಂಭಿಸಿದಾಗ ಹಾಗೆ ಬೆಳೆಸಿದ ಬೆಳೆಯನ್ನು ಶೇಖರಿಸಲು ಪಾತ್ರೆಗಳ ಆವಶ್ಯಕತೆ ಉಂಟಾಯಿತು. ಜೇಡಿಮಣ್ಣನ್ನು ಕಲಸಿ ಕೈಯಿಂದ ಸಣ್ಣ,ದೊಡ್ಡ ಮಡಿಕೆ,ಗಡಿಗೆ ಜಾಡಿಗಳನ್ನು ಮಾಡಿಕೊಳ್ಳುತ್ತಿದ್ದ.ಆದರೆ ಗಾಲಿಯನ್ನು ಸಮತಲವಾಗಿ ಕೆಳಗಿಟ್ಟು ತಿರುಗಿಸಿದಾಗ ಮಧ್ಯದ ಗುಂಬದಲ್ಲಿ ಮಣ್ಣನ್ನು ಎರೆದು,ತಿರುಗಿಸಿ ಹೆಚ್ಚು ನಯವಾಗಿ,ಭದ್ರವಾದ ಮಡಿಕೆ ಮುಂತಾದ ಪಾತ್ರೆಗಳನ್ನು ಮಾಡಲು ಆತ ಕಲಿತ. ಹೀಗೆ ಮಾಡುವಾಗ ಕ್ರಮೇಣ ಆವನಲ್ಲಿ ಹುದುಗಿದ್ದು ಅಭಿರುಚಿ ಹೊಮ್ಮಿ ಅವುಗಳಿಗೆ ಬಣ್ಣ ಕೊಡುವುದನ್ನೂ ಅವುಗಳ ಮೇಲೆ ರೇಖಾ ಚಿತ್ರಗಳನ್ನು ಹೆಚ್ಚು ಕಲಾತ್ಮಕವಾಗಿ ಬಿಡಿಸುವುದನ್ನೂ ಆರಂಭಿಸಿದ. ಪುರಾತತ್ತ್ವ ಶೋಧಕರು ಪ್ರಾಚೀನಾವಶೇಷಗಳ ಕಾಲನಿಣ೯ಯ ಮಾಡುವಾಗ ನಿವೇಶನಗಳಲ್ಲಿ ದೊರೆತ ಮಡಿಕೆ ಮುಂತಾದ ಮೃತ್ಪಾತ್ರೆಗಳು ಕೈಯಿಂದ ಜೀಡಿಮಣನ್ನು ತೆಗೆಯುತ್ತರೆ.