ಪುಟ:Mysore-University-Encyclopaedia-Vol-6-Part-7.pdf/೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಈ ರಾಜ್ಯದಲ್ಲಿ ನೀರಾವರಿಯ ವಿಶೇಷ ಸೌಲಭ್ಯಗಳಿಲ್ಲದಿದ್ದರೂ ಬೇಸಾಯಕ್ಕೆ ಬಳಸುವ ಶಾಸ್ತ್ರೀಯ ಪದ್ಧತಿಗಳಿಂದಾಗಿ ಆಹಾರಧನ್ಯಗಳ ಉತ್ಪಾದನೆಯಲ್ಲಿ ಕಾಲಕಾಲಕ್ಕೆ ಹೆಚ್ಚಳವನ್ನೆ ಸಾಧಿಸಲಾಗಿದೆ.

ನೆಲಗಡಲೆ ಮತ್ತು ಹತ್ತಿ ಈ ರಾಜ್ಯದ ಎರಡು ಮುಖ್ಯ ಬೆಳೆಗಳು. ಇಡೀ ದೇಶದಲ್ಲಿ ನೆಲಗಡಲೆಯ ಬೆಳೆಗೆ ಒಳಪಟ್ಟ ಭೂಮಿಯ ಶೇ.೨೫ ಭಾಗವೂ ಹತ್ತಿಯ ಬೆಳೆಗೊಳಪಟ್ಟ ಭೂಮಿಯ ಶೇ.೨೧ ಭಾಗವೂ ಈ ರಾಜ್ಯದಲ್ಲಿದೆ. ನೆಲಗಡಲೆ ಮತ್ತು ಹತ್ತಿಯ ಇಡೀ ದೇಶದ ವಾರ್ಷಿಕ ಉತ್ಪನ್ನಗಳಲ್ಲಿ ಅನುಕ್ರಮವಾಗಿ ಶೇ.೨೩ ಮತ್ತು ಶೇ.೨೯ ಗುಜರಾತಿನಲ್ಲಿ ಬೆಳೆಯುತ್ತವೆ.

ಬೇಸಾಯ ಶಿಕ್ಷಣ ಪ್ರಸಾರಕ್ಕಗಿ ಜುನಾಗಢ, ಆನಂದ್, ನವಸಾರಗಳಲ್ಲಿ ವ್ಯವಸಾಯದ ಮಹಾವಿದ್ಯಾಗಳನ್ನು ತೆರೆಯಲಾಗಿದೆ. ಅಹಮದಾಬಾದಿನಲ್ಲಿ ೧೯೭೨ ರಲ್ಲಿ ಕೃಷಿ ವಿಶ್ವವಿದ್ಯಾಲಯ ಆರಂಭವಾಯಿತು. ರಾಜ್ಯದಲ್ಲಿ ೧೩ ಕೃಷಿ ಶಾಲೆಗಳಿವೆ. ಸೂರತ್, ವಡೋದರ, ಆನಂದ್ ಮತ್ತು ಜುನಾಗಡದಲ್ಲಿ ಗ್ರಾಮ ಸೇವಕರ ತರಬೇತು ಕೇಂದ್ರಗಳಿವೆ.

ಗುಜುರಾತಿನಲ್ಲಿ ಬಾವಿ ಕೆರೆಗಳಲ್ಲದೆ ಸುಮಾರು ೫೦ ಮಧ್ಯಮ ಗಾತ್ರದ ನೀರಾವರಿ ಯೋಜನೆಗಳೂ ಮುಂದಿನ ಪುಟದಲ್ಲಿ ಕಾಣಿಸಿರುವ ದೊಡ್ಡ ಗಾತ್ರದ ನೀರಾವರಿ ಯೋಜನೆಗಳೂ ಉಂಟು. ಯೋಜನೆಗಳಿಂದ ದೊರೆಯುವ ನೀರು ರಾಜ್ಯದ ಒಟ್ಟು ಸಾಗುವಳಿ ಕ್ಷೇತ್ರದ ಶೇ.೧೧ ಭಾಗವನ್ನು ಮಾತ್ರ ತಣಿಸಬಲ್ಲದು. ರಾಜ್ಯದ ನದಿಗಳಿಂದ ಇನ್ನೂ ಹೆಚ್ಚಿನ ಪ್ರಯೋಜನ ಪಡೆಯುವ ಪ್ರಯತ್ನಗಳಲ್ಲದೆ, ಸಹಸ್ರಾರು ನೀರಾವರಿ ಬಾವಿಗಳನ್ನು ತೋಡಿಸುವ ಕಾರ್ಯ ನಡೆದಿದೆ. ಜೊತೆಗೆ ಒಣ ಬೇಸಾಯದ ವ್ಯವಸ್ಥಿತ ಕ್ರಮಗಳಿಗಾಗಿಯೂ ವಿಶೇಷ ಗಮನ ಕೊಡುವುದು ಅನಿವಾರ್ಯವೆನಿಸಿದೆ. ಅದಕ್ಕಗಿ ೧೯೪೯ರಿಂದ ಜಮೀನಿನಲ್ಲಿ ಸಮಪಾತಳಿ ಒಡ್ಡು ರಚಿಸುವ ಯೋಜನೆಯನ್ನಾರಂಭಿಸಿ ಮೊದಲೆರಡು ದಶಕಗಳಲ್ಲಿಯೇ ೨೨ ಲಕ್ಷ ಎಕರೆಗಳ ಜಮೀನಿನಲ್ಲಿ ಇಂಥ ಒಡ್ಡುಗಳನ್ನು ಹಾಕಲಯಿತು. ಖೇಡಾ ಜಿಲ್ಲೆಯ ವಿವಿಧ ಪ್ರತ್ಯಕ್ಷಿಕೆಗಳನ್ನು ಕೈಗೊಂಡು ರೈತರಿಗೆ ಮಾರ್ಗದರ್ಶನ ನೀಡಲಾಗುತ್ತದೆ. ಜುನಾಗಢ, ಮಂಗ್ರೋಲ, ಮುಂದ್ರಾ, ಊನಾ, ಕೋಢಿನಾರ್, ಧಾರಿ, ಮಾಹುವಾ, ಮೋಟೇರಾ, ದೇಹಗಾಮ್, ವಡೋದರ, ನವಸಾರಿ, ಗಾಂಡೇವಿ, ಪಾರ್ದಿ, ಪಾರಿಯಗಳಲ್ಲಿರುವ ಸರ್ಕಾರಿ ಸಸಿದೋಟಗಳಿಂದ ಹೂ-ಹಣ್ಣುಗಳು ಸಸಿಗಳನ್ನು ರೈತರಿಗೆ ಹಂಚಲಾಗುತ್ತದೆ. ಅಲ್ಲದೆ ರಾಜ್ಯದ ವಿವಿಧ ಭಾಗಳಲ್ಲಿರುವ ಸಂಶೋಧನ ಕೇಂದ್ರಗಳ ಮೂಲಕ ತೋಟಗಾರಿಕೆಯ ಅಭಿವೃದ್ಧಿಯ ಮಾಹಿತಿಯನ್ನು ಪೂರೈಸಲಾಗುತ್ತದೆ.

ವಿದ್ಯುತ್ ಉತ್ಪಾದನೆ: ಈ ರಾಜ್ಯದಲ್ಲಿರುವ ವಿದ್ಯುತ್ಪಾದನ ಕೇಂದ್ರಗಳಿವು: ೧. ಧುವರನ್ ವಿದ್ಯುತ್ ಕೇಂದ್ರ --- ೨೫೪.೦ ೨. ಧುವರನ್ ವಿದ್ಯುತ್ ಕೇಂದ್ರ(೨ನೇ ಹಂತ) --- ೨೮೦.೦ ೩. ಉಗಿಚಕ್ರ ವಿದ್ಯುತ್ ಕೇಂದ್ರ --- ೫೪.೦ ೪. ಉತ್ರನ್ ವಿದ್ಯುತ್ ಕೇಂದ್ರ --- ೬೭.೫ ೫. ಶಹಾಪುರ --- ೧೬.೦ ೬. ಪೋರ್ಬಂದರ್ --- ೧೫.೦ ೭. ಸಿಕ್ಕಾ --- ೧೬.೦ ೮. ಕಾಂಡ್ಲಾ --- ೧೬.೦ ೯. ಭಾವನಗರ --- ೧೬.೦ ೧೦. ಸಾಬರ್ಮತಿ --- ೨೧೭.೫ ೧೧. ತಾರಾಪುರ್ ಪರಮಾಣು ವಿದ್ಯುತ್ ಕೇಂದ್ರ --- ೧೯೦.೦ ೧೨. ಉಕಾಯಿ ಜಲವಿದ್ಯುತ್ ಕೇಂದ್ರ --- ೩೦೦.೦೦

ರಾಜ್ಯದ ನಗರಗಳಲ್ಲದೆ ಸು. ೩,೫೦೦ ಗ್ರಾಮಗಳಿಗೂ ೫೨,೦೦೦ ನೀರಿನ ಪಂಪ್-ಸೆಟ್ ಗಳಿಗೂ ವಿದ್ಯುತ್ ಪೂರೈಕೆಯಾಗಿದೆ. ಲಕ್ಷ ಮನೆಗಳಿಗೆ ವಿದ್ಯುತ್ತನ್ನೊದಗಿಸಲಾಗಿದೆ. ರಾಜ್ಯದಲ್ಲಿ ಉತ್ಪಾದನೆಯಾಗುವ ವಿದ್ಯುತ್ಚ್ಛ್ಕಕ್ತಿಯ ಅರ್ಧಕೀಂತ ಹೆಚ್ಚು ಭಾಗವನ್ನು ಕೈಗಾರಿಕೆಗಳಲ್ಲಿ ಬಳಸಲಾಗುತ್ತಿದೆ. ೨೦೦೫ ರಲ್ಲಿ ಒಟ್ಟು ೮೭೬೩ ಮೆ.ವ್ಯಾ. ವಿದ್ಯುತ್ ಉತ್ಪಾದನೆಯಾಗಿತ್ತು.

ಮೀನುಗಾರಿಕೆ: ಗುಜುರಾತಿಗೆ ೧,೬೦೦ ಕಿಮೀ ಕರಾವಳಿ ಇರುವುದರಿಂದ ಮೀನುಗಾರಿಕೆಯ ಅಭ್ವೃದ್ಧಿಗೆ ಇಲ್ಲಿ ಸಾಕಷ್ಟು ಅವಕಾಶವುಂಟು. ಒಳನಾಡಿನಲ್ಲಿರುವ ನಾಲ್ಕು ದೊಡ್ಡ ನದಿಗಳೂ ಕೆರೆ ಕಾಲುವೆಗಳೂ ಇದಕ್ಕೆ ಉಪಯುಕ್ತವಾಗಿವೆ. ರಾಜ್ಯದಲ್ಲಿ ವರ್ಷಕ್ಕೆ ಸರಾಸರಿ ೨ ಲಕ್ಷ ಟನ್ ಮೀನಿನ ಉತ್ಪಾದನೆಯಾಗುತ್ತದೆ. ಇದರ ಅಭಿವೃದ್ಧಿಗಾಗಿ ವೀರಾವಲ, ಪೋರ್ಬಂದರ್, ಬಲಸಾರ್, ಮಧವಾಡ ಮತ್ತು ಆಂಬರ್-ಗಾಂವ್ ಗಳಲ್ಲಿ ಸೇವಾಕೇಂದ್ರಗಳನ್ನೂ ಆಂಬರ್-ಗಾಂವ್, ವೀರಾವಲ, ಮತ್ತು ಬಲ್ ಸಾರ್ ಗಳಲ್ಲಿ ಆಧುನಿಕ ದೋಣಿಗಳ ನಿರ್ಮಾಣ ಕೇಂದ್ರಗಳನ್ನೂ ತೆರೆಯಲಾಗಿದೆ. ವೀರಾವಲ, ಜಾಫರಾಬಾದ್, ಆಂಬರ್-ಗಾಂವ್, ಪೋರ್ಬಂದರ್, ಮಂಗ್ರೋಲ, ಮತ್ತು ಹಿರಾತೋಟ್ ಬಂದರುಗಳಲ್ಲಿ ಈ ಉದ್ಯಮ ದೊಡ್ಡ ಗಾತ್ರದಲ್ಲಿ ನಡೆಯುತ್ತಿವೆ. ಗುಜುರಾತಿನಿಂದ ಹೊರದೇಶಗಳಿಗೆ ಸು. ೧ ಕೋಟಿ ರೂ. ಮೌಲ್ಯದ ಮೀನು ರಫ್ತಾಗುತ್ತದೆ.

ಖನಿಜಗಳು: ಗುಜುರಾತಿನಲ್ಲಿ ಉಪ್ಪು, ಸುಣ್ಣದಕಲ್ಲು, ಮ್ಯಂಗನೀಸ್, ಜಿಪ್ಸಂ, ಪಿಂಗಾಣಿ ಮಣ್ಣು, ಕ್ಯಾಲ್ಸೈಟ್, ಬಾಕ್ಸೈಟ್, ಪೆಟ್ರೋಲಿಯುಮ್, ಅಮೂಲ್ಯ ಶಿಲೆ, ಬಣ್ಣಕ್ಕೆ ಬಳಸುವ ಕೆಮ್ಮಣ್ಣು ಅಗೇಟ್ ಶಿಲೆ ಮುಂತಾದ ಖನಿಜಗಳು ವಿಪುಲವಾಗಿ ದೊರೆಯುತ್ತವೆ. ಸೌರಾಷ್ತ್ರ ಮತ್ತು ಕಚ್ಚ್ ಉತ್ತಮ ದರ್ಜೆಯ ಬಾಕ್ಸೈಟ್ ಮತ್ತು ಸುಣ್ಣದ ಕಲ್ಲುಗಳಿಗೆ ಹೆಸರಾಗಿದ್ದರೆ, ವಡೋದರ ಜಿಲ್ಲೆಯ ಛೋಟಾ ಉದಯಪುರದ ಬಳಿ ಪ್ಲೂರೈಟ್ ದೊರೆಯುತ್ತದೆ. ವಡೋದರ, ಬನಾಸ್ಕಂಟ, ಭಡೋಚ, ಭಾವನಗರ, ಕಚ್ಚ, ರಾಜಕೋಟೆ ಜಿಲ್ಲೆಗಳಲ್ಲಿ ದೊರೆಯುವ ಬೆಲೆ ಬಾಳುವ ಕಲ್ಲುಗಲಳು ಗುಜುರಾತಿನ ಮುಖ್ಯವಾಗಿ ಖಂಬಾತ್ ಮತ್ತು ಸೂರತ್ತಿನ, ಕಲಾವಿದರ ಕೈಗಳಲ್ಲಿ ವಿವಿದಹ್ ಆಕರ್ಷಿಕ ರೂಪ ತಳೆದು ದೇಶವಿದೇಶಗಳಲ್ಲಿ ವಿಶೇಷ ಬೇಡಿಕೆಗೆ ಪಾತ್ರವಾಗಿದೆ. ಗುಜುರಾತಿನ ತೈಲ ಮತ್ತು ಅನಿಲ ಸಂಪತ್ತಿನ ಸರ್ವೇಕ್ಷಣೆ ನಡೆಸಿ ಅದನ್ನು ಹೊರತೆಗೆಯುವ ಕೆಲಸ ನಡೆದಿದೆ. ತೈಲ ಮತ್ತು ನೈಸರ್ಗಿಕ ಅನಿಲ ಆಯೋಗದ ನೇತೃತ್ವದಲ್ಲಿ ೫೩೦ ಬಾವಿಗಳನ್ನು ತೋಡಲಾಗಿದೆ. ಪ್ರತಿವರ್ಷ ೧೧.೨೭೫ ಟನ್ ತೈಲ ತೆಗೆಯುವ ಉದ್ದೆಶವಿರಿಸಿಕೊಂಡು ಕಾರ್ಯ ನಡೆದಿದೆ. ಅಂಕಲೇಶ್ವರ, ಕಲೋಲ, ನವಾಗಾಮುಗಳು ತೈಲೋತ್ಪಾದನೆಯ ಮುಖ್ಯ ಕೇಂದ್ರಗಳು.

ಸಹಕಾರ, ಕೈಗಾರಿಕೆ: ಸಹಕಾರೀ ಆಂದೋಲನದಲ್ಲೂ ಈ ರಾಜ್ಯ ಸಾಕಷ್ಟು ಪ್ರಗತಿ ಸಾಧಿಸಿದೆ. ಗ್ರಾಮ ಮಟ್ಟದಲ್ಲಿ ೨೮ ಲಕ್ಷ ಸದಸ್ಯರುಳ್ಳ ೯.೮೮೫ ಪ್ರಾಥಮಿಕ ಸಂಘಗಳುಂಟು. ೩೨೫ ಸಹಕಾರೀ ಬೇಸಾಯ ಸಂಘಗಳೂ ೫೮ ಸಂಯುಕ್ತ ಸಹಕಾರೀ ಬೇಸಾಯ ಸಂಘಗಳೂ ೪೫೦ ನೀರೆತ್ತುವ ಸಹಕಾರೀ ಬೇಸಾಯ ಸಂಘಗಳೂ ಕಾರ್ಯನಿರತವಾಗಿವೆ. ಇವಲ್ಲದೆ ವರ್ಷಕ್ಕೆ ಸರಾಸರಿ ೧,೦೦-೧,೨೫೦ ದಶಲಕ್ಷ ಟನ್ ಕಬ್ಬಿನಿಂದ ಸಕ್ಕರೆ ತಯಾರಿಸುವ ೧೧ ಸಹಕಾರಿ ಸಕ್ಕರೆ ಕಾರ್ಖಾನೆಗಳುಂಟು. ೬೩ ಪ್ರಾಥಮಿಕ ಮೀನುಗಾರಿಕೆ ಸಂಘಗಳೂ ೧೪ ಒಣ ಮೀನುಗಳ ಮಾರಾಟ ಸಂಘಗಳೂ ೮ ತಾಜಾ ಮೀನುಗಳ ಮಾರಾಟ ಸಂಘಗಳೂ ಇವೆ. ಹಾಲಿನ ಉತ್ಪಾದನೆ, ಪೋರೈಕೆ, ಗೃಹ ನಿರ್ಮಾಣ ಮತ್ತು ವಸತಿ ವ್ಯವಸ್ಥೆಗಳಿಗಾಗಿ ಈ ರಾಜ್ಯದಲ್ಲಿ ಆಗಿರುವ ಸಹಕಾರೀ ಸಂಘಟನೆ.