ಪುಟ:Mysore-University-Encyclopaedia-Vol-6-Part-7.pdf/೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಗುಜರಾತ್ ಮಧ್ಯಭಾಗದಲ್ಲಿ ಒಪ್ಪಲೈಡ್ಸ್, ಕಟ್ರೋಲಿಸೆರಾಸ್. ಅಸ್ಟಿಡೊಸೆರಾಸ್, ಸ್ಟ್ರೆಬ್ಲೈಟಿಸ್ ಮತ್ತು ವಾಗನಿಯಗಳ ಅವಶೇಷಗಳಿವೆ. ಕಟ್ರೋಲ್ ಶಿಲಾಶ್ರೇಣಿಯ ಮೇಲ್ಭಾಗ ಅವಶೇಷರಹಿತ ವಾಗಿದೆ. ಗಾಜನ್ಸಾರ್ ಪದರಗಳಲ್ಲಿ ಗ್ಲೋಕಿಸೆರಾಸ್ ಮತ್ತು ಪಿಲ್ಲೊಸೆರಾಸ್ ಗಳಿವೆ. ಈ ಶಿಲಾಶ್ರೇಣಿಗಿಂತ ಕಿರಿಯ ಶಿಲೆಗಳು ಭೂಜ್ ಗೆ ವಾಯುವ್ಯಕ್ಕೆ ಸುಮಾರು 80 ಕಿಮೀ ದೂರದಲ್ಲಿ ಉಮಿಯ ಎಂಬ ಹಳ್ಳಿಯ ಹತ್ತಿರ ಉತ್ತಮವಾಗಿ ಹೊರಕಂಡಿವೆ. ಇವುಗಳಿಗೆ ಉಮೀಯ ಶ್ರೇಣಿ ಎಂದು ಹೆಸರು. ಇದರ ದಪ್ಪ ಸುಮಾರು 915 ಮೀಟರುಗಳು. ರಾಜನಾಥ್ ಎಂಬವರು ಈ ಶಿಲಾಶ್ರೇಣಿಯನ್ನು ಉಮೀಯ