ಪುಟ:Mysore-University-Encyclopaedia-Vol-6-Part-9.pdf/೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಗುಲ್ಬರ್ಗ

ಗಿರಣಿ,ಎಣ್ಣೆ ಗಿರಣಿ - ಇವು ಕೆಲವು ದೊಡ್ಡಕೈಗಾರಿಕೆಗಳು.ಇವಲ್ಲದೆ ಸಣ್ಣ ಗಾತ್ರದ ಅನೇಕ ಆದುನಿಕ ಉದ್ಯಮಗಳಿವೆ.

ಗುಲ್ಬರ್ಗ ಜಿಲ್ಲೆಯಲ್ಲಿ ಎರಡು ಬ್ರಾಡ್ ಗೇಜ್ ರೈಲು ಮಾರ್ಗಗಳಿವೆ. ಗುಲ್ಬರ್ಗ ನಗರದ ಮೂಲಕ ಹಾದುಹೋಗುವ ಮುಂಬಯಿ- ರಾಯಚೂರು ಮಾರ್ಗವೊಂದು; ವಾಡಿಯಿಂದ ಸಿಕಂದರಾಬಾದಿಗೆ ಇನ್ನೊಂದು.ಯಾದಗಿರಿ.ವಾಡಿ,ಶಾಹಬಾದ, ಗುಲ್ಬರ್ಗ ಮುಖ್ಯ ನಿಲ್ದಾಣಗಳು.ವಾಡಿ-ಸಿಕಂದರಾಬಾದ್ ಮಾರ್ಗದಲ್ಲಿ ವಾಡಿ,ಚಿತ್ತಾಪುರ,ಮಳಖೇಡ ರೋಡ್,ಸೇಡಂ-ಇವು ಮುಖ್ಯ ನಿಲ್ದಾಣಗಳು.ಹುಮನಾಬಾದ್- ಗುಲ್ಬರ್ಗ, ಗುಲ್ಬರ್ಗ-ಶಾಹಪುರ,ಜೇವರ್ಗಿ-ಜೆರಟ್ಗಿ,ಖಾನಾಪುರ-ಲಿಂಗಸುಗೂರು,ಶಾಹಪುರ-ಹತ್ತಿಗುಡೂರ್, ಗುಲ್ಬರ್ಗ-ಕೋಡಂಗಲ್, ಗುಲ್ಬರ್ಗ-ಅಳಂದ,ಅಳಂದ-ವಾಗ್ಧಾರಿ ರಸ್ತೆಗಳು ರಾಜ್ಯ ಹೆದ್ದಾರಿಗಳು.ಇವಲ್ಲದೆ ಜಿಲ್ಲಾ ಮತ್ತು ಗ್ರಾಮಾಂತರ ರಸ್ತೆಗಳೂ ಇವೆ.

ಗುಲ್ಬರ್ಗ ಜಿಲ್ಲೆ ೯ನೆಯ ಶತಮಾನದಲ್ಲಿ ಕರ್ನಾಟಕದ ಇತಿಹಾಸದಲ್ಲಿ ಪ್ರಮುಖ ಪಾತ್ರ ವಹಿಸಿತ್ತು.ಈ ಜಿಲ್ಲೆಯಲ್ಲಿ ಸೇಡಂ ತಾಲ್ಲೂಕಿನಲ್ಲಿರುವ ಮಳಖೇಡ ರಾಷ್ಟ್ರಕೂಟ ಅರಸರ ರಾಜಧಾನಿಯಾಗಿದ್ದು ಮಾನ್ಯಖೇಟವೆಂದು ಪ್ರಸಿದ್ಧಿ ಹೊಂದಿತ್ತು.ಕಲ್ಯಾಣದ ಚಾಳುಕ್ಯರು ಹತ್ತನೆಯ ಶತಮಾನದ ಆಂತ್ಯಭಾಗದಿಂದ ಆಳತೊಡಗಿದಾಗ ಅವರು ತಮ್ಮ ರಾಜಧಾನಿಯನ್ನು ಜಿಲ್ಲೆಯ ಕಲ್ಯಾಣಕ್ಕೆ ಬದಲಾಯಿಸಿಕೊಂಡರು.೧೧-೧೨ನೆಯ ಶತಮಾನಗಳ ಶಾಸನಗಳಲ್ಲಿ ಗುಲ್ಬರ್ಗ ಕಲುಂಬರಗಿ,ಕಲುಂಬರಗ ಎಂಬ ಹೆಸರುಗಳಲ್ಲಿ ಖ್ಯಾತಿ ಹೊಂದಿತ್ತು.ಆಳಂದ ತಾಲ್ಲೂಕು ಮತ್ತು ಪರಿಸರದ ಪ್ರದೇಶಗಳು ಅಂದು ಆಳಂದೆ ಸಾಸಿರವೆಂಬ ಪ್ರಾಂತ್ಯದಲ್ಲಿ ಸೇರಿದ್ದುವು.ಕಲ್ಯಾಣದ ಚಾಳುಕ್ಯರ ಅಧೀನರಾಗಿ ಬಾಣ ವಂಶಕ್ಕೆ ಸೇರಿದ ಗೊಂಕರಸ ಮುಂತಾದ ಹಲವಾರು ಸಣ್ಣ ಮಂಡಲದ ಅಧಿಪತಿಗಳು ಚಿತ್ತಾಪುರ ತಾಲ್ಲೂಕಿನ ಪರಿಸರದಲ್ಲಿ ಆಳುತ್ತಿದ್ದರೆಂದು ಇತ್ತೀಚಿನ ಶಾಸನಗಳಿಂದ ತಿಳಿದುಬಂದಿದೆ.

ಮಹಮ್ಮದ್ ಬಿನ್ ತುಗಲಕ್ ದೆಹಲಿಯ ಸುಲ್ತಾನನಾಗಿದ್ದಾಗ ದಕ್ಷಿಣಕ್ಕೆ ದಂಡಯಾತ್ರೆ ಮಾಡಿ ವಾರಂಗಲಿನಲ್ಲಿ ಆಳಿದ ಕಾಕತೀಯರನ್ನು ಸೋಲಿಸಿ ಅವರ ರಾಜ್ಯವನ್ನು ಗೆದ್ದುಕೊಂಡಾಗ ಗುಲ್ಬರ್ಗ ಸಹ ಸುಲ್ತಾನರ ಅಧೀನಕ್ಕೆ ಒಳ್ಳಪಟ್ಟಿತು.ಇದು ೧೩ನೆಯ ಶತಮಾನದ ಅಂತ್ಯದದಿಂದ ೪೫ ವರ್ಷಗಳ ಕಾಲ ಇತ್ತು.ಆದರೆ ಅಲಾಉದ್ದೀನ್ ಹಸನ್ ಗಂಗು ಬಹಮನ್ ಷಾ ೧೩೪೭ರಲ್ಲಿ ಬಹಮನೀ ರಾಜ್ಯವನ್ನು ಸ್ಥಾಪಿಸಿದಾಗ ಗುಲ್ಬರ್ಗ ಅವನ ರಾಜಧಾನಿಯಾಯಿತು.೧೪೨೪ರವರೆಗೂ ರಾಜದಾನಿಯಾಗಿ ಇದು ಮೆರೆಯಿತು.ಬಹಮನೀ ರಾಜ್ಯ ಐದು ಭಾಗಗಳಾಗಿ ಒಡೆದಾಗ ಇದರ ಸ್ವಲ್ಪಭಾಗ ಬಿದರೆಯ ಬರೀದ್ ಶಾಹೀ ಸುಲ್ತಾನರ ಅಧೀನದಲ್ಲೂ ಸ್ವಲ್ಪ ಭಾಗ ಬಿಜಾಪುರದ ಅದಿಲ್ ಶಾಹೀ ಸುಲ್ತಾನರ ಅಧೀನದಲ್ಲೂ ಇತ್ತು.

ಔರಂಗಜೇಬ್ ದಕ್ಷಿಣದ ದಂಡಯಾತ್ರೆ ಕೈಗೊಂಡಾಗ ಗುಲ್ಬರ್ಗ ಅವನ ಕೈವಶವಾಯಿತು.ಔರಂಗಜೇಬನ ಮರಣಾನಂತರ ಮೊಗಲ್ ಸಾಮ್ರಾಜ್ಯದಲ್ಲಿ ಅಂತಃಕಲಹಗಳು ಸಂಭವಿಸಿದಾಗ ಅಲ್ಲಿಯ ರಾಜಕೀಯದಲ್ಲಿ ಬೇಸತ್ತ ಸುಬೇದಾರ ಆಸಫ್ ಜಾ ದಕ್ಷಿಣದ ಪ್ರಾಂತ್ಯಾಧಿಪತಿಯಾಗಿ ಬಂದು ಇಲ್ಲಿ ಸ್ವತಂತ್ರನಾದ.ಇದು ಹೈದರಾಬಾದಿನ ನಿಜಾಂ ವಂಶದ ನಾಂದಿಯಾಯಿತು.ಅ ಸಮಯದಲ್ಲಿ ಸುರಪುರ,ಶಾಹಾಪುರ,ಜೇವರಗಿ ತಾಲ್ಲೂಕುಗಳ ಭಾಗ ಸುರಪುರದ ನಾಯಕರ ಆಡಳಿತದಲ್ಲಿ ಸ್ವತಂತ್ರವಾದ ಸಂಸ್ಥಾನವಾಯಿತು. ಗುಲ್ಬರ್ಗದ ಇತರ ಭಾಗಗಳು ನಿಜಾಂ ರಾಜ್ಯಕ್ಕೆ ಸೇರಿದುವು.೧೭೦೭-೧೮೫೭ರ ವರೆಗೆ ಸ್ವತಂತ್ರವಾಗಿ ಸುರುಪುರದಲ್ಲಿ ಆಳಿದ ಬೇಡರ ಮನೆತನದ ರಾಜಾ ವೆಂಕಟಪ್ಪನಾಯಕ ೧೮೫೭ರ ಕ್ರಾಂತಿಯಲ್ಲಿ ಭಾಗವಹಿಸಿದ.ಬ್ರಿಟಿಷರು ಅವನನ್ನು ದಮನಮಾಡಿ ಅವನಿಂದ ಕಸಿದುಕೊಂಡ ರಾಜ್ಯವನ್ನು ನಿಜಾಮನಿಗೆ ವಹಿಸಿಕೊಟ್ಟರು.

ನಿಜಾಮರ ಸಂಸ್ಥಾನದ ಮುಖ್ಯಮಂತ್ರಿಯಾಗಿದ್ದ ಸಾಲಾರ್ ಕೈಗೊಂಡ ಆಡಳಿತ ಸುಧಾರಣೆಗಳಲ್ಲಿ ಸಂಸ್ಥಾನದಲ್ಲಿ ಹಲವಾರು ಜಿಲ್ಲೆಗಳು ಅಸ್ತಿತ್ವಕ್ಕೆ ಬಂದವು.ಆ ಸಂದರ್ಭದಲ್ಲಿ ಗುಲ್ಬರ್ಗ ಸುರಪುರ ಜಿಲ್ಲೆಯ ಒಂದು ಭಾಗವಾಯಿತು. ಗುಲ್ಬರ್ಗವನ್ನು ಒಂದು ಪ್ರತ್ಯೇಕವಾದ ಜಿಲ್ಲೆಯಾಗಿ ಪರಿವರ್ತಿಸಿದ್ದು ೧೮೭೩ರಲ್ಲಿ.ಅಂದನಿಂದ ಆ ಜಿಲ್ಲೆಗೆ ಸಂಬಂಧಿಸಿದಂತೆ ಅನೇಕ ಬದಲಾವಣೆಗಳಾದವು.೧೯೫೬ರಲ್ಲಿ ಕೋಡಂಗಲ್ ಮತ್ತು ತಾಂಡೂರ್ ತಾಲ್ಲೂಕುಗಳು ಆಂಧ್ರಪ್ರದೇಶಕ್ಕೆ ಸೇರಿದುವು.ಉಳಿದ ತಾಲ್ಲೂಕುಗಳನ್ನು ಮೈಸೂರು ರಾಜ್ಯಕ್ಕೆ ಸೇರಿಸಲಾಯಿತು.

ಗುಲ್ಬರ್ಗ ಜಿಲ್ಲೆಯ ಮಳಖೇಡ ರಾಷ್ಟ್ರಕೂಟರ ರಾಜಧಾನಿಯಾಗಿತ್ತು.ಕವಿರಾಜಮಾರ್ಗದ ಕರ್ತೃ ಇಲ್ಲಿಯವನು.ಕವಿ ಪೊನ್ನ,ವಚನಕಾರ ದೇವರ ದಾಸಿಮಯ್ಯ ಇವರೂ ಈ ಜಿಲ್ಲೆಯವರು.ದೈತಮತಸ್ಥಾಪಕರಾದ ಮಧ್ವಾಚಾರ್ಯರ ನಾಲ್ವರು ಪ್ರಮುಖ ಶಿಷ್ಯರ ಪೈಕಿ ಒಬ್ಬರಾದ ಅಕ್ಷೋಭ್ಯತೀರ್ಥರ ಶಿಷ್ಯರಾದ ಜಯತೀರ್ಥರು ಮಳಖೇಡದಲ್ಲಿ ನೆಲಸಿದ್ದರು.ಮಧ್ವಾಚಾರ್ಯರ ಗ್ರಂಥಗಳಿಗೆ ಟೀಕೆಗಳನ್ನು ಬರೆದು ಟೀಕಾಚಾರ್ಯರೆಂದು ಪ್ರಸಿದ್ದರಾಗಿರುವ ಇವರ ಬೃಂದಾವನ ಇಲ್ಲಿದೆ.ಮಾಹಾಪುರಾಣ,ನಯಕುಮಾರಚರಿತ ಮುಂತಾದ ಅಪಭ್ರಂಶ ಕಾವ್ಯಗಳ ಕರ್ತೃವಾದ ಪುಷ್ಪದಂತ ಕವಿಗೂ ಇದು ನೆಲೆವೀಡಾಗಿತ್ತು.

ಈ ಜಿಲ್ಲೆಯಲ್ಲಿ ಪುರಾತತ್ತ್ವ ಅವಶೇಷಗಳು ವಿಪುಲವಾಗಿವೆ.ಮಧ್ಯ ಹಳೆಶಿಲಾಯುಗದ ಅನೇಕ ನೆಲೆಗಳು ಗುಲ್ಬರ್ಗ ಜಿಲ್ಲೆಯ ಅಫ಼ಜಲಪುರ ತಾಲ್ಲೂಕಿನ ಉಡಚಣ ಮತ್ತು ಸೇಡಂ ತಾಲ್ಲೂಕಿನ ಮಳಖೇಡ ಈ ಸ್ಥಳಗಳಲ್ಲೂ ಈ ರೀತಿಯ ಕೆಲವು ಉಪಕರಣಗಳು