ಪುಟ:Mysore-University-Encyclopaedia-Vol-6-Part-8.pdf/೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಗುರುದತ್ತ-ಗುರುದ್ವಾರ ಉತ್ಪತ್ತಿ ಮಾಡುವ ಮತ್ತು ಕಂಡುಹಿಡಿಯುವ ವಿಧಾನವನ್ನು ವಿವರಿಸಿದ್ದಾನೆ. ಆದರೆ ಈ ಪ್ರಯೋಗದ ಪರಿಣಾಮ ನಿರ್ಣಯವಿಹೀನವಾಗಿದೆಯೆಂದೇ ಹೇಳಬೇಕು. ಗುರುತ್ವಾಕರ್ಷಣೀಯ ವಿಕಿರಣದ ಪ್ರಬಲ ಉತ್ಪತ್ತಿಸ್ಥಾನ ಆಲ್ಪಕಾಲದಲ್ಲಿ ಮುದುಡಿಕೊಳ್ಳುವಂಥ ಸ್ಥಿತಿಯಲ್ಲಿರುವ ಮಹಾನೋವರದಲ್ಲಿ ಇರುತ್ತದೆಂದು ನಂಬಿಕೆಯಿದೆ. ಈ ಅಂಶಗಳಿಗೆ ಬಹುಶ ಈ ಶತಮಾನದಲ್ಲಿಯೇ ಹೆಚ್ಚಿನ ಸ್ಪಷ್ಟತೆ ದೊರೆಯುವಂತೆ ಕಂಡುಬರುತ್ತದೆ. ಗುರುದತ್ತ; ೧೯೨೫-೬೪. ಹಿಂದಿ ಚಿತ್ರರಂಗದಲ್ಲಿ ಪ್ರಸಿದ್ಧಿಯ ಶಿಖರವೇರಿದ ನಟ, ನಿರ್ದೇಶಕ ಹಾಗೂ ನಿರ್ಮಾಪಕ. ಕನ್ನಡಿಗರಾದ ಇವರು ೧೯೨೫ ಜುಲೈ ೯ ರಂದು ಮೈಸುರಿನಲ್ಲಿ ಜನಿಸಿದರು. ಪ್ರಾಥಮಿಕ ಶಿಕ್ಷಣ ಕಲ್ಕತ್ತದಲ್ಲಿ ಪೂರೈಸಿದರು. ಅನಂತರ ಹೆಸರಾಂತ ನೃತ್ಯ ಪಟು ಉದಯಶಂಕರ ಬಳಿ ನೃತ್ಯಾಭ್ಯಾಸ ಮಾಡಿದರು. ಪ್ರಭಾತ ಸ್ಟುಡಿಯೋದಲ್ಲಿ ನೃತ್ಯಸಂಯೋಜಕರಾಗಿ ಚಲನಚಿತ್ರರಂಗ ಪ್ರವೇಶಿಸಿದರು. ಅಲ್ಲಿ ಹಿಂದಿ ಚಿತ್ರರಂಗದ ಹೆಸರಾಂತ ನಟ ದೇವಾನಂದರ ಪರಿಚಯ ಗೆಳೆತನ ಲಭಿಸುತು. ಹಮ್ ಏಕ್ ಹೈ ಚಿತ್ರದ ನೃತ್ಯ ಸಂಯೋಜಕರಾಗಿ ಕೆಲಸ ಮಾಡಿದರು. ಮುಂದೆ ಇವರು ಬಾಂಬೆ ಟಾಕೀಸ್ ಸೇರಿದರು. ಸಹ ನಿರ್ದೇಶಕರಾಗಿ ಲಖರಾನಿ, ಮೋಹನ, ಗರ್ಲ್ಸ್ ಸ್ಕೂಲ್, ಸಂಗ್ರಾಮ, ಚಲನಚಿತ್ರಗಳಲ್ಲಿ ಕೆಲಸ ಮಾಡಿದರು. ದೇವಾನಂದ್ ೧೯೫೦ರಲ್ಲಿ ನವಕೇತನ ಸಂಸ್ಥೆ ಆರಂಭಿಸಿದರು. ಹಿಂದೆ ಇವರಿಗೆ ಕೊಟ್ಟ ಮಾತಿನಂತೆ ತಮ್ಮ ಪ್ರಥಮ ನಿರ್ಮಾಣದ ಚಿತ್ರ ನಿರ್ದೇಶಿಸಲು ಅವಕಾಶ ಕಲ್ಪಿಸಿದರು. ಗುರುದತ್ ನಿರ್ದೇಶಿಸಿದ ಪ್ರಥಮ ಚಿತ್ರ ಬಾಜಿ. ಇದು ಇವರಿಗೆ ಒಳ್ಳೆಯ ಹೆಸರು ತಂದುಕೊಟ್ಟಿತು. ಅನಂತರ ಜಾಲ್ ಚಿತ್ರವನ್ನು ನಿರ್ದೇಶಿಸಿದರು. ಇದೊಂದು ಹೊಸ ಬಗೆಯ ಕೂತುಹಲ ಮೂಡಿಸುವ ಚಿತ್ರ. ಅದಾದ ಬಳಿಕ ಸ್ಮೆಲಾಬ್ ಎಂಬ ಚಿತ್ರ ನಿರ್ದೇಶಿದರು.ನಿರ್ಮಾಪಕ, ನಟ, ನಿರ್ದೇಶಕರಾಗಿ ತಮ್ಮನ್ನು ತೊಡಗಿಸಿಕೊಂಡು ಎಚ್.ಜಿ. ಫಿಲ್ಮ್ ಲಾಂಛನದಲ್ಲಿ ಬಜ್ ಚಿತ್ರ ನಿರ್ಮಿಸಿದರು. ಇದರಲ್ಲಿ ಗೀತಾಬಾಲಿಯೊಂದಿಗೆ ತಾವೇ ನಾಯಕರಾಗಿ ಅಭಿನಯಿಸಿದರು. ಅನಂತರ ಇವರು ಹಲವು ಚಿತ್ರಗಳನ್ನು ನಿರ್ದೇಶಿಸಿ ಕೆಲವು ಚಿತ್ರಗಳಲ್ಲಿ ನಟಿಸಿದರು. ಅವುಗಳಲ್ಲಿ ಮುಖ್ಯವಾದವು. ಆರ್ ಪಾರ್, ಮಿಸ್ಟರ್ ಅಂಡ್ ಮಿಸೆಸ್, ಸಿ.ಐ.ಡಿ , ಪ್ಯಾಸಾ, ಟ್ವಲ್ವೋ ಕ್ಲಾಕ್, ಚೌದವಿಕಾ ಚಾಂದ್, ಸಾಹೀಬ್ ಬೀಬಿ ಔರ್ ಗುಲಾಮ್, ಸೌತೆಲಾಭಾಯಿ, ಬಹುರನಿ, ಭರೋಸಾ, ಸಾಂಜ್ ಔರ್ ಸವೇರಾ, ಸುಹಾಗನ್ ಇವೆಲ್ಲವೂ ಗುರುದತ್ತರ ಜನಪ್ರಿಯತೆಯನ್ನು ಶಿಖರಕ್ಕೇರಿಸಿದ ಚಿತ್ರಗಳು. ಬಾಜಿ ಚಿತ್ರದಿಂದ ಒಂದೊಂದೇ ಮೆಟ್ಟಲೇರುತ್ತ ಯಶಸ್ವಿ ಶಿಖರಕಂಡ ಇವರು ಬಾಜಿ ಚಿತ್ರದ ರೆಕಾರ್ಡಿಂಗ್ ಸಮಯದಲ್ಲಿ ಗಾಯಕಿ ಗೀತಾರಾಯ್ ಅವರ ಪ್ರೇಮದ ಬಲೆಯಲ್ಲಿ ಸಿಲುಕಿ ಅವರನ್ನು ವಿವಾಹವಾದರು. ಗುರುದತ್ ನಿರ್ಮಿಸಿದ ಚಿತ್ರಗಳು ಭಾರತೀಯ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿವೆ. ಪ್ಯಾಸಾ. ಕಾಗಜ್, ಅಭಿನಯ, ನಿರ್ದೇಶಗಳಿಂದ ಹೆಸರು ಮಾಡಿದವು. ನಟಿ ವಹೀದಾ ಗುಲಾಮ್ ನಲ್ಲಿ ನಟಿಸಿದರು. ಈ ಚಿತ್ರಗಳಲ್ಲಿಯ ಇವರ ಅಭಿನಯ ಇಂದಿಗೂ ಸ್ಮರಣೀಯ. ಸಾಹೀಬ್ ಬೀಬಿ ಔರ್ ಗುಲಾಮ್ ರಾಷ್ಟಪತಿಗಳ ರಜತ ಪದಕ ಪಡೆಯಿತು. ಕಲಾತ್ಮಕತೆ ಮತ್ತು ತಾಂತ್ರಿಕ ಶ್ರೀಮಂತಿಕೆ ಗುರುದತ್ತರ ಚಿತ್ರಗಳ ಜೀವಾಳ. ನೆರಳು ಬೆಳಕುಗಳನ್ನು ಕ್ಯಾಮರದಲ್ಲಿ ಸೆರೆಹಿಡಿಯುವ ಚಾಕಚಕ್ಯತೆ, ಕ್ಯಾಮರ ಕಣ್ಣಿನಲ್ಲಿರುವ ಶಕ್ತಿಯ ಸದ್ ಬಳಕೆ, ಹಾಡು ಅಭಿನಯಗಳ ಸಮತೂಕ ನಿರ್ವಹಣೆ, ಪ್ರತಿಯೊಂದು ಫ್ರೇಮಿನಲ್ಲೂ ಜೀವ ತುಂಬುವ ಜಾಣ್ಮೆ, ಜೀವನದ ವಾಸ್ತವತೆಯನ್ನು ಚಿತ್ರಿಸುವ ಕಲೆಗಾರಿಕೆ ಇವೇ ಇವರ ಚಿತ್ರಗಳು ಜನಪ್ರಿಯವಾಗಲು ಕಾರಣವಾದವು. ಇವರ ಚಿತ್ರಗಳು ಇಂದಿಗೂ ತಾಜಾತನ ಉಳಿಸಿಕೊಂಡಿವೆ. ಖ್ಯಾತಿಯ ಉತ್ತುಂಗದಲ್ಲಿರುವಾಗಲೇ ಜೀವನದಲ್ಲಿ ಜುಗುಪ್ಸೆಗೊಂಡು ೧೯೬೪ ಅಕ್ಟೋಬರ್ ೧೦ರಂದು ಆತ್ಮಹತ್ಯೆ ಮಾಡಿಕೊಂಡರು. ಗುರುದಾಸಪುರ; ಪಂಜಾಬಿನ ಒಂದು ಜಿಲ್ಲೆ; ಆ ಜಿಲ್ಲೆಯ ಕೇಂದ್ರ ಜಿಲ್ಲೆಯ ವಿಸ್ತೀರ್ಣ ೩೫೭೦ ಚ. ಕಿಮೀ ಜನಸಂಖ್ಯೆ ೨೨೯೯೦೨೬ ಜಿಲ್ಲೆಯ ಉತ್ತರಕ್ಕೆ ಜಮ್ಮು-ಕಾಶ್ಮೀರ, ಹಿಮಾಚಲ ಪ್ರದೇಶ, ದಕ್ಷಿಣದಲ್ಲಿ ಅಮೃತಸರ ಜಿಲ್ಲೆ, ಪೂರ್ವಕ್ಕೆ ಕಾಂಗಡಾ ಮ್ತ್ತು ಹೋಶಿಯಾರ್ ಪುರ ಜಿಲ್ಲೆ ಮತ್ತು ಪಶ್ಚಿಮಕ್ಕೆ ಅಮೃತಸರ ಮತ್ತು ಸಿಯಲ್ ಕೋಟ್ ಜಿಲ್ಲೆಗಳಿವೆ. ವಾರ್ಷಿಕ ಸರಾಸರಿ ಮಳೆ ೧೦೦ ಸೆಂಮೀ ಇಲ್ಲಿಯದು ಸಮಶೀತೋಷ್ಣ ವಾಯುಗುಣ. ಈ ಜಿಲ್ಲೆಯಲ್ಲಿ ಹರಿಯುವ ರಾವೀ ಮತ್ತು ಬಿಯಾಸ್ ನದಿಗಳು ಅನೇಕ ಸಲ ಮೇರೆ ಮೀರಿ ಹರಿಯುತ್ತವೆ. ಈ ನದಿಗಳ ಮೇಲೆ ದೋಣಿ ಸಂಚಾರವುಂಟು. ಜನರ ವ್ಯಾಪಾರ, ಮತ್ತು ಕೃಷಿಯಲ್ಲೂ ಖಾಸಗಿ ಮತ್ತು ಸರ್ಕಾರಿ ಕೆಲಸಗಳಲ್ಲೂ ನಿರತರಾಗಿದ್ದಾರೆ. ಧಾರಿವಾಲ್ ಮತ್ತು ಸುಜಾನ್ ಪುರಗಳಲ್ಲಿ ಉಣ್ಣೆ, ಜಮಖಾನೆ ಮತ್ತು ಕೃಷಿಯಂತ್ರಗಳ ಕಾರ್ಖಾನೆಗಳುಂಟು. ಬಟಾಲಾ ವ್ಯಾಪಾರ ಕೇಂದ್ರ. ರಾವೀ ನದಿಯ ದಂಡೆಯ ಮೇಲೆ ಮುಕ್ತೇಶ್ವರದಲ್ಲಿ ಪ್ರಾಚೀನ ಕಾಲದ ಕೆಲವು ಶಿಲ್ಪಕಲಾಕೃತಿಗಳಿವೆ. ಬಟಾಲಾ, ಶಾಹಪುರ ಐತಿಹಾಸಿಕ ಪ್ರಾಮುಖ್ಯ ಪಡೆದಿವೆ. ಪಠಾಣಕೋಟ್ ನಲ್ಲಿ ಪೂರ್ವದಲ್ಲಿ ಹಿಂದೂಗಳ ರಾಜ್ಯವಿತ್ತು. ಸುರ್ ವಂಶದವರಿಂದ ಈ ಭಾಗವನ್ನು ಅಕ್ಬರ್ ಗೆದ್ದುಕೊಂಡ. ಈ ಭಾಗದಲ್ಲಿ ಸಿಕ್ಖರ ಮತ್ತು ಮೊಗಲರ ನಡುವೆ ಅನೇಕ ಯುದ್ಧಗಳು ನಡೆದವು. ಅದೀನಾ ಬೇಗ್ ಈ ಭಾಗದ ಸುಭೇದಾರನಾಗಿದ್ದ. ಅವನ ಅನಂತರ ಸಿಕ್ಖರ ವರ್ಚಸ್ಸು ಹೆಚ್ಚಾಯಿತು. ೧೮೪೧ರಲ್ಲಿ ಇಡೀ ಜಿಲ್ಲೆ ಇಂಗ್ಲೀಷರ ಆಡಳಿತಕ್ಕೊಳಪಟ್ಟಿತು. ಗುರುದಾಸಪುರ ನಗರ ಉ.ಅ ೩೨ ೬೩ ಮ್ತ್ತು ಪೂ.ರೇ. ೭೫ ೨೫ ಮೇಲೆ ಇದೆ. ಇಲ್ಲಿ ಸಾರಸ್ವತ ಬ್ರಾಹ್ಮಣರ ಒಂದು ಮಠವಿದೆ. ಆ ಕೋಟೆಯನ್ನು ಮೊಗಲರು ವಶಪಡಿಸಿಕೊಳ್ಳಲು ಹೆಚ್ಚಿನ ಶ್ರಮ ವಹಿಸಬೇಕಾಯಿತು. ಆ ಕೋಟೆಯ ರಕ್ಷಣೆಗಾಗಿ ಬಂದಾ ಬಹದ್ದೂರ್ ಅತ್ಯಂತ ಸಾಹಸದಿಂದ ಹೋರಾಟ ನಡೆಸಿದ. ಮೊಗಲರ ಚಕ್ರವರ್ತಿ ಬಹದ್ದೂರ್ ಷಹನ ನಿಧನದ ಅನಂತರ ಬಂದಾ ಮತ್ತು ಅವನ ಶಿಷ್ಯರು ತಾವು ಅಡಗಿಕೊಂಡಿದ್ದ ಸ್ಠಳದಿಂದ ಹೊರಬಂದು, ಕೈಬಿಟ್ಟು ಹೋದ ಪ್ರದೇಶವನ್ನು ಮತ್ತೆ ವಶಪಡಿಸಿಕೊಂಡು, ಸರ್ ಹಿಂದ್ ಪ್ರಾಂತ್ಯವನ್ನು ಲೂಟಿ ಮಾಡಿದರು. ಆದರೆ ೧೭೧೫ರಲ್ಲಿ ಮೊಗಲರು ಗುರುದಾಸಪುರ ಕೋಟೆಗೆ ಮುತ್ತಿಗೆ ಹಾಕಿದರು. ಆಗ ಅಲ್ಲಿದ್ದ ಸಿಕ್ಖರು ಬಂದಾನ ನೇತೃತ್ವದಲ್ಲಿ ತೀವ್ರವಾದ ಹೋರಾಟ ನಡೆಸಿ, ಆ ಕೋಟೆಯನ್ನು ರಕ್ಷಿಸಲು ಪ್ರಯತ್ನಪಟ್ಟರು. ಧೈರ್ಯದಿಂದ ಹೋರಾಡಿದರೂ ಪ್ರಯೋಜನವಾಗದೆ ಬಂದಾ ಮತ್ತು ಅವನ ಅನುಯಾಯಿಗಳು ಶರಣಾಗತರಾದರು. ಬಂದಾ ಮತ್ತು ಅವನ ಮಗನನ್ನು ಮೊಗಲರು ಕ್ರೂರವಾಗಿ ಕೊಲ್ಲಿಸಿದರು. ಸಿಕ್ಖರ ಪ್ರಾಬಲ್ಯ ಕಡಿಮೆಯಾಯಿತು. ಗುರುದ್ವಾರ; ಸಿಕ್ಖರ ಉಪಾಸನ ಮಂದಿರಗಳನ್ನು ಈ ಹೆಸರಿನಿಂದ ಕರೆಯುತ್ತಾರೆ. ಗುರುದ್ವಾರಗಳಲ್ಲಿ ಮುಖ್ಯವಾದುವು ಅಮೃತಸರ, ಕಪೂರ್ಥಲ, ಆನಂದಪುರ, ನಾಂದೇಡಗಳಲ್ಲಿವೆ. ಇವುಗಳಲ್ಲಿ ಸಿಕ್ಖರ ಪವಿತ್ರ ಗ್ರಂಥವಾದ ಗ್ರಂಥ್ ಸಾಹೇಬ್ ಪ್ರತಿಯನ್ನು ಇಟ್ಟಿರುತ್ತಾರೆ. ದೇವಸ್ಥಾನಗಳಲ್ಲಿ ಉತ್ಸವ ವಿಗ್ರಹದ