ಪುಟ:Mysore-University-Encyclopaedia-Vol-6-Part-7.pdf/೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಗುಜರಾತ್

ಶ್ರೇಣಿ ನರ್ಮದಾ ಮತ್ತು ತಾಪಿ ನದಿಗಳ ಪ್ರದೇಶ.ನರ್ಮದೆಯ ಉತ್ತರದ ಪ್ರದೇಶ ವಿಂಧ್ಯಪರ್ವತಗಳ ಭಾಗ. ಅದಕ್ಕೆ ವನಮಾಲಾ ಬೆಟ್ಟಗಳೆಂಬ ಹೆಸರಿದೆ.ನರ್ಮದೆಗೆ ದಕ್ಶಿಣದಲ್ಲಿರುವ ಸಾತ್ಪುರ ಬೆಟ್ಟಗಳ ಪಶ್ಚಿಮದ ಚಾಚು. ಇದು ರಾಜಪಿಪ್ಲ ಎನಿಸಿಕೊಂಡಿದೆ.ತಾಪಿಗೆ ದಕ್ಶಿಣದು ಸಹ್ಯಾದ್ರಿಯ ಅಂಚು.ಇಲ್ಲಿಂದ ಹಲವು ಸಣ್ಣ ನದಿಗಳು ಹರಿದು ಬಂದು ನೆಟ್ಟಗೆ ಸಮುದ್ರ ಸೇರುತ್ತವೆ.ಇವುಗಳು ಪೈಕಿ ಪೂರ್ಣ,ಅಂಬಿಕಾ,ಪಾರ್ ಮತ್ತು ದಮಣಗಂಗಾ ಮುಖ್ಯವಾದವು.

ಗುಜರಾತಿನ ಸಹಜ ಜಲೋತ್ಸಾರಣ ವ್ಯವಸ್ಥೆ ಏಕಮುಖವಾದ್ದಲ್ಲ.ಕಚ್ಚಿನಲ್ಲಿ ನದಿಗಳು ಮಧ್ಯದ ಎತ್ತರ ಪ್ರದೇಶದಿಂದ ಉತ್ತರಕ್ಕೂ ದಕ್ಶಿಣಕ್ಕೂ ಹರಿಯುತ್ತವೆ.ದಕ್ಶಿಣಕ್ಕೆ ಹರಿಯುವ ನದಿಗಳಲ್ಲಿ ಮುಖ್ಯವಾದವು ಮತೀ,ನಯೀರಾ,ಕನಕಮತೀ ಮತ್ತು ರುಕ್ಮತೀ.ಇವಕ್ಕೆ ಉಪನದಿಗಳು ಹೆಚ್ಚಾಗಿಲ್ಲ.ಪ್ರತಿಯೊಂದು ತೊರೆಯೂ ರಣನಲ್ಲೋ ಕಚ್ಛ್ ಖಾರಿಯಲ್ಲೋ ಕೊನೆಗೊಳ್ಳುತ್ತದೆ.ನದಿಗಳು ಬೇಸಗೆಯಲ್ಲಿ ಒಣಗಿಹೋಗುತ್ತವೆ;ಮಳೆಗಾಲದಲ್ಲಿ ತುಂಬಿ ಹರಿಯುತ್ತವೆ.

ಸೌರಾಷ್ಟ್ರದಲ್ಲಿ ಮಧ್ಯದ ದಿಣ್ಣೆನೆಲದಿಂದ ಎಲ್ಲ ದಿಕ್ಕುಗಳಿಗೂ ನದಿಗಳು ಪ್ರವಹಿಸುತ್ತದೆ.ಭಾದರ್ ಅತ್ಯಂತ ಉದ್ದವಾದ ನದಿ.ಇದು ಪಷ್ಚಿಮಕ್ಕೆ ಹರಿದು ಪೋರ್ಬಂದರಿನ ಬಳಿಯ ನವೀಬಂದರಿನಲ್ಲಿ ಅರಬ್ಬೀ ಸಮುದ್ರವನ್ನು ಸೇರುತ್ತವೆ. ಶತ್ರುಂಜೀ,ಮಚ್ಛೂ ಮತ್ತು ಆಜೀ ಇತರ ಮುಖ್ಯ ನದಿಗಳು.ಶತ್ರುಂಜೀ ನದಿ ಗಿರ್ ಶ್ರೇಣಿಯಲ್ಲಿ ಉಗಮಿಸಿ ಪೂರ್ವಾಭಿಮುಖವಾಗಿ ಹರಿದು ಸುಲ್ತಾನ್ ಪುರದಲ್ಲಿ ಕ್ಯಾಬೇ ಖಾರಿಯನ್ನು ಸೇರುತ್ತದೆ.ಮಚ್ಛೂ ಮತ್ತು ಅಜೀ ನದಿಗಳು ರಣ್ ಮತ್ತು ಕಚ್ಛ್ ಖಾರಿಯಲ್ಲಿ ಸೇರುತ್ತವೆ.ಇವುಗಳಲ್ಲದೆ ಹಲವಾರು ಸಣ್ಣ ಹೊಳೆಗಳು ಸೌರಾಷ್ಟ್ರದ ಕರಾವಳಿಯಲ್ಲಿ ಹರಿಯುತ್ತವೆ.ಕಚ್ಛ್ ಮತ್ತು ಅರಬ್ಬಿ ಸಮುದ್ರದ ಕರಾವಳಿಗಳೇ ಅಲ್ಲದೆ ಕ್ಯಾಬೇ ಖಾರಿಯ ಕರಾವಳಿಯಲ್ಲಿ ಕೂಡ ಜಲೋತ್ಸಾರಣ ಸಮರ್ಪಕವಾಗಿಲ್ಲದೆ ನೀರು ನಿಂತು ಜವುಗುಂಟಾಗಿದೆ.

ಗುಜರಾತ್ ಮೈದಾನದ ನದಿಗಳು ದೂರದ ಬೆಟ್ಟಗಳಲ್ಲಿ ಹುಟ್ಟಿ ಹರಿದುಬರುತ್ತವೆ.ಬನಾಸ್,ಸರಸ್ವತಿ ಮತ್ತು ರೂಪನ್ ನದಿಗಳು ಚಿಕ್ಕ ರಣ್ ಅನ್ನು ಸೇರುತ್ತವೆ.ಉಳಿದವು ಸಮುದ್ರ ಸೇರುವುದು ಕ್ಯಾಂಬೇ ಖಾರಿಯಲ್ಲಿ.ಚಿಕ್ಕ ರಣ್ ಸೇರುವ ನದಿಗಳು ಬೇಸಗೆಯಲ್ಲಿ ಒಣಗಿರುತ್ತವೆ.ಬೆಟ್ಟದಿಂದ ಹೊತ್ತು ತಂದ ಮಣ್ಣನ್ನು ಹೊರಲಾರದ ಮೈದಾನದಲ್ಲಿ ಬಿಟ್ಟು ಹೊರಳುತ್ತವೆ.ಇವುಗಳ ಪಾತ್ರಗಳು ಬಾಲು ವಿಶಾಲ.

ಸಾಬರ್ಮತಿಯ ಉದ್ದ 30೦ ಕಿಮೀ. ಅಹಮದಾಬಾದಿನಿಂದ ಮುಂದಕ್ಕೆ ನದಿಯ ಪಾತ್ರ ಪದೇ ಪದೇ ಬದಲಾಗುತ್ತಿರುವುದುಂಟು.ಮಾಹೀನದಿ 500 ಕಿಮೀ ಉದ್ದವಾಗಿದೆ.ಅದು ಗುಜರಾತಿನಲ್ಲಿ 180 ಕಿಮೀ.ಗಿಂತಲೂ ಉದ್ದವಾಗಿ ಹರಿದು ಸಮುದ್ರ ಸೇರುತ್ತದೆ.ಸಾಬರ್ಮತಿ ಮತ್ತು ಮಾಹೀ,ಇವೆರಡೂ ನದಿಗಳ ಉಪನದಿಗಳು ಇವುಗಳ ಎಡ ದಂಡೆಗಳಲ್ಲಿ ಬಂದು ಸೇರುತ್ತವೆ.

ಗುಜರಾತಿನ ಅತ್ಯಂತ ಮುಖ್ಯ ನದಿಗಳು ನರ್ಮದಾ ಮತ್ತು ತಾಪಿ.ಗುಜರಾತಿನಲ್ಲಿ ನರ್ಮದಾ ನದಿ ಹರಿಯುವ ದೂರ 150 ಕಿಮೀ.ಇದು ಭಡೋಚದ ಬಳಿ ಕ್ಯಾಂಬೇ ಖಾರಿಯನ್ನು ಸೇರುತ್ತದೆ.ಓರ್ಸಂಗ್,ಕರ್ಜನ್,ಅಮರಾವತಿ, ಭೂಖಿ ಇವು ನರ್ಮದೆಯ ಮುಖ್ಯ ಉಪನದಿಗಳು.ಸಮುದ್ರ ಸಂಗಮದ ಕಡೆಯಿಂದ ಮೇಲಣ ನೂರು ಕಿಮೀ.ಗಳ ದೂರ ಇದು ಗುಜರಾತಿನ ಅತ್ಯಂತ ಫಲವತ್ತಾದ ಮೈದಾನದ ಮೂಲಕ ಹರಿಯುತ್ತದೆ.ನದೀಪಾತ್ರ ಬದಲಿಸಿದ್ದರ ಪರಿಣಾಮವಾಗಿ,ಇದರಲ್ಲಿ ಕೆಲವು ದ್ವೀಪಗಳು ಸಂಭವಿಸಿದೆ.ಭಡೋಚದಿಂದ ಮೇಲಕ್ಕೆ ಸು.23 ಕಿಮೀ ದೂರದಲ್ಲಿರುವ ಶುಕ್ಲತೀರ್ಥ,ನದೀಮುಖಜ ಭೂಮಿಯಲ್ಲಿರುವ ಆಲಿಯ ಮುಖ್ಯವಾದವು.

ತಾಪಿ ನದಿ ನರ್ಮದೆಗಿಂತ ಚಿಕ್ಕದಾದರೂ ಗುಜರಾತಿನಲ್ಲಿ ಇದರ ಹರಿವಿನ ಉದ್ದ ನರ್ಮದೆಯಕ್ಕಿಂತ ಹೆಚ್ಚು. ಗುಜರಾತಿನಲ್ಲಿ ಅತಿ ಹೆಚ್ಚು ಮಳೆಯಾಗುವ ಪ್ರದೇಶ ಇದರ ಜಲಾನಯನ ಭೂಮಿಯಾದ್ದರಿಂದ ನೀರಾವರಿ ಮತ್ತು ವಿದ್ಯುತ್ತಿನ ದೃಷ್ಟಿಯಲ್ಲಿ ಇದರ ವಿಭಕ ಅಧಿಕ.ಪೂರ್ವದ ಬೆಟ್ಟಸೀಮೆಯಲ್ಲಿ ಕಕ್ರ ಪಾರದ ಬಳಿ ಬಿಟ್ಟು 100 ಕಿಮೀ.ದೂರ ಸಾಗಿ ಸೂರತ್ತಿನಿಂದ ಮುಂದೆ ಇದು ಸಮುದ್ರವನ್ನು ಕೂಡಿಕೊಳ್ಳುತ್ತದೆ.ಇದರ ಪಾತ್ರ ನರ್ಮದೆಯದರಷ್ಟು ವಿಶಾಲವಲ್ಲ.ಈ ನದಿಯ ಕೆಳಭಾಗದ ನೆಲ ಹತ್ತಿ ಬೆಳೆಯಬಲ್ಲ ಫಲವತ್ತಾದ ಕಪ್ಪು ಮಣ್ಣಿನಿಂದ ಕೂಡಿದೆ.

ಒಟ್ಟಿನಲ್ಲಿ ದಕ್ಶಿಣ ಗುಜರಾತಿನ ನದಿಗಳು ಸಮಾನಾಂತರಗಳಲ್ಲಿ ಹರಿದು ಸಮುದ್ರ ಸೇರುತ್ತವೆ.ಸಾತ್ಪುರಾ ಮತ್ತು ಪಶ್ಚಿಮ ಘಟ್ಟಗಳ ಸಣ್ಣ ಚಾಚುಗಳು ಈ ನದಿಗಳು ಪರಸ್ಪರ ಕೂಡದಂತೆ ಪ್ರತ್ಯೇಕಿಸಿವೆ.ನರ್ಮದಾ,ಕಿಂ,ತಾಪಿ, ಪೂರ್ಣ,ಅಂಬಿಕಾ,ಪಾರಾ ಮತ್ತು ದಮಣಗಂಗಾ-ಇವು ಮುಖ್ಯ ನದಿಗಳು.ಆದ್ದರಿಂದ ಈ ನದಿಗಳ ತಳಭಾಗದ ಬಳಿ ಇರುವ ಪಟ್ಟಣಗಳಿಗೆ ಇವುಗಳ ನೀರು ಕುಡಿಯಲು ಉಪಯುಕ್ತವಾಗಿಲ್ಲ.ಕರಾವಳಿಯ ಬಳಿ ನೆಲ ಬಹಳ ತಗ್ಗಾಗಿರುವುದರಿಂದ ಜಲೋತ್ಸಾರಣಕ್ಕೆ ತಡೆಯುಂಟಾಗಿದೆ.

ವಾಯುಗುಣ:ಉತ್ತರದಲ್ಲಿ ರಾಜಸ್ತಾನದಿಂದ ದಕ್ಶಿಣದಲ್ಲಿ ಕೊಂಕಣ ಸೀಮೆಯ ವರೆಗೆ ಹಬ್ಬಿರುವ ಗುಜರಾತು ಅತಿ ಹೆಚ್ಚಿನ ಮಳೆ ಪ್ರದೇಶದಿಂದ ಮರೊಭೂಮಿಯ ವರೆಗಿನ ನಾನಾ ವಾಯುಗುಣಗಳಿಂದ ಕೂಡಿದ ಭಾಗಗಳನ್ನೊಳಗೊಂಡಿದೆ.ರಾಜ್ಯದ ದಕ್ಶಿಣ ಭಾಗದಲ್ಲಿ 2000 ಮಿಮೀ ಗಳಷ್ಟು ಮಳೆಯಾದರೆ,ಅತ್ಯಂತ ಉತ್ತರದಲ್ಲಿ ಬನಸ್ಕಂಟಾ ಜಿಲ್ಲೆಯ ಕೆಲವು ಭಾಗಗಳಲ್ಲಿ, 300-400 ಮಿಮೀ ಗಳಿಂತ ಹೆಚ್ಚು ಮಳೆಯಿಲ್ಲ.ಇಡೀ ರಾಜ್ಯ ಮಾನ್ಸೂನ್ ವಲಯದಲ್ಲಿದೆ.ಜೂನ್ ನಡುಗಾಲದಿಂದ ಅಕ್ಟೋಬರ್ ನಡುಗಾಲದವರೆಗೆ ಮಳೆ-ನೈಋತ್ಯ ಮಾನ್ಸೂನಿನಿಂದ.ಚಳಿಗಾಲದಲ್ಲಿ ಹವೆ ಶುಷ್ಕವಾಗಿಯೂ ಹಿತವಾಗಿಯೂ ಇರುತ್ತದೆ.ಆದರೆ ಉತ್ತರ ಭಾರತದಲ್ಲಿ ಬೀಸುವ ಶೀತಮಾರುತಗಳು ಗುಜರಾತನ್ನೂ ಒಮ್ಮೊಮ್ಮೆ ಪ್ರವೇಶಿಸುವುದುಂಟು.ವರ್ಷದಲ್ಲಿ ಜನವರಿ ಅತ್ಯಂತ ಶೀತಮಾಸ.ನವೆಂಬರಿನ ಮಧ್ಯದಿಂದ ಫೆಬ್ರವರಿಯ ಮಧ್ಯದವರೆಗೆ ಚಳಿಗಾಲ.ಅಲ್ಲಿಂದ ಮುಂದೆ ಉಷ್ಣತೆ ಏರುತ್ತ ಸಾಗಿ,ಮೇ ತಿಂಗಳಲ್ಲಿ ಗರಿಷ್ಟವಾಗುತ್ತದೆ.ನೈಋತ್ಯ ಮಾನ್ಸೂನಿನ ಆಗಮನದಿಂದಾಗಿ ಜೂನ್ ತಿಂಗಳು ಥಟ್ಟನೆ ತಂಪಾಗುತ್ತದೆ.ಆದರೆ ಮುಖ್ಯವಾಗಿ ಕರಾವಳಿಯಲ್ಲಿ ವಾತಾವರಣದ ತೇವದಿಂದಾಗಿ ಹವೆ ಅಷ್ಟೇನೂ ಹಿತಕರವಾಗಿರುವುದಿಲ್ಲ.ಚಳಿಗಾಲವೇ ಹೆಚ್ಚು ಚೈತನ್ಯದಾಯಕ ಕಾಲ.ರಾಜ್ಯದ ಕೆಲವು ಭಾಗಗಳಲ್ಲಿ ಮೇ ತಿಂಗಳಲ್ಲಿ ಉಷ್ಣತೆ 45 ಸೆಂ.ಮುಟ್ಟುವುದುಂಟು.ರಾಜ್ಯದ ಬಹುಭಾಗ 35 ಮತ್ತು 42.5 ಸೆಂ. ಸಮಶಾಖರೇಖೆಯ ನಡುವೆ ಬರುತ್ತದೆ.ಕಚ್ಛ್,ಸೌರಾಷ್ಟ್ರಗಳ ಕರಾವಳಿಯಲ್ಲಿ 30-40 ಕಿಮೀವರೆಗೆ ಬೀಸುವುದುಂಟು.ಜನವರಿಯಲ್ಲಿ ಎಲ್ಲೂ ಗರಿಷ್ಟ ಉಷ್ಣತೆ 30 ಸೆಂ.ನ್ನು ದಾಟುವುದಿಲ್ಲ.ದಕ್ಶಿಣಕ್ಕೆ ಬಂದಂತೆ ಉಷ್ಣತೆ ಅಧಿಕವಾಗುತ್ತದೆ.