ಪುಟ:Mysore-University-Encyclopaedia-Vol-6-Part-6.pdf/೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಗಿಬನ್,ಎಡ್ವಡ್ ರುವಷ್ಟು ಬುದ್ಧಿ ಇದಕ್ಕೆ ಇದೆ ಎನ್ನಬಹುದು.ಆದರೂ ಕೆಲವು ಬಣ್ಣ್ಗಗಳನ್ನೂ ಗಾತ್ರವ್ಯತ್ಯಾಸಗಳನ್ನೂ ಗುರುತಿಸಬಲ್ಲದು. ಗಿಬನ್ ಸ್ವಭಾವತಾಃ ಸಾಧುಪ್ರಾಣಿ.ಇದನ್ನು ಪಳಗಿಸಿ ಮುದ್ದಿನ ಪ್ರಾಣಿಯಾಗಿ ಸಾಕಬಹುದು. ಗಿಬನ್ ಸ್ವ ಇಚ್ಛೆಯಿಂದ ನೀರಿಗಿಳಿಯಲು ಹೆದರುತ್ತ್ ದಾದರೂ ತನ್ನ್ ದೇಹವನ್ನು ಸಾಕಷ್ಟು ಶುದ್ಧವಾಗಿ ಇಟ್ಟುಕೂಳ್ಳುತ್ತ್ ದೆ.ಎರಡು ಪ್ರ್ರಾಣಿಗಳು ಸೇರಿದುವೆಂದರೆ ಒಂದರ ದೇಹವನ್ನು ಶುಚಿಮಾಡುತ್ತ್ವ ವೆ.

 ಹಣ್ಣುಹಂಪಲು,ಎಲೆಗಳು,ಎಳೆಯಕುಡಿಗಳು ಗಿಬನ್ನಿನ ಪ್ರಮುಖ ಆಹಾರ.ಕೀಟಗಳನ್ನೂ ತಿನ್ನುವುದುಂಟು. ಜೆಡವನ್ನು ಬಲು ಮೆಚ್ಚಿನಿಂದ ತಿನ್ನುತ್ತ್ ದೆ. ಆಗಾಗೆ ಹಕ್ಕಿಗಳ ಮೊಟ್ಟೆಗಳನ್ನೂ ಮರಿಹಕ್ಕಿಗಳನ್ನೂ ತಿನ್ನುವುದುಂಟು. ಗಿಬನ್ ಸಂಘಜೀವಿ; ಸಣ್ಣ್ಫಗುಂಪುಗಳಲ್ಲಿ ವಾಸಿಸುತ್ತ್ ದೆ. ಸಾಮಾನ್ಯವಾಗಿ ಒಂದು ಗುಂಪಿನಲ್ಲಿ ಒಂದು ಗಂಡು, ಒಂದು ಹೆಣ್ಣು ಮತ್ತು ಹಲವಾರು ಮರಿಗಿಬನ್ಗ ಗಳಿರುತ್ತ್ವೆ. ಒಂದೂಂದು ಕುಟುಂಬಕ್ಕು ಅದರದೇ ಆದ ಆಧೀನಗಡಿ ಪ್ರಾಂತ್ಯವಿರುತ್ತದೆ.ಇಂಥ ಪ್ರಾನ್ತ್ಯದ ವಿಸ್ತಾರ ಸುಮಾರು 30-100  ಎಕರೆಯಷ್ಟಿರಬಹುದು. ಇದರಲ್ಲಿ ಗಿಬನ್ ಗಳಿಗೆ ಆಹಾರವೊದಗಿಸುವ ಮತ್ತು ಮಲಗಳ ಪ್ರಶಸ್ತವಾದ ಮರಗಳು ವಿಪುಲವಾಗಿರುತ್ತದೆ. ಗಿಬನ್ ಗಳು ನೆಲಮಟ್ಟದೆ ಮರದಿಂದ ಮರಕ್ಕೆ ಸುಸೂತ್ರವಾಗಿ ಹೋಗಲು ತಮ್ಮದೆ ಆದ ದಾರಿ ಮಾಡಿಕೊಂಡಿರುತ್ತವೆ. ಒಂದು ಗಿಬನ್ ಕುಟುಂಬದ ಪ್ರಾಂತ್ಯಕ್ಕೆ ಮತ್ತೊಂದು ಗುಂಪು ಬರುವುದು ವಿರಳ. ಹಾಗೇನಾದರು ಬಂದರೆ ಅವುಗಳ ನಡುವೆ ಯುದ್ಧವೇ ನಡೆಯುತ್ತದೆ. ಯುದ್ಧವೆಂದರೆ ಮುಷ್ಟಾಮುಷ್ಟಿಯಲ್ಲ, ಬರಿಯ ವಾಗ್ಯುದ್ಧ. ಅದರಲ್ಲಿ ಸೋತ ಗುಂಪು ಓಡಿ ಹೋಗುತ್ತದೆ. ತಮ್ಮ ಧ್ವನಿ ಶಕ್ತಿಗೆ ಹೆಸರಾಗಿರುವ ಗಿಬನ್ ಗಳು ಬಲು ಜೋರಾಗಿ, ಕಿವಿಗಡಚಿಕ್ಕುವಂತೆ ,ಕಾಡಿಗೆ ಕಾಡೇ ಅನುರಣಿತವಾಗುವಂತೆ ಕೂಗುತ್ತವೆ. ಬೆಳಗಿನ ಜಾವ ಮತ್ತು ಸಂಜೆ ಸೂರ್ಯ ಮುಳುಗುವ ಮುನ್ನ ಇವುಗಳ ಗದ್ದಲದಿಂದ ಇಡೀ ಕಾಡೇ ಮೊಳಗುತ್ತಿರುತ್ತದೆ. ಆಹರ್ವನ್ನು ಅರಸಿಕೊಂಡು ತಮ್ಮ ಎಲೆಯನ್ನು ಬಿಟ್ಟು ಹೊರಟಾಗಲು ಅಸಾಧ್ಯವಾಗಿ ಬೊಬ್ಬೆಯಿಡುತ್ತವೆ. ಹೀಗೆ ಹೊರಟಾಗ ಎರಡು ಗುಂಪುಗಳು ಪರಸ್ಪರ ಸಂಧಿಸಿದಾಗ ಮತ್ತೆ ಕೂಗಿನ ಕಾಳಗ ನಡೆಯುತ್ತದೆ. ಇಲ್ಲು ಹೆಚ್ಚು ಗದ್ದಲ ಮಾಡುವ ಗುಂಪಿಗೆ ಜಯ. ಸಿಂಫಲ್ಯಾಂಗಸ್ ಜಾತಿಯ ಗಿಬನ್ ಗಳಲ್ಲಿ ಧ್ವನಿವರ್ಧಕಚೀಲಗಳಿರುವುದರಿಂದ ಇವುಗಳ ಕೂಗು ಇನ್ನೂ ತೀವ್ರವಾಗಿರುತ್ತದೆ. ಆದರೆ ಹವೆ ಪ್ರತಿಕೂಲವಾಗಿದ್ದಗ ನಿಶ್ಯಬ್ದವಾಗಿಬಿಡುವುದು ಇವುಗಳ ಮರ್ಜಿ. ಗಿಬನ್ ಗಳು ಗೂಡುಗಳನ್ನೇನು ಕಟ್ಟುವುದಿಲ್ಲ. ವಿಶ್ರಮಿಸುವಾಗ ಮರಗಳ ಪೊಟರೆಗಳಲ್ಲಿ ಇಲ್ಲವೆ ರೆಂಬೆಗಳ ಸಂಧಿಗಳಲ್ಲಿ ಅಡಗುತ್ತವೆ.
  ಗಿಬನ್ ಗಳ ಗರ್ಭಾವಧಿಯ ಕಾಲ ಸುಮಾರು 7 ತಿಂಗಳುಗಳು. ಒಂದು ಸಲಕ್ಕೆ ಒಂದೇ ಮರಿ; ಸಾಧಾರಣವಾಗಿ 2 ವರ್ಷಕ್ಕೊಂದು. ಮರಿಯ ಪಾಲನೆ, ಪೊಷಣೆಗಳ ಹೊಣೆಯೆಲ್ಲಾ ತಾಯಿಯದ. ಚಿಕ್ಕಮರಿಗಳು ಯಾವಾಗಲು ಚಟುವಟಿಕೆಯಿಂದ ಆಟವಾಡುತ್ತಿರುತ್ತವೆ. ಅನೇಕ ವೇಳೆ ಬೆಳೆದ ಗಿಬನ್ ಗಳು ಮರಿಗಳೊಡನೆ ಸೇರುವುದುಂಟು. 7 ವರ್ಷ ವಯಸ್ಸಾದನಂತರ ಗಿಬನ್ ಲೈಂಗಿಕ ಪ್ರಬುದ್ಧಾವಸ್ಥೆಗೆ ಬರುತ್ತದೆ.
  ಗಿಬ್ಬನ್, ಎಡ್ವರ್ಡ್ :  1737-94. ಆಂಗ್ಲ ಇತಿಹಾಸಕಾರ. ದಿ ಡಿಕ್ಲೈನ್ ಆನ್ಡ್ ಫಾಲ್ ಆಫ್ ರೋಮನ್ ಎಂಪೈರ್ (ರೋಮ್ ಚಕ್ರಾಧಿಪತ್ಯದ ಅವನತಿ ಮತ್ತು ಪತನ) ಎಂಬ ಆರು ಸಂಪುಟಗಳ ಇತಿಹಾಸ ಗ್ರಂಥದ ಕರ್ತೃ. ಈತ ಜನಿಸಿದುದು 1737ರ ಮೇ  8ರಂದು ಸರ್ರೆ ಕೌಂಟಿಯ ಪುಟ್ನಿಯಲ್ಲಿ. ಇವನ ತಂದೆ ಎಡ್ವರ್ಡ್, ತಾಯಿ ಜೂಡಿತ್ ಪೋರ್ಟೀನ್. ಈತ 10 ವರ್ಷದವನಾಗಿದದ್ದಾಗ ತಾಯಿ ನಿಧನ ಹೊಂದಿದಳು (1747). ಇವನನ್ನು ಚಿಕ್ಕಮ್ಮ ಕ್ಯಾಥರೀನ್ ಪೊರ್ಟೀನ್ ಸಾಕಿ ವಿದ್ಯಾಭ್ಯಾಸಕ್ಕೆ ತೊಡಗಿಸಿದಳು. ಮುಂದೆ ತಾನು ಬುದ್ಧಿಜೀವಿಯಾಗಲು ಈಕೆಯ ಪ್ರೊತ್ಸಾಹವೇ ಕಾರಣವೆಂದು ತನ್ನ ಆತ್ಮಕತೆಯಲ್ಲಿ ಹೇಳಿಕೊಂಡಿದ್ದಾನೆ. ಈತ ತನ್ನ 14ನೆಯ ವಯಸ್ಸಿಗೆ ಕೆಲವು ವಿಷಯಗಳಲ್ಲಿ ಅಸಾಧಾರಣ ಪಾಂಡಿತ್ಯ ಸಂಪಾದಿಸಿಕೊಂಡಿದ್ದರು ಇತರ ವಿಷಯಗಳಲ್ಲಿ ಸಣ್ಣ ಶಾಲಾ ಬಾಲಕನೂ ನಾಚುವಂಥ ಅಜ್ಞಾನಿಯಾಗಿದ್ದನೆಂದು ಇವನೇ ಹೇಳಿಕೊಂಡಿದ್ದಾನೆ. ಈತ 15ನೆಯ ವಯಸ್ಸಿನಲ್ಲಿ ಆಕ್ಸ್ಫೋರ್ಡಿನ ಮ್ಯಗ್ಡಲೀನ್ ಕಾಲೇಜು ಸೇರಿದ. ಆದರೆ ಅಲ್ಲಿ ಈತ ಇದ್ದದ್ದು ಕೇವಲ 14  ತಿಂಗಳು. ಆ ಸಮಯದಲ್ಲಿ ಈತ ಕ್ರೈಸ್ತ ಧರ್ಮವನ್ನು ಕುರಿತು ಹೆಚ್ಚಿನ ಅಭ್ಯಾಸದಲ್ಲಿ ತೊಡಗಿದ; ಅದರ ಪರಿಣಾಮವೆಂಬಂತೆ 1753ರ ರೋಮನ್ ಕೆಥೋಲಿಕ್ ಚರ್ಚಿನ ಸದಸ್ಯನಾಗಿ ಜೂನ್  8ರಂದು ಲಂಡಂನ್ ನಗರದ ಒಂದು ಚರ್ಚಿನಲ್ಲಿ ಪುರೋಹಿತನಾದ. ಆದರೆ ಇದು ಇವನ ತಂದೆಗೆ ಸರಿಬರಲಿಲ್ಲ. ಕುಪಿತನಾದ ತಂದೆ ಇವನನ್ನು ಲಾಸ್ಯಾನ್ ನಗರದಲ್ಲಿ ಕಾಲ್ವಿನ್ ಪಂಗಡಕ್ಕೆ ಸೇರಿದ ಪೆವಿಲಿಯಾನ್ ಬಳಿ ಬಿಟ್ಟ. ಇಲ್ಲಿ ಇವನು ಸುಮಾರು ಐದು ವರ್ಷಗಳನ್ನು ಕಳೆದ. ಆಗ ಇವನಿಗೆ ಲ್ಯಾಟಿನ್ ಮತ್ತು ಫ್ರೆಂಚ್ ಸಾಹಿತ್ಯಗಳಲ್ಲೂ ಗಣಿತ ತರ್ಕಶಾಸ್ತ್ರಗಳಲ್ಲೂ ಕ್ರಮಬದ್ಧವಾದ ಶಿಕ್ಷಣ ದೊರಕಿತು. ಪೆವಿಲಿಯಾನ್ ಪ್ರಭಾವದಿಂದ 1754ರಲ್ಲಿ ಇವನು ಕೆಥೋಲಿಕ್ ಪಂಗಡವನ್ನು ತ್ಯಜಿಸಿ ಪ್ರಾಟೆಸ್ಟೆಂಟ್ ಆಗಿ ಮತಾಂತರಗೊಂಡ. ಕ್ರಮೇಣ ಇವನು ಸಾಮಾಜಿಕ ಚಟುವಟಿಕೆಗಳಲ್ಲೆಲ್ಲ ಭಾಗವಹಿಸಿಲಾರಂಭಿಸಿದ. ಇವನ ಹಿರಿಯ ಸಮಾಕಾಲೀನನಾಗಿದ್ದ ವಾಲ್ಟೇರ್ ಏರ್ಪಡಿಸುತ್ತಿದ್ದ ಸತ್ಕಾರ ಸಮಾರಂಭಗಳಲ್ಲಿಯೂ ಲಾಸ್ಯಾನ್ ನಗರದ ಪ್ರತಿಷ್ಟಿತ ಸಮಾಜದಲ್ಲಿಯೂ ಈತ ಕಾಣಿಸಿಕೊಳ್ಳತೊಡಗಿದ.

ಪ್ರಾಪ್ತವಯಸ್ಕನಾದಾಗ ಇವನ ತಂದೆ ಈತನಿಗೆ ವಾರ್ಷಿಕವಾಗಿ 300 ಪೌಂಡುಗಳ ಆದಾಯ ಬರುವಂತೆ ವ್ಯವಸ್ಥೆ ಮಾಡಿದ (1758). ಇದು ಇವನಿಗೆ ಹೆಚ್ಚು ಸ್ವಾತಂತ್ರ್ಯ ದೊರಕಿಸಿಕೊಟ್ಟಿತು. ಸೂಸೇನ್ ಚರ್ಚೋಡಳೊಂದಿಗೆ ಇವನ್ ಸ್ನೇಹ ಬೆಳೆಯಿತು. ಅವಳನ್ನು ಮದುವೆಯಾಗಬೇಕೆಂಬುದು ಇವನ ಅಪೇಕ್ಷೆಯಾಗಿತ್ತು. ಆದರೆ ಈತನ ತಂದೆ ಇವರ ಮದುವೆಗೆ ಅನುಮತಿ ನೀಡಲಿಲ್ಲವಾದ ಕಾರಣ ಇವರ ಸಂಬಂಧ ಮುರಿಯಿತು. ಈ ಕಹಿ ಪ್ರಸಂಗದ ಫಲವಾಗಿ ಇವನು ಮುಂದೆ ಅವಿವಾಹಿತನಾಗಿಯೇ ಉಳಿಯುವಂತಾಯಿತು. ಇದನ್ನು ಮರೆಯಲೋಸುಗ ಮುಂದಿನ ಐದು ವರ್ಷಗಳ ಕಾಲ ಪುನಃ ಅಧ್ಯಯನದಲ್ಲಿ ನಿರತನಾದ. ಇವನ ಮೊದಲ ಪ್ರಬಂಧ 1761ರಲ್ಲಿ ಫ್ರೆಂಚ್ ಭಾಷೆಯಲ್ಲಿ ಪ್ರಕಟವಾಯಿತು. ಆನಂತರ ಇದನ್ನೇ ಇಂಗ್ಲಿಷ್ ಭಾಷೆಯಲ್ಲಿ ಪ್ರಕಟವಾಯಿತು. ಅನಂತರ ಇದನ್ನೆ ಇಂಗ್ಲಿಷ್ ಭಾಷೆಯಲ್ಲೂ ಪ್ರಕಟಿಸಿದ. ಅಷ್ತರಲ್ಲಿ ಏಳು ವರ್ಷಗಳ ಯುದ್ಧ ಆರಂಭವಾಯಿತು (1757-64).