ಪುಟ:Mysore-University-Encyclopaedia-Vol-6-Part-9.pdf/೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಗುಳ್ಳೆಮಂದಿರ - ಗೂಂಚ್ ಮೀನು ಸಲ ಗುಂಪುಗೂಡಿಕೊಂಡು ಎರೆಪ್ರಾಣಿಗಳನ್ನು ಬೇತೆಯಾಡುವುದುಂಟು. ಆಹಾರ ಪ್ರಾಣಿಗ ಳನ್ನು ಅಟ್ಟಿಸಿಕೊಂಡು ವೇಗವಾಗಿ ಒಡಬಲ್ಲವು. ಹೀಗೆ ಓಡುವಾಗ ಓಟದ ವೇಗ ಗಂಟೆಗೆ ೫೦ ಕಿಮೀ ಇರುವುದೆಂದು ಹೇಳಲಾಗಿದೆ. ಸಂಜೆಯ ವೇಳೆ ವಿಶಿಷ್ಟ ರೀತಿಯಲ್ಲಿ ಊಳಿಡುವುದು ಗುಳ್ಳೆನರಿಗಳ ವಿಚಿತ್ರ ಲಕ್ಷಣ. ದೀರ್ಘವಾದ ೩-೪ ಕೂಗುಗಳನ್ನೂ ಕೊನೆಯಲ್ಲಿ ಕೆಲವು ಹ್ರಸ್ವ ಬಗುಳುವಿಕೆಗಳನ್ನು ಒಳಗೊಂಡಿರುವ ಈ ಗೋಳುಕರೆಯನ್ನು ಕೇಳಿದವರಾರೂ ಸುಲಭವಾಗಿ ಮರೆಯಲಾರರು. ಗುಳ್ಳೆನರಿಗಳು ತಮ್ಮ ಸಂತಾನೋತ್ಪತ್ತಿಯ ಕ್ರಮದಲ್ಲಿ ನಾಯಿ ಮತ್ತು ತೋಳಗಳನ್ನು ಹೋಲುತ್ತವೆ. ಇವುಗಳ ಗರ್ಭಾವಸ್ಥೆಯ ಅವಧಿ ೫೭-೭೦ ದಿವಸಗಳು. ಸಾಮಾನ್ಯವಾಗಿ ಸೂಲಿಗೆ ೩-೪ ಮರಿಗಳು ಹುಟ್ಟುತ್ತವೆ. ಇತರ ಪ್ರಾಣಿಗಳು ತೊರೆದುಹೋದ ಬಿಲದಲ್ಲೊ ಇಲ್ಲವೆ ತಾವೆ ಸ್ವತಃ ಕೊರೆದು ನಿರ್ಮಿಸಿದ ಬಿಲದಲ್ಲೋ ಮರಿಫ಼್ಗಳನ್ನು ಈಯುತ್ತವೆ. ತಂದೆ ತಾಯಿಗಳೆರಡೂ ಮರಿಗಳ ಪಾಲನೆಯಲ್ಲಿ ತೊಡಗಿರುತ್ತವೆ. ೭-೮ ತಿಂಗಳು ವಯಸ್ಸಾದ ಅನಂತರ ಮರಿಗಳಿಗೆ ಸ್ವತಂತ್ರವಾಗಿ ಬೇಟೆಯಾಡುವ ಸಾಮರ್ಥ್ಯ ಬರುತ್ತದೆ. ಗುಳ್ಳೆನರಿಗಳ ಆಯಸ್ಸು ಸುಮಾರು ೧೫ ವರ್ಷಗಳು. ಗುಳ್ಳೆಮಂದಿರ : ವಿದ್ಯುದಾವಿಷ್ಟ ಉಪಪರಮಾಣು ಕಣಗಳನ್ನು ಕಂಡು ಹಿಡಿಯಲು ಉಪಯೋಗಿಸುವ ಸಾಧಾನ ಅಥವಾ ಉಪಕರಣ (ಬಬಲ್ ಚೇಂಬರ್). ೧೯೫೨ ರಲ್ಲಿ ಡೊನಾಲ್ಡ್ ಎ. ಗ್ಲೇಸರ್ ಎಂಬ ಅಮೆರಿಕಾದ ವಿಜ್ಞಾನಿ ಮಿಷಿಗನ್ ವಿಶ್ವವಿದ್ಯಾಲಯದಲ್ಲಿ ಗುಳ್ಳೆಮಂದಿರವನ್ನು ನಿರ್ಮಿಸಿದ. ಈ ಉಪಕರಣವನ್ನು ಉಪಯೋಗಿಸಿ ವಿದ್ಯುದಾವಿಷ್ಟ ಕಣಗಳ ಪಥಗಳನ್ನು ಕಣ್ಣಿಗೆ ಕಾಣುವಂತೆ ಮಾಡಬಹುದು. ಪಥಗಳ ಛಾಯಾಚಿತ್ರವನ್ನು ತೆಗೆದುಕೊಂಡು ಪರೀಕ್ಷೆಮಾಡಿ ಕಣಗಳ ಗುಣಲಕ್ಷಣಗಳನ್ನು ಗೊತ್ತು ಮಾಡಿಕೊಳ್ಳಬಹುದು. ಕೆಲವು ವಿಧಗಳಲ್ಲಿ ಗುಳ್ಳೆ ಮಂದಿರ ಸಿ.ಟಿ.ಆರ್. ವಿಲ್ಸನ್ ರಚಿಸಿದ ಮೇಘಮಂದಿರವನ್ನು ಹೋಲುತ್ತದೆ (ನೋಡಿ-ಮೇಘಮಂದಿರ). ಕೆಲಸ ಮಾಡುವ ವಿಧಾನ ಮತ್ತು ನಿರ್ಮಣ: ಶುಚಿಯಾದ ಮತ್ತು ನಯವಾದ ಮೈಉಳ್ಳ ಪಾತ್ರೆಗಳಲ್ಲಿ ದ್ರವಗಳನ್ನು ಸಾಮಾನ್ಯ ಕುದಿಯುವ ಬಿಂದುವಿಗಿಂತಲು ಹೆಚ್ಚು ಉಷ್ಣತೆಗೆ ಕಾಯಿಸಬಹುದು. ಈ ಸ್ಥಿತಿಯಲ್ಲಿರುವ ಒಂದು ದ್ರವಕ್ಕೆ ಅತಿಪತ್ತ (ಸೂಪರ್ ಹೀಟೆಡ್) ದ್ರವವೆಂದು ಹೆಸರು. ಅತಿಪತ್ತ ದ್ರವಗಳ ಅಸ್ಥಿರ. ಯಾವುದಾದರೂ ಒರಟಾದ ಪದಾರ್ಥಗಳನ್ನು ದ್ರವದೊಳಗೆ ಹಾಕಿದರಾಗಲೀ ಹೆಚ್ಚಿಗೆ ಉಷ್ಣವನ್ನು ಒದಗಿಸಿದರಾಗಲೀ ದ್ರವ ರಭಸದಿಂದ ಕುದಿಯಲು ಪ್ರಾರಂಭಿಸುತ್ತದೆ. ಅತಿಪತ್ತ ದ್ರವಗಳ ಮೂಲಕ ವಿದ್ಯುದಾವೇಶವಿರುವ ಮತ್ತು ವೇಗವಾಗಿ ಚಲಿಸುವ ಕಣಗಳು ಸಾಗಿದರೆ ಅವು ಹೋದ ಜಾಡಿನಲ್ಲಿ ಕಣಗಳ ದ್ರವದ ಪರಮಾಣುಗಳೊಡನೆ ಸಂಘಟಿಸಿ ಆಗುವ ಅಂತರ ಕ್ರಿಯೆಯಿಂದ ಶಕ್ತಿ ಉತ್ಪತ್ತಿಯಾಗಿ ಅಣುಗಳನ್ನು ಆಯಾನುಗಳನ್ನಾಗಿ ಪರಿವರ್ತಿಸುತ್ತವೆ (ನೋಡಿ-ಕಿಡಿಮಂದಿರ). ಇಂಥ ಸ್ಥಳಗಳಲ್ಲಿ ದ್ರವ ಕುದಿಯಲು ಪ್ರಾರಂಭಿಸುತ್ತದೆ. ಇದೇ ಸಮಯದಲ್ಲಿ ಛಾಯಾಚಿತ್ರವನ್ನು ತೆಗೆದುಕೊಂಡರೆ ಕಣಗಳು ಹೋದ ಹಿಂಜಾಡಿನಲ್ಲೇ ಸಣ್ಣಪುಟ್ಟ ಗುಳ್ಳೆಗಳು ಕಾಣಿಸಿಕೊಳ್ಳುತ್ತವೆ. ಹೀಗೆ ಕಣಗಳ ಪಥಗಳನ್ನು ಕಣ್ಣಿನಿಂದ ನೋಡಲು ಸಾಧ್ಯವಾಗುತ್ತದೆ. ಗುಳ್ಳೆ ಮಂದಿರವನ್ನು ಗಾಜಿನ ಪಾತ್ರೆಯನ್ನು ಉಪಯೋಗಿಸಿ ನಿರ್ಮಾಣ ಮಾಡಬಹುದು. ಲೋಹದ ಪಾತ್ರೆಯನ್ನು ಉಪಯೋಗಿಸಿದರೆ ಗಾಜಿನ ಕಿಟಕಿಗಳನ್ನು ಲೋಹಕ್ಕೆ (ಗ್ಯಾಸ್ಕೆಟ್ಟುಗಳನ್ನು ಉಪಯೋಗಿಸಿಕೊಂಡು) ಬೆಸೆಯಬೇಕು. ಈಥರ್, ಪೆಂಟೀನ್, ಬ್ಯೂಟೀನ್ ಅಥವಾ ಪ್ರೊಪೇನ್ ಮುಂತಾದ ಹಲವಾರು ದ್ರವಗಳನ್ನು ಗುಳ್ಳೆಮಂದಿರದಲ್ಲಿ ಉಪಯೋಗಿಸಬಹುದು. ದ್ರವ ಹೀಲಿಯಮ್ ಅಥವಾ ದ್ರವ ಹೈಡ್ರೋಜನ್ ಗಳಾನ್ನು ಉಪಯೋಗಿಸಿದರೆ ಗುಳ್ಳೆಮಂದಿರವನ್ನು ಅತಿ ಕಡಿಮೆ ಉಷ್ಣತೆಯಲ್ಲಿ ಇಡಬೇಕು. ಈ ದ್ರವಗಳನ್ನು ಅವುಗಳ ಕುದಿಯುವ ಬಿಂದುವಿಗಿಂತಲೂ ಹೆಚ್ಚು ಉಷ್ಣತೆಯಲ್ಲಿ ಇಟ್ಟಿದ್ದು, ಹೆಚ್ಚು ಒತ್ತಡವನ್ನು ಏರ್ಪಡಿಸಿ ದ್ರವ ಕುದಿಯದಂತೆ ಮಾಡಬೇಕು. ದ್ರವ ಈಥರನ್ನು ಉಪಯೋಗಿಸಿದರೆ ದ್ರವವನ್ನು ಸುಮಾರು ೨೦ ವಾಯು ಮಂಡಲಗಳಲ್ಲಿ ಮತ್ತು ೧೩೫ ಸೆಂ. ಉಷ್ಣತೆಯಲ್ಲಿ ಇಡಬೇಕು. ಒತ್ತಡವನ್ನು ಬಿಡುಗಡೆಮಾಡಿದ ಹಲವರು ಮೈಲೆಸೆಕೆಂಡುಗಳಲ್ಲಿ ದ್ರವ ಅತಿತಪ್ತವಾಗಿ ಅಸ್ಥಿರಗೊಳ್ಳುತ್ತದೆ. ಇಂಥ ವೇಳೆಯಲ್ಲಿ ವಿದ್ಯುದಾವಿಷ್ಟ ಕಣಾಗಳ ಕಿರಣಾವಳಿಯೊಂದು ಮಂದಿರದ ಮೂಲಕ ಹದುಹೋದರೆ ಅದು ಹೋದ ಜಾಗದಲ್ಲಿ ದ್ರವ ಕುದಿಯಲು ಪ್ರಾರಂಭಿಸಿ, ಹೀಗೆ ಉಂಟಾದ ಗುಳ್ಳೆಗಳು ಸಾಕಷ್ಟು ಬೆಳೆದು ಛಾಯಾ ಚಿತ್ರದಲ್ಲಿ ಕಣಾಗಳ ಪಥಗಳು ಕಾಣಿಸಿಕೊಳ್ಳುತ್ತವೆ. ಮತ್ತೆ ಒತ್ತಡವನ್ನು ಉಪಯೋಗಿಸಿದರೆ ಗುಳ್ಳೆಗಳು ಥಟ್ಟನೆ ಅಳಿದುಹೋಗಿ ಮಂದಿರ ಎಂದಿನಂತೆ ಉಪಯೋಗಿಸಲು ಸಿದ್ಧವಾಗುತ್ತದೆ. ಹೀಗೆ ಒತ್ತಡವನ್ನು ಬಿಡುಗಡೆ ಮಾಡಿ ಮತ್ತೆ ಪ್ರಯೋಗಿಸುವ ಒಂದು ಚಕ್ರಕ್ಕೆ ಸುಮಾರು ೧ ಅಥವಾ ೨ ಸೆಕೆಂಡುಗಳು ಬೇಕಾಗುತ್ತವೆ. ಉಪಯೋಗಗಳು : ಗುಳ್ಳೆಮಂದಿರವನ್ನು ಉಪಯೋಗಿಸಿ ವಿದ್ಯುದಾವಿಷ್ಟ ಕಣಗಳ ಹಲವಾರು ಪರಮಾಣುಗಳನ್ನು ಕಂಡು ಹಿಡಿಯಬಹುದು. ಪಥದ ಉದ್ದದಿಂದ ಕಣಗಳ ಶಕ್ತಿಯನ್ನೂ ಪಥದಲ್ಲಿ ಕಾಣುವ ಗುಳ್ಳೆಗಳ ಸಾಂದ್ರತೆಯಿಂದ ಕಣಗಳ ವಿದ್ಯುದಾವೇಶ ಮತ್ತು ವೇಗವನ್ನು ಕಂಡುಹಿಡಿಯಬಹುದು. ಗುಳ್ಳೆಮಂದಿರವನ್ನು ಕಾಂತಕ್ಷೇತ್ರದಲ್ಲಿಟ್ಟರೆ ಕಣಗಳ ಪಥದ ವಕ್ರತೆಯಿಂದ ಕಣಗಳ ಸಂವೇಗಗಳನ್ನು (ಮೊಮೆಂಟ) ಗೊತ್ತುಮಾಡಬಹುದು. ಇಂಥ ಪರಿಮಾಣಗಳ ನ್ಯೂಕ್ಲಿಯರ್ ಪ್ರಕ್ರಿಯೆಗಳಾಲ್ಲಿ ಉಂಟಾಗುವ ಎಲ್ಲ ಪಥಗಳಿಗೂ ಗೊತ್ತುಮಾಡಿದರೆ ಪ್ರಕ್ರಿಯೆಗಳಲ್ಲಿ ಉಂಟಾದ ಕಣಗಳ ಜಡತ್ವ ವಿದ್ಯುದಾವೇಶ, ಜೀವಿತಕಾಲ ಮತ್ತಿತರ ಗುಣ ಲಕ್ಷಣಾಗಳನ್ನು ಕಂಡುಹಿಡಿಯಬಹುದು. ಇಂಥ ಅಂಶಗಳು ನ್ಯೂಕ್ಲಿಯರ್ ರಚನಾ ಕ್ರಮಗಳನ್ನು ಅರ್ಥಮಾಡಿಕೊಳ್ಳಲು ಬಹಳ ಸಾಧ್ಯವಾಗುತ್ತದೆ. ಗೂಂಚ್ ಮೀನು : ಸೈಲ್ಯೂರಿಫಾರ್ಮೀಸ್ ಗಣದ ಸಿಸೋರಿಡೀ ಕುಟುಂಬಕ್ಕೆ ಸೇರಿದ ಒಂದು ಸಿಹಿನೀರು ಮೀನು. ಮೀಸೆ ಮೀನುಗಳ ಸಂಬಧಿ. ಎಲ್ಲ ಮೀಸೆ ಮೀನುಗಳಿಗಿರುವಂತೆ ಬಾಯಿಯ ಸುತ್ತ ಚೆನ್ನಾಗಿ ಬೆಳದೆ ಸ್ಪರ್ಶಾಂಗಗಳಿವೆ. ಇದರ ಶಾಸ್ತ್ರೀಯ ನಾಮ ಬಗೇರಿಯಸ್ ಬಗೇರಿಯಸ್. ನೈರುತ್ಯ ಏಷ್ಯದ ಕೆರೆ, ಕೊಳ ನದಿಗಳಲ್ಲಿ ಕಂಡುಬರುತ್ತದೆ. ಭಾರತದಲ್ಲಿ ಗಂಗಾನದಿ ಮತ್ತು ಮಣಿಪುರದ ಕಣಿವೆಗಳಲ್ಲಿನ ಝರಿಗಳಲ್ಲಿ ಇವುಗಳನ್ನು ಕಾಣಬಹುದು. ಇದರ ಉಗ್ರ ಸ್ವಭಾವ ಮತ್ತು ತಲೆಯ ಆಧೋಭಾಗದಲ್ಲಿರುವ ಬಾಯಿಯಿಂದಾಗಿ ಇದನ್ನು ಸಿಹಿನೀರಿನ ಶಾರ್ಕ್ ಎಂದೂ ಕರೆಯಲಾಗುತ್ತದೆ. ಇದರ ತಲೆ ತಟ್ಟೆಯಂತೆ ಅಗ್ಲ್ವಾಗಿದೆ. ಬಾಲ ನೀಳವಾಗಿಯೂ