ಪುಟ:Mysore-University-Encyclopaedia-Vol-6-Part-7.pdf/೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಗುಂಪು ಮದುವೆ ಸಾರ್ವಜನಿಕರು : ಸಾರ್ವಜನಿಕರೆಂದರೆ ಸಮಾಜದ ಪ್ರತಿಯೊಬ್ಬರೂ ಎಂದು ಅರ್ಥವಲ್ಲ. ಅದು ಯಾವುದಾದರೊಂದು ಸಮಾನ ಆಸಕ್ತಿಯನ್ನು ಉಳ್ಳ ಜನರ ಅಸಂಘಟಿತ ಮತ್ತು ಚದರಿದ ಗುಂಪು.ಸಾಮಾನ್ಯವಾಗಿ ವಿವಾದಾಸ್ಪದ ವಿಷಯವೊಂದಕ್ಕೆ ಸಂಬಂಧಿಸಿದಂತೆ ಇರುವ ಅನೇಕ ವ್ಯಕ್ತಿಗಳ ಚದರಿದ ಮತ್ತು ಅಸಂಘಟಿತ ಸಂಕಲನಕ್ಕೆ ಸಾರ್ವಜನಿಕರು ಎನ್ನಬಹುದು.ಇಲ್ಲಿ ಸುಸಂಘಟಿತವಾದ ಗುಂಪಿನ ರಚನೆಯಿಲ್ಲ;ಅಧಿಕಾರಿಗಳ್ಳಿಲ್ಲ; ಏಣಿಶ್ರೆಣಿಯಿಲ್ಲ. ಜನಸಂದಣಿಯಲ್ಲಿರುವಂತೆ ವ್ಯಕ್ತಿಗಳು ಒಂದೆಡೆಗೆ ಸೇರಿರುವುದಿಲ್ಲ. ಒಬ್ಬ ದೇಶದ ಒಂದು ಮೂಲೆಯಲ್ಲಿದ್ದರೆ ಇನ್ನೊಬ್ಬ ನೂರಾರು ಮ್ಯೆಲಿಗಳ ದೂರದ ಮತ್ತೊಂದು ಮೂಲ್ಲೆಯಲ್ಲಿ ಇರಬಹುದು. ಅವರ ನಡುವಿನ ಸಂಪರ್ಕ ತೀರ ಅತ್ಯಲ್ಟ; ಇರುವಷ್ಟು ಸಂಪರ್ಕ ಕೂಡ ಪರೋಕ್ಶವಾದುದು. ಸಾರ್ವಜನಿಕ ಸಂಪರ್ಕದ ಮಾದ್ಯಮಗಳಾದ ರೇಡಿಯೊ,ಟೆಲಿವಿಷನ್,ವಾರ್ತಾಪತ್ರಿಕೆಗಳ ಮೂಲಕವೇ ಅವರು ತಮ್ಮ ಸಮಾನ ಆಸಕ್ತಿಗಳನ್ನು ಗುರುತಿಸಿಕೊಳುತ್ತಾರೆ. ಆ ಕಾರಣದಿಂದಲೇ ಗ್ಯಾಬ್ರಿಯೆಲ್ ತಾರ್ಡ್ ಎಂಬಾತ ಸಾರ್ವಜನಿಕರು ಮುದ್ರಣಾಲಯದ ಸೃಷ್ಟಿಗಳೆಂದು ಕರೆದಿದ್ದಾನೆ. ಸಾರ್ವಜನಿಕರು ಹೆಚ್ಚು ಕಡಿಮೆ ಜನಸಂದಣಿಯಂತೆಯೇ ವರ್ತಿಸುತ್ತಾರೆ. ಆದರೂ ಈ ಎರಡು ಗುಂಪುಗಳ ನಡುವೆ ಕೆಲವು ಭೇದಗಳಿವೆ. ಭಾವೋದ್ವೇಗ ,ಚಂಚಲತೆಗಳಂಥ ಗುಣಗಳಿದ್ದರು ಸಾರ್ವಜನಿಕರಲ್ಲಿ ವಾದಮಂಡನೆ,ಚರ್ಚೆ,ವಿವೇಚನೆ,ಭಿನ್ನಾಭಿಪ್ರಾಯಗಳಿಗೆ ಸಾಕಷ್ಟು ಅವಕಾಶವಿದೆ.ಜನಸಂದಣಿಯಲ್ಲಿ ಇದು ಸಾಧ್ಯವಿಲ್ಲ. ಅಲ್ಲಿ ಮನಸ್ಸಿಗೆ ಅವೇಗ ಹೆಚ್ಚು; ರಭಸ ಹೆಚ್ಚು ಇದಲ್ಲದೆ ನಾವು ಏಕಕಾಲಕ್ಕೆ ಅನೇಕ ಸಾರ್ವಜನಿಕ ಗುಂಪುಗಳಿಗೆ ಸೇರುವ ಸಾಧ್ಯತೆ ಇದೆ. ಆದರೆ ಒಮ್ಮೆಗೆ ಒಂದೇ ಜನಸಂದಣಿ===ಯನ್ನು ಸೇರಲು ಮಾತ್ರ ಸಾಧ್ಯ. ನಮ್ಮ ಆಸ್ಥೆಗಳು ಬೆಳೆಯುತ್ತಿರುವ ಹಾಗೆಯೇ ನಾವು ಅನೇಕ ಸಾರ್ವಜನಿಕರ ಗುಂಪುಗಳ ಸದಸ್ಯರಾಗುತ್ತೇವೆ ಯುದ್ಧ ತೆರಿಗೆ, ಸಾರ್ವಜನಿಕ ಆರೋಗ್ಯ,ಬೆಲೆನಿಯಂತ್ರಣ,ಚಂದ್ರಲೋಕ ಯಾತ್ರೆ ನದಿಗಳ ನೀರಿನ ಹಂಚಿಕೆ,ರಾಜ್ಯಗಳ ಪುನರ್ಘಟನೆ-ಹೀಗೆ ಅನೇಕ ಸಾರ್ವಜನಿಕ ವಿಚಾರಗಳು ತತ್ಸಂಬಂಧದ ಸಾರ್ವಜನಿಕರನ್ನು ಸೃಷ್ಟಿಸುತ್ತವೆ. ಒಟ್ಟಿನಲ್ಲಿ ಸಾರ್ವಜನಿಕರೆಂದರೆ ಸಾರ್ವಜನಿಕ ವಿಚಾರವೊಂದರ ಸುತ್ತ ಇರುವ ಜನರ ಗುಂಪು.ಸಾರ್ವಜನಿಕ ಸಂಪರ್ಕ ಮಾಧ್ಯಮಗಳಿಂದ ಈ ಗುಂಪು ಹೆಣೆಯಲ್ಪಟ್ಟಿದೆ.ಇಲ್ಲಿ ಚರ್ಚೆ ವಿವೇಚನೆಗಳಿಗೆ ಹೆಚ್ಚು ಅವಕಾಶವಿದೆ. ಪ್ರಜಾಪ್ರಭುತ್ವದಲ್ಲಿ ಈ ಗುಂಪುಗಳು ಬಹಳ ಮಹತ್ತ್ವ ಪಡೆದಿವೆ. ಈಗ ಅಭಿಪ್ರಾಯಗಳು ಒಂದು ಚಿಕ್ಕ ಸಮುದಾಯಕ್ಕೆ ಸೀಮಿತವಾಗದೆ ವಿಶ್ವವ್ಯಾಪ್ತಿಯಾಗುತ್ತಿವೆ. ಮುದ್ರಣಾಲಯ ಮತ್ತು ಸಾರ್ವಜನಿಕ ಸಂಪರ್ಕ ಮಾಧ್ಯಮಗಳು ಬೆಳೆದಂತೆಲ್ಲ ಸಾರ್ವಜನಿಕರ ಗುಂಪುಗಳು ವಿಸ್ತಾರವಾಗುತ್ತಲೂ ವ್ಯೆವಿಧ್ಯಮಯ ವಾಗುತ್ತಲೂ ಇವೆ.ಇವರ ಅಭಿಪ್ರಾಯವೇ ಉದ್ದಿಮೆಯೊಂದನ್ನು ಉಳಿಸಬಹುದು ಅಥವಾ ಅಳಿಸಬಹುದು. ಯುದ್ಧದ ಕಿಡಿ ಹೊತ್ತಿಸಬಹುದು ಅಥವಾ ಸರಕಾರವೊಂದನ್ನು ಉರುಳಿಸಬಹುದು. ಜನಸ್ತೋಮಗಳು:ಜನಸಂದಣಿಗಳಂತಿರುವ,ಆದರೆ ಕೆಲವು ಸಂಗತಿಗಳಲ್ಲಿ ಅವುಗಳಿಗಿಂತ ಭಿನ್ನವಾಗಿರುವ,ಕೆಲವು ಸಂಕಲನಗಳನ್ನು ಜನಸ್ತೋಮಗಳೆಂದು ಕರೆಯುತ್ತಾರೆ.ಆನೇಕ ಜನ ಒಂದು ಸಾಮಾನ್ಯವಾದ ಪ್ರಚೋದಕ ವಸ್ತುವಿನ ಬಗೆಗೆ ಒಂದೇ ರೀತಿಯಲ್ಲಿ ವ್ಯಕ್ತಿಗತವಾಗಿ ವರ್ತಿಸುತ್ತಾರೆ.ಉದಾಹರಣೆಗೆ,ಎಲ್ಲೋ ಒಂದೆಡೆ ಧಾರಾಳವಾಗಿ ವಜ್ರವೋ ಚಿನ್ನವೋ,ಪುಕ್ಕಟೆ ಭೂಮಿಯೋ ಸಿಗುತ್ತದೆಂದು ವಂದತಿ ಹಬ್ಬಿ ಲಕ್ಷಗಟ್ಟಲೆ ಜನ ಉಳಿದವರ ಹಾಗೆ ಅವುಗಳ ಬೆನ್ನು ಹತ್ತಿ ಓಡಿಹೋದದ್ದನ್ನು,ವಿಚಿತ್ರವಾಗಿ ವರ್ತಿಸಿದ್ದನ್ನು ಕೇಳಿದ್ದೇವೆ.ಹಾಗೆಯೇ ತಾತ್ಕಾಲಿಕ ಫ್ಯಾಷನ್ನುಗಳನ್ನು ವಿಚಿತ್ರ ಪದ್ಧತಿಗಳನ್ನು ಇತರರಂತೆ ಅನುಸರಿಸುವ ಸಾವಿರಾರು ಜನರಿದ್ದಾರೆ. ಇತರರು ದೇಶ ಬಿಟ್ಟರೆಂದು ತಾವೂ ಬಿಡುವ ಜನರಾಶಿಗಳಿವೆ. ಇತರರಂತೆ ಸುದ್ದಿಗಳಿಗೆ ಕಾಯುವ ಲಕ್ಷಗಟ್ಟೆಲೆ ಜನರಿದ್ದಾರೆ.ಇವರೆಲ್ಲ ಒಂದು ಸುಸಂಘಟಿತ ಗುಂಪಿಗೆ ಸೇರಿದ ಜನರಲ್ಲ.ಇವರು ಬೇರೆ ಬೇರೆ ವರ್ಗಗಳಿಗೆ ಹಾಗೂ ಸಾಂಸ್ಕೃತಿಕ ಮಟ್ಟಗಳಿಗೆ ಸೇರಿದವರು.ಇವರು ಪರಸ್ಪರ ಸಂಪರ್ಕ ಹೊಂದಿರುವುದಿಲ್ಲ. ಅನಾಮಧೇಯರಾಗಿದ್ದು.ಒಬ್ಬರಿಗೊಬ್ಬರು ಅಪರಿಚಿತರಾಗಿದ್ದು,ತಮ್ಮಷ್ಟಕ್ಕೆ ನಾವು ಸಮಾನರೀತಿಯಿಂದ ವರ್ತಿಸುತ್ತಾರೆ.ಇವರು ಜನಸಂದಣೀಯ ವ್ಯಕ್ತಿಗಳಂತೆ ಏಕತ್ರವಿರುವುದಿಲ್ಲ.ಸಾಮೂಹಿಕವಾಗಿ ವರ್ತಿಸುವುದೂ ಇಲ್ಲ.ಒಬ್ಬ ವ್ಯಕ್ತಿ ಇನ್ನೊಬ್ಬನಿಗೆ ಯಾವುದೇ ರೀತಿಯಿಂದ ಅಂಟಿಕೊಂಡಿಲ್ಲ.ಅವನಿಗೆ ನಿಶ್ಚಿತ ಅಂತಸ್ತು ಪಾತ್ರಗಳಿಲ್ಲ.ಆತ ಪ್ರತ್ಯೇಕಿತ, ಅನಾಮಧೇಯ,ಹೀಗಾಗಿ ತನ್ನಷ್ಟಕ್ಕೆ ನಾನು ವರ್ತಿಸಲು ಸ್ವತಂತ್ರ್ಯ ನಗರೀಕರಣ ಮತ್ತು ಔದ್ಯೋಗೀಕರಣದೊಡನೆ ಬಂದ ಸಾಮಾಜಿಕ ಸನ್ನಿವೇಶಗಳಲ್ಲಿ ಜನಸ್ತೋಮಗಳು ಬೆಳೆದಿವೆಯೆಂದು ಹೇಳುತ್ತಾರೆ.ರೇಡಿಯೋ,ಟೆಲಿವಿಷನ್,ಚಲನಚಿತ್ರಗಳು,ಹೊಸ ವಿದ್ಯಾಕ್ರಮಗಳು,ಪ್ರಚಾರ ಸಾಧನಗಳು,ವಲಸೆಗಳು,ದೊಡ್ಡದೊಡ್ಡ ಕಾರ್ಖಾನೆಗಳು,ಬೀದಿಗಳು ನಮ್ಮನ್ನು ಚಿಕ್ಕ ಪರಿಚಿತ ಲೋಕಗಳಿಂದ ವಿಶಾಲವಾದ ಅಪರಿಚಿತ ಲೋಕಗಳತ್ತ ಒಯ್ಯುತ್ತಿವೆಯೆಂದು ನಾವು ಹತ್ತಿರದ ಕುಟುಂಬ,ನೆರೆಹೊರೆಗಳಂಥ ಸಾಮುದಾಯಿಕ ಸನ್ನಿವೇಶಗಳನ್ನು ಬಿಟ್ಟು ಬೃಹತ್ ಸಂಘಟನೆಗಳನ್ನು ಸೇರುತ್ತಿರುವೆವೆಂದೂ ಫರ್ಡಿನೆಂಡ್ ಟೊನ್ನೀಸ್ ಮತ್ತು ಆನಂತರದ ಲೇಖಕರು ಹೇಳುತ್ತ ಬಂದಿದ್ದಾರೆ.ಇವರಲ್ಲಿ ಅನೇಕರ ಪ್ರಕಾರ (ಅ)ಜನಸ್ತೋಮಗಳು ಹೆಚ್ಚುತ್ತಿವೆ;(ಆ)ಹಿಂದಿನ ಸ್ಥಳೀಯ ಗುಂಪುಗಳು ಧಾರ್ಮಿಕ ಹಾಗು ಕುಲನಿಷ್ಟ ಗುಂಪುಗಳು ಮಾಯವಾಗುತ್ತಿವೆ;(ಇ)ಸಂಘಟನೆ ಪ್ರಬಲವಾಗುತ್ತಿದೆ;(ಈ)ರಾಷ್ಟ್ರೀಯ ಮಾರುಕಟ್ಟೆ,ರಾಷ್ತ್ರೀಯ ಚುನಾವಣೆ ಮುಂತಾಗಿ ನಮ್ಮ ಸಾಮಾಜಿಕ ವಲಯಗಳು ವಿಸ್ತರಿಸುತ್ತಿವೆ;(ಉ)ಸಾರ್ವಜನಿಕ ಸಂಪರ್ಕ ಮಾಧ್ಯಮಗಳು ಮಹತ್ವ ಪದೆಯುತ್ತಿವೆ. ಗುಂಪುಮದುವೆ:ಒಂದು ಗಂಡಸರ ಗುಂಪು ಮತ್ತೊಂದು ಹೆಂಗಸರ ಗುಂಪನ್ನು ವಿವಾಹವಾದಲ್ಲಿ ಆ ಸಂಭಂದವನ್ನು ಈ ಹೆಸರಿನಿಂದ ಕರೆಯುತ್ತಾರೆ.ಇದರ ಪ್ರಕಾರ ಗುಂಪಿನ ಪ್ರತಿಯೊಬ್ಬ ಗಂಡಸಿಗೂ ಇನ್ನೊಂದು ಗುಂಪಿನ ಪ್ರತಿ ಹೆಂಗಸೂ ಹೆಂಡತಿಯಾಗುತ್ತಾಳೆ.ರಾರ್ಬಟ್ ಎಚ್ ಲೋವಿ ಎಂಬ ಪ್ರಸಿಧ್ಧ ಸಮಾಜಶಾಸ್ತ್ರಜ್ಞ್ ಈ ಬಗ್ಗೆ ಇರುವ ವಿವಿಧ ಅಭಿಪ್ರಾಯಗಳನ್ನು ಪರಿಶೀಲಿಸಿ ತನ್ನದೆ ಆದ ಇತ್ಯರ್ಥಕ್ಕೆ ಬರುತ್ತಾನೆ. ಬಹುಪತ್ನೀತ್ವ,ಬಹುಪತಿತ್ವ.ಏಕ ಪತ್ನಿತ್ವ ಅಥವಾ ಏಕಪತಿತ್ವ,ಒಬ್ಬ ಹೆಂಡತಿ ಬದುಕಿರುವಾಗಲೆ ಮತ್ತೊಬ್ಬಳ್ಳನ್ನು ಮದುವೆಯಾಗುವುದು-ಈ ವಿಷಯಗಳನ್ನು ಎಲ್ಲ ಶಾಸ್ತ್ರಜ್ಞರೂ ಒಪ್ಪಿದ್ದಾರಾದರು ಗುಂಪುಮದುವೆಯ ವ್ಯಾಪ್ತಿ ಮತ್ತು ಅದರಲ್ಲಿನ ದಾಂಪತ್ಯ ಸಂಭಂದದ ಬಗ್ಗೆ ಅವರಲ್ಲಿ ಏಕಮತವಿಲ್ಲ. ಎಲ್ಲಿ ವ್ಯಕ್ತಿಗಳು ಇಚ್ಛೆಗೆ ಪುರಸ್ಕಾರವಿಲ್ಲದೆ ಸಂಪೂರ್ಣವಾಗಿ ಗುಂಪೊಂದು ಮದುವೆಗಳನ್ನು ಏರ್ಪಡಿಸುತ್ತದೆಯೋ ಅಂಥ ವಿವಾಹಗಳನ್ನು ಗುಂಪು ಮದುವೆಗಳೆಂದು ರಾರ್ಬಟ್ ಬ್ರಿಫಾಲ್ಟ್ ಎಂಬಾತ ಕರೆದಿದ್ದಾನೆ.ಅಂದರೆ ವ್ಯಕ್ತಿ ತನಗೆ ಒಪ್ಪಿಗೆಯಾದ ಸಂಗಾತಿಯನ್ನು ತಾನೇ ಹುಡುಕಿ ಮದುವೆಯಾಗುವಂತಿಲ್ಲ.ಕುಟುಂಬ ಅಥವಾ ಗುಂಪು ಅವನ ಪರವಾಗಿ ಆ ಕೆಲಸವನ್ನು ಮಾಡುತ್ತದೆ.ಇನ್ನೊಂದು ಪಧ್ಧತಿಯ ಪ್ರಕಾರ ಸಮುದಾಯ ತನಗಾಗಿ ಆರಿಸಿಟ್ಟ ಹೆಣ್ಣುಗಳಲ್ಲಿ ಒಂದನ್ನು ಗಂಡು ಆರಿಸಬೇಕಾಗುತ್ತದೆ.ಸಮುದಾಯ ಆರಿಸಿದ ಹುಡುಗಿಯನ್ನು ಬಿಟ್ಟು ಬೇರಾವ ಗುಂಪಿನ ಹುಡುಗಿಯನ್ನು ಆಯ್ದು ಮದುವೆಯಾದರು ಅಂಥವರಿಗೆ ಮರಣದಂಡನೆ ವಿಧಿಸಲ್ಪಡುತ್ತದೆ.ಅರವಾಕರಲ್ಲಿ ಈ ಪಧ್ಧತಿಯನ್ನು ಕಾಣುತ್ತೇವೆ.ಕಾದಿರರಲ್ಲಿ ಒಂದು ಹಳ್ಳಿಯ ಒಬ್ಬ ಯುವಕ ಬೇರೊಂದು ಗೊತ್ತಾದ ಹಳ್ಳಿಯ ಹುಡುಗಿಯ ಸಂಗಡ ವಿವಾಹವಾಗಬೇಕಾದ ಅಗತ್ಯವಿತ್ತು.ಯುವಕ ಆ ಹಳ್ಳಿಗೆ ಹೋಗಿ ಒಂದು ವರ್ಷ ದುಡಿದು,ಅಲ್ಲಿಯ ಹುಡುಗಿಯರನ್ನು ಪರಿಶೀಲಿಸಿ,ಒಬ್ಬಳನ್ನು ಮದುವೆಯಾಗಲು ನಿರ್ಧರಿಸುತ್ತಿದ್ದ.ಆದರೆ ವಿವಾಹ ವಿಚಾರದಲ್ಲಿ ಹುದುಗಿಯ ನಂಟರಲ್ಲಿ ಯಾವ ಮಾತುಕತೆಯನ್ನು ಆತ ಆರಂಭಿಸುವಂತಿರಲಿಲ್ಲ.ತನ್ನ ಸ್ವಂತ ಗ್ರಾಮಕ್ಕೆ ಹೋಗಿ ಅಲ್ಲಿ ಗ್ರಾಮಸ್ಥರ ಅನುಮತಿಯನ್ನು ಪಡೆದು ಅನಂತರ ಮದುವೆಯಾಗಬೇಕಿತ್ತು.ಈ ಸಂದರ್ಭಗಳಲ್ಲಿ ಒಂದು ಗ್ರಾಮದಲ್ಲಿ ವಾಸವಾಗಿರುವವರೆಲ್ಲರೂ ಒಂದೇ ಬುಡಕಟ್ಟಿಗೆ ಸೇರಿದವರಾಗಿರುತ್ತಿದ್ದರು ಎಂಬುದನ್ನು ಮರೆಯಬಾರದು.