ಪುಟ:Mysore-University-Encyclopaedia-Vol-6-Part-6.pdf/೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಗಿಯರ್

ಗಿಯರಿನ ಉಪಯೋಗ, ಗಿಯರ್ ಎಂದರೆ ಸ್ಥೂಲವಾಗಿ ಒಂದು ದಂತಚಕ್ರ ಪಟ್ಟಿ ಚಾಲನೆ,ರಜ್ಜು ಚಾಲನೆ ಮತ್ತು ಫರ್ಷಣ ಚಕ್ರ-ಇವುಗಳಿಗೆ ಹೋಲಿಸಿದಂತೆ ಗಿಯರ್ ಚಾಲನೆಯಲ್ಲಿ ಜಾರುವಿಕೆ ಅಥವಾ ಸರ್ಪಣಕ್ರಿಯೆಯಿಲ್ಲದೆ ಶಕ್ತಿ ಸಾಗಣಿ ಧನಾತ್ಮಕವೂ ವೇಗಾನುಪಾತ ಖಚಿತವೂ ಆಗಿರುರುತ್ತದೆ. ತಾಳುಗಳು ಕೊಂಚ ದೂರವಾಗಿರುವಾಗ ಇಂಥದೇ ಧನಾತ್ಮಕ ಚಾಲನೆ ಬೇಕಾದರೆ ಸರಪಣಿಯನ್ನು




ಉಪಯೋಗಿಸಬೇಕಾಗುತ್ತದೆ. ತಾಳುಗಳು ಪರಸ್ಪರ ಸಮಾಂತರವಾಗಿರುವುದು ಛೇದಿಸುವಂತಿರುವುದು,ಅಥವಾ ಸಮಾಂತರವೂ ಅಲ್ಲದೆ ಇರುವುದು ಇಂಥ ಸಂದರ್ಭಗಳಿಗೆ ಅನುಗುಣವಾಗಿ ಗಿಯರುಗಳು ರೂಪ ವ್ಯತ್ಯಾಸವಾಗುತ್ತದೆ, ಅನುಕ್ರಮವಾಗಿ ಇವನ್ನು ಸ್ಪರ್ ಗಿಯರ್,ಬೆವೆಲ್ ಗಿಯರ್ ಮತ್ತು ವರ್ಮ್ ಗಿಯರುಗಳಿಂದ ಉದಾಹರಿಸಬಹುದು.ಕೂಡಿಕೆಗೊಂಡ ಎರಡು ಗಿಯರುಗಳಿಂದ ವರ್ಗಾವಣೆಗೊಳ್ಳುವ ಚಲನೆ ಶುದ್ದಗತೀಯವಾಗಿ ಗಿಯರ್ ಸೂತ್ರಾಂತರ ಮೈಗಳಿಗೆ ಸರ್ವಸಮವಾಗಿರುವ ಉರುಳುವ ಮೈಗಳ ಚಲನೆಗೆ ಸಮಾನವಾಗಿದ್ದರೂ ಒಂದು ಗಿಯರ್ ಹಲ್ಲಿನ ಮೇಲೆ ಇನ್ನೊಂದು ಗಿಯರ್ ದಂತ ಕ್ರಿಯ ಸಾಮಾನ್ಯವಾಗಿ ಉರುಳು ಹಾಗೂ ಜಾರು ಚಲನೆಗಳ ಒಂದು ಸಂಯೋಜನೆ.




    ಎರಡು ಸಾದಾ ಚಕ್ರಗಳಲ್ಲಿ ಒಂದರ ಅಂಚು ಮತ್ತೊಂದಕ್ಕೆ ಒತ್ತಿ ಹಿಡಿದಂತೆ ಇರುವಾಗ ಒಂದನ್ನು ತಿರುಗಿಸಿದಾಗ ಮತ್ತೊಂದು ತಿರುಗುವುದಷ್ಟೆ,ಶಕ್ತಿಯ ಅಥವಾ ಚಾಲನೆಯ ಸಾಗಣೆಗೆ ಇಲ್ಲಿ ಎರಡು ಮೈಗಳ ನಡುವಣ ಘರ್ಷಣೆ ಮಾತ್ರ ಕಾರಣ. ಚಕ್ರಗಳ ಅಂಚಿನ ಮೇಲ್ಮೈಯಲ್ಲಿ ದಂತಗಳನ್ನು ಎಂದರೆ ಹಲ್ಲುಗಳನ್ನು ಕೊರೆದರೆ ಅವು ಗಿಯರ್ ಚಕ್ರಗಳಾಗುತ್ತವೆ. ದಂತಗಳು ಕೊಂಚ ಭಾಗ ಈ ಸಾದಾ ಚಕ್ರದ ಅಂಚಿನ ಮೇಲಗಡೆಗೂ ಉಳಿದ ಭಾಗ ಕೆಳಗಡೆಗೂ ಇರುತ್ತವೆ.ದಂತರ ನಡುವಣ ಹಿಡಿತದಿಂದಾಗಿ ಶಕ್ತಿಯ ಸಾಗಣೆ ಹೆಚ್ಚು ಭದ್ರವಾಗುತ್ತದೆ,ಗಿಯರ್ ಚಕ್ರಕ್ಕೆ ಸಂಬಂಧಿಸಿದಂತೆ ಈ ಕಲ್ಪಿತ ಸಾದಾ ಚಕ್ರವನ್ನು ಪ್ರತಿನಿಧಿಸುವ ವೃತ್ತಕ್ಕೆ ಸೂತ್ರಾಂತರ ವೃತ್ತ ಎಂದು ಹೆಸರು. ಗಿಯರ್ ಚಕ್ರದ ಈ ಕಲ್ಪಿತ ಸೂತ್ರಾಂತರ ವೃತ್ತ ಅಡೆಂಡಂ ವ್ರ್ತ್ತ ಎಂಬ ಹೆಸರಿನ ದಂತಗಳ ಹೊರ ವೃತ್ತಕ್ಕೂ ಇರುವ ಅರೀಯ ಅಂತರಕ್ಕೆ ಅಡೆಂಡಂ ಎಂದು ಹೆಸರು. ಸ್ಪರ್ ಗಿಯರುಗಳಲ್ಲಿ ಅಡೆಂಡಂ ಒಂದೇ ಅಳತೆಯದಾಗಿದ್ದರೆ, ಬೆವೆಲ್ ಗಿಯರುಗಳಲ್ಲಿ ಚಕ್ರದ ಒಳ ಮೂಖದಿಂದ ಹೊರಮುಖದ ವರೆಗೆ ಅಡೆಂಡೆಂ ಅಳತೆ ಹೆಚ್ಚುತ್ತ ಹೋಗುತ್ತದೆ. ಒಳಮುಖದ ಅಡೆಂಡಂ ವೃತ್ತದ ಮತ್ತು ಹೊರಮುಖದ ಅಡೆಂಡಂ ವೃತ್ತದ ವ್ಯಾಸಗಳ ವ್ಯತ್ಯಾಸದ ಅರ್ಧದಷ್ಟಕ್ಕೆ ಅಡೆಂಡಂ ಏರಿಕೆ ಎಂದು ಹೆಸರು. ಸೂತ್ರಾಂತರ ಮೈಯ ಶಂಕುವಿಗೂ ಹೊರ ಅಥವಾ ಅಡೆಂಡಂ ಕೋನ ಎಂದು ಹೆಸರು.ಬೆವೆಲ್ ಗಿಯರ್ ಚಕ್ರದ ಅಗಲ ಜಾಸ್ತಿಯಾದಂತೆ ಅಡೆಂಡಮಿನ ಅಳತೆ ಹೆಚ್ಚುತ್ತ ಹೋದರೂ ಅಡೆಂಡಂ ಕೋನ  ಒಂದೇ ಗಾತ್ರದಾಗಿರುತ್ತದೆ. ಅಡೆಂಡಂ ಸಾಮನ್ಯವಾಗಿ ಹಲ್ಲಿನ ಒಟ್ಟು ಎತ್ತರದ ಅರ್ಧದಷ್ಟೇ ಇರುವುದಾದರೂ ದಂತಕ್ರಿಯೆಯನ್ನು ನಿರ್ದಿಷ್ಟ ರೀತಿಯಲ್ಲಿ ಮಾರ್ಪಡಿಸಲೋಸುಗ ಅದನ್ನು ಕಡಿಮೆ ಅಥವಾ ಹೆಚ್ಚು ಎತ್ತರದ್ದನ್ನಾಗಿ ಮಾಡಿರುವುದೂ ಉಂಟು.ಇಂಥವಕ್ಕೆ ಕಬ್ಬ ಅಡೆಂಡಂ ಮತ್ತು ನೀಳ ಅಡೆಂಡಂ ಎಂದು ಹೆಸರುಂಟು 




ಗಿಯರಿನ ಭಾಗಗಳ ನಾಮಂತಿಕೆಗಳನ್ನು ಚಿತ್ರಗಳು (೧) ಮತ್ತು (೨) ತಿಳಿಯಬಹುದು. ಕೂಡಿಕೆಗೊಂಡಿರುವ ಎರಡು ಗಿಯರ್ ಗಳಲ್ಲಿ ಚಿಕ್ಕವನ್ನು ಪಿನಿಯನ್ ಎನ್ನುತ್ತಾರೆ. ಸೂತ್ರಾಂತರ ಮೈಯ ವೃತ್ತ ಸೂತ್ರಾಂತರ ವೃತ್ತವಾದರೆ ಇಲ್ಲಿಂದ ದಂತರ ತುದಿಯವರೆಗಿನ ಅರೀಯ ದೂರ ಅಡೆಂಡಂ. ಇಲ್ಲಿಂದಲೇ ಕೂಡಿಕೆಗೊಂಡ ಗಿಯರಿನ ದಂತಾಂತರ ತಳದವರೆಗಿನ ಅರೀಯ ಅಳ ಅಡೆಂಡಂ. ದಂತರ ತುದಿಗೂ ದಂತಾಂತರದ ತಳಕ್ಕೂ ನಡುವಿನ ಅರೀಯ ದೂರ ದಂತಾಂತರಾಳ ಎರಡೂ ಸೂತ್ರಾಂತರ



ವೃತ್ತಗಳ ಸಂಸ್ಪರ್ಶ ಬಿಂದುವಿಗೆ ಸೂತ್ರಾಂತರ ಬಿಂದುವೆಂದೂ ಎರಡೂ ಸೂತ್ರಾಂತರ ಮೈಗಳ ಸಂಸ್ಪರ್ಶರೇಖೆಗೆ ಸೂತ್ರಾಂತರ ರೇಖೆಯೆಂದೂ ಹೆಸರು.ಈ ರೇಖೆಯಿಂದ ಮೈಯ ಮೇಲುಭಾಗಕ್ಕೆ ದಂತಫಲಕವೆಂದೂ ದಂತರ ತಳದವರೆಗಿನ ಮೈಗೆ ದಂತಪಾರ್ಶ್ವವೆಂದೂ ಹೆಸರು. ಫಲಕ ಪಾರ್ಶ್ವಗಳೆರಡೂ ಸೇರಿ ದಂತಮೈ ಆಗುತ್ತದೆ ಸೂತ್ರಾಂತರ ವೃತ್ತದ ಪರಧಿಯಲ್ಲಿರುವುತನ್ನೇ ದಂತದ ದಪ್ಪ ಎನ್ನುವುದು. ಅಡೆಂಡಂಡಿಡೆಂಡಂ ಸೇರಿ ಒಟ್ಟು ಆಳವಾದರೆ ಇದರಲ್ಲಿ ದಂತಾಂತರಾಳವನ್ನು ಕಳೆದದ್ದು ಕಾರ್ಯಾಕಾರೀ ಆಳವಾಗುತ್ತದೆ. ದಂತರ ಮೇಲುಭಾಗದ ಮೈಗೆ ಪ್ರದೇಶವೆಂದೂ ದಂತಾಂತರದ ತಳ ಭಾಗದ ಮೈಗೆ ತಳಪ್ರದೇಶವೆಂದೂ ಹೆಸರು. ಸುತ್ರಾಂತರ ವೃತ್ತದ ಪರಧಿಯ ಮೇಲೆ ಅಳೆದಂತೆ ಯಾವುದೇ ದಂತರ ಒಂದು ಬಿಂದುವಿಗೂ ಅದರ ಮುಂದಿನ ದಂತದ ಅಂಥದೇ ಬಿಂದುವಿಗೂ ಇರುವ ದೂರ ವರ್ತುಳೀಯ