ಪುಟ:Mysore-University-Encyclopaedia-Vol-6-Part-6.pdf/೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಗಿನಿ ಗಣರಾಜ್ಯಾ ೨೬೯ ಎತ್ತರದ ಕಕೌಲಿಯ ಬೆಟ್ಟಗಳಿವೆ. ಸ್ಮೆಲ್ಲಕೋರಿ, ಕಾಂಕೌರಿ,ರೀಯೋ ಕಪಾಟ್ಜೆಜ್,ರೀಯೂ ನೂನೆಜ್, ರೀಯೂ ಕಾಂಪಿನಿ ಅಥವಾ ಕಾಗಾನ್ ಇವು ಇಲ್ಲಿ ಹರಿಯುವ ನದಿಗಳು. ೨ ಮಧ್ಯ ಗಿನಿ ಎತ್ತರ ಪ್ರದೇಶ. ಇಲ್ಲಿರುವ ಫೂಟ ಜ್ಯಾಲಾವನ್ ಗುಡ್ಡಗಾಡಿನ ಸರಾಸರಿ ಎತ್ತರ ೩೦೦೦' ಇದರುತ್ತರಕ್ಕೆ ಇರುವ ಲೌರ ಶಿಖರ ೪೯೭೦' ಎತ್ತರವಾಗಿದೆ. ಗ್ಯಾಂಬಿಯೆ ನದಿ ಉಗಮಿಸುವುದು ಇದರ ಬಳಿಯಲ್ಲೆ. ಪಶ್ಚಿಮದ ಕಡೆಯ ನೆಲ ಸ್ವಲ್ಪ ತಗ್ಗು. ಇಲ್ಲಿ ಕಾಗಾನ್. ಟಾಮಿನೆ ಮತ್ತು ಫಟಾಲಾ ನದಿಗಳು ಹರಿಯುತ್ತವೆ. ೩ ಈಶಾನ್ಯ ಭಾಗ ಹುಲ್ಲು ತುಂಬಿದ ಮೈದಾನ. ಅಲ್ಲಲ್ಲಿ ಕುಳ್ಳಾದ ಮರಗಳಿವೆ. ಟಿಂಕಿಸ್ಸೊ ನದಿ ಇದರ ಮೂಲಕ ಹರಿದು ಮುಂದೆ ನೈಜರ್ ನದಿಯೆನ್ನು ಸೇರುತ್ತದೆ. ೪ ಗಿನಿಯೆ ದಕ್ಷಿಣ ಭಾಗ ಪ್ರಸ್ಥಭೂಮಿ ಪ್ರದೇಶ. ಬೆಣಚುಕಲ್ಲು ಮತ್ತು ಕಾಚೆ ಶಿಲೆಗಳ ಗುಡ್ಡಗಳಿಂದ ಕೂಡಿದ ಈ ಪ್ರದೇಶದ ಎತ್ತರ ಶಿಖರ ನಿಂಬ (೬೦೬೯). ವಾಯುಗುಣ: ಗಿನಿ ಗಣರಾಜ್ಯ ಉಷ್ಣವಲಯದಲ್ಲಿದೆ. ವರ್ಷದಲ್ಲಿ ಆರು ತಿಂಗಳು (ಜೂನ್-ಡಿಸೆಂಬರ್) ಮಳೆಗಾಲ. ಉಳಿದ ಆರು ತಿಂಗಳು ಶುಷ್ಕ ಹವೆ. ಕರಾವಳಿ ಪ್ರದೇಶದಲ್ಲಿ ಉಷ್ಣತೆಯೂ ಮಳೆಯೂ ಹೆಚ್ಚು. ಉಷ್ಣತೆ ಒಣಹವೆಯ ಕಾಲದಲ್ಲಿ ೬೨* ಫ್ಯಾ.. ನಿಂದ ಮಳೆಗಾಲದಲ್ಲಿ ೮೦* ಫ್ಯಾ..ವರಗೆ ವ್ಯತ್ಯಾಸವಾಗುತ್ತದೆ. ಎತ್ತರವಾದ ಒಳನಾಡಿನಲ್ಲಿ ಮಳೆ ಕಡಿಮೆ. ಉಷ್ಣತೆಯೂ ಕಡಿಮೆ. ಈಶಾನ್ಯದಲ್ಲಿ ಉಷ್ಣತೆಯ ಅಂತರ ಹೆಚ್ಚು (೬೪* ಫ್ಯಾ..- ೧೦೪* ಫ್ಯಾ..); ಮಳೆ ಕಡಿಮೆ. ಸೆಸ್ಯಪ್ರಾಣಿ ಜೀವನ : ಕರಾವಳಿಯಲ್ಲಿ ತಾಳೆ ಮರಗಳು ವಿಶೇಷ. ಮಳೆ ಕಡಿಮೆಯಿರುವಲ್ಲಿ ಹುಲ್ಲು ಹೆಚ್ಚಾಗಿ ಬೆಳೆಯುತ್ತದೆ. ಜಿಂಕೆ, ಮೊಲ, ಆನೆ, ಸಿಂಹ, ಕಾಡುಕೋಣ, ಮೊಸಳೆ, ಹಾಗೂ ನಾನಾಜಾತಿಯ ಹಾವುಗಳು ಇಲ್ಲಿವೆ. ಕೃಷಿ, ಕೈಗಾರಿಕೆ, ಅಭಿವೃದ್ಧಿ: ಗಿನಿಯ ಶೇ.೯೫ ಜನೆಕ್ಕ ಕೃಷಿ ಮುಖ್ಯ ಕಸೆಬು. ಬಾಳೆಹಣ್ಣು, ಎಣ್ಣೆ ತೆಂಗು, ಅನಾನಾಸ್, ಕಾಫಿ ಮುಖ್ಯ ನಿರ್ಯಾತ ಬೆಳೆಗಳು. ಕಬ್ಬಣ ಅದಿರು, ವಜ್ರ, ಬಾಕ್ಸೈಟ್ ಇವನ್ನು ಗಣಿಗಳಿಂದ ತೆಗೆದು ರಫು ಮಾಡುತ್ತಾರೆ. ಕ್ಯಾಲ್ಸಿಯಂ ಕಾಬೈ೯ಡ್ ನಿಕ್ಷೇಪಗಳು ಇಲ್ಲಿ ಹೇರಳವಾಗಿವೆ. ಹೊಗೆಸೊಪ್ಪು ಕ್ವಿನೈನ್, ಚಹ ರಬ್ಬರ್ ಇವೂ ಬೆಳೆಯುತ್ತವೆ. ಬತ್ತ ಮಿಲೆಟ್ ಗಳೊ ಮುಖ್ಯ ಬೆಳೆಗಳು. ಈಶಾನ್ಯೆ ಗಿನಿಯಲ್ಲಿ ದನಗಳನ್ನು ಸಾಕಿ ರಫ್ತು ಮಾಡುತ್ತಾರೆ. ಮೀನು. ಚಮ೯ ಇನ್ನೆರಡು ಮುಖ್ಯ ರಫ್ತು ವಸ್ತುಗಳು, ಜವಳಿ, ಪೆಟ್ರೋಲಿಯಂ ಉತ್ಪನ, ಸಿಮೆಂಟ್ ಇವು ಮುಖ್ಯ ಆಮದುಗಳು. ಗಿನಿಯ ರಾಜಧಾನಿ ಕಾನಕ್ರಿ , ಕಂಕನ್, ಕಿಂಡಿಯ ಇನ್ನೆರಡು ಮುಖ್ಯ ನಗರಗಳು. ಕಾನಕಿ ಗಿನಿ ಗಣರಾಜ್ಯದ ದೊಡ್ಡ ಬಂದರು. ವಿಮಾನ ನಿಲ್ದಾಣ. ಅಲ್ಲಿಂದ ಕಂಕನ್ಗೆ ೬೫೭.೬ ಕಿಮೀ ಉದ್ದದ ರೈಲು ಮಾರ್ಗವಿದೆ. ಗಿನಿಯಲ್ಲಿ ಸುಮಾರು ೧೬000 ಕಿವೀ ಉದ್ದೆದ ರಸ್ತೆಗಳಿವೆ. ಕಾನಕ್ರಿಯಿರಂದ ಮಾಲಿಯ ರಾಜಧಾನಿಯಾದ ಬ್ಯಾಮ್ಯಾಕೋಗೆ ಸಾಗುವ ರಸ್ತೆಯ ಉದ್ದ ೯೨೮ ಕಿಮೀ ಸೆನಿಗಾಲ್ನ ರಾಜಧಾನಿಯಾದ ಡಾಕಾರ್ ಮತ್ತು ಐವರಿ ಕೋಸ್ಟಿನ ರಾಜಧಾನಿ ಆಬಿಜಾನ್ ನಡುವಣ ರಸ್ತೆ ಗಿನಿಯೆ ಮೂಲಕ ಹಾದುಹೋಗುತ್ತದೆ. ಗಿನಿಯ ಅಧಿಕೃತ ಭಾಷೆಗಳು ಫ್ರ೦ಚ್ ಮತ್ತು ಎಂಟು ರಾಷ್ಟ್ರೀಯ ಭಾಷೆಗಳಲ್ಲಿ ಒಂದ ಸೌಸೌ ಅಥವಾ ಮಾನಿಕವನ್ನು ಅಧಿಕೃತ ಭಾಷೆಯಾಗಿ ಮಾಡಬೇಕೆಂಬ ಉದ್ದೇಶವಿದೆ. ಇಲ್ಲಿಯೆ ಜನರಲ್ಲಿ ಬಹು ಮಂದಿ ಮುಸ್ಲಿಮೆರು. ಗಿನಿಯಲ್ಲಿ ಶಿಕ್ಷಣ ಉಚಿತ. ಪ್ರಾಥಮಿಕ, ಉಚ್ಚ ಪ್ರಾಥಮಿಕ, ದ್ವಿತೀಯಕ ಎಂಬ ಮೂರೊ ಹಂತಗಳಲ್ಲಿ ಶಿಕ್ಷಣ ನೀಡಲಾಗುತ್ತವೆ. ೧೯೬೮ ರಿಂದ ಗಿನಿಯ ಎಂಟು ರಾಷ್ಟ್ರೀಯ ಭಾಷೆಗಳನ್ನೂ ಕಲಿಸಲಾಗುತ್ತಿದೆ ಸದ್ಯಕ್ಕೆ ಫ್ರೆಂಚ್ ಭಾಷೆ ಹೆಚ್ಚು ಪ್ರೇಚಾರದಲ್ಲಿದೆ. ಎಂಟು ರಾಷ್ಟ್ರಿಯ ಭಾಷೆಗಳಲ್ಲಿ ಒಂದಲ್ಲ ಒಂದು ಭಾಷೆಯನ್ನು ಪ್ರತಿಯೋಬ್ಬರೂ ಕಲಿಯುವಂತೆ ಮಾಡಿ ಫ್ರೆಂಚ್ ಭಾಷೆಯನ್ನು ಉಚ್ಚಾಟಿಸಲು ೧೯೬೮ರಿಲ್ಲಿ ದೇಶದಲ್ಲಿ ಸಾಂಸ್ಕೃತಿಕ ಕ್ರಾಂತಿಯೊಂದು ಆರಂಭವಾಯಿತು. ದೇಶದ ಅಭಿವೃದ್ಧಿಗಾಗಿ ೧೯೬೪ರಲ್ಲಿ ಎಳು ವರ್ಷಗಳ ಆಥಿ೯ಕಾಭಿವೃದ್ಧಿ ಯೋಜನೆ ಜಾರಿಗೆಬಂತು. ಸಕಾ೯ರ ರಾಷ್ಟ್ರೀಕರಣ ನೀತಿ ಅನುಸರಿಸ್ತೂದೆ. ವ್ಯಾಪಾರ ಕೈಗಾರಿಕೆಗಳನ್ನು ಸಕಾ೯ರ ನಿಯಂತ್ರಿಸುವ ಕ್ರಮ ಕೈಗೊಂಡಿದೆ.

ಗಿನಿಯ ನಿಸೆರ್ಗ ಸೌಂದರ್ಯ ಅನೇಕ ಪ್ರವಾಸಿಗಳನ್ನು ಆಕರ್ಷಿಸಿದೆ. ಫೂಟ ಜ್ಯಾಲಾನ್ ಬೆಟ್ಟಪ್ರದೇಶ ತುಂಬ ಸುಂದರವಾಗಿದೆ. ಗಿನಿಯಲ್ಲಿ ರಾಷ್ಟ್ರಿಯ ರಂಗುಮಂದಿರವಿದೆ. ಆಫ್ರಿಕನ್ ನೃತ್ಯಕ್ಕೆ ವಿಶೇಷ ಪ್ರೋತ್ಸಾಹವುಂಟು. ಗಿನಿಯ ರಾಷ್ತ್ರೀಯ ವಾದ್ಯಮೇಳಕ್ಕೆ ಸಂಪುಣ೯ ಆಫ್ರಿಕನ್ ವಾದ್ಯಗಳನ್ನು ಅಳವಡಿಸಲಾಗಿದೆ. ಫುಟ್ ಬಾಲ್ ಗಿನಿಯ ಆತ್ಯಂತ ಜನಪ್ರಿಯ ಆಟ. ಗಿನಿಯನ್ ಫ್ರಾಂಕ್ ಇಲ್ಲಿಯ ನಾಣ್ಯ. ಗಿನಿ ಅಧ್ಯಕ್ಷಪ್ರರೂಪಿ ಗಣರಾಜ್ಯ.