ಪುಟ:Mysore-University-Encyclopaedia-Vol-6-Part-8.pdf/೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಗುಲಿಸ್ತಾನ್ ಒಪ್ಪಂದ - ಗುಲ್ಜಾರಿಲಾಲ್ ನಂದಾ

ಖಲೀಫ ಪ್ರರೂಪ: ಈ ಪ್ರರೂಪಿ ನಾಣ್ಯದ ಮುಂಬದಿಯಲ್ಲಿ ಅರಬ್ಬಿ ಲಿಪಿಯಲ್ಲಿ ಖಲೀಫನ ಹೆಸರೂ ಹಿಂಬದಿಯಲ್ಲಿ ಅಶ್ವಾರೋಹಿ ಪ್ರರೂಪಿ ನಾಣ್ಯದಲ್ಲಿರುವಂತೆಯೇ ಸುಲ್ತಾನನ ಹೆಸರು ಮತ್ತು ವಿವರಗಳೂ ಇವೆ. ಇಲ್ತಮಿಷ್, ಅಲ್ಲಾವುದ್ದೀನ್, ಮಸೂದ್, ಷಹ, ನಾಸಿರುದ್ದೀನ್ ಮಹಮ್ಮುದ್ ಮತ್ತು ಘಿಯಸುದ್ದೀನ್ ಬಲ್ಬನ್ ಇವರ ಸುವರ್ಣ ನಾಣ್ಯಗಳು ಮಾತ್ರ ಇದುವರೆಗೆ ದೊರೆತಿವೆ.ಚಿನ್ನದ ಟಂಕಗಳಲ್ಲದೆ ಇದೇ ಲೋಹದ ಮತ್ತು ಇದೇ ಬಗೆಯ ಬೇರೆಬೇರೆ ಮೌಲ್ಯಗಳ ನಾಣ್ಯಗಳು ಚಲಾವಣೆಯಲ್ಲಿದಾವು.

ಬೆಳ್ಳಿಯ ನಾಣ್ಯಗಳು: ಚಿನ್ನದ ಟಂಕಗಳಂತೆಯೇ ಬೆಳ್ಳಿಯ ಟಂಕಗಳೂ ಗಾತ್ರ ಮತ್ತು ತೂಕಗಳಲ್ಲಿ ಸಮಾನಾಗಿದ್ದವು; ಇವು ಚಿನ್ನದ ನಾಣ್ಯಗಳಿಗಿಂತ ಹೆಚ್ಚು ಸ್ಂಖ್ಯೆಯಲ್ಲಿ ದೊರತಿವೆ. ಉಳಿದ ಸುಲ್ತಾನರ ಬೆಳ್ಳಿಯ ಟಂಕಗಳು ಖಲೀಫ ಪ್ರರೂಪದಲ್ಲಿ ಮಾತ್ರ ದೊರತಿವೆ. ಕುತುಬ್-ಉದ್-ದೀನನ ಬೆಳ್ಳಿಯ ನಾಣ್ಯಗಳು ಇದುವರೆಗೆ ದೊರೆತಿಲ್ಲ.

ಮಿಶ್ರಲೋಹದ ನಾಣ್ಯಗಳು: ಈ ನಾಣ್ಯಗಳನ್ನು ಚಿನ್ನ ಅಥವಾ ಬೆಳ್ಳಿಯ ಅಂಶವಿರುವ ಮಿಶ್ರಲೋಹದಿಂದ ಮಾಡಲಾಗಿದೆ. ಆ ಕಾಲದ ಜಿಕಾಲುಗಳು ಈ ಲೋಹದವು. ಇವುಗಳ ತೂಕ ೪೫-೫೫ ಗ್ರೇನ್. ಇವನ್ನು ಮುಸ್ಲಿಂ ದೊರೆಗಳು ಮುದ್ರಿಸಿರುವುದಾದರೂ ಇವುಗಳಲ್ಲಿ ಭಾರತೀಯ ನಾಣ್ಯಗಳ ಪರಂಪರೆಯನ್ನುಳಿಸಿಕೊಂಡು ಬಂದಿರುವುದು ವಿಶೇಷ ಸಂಗತಿ. ಏಕೆಂದರೆ ಇವು ಅತ್ಯಂತ ಹೆಚ್ಚಾಗಿ ಚಲಾವಣೆಯಲ್ಲಿದ್ದ ನಾಣ್ಯಗಳು ಸಾಮಾನ್ಯವಗಿ ಇವುಗಳ ಮುಂಬದಿಯಲ್ಲಿ ಶಿವನ ವಾಹನವಾದ ನಂದಿಯ ಚಿತ್ರವೂ ದೇವನಾಗರಿ ಲಿಪಿಯಲ್ಲಿ ಸುಲ್ತಾನನ ಹೆಸರೂ ಇವೆ. ಹಿಂಬದಿಯಲ್ಲಿ ಚೌಹಾನ್ ಅಶ್ವಾರೊಹಿಯ ಚಿತ್ರವೂ ಸುಲ್ತಾನನ ಬಿರುದುಗಳೂ (ಉದಾ: ಶ್ರೀ ಹಮೀರ, ಶ್ರೀ ಪೃಥ್ವಿರಾಜದೇವ) ದೇವನಾಗರೀ ಲಿಪಿಯಾಲ್ಲಿವೆ. ಇವುಗಳಲ್ಲಿ ಇದೆ ಬಗೆಯ ಆದರೆ ಅರಬ್ಬಿ ಲಿಪಿಯಲ್ಲಿ ವಿವರಗಳನ್ನು ಕೊಟ್ಟಿರುವ ನಾಣ್ಯಗಳೂ ಉಂಟು.

ತಾಮ್ರದ ನಾಣ್ಯಗಳು: ಇವು ಕಡಿಮೆ ಆಕಾರ ಮತ್ತು ಮೌಲ್ಯಗಳ ನಾಣ್ಯಗಳು. ಇವುಗಳ ತೂಕ ೧೨-೭೦ ಗ್ರೇನುಗಳು. ಇವುಗಳಲ್ಲಿ ಬಹು ಸಂಖ್ಯೆಯ ನಾಣ್ಯಗಳ ಮೇಲೆ ಎರಡೂ ಬದಿಗಳಲ್ಲಿ ಅರಬ್ಬಿ ಲಿಪಿಯಲ್ಲಿ ವಿವರಗಳಿವೆಯಾದರೂ ದೇವನಗರೀ ಲಿಪಿಯಲ್ಲಿ ವಿವರಗಳುಳ್ಳ ಮತ್ತು ಮುಂಬದಿಯಲ್ಲಿ ಗೂಳಿಯ ಚಿತ್ರವಿರುವ ನಾಣ್ಯಗಳೂ ಉಂಟು.

ಗುಲಿಸ್ತಾನ್ ಒಪ್ಪಂದ: ಈಗಿನ ಪಾಕಿಸ್ತಾನದ ಬಲೂಟಿಸ್ತಾನ ಪ್ರಂತದಲ್ಲಿ, ಕ್ವೆಟ್ಟದ ವಾಯುವ್ಯಕ್ಕೆ ೬೫ ಕಿಮೀ ದೂರದಲ್ಲಿ ಗುಲಿಸ್ತಾನ ಎಂಬ ಗ್ರಾಮದ ಬಳಿ ರಷ್ಯ ಮತ್ತು ಪರ್ಷಿಯಗಳು ೧೮೧೩ರ ಅಕ್ಟೋಬರ್ ೧೨ರಂದು ಮಾಡಿಕೊಂಡ ಒಪ್ಪಂದ. ಸು. ೧೨ ವರ್ಷಗಳ ಕಾಲ ಸತತವಾಗಿ ಯುದ್ಧಮಾಡಿ ಮೊದಮೊದಲು ಒಂದೆರಡು ಕಡೆ ಜಯ ಗಳಿಸಿದರೂ ಆಮೇಲೆ ಸೋಲಿನ ಪರಂಪರೆಯನ್ನೇ ಅನುಭವಿಸಬೇಕಾಗಿ ಬಂದ ಪರ್ಷಿಯ ರಷ್ಯದೊಡನೆ ಈ ಶಾಂತಿಒಪ್ಪಂದವನ್ನೇ ಮಾಡಿಕೊಂಡಿತು. ಈ ಒಪ್ಪಂದದ ತೀರ್ಮಾನಗಳಿವು: ೧. ಡೆರ್ಬೆಂಟ್, ಬಾಕೊ, ಷಿರ್ವಾನ್, ಷಾಕಿ, ಕಾರಾಬಾಗ್ ಮತ್ತು ತಾತಿಷನ್ ಕೆಲವು ಭಾಗಗಳನ್ನು ರಷ್ಯಕ್ಕೆ ಪರ್ಷಿಯ ವಹಿಸಿಕೊಡಬೇಕು. ೨. ಬಾರ್ಜಿಯ, ದಾಗೆಸ್ತಾನ್, ಮಿಂಗ್ರೇಲಿಯ, ಇಮರ್ಷಿಯ, ಅಬ್ಕೇಷಿಯ ಇವುಗಳ ಮೇಲಿನ ಸಾರ್ವಭೌಮಾಧಿಕಾರವನ್ನು ರಷ್ಯಕ್ಕೆ ಪರ್ಷಿಯ ವರ್ಗಾಯಿಸಿ ಕೊಡಬೇಕು. ೩. ಕ್ಯಾಸ್ಪಿಯನ್ ಸಮುದ್ರದಲ್ಲಿ ಪರ್ಷಿಯ ತನ್ನ ನೌಕಾಬಲವನ್ನು ಇಡಕೂಡದು. ೪. ಇದಕ್ಕೆ ಪ್ರತಿಫಲವಾಗಿ ರಷ್ಯ ಪರ್ಷಿಯದ ದೊರೆ ಫತೆ ಅಲಿ ಷಹನ ಉತ್ತರಾಧಿಕಾರಿ ಅಬ್ಬಾಸ್ ಮಿರ್ಜಾನಿಗೆ ಪರ್ಷಿಯ ದೇಶದ ಗಾದಿಯನ್ನು ದೊರಕಿಸಿಕೊಡಲು ಸಹಾಯ ಮಾಡತಕ್ಕದ್ದು.

ಮಧ್ಯಪ್ರಾಚ್ಯದಲ್ಲಿ ಪ್ರಬಲ ಶಕ್ತಿಯಾಗಿದ್ದ ಪರ್ಷಿಯದ ರಾಜಕೀಯ ಚಿತ್ರವನ್ನೇ ಈ ಒಪ್ಪಂದ ಬದಲಾಯಿಸಿತು. ಮೇಲುನೋಟಕ್ಕೆ ಪ್ರಬಲವಾಗಿ ಕಂಡರು ರಷ್ಯಕ್ಕೆ ನೆಪೋಲಿಯನನ ದಂಡಯಾತ್ರೆಗಳ ಭಯ ತಪ್ಪಿರಲಿಲ್ಲ. ಇದಕ್ಕಗಿಯೇ ಅದು ಇಂಗ್ಲೆಂಡಿನೊಡೊನೆ ೧೮೧೨ರಲ್ಲಿ ಒಪ್ಪಂದವನ್ನು ಮಾಡಿಕೊಂಡಿತ್ತು. ದಕ್ಶಿಣದ ಪ್ರಬಲ ರಾಷ್ತ್ರವಾದ ಪರ್ಷಿಯದೊಡನೆ ಹೇಗಾದರೂ ಶಾಂತಿ ಒಪ್ಪಂದ ಮಾಡಿಕೊಳ್ಳಬೇಕೆಂಬ ಅದರ ಉದ್ದೇಶ ಗುಲಿಸ್ತಾನ ಒಪ್ಪಂದದಿಂದ ಫಲಿಸಿತು. ಆಗ ಅದು ತಮ್ಮ ಗಮನವನ್ನು ಪಶ್ಚಿಮದತ್ತ ಹರಿಸಲು ಅನುಕೂಲವಾಯಿತು. ಮೊದಲೇ ಉತ್ತರಾಧಿಕಾರಕಾಗಿ ಅಂತಃಕಲಹದಲ್ಲಿ ತೊಡಗಿದ್ದ ಅಬ್ಬಾಸ್ ಮಿರ್ಜಾ ಮತ್ತು ಸೋದರರು ತಮ್ಮ ರಾಷ್ಟ್ರದ ಹಿತಾಸಕ್ತಿಯನ್ನು ಕಡೆಗಣಿಸಿದರು. ಅಬ್ಬಾಸ್ ಮಿರ್ಜಾ ಪ್ರಬಲವಾಗಿ ರಷ್ಯದೊಡನೆ ಮಾಡಿಕೊಂಡ ಒಪ್ಪಂದ ಪರ್ಷಿಯಕ್ಕೆ ಮಾರಕವಾಯಿತು. ಖಳೆದುಕೊಂಡಿದ್ದ ಭಾಗಗಳನ್ನು ಮತ್ತೆ ಬ್ರಿಟಿಷರ ಸಹಾಯದಿಂದ ಗಳಿಸಿಕೊಳ್ಳುವೆನೆಂಬ ಅವನ ಆಶೆ ಹಗಲುಗನಸಾಯಿತು. ಅಂತೂ ಗುಲಿಸ್ತಾನ್ ಒಪ್ಪಂದ ಮುಂದೆ ಹತ್ತು ಹನ್ನೆರಡು ವರ್ಷಗಳ ಶಾಂತಿಗೆ ಕಾರಣವಾಯಿತು. ೧೮೨೬ರ ತನಕ ಪರ್ಷಿಯ- ರಷ್ಯಗಳ ಮಧ್ಯೆ ಯುದ್ಧವಾಗದಿದ್ದರೂ ೧೮೧೪ರಲ್ಲಿ ಬ್ರಿಟಿಷರು ಟೆಹರಾನ್ ಒಪ್ಪಂದ ಮಾಡಿಕೊಂಡು ಮತ್ತೆ ಪರ್ಷಿಯದ ಸ್ನೇಹಿತರಾದರು. ಇದರಿಂದ ಪರ್ಷಿಯ ರಷ್ಯದೊಡನೆ ತನ್ನ ರಾಜಕೀಯ ಸಂಬಂಧ ಕಡಿದುಕೊಳ್ಳಬೇಕಾಯಿತು. ಮತ್ತಾವ ಐರೋಪ್ಯ ರಾಷ್ಟ್ರವೂ ಬ್ರಿಟಿಷರ ಅನುಮತಿಯಿಲ್ಲದೆ ಪರ್ಷಿಯವನ್ನು ಪ್ರವೇಶಿಸದಂತಾಯಿತು. ಪೂರ್ವದ ಆಫ್ಘಾನಿಸ್ತಾನದೊಡನೆ ಪರ್ಷಿಯ ಅಗಾಗ್ಗೆ ಸಣ್ಣ ಪುಟ್ಟ ಕದನಗಳನ್ನು ಮಾಡುವಲ್ಲಿ ತನ್ನ ಗಮನವನ್ನು ಕೇಂದ್ರೀಕರಿಸಿತು.

ಗುಲ್ಜಾರಿಲಾಲ್ ನಂದಾ: ೧೮೯೮-೧೯೯೮. ಭಾರತದ ಒಬ್ಬ ರಾಜಕಾರಣಿ, ಕಾರ್ಮಿಕ ಸಂಘಟಕ, ಸಮಾಜ ಸುಧಾರಕ ಮಾಜಿ ಮಂತ್ರಿ, ಎರಡು ಸಾರಿ ಇವರು ಹಂಗಾಮಿ ಪ್ರಧಾನಮಂತ್ರಿಯಾಗಿದ್ದರು. ೧೮೯೮ರ ಜುಲೈ ೪ ರಂದು ಪಂಜಾಬಿನ ಸಿಯಾಲ್ಕೋರ್ಟ್ನಲ್ಲಿ ಜನಿಸಿದ ಇವರು ಲಾಹೋರಿನ ಫೋರ್ಮನ್ ಕ್ರಿಶ್ಚನ್ ಕಾಲೇಜಿನಲ್ಲಿ ವ್ಯಾಸಂಗ ಮಾಡಿ ಎಂ.ಎ.ಎಲ್.ಎಲ್.ಬ್ ಪದವೀಧರರಾದರು. ಆಗ್ರ ಹಾಗೂ ಅಲಹಾಬಾದ್ ಗಳಲ್ಲೂ ವ್ಯಾಸಂಗ ಮಾಡಿದರು. ೧೯೨೪ ರಲ್ಲಿ ಗಾಂಧೀಜಿಯವರ ಅನುಯಾಯಿಯಾಗಿ ಅಸಹಕಾರ ಚಳವಳಿಯಲ್ಲಿ ಭಾಗವಹಿಸಿದರು. ೧೯೨೧ರಿಂದ ೧೯೪೬ ರವರೆಗೆ ಮುಂಬಯಿಯ ನ್ಯಾಷನಲ್ ಕಾಲೇಜಿನಲ್ಲಿ ಅರ್ಥಶಾಸ್ತ್ರ ಪ್ರಾಧ್ಯಾಪಕರಾಗಿದ್ದರು. ಅಲಹಬಾದ್ ವಿಶ್ವವಿದ್ಯಾಲಯದಲ್ಲಿ ಸಂಶೋಧನೆ ನಡೆಸಿದರು. ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಿದ್ದ ಇವರನ್ನು ಸರ್ಕಾರ ೧೯೩೨ರಲ್ಲೂ ೧೯೪೨-೪೪ ರಲ್ಲೂ ಬಂಧನದಲ್ಲಿಟ್ಟಿತ್ತು. ೧೯೪೫ ರ ಡಿಸೆಂಬರ್ ನಲ್ಲಿ ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆಯನ್ನು ರೂಪಿಸಲು