ಪುಟ:Mysore-University-Encyclopaedia-Vol-6-Part-5.pdf/೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಗಾಳಿಮರ ದಕ್ಷಿಣ ಅಮೆರಿಕದ ಚಿಲಿಯಲ್ಲಿ ಗಾಳಿಪಟ ಉತ್ಸವ ಬಹಳ ಪ್ರಸಿದ್ಧವಾಗಿದ್ದು, ಸ್ವಾತಂತ್ರೋತ್ಸವದ ದಿನ ಸೆಪ್ಟೆಂಬರ್ ೧೮ ರಂದು ವಿಶೇಷವಾಗಿ ಆಚರಿಸಲ್ಪಡುತ್ತದೆ. ಗಯಾನದಲ್ಲಿ ಈಸ್ಟರ್ ದಿನದಂದು ಧಾರ್ಮಿಕ ಗುಂಪುಗಳು ಹಾಗೂ ಬುಡಕಟ್ಟು ಜನಾಂಗದವರು ಸೇರಿ ಗಾಳಿಪಟ ಹಾರಿಸುವ ಉತ್ಸವದಲ್ಲಿ ಭಾಗವಹಿಸುತ್ತಾರೆ. ಗಾಳಿಪಟಗಳಲ್ಲಿ ಅನೇಕ ಬಗೆಯ ಪ್ರತಿರೂಪವನ್ನು ಕಾಣಬಹುದು. ಮುಖ್ಯವಾಗಿ ಪ್ರಸಿದ್ಧವಾದ ಮೂರು ಬಗೆಯನ್ನು ಇಲ್ಲಿ ವಿವರಿಸಲಾಗಿದೆ. ೧.ಷಟ್ಕೋಣಾಕೃತಿಯ ಪಟಗಳು: ಈ ಪಟಕ್ಕೆ ಆರು ಮುಖಗಳು(ಕೋನಗಳು) ಇರುವುದರಿಂದ ಇದನ್ನು ಷಟ್ಕೋಣಾಕ್ರುತಿಯ ಪಟಗಳೆಂದು ಕರೆಯುತ್ತಾರೆ. ಇದಕ್ಕೆ ಮೂರು ಕಡ್ಡಿಗಳನ್ನು ರಚನೆಯ ಸಾಧನವಾಗಿ ಬಳಸುವುದರಿಂದ ಇದನ್ನು ಮೂರು ಕಡ್ಡಿಯ ಪಟ ಎಂದೂ ಕರೆಯುತ್ತರೆ. ಇದರ ರಚನೆಗೆ ಬಳಸುವ ಮೂರು ಕಡ್ಡಿಗಳೂ ಒಂದೇ ಅಳತೆಯವಾಗಿರುತ್ತವೆ. ಇವನ್ನು ಅಡ್ಡಡ್ಡಲಾಗಿ ಸೇರಿಸಿ ಒಳ್ಳೆಯ ಹೊಂದಾಣಿಕೆಯೊಂದಿಗೆ ದಾರದ ಸಹಾಯದಿಂದ ಭದ್ರವಾಗಿ ಕಡ್ಡಿಗಳ ಮಧ್ಯದಲ್ಲಿಯೂ ಮತ್ತು ಅಂಚಿನಲ್ಲಿಯೂ ಕಟ್ಟಲಾಗುತ್ತದೆ. ಅನಂತರ ಇಡೀ ರಚನೆಯನ್ನು ಹಗುರವಾದ ಕಾಗದ ಮುಂತಾದ ವಸ್ತುಗಳನ್ನು ಹೊಂದಿಸಿ ಅಂಟಿಸಲಾಗುತ್ತದೆ. ಬಳಿಕ ಪಟದ ಕೆಳಗಡೆಯ ಕೋನಬಿಂದುಗಳಿಗೆ ಸೇರಿದ ವಂಕಿಯೊಂದಕ್ಕೆ ಬಾಲವನ್ನು ತೂಗುಬಿಡುತ್ತಾರೆ. ಪಟವನ್ನು ಗಾಳಿಗೆ ಒಡ್ಡಿ ಹಾರಿಸಲು ಸಹಾಯಕವಾಗುವಂತೆ ಅದರ ಮಧ್ಯಕ್ಕೆ ಸೂತ್ರದ ಹುರಿಯೊಂದನ್ನು ಕಟ್ಟುತ್ತರೆ. ಆ ಹುರಿ ಅನೇಕ ಪಾದಗಳಿಂದ ಕೂಡಿದ್ದು, ಆ ಪಾದಗಳು ಪಟದ ಅಂಚಿನ ನಾನಾ ಸಂದುಗಳನ್ನು ಬಂಧಿಸಿ ಇರುತ್ತವೆ. ಆ ಪಾದಗಳ ಉದ್ದ ಪಟದ ಒಟ್ಟು ಉದ್ದದ ಅರ್ಧದಷ್ಟು. ೨. ವಜ್ರಾಕ್ರುತಿಯ ಪಟ: ವಜ್ರಾಕೃತಿಯನ್ನು ಹೋಲುವುದರಿಂದ ಈ ಪಟಕ್ಕೆ ಈ ಹೆಸರು. ಇದರಲ್ಲಿ ಸಮಾನ ಅಳತೆಯ ಎರಡು ಕಡ್ಡಿಗಳನ್ನು ಅಡ್ಡಡ್ಡಲಾಗಿ ಸೇರಿಸಿ ಮಧ್ಯದಲ್ಲಿ ದಾರದ ಸಹಾಯದಿಂದ ಬಲವಾಗಿ ಕಟ್ಟಿರುತ್ತಾರೆ. ಇದಕ್ಕೆ ಕಟ್ಟಿದ ಸೂತ್ರಕ್ಕೆ (ಮೂಗುದಾರ) ಎರ್ಡು ಪಾದಗಳು ಇವೆ. ಒಂದು ಪಾದವನ್ನು ಪಟದ ಮೇಲ್ಭಾಗದ ಬಿಂದುವಿಗೂ ಇನ್ನೊಂದು ಪಾದವನ್ನು ಪಟದ ಕೆಳಭಾಗದ ಬಿಂದುವಿಗೂ ಸೇರಿಸಿ ಕಟ್ಟಲಾಗಿರುತ್ತದೆ. ೩. ಪಟ್ಟಿಗೆ ಪಟ: ಇದನ್ನು ೧೮೯೦ ರಲ್ಲಿ ಆಸ್ಟ್ರೇಲಿಯ ದೇಶದ ಲಾರೆಂನ್ಸ್ ಹಾರ್ ಗ್ರೇವ್ ಎಓಬಾತ ಕಂಡುಹಿಡಿದ. ಇದು ಸಮಚತುಷ್ಕೋಣಾಕ್ರುತಿಯಲ್ಲಿದ್ದು ರಚನೆಯಲ್ಲಿ ಪೆಟ್ಟಿಗೆ ಪಟ ಎಂದು ಕರೆಯಲಾಗಿದೆ. ಇದರಲ್ಲಿ ಚೌಕಾಕ್ರುತಿಯ ಎರಡು ಮೈಕಟ್ಟಿನ ರಚನೆ ಉಂಟು. ಉದ್ದ ಮತ್ತು ಅಗಲ ಒಂದೇ ಅಳತೆಯದು. ಪಟದ ಮೈಕಟ್ಟಿನ ಅಂಚಿಗೆ ಯಾವ ಬಗೆಯ ಹೊದಿಕೆಯೂ ಇರುವುದಿಲ್ಲ. ಸೂತ್ರ ಪಟದ ಮೈಕಟ್ಟಿನ ಮೇಲ್ಭಾಗದ ಮಧ್ಯದಲ್ಲಿ ಲಂಭವಾಗಿ ಸೇರಿರುವ ಕಡ್ಡಿಗಳನ್ನು ತನ್ನೆರಡು ಪಾದಗಳಿಂದ ಬಂಧಿಸಿರಿತ್ತದೆ. ಪಟ ಗಾಳಿಯಲ್ಲಿ ಏಕಮುಖ ಕೋನದಿಂದ ನಿರಾಯಾಸವಾಗಿ ತೇಲುತ್ತದೆ. ಇದಕ್ಕೆ ಬಾಲದ ಅಗತ್ಯವಿಲ್ಲ ಸೂತ್ರದಲ್ಲಿ ನಾಲ್ಕು ಪಾದಗಳು ಇದ್ದಗ ಪಟ ವಿಶಾಲವಾಗಿ ಎಲ್ಲ ಕಡೆಯೂ ಹಾರಲು ಅನುಕೂಲವಾಗುತ್ತದೆ. ಇದರಲ್ಲಿ ತ್ರಿಕೋನಪಟ, ದುಂಡುಪಟ ( ಕೊಳವೆ ಆಕೃತಿಯ ಪಟ) ಮತ್ತು ಷಟ್ಕೋಣಾಕೃತಿಯ ಪಟಗಳನು ರಚಿಸುವುದೂ ಸಾಧ್ಯ. ಇತ್ತೀಚೆಗೆ ಹಕ್ಕಿ ಆಕೃತಿಯಲ್ಲಿ, ಮನುಶ್ಯಾಕೃತಿಯಲ್ಲಿ, ದೋಣಿಯಾಕೃತಿಯಲ್ಲಿ, ಚಿಟ್ಟೆಯಾಕೃತಿಯಲ್ಲಿ ಪಟಗಳನ್ನು ರಚಿಸಿರುವ ನಿದರ್ಶನಗಳಿವೆ. ಡ್ರೇಗನ್ ಮಾದರಿ ಚೀನದ ಅಚ್ಚುಮೆಚ್ಚಿನ ಪಟದಾಕೃತಿಯಾಗಿದೆ. ಕನ್ನಡದಲ್ಲಿ ಗಾಳಿಪಟ ಎಂಬ ಹೆಸರಿನಲ್ಲಿಯೇ ಪ್ರಬಂಧ ಸಂಕಲನವೊಂದನ್ನು ಪ್ರಕಟಿಸಿರುವ ರಾ. ಕು. ಅವರು ತಮ್ಮ ಕೃತಿಯಲ್ಲಿ ಚೌಕುಪಟ, ಬುಗಲಿ, ಕಿಳ್ಳೀಕೇತ( ರೊಯ್ ಪಟ), ಜೋಡು ಪಟಗಳನ್ನು ಹೆಸರಿಸಿ ಅವುಗಳ ವಿಶೇಷತೆಯನ್ನು ತಿಳಿಸಿದ್ದಾರೆ. ಗಳಿಪಟದ ರಚನೆಯ ಬಗ್ಗೆ ಒಂದೆರಡು ಅಂಶಗಳನ್ನು ಅಗತ್ಯವಾಗಿ ಗಮನಿಸಬಹುದಾಗಿದೆ. ಕಡ್ಡಿಗಳು ಸೇರುವ ಸಂದುಗಳನ್ನು ದಪ್ಪ ಹುರಿಯಿಂದ ಒಂದೆರಡು ಸುತ್ತು ಗಂಟುಹಾಕುವುದಕ್ಕಿಂತ ಸಣ್ಣ ದಾರದಲ್ಲಿ ಅನೇಕ ಸುತ್ತು ಬಖಾಸಿ ಗಟು ಹಾಕುವುದು ಉತ್ತಮ ದಪ್ಪ ಹುರಿಯಲ್ಲಿ ಗಂಟು ಹಾಕುವುದರಿಂದ ಕಡ್ಡಿಗಳು ಜಾರಿಹೋಗುವ ಸಂಭವ ಉಓಟು. ಈ ಸಂಧುಗಳನ್ನು ಸೇರಿಸಿ ಭದ್ರಪಡಿಸಲು ಕೆಲವು ಸಾರಿ ಗೋಂದು( ಮೇಣ), ಅರಗು, ವಜ್ರ ಮೊದಲಾದ ಅಒಟುವ ಪದಾರ್ಥಗಳನ್ನು ಬಳಸುತ್ತಾರೆ. ಪಟದ ಪ್ರಮುಖ ಸಾಧನಗಳಲ್ಲಿ ಬಾಲವೂ ಒಂದು. ಇದನ್ನು ಗಾಳಿಗೆ ಪ್ರತಿರೋಧಕ ಶಕ್ತಿಯಾಗಿ ಉಪಯೋಗಿಸುತ್ತಾರೆಯೇ ಹೊರತು ತೂಕಕ್ಕಾಗಿ ಅಲ್ಲ. ಮನೆ ಕಂಬ, ಮರ ಮೊದಲಾದ ಅಡಚಣೆಗಳಿಲ್ಲದ ಬಯಲು ಪ್ರದೇಶ ಪಟ ಹಾರಿಸಲು ಒಳ್ಳೆಯ ಸ್ಠಳಾ ಗಾಳಿ ಹೆಚ್ಚು ರಭಸದಿಂದ ಬೀಸಿದರೆ ಪಟ ಜೋಲಿ ಹೊಡೆದು ನೆಲಕ್ಕೆ ಅಪ್ಪಳಿಸುವ ಸಾಧ್ಯತೆ ಉಂಟು, ಅಥವಾ ತೀರ ಮಂದಗತಿಯಲ್ಲಿ ಬೀಸಿದರೆ ಪಟ ಮೇಲೇರದಂತೆಯೂ ಹೋಗಬಹುದು. ಸಾಮಾನ್ಯವಾಗಿ ಪಟವನ್ನು ಗಾಳಿ ಬೀಸುವ ದಿಕ್ಕಿಗೆ ಪ್ರತಿಮುಖವಾಗಿ ಹಾರಿಸುತ್ತರೆ. ಉದಾಹರಣೆಗೆ, ಪೂರ್ವದಿಂದ ಪಶ್ಚಿಮದ ಕಡೆಗೆ ಗಾಳಿ ಬೀಸುತಿದ್ದರೆ ಪೂರ್ವದ ಕಡೆಗೆ ದಾರ ಹಿಡಿದುಕೊಂಡು ಓಡುತ್ತಾರೆ. ಪಟದ ಗಾತ್ರಕ್ಕೆ ಅನುಗುಣವಾಗಿ ಅದನ್ನಾಡಿಸುವ ದಾರದ ಗಾತ್ರವೂ ಇರಬೇಕಾಗುತ್ತದೆ. ಏಕೆಂದರೆ ತುಂಬ ದೊಡ್ಡ ಪಟವನ್ನು ನೂಲೆಳೆಯಲ್ಲಿ ಆಡಿಸಲು ಹೋದಾಗ ದಾರ ತುಡಾಗಿ ಪಟ ಭೂಮಿಗೆ ಬಿದ್ದುಹೋಗುತ್ತದೆ. ವಿದ್ಯುತ್ ತಂತಿಗಳಿಗಳಿರುವಲ್ಲಿ ಪಟವನ್ನು ಹಾರಿಸುವುದು ಅಪಾಯಕರ. ಗಾಳಿಪಟದ ಮುಖ್ಯ ಉಪಯೋಗ ಮನೋರಂಜನೆ. ಇದು ಮನಸ್ಸಿಗೆ ಹರ್ಷವನ್ನೂ ಉಲ್ಲಾಸವನ್ನೂ ತಂದುಕೊಡುತ್ತದೆ. ಈಗಲೂ ಹಳ್ಳಿಗಳಲ್ಲಿ ದೊಡ್ಡ ದೊಡ್ಡ ಗಾಳಿಪಟಗಳನ್ನು ಮೇಲಕ್ಕೆ ಹಾರಿಸಿ ಅದರ ಹುರಿಯನ್ನು ತುಂಬ ಎತ್ತರವಾದ ಮರದ ತುದಿಗೆ ಕಟ್ಟೀ ಪಟ ಹಾರುವುದನ್ನು ಬೆಳಗ್ಗೆಯಿಂದ ಸಂಜೆಯವರೆಗೆ ನೋಡಿ ಆನಂದಿಸುವುದುಂಟು. ಒಟ್ಟಿನಲ್ಲಿ ಆರಂಭದಲ್ಲಿ ಜನಪದದ್ದಾಗಿದ್ದ ಈ ಆಟ- ಕ್ರಮೇಣ ನಾಗರಿಕ ಆಟವಾಗಿ, ಇಂದು ವಿಶ್ವದೆಲ್ಲೆಡೆಯಲ್ಲಿ ಮಾನ್ಯತೆ ಪಡೆದಿದೆ. ಗಾಳಿಮರ: ಕ್ಯಾಜಹ್ಯುಯಾರೈನೇಸೀ ಕುಟುಂಬಕ್ಕೆ ಸೇರಿದ ಒಂದು ಚೆಲುವಾದ ಮರ. ಸರ್ವೆಮರ ಪರ್ಯಾಯನಾಮ. ಕ್ಯಾಕ್ಯ್ಯಾರೈನ ಎಕ್ವಿಸಿಟಿಫೋಲಿಯ ಇದರ ವೈಜ್ನಾನಿಕ ಹೆಸರು. ಇದರ ಪುಟ್ಟರೆಂಬೆಗಳು ಕ್ಯಾಸೊವರಿ ಹಕ್ಕಿಯ ಪುಕ್ಕಗಳನ್ನು