ಪುಟ:Mysore-University-Encyclopaedia-Vol-6-Part-7.pdf/೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಗುಣಕ, ಗೀಗರ್- ಮೂಲ್ಲರ್- ಗುಣಗಳು

ಉದಾಹರಣೆಯನ್ನು ಕೊಡಬಹುದು. ರಾಶ್ಟ್ರೀಯ ವರಮಾನ ರೂ. ೧೦೦ ಕೋಟಿ ಯಾಗಿದ್ದು. ಅದರಲ್ಲಿ ರೂ. ೮೦ ಕೋಟಿಯನ್ನು ಅನುಭೋಗಕ್ಕಗಿಯೂ ರೂ. ೨೦ ಕೋಟೆಗಳನ್ನು ಉತ್ಪಾದನೆಯ ಮೇಲೂ ಖರ್ಚು ಮಾಡಲಾಗುತ್ತಿರಬಹುದು. ಅನುಭೋಗ ಪ್ರವ್ರುತ್ತಿ ಮತ್ತು ವಿನಿಯೋಜನೆಗಳು ಸ್ಥಿರವಾಗಿರುವವರೆಗೆ ರೂಶ್ತ್ರೀಯ ವರಮಾನದಲ್ಲಿ ಯಾವ ಬದಲಾವಣೆಯೂ ಆಗುವುದಿಲ್ಲ.

ಯಾವುದೇ ಕಾರಣದಿಂದ ವಿನಿಯೋಜನೆ ರೂ. ೧೦ ಕೋಟಿಗಳಶ್ಟು ಹೆಚ್ಚಿದಾಗ ಉಟ್ಟು ವಿನಿಯೋಜನೆ ರೂ. ೩೦ ಕೋಟಿ ಆಗುತ್ತದೆ. ಇದರಿಂದ ರೂಸ್ಟ್ರೀಯ ವರಮಾನದ ಮೇಲೆ ಯಾವ ಬದಲಾವಣೆಯಾಗುತ್ತದೆ ಎಂಬುದನ್ನು ನೋಡಬೇಕು. ರೂ. ೧೦ ಕೋಟಿಗಳ ಹೆಚ್ಚು ವಿನಿಯೋಜನೆಯಿಂದ ಬಂಡವಾಳ ಸರಕುಗಳ ಉತ್ಪಾದನೆಯಲ್ಲಿ ನಿರತರಾದವರ ವರಮಾನ ರೂ. ೧೦ ಕೋಟಿಗಳಶ್ತು ಅಧಿಕವಾಗುತ್ತದೆ. ಅವರ ವರಮಾನ ಅಧಿಕವಾಗುವುದರಿಂದ ಅವರು ಅನುಭೋಗ ಸರಕುಗಳ ಮೇಲೆ ಮಾಡುವ ಖರ್ಚು ಸೀಮಾಂತ ಅನುಭೋಗ ಪ್ರವ್ರುತ್ತಿ. ಸೀಮಾಂತ ಅನುಭೋಗ ಪ್ರವ್ರುತ್ತಿ ವರಮಾನದ ೧/೩ ಅಥವಾ ೦.೫ ಎಂದು ಭಾವಿಸಬಹುದು. ಬಂಡವಾಳ ಸರಕುಗಳನ್ನು ವಿಕ್ರಯಿಸಿ ಬಂದ ರೂ.೧೦ ಕೋಟಿ ವರಮಾನದಲ್ಲಿ ರೂ. ೫ ಕೋಟಿ ಅನುಭೋಗಕ್ಕಾಗಿ ಖರ್ಚಾಗುತ್ತದೆ. ಆಗ ಅನುಭೋಗ ಸರಕುಗಳ ಉತ್ಪಾದಕರ ವರಮಾನ ರೂ. ೫ ಕೋಟಿಗಳಶ್ತು ಅಧಿಕವಾಗುತ್ತದೆ. ಆದರೂ ರೂ. ೫ ಕೋಟಿಗಳ ೧/೨ ಭಾಗವನ್ನು ಅಂದರೆ ೨.೫ ಕೋಟಿ ರೂಪಾಯಿಗಳನ್ನು ಅನುಭೋಗಕ್ಕಗಿ ಖರ್ಚು ಮಾಡುತ್ತಾರೆ. ವರಮಾನದ ಮೊತ್ತ ಬರಿದಾಗುವವರೆಗೆ ಇದೇ ಬಗೆಯ ಪ್ರಕ್ರಿಯೆ ಮುಂದುವರೆಯುತ್ತದೆ. ಹೀಗೆ ಜನರು ತಮ್ಮ ವರಮಾನ ಹೆಚ್ಚಿದಂತೆಲ್ಲಾ ಅದರ ೧/೨ ಭಾಗವನ್ನು ಅನುಭೋಗದ ಮೇಲೆ ಖರ್ಚು ಮಾಡುತ್ತ ಹೋದರೆ ಕೊನೆಯಲ್ಲಿ ಉಟ್ಟು ವರಮಾನ ರೂ. ೨೦ ಕೋಟಿಗಳಶ್ತು ಅಧಿಕವಾಗುತ್ತದೆ. (೧೦+೫+೨.೫+೧.೨೫+೦.೬೨೫+೦.೩೧೨೫+೦.೧೫೬೨೫....) ಎಂದರೆ ರೂ. ೨೦ ಕೋಟಿಗಳ ವರೆಗೆ ವಿಸ್ತರಣೆಯಾಗುತ್ತದೆ. ಇದರಲ್ಲಿ ರೂ. ೧೦ ಕೋಟಿ ಪ್ರಾಥಮಿಕ ವಿನಿಯೋಜನೆ ರೂ. ೧೦ ಕೋಟಿ ದ್ವಿತೀಯಕ ಅನುಭೋಗ ಪುನರ್ ಖರ್ಚು.

ಗುಣಕ ಮತ್ತು ಸೀಮಾಂತ ಅನುಭೋಗ ಪ್ರವ್ರುತ್ತಿ: ಗುಣಕದ ಬೆಲೆಗೂ ಸೀಮಾಂತ ಅನುಭೋಗ ಪ್ರವ್ರುತ್ತಿಗೂ ಇರುವ ಸಂಬಂಧ ನಿಕಟವಾದ್ದು. ಸೀಮಾಂತ ಅನುಭೋಗ ಪ್ರವ್ರುತ್ತಿ ಅಧಿಕವಾದರೆ ಗುಣಕವೂ ಅಧಿಕವಾಗುತ್ತದೆ. ವರಮಾನದ ಪ್ರಮಾಣ ಹೆಚ್ಚಾಗುತ್ತದೆ. ಸೀಮಾಂತ ಕಡಿಮೆಯಾದರೆ ಗುಣಕವೂ ಕಡಿಮೆಯಾಗುತ್ತದೆ. ವರಮಾನದ ಪ್ರಮಾಣವೂ ಕಡಿಮೆಯಾಗುತ್ತದೆ. ಗುಣಕ, ಸೀಮಾಂತ ಅನುಭೋಗ ಪ್ರವ್ರುತ್ತಿ ಇವುಗಳ ಸಂಬಂಧಗಳನ್ನು ಸೂಚಿಸುವ ಸಮೀಕರಣವನ್ನು ಮುಂದೆ ಕೋಟ್ಟಿದೆ. M=1/1-r

ಇಲ್ಲಿ  M= ಗುಣಕ, ಸೀಮಾಂತ ಅನುಭೋಗ ಪ್ರವ್ರುತ್ತಿ. ಕೇನ್ನನ ಗುಣಕ ತತ್ತ್ವದ ವಿರುದ್ಧವಾಗಿ ಮೂರು ಮುಖ್ಯ ಟೀಕೆಗಳುಂಟು: ೧ ವರಮಾನದ ಮೇಲೆ ಪ್ರಚೋದಿತ ಅನುಭೋಗದ ಪರಿಣಾಮವನ್ನು ಮಾತ್ರ ಗುಣಕ ಗಣನೆಗೆ ತೆಗೆದುಕೊಂಡು, ವಿನಿಯೋಜನೆಯ ಮೇಲೆ ಪ್ರಚೋದೆತ ಅನುಭೋಗದ ಪರಿಣಾಮವೇನೆಂಬುದನ್ನು ಕಡೆಗಣಿಸಿದೆ. ೨ ಕೇನ್ನನ ಗುಣಕ ತತ್ತ್ವ ನಿಂತಿರುವುದು ಎರಡು ಸಾಮಾನ್ಯ ಊಹೆಗಳ ಆಧಾರದ ಮೇಲೆ: ವರಮಾನಗಳನ್ನು ಅನುಭೋಗ ಅವಲಂಭಿಸಿದೆ ಎಂಬುದು ಉಂದು ಊಹೆ. ಆದ್ದರಿಂದ ವರಮಾನ ಅಧಿಕವಾದಾಗ ಅನುಭೋಗವೂ ಅಧಿಕವಾಗುತ್ತದೆ ಎನ್ನಲಾಗಿದೆ. ಸೀಮಾಂತ ಅನುಭೋಗ ಪ್ರವ್ರೌತ್ತಿ ವರಮಾನದ ಸಮಾನತೆಗಿಂತ ಕಡಿಮೆ ಇದ್ದು ಸ್ಥಿರವಾಗಿದೆ ಎಂಬುದು ಇನ್ನೊಂದು ಊಹೆ. ಆದರೆ ವಾಸ್ತವವಾಗಿ ವರಮಾನವನ್ನು ಅನುಭೋಗ ಅವಲಂಭಿಸಿರುವುದಿಲ್ಲ ಮತ್ತು ಸೀಮಾಂತ ಪ್ರವ್ರುತ್ತಿ ಸ್ಥಿರವಾಗಿರುವುದಿಲ್ಲ. ೩ ಕೇನ್ನನ ಗುಣಕ ತತ್ತ್ವ ಸ್ಥಿತ್ಯಾತ್ಮಕವಾದ್ದೇ ಹೊರತು ಚಲನಾತ್ಮಕವಾದ್ದಲ್ಲ.

ಕೇನ್ನನ ಗುಣಕ ತತ್ತ್ವದ ವಿರುದ್ಧ ಇರುವ ಟೀಕೆಗಳಲ್ಲಿ ಸತ್ಯಾಂಶವಿದ್ದರೂ ಆರ್ಧಿಕ ವಿಶ್ಲೇಶಣೆಯಲ್ಲಿ ಅದರ ಮಹತ್ವವನ್ನು ಯಾರೂ ಕಡೆಗಣಿಸುವಂತಿಲ್ಲ. ಆಇಧಿಕ ನಿಯಮಗಳ ಮೇಲೆ ಗುಣಕದ ಪ್ರಭಾವ ಬಹಳವಿದೆ. ಕೇನ್ಸ್ ಗುಣಕವನ್ನು ವರಮಾನ ವ್ರುದ್ಧಿ ವಿಶ್ಲೇಶಣೆಗೆ ಒಂದು ಪ್ರಮುಖ ಸಾಧನವಾಗಿಸಿದ್ದಾನೆ. ಕೇನ್ಸ್ ಗುಣಕದ ಆಧಾರದ ಮೇಲೆ ಮುಗ್ಗಟ್ಟಿನ ಸಮಯದಲ್ಲಿ ಸಾರ್ವಜನಿಕ ವಿನಿಯೋಜನೆಯನ್ನು ಪ್ರತಿಪಾದಿಸಿದ್ದಾನೆ. ವಿನಿಯೋಜನೆ ಅಧಿಕವಾದರೆ ವರಮಾನ ಅಧಿಕವಾಗುತ್ತದೆ ಮತ್ತು ಉಯೋಗಾವ ಕಾಶಗಳು ಹೆಚ್ಚಾಗುತ್ತವೆ ಎಂಬುದನ್ನು ಗುಣಕ ತತ್ವ ಸಾರುತ್ತದೆ. ಮೂಗ್ಗಟ್ಟಿನ ಕಾಲದಲ್ಲಿ ಸರ್ಕಾರ ಲೋಕೋಪಯೋಗ ಕಾರ್ಯಗಳಲ್ಲಿ ವಿನಿಯೋಜನೆಯನ್ನು ಹೆಚ್ಚಿಸುವುದರ ಮೂಲಕ ವರಮಾನ ಮತ್ತು ಉದೋಗಾವಕಾಶಗಳನ್ನು ಹೆಚ್ಚಿಸಬಹುದು. ವ್ಯಾಪಾರ ಅವರ್ತಗಳ ವಿವಿಧಾವಸ್ಥೆಗಳನ್ನು ವಿವರಿಸಲು ಗುಣಕ ವಿಧಾನ ಉಪಯುಕ್ತವಾಗಿದೆ.

ಗುಣಕ, ಗೀಗರ್- ಮುಲ್ಲರ್: ಆಯಾನಿಕರಿಸಲು ವಿಕಿರಣವನ್ನು ಅಳತೆ ಮಾಡುವ ಒಂದು ಉಪಕರಣ. ಸಂಕ್ಶೇಪವಾಗಿ ಜಿಎಂ ಗುಣಕ ಇಲ್ಲವೇ ಗೀಗರ್ ಗುಣಕ ಎಂದು ಹೇಳುವುದುಂಟು. ವಿಕಿರಣ ಪಟುತ್ವವನ್ನು ಪತ್ತೆ ಮಾಡುವಲ್ಲಿ ಇದರ ಪಾತ್ರ ಬಲು ಮುಖ್ಯ ವೇಗವಾಗಿ ಚಲಿಸುವ ವಿದ್ಯುದಾವಿಶ್ಕರಣ ಅನಿಲಗಳ ಮೂಲಕ ಹಾದುಹೋದಾಗ ಉಂಟಾಗುವ ಆಘಾತಗಳನ್ನು ಎಲೆಕ್ಟ್ರಾನಿಕ್ ಅವರ್ತಕಗಳಿಂದ ಗುರ್ತಿಸಿ ಎಣೆಸಬಹುದಾದ ಸಾಧ್ಯತೆಯ ಮೇಲೆಗುಣಕಗಳು ರಚಣೆಗೊಂಡಿವೆ. ಸಾಮಾನ್ಯವಾಗಿ ಗುಣಕಗಳಲ್ಲಿ ಕಡಿಮೆ ಒತ್ತಡದಲ್ಲಿರುವ ಆರ್ಗಾನ್ ಅಥವಾ ಯಾವುದಾದರೂ ಒಂದು ಹ್ಯಾಲೋಜೆನ್ನಿನಿಂದ ತುಂಬಿದ ಗಾಜಿನ ಕೋಳವೆಯಲ್ಲಿ ಕೊಳವೆಯ ಒಳಪದರಕ್ಕೆ ಸೇರಿದಂತೆ ವರ್ತುಲ ಸ್ತಂಭಾಕ್ರುತಿಯ, ತಾಮ್ರ ಅಥವಾ ಆಲ್ಯೂಮೀನಿಯಮಿನ ಋಣ ವಿದ್ಯುತ್ ಧ್ರುವವೂ ಋಣ ವಿಧ್ಯುತ್ ಧ್ರುವದ ಅಕ್ಶರದಲ್ಲಿ ಹಾದು ಹೋಗುವ ಟಂಗ್ಸ್ಟನ್ ತಂತಿಯ ಧನವಿದ್ಯುತ್ ಧ್ರುವವೂ ಇರುತ್ತದೆ. ಸುಮಾರು ೧೦೦೦ ವೋಲ್ಟುಗಳನ್ನು ವಿಭವದಲ್ಲಿ ಇಟ್ಟು ಯಾವುದಾದರೂ ಒಂದು ವಿದ್ಯುದಾವಿಶ್ಕರಣವನ್ನು ಗುಣಕದಲ್ಲಿ ಕಳುಹಿಸಿದಾಗ ಅದು ಅನಿಲದ ಅಣುಗಳೊಡಣೆ ಘರ್ಶ್ಃಇಸಿ ಅವನ್ನು ಅಯಾನೀಕ್ರುತ ಕಣಗಳನ್ನಾಗಿ ಮಾರ್ಪಡಿಸುತ್ತದೆ. ಹೆಚ್ಚಿನ ವಿಭವದಲ್ಲಿರುವುದರಿಂದ ಎಲೆಕ್ಟ್ರಾನುಗಳು ಹೆಚ್ಚಿನ ಶಕ್ತಿಯನ್ನು ರೂಧಿಸಿಕೊಂಡು ಟಂಗ್ಸ್ಟನ್ ತಂತಿಯನ್ನು ತಲುಪುವ ಮುಂಚೆ ಮತ್ತೆ ಅನಿಲದ ಅಣುಗಳೊಡನೆ ಅನುಕ್ರಮ ಘರ್ಶ್ಃಅಣೆಯಿಂದ ಎಲೆಕ್ಟ್ರಾನುಗಳ ಪ್ರವಾಹವನ್ನೇ ಉಂಟು ಮಾಡುತ್ತದೆ. ಎಲೆಕ್ಟ್ರಾನ್ ಸಮೂಹಗಳಿಂದಾದ ವಿದ್ಯುದಾಘಾತಗಳನ್ನು ಪ್ರವರ್ಧಿಸಿ ಅವನ್ನು ವಿದ್ಯುದ್ಯಂತ್ರಗಳಿಂದ ದಾಖಲೆ ಮಾಡಬಹುದು ಅಥವಾ ಧ್ವನಿವರ್ಧಕಗಳಲ್ಲಿ ಶಬ್ದದ ರೂಪದಲ್ಲಿ ಆಲಿಸಬಹುದು.

ಗುಣಕಗಳ ಪರಿಣಾಮ, ಅವುಗಳಲ್ಲಿ ಉಪಯೋಗಿಬೇಕಾದ ಲೋಹ, ತುಂಬೆರಬೇಕಾದ ಅನಿಲ ಮುಂತಾದವು ಆ ಗುಣಕಗಳನ್ನು ಉಪಯೋಗಿಸುವ ರೀತಿಯ ಅನುಕೂಲಕ್ಕೆ ಸಂಬಂಧಪಟ್ಟಿರುತ್ತವೆ. ಗುಣಕದ ಗಕ್ಶತಮ ಕಾರ್ಯ ಸಾಮರ್ಥ್ಯ ಪೀತ ವಿಭವರೇಖೆಯ ಸಂವಾದಿಯಾಗಿರುವ ವಿಭವದಲ್ಲಿ ಇರುತ್ತದೆ.

ಗುಣಕಗಳನ್ನು ಕೈಗಾರಿಕೆಯಲ್ಲಿ, ಖನಿಜ ಪರಿಶೋಧನೆಯಲ್ಲಿ ಮತ್ತು ವೈಜ಼ಾನಿಕ ಸಂಶೋಧನೆಗಳಲ್ಲಿ ಬಹಳವಾಗಿ ಉಪಯೋಗಿಸುತ್ತಾರೆ.

ಗುಣಗಳು: ಸಾಂಖ್ಯದ ಪ್ರಕಾರ ಗುಣಗಳು ಮೂರು- ಸತ್ವ, ರಜಸ್ಸು ಮತ್ತು ತಮಸ್ಸು. ಇವನ್ನು ಕುರಿತ ಪ್ರಕ್ರಿಯೆ ಆ ದರ್ಶನದಲ್ಲಿ ಬಹು ಮುಖ್ಯವಾದುದು. ಗುಣಗಳ ಸಾಮ್ಯಾವಸ್ಥೆ ಎನ್ನುವುದೇ ಪ್ರಕೃತಿ. ಪುರ್ಶನ ಸಂಯೋಗದಿಂದ ಈ ಸಮ್ಯಾವಸ್ಥೆ