ಪುಟ:Mysore-University-Encyclopaedia-Vol-6-Part-7.pdf/೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಗುಜರಾತ್ ವಿಶಿಷ್ಟವಾದ್ದು.೨.೮೮.೩೯೯ ಸದಸ್ಯರುಳ್ಳ ೧.೫೫೨ ಹಾಲುಪೂರೈಕೆಯ ಸಹಕಾರೀ ಸಂಘಗಳೂ ೧.೪೩.೫೨೨ ಸದಸ್ಯರುಳ್ಳ ೪.೨೧೫ ಗೃಹನಿರ್ಮಾಣ ಸಂಘಗಳೂ ಈ ರಾಜ್ಯದಲ್ಲಿವೆ.೧೬೬ ನೇಕಾರರ ಸಂಘಗಳೂ ೭೭೯ ಇತರ ಕೈಗಾರಿಕೆಗಳ ಸಂಘಗಳೂ ೯೫೯ ಗ್ರಾಹಕರ ಸಂಘಗಳೂ,೮೯ ವ್ಯವಸಾಯೇತರ ಸಂಘಗಳೂ ರಾಜ್ಯದಲ್ಲಿವೆ. ಇಲ್ಲಿ ೧೪.೧೨೩ ಸಣ್ಣ ಕೈಗಾರಿಕೆಗಳಿವೆ.ಗೃಹ-ಗುಡಿ ಕೈಗಾರಿಕೆಗಳು ಮಾತ್ರವಲ್ಲದೆ ದೊಡ್ಡ ಮತ್ತು ಮಧ್ಯಮ ಗಾತ್ರಗಳ ಕೈಗಾರಿಕೆಳಲ್ಲೂ ರಾಜ್ಯ ಮುಂದುವರಿದಿದೆ. ಅಹಮದಾಬಾದ್ ಸೂರತ್, ವಡೋದರ,ಖೇಡಾ,ಭಾವನಗರ,ಸುರೇಂದ್ರನಗರ,ರಾಜಕೋಟೆ,ಜಾಮ್ ನಗರಗಳಲ್ಲಿ ಕಾರ್ಖಾನೆಗಳು ಹೆಚ್ಚಾಗಿ ಬೆಳೆದಿವೆಯಾದರೂ ಇತರ ಕಡೆಗಳಲ್ಲೂ ಕೆಲವು ಕೈಗಾರಿಕೆಗಳುಂಟು.ಜವಳಿ ಕೈಗರಿಕೆ ಅತ್ಯಂತ ಮುಖ್ಯವಾದ್ದು.ಎಂಜಿಯರಿಂಗ್,ರಸಾಯನವಸ್ತು.ಔಷಧಗಳು,ಸಿಮೆಂಟ್,ಕುಂಭ,ಗಾಜು,ಗೊಬ್ಬರ,ಕಗದ ಇವು ಇತರ ಕೈಗಾರಿಕೆಗಳು.ವಡೋದರದಲ್ಲಿ ಪೆಟ್ರೋಲಿಯಂ ಪರಿಷ್ಕರಣ ಕೇಂದ್ರವಿದೆ.ಭಾರತದ ಔದ್ಯೋಗಿಕ ನಕ್ಷೆಯಲ್ಲಿ ಈ ರಾಜ್ಯಕ್ಕೊಂದು ಮಹತ್ತ್ವದ ಸ್ಥಾನ ಪ್ರಾಪ್ತವಾಗಿದೆ.೨೦೦೨ರ ಅಂತ್ಯದಲ್ಲಿ ೧೯,೬೯೬ ಕಾರ್ಯಾನಿರತ ಕೈಗರಿಕಾ ಘಟಕಗಳಿದ್ದವು.ಸೆಪ್ಟೆಂಬರ್ ೨೦೦೩ರಲ್ಲಿ ೨.೮೩ ಲಕ್ಷ ಸಣ್ಣ ಕೈಗಾರಿಕೆಗಳಿದ್ದವು.ಸರಾಸರಿ ೮.೪೦ ಲಕ್ಷ ಮಂದಿಗೆ ಉದ್ಯೋಗಾವಕಾಶವಿತ್ತು. ಪಂಚಾಯತಿ ರಾಜ್ಯ:ಈ ರಾಜ್ಯದಲ್ಲಿ ೧೧.೯೨೮ ಗ್ರಾಮ ಪಂಚಾಯತಿಗಳೂ ೫೬ ಪಟ್ಟಣ ಪಂಚಾಯತಿಗಳೂ ೧೮೨ ತಾಲ್ಲೂಕು ಪಂಚಾಯತಿಗಳೂ ೧೭ ಜಿಲ್ಲಾ ಪಂಚಾಯತಿಗಳೂ (ಗಾಂಧೀನಗರ ಮತ್ತು ಡಾಂಗ್ಸ ಜಿಲ್ಲೆಗಳ ಹೊರತಗಿ) ಇವೆ.ಗಿರಿಜನರ ಜೀವನಾಭಿವೃದ್ಧಿಗಾಗಿ ೫೩ ವಿಶೇಷ ಅಭಿವೃದ್ದಿ ಘಟಕಗಳನ್ನು ರಾಜ್ಯದಲ್ಲಿ ರಚಿಸಲಾಗಿದೆ.ತಮ್ಮ ಸೇವಾ ಸಿಬ್ಬಂದಿಯನ್ನು ತಾವೇ ಆಯ್ದುಕೊಳ್ಳುವ ಅಧಿಕಾರವನ್ನಲ್ಲದೆ ಆಯಾ ಪ್ರದೇಶಗಳ ಅಭಿವೃದ್ಧಿಗಾಗಿ ನೂರಕ್ಕೆ ನೂರರಷ್ಟು ಭೂಕಂದಾಯವನ್ನು ಬಳಸಿಕೊಳ್ಳುವ ಸವಲತ್ತನ್ನೂ ಈ ಪಂಚಾಯತ್ ರಾಜ್ ಸಂಸ್ಥೆಗಳಿಗೆ ನೀಡಲಾಗಿದೆ. ಸಮಾಜ ಕಲ್ಯಣ:ಹಿಂದುಳಿದ ಜನಗಳ ಕಲ್ಯಣ ದೃಷ್ಟಿಯಿಂದ ರಾಜ್ಯದಲ್ಲಿ ಹಲವಾರು ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ.ರಾಜ್ಯದಲ್ಲಿ ಸುಮಾರು ೧೨೦ ಲಕ್ಷ ಜನ ಹಿಂದುಳಿದ ಸಮಾಜಕ್ಕೆ ಸೇರಿದ್ದು ಅವರಲ್ಲಿ ಸುಮಾರು ೩೬ ಲಕ್ಷ ಜನ ಪರಿಶಿಷ್ಟ ಜಾತಿಯವರೂ ೭೫ ಲಕ್ಷ ಜನ ಪರಿಶಿಷ್ಟ ಜನಾಂಗದವರೂ ೪ ಲಕ್ಷ ಜನ ಅಲೆಮಾರಿ ಜನಾಂಗಕ್ಕೆ ಸೇರಿದವರೂ,೪ ಲಕ್ಷ ಜನ ಇತರರೂ ಇದ್ದಾರೆ.ಈ ಜನರ ಶಿಕ್ಷಣ ಆರ್ಥಿಕ ಅಭಿವೃದ್ದಿ.ಆರೋಗ್ಯ ವಸತಿಸೌಕರ್ಯ ಇತ್ಯಾದಿ ಕಾರ್ಯಾಯೋಜನೆಗಳ ಮೂಲಕ ಸಮಾಜಕಲ್ಯಾಣದ ಪ್ರಯತ್ನಗಳು ನಡೆದಿದೆ.ಹಿಂದುಳಿದ ಜನರ ಮಕ್ಕಳಿಗೆ ಉಚಿತವಾದ ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣ ದೊರೆಯುತ್ತದೆ.ಬಾಲಕಿಯರ ಹೆಚ್ಚಿನ ಶಿಕ್ಷಣಕ್ಕಾಗಿ ೧೧೭ ಆಶ್ರಮ ಶಾಲೆಗಳನ್ನು ತೆರೆಯಲಾಗಿದೆ.ಸರ್ಕಾರಿ ಭೂಮಿಯ ವಿತರಣೆ,ಭೂಸುಧಾರಣೆ ಬೇಸಾಯದ ಸಲಕರಣೆಗಳ ಪೂರೈಕೆ ಕೈಗಾರಿಕೆಗಳಲ್ಲಿ ತರಬೇತು ಮತ್ತು ಆರ್ಥಿಕ ನೆರವುಗಳ ಮೂಲಕ ಹಿಂದುಳಿದ ಜನಾಂಗಗಳ ಜನ ಮುಂದುವರಿಯುವಂತೆ ಯತ್ನಿಸಲಾಗುವುದು.ಅವರ ಶಾರೀರಿಕ ದುಡಿಮೆಗೆ ತಕ್ಕ ಫಲ ಸಿಗಬೇಕೆಂಬ ದೃಷ್ಟಿಯಿಂದ ಈ ಜನಾಂಗಗಳ ಜನರುಳ್ಳ ಸಹಕಾರಿ ಸಂಘಗಳ ರಚನೆಗೆ ಪ್ರೋತ್ಸಾಹ ನೀಡಲಾಗುತ್ತಿದೆ.ಅಹಮದಾಬಾದ್ ಸೂರತ್,ರಾಜಕೋಟೆ,ಡಾಹೋದ ವಡೋದರ,ಸುರೇಂದ್ರನಗರ,ಜುನಾಗಢ,ಪೋರ್ಬಂದರ್,ಫಾನ್ಸಾ,ಮೆಹೆಸಾನಾ,ಮಾಂಡವಿ ಮತ್ತು ಭಾವನಗರಗಳಲ್ಲಿರುವ