ಪುಟ:Mysore-University-Encyclopaedia-Vol-6-Part-7.pdf/೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಗುಜರಾತಿನ ವಾಸ್ತು,ಶಿಲ್ಪ ಭಾವೆ ಪ್ಯಾರಾ ಮಠದ ಸಮೀಪದಲ್ಲಿ ಚೈತ್ಯವಿಹಾರಗಳ ಮೂರು ಸಾಲುಗಳುಂಟು.ಚೈತ್ಯದ್ದು ಗಜಪೈಷ್ಠಾಕೃತಿ.ಉಳಿದೆಲ್ಲವೂ ಸಾಮಾನ್ಯವಾಗಿ ಚತುರ್ಭುಜಾಕಾರದ ಕೋಣೆಗಳು.ಕೆಲವಕ್ಕೆ ಕಂಬಗಳುಳ್ಳ ಹೊರಾಂಗಣಗಳುಂಟು.ಎರಡರಲ್ಲಿ ಚೈತ್ಯಾಕಾರದ ಗವಾಕ್ಷಿಗಳಿವೆ. ಇವುಗಳಲ್ಲೊಂದರಲ್ಲಿ ಚೈನಧರ್ಮದ ಸಂಕೇತಗಳಾದ ಸ್ವಸ್ತಿಕ,ಭದ್ರಾಸನ, ನಂದಿಪಾದ,ಚೋಡಿಮೀನು,ಕಲಶ ಇವುಗಳ ಚಿಹ್ನೆಗಳಿವೆ.ಗಜಪೃಷ್ಠಾಕೃತಿಯ ಚೈತ್ಯ.ಪ್ರ.ಶ.ಪೂ. 2 ನೆಯ ಶತಮಾನದ್ದಿರಬಹುದು.ಉಳಿದವುಗಳ ನಿರ್ಮಾಣ ಪ್ರ.ಶ.200-300ರ ಕಾಲದಲ್ಲಿ ಆಹಿರಬಹುದು. ಇದೇ ಸ್ಧಳದ ಉಪರಕೋಟದಲ್ಲಿರುವ ಕೊರೆದ ಕಲ್ಲಿನ ಚೈತ್ಯ ಎರಡು ಅಂತಸ್ತುಗಳುಳ್ಳದ್ದು.ಮೊದನೆಯದರಲ್ಲಿ 3.30 ಮೀ ಚದರದ ಒಂದು ಕುಂಡವಿದೆ.ಇದರ ಮೂರು ಬದಿಗಳಲ್ಲಿ ಅಂಗಳವಿದೆ. ಅಂಗಳದ ಬದಿಯಲ್ಲಿ ಕುಳಿತುಕೊಳ್ಳಲು ಆಸನವುಳ್ಳ ಗೂಡುಗಳುಂಟು.ಉಳಿದ ಬದೆಯಲ್ಲಿ ವಿಶಾಲವಾದ ಕಂಬಗಳುಳ್ಳ ಕೋಣೆಯಿದೆ.ಆಲ್ಲಲ್ಲಿ ಸುಂದರವಾದ ಪ್ರಾಣಿಗಳ,ಹೂವುಗಳ ಚಿತ್ರಗಳುಂಟು.ಕಂಬಗಳ ವೈವಿಧ್ಯದಿಂದ ಇವೆಲ್ಲವೂ ಪ್ರ.ಶ.1-7ನೆಯ ಶತಮಾನಗಳಲ್ಲಿ ಆಗಿರಬಹುದೆಂದು ತೋರುವುದು.ತಲಾಜಾದಲ್ಲಿರುವ 30 ಕೊರೆದ ಚೈತ್ಯ ವಿಹಾರಗಳು ಇವುಗಳನ್ನು ಹೆಚ್ಚು ಕಡಿಮೆ ಹೋಲುವುವು.ಇವುಗಳಲ್ಲಿ ಒಅದು ಚೈತ್ಯದ ಗವಾಕ್ಷಿಯ ಆಕಾರ ವಿಶಿಷ್ಟವಾಗಿದೆ.ಸಾನಾದಲ್ಲಿ ಇಂಧ ಸುಮಾರು62 ಕೊರೆದ ಗುಹಾಚೈತ್ಯ ವಿಹಾರಗಳಿವೆ.ಧಾಂಕದಲ್ಲಿಯ ಗುಹಾಚೈತ್ಯಗಳಲ್ಲಿ ಮೂರ್ತಿಗಳೂ ಕೆತ್ತಲ್ಪಟ್ಟಿವೆ. ಗುಪ್ತರ ಕಾಲದ ಯಾವ ವಿಧವಾದ ಕಟ್ಟಡಗಳೂ ಬೆಳಕಿಗೆ ಬಂದಿಲ್ಲ.ಸ್ಕಂದ ಗುಪ್ತನ ಪ್ರಾಂತ್ಯಧಿಕಾರಿಯಾಗಿದ್ದ ಚಕ್ರಪಾಲಿತ ಗಿರ್ನಾರಿ ನಲ್ಲಿ ವಿಷ್ಣುದೇವಾಲಯವನ್ನು ಕಟ್ಟಿಸಿದ್ದನೆಂಬುದಕ್ಕೆ ಅಲ್ಲಿಯ ಶಾಸನದಲ್ಲಿ ಉಲ್ಲೇಖವಿದೆ.ಅಲ್ಲಿಯ ದಾಮೋದರ ಮಂದಿರದಲ್ಲಿ ಇದರ ಅವಶೇಷಗಳಿರಬಹುದು. ಗುಪ್ತರ ಅನಂತರ ಚಾಳುಕ್ಯರ ಕಾಲದವರೆಗೆ ದೇವಾಲಯದ ವಾಸ್ತುಶಿಲ್ಪದಲ್ಲಿ ಬೆಳೆವಣೆಗೆ ಯಾಗುತ್ತ ಚಾಳುಕ್ಯರ ಕಾಲದಲ್ಲಿ ಆದು ತನ್ನದೇ ಆದ ಸುಸ್ವಷ್ಟವಾದ ಶೈಲಿಯಾಗಿ ಮಾರ್ಪಟ್ಟಿತು.ಚಾಳುಕ್ಯರ ಶೈಲಿಯ ಪೂರ್ವದ ಬೆಳೆವಣಿಗೆಯನ್ನು ಗೊಪ್,ವಿಸಾವಾದ,ಬಿಲೇಸ್ವರ್,ಸುತ್ರಪಾದ,ಧಾನ್ ಮತ್ತು ಕದ್ವಾರದಲ್ಲಿಯ ದೇವಾಲಯಗಳಲ್ಲಿ ಕಾಣಬಹುದು.ಗೊಪ್ ದಲ್ಲಿಯ ದೇವಾಲಯ ಹಳೆಯದು ಮತ್ತು ಬಲು ಸರಳವಾದ್ದು.ಇದು ಎರಡು ಪ್ರಾಕಾರಗಳಿಂದ ಸುತ್ತುವರಿಯಲ್ವಟ್ಟಿದೆ.ಪ್ರಾಕಾರದ ಒಂದು ಬದಿಯಲ್ಲಿ ಮಂಟಪವಿದೆ.ಇದರ ದ್ವಾರದ ಚೌಕಟ್ಟಿನ ಕೆಳಗಿನ ಬದಿಯಲ್ಲಿ ಗಂಗೆ-ಯಮುನೆಯರ ಮೇಲೆ ಸೂರ್ಯ,ಬ್ರಹ್ಮ,ವಿಷ್ಣು,ಶಿವ ಮತ್ತು ಬಹುಶಃ ಚಂದ್ರನ ಮೂರ್ತಿಗಳ ಸಾಲು ಇದೆ. ಇದೇ ಕಾಲದ ಲಿಂದರ್ ಖೇಡ್,ಸೋನ್ ಕನ್ಸಾರೀ ಮತ್ತು ಪಾಸ್ತರ ದೇವಾಲಯಗಳು ಶಿಖರದ ಶೈಲಿಯಲ್ಲಿ ಇತರ ದೇವಾಲಯಗಳಿಗಿಂತ ಭಿನ್ನವಾದಂಧವು. ಒಟ್ಟಿನಲ್ಲಿ ಈ ಕಾಲದ ದೇವಾಲಯಗಳನ್ನು ಆವುಗಳ ವಾಸ್ತುಶಿಲ್ಪ ಲಕ್ಷಣದ ಮೇರೆಗೆ ವಿಸಾವಾದ-ಧಾನ್ ಮತ್ತು ಕದ್ವಾನ್-ಪಾಸ್ತಾರ್ ಎಂದು ಎರಡು ಪಂಗಡಗಳಾಗಿ ವಿಂಗಡಿಸಬಹುದು. ಕ್ರಮೇಣ,ಚಾಳುಕ್ಯರ ಕಾಲದಲ್ಲಿ ದೇವಾಲಯದ ನಿರ್ಮಾಣದಲ್ಲಿ ಒಂದು ವಿಶಿಷ್ಟ ಶೈಲಿ ವಿಕಾಸ ಹೊಂದಿತು.ಈ ಕಾಲದ ಕಟ್ಟಡಗಳನ್ನು ಕೋಟೆಗಳು,ಹೆಬ್ಬಾಗಿಲುಗಳು,ಸರೋವರಗಳು,ದೇವಾಲಯಗಳು,ತೋರಣಗಳೆಂದು ವಿಭಾಗಿಸ ಬಹುದು.ಶಾಸನಗಳಲ್ಲಿ ಪ್ರಾಕಾರಗಳೆಂದು ಕರೆಯಲಾದ ಕೋಟೆಗಳು ಕ್ರಮೇಣ ಹಾಳಾಗಿ ಈಗ ಆಲ್ಲಲ್ಲಿ ದಿಬ್ಬಗಳಾಗಿ ಕಾಣುತ್ತವೆ.ದಾಭೋಯಿಕೋಟೆಯ ನಿರ್ಮಾಣ ಪ್ರಾಯಶಃ ಜಯಸಿಂಹ ಸಿದ್ದರಾಜ ಮತ್ತು ಆವನ ಹಿಂದಿನವ ರಿಂದ ಪ್ರಾರಂಭವಾಗಿ ವಾಘಲಾರಾಜನಾದ ವಿಸಾಲಿ ದೇವನ(1244-61)ಕಾಲದವರೆಗೂ ಮುಂದುವರಿಯಿತು.ವಸ್ತುಪಾಲಚರಿತ ಎಂಬ ಗ್ರಂಧದ ಪ್ರಕಾರ ವಸ್ತುಪಾಲನ ಸಹೋದರನಾದ ತೇಜಪಾಲ ಮತ್ತು ವಾಘೇಲದ ರಾಜ ವೀರಧವಲನ ಮಂತ್ರಿ ಈ ನಗರದ ಪ್ರಾಕಾರವನ್ನು ಕಟ್ಟಿಸಿದರು.ಈಗ ಇದರ ನಾಲ್ಕು ಬದಿಗಳಲ್ಲಿಯ ಹೆಬ್ಬಾಗಿಲುಗಳು ಉಳಿದಿವೆ. ವಡೋದರದ ಕೋಟೆಯ ಹೆಬ್ಬಾಗಿಲಿನ ಕಂಬಗಳು ಸುಂದರವಾದ ಚಿತ್ರಗಳಿಂದಲೂ ಮೂರ್ತಿಗಳಿಂದಲೂ ಆಲಂಕೃತವಾಗಿವೆ.ಝಿಂಜೂವಾದ, ಗುಮ್ಲಿ,ಜುನಾಗಢಗಳಲ್ಲಿಯೂ ಇಂಧ ಕೋಟೆಗಳ ಆವಶೇಷಗಳಿವೆ. ಮಹಾರಾಣಿ ಮಯಣಲ್ಲದೇವಿ ಕಟ್ಟಿಸಿದ(1,100),ವಿರಂಗಾಮಿನಲ್ಲಿಯ ಮಾನಸರ್ ಸರೋವರ ಪ್ರಾಯಶಃ ಶಂಖಾಕೃತಿಯದು;ಇಳಿಯಲು ಹಾಗೂ ಮೇಲೇರಲು ಹಲವು ದಾರಿಗಳಿಂದ ಕೂಡಿದ್ದು.ಘಾಟನಲ್ಲಿ ಈಗ ಸುಮಾರು 357 ಸಣ್ಣ ಶೈವ ವೈಷ್ಣವ