ಪುಟ:Mysore-University-Encyclopaedia-Vol-6-Part-6.pdf/೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಗಿರ್ ಅರಣ್ಯ-ಗಿರಕಿ ರೋಗ ಪಿನಿಯನ್:ಒಂದು ಗಿಯರಿನ ಸೂತ್ರಾಂತರ ವೃತ್ತದ ವ್ಯಾಸವನ್ನು ಹೆಚ್ಚಿಸುತ್ತ ಹೋಗಿ ಅದು ಅನಂತವಾಯಿತೆಂದು ಇಟ್ಟುಕೊಂಡರೆ ಆಗ ಅದರ ಪರಿಧಿ ಒಂದು ಸರಳ ರೇಖೆಯಾಗಿ ಸೂತ್ರಾಂತರ ಮ್ಯೆ ಒಂದು ಸಮತಲ ಪಟ್ಟಿಯಾಗುತ್ತದೆ.ಆಗ ಅದಕ್ಕೆ ಎಂದು ಹೆಸರು.ಇನ್ನೊಂದು ಗಿಯರ್ ಪಿನಿಯನ್ ಆಗುತ್ತದೆ. ಆಂತರಿಕ ಗಿಯರ್:ಹೊರ ಮುಖದಲ್ಲಿ ಕೂಡಿಕೊಳ್ಳುವ ಎರಡು ಸ್ಪರ್ ಗಿಯರುಗಳು ವಿರುಧ್ಧ ದಿಶೆಗಳಲ್ಲಿ ಓಡುತ್ತವೆ.ದೊಡ್ಡದಾದ ಗಿಯರ್ ಚಕ್ರದ ಹೊರಬದಿಯಲ್ಲಲ್ಲದೆ ಒಳಬದಿಯಲ್ಲಿ ದಂತಗಳು ರೂಪಿತವಾಗಿದ್ದು ಪಿನಿಯನ್ ಅದರ ಒಳಗಡೆಯಿಂದಲೇ ಕೂಡಿಕೊಳ್ಳುವ ವ್ಯವಸ್ಥೆಗೆ ಆಂತರಿಕ ಗಿಯರಣವೆಂದು ಹೆಸರು. ಇಲ್ಲಿ ಎರಡೂ ಒಂದೇ ದಿಶೆಯಲ್ಲಿ ತಿರುಗುವುದನ್ನು ಕಾಣಬಹುದು.ಎರಡೂ ತಾಳುಗಳ ಆಂತರ ಕಡಿಮೆ ಇದ್ದು ಘಟಕ ಆಡಕವಾಗಿಯೂ ದಂತಕ್ರಿಯೆ ದಕ್ಷವಾಗಿಯೂ ಇರುವುದರಿಂದ ವೇಗ ಕಡಿಮೆ ಮಾಡಲು ಉದ್ದೇಶಗಳಿಗೆ ಇದು ಬಹಳ ಸೂಕ್ತವಾದದ್ದಾಗಿರುತ್ತದೆ. ಕುಂಡಲಿನೀ ಗಿಯರ್:ಸಮಾಂತರ ಅಕ್ಷಗಳ ಮೇಲೆಯೇ ಓಡುವ ಗಿಯರುಗಳ ದಂತಗಳು ಅಕ್ಷಕ್ಕೆ ಸಮಾಂತರವಾಗಿರುವುದನ್ನು ಬಿಟ್ಟು ಅಕ್ಷಕ್ಕೆ ಓರೆಯಾಗಿ ತಿರುಚಿದಂತಿದ್ದರೆ ಕುಂಡಲಿನೀ ಗಿಯರ್ ಆಗುತ್ತದೆ.ಈ ತಿರುಚಿನಿಂದಾಗಿ ದಂತಗಳ ನಡುವಣ ಸಂರ್ಪಕ ಒಮ್ಮೆಗೇ ಆಗದೆ ಒಂದು ತುದಿಯಲ್ಲಿ ಪ್ರಾರಂಭಿಸಿ ದಂತಫಲಕದ ಅಡ್ಡವಾಗಿ ಮುಂದುವರಿಯುತ್ತ ಹೋಗುತ್ತದೆ.ಇದರಿಂದಾಗಿ ಅದರಲ್ಲೂ ಅಧಿಕ ವೇಗಗಳಲ್ಲಿ ಗಿಯರಣ ಕ್ರಿಯೆಯಲ್ಲಿನ ಆಘಾತ ಕಡಿಮೆಯಾಗಿ ಶಬ್ದವೂ ಅಷ್ಟಾಗಿ ಇರುವುದಿಲ್ಲ.ತಿರುಚು ಒಂದೇ ಕಡೆಗಿರದೆ ನಡುವಿನಿಂದ ಎರಡು ಕಡೆಗಿರುವಾಗ ಅದನ್ನು ದ್ವಿಕುಂಡಲಿನೀ ಗಿಯರ್ ಅಥವಾ ಹೆರ್ರಿಂಗ ಬೋನ್ ಗಿಯರ್ ಎನ್ನಲಾಗುತ್ತದೆ. ಇದರ ಕ್ರಿಯೆ ನಿಶ್ಯಬ್ದವಾಗಿರುವುದರ ಜೊತೆಗೆ ಅಕ್ಷೀಯ ನೂಕುಬಲವು ಸಮತುಲಿತಗೊಂಡು ಬಹಳ ಸಲೀಸಾಗಿ ಓಡುತ್ತದೆ.ಸಮಾಂತರವಲ್ಲದ ಹಾಗೂ ಪರಸ್ಪರ ಛೇದಿಸದೆಯೂ ಇರುವ ತಾಳುಗಳಿಗಾಗಿ ಸಹ ಕುಂಡಲಿನೀ ಗಿಯರುಗಳನ್ನು ಆಭಿಕಲ್ಪಿಸುವುದು ಸಾಧ್ಯ.ಇಲ್ಲಿನ ದಂತಕ್ರಿಯೆ ಸಮಾಂತರ ತಾಳುಗಳಲ್ಲಿನದಕ್ಕಿಂತ ಭಿನ್ನವಾಗಿರುತ್ತದೆ.ಹಾಗು ಇದು ಹೋಲಿಕೆಯಲ್ಲಿ ಲಘುವಾಗಿರುವ ಸೇವೆಗೆ ಮಾತ್ರ ಉಪಯೋಗಕ್ಕೆ ಬರುತ್ತದೆ. ಬೆವೆಲ್ ಗಿಯರ್:ತಾಳುಗಳು ಸಮಾಂತರವಾಗಿರದೆ ಪರಸ್ಪರ ಛೇದಿಸುವಂತಿರುವಾಗ ಇವುಗಳ ಉಪಯೋಗ ಶಕ್ತಿಸಾಗಣೆಯಲ್ಲಿ ದಿಕ್ಕಿನ ಬದಲಾವಣೆಗಾಗಿ ಮಾತ್ರ ಇವು ಬೇಕಾದರೆ ಎರಡು ಗಿಯರುಗಳೂ ಸಮ ಅಳತೆಯವಾಗಿರುತ್ತದೆ.ದಿಕ್ಕಿನ ಬದಲಾವಣೆಯೊಡನೆ ವೇಗದ ವ್ಯತ್ಯಾಸವನ್ನು ಪಡೆಯ ಬೇಕಾಗಿರುವಾಗ ಗಿಯರುಗಳು ಭಿನ್ನ ಅಳತೆಯವಾಗಿರುತ್ತವೆ.ತಾಳು ಆಕ್ಷಗಳು ಪರಸ್ಪರ ೯೦ ಯಲ್ಲಿ ಛೇದಿಸುವಂತಿರುವ ಹಾಗು ಸಮ ಅಳತೆಯ ಬೆವೆಲ್ ಗಿಯರುಗಳು ಜೋಡಿಯನ್ನು ಮೈಟರ ಗಿಯರುಗಳು ಎನ್ನುತ್ತಾರೆ.ಬೆವೆಲ್ ಗಿಯರುಗಳು ದಂತಗಳು ನೇರವಾಗಿರಬಹುದು,ಕುಂಡಲಿನೀಯವಾಗಿರಬಹುದು.ಒಳಬಾಗಿರಬಹುದು.ಅಲ್ಲದೆ ಹೈಪಾಯಿಡ್ ಗಿಯರುಗಳೆಂಬ ಹೆಸರಿನ ಒಂದು ವಿಶೇಷ ರೀತಿಯ ಬೆವೆಲ್ ಸಾಮಾನ್ಯ.ನೋಟಕ್ಕೆ ಕುಂಡಲಿನಿ ಗಿಯರಿನಂತೆಯೇ ಇರುವುದಾದರು ಅಸ್ಮಾಂತರ ಅಛೇದಕ,ಪರಸ್ಪರ ಲಂಬ ಕೋನದಲ್ಲಿ ಅಡ್ಡವಾಗಿರುವ ಹಾಗೂ ಅಂತರ ಹೆಚ್ಚಿಲ್ಲದೆ ತಾಳುಗಳನ್ನು ಕೂಡಿಸುವುದಾಗಿರುತ್ತದೆ.ವೇಗ ಅತಿಯಾಗಿ ಕಡಿಮೆಯಾಗಬೇಕಾದಾಗ( ಅನುಪಾತ ೬೦:೧ ಅಥವಾ ಇನ್ನೂ ಅಧಿಕ) ಇದನ್ನು ಉಪಯೋಗಿಸುತ್ತದೆ. ವರ್ಮ್ ಗಿಯರ್:ಅಸಮಾಂತರ ಅಭೇದಕ ಅಂದರೆ ಅಸಮತಲೀಯವಾದ ತಾಳುಗಳನ್ನು ಸೇರಿಸುವ ಸಾಮಾನ್ಯ ವಿಧಾನ ವರ್ಮ್ ಗಿಯರಣದಿಂದ.ತಾಳುಗಳು ಸುಮಾರು ದೂರದಲ್ಲಿದ್ದು ವಾಸ್ತವ ಬಳಕೆಯಲ್ಲಿ ಲಂಬ ಕೋನವೆಂಬಂತೆ ಅಡ್ಡಡ್ಡವಾಗಿರುತ್ತವೆ.ಸಾಮಾನ್ಯವಾಗಿ ಚಾಲಕವಾಗಿರುವ ಒಂದು ವರ್ಮ್ ಒಂದು ಸ್ಕ್ರೂ ಇದ್ದಂತೆ ಇರುತ್ತವೆ.ದೊಡ್ಡದಾಗಿರುವ ಚಕ್ರ ವರ್ಮ್ ಚಕ್ರವೆನಿಸಿಕೊಳ್ಳುತ್ತದೆವರ್ಮ್ ಸುತ್ತುತ್ತಿರುವಾಗ ಅದರ ಸೂತ್ರಗಳು(ತ್ರೆಡ್ಸ್) ಚಕ್ರದ ಪರಧಿಯ ಮೇಲಿರುವ ದಂತಗಳ ಮೇಲೆ ಒತ್ತಿದಂತಾಗಿ ಅದು ತಿರುಗುವಂತೆ ಮಾಡುತ್ತದೆ.ವರ್ಮ್ ಗಿಯರಣವನ್ನು ಸಹ ಅಧಿಕವಾದ ವೇಗಾನುಪಾತಗಳಿಗೆ ಉಪಯೋಗಿಸುತ್ತಾರೆ.