ಪುಟ:Mysore-University-Encyclopaedia-Vol-6-Part-5.pdf/೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಗಿಂಗ್ ಕೋ-ಗಿಡತಿಗಣೆಗಳು ತೆಳುವಾದ ಪೊರೆಯಿಂದ ರೂಪುಗೊಂಡು,ಉಸಿರೆಳೆದುಕೊಂಡಾಗ ಉಬ್ಬಿ,ಉಸಿರು ಬಿಟ್ಟಾಗ ತಮ್ಮ ಯಥಾಸ್ಥಿತಿಗೆ ಹಿಂತಿರುಗುತ್ತವೆ; ಆದರೆ ಗಾಳಿಯುಬ್ಬಟೆಯಿಂದ ಪೀಡಿತವಾದಾಗ ಇವು ಅತಿಯಾಗಿ ಹಿಗ್ಗಿರುವುದರಿಂದ ಯಥಾಸ್ಥಿತಿಗೆ ಹಿಂತಿರುಗದೆ ದೊಡ್ಡವಾಗೇ ಉಳಿಯುತ್ತವೆ.ಇದರಿಂದ ಇಕ್ಕೆಡೆಗಳಲ್ಲೂ ಇರುವ ಫುಪ್ಪಸಗಳು ದೊಡ್ಡವಾಗಿ ಎದೆಗೂಡಿಗೆ ಪೀಪಾಯಿ ಆಕಾರ ಬರುತ್ತದೆ.ಸಾಮಾನ್ಯವಾಗಿ ಈ ರೋಗವನ್ನು ತುತೂರಿ,ಓಲಗ,ಕೊಳಲು ಮುಂತಾದ ವಾದ್ಯಗಳನ್ನು ನುಡಿಸುವ ಸಂಗೀತಗಾರರಲ್ಲಿ ಕಾಣಬಹುದು.ಈ ರೋಗ ಧೂಮಪಾನ ಮಾಡುವವರಲ್ಲಿ ಗೋಚರಿಸುವ ಮುಖ್ಯ ರೋಗ.ಫುಪ್ಪಸಗಳ ಗಾಳಿ ಗೂಡುಗಳಲ್ಲಿ ಗಾಳಿಯೊತ್ತಡ ಒಂದೇ ಸಮವಾಗಿ ಏರಿ ಉಳಿಯುವುದರಿಂದ ಕಾಲ ಕ್ರಮೇಣ ಈ ಪರಿಸ್ಥಿತಿ ಒದಗುತ್ತದೆ.ಅವರಲ್ಲಿ ಉಸಿರು ಹೊರಬಿಡುವುದರಿಂದ ಕಾಲ ಕ್ರಮೇಣ ಈ ಪರಿಸ್ಥಿತಿ ಒದಗುತ್ತದೆ.ಆವರಲ್ಲಿ ಉಸಿರು ಹೊರಬಿಡುವುದು ತುಂಬ ಕಷ್ಟಕರ.ಇದೇ ರೀತಿ ಉಬ್ಬಟೆ ಇತರ ಅಂಗಾಂಶಗಳಲ್ಲೂ ಕಾಣಿಸಿಕೊಳ್ಳಬಹುದು.ಉದಾಹರಣೆಗೆ ಎರಡು ಫುಪ್ಪಸಗಳು ಮಧ್ಯೆ ಹಾಗೂ ಬೆನ್ನೆಲುಬು ಮತ್ತು ಎದೆ ಎಲುಬುಗಳ ನಡುವಣ ಸ್ಥಳದಲ್ಲೂ ಚರ್ಮದಡಿಯ ಆಂಗಾಂಶಗಳಲ್ಲೂ ಗಾಳಿಯುಬ್ಬಟೆಗೆ ಅವಕಾಶವಿದೆ.ಪಕ್ಕೆಲುಬು ಮುರಿದು ಫುಪ್ಪಸವನ್ನು ಚುಚ್ಚಿ ಹರಿದರೆ ಈ ಬಗೆಯ ಗಾಳಿಯುಬ್ಬುಟೆ ಕಾಣಿಸಿಕೊಳ್ಳಬಹುದು. ಗಿಂಗ್ ಕೋ:ಗಿಂಗೊಯೋಲೀಸ್ ಗಣದ ಗಿಂಗೊಯೋಸೀ ಕುಟುಂಬಕ್ಕೆ ಸೇರಿದ ಒಂದು ನಗ್ನ ಬೀಜ ಸಸ್ಯ,. ಪರ್ಮಿಯನ್ ಆವಧಿಯಲ್ಲಿ ಪ್ರಥಮತಃ ಕಾಣಿಸಿಕೊಂಡು ಈ ಮರ ಬಹುಪ್ರಾಚೀನಕಾಲದ ಸಸ್ಯಗಳ ಏಕೈಕ ಪ್ರತಿನಿಧಿಯಾಗಿ ಇಂದಿಗೂ ಮೂಲತಃ ಯಾವ ಬದಲಾವಣೆಯುನ್ನೂ ತೋರಿಸದೆ ಉಳಿದಿರುವುದರಿಂದ ಇದನ್ನು ಜೀವಂತ ಫಾಸಿಲ್ ಎಂದು ಕರೆಯುವುದುಂಟು.ಟ್ರಯಾಸಿಕ್,ಜುರಾಸಿಕ್ ಮತ್ತು ಟರ್ಶಿಯರಿ ಕಾಲಗಳಲ್ಲಿ ಆತ್ಯಂತ ಉಚ್ಛ್ರಾಯಸ್ಥಿತಿಯನ್ನು ಮುಟ್ಟಿದ್ದ ಗಿಂಗ್ ಕೋದಲ್ಲಿ ಈಗ ಬೈಲೋಬ ಎಂದು ಒಂದೇ ಒಂದು ಪ್ರಭೇದ ಮಾತ್ರ ಉಳಿದಿದೆ.ಇದಾದರೂ ಪಶ್ಚಿಮ ಕೆಲವು ಪ್ರದೇಶಗಳಲ್ಲಿ ಮಾತ್ರ ಕಾಣದೊರೆಯುತ್ತದೆ.ಚೀನದಲ್ಲಿ ಇದನ್ನು ಪವಿತ್ರಮರವೆಂದು ರರಿಗಣಿಸಲಾಗಿದ್ದು ಅಲ್ಲಿನ ದೇವಾಲಯಗಳ ಆವರಣಗಳಲ್ಲಿ ಬೆಳೆಸಲಾಗಿದೆ.ಜಪಾನಿನಲ್ಲೂ ಇದನ್ನು ಕಾಣಬಹುದು.ಭಾರತದಲ್ಲಿ ನೀಲಗಿರಿಯಲ್ಲಿ ಸಸ್ಯಾರಾಮ,ಡೆಹ್ರಾಡೂನ್ ಮುಂತಾದೆಡೆಗಳಲ್ಲಿ ಕೆಲವು ಮರಗಳನ್ನು ನೋಡಬಹುದು. ಗಿಂಗ್ ಕೋ ಸುಮಾರು 120' ಎತ್ತರಕ್ಕೆ ಬೆಳೆಯುವ ಚೆಲುವಾದ ಮರ.ಇದರಲ್ಲಿ ಹೆಚ್ಚು ರೆಂಬೆಗಳು ಹುಟ್ಟುವುದಿಲ್ಲ.ರೆಂಬೆಗಳಲ್ಲಿ ಉದ್ದರೆಂಬೆ ಮತ್ತು ಮೋತಟುರೆಂಬೆ ಎಂಬ ಎರಡು ಬಗೆಗಳಿವೆ. ಮೋಟುರೆಂಬೆಗಳ ಮೇಲೆಯೇ ಎಲೆಗಳು ರೂಪುಗೊಳ್ಳುವುದು.ಗುಂಪು ಗುಂಪಾಗಿ ಹುಟ್ಟುವ ಈ ಎಲೆಗಳು ತಮ್ಮ ಆಕಾರ, ನೋಟ ಮತ್ತು ನಾಳವಿನ್ಯಾಸದಲ್ಲಿ ತಾಮ್ರಶಿಖಿ ಎಂಬ (ಮೇಡನ್ ಹೇರ್ ಫರ್ನ್ ) ಜರೀಗಿಡದ ಎಲೆಗಳನ್ನು ಹೋಲುತ್ತವೆ .ಇದರಿಂದ ಗಿಂಗ್ ಕೋ ಮರಕಕ್ಕೆ ಮೇದನ್ ಹೇರ್ ಟ್ರೀ ಎಂಬ ಹೆಸರಿದೆ.ಒಂದೊಂದು ಎಲೆಯೂ 2"-4" ಉದ್ದವೂ ಹೆಚ್ಚು ಕಡಿಮೆ ಅಷ್ಟೇ ಅಗಲವೂ ಇದ್ದು ಬೀಸಣಿಗೆಯಾಕಾರದಲ್ಲಿದೆ ಹಾಗೂ ದ್ವಿಭಜನ ರೀತಿಯ ನಾಳ ವಿನ್ಯಾಸವನ್ನು ಪ್ರಾದರ್ಶಿಸುತ್ತದೆ.ಎಲೆಗಳು ವರ್ಷಕ್ಕೊಮ್ಮೆ ಉದುರುತ್ತವೆ. ಗಿಂಗ್ ಕೋವಿನಲ್ಲಿ ಲಿಂಗಹಭೇದವಿದೆ.ಈ ಲಕ್ಷಣದಲ್ಲಿ ಇದು ಗೊಡ್ಡುಈಚಲು ಜಾತಿಯ ಮರಗಳನ್ನು (ಸೈಕ್ಯಾಸ್) ಹೋಲುತ್ತದೆ.ಕಾಯಿ ಒಂದು ರಿತಿಯ ಅಷ್ಟಿಫಲ.ಇದರ ತಿರುಳಿಗೆ ಒಂದು ಬಗೆಯ ದುರ್ವಾಸನೆಯಿದೆ. ಗಿಂಗ್ ಕೋ ಮರ ಅಕರ್ಷಕವಾಗಿರುವುದಪರಿಂದ ಇದನ್ನು ಆಲಂಕಾರಕ್ಕಾಗಿ ತೋಟಗಳಲ್ಲಿ ಅಲ್ಲಲ್ಲಿ ಬೆಳೆಸಲಾಗಿದೆ.ಇದನ್ನು ಬೀಜಗಳ ಮೂಲಕ ಇಲ್ಲವೆ ಕಾಂಡತುಂಡುಗಳಿಂದ ವೃದಿಸಬಹುದು.ಆದರೆ ಬೆಳೆವಣಿಗೆ ಬಲು ನಿಧಾನ.ಕಾಂಡತುಂಡುಗಳಿಂದ ಬೇರುಮೂಡಲು ಕೊನೆಯ ಪಕ್ಷ ಎರಡು ವರ್ಷಗಳಾದರೂ ಬೇಕು.ಗಿಂಗ್ ಕೋ ಮರದಿಂದ ಹಲವಾರು ಉಪಯೋಗಗಳುಂಟು.ಚೀನ,ಜಪಾನುಗಳಲ್ಲಿ ಬೀಜದಲ್ಲಿನ ತಿರುಳಿನ ಭಾಗವನ್ನು ಹುರಿದು ಇಲ್ಲವೇ ಬೇಯಿಸಿ ತಿನ್ನುವುದಿದೆ.ಬಟ್ಟೆಗಳನ್ನು ಒಗೆಯುವುದಕ್ಕೂ ಬೀಜಗಳನ್ನು ಉಪಯೋನಗಿಸುವದುಂಟು.ಇದರ ಚೌಬೀನೆ ಹಳದಿವರ್ಣದಿಂದಿದ್ದು ಹಗುರವೂ ಬಿದುರವೂ ಆಗಿದೆ.ಚೀನ,ಜಪಾನುಗಲನ್ನು ಮತ್ತು ಕೇರಂ ಬೋರ್ಡುಗಳನ್ನು ತಯಾರಿಸಲು ಇದನ್ನು ಉಪಯೋಗಿಸುತ್ತಾರೆ. ಗಿಡತಿಗಣೆಗಳು:ಹೆಮಿಪ್ಪರ ಉಪಗಣಗಳ ಹಲವಾರು ಕುಟುಂಬಗಳಿಗೆ ಸೇರಿದ ಕೀಟಗಳು (ಪ್ಲಾಂಟ್ ಬಗ್ಸ್).ತಿಗಣೆ,ಹೇನು ಮುಂತಾದ ಕೀಟಗಳಿಗೆ ಬಲು ಹತ್ತಿರ ಸಂಬಂಧಿಗಳು.ಹಲವಾರು ಬಗೆಯ ಸಸ್ಯಗಳ ಕಾಂಡ,ಎಲೆ,ಹೂ ಮುಂತಾದ ಅಂಗಗಳ ಮೇಲೆ ಪರಾವಲಂಬಿಗಳಾಗಿದ್ದು ಅವುಗಳ ರಸವನ್ನು ಕುಡಿದು ಬದುಕುವುದರಿಂದ ಇವಕ್ಕೆ ಈ ಹೆಸರು ಬಂದಿದೆ. ಗಿಡತಿಗಣೆಗಳ ದೇಹಲಕ್ಷಣಗಳು ಬಗೆಯಿಂದ ಬಗೆಗೆ ಸ್ವಲ್ಪ ವ್ಯತ್ಯಾಸವಾದರೂ ಎಲ್ಲಕ್ಕೂಸಮಾನವಾದ ಕೆಲವು ಗುಣಲಕ್ಷಣಗಳನ್ನು ಗುರುತಿಸಬಹುದು.ಈ ಕೆಳಗಿನವುಗಳು ಹೀಗಿವೆ :೧.ರೆಕ್ಕೆಗಳು ಎರಡು ಜೊತೆ ಇವೆ. ಮುಂದಿನ ಜೊತೆ ಬುಡಭಾಗ ದಪ್ಪವಾಗಿಯೂ ಚರ್ಮಿಲವಾಗಿಯೂ ಇದೆ.ತುದಿಭಾಗ ಪೊರೆಯಂತಿದೆ.ಇದರಿಂದಾಗಿ ಈ ಬಗೆಯ ರೆಕ್ಕೆಯನ್ನು ಹೆಮೆಲಿಟ್ರಾನ್ ಮಾದರಿಯದು ಎಂದು ಕರೆಯಲಾಗುತ್ತದೆ.ಹಿಂದಿನ ರೆಕ್ಕೆಗಳು ಸಂಪೂರ್ಣವಾಗಿಯೇ ಎಲೆಗಳ ರೂಪದಂತಿವೆ.