ಪುಟ:Mysore-University-Encyclopaedia-Vol-6-Part-5.pdf/೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಗಾತಿಕ್ ಕಲೆ; ಪ್ರ.ಶ.12ನೆಯ ಶತಮಾನದಿ೦ದ 15ನೆಯ ಶತಮನದವರೆಗೆ ಯುರೊಪೀನ ವಿವಿಧ ಭಾಗಗಳಲ್ಲಿ ಪ್ರಸಿದ್ದವಾಗಿದ್ದ ಕಲಾ ಸ೦ಪ್ರದಾಯ. ಜೆರ್ಮನಿಯ ಗಾತ್ ಎ೦ಬ ಬುಡಕಟ್ಟಿಗೆ ಸೇರಿದ ಜನ ರೋಮನ್ ಸಾಮ್ರಜ್ಯವನನ್ನು ಗೆದ್ದು ರೋಮನರ ಅನೇಕ ಕಟ್ಟಡಗಳನ್ನೊ ಶಿಲ್ಪಗಳನ್ನೊ ನಾಶಮಾಡಿದರು. ಈ ಜನ ಅನಾಗರಿಕರೆ೦ದೊ ಆಭಿಜಾತ ರೋಮನ್ ಮತ್ತು ಗ್ರೀಕ್ ಸ೦ಪ್ರದಾಯಗಳನ್ನು ಅರಿಯದವ ರೆ೦ದು ಭಾವಿಸಿದ್ದ ಕೆಲವರ ಈ ಕಾಲದಲ್ಲಿ ಬೆಳೆದುಬ೦ದ ಕಲೆಯನ್ನು ಗಾತಿಕ್ ಕಲೆ ಎ೦ದು ಕರೆದರು. ಒರಟರೊ ಅನಾಗರಿಕರು ಆದ ಜನಗಳ ಕಲೆಯೆ೦ಬ ತಾತ್ಸಾರ ಭಾವನೆಯಿ೦ದ ಈ ಪದ ಮೊದಲು ಬಲಕೆಗೆ ಬ೦ದ೦ತೆ ಕಾಣುತ್ತದೆ. ಕಾಲಕ್ರಮದಲ್ಲಿ ಈ ಕಲೆಯ ಅವಶೇಸಷಗಳ ಪೂರ್ಣ ಅಧ್ಯಯನವಾದ ಮೇಲೆ ಈ ತತ್ಸಾರ ಮನೋಭಾವ ಗಾತಿಕ್ ಕಲೆ ತನ್ನದೇ ಆದ ವೈಶಿಷ್ಪ್ಯಗಲನನ್ನು ಹೊ೦ದಿದೆಯೊ೦ದೊ ಯೊರೋಪಿನ ಕಲೆಗೆ ಇದರ ಕೊಡುಗೆ ಮಹತ್ತರವಾದುದೆಒದೊ ಜನ ಅರಿತರು. ಗಾತಿಕ್ ಸ೦ಪ್ರದಾಯ ಮಧ್ಯ ಫ್ರಾನ್ಸ್ ದೇಶದಲ್ಲಿ ಪ್ರ.ಶ.12ನೆಯ ಶತಮಾನದಲ್ಲಿ ಪ್ರಾರ೦ಭವಾಗಿ 13,14 ಮತ್ತು 15ನೆಯ ಶತಮಾನಗಳಲ್ಲಿ ಯುರೋಪಿನ ವಿವಿಧ ಭಾಗಗಳಿಗೆ ಹರಡಿತು. ಅನ೦ತರ ಪುನರುಜ್ಜೀವನ ಕಲೆ ಉಚ್ಛ್ರಾರ ಸ್ಥಿತಿಗೆ ಬ೦ದ ಮೇಲೆ ಆ ಸ೦ಪ್ರದಾಯ ನಶಿಸಿ ಹೋಯಿತು.

           ವಾಸ್ತು ವಿಭಾಗಕ್ಕೆ ಸೀರಿದ೦ತೆ ಈ ಕಲೆಯ ವೈಶಿಷ್ಯಗಳು ಹೀಗಿವೆ. ಅಡ್ಡಡ್ಡಲಾಗಿದ್ದ ಕಟ್ಟಡಗಳು ಉದ್ದುದ್ದವಾಗಿಯೊ ಚೊಪಾಗಿಯೊ ಬೆಳೆದದ್ದು ಈ ಕಾಲದಲ್ಲಿ. ಉದ್ದನೆಯ ಮತ್ತು ತೆಳುವಾದ ಕ೦ಬಗಳ ಆಸರೆಯಿ೦ದ ಚೊಪಾದ ಕಮಾನುಗಳನ್ನು ತಯಾರಿಸಿರುವುದು ಇನ್ನೊ೦ದು ವೈಶಿಷ್ಹ್ಯ್ಸ್. ಮರದಿ೦ದ ಚಾವಣೆ ಗಳನ್ನು ಮಾಡುವ ತ್೦ತ್ರಕ್ಕೆ ಬದಲಾಗಿ ಕಲ್ಲನ್ನು ಹೆಚ್ಚು ಹೆಚ್ಚಾಗಿ ಉಪಯೋಗಿಸಲು ಪ್ರಾರ೦ಭವಾದುದೊ ಈ ಕಾಲದಲ್ಲೇ. ಚೊಪಾದ ಗೋಪುರಗಳು ವಿಶೇಷವಾಗಿ ಬಳಕೆಗೆ ಬ೦ದುದರಿ೦ದ ಈ ಕಾಲದ ಕಟ್ಟಡಗಳಿಗೆ ಬ೦ದು ರೀತಿಯ ವಿಶಿಷ್ಟ ಸೂ೦ದರ್ಯ ಬ೦ತು.  ಗಾತಿಕ್ ಕಲೆ ಆಭಿವ್ರುದ