ಪುಟ:Mysore-University-Encyclopaedia-Vol-6-Part-6.pdf/೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಗಿನಿ ಕೊಳಿ-ಗಿನಿ ಗಣರಾಜ್ಯ ೧೫೩೦ರಲ್ಲಿ ಆನಂತರ.ಅವರೆಲ್ಲ ಇಲ್ಲಿ ವ್ಯಾಪಾರ ಕೇಂದ್ರಗಳನ್ನು ತೆರೆದರು.ಈ ಪ್ರದೇಶದ ಒಂದೊಂದು ಭಾಗಕ್ಕೂ ಅಲ್ಲಿಯ ಪ್ರದಾನ ವಸ್ತುವಿಗೆ ಅನುಗುಣವಾದ ಹೆಸರು ಬಂತು.ಸಿಯೆರ ಲಿಯೋನಿನಿಂದ ಪಾಲ್ಮಾಸ್ ವರೆಗಿನ ಪ್ರದೇಶ ಗ್ರೇನ್ ಕೋಸ್ಟ್ (ಧಾನ್ಯ ಕರಾವಳಿ)ಎನಿಸಿಕೊಂಡಿದೆ.ಸ್ವರ್ಗದ ಧಾನ್ಯವೆಂದು ಕರೆಯಲಾದ ಗಿನಿ ಪೆಪರ್ ಇಲ್ಲಿಯ ಮುಖ್ಯ ವಸ್ತು. ಪಾಲ್ಮಾಸ್ ನಿಂದ ಆಚೆಗಿನ ಪ್ರದೆಶ ಐವರಿ ಕೋಸ್ಟ್.ವೂಲ್ಟ್ ನದಿಯಿಂದ ನೈಜರ್ ನದಿಮುಖಜಭೂಮಿಯವರೆಗಿನದು ಸ್ಲೇವ್ ಕೋಸ್ಟ್(ಗುಲಾಮ ಕರಾವಳಿ). ತ್ರೀ ಪಾಯಿಂಟ್ಸ್ ಭೂಶಿರಕ್ಕೆ ಪೂರ್ವದ ಪ್ರದೇಶ ಗೊಲ್ಡ್ ಕೋಸ್ಟ್(ಚಿನ್ನದ ಕರವಳಿ). ಗಿನಿ ಗಣರಾಜ್ಯ ಸೆಯೆರ ಲಿಯೋನ್, ಲೈಬೀರಿಯ ಐವರಿ ಕೋಸ್ಟ್ ಗಣರಾಜ್ಯ ,ಉತರ ವೋಲ್ಟ್ ಘಾನ,ಟೋಗೋ ,ದಹೋಮಿ ಗಣರಾಜ್ಯ,ನೈಬೀರಿಯ ಕ್ಯಾಮರೂನ್, ಸಮಭಾಜಕೀಯ ಗಿನಿ, ಗ್ಯಾಬನ್, ಗ್ಯಾ೦ಬಿಯ,ಪೋರ್ಚುಗೀಸ್ ಗಿನಿ-ಇವು-ಗಿನಿ ಪ್ರದೆಶದಲ್ಲಿರುವ ಮುಖ್ಯ ದೇಶಗಳು.ಇವನ್ನು ಕುರಿತ ವಿವರಗಳಿಗೆ ಆಯಾ ಶೀರ್ಷಿಕೆಗಳನ್ನು ನೋಡಿ.

"ಗಿನಿ ಕೋಳಿ":ಗ್ಯಾಲಿಫಾರ್ಮೀಸ್ ಗಣದ ನ್ಯೂಮಿಡಿಡೀ ಕುಟು೦ಬಕ್ಕೆ ಸೇರಿದ ಹಕ್ಕಿ. ಇದರಲ್ಲಿ ಸುಮಾರು ೫ ಚಾತಿಗಳೂ ೭ ಪ್ರಭೆದಗಳೂ ಇವೆ.ಎಲ್ಲವೂ ಕೋಳಿಗಳಿಗೆ ಹತ್ತಿರ ಸ೦ಬ೦ಧಿಗಳು.ಆಫ್ರಿಕ,ಮಡಗಾಸ್ಕರ್ ಮತ್ತು ವೆಸ್ಟಇ೦ಡೀಸಿನ ಕೆಳವು ದ್ವೀಪಗಳಲ್ಲಿ ಕಾಣಬರುತ್ತವೆ.ಇವುಗಳಲ್ಲಿ ಕೆಲವು ಬಗೆಗಳನ್ನು ಕೋಲಿಗಳ೦ತೆ ಸಾಕಲಾಗಿದೆ.ಗಿನಿಕೋಳಿಗಳು ಸುಮಾರು ೪೦-೮೦ ಸೆ೦ಮೀ ಉದ್ದದ ಹಕ್ಕಿಗಳು.ಇವುಗಳ ತಲೆಯ ಮೇಲೆ ಪುಕ್ಕಗಳಿಲ್ಲ್.ಕೆಲವು ಪ್ರಭೇದಗಳಲ್ಲಿ (ನ್ಯೊಮಿಡ್) ನೆತ್ತಿಯ ಮೇಲೆ ಕೋ೦ಬಿನ ಮುಳ್ಳಿನ೦ಥ ರಚನೆಯಿದೆ.ಇನ್ನು ಕೆಲವು ಬಗೆಗಳಲ್ಲಿ ಗರಿಗಳ ಕೀರಿಟ ವಿರುವುದೂ ಉ೦ಟು.ಬಹುಪಾಲು ಬಗೆಗಳಲ್ಲಿ ಕತ್ತು ಕೂಡ ಬರಿದಾಗಿರುವುದಾದರೂ ಕೆಲವು ಪ್ರಭೇದಗಳಲ್ಲಿ ನೀಲಿ ಇಲ್ಲವೆ ಕೆಂಪು ಬಣ್ಣದ ಜೂಲುಮಾಂಸಲ ಭಾಗ (ವ್ಯಾಟಲ್) ಉಂಟು. ಈ ಲಕ್ಷಣದಲ್ಲಿ ಇವು ಟರ್ಕಿ ಕೂಳಿಗಳನ್ನು ಹೋಲಿತ್ತವೆ. ಹಿಂದಕ್ಕೆ ಬಾಗಿ ಹೆಚ್ಚು ಕಡಿಮೆ ನೆಲವನ್ನು ಮುಟುವಂಥೆ ಬಾಲ, ಬಾಲವನ್ನು ಸಂಪೂರ್ಣವಾಗಿ ಮುಚ್ಚುವಂಥ ಬಾಲದ ಗರಿಗಳು, ಅಚ್ಚ ಕಪ್ಪು ಬಣ್ಣ ಮತ್ತು ಚೆಲುವಾದ ಬಿಳಿಯ ಮಚ್ಚೆಗಳಿಂದ ಕೂಡಿದ ಗರಿಗಳ-ಇವು ಗಿನಿ ಕೋಳಿಗಳ ಇನ್ನಿತರ ಲಕ್ಷಣಗಳು. ದಟವಾದ ಕಾದುಗಳಲ್ಲಿ ಇವುಗಳ ವಾಸ. ಸಂಘಜೀವಿಗಳಾದ ಇವು ದೊಡ್ಡ ಗುಂಪುಗಳಲ್ಲಿರುತ್ತವೆ. ಗುಂಪಿಗೆ ಮುದಿ ಹುಂಜವೇ ಯಜಮಾನ. ಹಿಂಡುಗಳಲ್ಲಿರುವಾಗ ಇವು ಜೋರಾಗಿ ಕೇಕೆ ಹಾಕುತ್ತ ಓಡಾಡುತ್ತವೆ. ಇವು ಎಷ್ಟು ಗದ್ದಲ ಪ್ರೇಮಿಗಳೋ ಅಷ್ಟೇ ಪುಕ್ಕಲು ಸ್ವಭಾವದವು ಕೊಡ. ಅಲ್ಪಸ್ವಲ್ಪ ಶಬ್ದಕ್ಕೂ ಗಾಬರಿಗೊಂಡು ,ಗುಂಪಿನಿಂದ ಚದರಿ ಪೊದೆಗಳಲ್ಲಿ ಅವಿತ್ತುಕೊಳುತ್ತವೆ. ಚಿಗುರು,ಬೀಜ ಮುಂತಾದವು ಇವುಗಳ ಮೆಚ್ಚಿನ ಆಹಾರ. ಸಂತಾನೊತ್ಪತ್ತಿಯ ಕಾಲದಲ್ಲಿ ಮಾತ್ರ ಗುಂಪಿನಲ್ಲಿ ಗಂಡು ಹೆಣ್ಣುಗಳು ಜೊತೆಯಾಗಿ ಗುಂಪಿನಿಂದ ಪ್ರತ್ಯೇಕವಾಗಿ ಜೀವಿಸುತ್ತವೆ. ಈ ಸಮಯದಲ್ಲಿ ಸದ್ದುಗದ್ದಲ ಮಾಡದೆ ಶಾಂತವಾಗಿರುತ್ತವೆ.ಗೂಡು ಕಟ್ಟುವ ಕೆಲಸ ಹೆಣ್ಣಿನದು. ಗಿನಿ ಕೋಳಿಗಳು ಸಾಮಾನ್ಯವಾಗಿ ನೆಲದ ಮೇಲೆ ನಡೆದಾಡುವುದೇ ಹೆಚ್ಚು. ಆಹಾರವನ್ನು ಅರಿಸಿಕೊಂಡು ದಿನಕ್ಕೆ ಸುಮಾರು ೩೫ ಕಿಮೀ ವರೆಗೂ ಓಡಾಡುವುದುಂಟು.ಇವಕ್ಕೆ ಚೆನ್ನಾಗಿ ಹಾರಲು ಬಾರದು. ಶತ್ರುಪ್ತಾಣಿಗಳು ಎರಗಿದಾಗ ಹಾರುವ ಬದಲು ವೇಗವಾಗಿ ಓಡುವುದೇ ಸಾಮಾನ್ಯ..ಅತ್ಯಾವಶ್ಯಕವೆನಿಸಿದಾಗ ಮಾತ್ರ ಹಾರುತ್ತವೆ. ಗಿನಿ ಕೋಳಿಗಳಲ್ಲೆಲ್ಲ ಬಹಳ ಪ್ರೆಸಿದ್ಧವಾದುದು ಮೊರ್ವ ಆಫ್ರಿಕದ ನಿವಾಸಿಯಾದ ಆಕ್ರಿಲಿಯಮ್ ವಲ್ಡರೈನಮ್ ಎರಂಬ ಪ್ರಭೇದ. ಈ ಜಾತಿಯಲ್ಲೇ ಇದು ಅತ್ಯಂತ ದೊಡ್ಡ ಗಾತ್ರದ್ದು. ಇದರ ತಲೆ ಬೋಳಾಗಿದ್ದು ಹೆಚ್ಚು ಕಡಿಮೆ ರಣಹದ್ದಿನ ತಲೆಯೆನ್ನೇ ಹೋಲುವುದರಿಂದ ಇದನ್ನು ಬಳಕೆಯ ಮಾತಿನಲ್ಲಿ ವಲ್ಡರೈನ್ ಗಿನಿಕೋಳಿ ಎಂದು ಕರೆಯಲಾಗುತ್ತದೆ. ಪಶ್ಚಿಮ ಆಫ್ರಿಕದ ದಟ್ಟವಾದ ಕಾಡುಗಳಲ್ಲಿ ಹೆಲ್ವೆಟೆಡ್ ಗಿನಿಫೌಲ್ (ನ್ಯೂಮಿಡ ಮಿಲಿಯಾಗ್ರಿಸ್) ಎಂಬ ಇನ್ನೊಂದು ಬಗೆ ಕಾಣಬರುತ್ತೆದೆ. ಸಾಕಣೆಯಲ್ಲಿರುವ ಗಿನಿಕೋಳಿಗಳನ್ನು ಈ ಬಗೆಯಿರಿದಲೇ ಪಡೆಯಲಾಗಿದೆ ಎನ್ನುತ್ತಾರ. ಗಿನಿಕೋಳಿಗಳನ್ನು ಅವುಗಳ ಬಲು ರುಚಿಯಾದ ಮಾಂಸಕ್ಕಾಗಿ ಸಾಕುವುದಿದೆ. ಇವುಗಳ ಸಕಣೆ ಬಹು ಪ್ರಾಚೀನವಾದ ಕಸಬು. ರೋಮನರು, ಗ್ರೀಕರು ಅಫ್ರಿಕದಿಂದ ಇವೆನ್ನು ಹಿಡಿದುತಂದು ಸಾಕುತ್ತಿದ್ದರಂತೆ. ಅದರೆ ಪ್ರಸಕ್ತಿಯುಗ ಆರಂಭವಾಗುವ ಕಾಲಕ್ಕೆ ಇವುಗಳ ಸಾಕಣೆ ನಿರಿತುಹೋಯಿತು. ಮತ್ತೆ ಹದಿನೈದನೆಯೆ ಶತಮಾನದಲ್ಲಿ ಪೋರ್ಚುಗೀಸ್ ನಾವಿಕರು ಗಿನಿ ತೀರ ಪ್ರದೇಶದಲ್ಲಿ ಇವನ್ನು ಕಂಡು ಮತ್ತೆ ಯುರೋಪಿಗೆ ತಂದರು. ಆಲ್ಲಿ೦ದೀಚೆಗೆ ಯುರೋಪಿನ ದೇಶಗಳಲ್ಲಿ ಕೆಲವೆಡೆ ಗಿನಿಕೋಳಿಗಳ ಸಾಕಣೆ ರೂಡಿಯಲ್ಲಿದೆ. ಹೀಗೆ ಸಾಕುವ ಗಿನಿಕೋಳಿಗಳಲ್ಲಿ ಪಲ್೯, ಹ್ವೈಟ್ ಲ್ಯಾವೆಂಡರ್ ಎಂಬ ಮೂರು ಬಗೆಗಳಿವೆ. ಆಥಿ೯ಕ ದೃಷ್ಟಿಯಿಂದ ಗಿನಿಕೋಳಿಗಳ ಸಾಕಣೆ ಲಾಭದಾಯಕವಲ್ಲದ್ದರಿಂದ ಇದು ಹೆಚ್ಚು ಜನಪ್ರಿಯವಾಗಿಲ್ಲ . ಗಿನಿ ಖಾರಿ : ಪಶ್ಚಿಮ ಆಫ್ರಿಕದ ಐವರಿ ಕೋಸ್ಟನಿಂದ ಗಬಾನ್ ವರೆಗಿನ ಪ್ರದೇಶದ ಮಗ್ಗುಲಿಗೆ ಮತ್ತು ಪೂ.ರೇ. ೭' ಯ ಪೂರ್ವಕ್ಕೆ ಇರೊವ ದಕ್ಷಿಣ ಅಟ್ಲಂಟಿಕ್ ಸಾಗರ ಭಾಗ. ಬೆನಿನ್ ಕೊಲ್ಲಿಯಿಂದ ದಕ್ಷಿಣಕ್ಕ ಸಾಗಿ, ನೈಜಿರ್ ಮುಖಜ'ಭೂಮಿಯಿಂದ ಪೂವಾ೯ಭಿಮುಖವಾಗಿ ಮುಂದುವರಿಯುವ ಕಡಲ ಕರೆ ಈ ಖಾರಿಯ ಮೊಲೆಯಿ೦ದ ಮುರಂದಕ್ಕ ದಕ್ಷಿಣದ ಕಡೆಗೆ ತಿರುಗುತ್ತೆದೆ. ಖಾರಿಯ ಮೊಲೆಯಲ್ಲಿ-ಮುಖ್ಯ ಭೂಪ್ರದೇಶದಲ್ಲಿರುವ ಕ್ಕಾಮರೂನ್ ಪರ್ವತಕ್ಕ ಎದುರು-ಹಲವು ಚ್ಚಾಲಾಮುಖೀಯ ದ್ವೀಪಗಳಿವೆ. ಅನೊವಾನ್ ನಿಂದ ಫರ್ನಾಂಡೋ ಪೋ ವರೆಗೆ ಈ ದ್ವೀಪಗಳು ಈಶಾನ್ಯಕ್ಕೆ ಹೆಬ್ಬಿವೆ. ಈ ಬಾರಿಯ ಮೂಲೆಯಲ್ಲಿರುವುದೇ ಬಯಾಫ್ರಕೊಲ್ಲಿ. ಪಶ್ಚಿಮದ ಕಡೆಯಿಂದ ಹರಿದು ಬರುವ ಗಿನಿ ಉಷ್ಣೋದಕ ಪ್ರವಾಹ ಎಲ್ಲಿ ಹಿರಂದಕ್ಕ ತಿರುಗಿ, ತಣ್ಣಗಿನ ದಕ್ಷಿಣ ಸಮಭಾಜಕೀಯ ಪ್ರವಾಹದೊಂದಿಗೆ ಸೇರುತ್ತೆದೆ. ಆದ್ದರಿಂದ ಈ ಖಾರಿಯ ಉತ್ತರ ದಕ್ಷಿಣ ಅಂಚುಗಳಲ್ಲಿಯ ಮೇಲ್ಪದರದ ನೀರಿನ ಉಷ್ಣತೆಯಲ್ಲಿ ವ್ಯತ್ಯಾಸಗಳುಂಟು. ಇದರಿಂದ ಕರಾವಳಿಯ ವಾಯುಗುಣದಲ್ಲೂ ಭಿನ್ನತೆಯಿರುತ್ತದೆ. ಕರಾವಳಿಯಿರಂದ ೩೦ ಕಿಮೀಗಳಿರಿದಾಚೆಗೆ ಕಡಲು ಬಲು ಆಳವಾಗಿದೆ. ಗಿನಿ ಗಣರಾಜ್ಯ: ಪಶ್ಚಿಮ ಆಫ್ರಿಕದ ಗಿನಿ ಪ್ರೆದೇಶದಲ್ಲಿರುವ ಒಂದು ಗಣರಾಜ್ಯ. ಪಶ್ಚಿಮದಲ್ಲಿ ಆಟ್ಲಾಂಟಿಕ್ ಸಾಗರ ಮತ್ತು ಪೋರ್ಚುಗೀಸ್ ಗಿನಿ, ಉತ್ತರದಲ್ಲಿ ಸೆನಿಗಾಲ್ ಮತ್ತು ಮಾಲಿ, ಪೂವ೯ದಲ್ಲಿ ಐವರಿ ಕೋಸ್ಟ್, ದಕ್ಷಣದಲ್ಲಿ ಲೈಬೀರಿಯ ಮತ್ತು ಸೆಯೆರ ಲಿಯೋನ್-ಇವು ಇದರ ಮೇರೆಗಳು. ಗಿನಿ ಗಣರಾಜ್ಯದ ವಿಸ್ತೀಣ೯ ೨೪೫೮೫೭ ಚ.ಕಿಮೀ. ಜನಸೆರಂಖ್ಯೆ ೧೦೦೬೯೦೦೦(೨೦೧೧) ರಾಜಧಾನಿ ಕಾನಕ್ರಿ.

ಭೌತೆಲಕ್ಷಣ : ಗಿನಿಯ ಸಮುದ್ರತೀರ ಅರಿಕುಡೊಂಕಾಗಿ ನದೀ ಆಳಿವೆಗಳಿಂದ ಕೂಡಿದೆ. ಕರೆಯ ಬಳಿ ಅಲ್ಲಲ್ಲಿ ಜವುಗು ತುಂಬಿದ ದ್ವೀಪಗಳಿವೆ. ಉಳಿದ ಭಾಗವನ್ನು ಸ್ಥೂಲವಾಗಿ ನಾಲ್ಕು ಎಭಾಗಗಳಾಗಿ ವಿಂಗಡಿಸಬಹುದು. ೧ ೪೫-೫೩ ಮೈ. ಅಗಲವಾಗಿರುವ ಕರಾವಳಿಯ ಮೈದಾ ತಗ್ಗಿನಪ್ರದೇಶ. ಇದಕ್ಕೆ ಆಡ್ಡಲಾಗಿ ಹಲವಾರು ನದಿಗಳಿವೆ. ನೆಲ ಬಹುತೇಕ ಮೆಕ್ಕಲು ಮಣ್ಣಿನಿಂದಲೂ ಜಂಬುಮೆಣ್ಣಿನಿಂದಲೂ ಆವೃತವಾದ್ದು.

ಕಡಲಕರೆಗೆ ೩೦ ಮೈ. ದೂರದೆಲ್ಲಿರುವ ಮರಳುಗಲ್ಲಿನ ಗುಡ್ಡಗಳ ಮುಂದ ೩೬೮೮'