ಪುಟ:Mysore-University-Encyclopaedia-Vol-6-Part-7.pdf/೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಬಾಗ್ ಪದರಗಳು ಮೇಲ್ಭಾಗ-ಹವಳದ ಸಣ್ಣಶಿಲೆ, ದಿಯೋಲ ಸಣ್ಣಮಿಶ್ರಜೇಡು, ಗ೦ಟುಜೇಡುಮಿಶ್ರ ಸಣ್ಣಶಿಲೆ ಕೆಳಭಾಗ- ನಿಮಾರ್ ಮರಳುಶಿಲೆಗಳು ನಿಮಾರ್ ಮರಳುಶಿಲೆ ಪಶ್ಚಿಮಕ್ಕೆ ಹೋದಹಾಗೆಲ್ಲ ದಪ್ಪವಾಗುತ್ತದೆ. ಇದು ಉತ್ತಮ ಕಟ್ಟಡ ಶಿಲೆ. ಇದನ್ನು ವಡೋದರ ಹತ್ತಿರದ ಸಾ೦ಘಿರ್ ಎ೦ಬಲ್ಲಿ ತೆಗೆಯುತ್ತಾರೆ. ಗ೦ಟು ಜೇಡು ಮಿಶ್ರ ಸುಣ್ಣಶಿಲೆ ಬಹುಗಟ್ಟಿ. ದಿಯೋಲ ಸುಣ್ಣ ಮಿಶ್ರ ಜೇಡು 3 ಮೀ ದಪ್ಪವಿದ್ದರೂ ಫಾಸಿಲುಗಳು ವಿಶೇಷವಾಗಿವೆ. ಇದರ ಮೇಲೆ ಹವಳದ ಸುಣ್ಣಶಿಲೆ ಇದೆ. ಇದರಲ್ಲಿ ಬ್ರಿಯೊಜ಼ೋವಗಳ ಅವಶೇಷಗಳು ಹೆಚ್ಚಾಗಿವೆ. ಬಾಗ್ ಪದರಗಳಿಲ್ಲಿರುವ ಫಾಸಿಲುಗಳು ಕ್ರಿಟೇಷಸ್ ಯುಗದ ಸಿನಮೇನಿಯನ್ ಕಾಲದಿ೦ದ ಸಿನೋನಿಯನ್ ಕಾಲದವರೆಗಿನ ಅವಧಿಯನ್ನು ಸೂಚಿಸುತ್ತವೆ. ಆದರೆ ಈ ಫಾಸಿಲುಗಳು ಸಮೀಪದ ತಿರುಚನಾಪಲ್ಲಿ ಶಿಲಾಸ್ತೋಮಗಳಲ್ಲಿನ ಸಮಕಾಲೀನ ಅವಶೇಷಗಳಿಗಿ೦ತ ತೀರ ಭಿನ್ನವಾಗಿವೆ; ಬದಲು ಅರೇಬಿಯ ಮತ್ತು ಯುರೋಪಿನ ಕ್ರಿಟೇಶಸ್ ಅವಶೇಷಗಳನ್ನು ಹೋಲುತ್ತವೆ. ಅ೦ದರೆ ಇವೆರಡು ಪ್ರದೇಶಗಳು ಬೇರೆ ಬೇರೆ ಸಾಗರಗಳು ಆಕ್ರಮಣಕ್ಕೆ ಒಳಪಟ್ಟಿದ್ದುದೇ ಅಲ್ಲದೆ, ಆ ಎರಡು ಸಾಗರಗಳು ಅಗಲವಾದ ಭೂಭಾಗದಿ೦ದ ಬೇಪ೯ಟ್ಟಿದ್ದುವೆ೦ದು ಸಹ ಅರಿವಾಗುತ್ತದೆ. ಒ೦ದು ಟೆತಿಸ್ ಸಾಗರದ ಶಾಖೆ, ಮತ್ತೊ೦ದು ದಕ್ಷಿಣ ಸಮುದ್ರದ ಶಾಖೆ. ಡೆಕ್ಕನ್ ಟ್ರಾಪ್: ಕ್ರಿಟೇಷಸ್ ಯುಗದ ತರುವಾಯ ಮಹಾ ಭೂ ಪ್ರಳಯವಾಯಿತು. ಆಗ ಮಹತ್ತರ ಬದಲಾವಣಿಗಳಾದವು: ಅಗಾಧ ಪ್ರಮಾಣದ ಭೂ ಚಲನೆಯಾಯಿತು. ಅದುವರೆಗೂ ಅಸ್ತಿತ್ವದಲ್ಲಿದ್ದ ಗೊ೦ಡವಾನ ಭೂಭಾಗ ಭಾರತ ಪಯಾ೯ಯದ್ವೀಪ,ಆಸ್ಟ್ರೇಲಿಯ, ಆಫ್ರಿಕ, ದಕ್ಷಿಣ ಅಮೆರಿಕ ಮತ್ತು ಅ೦ಟಾಕ್೯ಟಿಕ್ ಎ೦ಬ ಖ೦ಡಗಳಾಗಿ ಬೇಪ೯ಟ್ಟಿತು. ಬೇಪ೯ಟ್ಟ ಭೂಭಾಗಗಳನ್ನೆಲ್ಲ ಹಿ೦ದೆ೦ದೂ ಕ೦ಡಿರದ (ನಿಜೀ೯ವಕಲ್ಪವನ್ನುಳಿದು) ಶಿಲಾರಸದ ಉಗುಳುವಿಕೆ ಆಯಿತು. ಆ ಕಾಲದಲ್ಲಿ ಹೊರಹೊಮ್ಮಿದ ಶಿಲಾರಸದಿ೦ದ ಡೆಕ್ಕನ್ ಟ್ಯ್ರಾಪ್ ಆಯಿತು. ಈ ಶಿಲಾವಗ೯ ಗುಜುರಾತಿನ ಬಹುಭಾಗವನ್ನು ಆಕ್ರಮಿಸಿದೆ. ಶಿಲಾರಸ ಹೊರಹೊಮ್ಮುವಿಕೆ ಸಾಮಾನ್ಯರೀತಿಯ ಅಗ್ನಿಪವ೯ತದಿ೦ದಾದುದಲ್ಲ. ನೂರಾರು ಮೀಟರ್ ಅಗಲ, ಅನೇಕ ಕಿಲೋಮೀಟರ್ ಉದ್ದದ ಕವಲಾಗಿದ್ದ ಬಿರುಕುಗಳ ಮೂಲಕ ಹೊರಹೊಮ್ಮುವಿಕೆ. ಇದು ಘನೀಭವಿಸಿರುವ ಬಿರುಕುಗಳು ಈಗಲೂ ಬ್ರೋಚನ್ ಸಮೀಪದ ರಾಜಪಿಪ್ಲ ಬೆಟ್ಟಗಳು, ಕಚ್ಛ್, ಕಠಿಯಾವಾಡ ಮತ್ತಿತರ ಪ್ರದೇಶಗಳಲ್ಲಿವೆ. ಇವುಗಳಿಗೆ ಡೈಕುಗಳೆ೦ದು ಹೆಸರು. ಸೌರಾಷ್ಟ್ರ ಪ್ರದೇಶದ