ಪುಟ:Mysore-University-Encyclopaedia-Vol-6-Part-8.pdf/೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಗುಪ್ತಲೇಖ ಶಾಸ್ತ್ರ ಸ೦ದೇಶವನ್ನು ಸೂತ್ರಪದದ ಅಡಿಯಲ್ಲಿ ಮು೦ದೆ ತೋರಿಸಿರುವ೦ತೆ ಬರೆಯಬೇಕು. ನೀಟಸಾಲುಗಳ ಸ೦ಖ್ಯಾನುಸಾರ ಅಕ್ಷರಗಳನ್ನು ಪುನಃ ಜೋಡಿಸಬೇಕು. ಎ೦ದರೆ ೧ನೆಯ ನೀಟಸಾಲಿನ ಮೊದಲು ೨ನೆಯದರ ತರುವಾಯ ಇತ್ಯಾದಿ. ಸಾಮಾನ್ಯವಾಗಿ ಇವನ್ನು ಐದೈದು ಅಕ್ಷರಗಳ ಗು೦ಪುಗಳಾಗಿ ಜೋಡಿಸುವುದು ವಾಡಿಕೆ. ಗೂಢಲಿಪಿಯಲ್ಲಿ ಲೇಖಿತವಾದ ಸಂದೇಶ ಈ ಕೆಳಗಿನಂತಿದೆ:

ಈ ಗೂಢ ಸಂದೇಶವನ್ನು ವಾಚಿಸಬೇಕಾದರೆ ಮೊದಲು ಹಂತ ೧ರಲ್ಲಿ ತೋರಿಸಿರುವಂತೆ ಸೂತ್ರಪದ-ಸಂಖ್ಯೆಗಳ ಒಂದು ಯಾದಿಯನ್ನು ತಯಾರಿಸಬೇಕು. ಪ್ರಸಕ್ತ ಗೂಢ ಸಂದೇಶದಲ್ಲಿ ೨೫ ಅಕ್ಷರಗಳಿವೆ. ಅದ್ದರಿಂದ ಯಾದಿಯಲಲ್ಲಿ ಇವನ್ನು ಹಂಚುವಾಗ ಕೊನೆಯ ಎರಡು ನೀಟಸಾಲುಗಳಲ್ಲಿ(೩ ಮತ್ತು ೭) ಎರಡೆರಡೇ ಅಕ್ಷರಗಳು,ಉಳಿದವುಗಳಲ್ಲಿ ಮೂರು ಮೂರು ಅಕ್ಷರಗಳು ಇರತಕ್ಕದ್ದು ಎಂಬುದನ್ನು ಗಮನಿಸಬೇಕು. ಈ ಪ್ರಕಾರ ಗೂಢಸಂದೇಶದ ಅಕ್ಷರಗಳನ್ನು ನೀಟಸಾಲುವಾರು ವಿತರಣೆ ಮಾಡಿದಾಗ ಮೂಲ ಸಂದೇಶವನ್ನು ಕ್ಷಿತಿಜೀಯವಾಗಿ ಓದಬಹುದು.

ಸೂತ್ರಪದದಲ್ಲಿ ಇಂತಿಷ್ಟೇ ಅಕ್ಷರಗಳಿರಬೇಕೆಂದೇನೂ ನಿಯಮವಿಲ್ಲ. ಒಂದೇ ಸೂತ್ರಪದರಿಂದ ಇಲ್ಲವೇ ಬೇರೆ ಬೇರೆ ಸೂತ್ರಪದಗಳಿಂದ ಒಂದು ಸಂದೇಶವನ್ನು ಹಲವಾರು ಬಾರಿ ಗೂಢಲಿಪಿಲೇಖಿಸಬಹುದು. ಇಂಥ ಒಂದು ಉದಾಹರಣೆಯ್ನು ಮುಂದೆ ಬರೆದಿದೆ.

ಮೂಲ ಸಂದೇಶ: ಮೋದಲನೆಯ ಸೂತ್ರ ಪದ:

ಗೂಢ ಸಂದೇಶ: ಎರಡನೆಯ ಸೂತ್ರ ಪದ:

ಗೂಢ ಸಂದೇಶ: ಗೂಢಲಿಪಿಲೇಖನದಲ್ಲಿ ಮೂರನೆಯ ಒಂದು ವಿಧಾನವುಂಟು. ಇದರಲ್ಲಿ ಇಂಗ್ಲಿಷ್ ಅಕ್ಷರ ಮಾಲೆಯನ್ನು ಮುಂದೆ ತೋರಿಸಿರುವಂತೆ ಚೌಕ ಗೂಢಲಿಪಿಲೇಖನಿಗೂ ವಾಚಕನಿಗೂ ಮೂಲಾಧಾರ.

ಅಕ್ಷರ ಚೌಕ

ಮೂಲ ಸಂದೇಶ: ಎಂದರಲಿ

ಗೂಢಲಿಪಿ ಲೇಖಕನಿಗೂ ವಾಚಕನಿಹಗೂ ಪೂರ್ವ ಒಪ್ಪಂದದ ಪ್ರಕಾರ ತಿಳಿದಿರುವ ಸೂತ್ರಪದ ಆಗಿರಲಿ.

ಮೂಲಸಂದೇಶವನ್ನು ಗೂಢಲಿಪಿಲೇಖಿಸಲು ಈ ಕೆಳಗಿನಂತೆ ಮುಂದವರಿಸ ಬೇಕು.

ಹಂತ ೧. ಮೂಲಸಂದೇಶದ ಅಕ್ಷರಗಳ ಅಡಿಯಲ್ಲಿ ಸೂತ್ರಪದದ ಅಕ್ಷರಗಳನ್ನು ಪುನರಾವರ್ತಿಸುವಂತೆ ಬರೆಯಬೇಕು.

ಹಂತ ೨. ಮೇಲಿನ ನಿರೂಪಣೆಯಲ್ಲಿ ಮೊದಲಿನ ಸಾಲಿನ ಅಕ್ಷರಗಳನ್ನು ಅಕ್ಷರಚೌಕದ ಅಡ್ಡಸಾಲಿಗೂ ಎರಡನೆಯ ಸಾಲಿನ ಅಕ್ಷರಗಳನ್ನು ಅಕ್ಷರಚೌಕದ ನೀಟಸಾಲಿಗೂ ಅನ್ವಯಿಸಬೇಕು. ಈಗ ನೆಯ ಅಡ್ಡ ಸಾಲು ಮತ್ತು ನೆಯ ನೀಟಿಸಾಲಿಗೆ ಸಾಮಾನ್ಯವಾದ ಅಕ್ಷರ; ನೆಯ ಅಡ್ಡಸಾಲು ಮತ್ತು ನೆಯ ನೀಟಿಸಾಲಿಗೆ ಸಾಮಾನ್ಯವಾದ ಅಕ್ಷರ;ನೆಯ ಅಡ್ಡ ಸಾಲು ಮತ್ತು ನೆಯ ನೀಟಿಸಾಲಿಗೆ ಸಾಮಾನ್ಯವಾದ ಅಕ್ಷರ. ಇದೇ ಪ್ರಕಾರ ಮುಂದುವರಿದರೆ ಕೊನೆಗೆ ನೆಯ ಅಡ್ಡಸಾಲು ಮತ್ತು ನೆಯ ನೀಟಿಸಾಲಿಗೆ ಸಾಮಾನ್ಯವಾದ ಅಕ್ಷರ ದೊರೆಯುತ್ತದೆ. ಈ ಸಾಮಾನ್ಯಾಕ್ಷರಗಳನ್ನು ಕೆಳಗೆ ಅವು ಒದಗಿ ಬಂದಿರುವ ಕ್ರಮದಲ್ಲಿ ಬರದಿದೆ. ಇದೇ ಗೂಢ ಸಂದೇಶ.