ಪುಟ:Mysore-University-Encyclopaedia-Vol-6-Part-5.pdf/೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಗಾತಿಕ್ ವಾಸ್ತು ಶೈಲಿ ಈ ರೀತಿಯ ಛಾವಣಿಯನ್ನು ಆಳವಡಿಸಿದ್ದರಿಂದ ಇಡೀ ಕಟ್ಟಡ ವಿಸ್ಮಯವನ್ನುಂಟು ಮಾಡುವಂತೆ ಅವ್ಯಾಹತವಾದ ಬೆಳಕಿನಿಂದ ಹೊಳೆಯುವುದೆಂದು ಅದರ ನಿರ್ಮಾತ ಸಂತ ಸುಗೇರ್ ಹೇಳಿದಾರೆ. ಪ್ರಶ. 1145-50ರಲ್ಲಿ ಕಟ್ಟಲಾದ ನೊಯೊನ್ ಕೆತೀಡ್ರಲ್ ನಲ್ಲಿ ಡೆನಿಸ್ ಚರ್ಚಿನ ಮಾದರಿಯನ್ನೇ ಅನುಸರಿಸಲಾಗಿದೆ. ನೋಟರ್ಡೇಮ್ ಕೆತೀಡೆಅಲ್ ನಲ್ಲಿಯೂ ಇದೇ ಮಾದರಿಯನ್ನು ಕಾಣಬಹುದು. ಕಿರಿದಾದ, ಕಂಬಗಳ ನಡುವಣ ಅಂಗಳದಲ್ಲಿ ಎರಡೂ ಕಡೆಗಳಲ್ಲಿಯೂ ಚೂಪು ಕಮಾನುಗಳು ಅವುಗಳ ಮೇಲೆ ಅದೇ ರೀತಿಯ ಎರಡು ಮಹಡಿಗಳೂ ಬಂದು ಈ ಕಟ್ಟಡಕ್ಕೆ ಬಂದು ಭವ್ಯತೆಯನ್ನು ಕೊಡುತ್ತವೆ. ಮುಂಭಾಗದ ಭಾಗಿಲಿನಿಂದ ನೋಡಿದರೆ ನಾಲ್ಕಾರು ಮಹಡಿಗಳನ್ನುಳ್ಳ ಕಟ್ಟಡದಂತೆ ಭಾಸವಾಗುವ ಬೃಹತ್ ಪ್ರಮಾಣದ ಈ ಕಟ್ಟಡ 1160-1205ರ ಸಮಯದಲ್ಲಿ ಪೂರ್ಣಗೊಂಡಿತು. ಆರಂಭದ ಗಾತಿಕ್ ವಾಸ್ತುಶೈಲಿಗೆ ನೋಟರ್ ಡೇಮ್ ಕೆತೀಡ್ರಲ್ ಒಂದು ಒಳ್ಳೆಯ ಉದಾಹರಣೆ. ಶಿಲ್ಪವೂ ವಾಸ್ತುವಿನ ಹೊಸ ನಮೂನೆಗೆ ತಕ್ಕಂತೆ ಹೊಂದಿಕೊಂಡಿರುವುದು ಅಲ್ಲಿನ ವೈಶಿಷ್ಯ. ವಿಶಾಲವೂ ಎತ್ತರವೂ ಆದ ಬಾಗಿಲುಗಳು, ಕಿಟಕಿಗಳ ಮೇಲ್ಭಾಗ, ಆರೆಗೆಂಬಗಳು ಮೊದಲಾದವು ಶಿಲ್ಪಗಳಿಂದ ಕೂಡಿದ್ದು ಧಾರ್ಮಿಕ ಭಾವೆನೆಗೆ ಪುಷ್ಟಿಕೊಡುವಂತಿದೆ. ಅದತಲ್ಲಿಯೂ ಪಶ್ಚಿಮ ದ್ವಾರ ಶಿಲ್ಪಗಳಿಂದ ಆವೃತ್ತವಾಗಿ, ಸಾಂಕೇತಿಕವಾಗಿ ಅದು ದೇವಲೋಕದ ಜೆರೂಸಲೆಂಗ ಹೆಬ್ಬಾಗಿಲೋ ಎನ್ನುವಂತೆ ಕೆತ್ತಲಾಗಿದೆ. ಅಲ್ಲಿಯೇ ಇರುವ ಷಾರ್ಟ್ರ ಕೆತೀಡ್ರಲ್ ನಲ್ಲಿರುವ ಒಳಾಂಗಣದಲ್ಲಿ ರಾಜರಾಣಿಯರಿಗೆ ಸಂಬಂಧಿಸಿದ ಶಿಲ್ಪಗಳು ವಿಸೇಷವಾಗಿರುವುದುದರಿಂದ ಅದನ್ನು ರಾಜವಂಶದ ಹ್ಮಹಾದ್ವಾರವೆಂದು ಕರೆಯಲಾಗಿದೆ.1145-50 ರಲ್ಲಿ ರಚನೆಗೊಂಡ ಪಚ್ಚಿಮದ ಮೂರು ಮಹಾದ್ವಾರನಳನ್ನೂ ಒಂದೇ ಹೆಬ್ಬಾಲಂತೆ ಕೆತ್ತಲಾಗಿದೆ.ಕ್ರಿಸ್ತನ ಜನನ,ದೇವಾಲಯಕ್ಕೆ ಆತನನ್ನು ಒಯ್ಯುವುದು,ವರ್ಜಿನ್ ಮಾತೆಯೊಂದಿಗೆ ಕ್ರಿಸ್ತ -ಈ ಶಿಲ್ಪಫಲಕಗಳು ಒಲದ್ವಾರದ ಮೇಲಿವೆ.ಕ್ರಿಸ್ತ ಸ್ವರ್ಗವನ್ನು ಏರುತ್ತಿರುವುದು ಎಡ ದ್ವಾರದಲ್ಲಿದೆ.ಮದ್ಯದ ದ್ವಾರದಲ್ಲಿ ಆತ ಎರಡನೆಯ ಸಾರಿ ಹಿಂದಿರುಗುವ ಕಥೆ ಬಂದಿದೆ.ಇವುಗಳ ಕೆಳಗೆ ಕ್ರಿಸ್ತನ ಜೀವನಕ್ಕ ಸಂಬಂಧಿಸಿದ ವಿವಿಧ ಕಥೆಗಳು ರೂಪಗೊಂಡಿವೆ.ಕಮಾನಿನ ಕೆಳಭಾಗದಲ್ಲಿ ಮಾಡಿರುವ ಕೆತ್ತನೆಯ ಕೆಲಸವೂ ಗಮನಾರ್ಹವಗಿದೆ.ಬಲಭಾಗದಲ್ಲಿ ಜಾನವನ್ನು ಸಾಂಕೇತಿಕವಾಗಿಯೂ ವರ್ಷದ ಹನ್ನೆರಡು ತಿಂಗಳನ್ನು ಎಡಭಾಗದಲ್ಲಿಯೂ ಕೆತ್ತಲಾಗಿದೆ.ದ್ವಾರಗಳ ಇಕ್ಕೆಡೆಗಳಲ್ಲಿರುವ ಕಂಬಗಳಲ್ಲಿ ಹಳೆಯ ಬಡಂಬಡಿಕೆಯಲ್ಲಿ ಹೇಳಿರುವ ರಾಜರಾಣಿಯರ ಶಿಲ್ಪಗಳಿವೆ.ಇವುಗಳೆಲ್ಲವೂಪ್ರಾರಂಭ ಗಾತಿಕ್ ವಾಸ್ತುಶಿಲ್ಪಕ್ಕೆ ಉತ್ತಮ ಉದಾಹರಣೆನಳು. 1194 ರಲ್ಲಿ ಪಾರ್ಟ್ರ ಕತೀದಡ್ರಲ್ ಬೆಂಕಿಗೆ ಆಹುತಿಯಾಯಿತು.ನೆಲಮಾಳಿಗೆ,ಪಶ್ಚಿಮದ ಗೋಪುರಗಳನ್ನು ಬಿಟ್ಟರೆ,ಕತಡದ ಇತರ ಭಾಗಗಳೆಲ್ಲವೂ ನಾಶವಾದವು.ಕೂಡಲೇ ಈ ಕಟ್ಟಡವನ್ನು ಹೊಸದಾಗಿ ಕತಟ್ಟುವ ಕೆಲಸ ಪ್ರಾರಂಭವಾಯಿತು.ಆ ಕೆಲಸ ಮುಗಿದದದ್ದು 1220 ರಲ್ಲಿ.ಇಲ್ಲಿಂದ ಗಾತಿಕ್ ವಾಸ್ತುಶೈಲಿಯಲ್ಲಿ ಮುಂದಿನ ಹೆಜ್ಜೆ ಪ್ರಾರಂಭವಾಹಯಿತೆನ್ನ ಬಹುದು.1194 ರಿಂದ 1248 ರ ವರೆಗಿನ ಅದಿಯಲ್ಲಿ ನಿರ್ಮಾಣವಾದ ಕತೀಡ್ರಲ್ ಗಳನ್ನು ಪ್ರೌಡ ಗಾತಿಕ್ ಎಂದು ವ್ಯವಹರಿಸುತ್ತಾರೆ.ಪುನರುಜ್ಜೀವನಗೊಂಡು ಈ ಪಾರ್ಟ್ರ ಕತೀಡ್ರಲ್ ಪ್ರೌಡಗಾತಿಕ್ ಶೈಲಿಯ ಮೊದಲ ಕಟ್ಟಡ.ಬೆಂಕಿಯಲ್ಲಿ ಹಾಳಗದೇ ಉಳಿದಿದ್ದ ಪಶ್ಚಿಮದ ಗೋಪುರ ಮತ್ತು ನೆಲಮಾಳಿಗೆಯನ್ನು ಅನುಸರಿಸಿ ಅದಕ್ಕೆ ತಕ್ಕ ಪ್ರಮಾನದ ಪುನರ್ನಿರ್ಮಣ ಕಾರ್ಯ ಆರಂಭವಾಯಿತು.

ಈ ಕಟ್ಟಡದಲ್ಲಿ ಕಾಣಬರುವ ಮುಖ್ಯ ವೈಶಿಷ್ಷ್ಯವೆಂದರೆ ಹಾಡುವ ಸ್ಥಳ.ಶಿಲುಬೆಯಾಕಾರದ ದೇವಾಲಯದ ಅಡ್ಡಭಾಗ ಮತ್ತು ಮದ್ಯಾಂಗಣ.ಈ ಮೂರು ಭಾಗಗಳಲ್ಲಿನ ಸಮತೋಲನ ಅನಂತರ ಬೋರ್ಗೆಸ್ ಎಂಬಲ್ಲಿ ಮತ್ತೊಂದು ಕತ್ತಿಡ್ರಲ್ ನಿರ್ಮಿತವಾಯಿತು.ಇಲ್ಲಿ ದೇವಾಲಯದ ಶಿಲುಬೆಯಾಕಾರದ ಅಡ್ಡಭಾಗವನ್ನು ಪುರ್ಣವಾಗಿ ಕೈಬಿಟ್ಟದ್ದರಿಂದ ಒಳಾಂಗಣ ವಿಶಾಲವಾಯಿತು.ಈ ಕಟ್ಟಡದಲ್ಲಿ ಒಂದರ ಮೇಲೆ ಒಂದರಂತೆ ಮೂರು ಕಿಟಕಿಗಳನ್ನು ಅಳವಡಿಸಲಾಯಿತು.ಮೂರೂ ಮಹಡಿಗಳ ಮುಂಭಾಗ ಈ ಕತೀಡ್ರಲ್ ಗೆ ಒಂದು ಭವ್ಯತೆಯನ್ನು ಕೊಟ್ಟಿತು.ಪಾರ್ಟ್ರನಲ್ಲಿ ಪ್ರಾರಂಭವಾದ ಬೆಳೆವಣಿಗೆಗಳು ರೀಮ್ಯ್ ಮತ್ತು ಆಮ್ಯನ್ಯ್ ಕತೀಡ್ರಲ್ ಗಲಳಲ್ಲಿ ಪೂರ್ಣಗೊಂಡವು.ಪ್ರೌಢ ಗಾತಿಕ್ ಶೈಲಿಯ ಕಟ್ಟಡಗಳಿಗೆ ಇವೆರಡೂ ಉತ್ತಮ ಉದಾಹರಣೆನಳು ನೆಲದಿಂದ ಸು.42ಮೀ ಎತ್ತರದ ಛಾವಣಿ ಚೂಪು ಕಮನುಗಳಿಂದ ಮಧ್ಯದಲ್ಲಿರುವ ಕಂಬಗಳಿಂದ ಇನ್ನೂ ಎತ್ತರವಿರುವಂತೆ ಭಾಸವಾಗುತ್ತದೆ.ಈ ಕತ್ತಿಡ್ರಲ್ ಗಳ ಮಹಾದ್ವಾರಗಳ ಶಿಲ್ಪಗಳು ಗಾತಿಕ್ ಶೈಲಿಯಲ್ಲೇ ಅತ್ಯತ್ತಮ ಶಿಲ್ಪಗಳೆಂದು ಪರಿಗಣಿತವಾಗಿವೆ ಇಲ್ಲಿನ ಶಿಲ್ಪಗಳು ಸಾಮಾನ್ಯವಾಗಿ ಸರಳವಾಗಿಲ್ಲ.ಅವುಗಳ ಪ್ರತಿಮಾ ವೆವರಣೆಗಳು ಬಹು ಜಟಿಲವಾಗಿವೆ.ಭೂತಗಳು,ದೇವತೆಗಳು ಮುಂತಾದ ಶಿಲ್ಪಗಳು ಬಹು ಸುಂದರವಾಗಿದ್ದು ಆ ಕಾಲದ ಧ್ರಾರ್ಮಿಕ ಜೀವನದ ಸುಂದರ ಪ್ರತೀಗಳು ಆಗಿವೆ.ಪಾರ್ಟ್ರ ಮತ್ತು ಆಮ್ಯನ್ಸ್ ಕತೀಡ್ರಲ್ ಗಳ(1220-30) ಶಿಲ್ಪಗಳು ದೇವಲೋಕವನ್ನೇ ನಮ್ಮ ಮುಂದೆ ತೆರೆಯುತ್ತವೆ.ಕೊನೆಯ ತೀರ್ಪಿನ ಶಿಲ್ಪ ಆಮ್ಯನ್ಸ್ ಮಧ್ಯ ದ್ವಾರದಲ್ಲೂ ವರ್ಜಿನ್ ಮೇರಿಯ ಶಿಲ್ಪ ಉತ್ತರದ ದ್ವಾರದಲ್ಲೂ ಆಮ್ಯನ್ಸ್ ಕತೀಡ್ರಲ್ ನ ಉತ್ತರದ ಗೋಡೆಗಳಲ್ಲಿ ಹಳೆ ಒಡಂಬಡಿಕೆಯ ಶಿಲ್ಪ ಫಲಕಗಳಿದ್ದರೆ,ದಕ್ಷಿಣದಲ್ಲಿ ಹೊಸ ಒಡಂಬಡಿಕೆಯ ಚಿತ್ರ ಫಲಕಗಳಿವೆ.ಇಲ್ಲಿಯೇ ಪಶ್ಚಿಮ ದ್ವಾರದಲ್ಲಿರುವ ಭೋಧನೆ ಮಾಡುತ್ತಿರುವ ಕ್ರಿಸ್ತನ ಶಿಲ್ಪ ಪ್ರೌಢ ಗಾತಿಕ್ ಶೈಲಿಯಲ್ಲಿಯೇ ಅತ್ಯುತ್ತಮ ವಿಗ್ರಹ.ದಯಾಮನಾದ ಕ್ರಿಸ್ತನ ಭಾವನೆಗಳು ಬಹು ಸುಂದರವಾಗಿ ಇಲ್ಲಿ ರೂಪಗೊಂಡಿವೆ.ಮಡಿಕೆಗಳಿಂದ ಆಮೃತ್ತ ವಾದ ಬಟ್ಟೆಯ ವಿನ್ಯಾಸ,ನೆಟ್ಟಗೆ ನಿಂತಿರುವ ಭಂಗಿ,ಮೊದಲಾದವು ಈ ಶಿಲ್ಪದ ವೈಶಿಷ್ಟ್ಯಗಳು ಹೇರಳವಾಗಿವೆ.ಆಮ್ಯನ್ಸ್ ಮತ್ತು ರೀಮ್ಸ್ಳಗಳಲ್ಲಿ ಆವು ವಿಶೇಷವಾಗಿ ಉಳಿದುಬಂದಿವೆ ಬಣ್ಣದ.