ಪುಟ:Mysore-University-Encyclopaedia-Vol-6-Part-8.pdf/೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಗುಪ್ತರು ಚಂದ್ರವರ್ಮ(ಪುಷ್ಕರಣ ರಾಜ-ಬಂಗಲದ ಬಾಂಕುರ ಜಿಲ್ಲೆ),ಗಣಪತಿ ನಾಗ (ವಿದಿಶದ ನಾಗದೊರೆ),ನಾಗಸೇನ (ಪದ್ಮಾವತಿಯನಾಗ ದೊರೆ);ಅಚ್ಯುತ (ಅಹಿಚ್ಛತ್ರದ ರಾಜ),ನಂದಿ (ನಾಗದೊರೆ ಶಿವನಂದಿ)ಮತ್ತು ಬಲವರ್ಮನ್(ಆಸ್ಸಾಮಿನ ರಾಜ),ಅವು ಹೇಗೇ ಇರಲಿ,ಇವರನ್ನು ಸೋಲಿಸಿದ ಪರಿಣಾಮವಗಿ ಸಮುದ್ರಗುಪ್ತ ಉತ್ತರಪ್ರದೇಶ,ಮಧ್ಯಭಾರತದ ಪೊರ್ವದಲ್ಲಿ,ಬಂಗಾಲ,ಬಿಹಾರ ಮುಂತಾದ ಪ್ರದೇಶಗಳನೋಳಗೊಂಡ,ಉತ್ತರ ಭಾರತದ ವಿಸ್ತಾರಪ್ರದೇಶದ ಸಾಮ್ರಾಟನಾದ.

 ಅನಂತರ ಸಮುದ್ರಗುಪ್ತ ದಕ್ಷಿಣಪಥದ ಕಡೆಗೆ ದಿಗ್ವಿಜಯಕ್ಕಾಗಿ ಹೊರಟ.ಅದಕ್ಕೆ ಮೋದಲು ದಾರಿಯಲಿದ್ದ ಎಲ್ಲ ಆಟವಿಕ ರಾಜರನ್ನೊ ತನ್ನ ಆದೀನರನ್ನಾಗಿ ಮಾಡಿಕೊಂಡು. ಬಹುಶಃ ವಿಂಧ್ಯ ಪರ್ವತದ ಪೊರ್ವಕ್ಕೆ ಬಾಫೇಲಖಂಡ,ರೇವ









ಮತ್ತು ಛೋಟಾನಾಗಪುರಗಳನ್ನೋಳಗೊಂಡ ಅಡವಿ ಪ್ರದೇಶದಲ್ಲಿ ಈ ರಾಜರು ಅಳುತ್ತಿದ್ದು ಬಹಳ ಕಿರುಕುಳ ನೀಡುತ್ತೀದ್ದಿರಬೇಕು.
    ದಕ್ಷಿಣಾ ಅರಸರ ವಿಷಯದಲ್ಲಿ ಸಮುದ್ರಗುಪ್ತನರು ಗ್ರಹಣ, ಮೋಕ್ಷ ಮತ್ತು ಅನುಗ್ರಹ ನೀತಿಯಾಗಿತ್ತು,ಮೇಲೆ ಹೇಳಿದಂತೆ ಅವರ ರಾಜ್ಯವನ್ನು ಸ್ವಾಧೀನಪಡಿಸಿಕೊಳ್ಳದೆ, ಅವರನ್ನು ಸೋಲಿಸಿದ ಬಳಿಕ ಬಿಡುಗಡೆ ಮಾಡಿ,ಅವರ ರಾಜ್ಯದಲ್ಲಿ ಅವರನ್ನು ಪುನಃ ಸ್ಥಾಪಿಸಿ ಅವರನ್ನು ತನ್ನ ವಿಧೇಯರಾದ ಸಾಮಂತರನ್ನಾಗಿ ಮಾಡಿಕೊಂಡ.ಇದು ಇವನ ರಾಜನೀತಿ ಚತುರಕೆಯನ್ನು ಸೊಚಿಸುತ್ತದೆ. ಈ ವಿಷಯವನ್ನು ಪ್ರಾಸ್ತಾಪಿಸುವಾಗ ಕವಿಗಳು ಸಮುದ್ರಗುಪ್ತ ಸೋಲಿಸಿದ ರಾಜರ ಹೆಸರುಗಳನ್ನೇ ಅಲ್ಲದೆ ಅವರು ಆಳುತ್ತಿದ್ದ ರಾಜ್ಯಗಳ ಹೆಸರುಗಳನ್ನೊ ಸೊಚಿಸಿದ್ದಾರೆ