ಪುಟ:Mysore-University-Encyclopaedia-Vol-6-Part-8.pdf/೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಗುಲಾಬಿ ಸೇರಿದ. ರಣಜಿತ್ ಇವನ ನಿಷ್ಟೆ, ಧೈರ್ಯ, ಸಾಹಸಗಳನ್ನು ಮೆಚ್ಚಿ ಇವನಿಗೆ ಜಮ್ಮುವನ್ನು ಬಹುಮಾನವಾಗಿ ಕೊಟ್ಟ. ಗುಲಾಬಿ ಸಿಂಗನ ಅಧಿಕಾರ ಕ್ರಮೇಣ ಲಡಾಖ್ ಗೂ ವಿಸ್ತರಿಸಿತು. ೧೮೩೯ರಲ್ಲಿ ರಣಜಿತ್ ಸಿಂಗ್ ತೀರಿಕೊಂಡ ಮೇಲೆ ಇವನು ಖಾಲ್ಯದಲ್ಲಿ ತನ್ನ ಪ್ರಭಾವ ಬೆಳಸಿಕೊಂದು ಅದರಲ್ಲಿ ಅಧಿಕಾರ ಗಳಿಸಿದ.ಬ್ರಿಟಿಷರಿಗೂ ಸಿಕ್ಖರಿಗೂ ನಡೆದ ಸುಬ್ರಾನ್ ಕದನದಲ್ಲಿ (೧೮೪೬ ಫೆಬ್ರವರಿ ೧೦) ಗುಲಾಬ್ ಸಿಂಗನೂ ಪಾತ್ರ ವಹಿಸಿದ್ದ. ಆ ಕದನದಲ್ಲಿ ಇಂಗ್ಲೀಷರು ಜಯ ಗಳಿಸಿದರು.ಲಾಹೋರ್ ಅವರ ವಶವಾಯಿತು. ಬ್ರಿಟೀಷರೊಂದಿಗೆ ನಡೆದ ಸಂಧಾನದಲ್ಲಿ ಗುಲಾಬ್ ಸಿಂಗ್ ಪ್ರಧಾನ ಪಾತ್ರ ವಹಿಸಿದ. ೧೮೪೬ರ್ ಮಾರ್ಚ್ ೯ರಂದು ಲಾಹೋರ್ ಒಂಪದಕ್ಕೆ ಸಹಿ ಬಿತ್ತು.ಇದರ ಪ್ರಕಾರ ಕಾಶ್ಮೀರವು ಅದರ ಆಧೀನ ರಾಜ್ಯಗಳೂ ಬ್ರಿಟೀಷರಿಗೆ ಸೇರಿದವು.ಗುಲಾಬ್ ಸಿಂಗ್ ಕಾಶ್ಮೀರವನ್ನು ೧೦೦೦೦೦೦ ಪೌಂ. ಗಳಿಗೆ ಅವರಿಂದ ಕೊಂಡ. ಇವನಿಗೆ ಮಹಾರಾಜ ಪದವಿ ಪ್ರಾಪ್ತವಾಯಿತು.ಬ್ರಿಟೀಷರೊಂದಿಗೆ ಈತ ಸ್ನೆಹ ಸಂಬಂಧ ಉಳಿಸಿಕೊಂಡಿದ್ದು, ೧೮೫೭ರಲ್ಲಿ ನಡೆದ ಬಂಡಾಯದಲ್ಲಿ ಬ್ರಿಟೀಷರಿಗೆ ನೆರವು ನೀಡಿದೆ. ಗುಲಾಬ್ ಸಿಂಗ್ ತೀರಿಕೊಂಡಿದ್ದು ೧೮೫೭ರಲ್ಲಿ. ೧೯೪೭ ರ ಅಕ್ತೋಬರ್ ೨೦ರಂದು ಕಾಶ್ಮೀರ ಸ್ವತಂತ್ರ ಭಾರತದಲ್ಲಿ ವಿಲೀನಗೊಳ್ಳುವವರೆಗೂ ಇವನ ವಂಶದವರು ಆ ಸಂಸ್ಥಾನವನ್ನಾಳಿಸಿದರು. ಗುಲಾಬಿ: ರೋಸೇಸೀ ಕುಟುಂಬಕ್ಕೆ ಸೇರಿದ ಸುಂದರವಾದ, ಜನಪ್ರಿಯವಾದ, ಅಲ್ಂಕಾರಸಸ್ಯ (ರೋಸ್). ವೈಗ್ನ್ಯಾನಿಕ ಹೆಸರು ರೋಸ್.ವಿವಿಧ ಬಣ್ಣಗಳಿಂದ ಕೂಡಿದ ಅತೀ ಪ್ರಸಿದ್ಧವಾದುದೂ ಜನಪ್ರಿಯವಾದುದೂ ಆಗಿದೆಯಲ್ಲದೆ ಉದ್ಯಾನಗಾರಿಕೆಯಲ್ಲಿ ಬಹು ಹಿಂದಿನಿಂದಲೂ ಬಳಕೆಯಲ್ಲಿದೆ. ತನ್ನ ಹೂಗಳ ಅಪ್ರತಿಮ ಸೌಂದರ್ಯದಿಂದಾಗಿ ಗುಲಾಬಿ ಹೂಗಳ ರಾಣಿ ಎನಿಸಿಕೊಂಡಿದೆ. ಹೇನ್ಸ್ ಹೇಳಿದ ಹಾಗೆ ಯಾವಾಗ ಮೊಟ್ಟಮೊದಲ ಬಾರಿಗೆ ಮಾನವ ಗುಲಾಬಿಯನ್ನು ನೋಡಿ ಇದರ ಮಧುರವಾದ ವಾಸನೆಯನ್ನು ಸವಿದನೋ ಆಗಿನಿಂದಲೂ ಅವನ ಮನಸ್ಸನ್ನು ಇದು ಸೆರೆಹಿಡಿದುಬಿಟ್ಟಿದೆ. ಪ್ರಪಂಚದ ಸಮಶೀತೋಷ್ಣವಲಯದ ಉತ್ತರ ಭಾಗದ ದೇಶಗಳಲ್ಲೂ ಮೆಕ್ಸಿಕೊ, ಭಾರತ ಮುಂತಾದ ದೇಶಗಳ ಉನ್ನತ ಪ್ರದೇಶಗಳಲ್ಲೂ ಇದರ ಬೇಸಾಯ ಉಂಟು. ಗುಲಾಬಿ ಭಾರತದಲ್ಲಿ ಬಹಳ ಹಿಂದಿನಿಂದಲೂ ಬೇಸಾಯದಲ್ಲಿತ್ತೆಂದು ತಿಳಿದುಬಂದಿದೆ.ಪುರಾಣದ ಕಥೆಗಳಲ್ಲಿ , ಕಾವ್ಯಗಳಲ್ಲಿ ಇದರ ಉಲ್ಲೇಖ ಉಂಟು. ಸಂಸ್ಕ್ರತದಲ್ಲಿ ಇದಕ್ಕೆ ತರುಣಿ ಪುಷ್ಪ, ಅತಿಮಂಜುಲ, ಸೇಮಂತಿಕೆ ಮುಂತಾದ ಹೆಸರುಗಳಿವೆ. ಮೊಗಲರಿಗೆ ಗುಲಾಬಿ ಅತಿಮೆಚ್ಚಿನ ಹೂವಾಗಿತ್ತು. ಗ್ರೀಕರ ಮತ್ತು ರೋಮನರ ಪುರಾಣಗಳ ಪ್ರಕಾರ ಗುಲಾಬಿ ಪ್ರೇಮ ಮತ್ತು ಸೌಂದರ್ಯದೇವತೆಯ ಮೆಚ್ಚಿನ ಹೂ.ಬಾಟಿಸೆಲೆಯ ಸುಪ್ರಸಿದ್ಧ ಕಲಾಕೃತಿಯಾದ "ವೀನಸ್ ದೇವತೆಯ ಜನನ" ಎಂಬುದರಲ್ಲಿ ಮೀನಸಿನ ಜನನದೊಂದಿಗೆ ಗುಲಾಬಿ ಹೂವೂ ಉದ್ಭವಿಸುತ್ತಿರುವಂತೆ ತೋರಿಸಲಾಗಿದೆ.ಪ್ರೇಮ ಮತ್ತು ಪ್ರಣಯಗಳಲ್ಲಿ ಗುಲಾಬಿ ಬಹುಮುಖ್ಯ ಪಾತ್ರವಹಿಸುತ್ತದೆ. ಗುಲಾಬಿ ಹೂವನ್ನು ಒಬ್ಬ ಸುಂದರ ಯುವತಿಗೆ ಹೋಲಿಸಲಾಗಿದ್ದು ಅವಳು ತನ್ನ ಪ್ರಣಯಿಯಾದ ಜೆಫಿರ್ನನ್ನು ಮುತ್ತಿಡಲೋಸುಗವೆಂಬಂತೆ ತನ್ನ ದಳಗಳನ್ನು ಅರಳಿಸುತ್ತಳೆಂದು ಹೇಳಲಾಗಿದೆ. ರೋಮನರು ಗುಲಾಬಿಯನ್ನು ಬಾಯ್ ಡ ಬಲೋನ್ ನಲ್ಲಿನ ಬಗಾಟೆಲ್ ತೋಟ ಇವುಗಳಲ್ಲೆಲ್ಲ ಅತಿ ಪ್ರಸಿದ್ಧವಾದ್ದು.ಇದಕ್ಕೆ ಬಹಳ ಸಮೀಪದಲ್ಲಿರುವ ಲಾ ಹೇ ಎಂಬಲ್ಲಿನ ಗುಲಾಬಿ ತೋಟವೂ ಅಷ್ಟೆ.ಯೂರೋಪಿನಲ್ಲಿರುವ ಎಲ್ಲ ಬಗೆಯ ಗುಲಾಬಿ ಗಿಡಗಳ ಸಂಗ್ರಹ ಇಲ್ಲಿದೆ ಎಂದು ಹೇಳಲಾಗಿದೆ. ಹಾಗೆಯೇ ಜಿನೀವದಲ್ಲಿನ ಪಾರ್ಕ್ ಲಾ ಗ್ರಾಂಜ್, ಇಂಗ್ಲೆಂಡಿನಲ್ಲಿರುವ ಕ್ವೀನ್ ಮೇರೀಸ್ ರೋಸ್ ಗಾರ್ಡನ್ (ರೀಜೆಂಟ್ಸ್ ಪಾರ್ಕಿನಲ್ಲಿದೆ), ಐರ್ಲೆಂಡಿನ ರೂಸಬರೋದಲ್ಲಿನ ತೋಟ, ಅಮೆರಿಕದಲ್ಲಿನ ಹಾರ್ಟ್ಫರ್ಡ್ ಮತ್ತು ಹರ್ಶೆಗಳಲ್ಲಿನ ತೋಟಗಳು, ಭಾರತದಲ್ಲಿ ಪತಿಅಲ ಮಹರಾಜರ ಗುಲಾಬಿ ತೋಟ-ಇವು ಇತರ ಜಗತ್ಪ್ರಸಿದ್ಧ ಗುಲಾಬಿ ತೋಟಗಳು. ಭಾರತದ ಗುಲಾಬಿ ಸಂಘ ನವದೆಹಲಿಯ ಸಪ್ದರ್ಜಂಗ್ ಬಳಿ ರಾಷ್ಟ್ರೀಯ ಗುಲಾಬಿ ತೋಟವೊಂದನ್ನು ಅಭಿವೃದ್ಧಿಗೊಳಿಸಬೇಕೆಂದು ನಿರ್ಧರಿಸಿದೆ. ಪ್ರಪಂಚಾದ್ಯಂತ ಗುಲಾಬಿ ಬೆಳೆಸುವುದನ್ನು ಉತ್ತೇಜಿಸುವ ಮತ್ತು ಹೊಸ ಗುಲಾಬಿ ಜಾತಿಗಳನ್ನು ಬಿಡುಗಡೆ ಮಾಡುವ ಮುಖ್ಯ ಉದ್ದೇಶಗಳನ್ನುಳ್ಳ ಎರಡು ಅಂತಾರಾಷ್ಟ್ರೀಯ ಗುಲಾಬಿ ಸಂಘಗಳಿವೆ. ಇವೇ ನ್ಯಾಷನಲ್ ರೋಸ್ ಸೊಸೈಟಿ, ಇಂಗ್ಲೆಂಡ್ ಮತ್ತು ಇಂಟರ್ ನ್ಯಷನಲ್ ರೋಸ್ ಸೊಸೈಟಿ, ಅಮೆರಿಕ. ಸಸ್ಯ ವೃತ್ತಾಂತ: ಗುಲಾಬಿಯ ಬಹುಪಾಲು ಬಗೆಗಳು ಪೊದೆಸಸ್ಯಗಳು.ಕೆಲವು ಬಳ್ಳಿಗಳೂ ಇವೆ.ಕಾಂಡದ ಮೇಲೆಲ್ಲ ಕೆಳಗೆ ಬಾಗಿರುವ ವಿಶಿಷ್ಟ ರೀತಿಯ ಮುಳ್ಳುಗಳಿವೆ.ಸಾಮಾನ್ಯವಾಗಿ ಪುಟ್ಟ ಗಾತ್ರದವಾದ ಇವು ಬಳ್ಳಿಯಂತೆ ಹಬ್ಬುವ ಗುಲಾಬಿ ಬಗೆಗಳಲ್ಲಿ ದೃಡವಾಗಿಯೂ ಉದ್ದವಾಗಿಯೂ ಇವೆ.ಗುಲಾಬಿ ಗಿಡದ ಎಲೆಗಳು ಸಂಯುಕ್ತ ಮಾದರಿಯವು; ಪರ್ಯಾಯ ಮಾದರಿಯಲ್ಲಿ ಜೋಡಣಿಗೊಂಡಿವೆ.ಒಂದೊಂದು ಎಲೆಯಲ್ಲೂ ೧-೧೧ ಕಿರುಎಲ್ಗಳಿವೆ.ಪ್ರತಿ ಎಲೆಯಲ್ಲಿ ಒಂದು ಅಕ್ಷ (ರೇಕಿಸ್) ಇದೆ. ಅದರ ತುದಿಯಲ್ಲಿ ಒಂದು ಕಿರುಎಲೆಯೂ ಅದರ ಅಕ್ಕಪಕ್ಕಗಳಲ್ಲಿ ಜೊತೆಜೊತೆಯಾಗಿ ಸಮಾವೇಶಗೊಂಡಿರುವ ಇತರ ಕಿರುಎಲೆಗಳೂ ಇವೆ.ಎಲೆಯ ಬುಡದಲ್ಲಿ ತೊಟ್ಟಿಗೆ ಅಂಟಿಕೊಂಡಿರುವ ಎರಡು ವೃಂತಪರ್ಣಗಳಿವೆ.ಗುಲಾಬಿ ಹೂಗಳು ಒಂಟಿಯಾಗಿ, ಇಲ್ಲವೆ ಮಧ್ಯಾರಂಭಿ ಮಾದರಿಯ ಹೂಗೊಂಚಲುಗಳಲ್ಲಿ ಮೂಡುತ್ತೇವೆ.ವನ್ಯಗುಲಾಬಿಗಳ ಹೂಗಳಲ್ಲಿ ದಳಗಳ ಸಂಖ್ಯೆ ೫.ಉದ್ಯಾನಗಾರಿಕೆಯಲ್ಲಿ ಬೆಳೆಸಲಾಗುವ ಮಿಶ್ರತಳಿಗಳಲ್ಲಿ ದಳಗಳ ಸಂಖ್ಯೆ ೫ ಕ್ಕಿಂತ ಹೆಚ್ಚು.ದಳಗಳ ಬಣ್ಣ ಅಚ್ಚಬಿಳಿ, ಕೆನೆ,ಹಳದಿ, ನಸುಗೆಂಪು,