ಪುಟ:Mysore-University-Encyclopaedia-Vol-6-Part-5.pdf/೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಗಾದೆಗಳು ಒಟ್ಟಿನಲ್ಲಿ ಮೊದಲನೆಯ ಶ್ಲೋಕಾರ್ಧದಲ್ಲಿ ೩೦ ಮಾತ್ರೆಗಳೂ ಎರಡನೆಯದರಲ್ಲಿ ೨೭ ಮಾತ್ರೆಗಳೂ ಇದ್ದಂತಾಯಿತು.ಪ್ರಥಮ ಭಾಗಗಳಲ್ಲಿ ಒಂದೊಂದರ ೧೨ ಮಾತ್ರೆಗಳೂ ಚತುರ್ಮಾತ್ರೆಯ ಮಾತ್ರಾಗಣದ ಐದು ರೂಪಗಳಲ್ಲಿ ಯಾವುದಾದರೂ ಮೂರು ಚತುರ್ಮಾತ್ರೆಗಳುಳ್ಳ್ವು.ಮೊದಲರ್ಧದ ದ್ವಿತೀಯ ಭಾಗದಲ್ಲಿ ನಾಲ್ಕು ಚತುರ್ಮಾತ್ರೆಗಳೂ(ಇವುಗಳಲ್ಲಿ ಮೂರನೆಯ ಚತುರ್ಮಾತ್ರೆ ಜಗಣವೋ ಸರ್ವಲಘುವೋ ಆಗಿರಬೇಕು) ಅನಂತರ ಕಡೆಯಲ್ಲಿ ಒಂದು ಗುರುವೂ ಇದ್ದು,ಎರಡನೆಯ ಅರ್ಧದ ದ್ವಿತೀಯ ಭಾಗದಲ್ಲಿ ಯಾವುದಾದರು ಚತುರ್ಮಾತ್ರೆಗಳು, ಅನಂತರ ಒಂದು ಲಘು,ಯಾವುದಾದರೂ ಒಂದು ಚತುರ್ಮಾತ್ರೆ ಮತ್ತು ಕಡೆಯಲ್ಲಿ ಒಂದು ಗುರು ಇರುತ್ತದೆ. ಈ ಗಾಧಾ ವೃತ್ತದಲ್ಲಿ ಗಮನಿಸಬೇಕಾದ ಇನ್ನೆರಡು ವಿಶಯಗಳೆಂದರೆ ಚತುರ್ಮಾತ್ರೆಗಳು ನಿರಂತರವಾಗಿ ಬಂದಾಗ ಒಂದು ಚತುರ್ಮಾತ್ರೆಯ ಕಡೆಯ ಮಾತ್ರೆಗೂ ಮುಂದಿನ ಚತುರ್ಮಾತ್ರೆಯ ಮೊದಲನೆಯದಕ್ಕು ಮಧ್ಯೆ ಏರ್ಪಡುವ ಸಂಧಿ ಸ್ಥಾನದಲ್ಲಿ ಅವೆರಡರ ಸಂಯೋಗವಾಗುವಂತೆ ಧೀರ್ಘಾಕ್ಷರವನ್ನು ಬಳಸದಿರುವಿಕೆ ಮತ್ತು ಎಲ್ಲಿ ನಿರ್ಧಿಷ್ಟವಾಗಿಲ್ಲವೋ ಅಂಥ ಕಡೆಗಳಲ್ಲಿ ಜಗಣದ ಪ್ರಯೋಗ ನಿಷೇಧ.ಜೆಂಡ್ ಅವೆಸ್ತದ ಭಾಗವಾಗಿ ಬರುವ ಗಾಧಾ ಎಂಬ ಪದದ ವಿವರಗಳೀಗೆ(ನೊಡೀ-ಗಾಧಾ). ಗಾದೆಗಳು:ತಲೆಮಾರಿನಿಂದ ತಲೆಮಾರಿಗೆ ಪರಂಪರಾಗತವಾಗಿ ಹರಿದು ಬಂದಿರುವ ಸಾಂದ್ರವೂ ಭೊದಪರವೊ ಆದ ಸೂಕ್ತಿಯೆ ಗಾದೆ (ಪ್ರಾವಬ್).ಕನ್ನಡದಲಿ ಗಾದೆ ಪದಕ್ಕೆ ಸಂವಾದಿಯಾಗಿ ನಾಣೂಡೀ ಎಂಬ ಪದವೂ ಪ್ರಚಲಿತವಿದೆ.ಗಾದೆ ಸಂಸ್ಕ್ರುತದ ಗಾಧಾ ಪದದಿಂದ ಬಂದಿದೈಂದು ಹೆಳುತಾರೆ.ಇದು ಗಾದಾ ಪದದ ನೆರ ತದ್ಬವವೊ ಅದವ ಪ್ರಾಕ್ರುತದ ಗಾಹೆಯ ಮೂಲಕ ಬಂದುದೂ ಹೆಳಲು ಕಷ್ತ ಆದರೆ ಗಾಧಾ ಎಂಬದು ಮೂಲದಲ್ಲಿ ಒಂದು ಛಂದಸ್ಸಿನ ಜಾತಿಯನ್ನು ಸೂಚಿಸುತದೆಯೆಂದು ಮಾತ್ರ್ ಹೆಳಬಹುದು.ಅಂತು "ನಾಣ್ಣಡೀ"ಯನ್ನು ಮರೆಸುವಷಟರಮಟ್ಟಗೆ "ಗಾದೆ"ಪ್ರಚಾರದಲ್ಲಿದೆ.ಗಾದೆಗೆ ಸಂವಾದಿಯಾಗಿ ಸಾಮಾತಿ,ಸೂಕ್ತಿ,ಸೂತ್ರ,ಉದ್ದರಣೇ,ಲೊಕೊಕ್ತಿ,ಪ್ರಾಚಿನೊಕ್ತಿ ಇತ್ಯಾದಿಗಳು ಬಳಕೆಯಾಗಿದ್ದರೂ ಮೂಲಾರ್ಧದಲ್ಲಿ ಇವೆಲ್ಲವೂ ಒಂದೆ ಎನ್ನಲಾಗುವುದಿಲ್ಲ. ಜನಪದ ಸಾಹಿತ್ಯದ ಉಳೀದೆಲ್ಲ ಪ್ರಕಾರಗಳೀಗಿಂತ ಗಾದೆ ವ್ಯಾಪಕವೂ ಜನ ಸಮುಖವೂ ಆಗಿದೆಯಲ್ಲದೆ,ಜನಸಾಮಾನ್ಯದ ಬದುಕು ಭಾಷೆಗಳಲ್ಲಿ ಹಾಸು ಹೊಕ್ಕಾಗಿದೆ.ಗ್ರಾಮೀಣ ಜನ ಮಾತನಾಡುವಾಗಲೆಲ್ಲ ಗಾದೆಗಳು ಪುಂಖಾನು ಪುಂಖವಾಗಿ ಬರುವುದನ್ನು ಕಾಣುತ್ತೀವೆ.ಅವಿಲ್ಲದೆ ಹೋದರೆ ಮಾತು ಸಪ್ಪೆಯಾಗುತ್ತದೆ.ಆದ್ದರಿಂದಲೆ ಸಮಯಕ್ಕೆ ಸರಿಯಾಗಿ ಗಾದೆ ಬಾರದೆ ಹೋದರೆ,ಹಿಂದಕ್ಕೆ ಏನೋ ಗಾದೆ ಹೇಳಿದ ಹಾಗಾಯ್ತು ಎಂದು ಹೇಳುವುದರ ಮೂಲಕ ಅದರ ಆವಶ್ಯಕತೆಯನ್ನು ಒತ್ತಿ ಹೇಳುತ್ತಾರೆ.ಗಾದೆ ಆಡುಮಾತಿನ ಜೀವಸತ್ವ ಎಂಬುದನ್ನು ಇದು ತೋರಿಸಿಕೊಡುತ್ತದೆ.ಊಟಕ್ಕೆ ಉಪ್ಪಿನಕಾಯೀಯಂತೆ ಗಾದೆ ಮಾತಿನ ವ್ಯಂಜನಶಕ್ತಿಯನ್ನು ಒದಗಿಸುತ್ತದೆ.ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ದದು ಎಂಬ ಗಾದೆಯೇ ಗಾದೆಯ ಸ್ವರೂಪವನ್ನು ತಿಳಿಸುತ್ತದೆ.ಇದು ಆಕಾರದಲ್ಲಿ ವಾಮನನಾಗಿ ತ್ರಿವಿಕ್ರಮವೆನಿಸಿದೆ. ಗಾದೆ ಜನಜೀವನದ ವ್ಯಾಪಕ ಸತ್ತ್ವ,ತತ್ತ್ವ:ನೂರು ಭಾವದ ನೂರು ವಿಷಯದ ನೂರು ಅಭಿವ್ಯಕ್ತಿ.ಇಲ್ಲಿ ವ್ಯಕ್ತಗೊಂಡಿರೂವ ಅನುಭವಜಗತ್ತು ಅನ್ಯಾದೃಶವಾದುದು.ಹಾಗೆ ನೋಡೀದಾಗ ಇವುಗಳ ಕರ್ತಾರರನ್ನು ಆಸಂಸ್ಕೃತರೆನ್ನುವುದು ದೂರದ ಮಾತಾಗಿಯೇ ಉಳಿಯುತ್ತದೆ.ಗ್ರಾಮಜೀವನಕ್ಕೆ ಕಾಲಿರಿಸಿದ ಕೂದಲೆ ಇಂಥ ಗಾದೆಗಳ ಬಿಸಿ ತಾಗುತ್ತದೆ.ಕೆಲವು ಬೆಳದಿಂಗಳಿನಂತೆ ತಂಪಾದರೆ,ಮತ್ತೆ ಕೆಲವು ಬಿಸಿಲಿನಂತೆ ಮೈ ಸುಡುತ್ತವೆ;ಬೆಂಕಿಯ ಕಿಡಿಗಳಂತೆ ಕೆಲವಾದರೆ,ಇಬ್ಬನಿಯಂತವು ಮತ್ತೆ ಕೆಲವು ಮುತ್ತಿಕ್ಕಿದರೆ,ಮತ್ತೆ ಕೆಲವು ಮುತ್ತಿಗೆ ಹಾಕುತ್ತವೆ.ಇನ್ನು ಕೆಲವಂತೂ ಸಿಡಿಲಪೊಟ್ಟಣಗಳೇ ಸರಿ.ಇವಕ್ಕೆ ಅಪಮೌಲ್ಯದ ಭಯವಿಲ್ಲ,ಕೊಳೆಕಟ್ಟಿ ಮಾಸಿ ಹೋಗುತ್ತವೆ ಎಂಬ ಶಂಕೆಯಿಲ್ಲ. ಇವು ನೀರಸ ಕವಿಸಮಯಗಳಲ್ಲ,ವಿಚಾರದ ವಿಸ್ಫುಲಿಂಗಗಳು;ಸೂಕ್ತ ಸಂದರ್ಭಗಳಲ್ಲಿ ತಾಳಿದ ಯೋಗ್ಯ ನಿರ್ಣಯಗಳು. ಗಾದೆ ಹಲವಾರು ಮಾತುಗಳ ಘಟಕ.ಆದ್ದರಿಂದಲೇ ಅದು ಸಾವಿರ ಮಾತಿನ ಸರದಾರ.ಅದು ಹಲವರ ಜ್ನಾನ,ಒಬ್ಬನ ವಿವೇಕ ವ್ಯಾಖ್ಯಾನವನ್ನು ಅಪೇಕ್ಷಿಸುವ ಹೇಳಿಕೆ. ರಾಷ್ಟ್ರೀಯ ಮಣ್ಣಿನಲ್ಲಿ ಬೆಳೆದ ಬೆಳೆ. ಜರ್ಮನ್ ಗಾದೆಗಳ ಸಂಗ್ರಹಕಾರ ಇಸೆಲಿಯನ್ನನ ಪ್ರಕಾರ,ಗಾದೆಗಳೆಂದರೆ ಜನಸಾಮಾನ್ಯರಲ್ಲಿ ಚಲಾವಣೆಯಲ್ಲಿರುವ ಸಾರ್ವಜನಿಕ ಮುದ್ರೆ ಬಿದ್ದಿರುವ ಪ್ರಚಲಿತವೂ ಸ್ವೀಕೃತ ಮೌಲ್ಯಭರಿತವೂ ಆಗಿರುವ ನಾಣ್ಯ.ಎಸ್.ಜಿ.ಚಾಂಪಿಯನ್ ಎಂಬ ವಿದ್ವಾಂಸ ತನ್ನ ಜನಾಂಗಿಕ ಗಾದೆಗಳು ಎಂಬ ಬೃಹತ್ ಸಂಕಲನಕ್ಕೆ ಪ್ರಸ್ತಾವನೆ ಬರೆಯುತ್ತ ಹೀಗೆ ಹೇಳಿದ್ದಾನೆ:ನನ್ನ ಅಭಿಪ್ರಾಯದಲ್ಲಿ ಗಾದೆಯೆಂದರೆ ಜನರ ಬಳಕೆಯಲ್ಲಿದ್ದು,ಈಗಲೂ ಇರುವ,ಉಪದೇಶಾತ್ಮಕ ಅಥವಾ ಸಲಹೆಯನ್ನು ನೀಡುವ,ನಿಜವಾದ ಅರ್ಥವನ್ನು ಮರೆಸಿ ಅಲಂಕಾರಿಕವಾಗಿ ವ್ಯಕ್ತವಾಗಿರುವ,ರೂಪಕ ಅಥವ ಗೂಡಾರ್ಥದ್ಯೋತಕವಾಗಿ ಕಾಣಿಸಿಕೊಳ್ಳುವ ಜನಾಂಗವೊಂದರ ಸೂಕ್ತಿ.ಇನ್ನೊಬ್ಬ ವಿದ್ವಾಂಸ ಜೆ.ಎ.ಕೆಲ್ಸೊ ಗಾದೆಗಳಲ್ಲಿ ನಾಲ್ಕು ಗುಣಗಳನ್ನು ಹೆಸರಿಸುತ್ತಾನೆ:ಸಂಕ್ಷಿಪ್ತತೆ,ವಿವೀಕ ಪೂರ್ಣತೆ,ತೀಕ್ಷ್ಣತೆ ಮತ್ತು ಜನಪ್ರಿಯತೆ.ಇವುಗಳ ಒಂದೊಂದರ ವಿವರಣೆ ಅಗತ್ಯವೆನಿಸುತ್ತದೆ. ಗಾದೆ ಆವಶ್ಯ ಪದಗಳ ಮಿತವ್ಯಯವೇ ಸರಿ.ಅಲ್ಲದೆ ಗಾದೆಯಲ್ಲಿ ೨೦ ಪದಗಳಿಗಿಂತ ಹೆಚ್ಚು ಇರಬಾರದೆಂದು ವಿದ್ವಾಂಸರು ಹೇಳುತ್ತಾರೆ.ಯಾವ ಭಾಷೆ ಅವ್ಯಯ ಮತ್ತು ಪ್ರತ್ಯಯಗಳಲ್ಲಿ ಸಂಪದ್ಯುಕ್ತವಾಗಿರುತ್ತದೊ ಅದು ಗಾದೆ ನಿರ್ಮಾಣಗೊಳ್ಳುವಾಗಲೆ ಹೆಚ್ಚು ವಿಷಯಗಳನ್ನು ತನ್ನಲ್ಲಿ ಅಡಕಮಾಡಿಕೊಳ್ಳುತ್ತಿದೆ ಎಂದೂ ಒಂದು ಅಭಿಪ್ರಾಯವಿದೆ.ಗಾದೆ ಸಂಕ್ಷಿಪ್ತವಾಗಿರಬೇಕೆಂಬುದನ್ನು ಈ ಎಲ್ಲ ಮಾತುಗಳು ಸಮರ್ಥಿಸುತ್ತವೆ.ಆದರೆ ಕೆಲವು ಗಾದೆಗಳು ಸಹಜವಾಗಿ ನೀಡಿದಾಗಿರುವುದರಿಂದ ಸಂಕ್ಷಿಪ್ತತೆಗೆ ಇವನ್ನು ಅಪವಾದಗಳಾಗಿ ಪರಿಗಣಿಸಬೇಕಾಗುತ್ತದೆ.ಈ ದೀರ್ಘ ಗಾದೆಗಳು ಶಕ್ತಿ ನಿರೂಪಣೆ,ಸೂಚ್ಯ ಭಾವುಕತೆ,ಪ್ರಾದೇಶಿಕತೆಗಳಿಗೆ ಹೆಸರಾಗಿದ್ದರೂ ಅನುಭವ ಸಾಂದ್ರತೆಯಲ್ಲಿ ಚಿಕ್ಕ ಗಾದೆಗಳ ಹಾಗೆ ವರ್ಚಸ್ವಿಯಾಗಲಾರವೆಂದು ತೋರುತ್ತದೆ. ಗಾದೆಯ ಮತ್ತೊಂದು ಅಂಶ ವಿವೇಕಪೂರ್ಣತೆ.ಗಾದೆ ಜನಪ್ರಿಯವಾಗಬೇಕಾದರೆ ಬಹಳ ಕಾಲ ಬಾಳಿಕೆ ಬರಬೇಕಾದರೆ ಕಡೆಯ ಪಕ್ಷ ಅದು ವಿವೇಕಯುತವಾಗಿ ಇರಬೇಕಾಗುತ್ತದೆ.ಆದರು ಒಂದು ವಿಷಯ ಉಳಿಯುತ್ತದೆ.ವಿವೇಕಯುತವಾದ ಇಂಥ ಕೆಲವು ಸೂಕ್ತಿಗಳು ಮಾತ್ರ ಗಾದೆಗಳಾಗಿ ಉಳಿದವು ಆಗಲಾರವು.ಮುಂದೆ ಅವು ಕಳೆದುಹೋಗಬಹುದು ಅಥವಾ ಸಾಂದರ್ಭಿಕ ಉದ್ಧರಣೆಗಳಾಗಿ ಉಳಿಯಬಹುದು.ಇದಕ್ಕೆ ಕಾರಣ ಭಾಗಶಃ ಸಾಂದ್ರತೆ;ಇದರಿಂದಾಗಿಯೇ ಗಾದೆ ಸಾರ್ವಜನಿಕರ ಸ್ವೀಕಾರಾರ್ಹತೆಯನ್ನು ಪಡೆದುಕೊಂಡಿರುವುದು. ಗಾದೆ ತೀವ್ರಾನುಭವದ ಪರಿಣಾಮಕಾರಿ ಅಭಿವ್ಯಕ್ತಿಯಾಗಿರುವುದೇ ಅದರ ತೀಕ್ಷ್ಣತೆ.ಸೂಕ್ಷ್ಮಸಂವೇದನಾಶೀಲತೆಯೇ ಇದಕ್ಕೆ ಕಾರಣ.ಒಮ್ಮೆಗೇ ನಮ್ಮ ಹೃದಯವನ್ನು ಆಕ್ರಮಿಸುವ ಸಾಮರ್ಥ್ಯ ಅದರದು.ಯಾವುದೇ ವಿಷಯವನ್ನು ಮನಮುಟ್ಟುವಂತೆ ಹೇಳುವ ಸ್ವಭಾವ ಅದರದು.ಗಾದೆಯ ಮತ್ತೊಂದು ಮಹತ್ವದ ಲಕ್ಷಣ ಜನಪ್ರಿಯತೆ.ನಿಜವಾದ ಅರ್ಥದಲ್ಲಿ ಅದು ಜನತೆಯದಾಗಿರಬೇಕೆಂಬುದು ಇದರ ತಾತ್ಪರ್ಯ ಒಟ್ಟಿನಲ್ಲಿ ಗಾದೆಗಳು ಚಿಕ್ಕವು,ಪ್ರಸಕ್ತ ವಿಷಯಕ್ಕೆ ಮಾತ್ರ ಸಂಬಂಧಿಸಿದವು,ರಚನೆಯಲ್ಲಿ ಒಪ್ಪವಾದವು,ಜನರ ಮನಸ್ಸಿನಲ್ಲಿ ಶಾಶ್ವತವಾಗಿ ನೆಲೆಯೂರುವಂಥವು. ಗಾದೆಗಳಿಗೆ ಕೆಲವು ನಿರ್ದಿಷ್ಟ ಶೈಲಿಯ ತಂತ್ರಗಳಿವೆ;ಛಂದೋಬದ್ದತೆ,ಪ್ರಾಸಾನು,ಪ್ರಾಸ,ಯಮಕ,ಪುನರಾವೃತ್ತಿ,ನಾಟಕೀಯತೆ,ಅಲಂಕಾರ ಮುಂತಾದವು ಅವುಗಳಲ್ಲಿ ಕೆಲವು.ಇವುಗಳ ಯೋಜಿತ ಅಭಿವ್ಯಕ್ತಿಯೇ ಗಾದೆ.ಸುಲಭವಾಗಿ ನೆನಪಿರಿಸಿಕೊಳ್ಳುವುದಕ್ಕೆ ಇವು ನೇರವಾಗುತ್ತವೆ.ಇದಕ್ಕೆ ಯಾವುದೇ ಗಾದೆ ನಿದರ್ಶನವಾಗಬಲ್ಲುದು.ಇಂಥ ಗಾದೆಗಳಲ್ಲಿ ಅತ್ಯುಕ್ತಿ ಮತ್ತು ವಿರೋಧಾಭಾಗಳೆರಡು ದೊಡ್ಡ ಲಕ್ಷಣಗಳು.ಇಲ್ಲಿ ಅತ್ಯುಕ್ತಿಯೆಂದರೆ ಅತಿಶಯವಾದ ಮಾತೆಂದು ಅರ್ಥ ಮಾಡಿಕೊಳ್ಳಬೇಕು.ದ್ವನಿ ಮಾರ್ಗವನ್ನು ಇದು ಸೂಚಿಸುತ್ತದೆ. ಗಾದೆಯ ಒಂದು ವಿಶೇಶ ಲಕ್ಷಣ ಸಮತೋಲನ.ಇದು ಗಾದೆಯ ಸಹಜ ಗುಣವೆಂದು ತೋರುತ್ತದೆ.ಉದಾಹರಣೆಗೆ:ನಾಳೆ ನೋಡು ನಮ್ಮ ರಂಗನ ಮೋಟ,ತೆಗೆದು ನೋಡು ನಮ್ಮ ಅಮ್ಮಿಯ ಮುಸುಕ,ಆದಷ್ಟೇ ಆರಂಭ,ಹೂದಷ್ಟೇ ಮಳೆಗಾಲ- ಇತ್ಯಾದಿ.ಇಲ್ಲಿ ಎರಡು ಸಮಭಾಗಗಳು ಕಾಣಿಸಿಕೊಳ್ಳುತ್ತವೆ.ಪೂರ್ವೋತ್ತರ ಭಾಗಗಳೆರಡೂ ಛಂದಸ್ಸಿನಲ್ಲಿ ಕಡೆಗೆ ಅಕ್ಷರಗಳ ಸಂಖ್ಯೆಯಲ್ಲಿ ಸಮನಾಗಿ ಬಂದಿದೆ.ಸಮತೋಲನ ಚಿಕ್ಕ ಗಾದೆಗಳಲ್ಲಿ ಕಾಣಬರುವಂತೆ,ತೀರ ದೀರ್ಘ ಗಾದೆಗಳಲ್ಲಿ ಕಾಣಬರದು.ಇಷ್ಟಕ್ಕೂ ಚಿಕ್ಕ ಗಾದೆಗಳೇ ಅತ್ಯುತ್ತಮ ಗಾದೆಗಳೆಂದು ಹೆಸರಾಗಿವೆ.

ಗಾದೆಗಳಲ್ಲಿ ಹಾಸ್ಯ ಮತ್ತು ವಿದಮ್ಬನೆಗಳೂ ಬರುತ್ತವೆ. ಇವೆರಡೂ ಕೆಲವೊಮ್ಮೆ ಒಂದಾಗಿಯೂ ಕೆಲವೊಮ್ಮೆ ಬೇರೆ ಬೇರೆಯಾಗಿಯೂ ಬರುತ್ತದೆ.ಉದಾಹರಣೆಗೆ:ಮೋಜು ಬಮ್ದಾದೆ ಮೋಗ ಕ್ವಾರೆ ಅಂದ,ನನ್ಗೂ ಮೋಜು ಬಂದಾದೆ ಕದಿನ ಮೂಲ್ಗೆ ಬಿಸಾಕಿ ಅಂದ್ಲು. ಯಾವುದೇ ಮರ್ಮವಿಲ್ಲದೆ ನಗಿಸಬಲ್ಲ ಗಾದೆ ಇದು.ಇಂಥ ಹಾಸ್ಯ ಚಿತ್ರಗಳಲ್ಲಿ ಸಂಭಾಷಣೆಯೊಂದು ವಿಶೇಷ.ಮತ್ತೊಂದು ಗಾದೆ:ದುಡುವಂತೆ ಧೂಪ ಹಾಕಿದ್ರೆ,ಗಾಡಿಯಲ್ಲೆಲ್ಲ ದಡಾರ್ ಅಂದೊ-ಇಲ್ಲಿಯ ವಿಡಂಬನೆ ಅತ್ಯಂತ ಮೋನಚಾದುದು.ಕೆಲವೊಮ್ಮೆ ತಿಳಿ ಹಾಸ್ಯದಲ್ಲಿಯೇ ವಿಡಂಬನೆ ಮೈತಾಳಬಲ್ಲುದು.ಸಾಯ್ತೀನಿ ಸಾಯ್ತೀನಿ ಅಂಥ,ಸಾವಿರ ಕೋಳಿ ತಿಂದನಂತೆ.ಸಮಾಜವನ್ನು ಪ್ರತಿಬಿಂಬಿಸುವುದರಲ್ಲಿ ಗಾದೆಗಳ ಪ್ರಾಮುಖ್ಯ ಇದೆ.ಜನಪದ ತನ್ನ