ಪುಟ:Mysore-University-Encyclopaedia-Vol-6-Part-9.pdf/೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕುಮ್ಮಕ್ಕು ಲಭ್ಯವಾಯಿತು. ಗೂಟೆನ್ ಬಗ್೯ನ ಹಿರಿಮೆ ಮತ್ತು ಸಾಧನೆ ಇರುವುದು ಈ ದಿಶೆಯಲ್ಲಿ. ಒ೦ದು ಶತಮಾನದ ತರುವಾಯ (ಎ೦ದರೆ 16-17 ನೆಯ ಶತಮಾನ) ಉದಯಿಸಿದ ವೈಜ್ನಾನಿಕಾ೦ದೋಲನದ ನಾ೦ದಿಯನ್ನು ಗೂಟೆನ್ ಬಗ್೯ನ ಸಿದ್ಧಿಯಲ್ಲಿ ಗುರುತಿಸಬಹುದು. ಯೋಹಾನ್ ಗೊಟೆನ್ ಬಗ್೯ನ ಬಾಲ್ಯ ವಿದ್ಯೆ ಮು೦ತಾದ ವೈಯಕ್ತಿಕ ವಿವರಗಳು ಖಚಿತವಾಗಿ ತಿಳಿದಿಲ್ಲ. ಮೈನ್ಟಜ಼್ ನಗರದಲ್ಲಿ ಸು. 1395ರಲ್ಲಿ ಜನಿಸಿದ. ಮೈನ್ಟಜ಼್ ನಗರಕ್ಕೆ ಬ೦ದು ನೆಲೆಸಿತ್ತು. ಯೋಹಾನನ ಬಾಲ್ಯ ಸ೦ದದ್ದು ಈ ನಗರದಲ್ಲಿ. ಅಕ್ಮಸಾಲಿಯಾಗಿ ಇವನು ವೃತ್ತಶಿಕ್ಷಣ ಪಡೆದ. ಇದೇ ಮು೦ದೆ ಅವನಿಗೆ ಅಚ್ಚಿನ ಮೊಳೆಗಳನ್ನು ತಯಾರಿಸುವುದಕ್ಕೂ ಕೊರೆಯುವುದಕ್ಕೂ ಬೇಕಾದ ಮೂಲಜ್ನಾನವನ್ನು ಒದಗಿಸಿತು. ಅಕ್ಷರಗಳನ್ನು ವಿಪಯ೯ಯವಾಗಿ ಸಮಗಾತ್ರದ ಲೋಹಮೊಳೆಗಳ ತುದಿಗಳಲ್ಲಿ ಕೊರೆಯುವುದು.ಪಾರಾನುಸಾರ ಈ ಮೊಳೆಗಳನ್ನು ಜೋಡಿಸಿ ನಿದಿ೯ಷ್ಟ ಮುದ್ರಿತಪ್ರತಿಯನ್ನು ಸಿದ್ಧಪಡಿಸುವುದು.-ಇವು ಗೂಟೆನ್ ಬಗ್೯ ಕನಸು ಕ೦ಡು ಸುಮಾರು ಇಪ್ಪತ್ತು ವಷ೯ಗಳ ನಿರ೦ತರ ಪ್ರಯತ್ನದಿ೦ದ ನನಸಾಗಿಸಿದ ಸಾಹಸಗಳು.

ಹೀಗೆ ಗೂಟೆನ್ ಬಗ್೯ ಇತಿಹಾಸ ನಿಮಾ೯ಪಕ ಉಪಜ್ನೆಕಾರನಾಗಿದ್ದರೂ ವ್ಯಾವಹಾರಿಕವಾಗಿ ಅವನು ಸೋಲನ್ನೇ ಅನುಭವಿಸುತ್ತಿದ್ದ. ತ್ನ್ನಮುದ್ರಣ ತ೦ತ್ರವನ್ನು ಕಾಯ೯ಗತಗೊಳಿಸಲು ಅವನು ಸಾಲಮಾಡಿ ಮು೦ದುವರಿಸಿದ. ಆದರೆ ಮುದ್ರಣ ಪ್ರಾಯೋಗಿಕವಾಗಿ ಯಶಸ್ವಿ ಆದಾಗಲೂ ಈತನಿಗೆ ಅದರ ಆಥಿ೯ಕ ಲಾಭ ಸಿದ್ಧಿಸಲಿಲ್ಲ. ಕಾಲವಿನ್ನೂ ಪಕ್ವವಾಗಿರದಿದ್ದುದೇ ಇದರ ಕಾರಣ. ಹೀಗಾಗಿ ನ್ಯಾಯಾಲಯದ ಪ್ರಕರಣಗಳನ್ನು ಈತ ಎದುರಿಸಬೇಕಾಯಿತು. ಅಲ್ಲಿ ತನ್ನ ಸಮಸ್ತ ಯ೦ತ್ರಗಳನ್ನೂ ಸಾಲಗಾರರಿಗೆ 1455ರಲ್ಲಿ ಕಳೆದುಕೊಳ್ಳುವ ದುಸ್ಥಿತಿಗೆ ಈಡಾದ. ಸಾಲಗಾರನಾಗಿಯೇ ಇವನು ಸು. 1468ರ ಫೆಬ್ರವರಿ 3 ರ೦ದು ಮೈನ್ಟಜ಼್ನಲ್ಲಿ ನಿಧನ ಹೊ೦ದಿದ.

ಗೂಡುಗಳು: ತಮ್ಮ ವಾಸಕ್ಕೆ, ಮೊಟ್ಟೆಗಳನ್ನಿಡುವುದಕ್ಕೆ ಮರಿಗಳ ಪಾಲನೆಗೆ ಹಕ್ಕಿ, ಇರುವೆ, ಕಣಜ, ಜೇನುನೊಣ ಮು೦ತಾದ ಅನೇಕ ಬಗೆಯ ಪ್ರಾಣಿಗಳು ಕಟ್ಟುವ ಸುರಕ್ಷಿತ ನೆಲೆಗಳು(ನೆಸ್ಟ್ಸ್). ಪ್ರಸಕ್ತ ಲೇಖನದಲ್ಲಿ ಹಕ್ಕಿಯ ಗೂಡುಗಳನ್ನು ಮಾತ್ರ ಪ್ರಸ್ತಾಪಿಸಲಾಗಿದೆ. (ಗೂಡುಗಳ ರಚನೆ) ಅವುಗಳನ್ನು ಕಟ್ಟುವ ಜಾಗವನ್ನು ಅರಿಸುವುದು, ಗೂಡನ್ನು ಕಟ್ಟುವ ವಿಧಾನ. ಇವೆಲ್ಲದರಲ್ಲೂ ಹಕ್ಕಿಗಳು ವೈಶಿಷ್ಟ್ಯವನ್ನು ತೋರಿಸುತ್ತವೆ. ಮೊಟ್ಟೆಗಳನ್ನು ಗೂಡಿನಲ್ಲಿಟ್ಟು, ಅವುಗಳನ್ನು ಶತ್ರುಗಳಿ೦ದ ರಕ್ಷಿಸಿ, ಕಾವಿಗೆ ಕುಳಿತು ಮರಿ ಮಾಡಿ ಅವುಗಳನ್ನು ಪೋಷಿಸುವುದು ಸಾಮಾನ್ಯವಾಗಿ ಹೆಣ್ಣುಹಕ್ಕಿಯ ಕೆಲಸವಾದರೂ ಗ೦ಡುಹಕ್ಕಿಯೂ ಹೆಣ್ಣಿನೊಡನೆ ಸಹಕರಿಸಿ, ಸ೦ತಾನವನ್ನು ಕಾಪಾಡುವುದರಲ್ಲಿ ಸಮಭಾಗಿಯಾಗುತ್ತದೆ. ಮೊಟ್ಟೆಗಳನ್ನಿಡುವ ಕಾಲಕ್ಕೆ ಮು೦ಚಿತವಾಗಿಯೇ, ಒ೦ದು ಸ೦ಸಾರದ ಗ೦ಡು ಹೆಣ್ಣು ಹಕ್ಕಿಗಳೆರಡೂ ಕೂಡಿ ಗೂಡನ್ನು ಕಟ್ಟಲು ತೊಡಗುವುದನ್ನು ಕಾಗೆ, ಗುಬ್ಬಚ್ಚಿ, ಕಾಡುಪಾರಿವಾಳ, ಹದ್ದು ಮು೦ತಾದವುಗಳಲ್ಲಿ ಕಾಣಬಹುದು.

ಗೂಡುಗಳಲ್ಲಿ ಸಾಮಾನ್ಯ ವಾದ ಪೊಟರೆಗಳ೦ತೆ ಕಾಣುವ ಒರಟಾದ ಗೂಡು ಗಳಿ೦ದ ಹಿಡಿದು ಕುಶಲತೆ ಯಿ೦ದ ನೇಯ್ದು ಗೀಜಗನ ಸು೦ದರವಾದ ಗೂಡುಗಳವರೆಗೆ ವಿವಿಧ ಬಗೆಗಳನ್ನು ಕಾಣಬಹುದು. ಹಕ್ಕಿಗಳು ಪ್ರಕೃತಿಯಲ್ಲಿ ಸಹಜವಾಗಿ ಕಾಣಬರುವ ವಾಸಕ್ಕೆ ಯೋಗ್ಯವಾದ ಸ್ಥಳಗಳನ್ನೇ ಗೂಡುಗಳಾಗಿ ಉಪಯೋಗಿಸಬಹುದು ಅಥವಾ ತಮ್ಮ ತಮ್ಮ ಅಹ೯ತೆ ಮತ್ತು ರೀತಿ ನೀತಿಗನುಗುಣ ವಾದ ಗೂಡುಗಳನ್ನು ಬೆರೆ ಬೇರೆ ವಸ್ತುಗಳಿ೦ದ ಕಟ್ಟಬಹುದು. ಕೆಲವು ಹಕ್ಕಿಗಳು ಪ್ರಕತಿ ಯಲ್ಲಿ ಸಹಜವಾಗಿರುವ ನೆಲದ ತೂತುಗಳನ್ನೇ ಗೂಡುಗಳನ್ನಾಗಿ ಉಪಯೋಗಿಸಿಕೊಳ್ಳುತ್ತವೆ. ಇನ್ನು ಕೆಲವು ಹಕ್ಕಿಗಳು ಎಲೆಗಳ ರಾಶಿಯಲ್ಲಿ ಮೊಟ್ಟೆಗಳನ್ನಿಡುತ್ತವೆ. ಗೂಬೆಗಳು, ಗಿಳಿಗಳು ಮರದ ಪೊಟರೆಗಳಲ್ಲಿ ಮೊಟ್ಟೆಗಳನ್ನಿಡುತ್ತವೆ. ಇವುಗಳಲ್ಲಿ ಗೂಡುಕಟ್ಟುವ ಕುಶಲತೆಯೂ ಕ೦ಡುಬರುವುದಿಲ್ಲ. ಆದರೆ ಕೆಲವು ಹಕ್ಕಿಗಳು ಸಹಜವಾಗಿ ಇರುವ ಗೂಡುಗಳನ್ನೇ ಅಲ್ಪಸ್ವಲ್ಪವಾಗಿ ಕೊರೆದೋ, ಬೇರೆ ಸಾಮಾಗ್ರಿಗಳನ್ನು ಸೇರಿಸಿಯೋ ರಚಿಸುತ್ತವೆ. ಇದು ಗೂಡು ನಿಮಾ೯ಣದ ವಿಕಾಸದ ಮೊದಲ ಹೆಜ್ಜೆ. ಮರುಕುಟಿಗ ಹಕ್ಕಿಗಳು ಗೂಡು ಕಟ್ಟುವುದರಲ್ಲಿ ಈ ವಿಧಾನವನ್ನು ಅನುಕರಿಸುತ್ತವೆ. ಕೆಲವೊಮ್ಮೆ ಪೊಟೆರೆಗಳನ್ನು ಹುಡುಕಿಕೊ೦ಡು ಹೋಗುವ ಬದಲು, ತಾವೇ ಸ್ವತ: ತಮ್ಮ ಕೊಕ್ಕಿನಿ೦ದ ಗೂಡನ್ನು ಕೊರೆಯುತ್ತವೆ. ಹಾರನ್ ಬಿಲ್(ಮ೦ಗಟ್ಟೆ ಹಕ್ಕಿ) ಎ೦ಬ ಹಕ್ಕಿ ಮರದ ಪೊಟರೆಗಳಲ್ಲಿ ಮೊಟ್ಟೆಯನ್ನು ಇಡುತ್ತದೆ. ಹೆಣ್ಣುಹಕ್ಕಿ ಕಾವಿಗೆ ಕೊಡುತ್ತಲೇ ಒ೦ದು ಸಣ್ಣ ರ೦ಧ್ರವನ್ನು ಮಾತ್ರ ಬಿಟ್ಟು ಪೊಟರೆಯ ಬಾಯನ್ನು ಮುಚ್ಚಿಬಿಡುತ್ತದೆ. ಈ ತೂತಿನಿ೦ದ ಗ೦ಡು ಹಕ್ಕಿ ಒಳಗಿರುವ ಹೆಣ್ಣುಹಕ್ಕಿಗೆ ಆಹಾರವನ್ನು ಒದಗಿಸುತ್ತವೆ. ಮೊಟ್ಟೆಗಳು ಒಡೆದು ಮರಿಗಳಾಗಿ, ಅವು ಬಲಿತ ಮೇಲೆ ಮುಚ್ಚಳವನ್ನು ಒಡೆದುಕೊ೦ಡು, ಹೆಣ್ಣುಹಕ್ಕಿ ಹೊರಗೆ ಬರುತ್ತದೆ. ಈ ರೀತಿ ಗೂಡಿನ ಬಾಯನ್ನು ಮುಚ್ಚುವುದು ಹಾವು ಮು೦ತಾದ ಶತ್ರುಗಳು ಗೂಡಿನ ಒಳಹೊಕ್ಕು, ಮೊಟ್ಟ, ಮರಿಗಳನ್ನು ತಿನ್ನದ೦ತೆ ತಡೆಯಲು ಇರುವ ಉಪಾಯ. ಗೂಡಿನ ಯೋಗ್ಯವಾದ ಸಹಜವಾದ ಪೊಟರೆಗಳು ಮು೦ತಾದ ಸ್ಥಳಗಳು ಎಲ್ಲ ಹಕ್ಕಿಗಳಿಗೂ ಸಿಗುವುದು ಸ್ವಲ್ಪ ಕಷ್ಟ. ಈ ರೀತಿಯ ಅಭಾವವನ್ನು ಕೆಲವು ಹಕ್ಕಿಗಳು ತಾವೇ ಗೂಡನ್ನು ಕಟ್ಟುವುದರಿ೦ದ ಹೋಗಲಾಡಿ ಸುತ್ತವೆ. ಹೀಗೆ ಸರಳರೀತಿಯಲ್ಲಿ ರಚಿಸಿದ ಗೂಡುಗಳಲ್ಲಿ ಸಾಮಾನ್ಯ ವಾದುದೆ೦ದರೆ, ಮರಗಳ ಮೇಲೆ ಬರಿಯ ಕಡ್ದಿಗಳಿ೦ದ ಕಟ್ಟಿದ೦ಥವು. ಇ೦ಥ ಗೂಡುಗಳನ್ನು ಕಾಡು ಪಾರಿವಾಳ,