ಪುಟ:Mysore-University-Encyclopaedia-Vol-6-Part-9.pdf/೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಗುಹಾ ವಾಸ್ತುಶಿಲ್ಪ ದುಕ್ಕಾನ್-ಇ-ದಾವೂದ್ ಮತ್ತು ಸಖ್ನದ ಗುಹೆಗಳು ಕೂಡ ವಿನ್ಯಾಸದಲ್ಲೆ ಸ್ಥೂಲವಾಗಿ ಮೇಲಿನ ರೀತಿಯಿವೆ. ದುಕ್ಕಾನ್-ಇ-ದಾವೂದ್, ಕೀಲ್-ಇ-ದಾವೂದ್ ಎಂದು ಕರೆಯುವ ಧಾ‍ರ್ಮಿಕ ಶಿಲ್ಪಗಳಿರುವ ಭಿತ್ತಿ. ಸಖ್ನದ ಗುಹೆಯ ಮೇಲಿರುವ ಅಹುರ್ ಮಜ್ದನ ಚಹ್ನೆ ಇವು ಶಿಲ್ಪಗಳೆಂದು ಪರಿಗಣಿತವಾಗಿವೆ. ಪರ್ಷಿಯನ್ ಸಾಮ್ರಾಜ್ಯ ಕಾಲಕ್ಕೆ ಸೇರಿದೆ ಬಹುಮುಖ್ಯವಾದ ಗುಹಾ ವಾಸ್ತು ನಿರ್ಮಾಣಗಲೂ ಇರಾನಿನ ಪರ್ಸೆಪಲಿಸ್ ದಾಳಿ ಇವೆ. ಇಉಗಳಲ್ಲಿ ಅತ್ಯಂತ ಹಳೆ ಯುವು ನಕ್ಷೆ-ಇ-ರಸ್ತುಂ ಎಂಬಲ್ಲಿವೆ ಇವು ೧ನೆಯ ದೇರಿಯಸ್ (ಪ್ರ.ಶ ಪೂ ೫೨೧-೪೮೫), ೧ನೆಯ ಜರ್ಕ್ಸಿಸ್ (ಪ್ರ ಪೂ ೪೮೫-೪೬೫) ೧ನೆಯ ಆರ್ಟಗ್ಸರ್ಕಸಿಸ್ (ಪ್ರಶಪೂ ೪೬೫-೪೨೪) ಮತಹತು ೨ನೆಯ ಡೇರಿಸ್ (ಪ್ರಶಪೂ ೪೨೪-೪೦೫) ದೊರೆಗಳ ಸಮಾಧಿಗಳು ಈ ಸಮಾಧಿಗಳಲ್ಲಿ ಶಿಲುಬೆಯಾಕಾರದಲ್ಲಿ ಕೊರೆದು ವಿಶಾಲವಾದ ಮುಮ್ಮುಖವಿದ್ದು ಮುಂದಿನ ಅಡ್ಡಪಟ್ಟಿಯಲ್ಲಿ ಪರ್ಪೆಪಲಿಸ್ ರೀತಿಯವೆಂದು ಕರೆಯುವ ನಾಲ್ಕು ಕಂಬಗಳಿಂದ ಎತ್ತಿದ ವರಾಂಡವೂ ಸದೆಬಡಿದ ರಾಷ್ಟ್ರಗಳಿಂದ ಎತ್ತಿದಹಿಡಿಯಲ್ಪಡ್ಡಂತೆ ಕೆತ್ತಲ್ಪಟ್ಟಿವೆ . ಪರ್ಸೆಯನ್ ಬಳಿಯಲ್ಲೇ ಕೂಹ್-ಎ-ರಹ್ಮತ್ ಬೆಟ್ಟದ ಬುಡದಲ್ಲಿ ಮುಂದಿನ ಪರ್ಷಿಯನ್ ಚಕ್ರಾಧಿಪತಿಗಳಾದ ೨ನೆಯ ಆರ್ಟಗ್ಸರ್ಕ್ಸ‍ಸಿಸ್(ಪ್ರ.ಶ.ಪೂ ೪೦೪-೩೫೯) ಮತ್ತು ೩ನೆಯ ಆರ್ಟಗ್ಸರ್ಕಸಿಸ್ ವ(ಪ್ರ.ಶ.ಪೂ ೩೫೯-೩೩೮) ಸಮಾಧಿಹಳನ್ನು ಪೂಜಿಸುವ ಉತ್ತಮ ಉಬ್ಬುಶಿಲ್ಪಗಳಿವೆ ಪ್ರ ಶ ೪-೫ನೆ ಯ ಶತಮಾನಕ್ಕೆ ಸೇರಿದ ಸಸ್ಸೌನೀಯ ಅರಸರ ಶಿಲ್ಪಗಳನ್ನೊಳಗೊಂಡ ಭೀತ್ತಿಗಳು ಮತ್ತು ಗುಹೆಗಳು ಇರಾನಿನ ತಖ್ತ್-ಎ-ಜಮಷಿದ್ ಎಂಬಲ್ಲಿವೆ. ಭಾರತದ ಪ್ರಭ್ರಾವ: ಈಜಿಪ್ಟ್, ಪಶ್ಚಿಮ ಏಷ್ಯ ಮತ್ತು ಮೆಡಿಟರೇನಿಯನ್ ಪ್ರದೇಶಗಳಲ್ಲಿ ಹರಡಿದ್ದು ಗುಹಾ ವಾಸ್ತು ಹೆಚ್ಚು ಮಟ್ಟಿಗೆ ಸಮಾಧಿವಾಸ್ತು ಎಂಬುದು ಮೇಲಿನ ಉದಾಹರಣೆಗಳಿಂದ ವ್ಯಕ್ತವಾಗುತ್ತದೆ. ಇವುಗಳಲ್ಲಿ ಕೆಲವು ದೇವಾಗಾರಗಳಾಗಿದ್ದರೂ ಅಂಥವುಗಳು ಸಂಖ್ಯೆ ಅತ್ಯಲ್ಪ. ಆದರೆ ಗುಹಾವಾಸ್ತು ಪ್ರಕಾರ ಪ್ರ.ಶು.ಪೂ ೩ನೆಯ ಶತಮಾನದಲ್ಲಿ ಭಾರತದಲ್ಲಿ ಪ್ರಚಲಿತವಾದ ಮೇಲೆ ಅದರ ಸ್ವರೂಪ ಮತ್ತು ಉದ್ದಿಶ್ಯಗಳೇ ಬದಲಾದವು.ಇದರ ಸಮಾಧಿ ಸಂಬಂಧ ಕ್ಷೀಣವಾಗಿ ಗುಹಾವಾಸ್ತವಿನಲ್ಲಿ ಸ್ಥಳಿಯ ರಚನಾ ವಾಸ್ತುಸ್ವರೂಪ ಅಳವಡಿಸಿ ಕೊಂಡು ಈ ನರ್ಮಾಣಗಳು ಹೆಚ್ಚಾಗಿ ದೇವಾಗಾರಗಳಾಗಿಯೋ, ಭಿಕ್ಷು-ಸಂನ್ಯಾಸಿಗಳ ವಾಸಸ್ಥಾನಗಳಾಗಿಯೋ ವಿಜೃಂಭಿಸುತ್ತವೆ ಈ ಹೊಸ ಸ್ವರೂಪದ ಗುಹಾ ವಾಸ್ತುಶಿಲ್ಪಿ ಭಾರತೀಯ ಸಂಸ್ಕೃತಿಯ ಅದರಲ್ಲೂ ಬೌದ್ಧಧರ್ಮದ ಪ್ರಭಾವಕ್ಕೆ ಒಳಗಾದ ಹಲವು ದೇಶಗಳಲ್ಲಿ ಹರಡಿತು ಆಫ್ಘಾನಿಸ್ತಾನ: ಆಫ್ಘಅನಿಸ್ತಾನದಲ್ಲಿ ಸು.೨೦ಕ್ಕೂ ಹೆಚ್ಚು ಸ್ಥಳಗಳಲ್ಲಿ ಬೌದ್ಧ ಗುಹಾ ವಾಸ್ತು ಶಿಲ್ಪದ ಅವಶೇಞಗಳನ್ನು ಗುರುತಿಸಲಾಗಿದೆ. ಇವುಗಳಲ್ಲಿ ದರುತಾ, ಕುಂದುಮಜ್, ಹೈಬಕ್ ಮತ್ತು ಬಾಮಿಯನ್ ಮುಖ್ಯವಾದವು.ದರುತದಲ್ಲಿ ಹಲವು ಬೌದ್ಧ ಸಂಘಾರಾಮಗಳನ್ನು ಬೆಟ್ಟ ತಪ್ಪಲಿನಲ್ಲಿ ಕಡಿಯಲಾಗಿದೆಯಲ್ಲದೆ ಇಲ್ಲಿ ಕೆಲವು ಸ್ತೂಪಗಳೂ ಇವೆ ಕುಂದುಜ್‍ನಲ್ಲಿಯೂ ಒಂದು ವಿಶಾಲವಾದ ವಿಹಾರವಿದೆ.ಇಲ್ಲಿ ಭೀಕ್ಷುಗಳು ವಾಸಿಸುವ ಕೋಣೆಗಳು ಚಚ್ಚೌಕವಾಗಿದ್ದರೂ ಜಾವಣೆ ಮಾತ್ರ ಗುಮ್ಮಟಾಕಾರದಲ್ಲಿರುವುದು ವಿಶೇಷ. ಬೆಟ್ಟದಲ್ಲಿ ಕಡೆದ ಸು.೨೪ಮೀ ವ್ಯಾಸದ ಸ್ತೂಪವೊಂದು ಹೈಬಕ್‍ನಲ್ಲಿ ಇದೆ.ಇದರ ಬಳಿಯೇ ಅರ್ಧ ಕೆತ್ತಿ ಬಿಟ್ಟಿರುವ ಇನ್ನೊಂದು ವಿಶಾಲವಾದ ವಿಹಾರವೂ ಸಮೀಪದಲ್ಲಿ ಕೆಲವು ಚೈತ್ಯಾಗಾರಗಳೂ ಇವೆ. ಇಲ್ಲಿಯ ಇನ್ನೊಂದು ಗುಹೆಯಲ್ಲಿ ಬೌದ್ಧಬಿಕ್ಷುಗಳ ವಾಸಕ್ಕಾಗಿ ಮಾಡಿರುವ ವಿಹಾರದಲ್ಲಿ ದೊಡ್ಡ ಹಜಾರವೂ ಸುತ್ತಲೂ ಕೋಣೆಗಳೂ ಆಲ್ಲದೆ ಒಳಗೆ ಬುದ್ಧ ಮೂರ್ತಿ‍ಯುಳ್ಳ ಒಂದು ಗರ್ಭಗುಡಿಯು ಇದೆ.ಇಲ್ಲಿಯ ಕಂಬಗಳು ಅರೆ ಅಯೋನಿಕ್ ಶೈಲಿಯಲ್ಲಿರುವುವಲ್ಲದೆ ಗರ್ಭಗುಡಿಯ ಮೇಲಿನ ಚಾವಣಿ ಸಣ್ಣ ಅರೆಕಮಾನುಗಳ ಮೇಲೆತ್ತಿದ ಗುಮ್ಮಟದಂತಿದ್ದು ಈ ವಾಸ್ತುವಿನ್ಯಾಸದಲ್ಲಿ ಸಸ್ಸೌನೀಯ ಪ್ರಭಾವವನ್ನು ಕಾಣಬಹುದೆ. ಈ ವಿಹಾರ ಪ್ರ.ಶ.೪-೫ನೆಯ ಶತಮಾನದ್ದು.ಬಾಮಿಯನ್ ಪ್ರಪಂಚ ಪ್ರಸಿಧವಾದ ಕಲಾಕೇಂದ್ರ. ಇಲ್ಲೂ ಹಲವು ಸಂಘಾರಾಮಗಳೂ ಶಲ್ಪಿತ ಚೈತ್ಯಾಲಯಗಳೂ ಇವೆ. ಆದರೆ ಕಡಿದಾದ ಬಂಡೆಯಲ್ಲಿ ಉಬ್ಭುಶಿಲ್ಪದಂತೆ ಕಢೆದಿರುವ ಎರಡು ಬೃಹತ್ ಬೌದ್ಧ ಮೂರ್ತಿಗಳು ಇಲ್ಲಿಯವುಗಳಲ್ಲಿ ಬಹುಮುಖ್ಯವಾದವು.ಇವು ಪ್ರಪಂಚದಲ್ಲೇ ಅತಿ ಎತ್ತರದ ಪ್ರತಿಮೆಗಳೆಂದು ಪ್ರಸಿದ್ಧವಾಗಿವೆ.ದೊಡ್ಡ ಬುದ್ಧನ ಪ್ರತಿಮೆ ೫೩.೩೪ಮೀ ಎತ್ತರವೂ ಚಿಕ್ಕದು ೩೬.೭ಮೀ ಎತ್ತರವೂ ಇವೆ. ಶಲ್ಪನಿರೂಪಣೆಯಲ್ಲಿ ಗುಪ್ತ, ಸಸ್ಸೌನೀಯ ಮತ್ತು ಇರಾನಿ ಶಲ್ವಗಳ ಪ್ರಭಾವ ಕಂಡುಬರುವುದರಿಂದ ಇವು ೪-೫ನೆಯ ಶತಮಾನದವುಗಳೆಂದು ಊಹಿಸಲಾಗಿದೆ. ಇತ್ತಿಚೆಗೆ ಇಸ್ಲಾಂ ಉಗ್ರವಾದಿಗಳು ಈ ಎರಡು ಬುದ್ಧ ವಿಗ್ರಹಗಳನ್ನು ನಾಶ ಮಾಡಿದ್ದುಂಟು. ಅಫ್ಘಾನಿಸ್ತಾನದ ಗುಹಾವಾಸ್ತುಶಿಲ್ಪದ ಅಧ್ಯಯನ ಹೆಚ್ಚು ನಡೆಯಿಲ್ಲ. ಆದರೂ ಈಗ ಸಿಗುವ ಮಾಹಿತಿಗಳಿಂದ ಈ ಸಂಪ್ರದಾಯ ಪ್ರ.ಶ.ಪೂ೧ ರಿಂದ ಪ್ರ.ಶ.ಪೂ೫-೬ನೆಯ ಶತಮಾನಗಳವರೆಗೂ ನಡೆದು ಬಂತು ಎಂದು ಹೇಳಬಹುದು. ಮಧ್ಯ ಏಷ್ಯ: ಮಧ್ಯ ಏಷ್ಯದ ಈಗಿನ ಖೋಟಾನ್ ಪ್ರದೇಶದಲ್ಲಿ ಅನೇಕ ಬೌದ್ಧ ಗುಹಾಲಯಗಳು ೪-೮ನೆಯ ಶತಮಾನಗಳ ಅವಧಿಯಲ್ಲಿ ಸ್ಥಳಿಯ ರಾಜರಿಂದ ನಿರ್ಮಿತವಾದವು.ಕಿಜಿಲ್ ಮತ್ತು ಕುಂತುರದ ಬೌದ್ದಾಲಯಗಳು ಶಿಲ್ಪ ಮತ್ತು ಭಿತ್ತಿ ಚಿತ್ರಗಳಿಗೆ ಹೆಸರಾಗಿವೆ.ಇವೆಲ್ಲದರಲ್ಲಿಯೂ ಬೌದ್ಧ ಸಂಘಾರಾಮಗಳೂ ಚೈತ್ಯಾಲಯಗಳೂ ಇವೆ. ಮುಂದೆ ಒಂದು ಮೊಗಸಾಲೆ, ಹಿಂದೆ ಒಂದೋ ಎರಡೇ ಕೋಣೆಗಳುಳ್ಳ ಚೈತ್ಯಾಲಯಗಳು ಸಾಮಾನ್ಯ. ಇವಕ್ಕೆ ಅರೆಪೀಪಾಯಿಯ ಅಥವಾ ಗುಮ್ಮಟದ ಅಕಾರದ ಚಾವಣಿ ಇರುತ್ತದೆ. ಇಲ್ಲಿಯ ಶಿಲ್ಪದ ವಸ್ತು ಪೂರ್ಣವಾಗಿ ಭಾರತೀಯ ಮಹಾಯಾನ ಬೈದ್ಧಧರ್ಮಕ್ಕೆ ಸಂಬಂಧಿಸಿದ್ದಾದರೂ ನಿರೂಪಣೆಯಲ್ಲಿ ಇರಾನಿ, ಸಸ್ಸೌನಿ ಮತ್ತು ಚೀನಿ ಶೈಲಿಗಳ ಮಿಶ್ರಣ ಕಂಡುಬರುತ್ತದೆ. ಚೀನ: ಚೀನ ದೇಶಕ್ಕೆ ಮಹಾಯಾನ ಬೌದ್ಧಪಂಥ ಪ್ರವೇಶಿಸಿ ಕಾಲದಿಮದ ಅದಕ್ಕೆ ಪೋಷಣೆ ಪ್ರೋತ್ಸಾಹ ಮುದುವರಿದವರೆಗೂ ಅಲ್ಲಿ ಅಸಂಖ್ಯಾತ ಬೌದ್ಧ ಗುಹಾಲಯಗಳು ನಿರ್ಮತವಾದವು. ಗುಹಾಲಯಗಳು ಸಂಖ್ಯಾಬಾಹುಳ್ಯದಲ್ಲಿ ಚೀನ ಭಾರತವನ್ನು ಮೀರಿಸುತ್ತದೆ. ಆದರೆ ಭಾರತದಲ್ಲಿರುವಷ್ಟು ವೈವಿದ್ಯ ಇಲ್ಲಿ ಕಾಣುವುದಿಲ್ಲ. ಭಾರತದ ಗುಹಾ ವಾಸ್ತು ಶಿಲ್ಪ ಕಾಲಕಾಲಕ್ಕೆ ಹೊಸ ವಸ್ತು, ಭಾವ ವಿನ್ಯಾಸಗಳ ಅಳವಡಿಕೆಯಿಂದಾಗಿ ವಿಕಾಸ ಹೊಂದಿದೆ. ಆದರೆ ಚೀನದ ಕೃತಿಗಳು ಬಹುಮಟ್ಟಿಗೆ ಸಂಪ್ರದಾಯ ಬದ್ಧವಾಗಿ ಅನುಕರಣಾತ್ಮಕವಾಗಿಯೇ ಮುಂದುವರಿದವು. ಚೀನದ ಮೊದಲ ಗುಹಾಲಯಗಳು ಕಾನ್ಸೂ ಪ್ರಾಂತದಲ್ಲಿ ಇವೆ. ಪಕ್ಕದ ಮಧ್ಯ ಏಷ್ಯ ಬೌದ್ಧಾಲಯಗಳೇ ಇಲ್ಲಿಯವಕ್ಕೂ ಮಾದರಿ. ಸ್ಥಳೀಯ ಸಾಹಿತ್ಯಕ ಆಧಾರಗಳ ಪ್ರಕಾರ ಪ್ರ.ಶ.೪ನೆಯ ಶತಮಾನದಲ್ಲೆ ಇಲ್ಲಿ ಗುಹಾನಿರ್ಮಾಣ ಪ್ರಾರಂಭವಾಯಿತೆಂದು ತಿಈದರೂ ಇದುವರೆಗೆ ಸಿಕ್ಕಿರುವ ಕೃತಿಗಳಲ್ಲಿ ಯಾವುದಾ ೫ನೆಯ ಶತಮಾನಕ್ಕೆ ಮುಂಚಿನವಲ್ಲ. ಕಾನ್ಸೂವಿನ ಒಂದು ಮುಖ್ಯ ಗುಹಾವಾಸ್ತು ಕೇಂದ್ರ ತುನ್ಹ್ವಾಂಗ್.ಈ ಒಂದೇ ಸ್ಥಳದಲ್ಲಿ ಸು.೪೮೦ ಗುಹೆಗಳಿವೆ. ಅತ್ಯಂತ ಪ್ರಾಚೀನವಾದವು ವೇ ರಾಜವಂಶದ ಕಾಲಕ್ಕೆ (೪-೬ನೆಯ ಶತಮಾನಗಳು) ಸೇರಿದವು.ಇತ್ತೀಚಿನವೇಂದರೆ ಯು ಆನ್ ಅರಸರ (೧೩-೧೪ ಶತಮಾನಗಳು) ಕಾಲದವು. ಹೆಚ್ಚಿವು ಟಾಂಗ್ (೬೮-೭೦೭) ಮತ್ತು ಸುಂಗ್(೯೬೦-೧೧೨೬) ರಾಜವಂಶಗಳ ಕಾಲದವು . ತುನ್ ಹ್ವಾಂಗ್ನ ಗುಹೆಗಳು ವಿನ್ಯಾಸ ಬಹು ಸರಳ.ದೇವಾಲಯಗಳಲ್ಲಿ ಹಲವು ಭಿಕ್ಷು ಕೋಣೆಗಳಿವೆ. ದೇವಗೃಹ ಮತ್ತು ಭಿಕ್ಷು ಕೋಣೆಗಳು ಜೊತೆಯಾಗಿ ಇರುವುದೇ ಹೆಚ್ಚು. ಇಲ್ಲಿಯ ಗುಹೆಗಳು ತಮ್ಮ ವಾಸ್ತುರೂಪಕ್ಕಿಂತಲೂ ಇವುಗಳಲ್ಲರುವ ಶಿಲ್ಪಗಳು ಮತ್ತು ವರ್ಣಚಿತ್ರಗಳಿಂದ ಹೆಚ್ಚು ಹೆಸರಾಗಿವೆ.ಇಲ್ಲಿಯ ಶಿಲ್ಪಗಳಲ್ಲಿ ಮಹಾಯಾನ ಬೌದ್ಧಪಂಥದ ಮೂರ್ತಿಗಳಾದ ವಿವಧ ರೀತಿಯ ಬುದ್ಧೆ ಅವಲೋಕಿತೇಶ್ವರ ಮತ್ತು ಉಪದೇವತೆಗಳ ಮೂರ್ತಿಗಳು ಕಂಡುಬರುತ್ತವೆ. ಕಾನ್ಸೂ ಪ್ರಾಂತದ ಯು-ಲಿನ್-ಕು,ತೀನ್-ತಿ-ಷಾನ್, ಯುಂಗ್-ಚಿಂಗ್ ,ಮೇ-ಚಿ-ಷಾನ್‍ನಗಳಲ್ಲೂ ಗುಹಾಲಯಗಳಿವೆ. ಮೇ-ಚಿ-ಷಾನ್‍ನ ಕೆಲವು ಚೈತ್ವಯಾಲಯಗಳು ಸು ೫ನೆ ಯ ಶತಮಾನಕ್ಕೆ ಸೇರಿದವು.ತೀನ್-ಷಾನ್‍ನ ಒಂದು ಬಂಡೆಯಲ್ಲಿರುವ ೨೫.೯೦ಮೀ ಎತ್ತರದ ಕುಳಿತ ಬುದ್ಧಮೂರ್ತಿ,ಯುಂಗ್-ಚಿಂಗ್ ನಲ್ಲಿರುವ ಅನೇಕ ಸೂಪ್ತಗಳ ಉಬ್ಬು ಶಿಲ್ಪಗಳು ಮತ್ತು ೨೪.೩೮ಮೀ ಎತ್ತರದ ಬುದ್ಧ ಮೂರ್ತಿ ಹೆಸರಾಂತ ಶಿಲ್ಪಗಳಿ.ಮಂಚೂರಿಯ ಪ್ರಾಂತದ ವನ್-ಪೊ-ತಾಂಗ್‍ನಲ್ಲೂ ವೇ ರಾಜವಂಶದ ಕಾಲದ ಪ್ರಾಚೀನ ಗುಹಾ ವಾಸ್ತುಕೃತಿಗಳಿವೆ. ಷಾನ್ಷೀ ಪ್ರಾಂತದಲ್ಲಿರುವ ಯುನ್ ಕಾಂಗ್ನಲ್ಲಿ ಸು೪೦ ಗುಹೆಗಳಿವೆ. ಈಗುಹೇಗಳಲ್ಲಿಯ ರಚನಾತಂತ್ರ ಬಾಮಿಯನವನ್ನು ಅನುಸರಿಸುತ್ತದೆ.೧೬.೭೬ಮೀ ಎತ್ತರವಿರುವ ಇಲ್ಲಿಯ ಒಂದು ಆಸೀನ ಬುದ್ಧ ಮೂರ್ತಿ ಸುಂದರ ಶಿಲ್ಪ.ತಿಯೆನ್-ಲುಂಗ್-ಷಾನ್‍ನ ಕೆಲವು ಗುಹೆಗಳಲ್ಲಿ ಮನಸೆಳೆಯುವಂಥ ಅಪ್ಸರೆಯರ ಉಬ್ಬು ಶಿಲ್ಪಗಳಿವೆ.ಷಾನ್-ತುಂಗ್ ಪ್ರಾಂತದ ಚಿಯೆನ್-ಪೊ-ಯೈ ಎಂಬಲ್ಲಿಯ ಒಂದು ದೊಡ್ಡ ಬಂಡೆ ಸಹಸ್ರ ಬುದ್ಧರ ಬಂಡೆ ಎಂದು ಹೆಸರಾಗಿದೆ.ಇಲ್ಲಿ ಐದು ಗುಹೆಗಳೂ ಸು.೭೦ ಕ್ಕೂ ಹೆಚ್ಚು ಮೂರ್ತಿ ಕೋಷ್ಠಗಳೂ ಇವೆ .೬೧೮ರಲ್ಲಿ ಮಾಡಿರುವ ಎರಡನೆಯ ಗುಹೆಯಲ್ಲಿರುವ ಬುದ್ಧ ತ್ರಿಮುರ್ತಿಗಳ ವಿಗ್ರಹಗಳು(ಬುದ್ಧ,ಆಮಿತಾಭ ಮತ್ತು ಶಾಕ್ಯಮುನಿ) ಉತ್ತಮ ಶಿಲ್ಪಗಳು. ಸಿಂಕಿಯಾಂಗ್ ಪ್ರಾಂತದ ಕೂಚದ ಗುಹೆಗಳು ಸಣ್ಣವಾದರೂ ಭಿತ್ತಿಗಳ ಮೇಲಿರುವ ವರ್ಣಚಿತ್ರಗಳಿಂದಾಗಿ ಗಮನಾರ್ಹವಾದವು.ಇದೇ ಪ್ರಾಂತದ ತತ್ಸು ಎಂಬಲ್ಲಿ ೧೯೫ಮೀ ಉದ್ದ ಮತ್ತು ೧೯.೫ ಮೀ ಎತ್ತರದ ವಿಶಾಲ ಬಂಡೆಯ ಮೈಯಲ್ಲಿ ಬುದ್ಧನ ಜೀವನ