ಪುಟ:Mysore-University-Encyclopaedia-Vol-6-Part-6.pdf/೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಗಿಲೊಟೀನ್-ಗಿಲ್ಗ್ ಮೆಷ್

ಗಿಲೊಟೀನ್:ಫ್ರೆಂಚ್ ಕ್ರಾಂತಿಯ ಸಮಯದಲ್ಲಿ(೧೭೮೯)ಶಿರಚ್ಛೇದನ ದಂಡೆಯನ್ನು ಕಾರ್ಯಗತಗೊಳಿಸಲು ಬಳಸುತ್ತಿದ್ದ ಒಂದು ಯಂತ್ರ,ಮೊದಲಿಗೆ ಈ ಯಂತ್ರವನ್ನು ಲೋಹದ ತಗಡು,ಲೋಹದ ಸರಳು,ಕಾಗದದ ರಟ್ಟು ಮುಂತಾದುವನ್ನು ಕತ್ತರಿಸಲು ಬಳಸಲಾಗುತ್ತಿತ್ತು.ಇದಕ್ಕೆ ಕೊಯ್ಯು ಯಂತ್ರ(ಷಿಯರಿಂಗ್ ಮಷೀನ್)ಅಥವಾ ಕೊಯ್ಲುಒತ್ತಗೆ(ಷಿಯರಿಂಗ್ ಪ್ರೆಸ್)ಎಂಬ ಹೆಸರುಗಳೂ ಇದ್ದುದುಂಟು.ಶಿರಚ್ಛೇದನಕೋಸ್ಕರ ಇದನ್ನು ಬಳಸಬಹುದೆಂದು ಸಲಹೆ ಮಾಡಿದವ ಜೋಸೆಫ್ ಇಗ್ನೇಸ್ ಗಿಲೊಟೀನ್(೧೭೩೮-೧೮೧೪)ಎಂಬ ಒಬ್ಬ ಫ್ರೆಂಚ್ ವೈದ್ಯ.ಅಪರಾಧಿಗಳಿಗೆ ಅವರ ಮರಣದಂಡನೆಯ ಸಮಯದಲ್ಲಿ ಸಾಧ್ಯವಾದಷ್ಟೂ ಕಡಿಮೆ ಬಾಧೆ ತಟ್ಟಲಿ ಎಂಬುದೇ ಈ ಸಲಹೆಯ ಉದ್ದೇಶ.ಮೊದಲಿಗೆ ಇಂಗ್ಲೆಂಡಿನಲ್ಲಿ ಈ ವಿಧಾನವನ್ನು ಅನುಸರಿಸಲಾಗುತ್ತಿತ್ತು.ಇಂಗ್ಲೆಂಡಿನಲ್ಲಿ ಇದನ್ನು ಹ್ಯಾಲಿಫಾಕ್ಸ್ ಗಿಬ್ಬಟ್ ಎಂದೂ ಸ್ಕಾಟ್ಲೆಂಡಿನಲ್ಲಿ ಮೈಡನ್ ಎಂದೂ ಕರೆಯುತ್ತಿದ್ದರು.ಹ್ಯಾಲಿಫಾಕ್ಸ್ ಅಂಡ್ ಇಟ್ಸ್ ಗಿಬ್ಬಟ್ ಲಾ(೧೭೦೮)ಎಂಬ ಕಿರುಪುಸ್ತಕದಲ್ಲೂ ಕ್ಯಾಮ್ ಡನ್ ಎಂಬುವ ಬರೆದಿರುವ,ಗಿಬ್ಬನ್ ಸಂಪಾದಿಸಿರುವ ಬ್ರಿಟಾನಿಯ(೧೭೨೨)ಎಂಬ ಪುಸ್ತಕದಲ್ಲೂ ಉಲ್ಲೇಖವಿದೆ.ಮೈಡನ್ ಶಿರಚ್ಛೇದಕ ಯಂತ್ರವನ್ನು ಎಡಿನ್ ಬರಾದ ಪ್ರಾಚ್ಯ ವಸ್ತು ಸಂಗ್ರಹಾಲಯದಲ್ಲಿ ಇಡಲಾಗಿದೆ.ಸ್ಕಾಟ್ಲೆಂಡಿನ ರೀಜೆಂಟ್ ಆಗಿದ್ದ ಜೇಮ್ಸ್ ಡೊಗ್ಲಾಸ್ ಮಾರ್ಟನ್ ಎಂಬುವನ ಶಿರಚ್ಛೇದನ(೧೫೮೧)ಮೈಡನಿನಿಂದಾಯಿತು.ಮೈಡನ್ ಶಿರಚ್ಛೇದನಕ್ಕೆ ಅಂತಿಮವಾಗಿ ಒಳಗಾದವರೆಂದರೆ ಸ್ಕಾಟ್ಲೆಂಡಿನ ಮಾಕ್ರ್ವಿಸ್ ಆಫ್ ಆರ್ಗೈಲ್(೧೬೬೧)ಮತ್ತು ಅವನ ಮಗ ಅರ್ಲ್ ಆಫ್ ಆರ್ಗೈಲ್(೧೬೮೫).

ಜರ್ಮನಿಯಲ್ಲಿ ಮಧ್ಯಯುಗದ ಸಮಯದಲ್ಲಿ ಈ ಯಂತ್ರ ಬಳಕೆ ಯಲ್ಲಿತ್ತಲ್ಲದೆ ಆಗ ಇದಕ್ಕೆ ಡೈಲಿ,ಹಾಬೆಲ್ ಅಥವಾ ಡೋಲಬ್ರಮುಂತಾದ ಹೆಸರುಗಳಿದ್ದವು.

ಫ್ರಾನ್ಸಿನಲ್ಲಿ ಕೆಲವಡೆ ಮಾತ್ರ ಬಳಕೆಯಲ್ಲಿದ್ದ ಈ ಯಂತ್ರ ಅಲ್ಲಿನ ಒಬ್ಬ ಶಸ್ತ್ರ ವೈದ್ಯ ಮತ್ತು ಒಬ್ಬ ಸರ್ಕಾರಿ ಅಧಿಕಾರಿಯ ಸಲಹೆಯ ಮೇರಿಗೆ ಫ್ರಾನ್ಸಿನ ಇತರ ಭಾಗಗಳಲ್ಲೂ ಬಳಕೆಗೆ ಬಂತು.ಕ್ರಮೇಣ ಫ್ರೆಂಚರು ಗೆದ್ದುಕೊಂಡು ಭಾಗಗಳಲ್ಲೂ ಇದರ ಬಳಕೆ ಹೆಚ್ಚಿತು.ಗಿಲೊಟೀನಿಗೆ ಒಳಗಾದ ಪ್ರಮುಖ ವ್ಯಕ್ತಿಗಳೆಂದರೆ ಫ್ರಾನ್ಸಿಸ್ನ ೧೪ನೆಯ ಲೂಯಿ ಮತ್ತು ರಾಣಿ ಮೇರಿ ಆಂಟೋಯ್ನಿ.

ಸನ್ನೆ(ಲೀವರ್)ಗಿಲೊಟೀನ್,ಸಮಾಂತರ(ಪ್ಯಾರಲಲ್)ಗಿಲೊಟೀನ್ ಮತ್ತು ವರ್ತುಳೀಯ(ಸರ್ಕ್ಯುಲರ್)ಗಿಲೊಟೀನ್ ಎಂಬ ಮೂರು ಬಗೆಯ ಯಂತ್ರಗಳುಂಟು.ಮೊದಲ ಬಗೆಯದರಲ್ಲಿ ಎರಡು ಅಲಗುಗಳಿದ್ದು,ಕತ್ತರಿಯಂತೆ ಅದು ಕೆಲಸಮಾಡುತಿತ್ತು.ಎರಡನೆಯ ಬಗೆಯದರಲ್ಲೂ ಎರಡು ಅಲಗುಗಳಿರುತ್ತಿದ್ದುವು.ಒಂದು ಸ್ಥಿರವಾಗಿದ್ದು ಮತ್ತೊಂದನ್ನು ಯಾಂತ್ರಿಕವಾಗಿ ಆಡಿಸಬೇಕಾಗಿತ್ತು.ವರ್ತುಳೀಯ ಗಿಲೊಟೀನಿನಲ್ಲಿ ಅಲಗುಗಳು ಚಕ್ರಕಾರವಾಗಿರುತ್ತಿದ್ದುವು.ಲೋಹದ ತಗಡು ಅಥವಾ ಪಟ್ಟಿಯನ್ನು ಕತ್ತರಿಸಲು ಈ ಯಂತ್ರವನ್ನು ಉಪಯೋಗಿಸಲಾಗಿತ್ತು.

ಗಿಲ್ಗ್ ಮೆಷ್:ಸುಮೇರಿಯನ್ನರ ಅತಿಪ್ರಾಚೀನ ಸಂಪ್ರದಾಯಕ್ಕೆ ಸೇರಿದ,ಮೆಸಪೊಟೇಮಿಯದ ಪೌರಾಣಿಕ ಮಹಾಕಾವ್ಯವೊಂದರ ನಾಯಕ.ಈ ಮಹಾಕಾವ್ಯ ಅಕ್ಕೇಡಿಯನ್ ಭಾಷೆಯಲ್ಲಿಯೇ ಒಂದು ಬಹು ಮುಖ್ಯವಾದ ಸಾಹಿತ್ಯ ಕೃತಿ ಮತ್ತು ಇದರ ನಾಯಕ ಗಿಲ್ಗ್ ಮೆಷ್ ಸುಮೇರಿಯನ್ ನಾಯಕರಲ್ಲೆಲ್ಲ ಅಗ್ರಗಣ್ಯ.ಈ ಕಥೆ ಪ್ರ.ಶ.ಪೂ.೩೦೦೦ ವರ್ಷಗಳ ಹಿಂದೆ ದಕ್ಷಿಣ ಮೆಸಪೊಟೇಮಿಯದಲ್ಲಿದ್ದ ನಾಗರಿಕತೆಯ ಸ್ವರೂಪವನ್ನು ತಿಳಿಸುತ್ತದೆ.ಗಿಲ್ಗ್ ಮೆಷ್ ನ ವಿಷಯದಲ್ಲಿ ಹುಟ್ಟಿಕೊಂಡಿರುವಷ್ಟು ಕಥೆಗಳು ಇತರರ ವಿಷಯದಲ್ಲಿಲ್ಲ.ಅಲ್ಲದೆ ಇವನು ತನ್ನ ಸ್ನೇಹಿತ ಎಂಕಿಡುವಿನೊಂದಿಗೆ(ನೋಡಿ-ಎಂಕಿಡು)ಸೇರಿ ತೋರಿಸಿದ ಸಾಹಸ ಬೇರೆಯವರಲ್ಲಿ ಕಂಡುಬರದು.ಸುಮೇರಿಯದಲ್ಲಿನ ಈತನ ಕಥೆಯ ಮೂಲವನ್ನು ಪ್ರ.ಶ.ಪೂ.೧೫೦೦ಕ್ಕಿಂತ ಹಿಂದಕ್ಕೆ ಒಯ್ಯಬಹುದು.ನಿನೆವದಲ್ಲಿ ಅಸ್ಸೀರಿಯದ ದೊರೆ ಅಷೂರ್ ಬನಿಪಾಲನ(ಪ್ರ.ಶ.ಪೂ.೬೬೯-೬೩೦?)ಗ್ರಂಥ ಭಂಡಾರದಲ್ಲಿ ಈ ಕಥೆಯ ಅಪೂರ್ಣಪಾಠ(ಕೇವಲ ೧೨ ಫಲಕಗಳು ಮಾತ್ರ)ದೊರೆತಿವೆ.ಹಿಟೈಟ್ ಮತ್ತು ಹುರಿಯನ್ ಭಾಷೆಗಳಲ್ಲಿ ಏಷ್ಯ ಮೈನರಿನಲ್ಲಿ ಕೆಲವು ಬದಲಾವಣೆಗಳೊಂದಿಗೆ ಪ್ರಚಲಿತವಿದ್ದ ಈ ಕಥೆ ಗ್ರೀಕರ ಒಡಸ್ಸಿಯ ಮೇಲೆ ಪ್ರಭಾವ ಬೀರಿರಬಹುದು.ಹೋಮರನಿಗಿಂತ ೧೫೦೦ ವರ್ಷಗಳಷ್ಟು ಹಿಂದೆಯೇ ಇದ್ದ ಅತ್ಯಂತ ಪ್ರಾಚೀನ ಮಹಾಕಾವ್ಯ ಈ ಗಿಲ್ಗ್ ಮೆಷ್ ಇತಿಹಾಸ.

ಈ ಕಥೆಯಲ್ಲಿ ಮಾನವ ಮತ್ತು ಪ್ರಕೃತಿ,ಪ್ರೀತಿ ಮತ್ತು ಇತಿಹಾಸ.ಸ್ನೇಹ ಮತ್ತು ಯುದ್ಧ ಮುಂತಾದ ಪ್ರಾಪಂಚಿಕ ವಿಷಯಗಳನ್ನು ಅಪರಿಹಾರ್ಯವಾದ ಸಾವಿನ ಹಿನ್ನಲೆಯಲ್ಲಿ ವಿವರಿಸಿದೆ.ಸಾವಿನ ವಿಷಯದಲ್ಲಿ ಆಗಿನ ಜನತೆಯಲ್ಲಿದ್ದ ನಂಬಿಕೆಯನ್ನು ಇದು ವ್ಯಕ್ತಪಡಿಸುತ್ತದೆ.

ಈ ಮಹಾಕಾವ್ಯದ ಗಿಲ್ಗ್ ಮೆಷ್ ಬಹುಶಃ ಪ್ರ.ಶ.ಪೂ.೩೦೦೦ ವರ್ಷಗಳ ಹಿಂದೆ ಕಿಷ್ ನಲ್ಲಿದ್ದ ಅಗ್ಗನ ಸಮಕಾಲೀನನಾಗಿ ಉರುಕ್ ನಲ್ಲಿ ಆಳುತ್ತಿದ್ದವನೆನ್ನಲಾಗಿದೆ.ಗಿಲ್ಗ್ ಮೆಷ್ ಎಂಬ ಸುಮೇರಿಯನ್ ಭಾಷೆಯ ಹೆಸರನ್ನು ತಂದೆ ವೀರ,ಪುರಾತನ ವೀರ ಎಂದು ಮುಂತಾಗಿ ಅರ್ಥೈಸಿದ್ದಾರೆ.ಕಾವ್ಯ,ಕಥೆಯಲ್ಲಿ ವಿವರಿಸಿರುವ ಈತನ ಸಾಹಸ ಕಾರ್ಯಗಳಿಗೆ ಚಾರಿತ್ರಿಕಾಧಾರಗಳೇನೂ ಇಲ್ಲ.ಹಾಗೆಯೆ ಸ್ನೇಹಿತ ಮತ್ತು ಸಂಗಾತಿ ಎಂಕಿಡುವಿನ ಹೆಸರೂ ಬೇರೆಲ್ಲಿಯೂ ಇಲ್ಲ.

ಈ ಕಥೆ ಮುಖ್ಯವಾಗಿ ಗಿಲ್ಗ್ ಮೆಷ್ ಮತ್ತು ಎಂಕಿಡು ಇವರ ಸ್ನೇಹ ಬಂಧನವನ್ನು ಕುರಿತದ್ದು.ಇಬ್ಬರೂ ವೀರಾಧಿವೀರರು.ಗಿಲ್ಗ್ ಮೆಷ್ ಶೌರ್ಯದ ಉನ್ನತ ಆದರ್ಶವುಳ್ಳವ,ಕೀರ್ತಿ ತರುವ ಕಾರ್ಯಕ್ಕಾಗಿ ಏನನ್ನೇ ಆಗಲಿ,ಪ್ರಾಣವನ್ನು ಕೂಡ ತ್ಯಾಗ ಮಾಡಲು ಸಿದ್ಧನಾಗಿದ್ದವ.ಅರೆದೈವತ್ವ ಅರೆಮಾನವತ್ವವನ್ನು ಪಡೆದಿದ್ದ ಗಿಲ್ಗ್ ಮೆಷ್ ನಿಗೆ ಭೂಮಿ,ಸಾಗರಗಳ ಮೇಲಿನ ಎಲ್ಲ ವಿಷಯಗಳೂ ತಿಳಿದಿದ್ದವು.ಅನು ದೇವತೆ ಇವನ ದರ್ಪವನ್ನಡಗಿಸಲು ಎಂಕಿಡುವನ್ನು ಸೃಷ್ಟಿಸುತ್ತಾನೆ.ಗಿಲ್ಗ್ ಮೆಷ್ ನಿಗೂ ಇವನಿಗೂ ನಡೆದ ಶಕ್ತಿ ಪ್ರದರ್ಶನದಲ್ಲಿ ಗಿಲ್ಗ್ ಮೆಷ್ ಜಯಶಾಲಿಯಾಗುತ್ತಾನೆ.ಮುಂದೆ ಇಬ್ಬರೂ ನಿಕಟವರ್ತಿಗಳಾಗಿ ಹುಂಬಾಬನ ಮೇಲೆ ಯುದ್ಧ ಹೂಡುತ್ತಾರೆ.ತನ್ನನ್ನು ಮದುವೆಯಾಗಲು ನಿರಾಕರಿಸಿದ ಗಿಲ್ಗ್ ಮೆಷ್ ನ ಮೇಲೆ ಇಷ್ಟಾರ್ ದೇವತೆ ದೇವಲೋಕದ ಗೂಳಿಯನ್ನು ನುಗ್ಗಿಸಿದಾಗ ಎಂಕಿಡುವಿನ ಸಹಾಯದಿಂದ ಅದನ್ನು ಗಿಲ್ಗ್ ಮೆಷ್ ಕೊಲ್ಲುತ್ತಾನೆ.ಇದರಿಂದ ಕುಪಿತ ಗೊಂಡು ಅನು ಮೊದಲಾದ ದೇವತೆಗಳು ಎಂಕಿಡು ಸಾಯ ಬೇಕೆಂದು ನಿರ್ಧರಿಸುತ್ತಾರೆ.ರೋಗ ಬಂದು ಎಂಕಿಡು ಸಾಯುತ್ತಾನೆ.ಸ್ನೇಹಿತನ ಸಾವಿನ ದುಃಖದಿಂದ ಪರಿತಪಿಸುತ್ತಿದ್ದ ಗಿಲ್ಗ್ ಮೆಷ್ ನಿಗೆ ಸಾವನ್ನೇ ಎದುರಿಸಬೇಕೆಂಬ ಸಂಕಲ್ಪ ಉಂಟಾಗುತ್ತದೆ;ಪ್ರಳಯದಿಂದ ಪಾರಾಗಿ ಸಾವನ್ನು ಗೆದ್ದ ಉತ್ನಪಿಷ್ಟಿಮನನ್ನು ಹುಡುಕಿ ಕೊಂಡು ಹೋಗುತ್ತಾನೆ.ಆಪತ್ಕಾರಕ ವಾದಾಗ ನಿಡುಪಯಣದ ಆನಂತರ ಉತ್ನಪಿಷ್ಟಿಮನ ದರ್ಶನವಾಗುತ್ತದೆ.ಆತನಿಂದ ಪ್ರಳಯದ ಕಥೆಯನ್ನು ತಿಳಿದು ನವ ಯೌವನವನ್ನುಂಟು ಮಾಡುವ